Tag: ಗಾಸಿಪ್

  • ಕನ್ನಡ ಬಿಗ್ ಬಾಸ್ ಓಟಿಟಿ 2 : ಅಂತೆ ಕಂತೆಗಳ ಸಂತೆ

    ಕನ್ನಡ ಬಿಗ್ ಬಾಸ್ ಓಟಿಟಿ 2 : ಅಂತೆ ಕಂತೆಗಳ ಸಂತೆ

    ಅಂದುಕೊಂಡಂತೆ ನಡೆದರೆ ಜುಲೈ ಅಥವಾ ಆಗಸ್ಟ್ ನಲ್ಲಿ ಕನ್ನಡ (Kannada) ಬಿಗ್ ಬಾಸ್ (Bigg Boss)  ಓಟಿಟಿ ಸೀಸನ್ 2 ಶುರುವಾಗಲಿದೆ ಎನ್ನುವ ಸುದ್ದಿ ಗಾಂಧಿನಗರದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಅದಕ್ಕೆ ಬೇಕಾಗುವ ಸಿದ್ಧತೆಯನ್ನು ವಾಹಿನಿ ಮಾಡಿಕೊಳ್ಳುತ್ತಿದೆ ಎನ್ನುವುದು ಸದ್ಯಕ್ಕಿರುವ ವರ್ತಮಾನ. ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರಬೇಕು? ಏನೆಲ್ಲ ಟಾಸ್ಕ್ ಗಳನ್ನು ಆಡಿಸಬೇಕು, ಯಾರೆಲ್ಲ ಸ್ಪರ್ಧಿಗಳು ಇರಬೇಕು ಈ ಎಲ್ಲ ಕೆಲಸಗಳು ಭರದಿಂದ ಸಾಗುತ್ತಿವೆಯಂತೆ.

    ಸುದೀಪ್ (Sudeep) ಅವರ ಆಪ್ತರು ಹೇಳುವಂತೆ ಮುಂದಿನ ತಿಂಗಳಿಂದ ಸುದೀಪ್ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ಆಚೆಯೇ ಹೆಚ್ಚು ಇರಲಿದೆ. ಹಾಗಾಗಿ ಬಿಗ್ ಬಾಸ್ ಗಾಗಿ ಸುದೀಪ್ ಡೇಟ್ಸ್ ಹೇಗೆ ಹೊಂದಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ವೀಕೆಂಡ್ ನಲ್ಲಿ ಮಾತ್ರ ಸುದೀಪ್ ಇರುವುದರಿಂದ ಅಷ್ಟೇನೂ ಸಮಸ್ಯೆ ಆಗದು ಎನ್ನುವುದು ಮತ್ತೊಂದು ಸಮಾಧಾನ. ಇದನ್ನೂ ಓದಿ:ಫ್ಯಾಷನ್‌ ರೂಲ್ಸ್‌ ಬ್ರೇಕ್‌ ಮಾಡಿ, ನೆಕ್ಲೇಸ್‌ ಧರಿಸಿ ಹಾಡಿದ ಸಂಜಿತ್‌ ಹೆಗ್ಡೆ

    ಇಷ್ಟೇ ಅಲ್ಲದೇ ಈ ಬಾರಿ ಬಿಗ್ ಬಾಸ್ ಮನೆಯೇ ಶಿಫ್ಟ್ ಆಗಿದೆ ಎನ್ನುವ ಮಾಹಿತಿಯೂ ಸೋರಿಕೆ ಆಗಿದೆ. ಪ್ರತಿ ಸಲವೂ ಬಿಗ್ ಬಾಸ್ ಮನೆ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುತ್ತಿತ್ತು. ಈ ಬಾರಿ ಮನೆಯನ್ನೇ ಶಿಫ್ಟ್ ಮಾಡಲಾಗಿದೆಯಂತೆ. ಬೆಂಗಳೂರಿನ ಕುಂಬಳಗೋಡು ಬಳಿ ಇರುವ ದೊಡ್ಡ ಆಲದಮರದ ಹತ್ತಿರ ಮನೆಯನ್ನು ನಿರ್ಮಾಣ ಮಾಡಲಾಗಿದೆಯಂತೆ.

    ಈ ಬಾರಿಯ ಬಿಗ್ ಬಾಸ್ ಓಟಿಟಿ (OTT) ಸೀಸನ್ 2 ಬಗ್ಗೆ ಇಷ್ಟೆಲ್ಲ ಮಾಹಿತಿ ಹರಿದಾಡುತ್ತಿದ್ದರೂ, ವಾಹಿನಿಯಿಂದಾಗಲಿ ಅಥವಾ ಇದಕ್ಕೆ ಸಂಬಂಧಪಟ್ಟವರಿಂದಾಗಲಿ ಅಧಿಕೃತ ಮಾಹಿತಿ ಇಲ್ಲ. ಹಾಗಾಗಿ ವಾಹಿನಿ ಹೇಳುವವರೆಗೂ ಮತ್ತು ಇದಕ್ಕೆ ಸಂಬಂಧಿಸಿದ ಪುರಾವೆ ಸಿಗುವ ತನಕ ಇದು ಗಾಸಿಪ್ (Gossip) ಆಗಿಯೇ ಉಳಿಯಲಿದೆ.

  • ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮಾತನಾಡಿದ ನಾಗಚೈತನ್ಯ

    ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮಾತನಾಡಿದ ನಾಗಚೈತನ್ಯ

    ಸ್ಟಾರ್ ಜೋಡಿ ಸಮಂತಾ (Samantha) ಹಾಗೂ ನಾಗಚೈತನ್ಯ (Naga Chaitanya) ಡಿವೋರ್ಸ್ ಯಾಕೆ ಪಡೆದುಕೊಂಡರು ಎನ್ನುವ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲವಿತ್ತು. ಪ್ರೀತಿಸಿ ಮದುವೆ ಆದ ಈ ಜೋಡಿ ಇಂಥದ್ದೊಂದು ತೀರ್ಮಾನವನ್ನು ತಗೆದುಕೊಳ್ಳಲು ಕಾರಣ ಏನಿರಬಹುದು ಎನ್ನುವ ಕುತೂಹಲವೂ ಅವರದ್ದಾಗಿದೆ. ಹಲವರು ನಾನಾ ಕಾರಣಗಳನ್ನು ಕೊಟ್ಟರೂ, ಅವರಿಬ್ಬರೂ ಮಾತ್ರ ಆ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಮೊದಲ ಬಾರಿಗೆ ನಾಗ ಚೈತನ್ಯ ಡಿವೋರ್ಸ್ (Divorce) ಕಾರಣವನ್ನು ಹೇಳಿಕೊಂಡಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ನಾಗ ಚೈತನ್ಯ, ‘ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗಾಸಿಪ್ ಕಾಲಂಗಳಲ್ಲಿ ಬಂದ ಸುದ್ದಿಗಳೇ ನಾವಿಬ್ಬರೂ ದೂರ ಆಗಿದ್ದಕ್ಕೆ ಕಾರಣ. ಊಹಾಪೋಹ ಸುದ್ದಿಗಳು ಬಂದಾಗ ನಮ್ಮಿಬ್ಬರ ಮಧ್ಯ ಜಗಳವಾಗುತ್ತಿತ್ತು. ಮೊದಲ ಮೊದಲು ಅದಕ್ಕೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ, ವಿಪರೀತ ಎನ್ನುವಂತೆ ಸುದ್ದಿಗಳು ಹರಡಿದವು. ಅದು ಡಿವೋರ್ಸ್ ಗೆ ಕಾರಣವಾಯಿತು’ ಎಂದಿದ್ದಾರೆ.

    ಇಬ್ಬರೂ ಒಂದೇ ವೃತ್ತಿಯಲ್ಲಿದ್ದರೂ, ಗಾಸಿಪ್ ಬರುವುದು ಸಹಜ ಎಂದು ಗೊತ್ತಿದ್ದರೂ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದಾಗಿ ಇಬ್ಬರೂ ನೆಮ್ಮದಿಯಿಂದ ಇರುವುದಕ್ಕೆ ಆಗಲಿಲ್ಲ. ಹಾಗಾಗಿ ದೂರ ಆಗುವಂತಹ ನಿರ್ಧಾರಕ್ಕೆ ಬರಬೇಕಾಯಿತು. ಸಮಂತಾ ಎಲ್ಲಿ ಇದ್ದರೂ ಚೆನ್ನಾಗಿರಲಿ. ಖುಷಿಯಾಗಿರಲಿ’ ಎಂದಿದ್ದಾರೆ ನಾಗ ಚೈತನ್ಯ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಕಳೆದ ಎರಡು ವರ್ಷಗಳಿಂದ ಇಬ್ಬರೂ ದೂರವಿದ್ದರೂ, ಕಾನೂನು ಪ್ರಕಾರ ಡಿವೋರ್ಸ್ ಆಗಿ ಒಂದು ವರ್ಷ ಕಳೆದಿವೆ. ಆದರೂ, ಇಬ್ಬರ ಮಧ್ಯದ ಗಾಸಿಪ್ ಇನ್ನೂ ನಿಂತಿಲ್ಲ ಎಂದು ಬೇಸರವನ್ನೂ ವ್ಯಕ್ತ ಪಡಿಸಿದ್ದಾರೆ ನಾಗ ಚೈತನ್ಯ. ಈಗಲೂ ಬೇರೆ ಬೇರೆ ನಟಿಯರ ಜೊತೆ ಸಂಬಂಧ ಬೆಸೆದು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

  • ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ನ್ನಡದ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿರುವ ನಗ್ಮಾ (Nagma) ಜೊತೆ ನಟ ರವಿಕಿಶನ್ (Ravikishan) ವಿವಾಹೇತರ ಸಂಬಂಧ (Relationship) ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಅನೇಕ ಫೋಟೋಗಳನ್ನು ಇದಕ್ಕೆ ಸಾಕ್ಷಿಯಾಗಿ ನೀಡಲಾಗಿತ್ತು. ಈ ಜೋಡಿಯ ಬಗ್ಗೆ ನಾನಾ ರೀತಿಯ ಗಾಸಿಪ್ ಗಳು (Gossi) ಹರಡಿದರೂ, ಈ ಕುರಿತು ಒಬ್ಬರೂ ಪ್ರತಿಕ್ರಿಯೆ ನೀಡರಲಿಲ್ಲ.

    ಹರಡಿದ ಸುದ್ದಿಗಳ ಬಗ್ಗೆ ಯಾರೂ ಮಾತನಾಡದೇ ಇರುವ ಕಾರಣದಿಂದಾಗಿ ಸಂಬಂಧ ಹೊಂದಿದ್ದಾರೆ ಎಂದೇ ಭಾವಿಸಲಾಗಿತ್ತು. ಈ ಕುರಿತು ಕೊನೆಗೂ ನಟ ರವಿಕಿಶನ್ ಮೌನ ಮುರಿದಿದ್ದಾರೆ. ವಿವಾಹೇತರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಎಲ್ಲದರ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:`ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

    ‘ನಾನು ಮತ್ತು ನಗ್ಮಾ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಈ ಕಾರಣದಿಂದಾಗಿ ಬಹುಶಃ ಆ ಸುದ್ದಿ ಹಬ್ಬಿರಬಹುದು. ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿಯ ಜೊತೆ ಖುಷಿಯಾಗಿ ಇದ್ದೇನೆ. ಆರಾಧಿಸುವಂತಹ ಹೆಂಡತಿ ಇರುವಾಗ ನಾನು ಯಾಕೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳಲಿ. ಅದೆಲ್ಲವೂ ಸುಳ್ಳು ಸುದ್ದಿ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್’ ಎಂದಿದ್ದಾರೆ ರವಿಕಿಶನ್.

    ಮುಂದುವರೆದು ಮಾತನಾಡಿರುವ ಅವರು, ‘ನನ್ನ ಹೆಂಡತಿ ಕಷ್ಟದ ಕಾಲದಲ್ಲೂ ಇದ್ದಾಳೆ, ಸುಖದಲ್ಲೂ ಜೊತೆಯಿದ್ದಾಳೆ. ನಾನು ಏನು ಅನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಹೆಂಡತಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ನಗ್ಮಾ ವಿಚಾರದಲ್ಲಿ ನನ್ನ ಪತ್ನಿ ತಲೆಕೆಡಿಸಿಕೊಂಡಿಲ್ಲ. ನಾನು ಏನು ಎನ್ನುವುದು ಆಕೆಗೆ ಗೊತ್ತಿದೆ’ ಎಂದಿದ್ದಾರೆ ರವಿಕಿಶನ್.

  • ‘ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಡು ಕಳ್ಳ’ ಎಂದು ಪತಿಗೆ ಹೇಳಿದ ನಟಿ ಮಹಾಲಕ್ಷ್ಮಿ

    ‘ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಡು ಕಳ್ಳ’ ಎಂದು ಪತಿಗೆ ಹೇಳಿದ ನಟಿ ಮಹಾಲಕ್ಷ್ಮಿ

    ದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಹೇಗೆ ಜೊತೆಯಾದರು ಎನ್ನುವ ಬಗ್ಗೆ ನಟಿ ಮಹಾಲಕ್ಷ್ಮಿ ರೊಮ್ಯಾಂಟಿಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮೊದಲು ಯಾರು, ಯಾರ ಹೃದಯ ಕದ್ದರು ಎನ್ನುವುದನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಕದ್ದ ಹೃದಯವನ್ನು ಜೋಪಾನವಾಗಿ ಕಾಪಾಡಿಕೊಳ್ಳುವಂತೆಯೂ ತಿಳಿಸಿದ್ದಾರೆ.

    ಮಹಾಲಕ್ಷ್ಮಿ ಅವರು ದುಡ್ಡಿನ ಆಸೆಗೆ ರವೀಂದರ್ ಅವರನ್ನು ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಮಹಾಲಕ್ಷ್ಮಿ ಅವರೇ ಪ್ರಪೋಸ್ ಮಾಡಿರಬಹುದು ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು. ಇವೆಲ್ಲವಕ್ಕೂ ಉತ್ತರ ಕೊಟ್ಟಿರುವ ನಟಿ, ಮೊದಲು ಪ್ರಪೋಸ್ ಮಾಡಿದ್ದು ರವೀಂದರ್ ಎಂದು ಹೇಳಿದ್ದಾರೆ. ಹಾಗಾಗಿ ‘ನನ್ನ ಹೃದಯವನ್ನು ಕದ್ದಿದ್ದೀರಿ. ಅದನ್ನು ಜೋಪಾನವಾಗಿ ನೋಡಿಕೊಳ್ಳಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ತಮಿಳು ಸಿನಿಮಾ ರಂಗದಲ್ಲಿ ನಿರ್ಮಾಪಕ ರವೀಂದ‍ರ್ ಮತ್ತು ನಟಿ ಮಹಾಲಕ್ಷ್ಮಿ ಮದುವೆ ವಿಚಾರ ಸಖತ್ ಸದ್ದು ಮಾಡಿದೆ. ಈ ಜೋಡಿಯ ಬಗ್ಗೆ ನಾನಾ ರೀತಿಯ ನೆಗೆಟಿಗ್ ಕಾಮೆಂಟ್ ಗಳು ಹರಿದು ಬರುತ್ತಿವೆ. ಇದೊಂದು ದುಡ್ಡಿನ ಆಸೆಗೆ ಆಗಿರುವ ವಿವಾಹ ಎಂದು ಗಾಸಿಪ್ ಹಬ್ಬಿಸಲಾಗಿದೆ. ಏನೇ ಗಾಸಿಪ್ ಗಳು ಬಂದರೂ, ದಂಪತಿ ಮಾತ್ರ ಖುಷಿ ಖುಷಿಯಾಗಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಮನೆಯಲ್ಲಿ 2ನೇ ಮದುವೆಗೆ ಒತ್ತಾಯ: ಕೆಟ್ಟ ನಿರ್ಧಾರ ತಗೆದುಕೊಂಡಿದ್ದಾರಂತೆ ಸ್ಯಾಮ್

    ಸಮಂತಾ ಮನೆಯಲ್ಲಿ 2ನೇ ಮದುವೆಗೆ ಒತ್ತಾಯ: ಕೆಟ್ಟ ನಿರ್ಧಾರ ತಗೆದುಕೊಂಡಿದ್ದಾರಂತೆ ಸ್ಯಾಮ್

    ನಾಗ ಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಸಮಂತಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೆಳೆತಿಯರ ಜೊತೆ ದೇಶ ಸುತ್ತುತ್ತಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಬದುಕುತ್ತಾ ಇರುವ ಸ್ಯಾಮ್ ಗೆ ಮನೆಯಲ್ಲಿ ಮದುವೆ ಒತ್ತಡ ಶುರುವಾಗಿದೆಯಂತೆ. ಡಿವೋರ್ಸ್ ಆಗಿರುವುದರಿಂದ ಮತ್ತೊಂದು ಮದುವೆ ಆಗಲು ಸಮಂತಾಗೆ ಅವರ ಕುಟುಂಬ ಒತ್ತಡ ಹೇರುವುದಕ್ಕೆ ಶುರು ಮಾಡಿದೆಯಂತೆ.

    ಸಮಂತಾಗೆ ಎರಡನೇ ಮದುವೆ ಒತ್ತಡ ಹೇರುವ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಬೇರೊಂದು ರೀತಿಯ ಆಯಾಮ ಪಡೆದುಕೊಂಡಿದೆ. ತಾವು ಮುಂದೆ ಮತ್ತೆ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಮಕ್ಕಳು ಆಗದೇ ಇರುವಂತ ಚಿಕಿತ್ಸೆಗೆ ಸಮಂತಾ ಒಳಗಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದು ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಇದನ್ನೂ ಓದಿ:ಕಿಚ್ಚ ಸುದೀಪ್ ಮನೆ ಮುಂದೆ ಅಭಿಮಾನಿಗಳ ಮಹಾಸಾಗರ: ಹ್ಯಾಪಿ ಬರ್ತ್‌ ಡೇ ಕಿಚ್ಚ

    ಮತ್ತೊಂದು ಮದುವೆಗೆ ಇಷ್ಟವಿರದೇ ಇರುವ ಕಾರಣಕ್ಕಾಗಿ ಸಮಂತಾ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ನಿಜವೋ ಗಾಸಿಪ್ ಇರಬಹುದೋ? ಒಟ್ಟಿನಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಈ ಸುದ್ದಿ ಬುಸುಗುಡುತ್ತಿದೆ. ಸಮಂತಾ ಹಾಗೆ ಮಾಡಿಕೊಳ್ಳುವುದಕ್ಕೆ ಸಾಧ್ಯವೆ? ಎನ್ನುವ ಮಾತೂ ಕೇಳಿ ಬರುತ್ತಿವೆ. ಸತ್ಯವೋ ಸುಳ್ಳೋ ಸಮಂತಾ ಯಾವುದೇ ಕಾರಣಕ್ಕೂ ಹಾಗೆ ಮಾಡಿಕೊಳ್ಳಲಾರರು ಎನ್ನುತ್ತಾರೆ ಅವರ ಅಭಿಮಾನಿಗಳು.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?

    ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?

    ನ್ನಡದ ಜೋಶ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಮಲಯಾಳಂ ಖ್ಯಾತ ನಟಿ ನಿತ್ಯಾ ಮೆನನ್ ಮದುವೆ ವಿಚಾರ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಸಾಮಾನ್ಯವಾಗಿ ನೆಚ್ಚಿನ  ನಟಿ ಮದುವೆ ಆಗುತ್ತಿದ್ದಾರೆ ಅಂದಾಗ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುವುದು ವಾಡಿಕೆ. ಆದರೆ, ನಿತ್ಯಾ ಮದುವೆಗೆ ಸಂಭ್ರಮಿಸುತ್ತಿರುವುದಕ್ಕೆ ಕಾರಣ, ಈಗಲಾದರೂ ಅವರು ಮದುವೆಗೆ ಒಪ್ಪಿಕೊಂಡರಲ್ಲಾ ಅನ್ನುವುದು.

    ನಿತ್ಯಾ ಮೆನನ್ ಜೊತೆ ಸಿನಿಮಾ ರಂಗಕ್ಕೆ ಬಂದ ಬಹುತೇಕರು ಮದುವೆ ಆಗಿದ್ದಾರೆ. ಅಲ್ಲದೇ, ಒಂದೆರಡು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಹಾಗಾಗಿ ನಿತ್ಯ ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲೇ ಮೂಡಿತ್ತು. ಅದಕ್ಕೀಗ ಕಾಲ ಕೂಡಿ ಬಂದಿದೆ ಎನ್ನಲಾಗುತ್ತಿದೆ. ಬಹುದಿನಗಳ ಗೆಳೆಯ ಮತ್ತು ಸ್ಟಾರ್ ನಟನೂ ಆಗಿರುವ ಮಲಯಾಳಂ ಕಲಾವಿದನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

    ನಿತ್ಯಾ ಯಾರನ್ನು ಮದುವೆಯಾಗಲಿದ್ದಾರೆ, ಅವರೊಂದಿಗೆ ಇವರು ಕೆಲಸ ಮಾಡಿದ್ದಾರಾ? ಸ್ಟಾರ್ ನಟ ಅಂದರೆ ಯಾರು? ಯಾಕೆ ಈವರೆಗೂ ಇಬ್ಬರ ಮಧ್ಯೆ ಗಾಸಿಪ್ ಹುಟ್ಟುಕೊಂಡಿಲ್ಲ? ಎಷ್ಟು ವರ್ಷದಿಂದ ಇವರು ಡೇಟಿಂಗ್ ಮಾಡುತ್ತಿದ್ದಾರೆ ಹೀಗೆ ಅನೇಕ ಪ್ರಶ್ನೆಗಳು ಮಲಯಾಳಂ ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿವೆ. ಆದರೂ, ನಿತ್ಯಾ ಈ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಪ್ರಸ್ತಾಪವನ್ನೂ ಮಾಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನಾನಿನ್ನೂ ಬದುಕಿದ್ದೇನೆ ಎಂದ ಉರ್ಫಿ ಜಾವೇದ್ : ಸಾವಿನ ಸುದ್ದಿ ಹಬ್ಬಿಸಿದವರ ವಿರುದ್ಧ ಉರ್ಫಿ ಗರಂ

    ನಾನಿನ್ನೂ ಬದುಕಿದ್ದೇನೆ ಎಂದ ಉರ್ಫಿ ಜಾವೇದ್ : ಸಾವಿನ ಸುದ್ದಿ ಹಬ್ಬಿಸಿದವರ ವಿರುದ್ಧ ಉರ್ಫಿ ಗರಂ

    ದಿನಕ್ಕೊಂದು ಕಾಸ್ಟ್ಯೂಮ್ ಧರಿಸಿ, ಪಡ್ಡೆಗಳ ಮೈಬಿಸಿ ಹೆಚ್ಚಿಸುವ ರಿಯಾಲಿಟಿ ಶೋ ತಾರೆ ಉರ್ಫಿ ಜಾವೇದ್ ನಿಧನ ಹೊಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಹರಿಬಿಡಲಾಗಿತ್ತು. ಸದಾ ಲವಲವಿಕೆಯಿಂದ ಇರುವ ಈ ವಿವಾದಿತ ತಾರೆಗೆ ಏನಾಯಿತು ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಸಾಯುವಂಥದ್ದು ಉರ್ಫಿಗೆ ಏನಾಗಿತ್ತು ಎಂದು ಗೂಗಲ್ ನಲ್ಲಿ ಹುಡುಕಾಡಿದ್ದಾರೆ.

    ಉರ್ಫಿ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸ್ವತಂ ಉರ್ಫಿಗೆ ಗೊತ್ತಾಗಿ ಕೆಂಡಾಮಂಡಲವಾಗಿದ್ದಾರೆ. ಇಂತಹ ಸುದ್ದಿಯನ್ನು ಹರಿಬಿಟ್ಟವರ ವಿರುದ್ಧ ಸಮರವೇ ಸಾರಿದ್ದು, ಅವರನ್ನು ಹುಡುಕುತ್ತಿರುವುದಾಗಿ ಮತ್ತು ಅವರ ವಿರುದ್ಧ ಕಾನೂನು ಕ್ರಮವನ್ನೂ ತಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ, ನನಗೇನೂ ಆಗಿಲ್ಲ ನಾನು ಆರಾಮಾಗಿ ಇದ್ದೇನೆ. ಅಭಿಮಾನಿಗಳು ಆತಂಕ ಪಡುವಂಥದ್ದು ಏನೂ ಆಗಿಲ್ಲ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಉರ್ಫಿ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ದಿನಕ್ಕೊಂದು ಕಾಸ್ಟ್ಯೂಮ್ ಧರಿಸಿಕೊಂಡು ಮನರಂಜನೆ ನೀಡುತ್ತಿದ್ದಾರೆ. ಸ್ಟಾರ್ ನಟರಿಗಿಂತಲೂ ಇವರಿಗೆ ಫಾಲೋವರ್ಸ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿದ್ದಾರೆ. ಈ ಸಂಭ್ರಮವನ್ನು ತಾಳಲಾರದ ಜನರು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಹಾಸ್ಯ ನಟ ಚಿಕ್ಕಣ್ಣ ಆರೋಗ್ಯವಾಗಿದ್ದಾರೆ, ಅದು ಸುಳ್ಳು ಸುದ್ದಿ

    ಹಾಸ್ಯ ನಟ ಚಿಕ್ಕಣ್ಣ ಆರೋಗ್ಯವಾಗಿದ್ದಾರೆ, ಅದು ಸುಳ್ಳು ಸುದ್ದಿ

    ಹಾಸ್ಯ ನಟ ಚಿಕ್ಕಣ್ಣ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿತ್ತು. ಚಿಕ್ಕಣ್ಣ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದ್ದರು. ಈ ಸುದ್ದಿ ಓದಿದವರು ಸಹಜವಾಗಿಯೇ ಆತಂಕ ವ್ಯಕ್ತ ಪಡಿಸಿದ್ದರು. ಸ್ವತಃ ಚಿಕ್ಕಣ್ಣಗೆ ಕೆಲವರು ಕಾಲ್ ಮಾಡಿ ಆರೋಗ್ಯ ವಿಚಾರಿಸಿಕೊಂಡರು. ಇದೀಗ ಆ ಕುರಿತು ಸ್ವತಃ ಚಿಕ್ಕಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

    ಸದ್ಯ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ. ಚಿತ್ರೀಕರಣ ಸ್ಥಳದಿಂದಲೇ ವಿಡಿಯೋವೊಂದನ್ನು ಕಳುಹಿಸಿರುವ ಅವರು, “ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಸುದ್ದಿ ಸುಳ್ಳು. ಯಾರೋ ಕಿಡಿಗೇಡಿಗಳು ಆ ರೀತಿ ಮಾಡಿದ್ದಾರೆ. ನಾನು ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿದ್ದೇನೆ. ಅದೇ ಸ್ಥಳದಿಂದಲೇ ಈಗ ಮಾತನಾಡುತ್ತಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಆರೋಗ್ಯ ಗಟ್ಟಿಮುಟ್ಟಾಗಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ

    ಚಿಕ್ಕಣ್ಣ ಅವರ ವಿಷಯದಲ್ಲಿ ಆಗಾಗ್ಗೆ ಈ ರೀತಿ ಸುಳ್ಳು ಸುದ್ದಿಗಳು ಹರಡುತ್ತಲೇ ಇರುತ್ತವೆ. ಈ ಹಿಂದೆ ನಿರೂಪಕಿಯೊಬ್ಬರನ್ನು ಚಿಕ್ಕಣ್ಣ ಮದುವೆ ಆಗಿದ್ದಾರೆ ಎಂದು ಗಾಸಿಪ್ ಹರಡಿಸಿದ್ದರು. ಈ ಕುರಿತಂತೆ ಆ ನಿರೂಪಕಿ ಮತ್ತು ಚಿಕ್ಕಣ್ಣ ಅದೆಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಕೊಟ್ಟಿದ್ದರು. ಇಂದು ಅವರ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡಿದೆ.

    Live Tv

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ನಿರಾಸೆ ಮಾಡಿದ ರಕ್ಷಿತ್ ಶೆಟ್ಟಿ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ನಿರಾಸೆ ಮಾಡಿದ ರಕ್ಷಿತ್ ಶೆಟ್ಟಿ

    ತೀ ಶೀಘ್ರದಲ್ಲೇ ಜೊತೆಯಾಗಿ ಕೆಲಸ ಮಾಡೋಣ ಎಂದು ರಕ್ಷಿತ್ ಶೆಟ್ಟಿ ಅವರಿಗೆ ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇನ್ಸ್ಟಾದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದರು. ಹೀಗಾಗಿ ರಮ್ಯಾ ಅವರು ರಕ್ಷಿತ್ ಶೆಟ್ಟಿ ಅವರ ಸಿನಿಮಾ ಮೂಲಕ ಕಮ್  ಬ್ಯಾಕ್ ಆಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಕಳೆದ ಕೆಲವು ತಿಂಗಳಿಂದ ಸಿನಿಮಾ ರಂಗದಲ್ಲಿ ರಮ್ಯಾ ಸಕ್ರೀಯರಾದ ಕಾರಣದಿಂದಾಗಿ ಸಿನಿಮಾ ಬಂದೇ ಬಿಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ರಕ್ಷಿತ್ ಹೇಳಿದ್ದೇ ಬೇರೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಅಂದುಕೊಂಡಂತೆ ಆಗಿದ್ದರೆ ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಜೊತೆಯಾಗಿ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಈ ಸಿನಿಮಾದ ಕಥೆಯು ರಮ್ಯಾ ಅವರಿಗೆ ಅರ್ಥವಾಗಲಿಲ್ಲವಂತೆ. ಕಥೆಯೇ ಅರ್ಥವಾಗಲಿಲ್ಲ ಸಿನಿಮಾದಲ್ಲಿ ನಟಿಸುವುದು ಹೇಗೆ? ಎಂದು ಕೇಳಿದ್ದರಂತೆ. ಹಾಗಾಗಿ ಈ ಚಿತ್ರದಲ್ಲಿ ರಮ್ಯಾ ನಟಿಸಲಿಲ್ಲವಂತೆ. ಆನಂತರ ಮತ್ತೆ ಜೊತೆಯಾಗಿ ಕೆಲಸ ಮಾಡುವಂತಹ ಸನ್ನಿವೇಶವೇ ಸೃಷ್ಟಿ ಆಗಲಿಲ್ಲ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಇದೀಗ ರಮ್ಯಾ ಅವರು ರಕ್ಷಿತ್ ಶೆಟ್ಟಿ ಜೊತೆಗೆ ನಟಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ, ರಕ್ಷಿತ್ ಬಳಿ ಸದ್ಯಕ್ಕೆ ರಮ್ಯಾ ಜೊತೆ ಕೆಲಸ ಮಾಡುವಂತಹ ಕಥೆಯು ಇಲ್ಲವಂತೆ. ಈಗ ಬರೆದುಕೊಂಡಿರುವ ಕಥೆಯಲ್ಲಿ ರಮ್ಯಾ ಅವರಿಗೆ ಸೂಕ್ತವಾಗುವಂತಹ ಪಾತ್ರಗಳೂ ಇಲ್ಲವಂತೆ. ಹಾಗಾಗಿ ಸದ್ಯಕ್ಕೆ ರಮ್ಯಾ ಮತ್ತು ರಕ್ಷಿತ್ ಕಾಂಬಿನೇಷನ್ ನ ಸಿನಿಮಾ ಬರುವುದು ಅನುಮಾನ. ಇದನ್ನೂ ಓದಿ : ಬಾಲ್ಯದ ಗೆಳೆಯನ ಮದ್ವೆಯಲ್ಲಿ ಯಶ್ ದಂಪತಿ ಭಾಗಿ

    RAMYA

    ಹಾಗಂತ ಸಿನಿಮಾ ಬರುವುದೇ ಇಲ್ಲ ಎಂದು ಹೇಳಲಾರೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಸದ್ಯಕ್ಕೆ ಬರೆದ ಕಥೆಗಳಲ್ಲಿ ರಮ್ಯಾ ಅವರು ಮಾಡುವಂತಹ ಪಾತ್ರವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅವರೊಟ್ಟಿಗೆ ಕೆಲಸ ಮಾಡಬೇಕು ಎನ್ನುವ ತುಡಿತ ನನಗೂ ಇದೆ ಎಂದು ಕುತೂಹಲ ಮೂಡಿಸಿದ್ದಾರೆ ರಕ್ಷಿತ್ ಶೆಟ್ಟಿ.

  • ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ತ್ತೀಚಿನ ದಿನಗಳಲ್ಲಿ ರಮ್ಯಾ ಜೊತೆ ಓಡಾಡುತ್ತಿರುವ ಮತ್ತೊಂದು ಹೆಸರು ರಕ್ಷಿತ್ ಶೆಟ್ಟಿ ಅವರದ್ದು. ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿದ ಗಾಸಿಪ್ ಗೆ ಲೆಕ್ಕವಿಟ್ಟವರಿಲ್ಲ. ಅಷ್ಟರ ಮಟ್ಟಿಗೆ ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಹೆಸರು ಚಾಲ್ತಿಯಲ್ಲಿದೆ. ಇಬ್ಬರೂ ಪ್ರೀತಿಸ್ತಾ ಇದ್ದಾರೆ ಎನ್ನುವುದರಿಂದ ಹಿಡಿದು, ಒಟ್ಟಿಗೆ ಇನ್ನೇನು ಸಿನಿಮಾ ಮಾಡಲಿದ್ದಾರೆ ಎನ್ನುವಲ್ಲಿಗೆ ಗಾಸಿಪ್ ಹರಡಿಕೊಂಡಿತ್ತು. ಇದನ್ನೂ ಓದಿ : ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗೆ ಧೋನಿ ಸಿನಿ ರಂಗಕ್ಕೆ ಎಂಟ್ರಿ

    ಈ ಕುರಿತು ಮಾಧ್ಯಮವೊಂದರಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಮಾತನಾಡಿದ್ದಾರೆ. ರಮ್ಯಾ ಮತ್ತು ತಮ್ಮ ಜೊತೆಗಿನ ಬಾಂಧವ್ಯವನ್ನು ಅವರು ತೆರೆದಿಟ್ಟಿದ್ದಾರೆ. ಅಸಲಿಯಾಗಿ ಈವರೆಗೂ ರಮ್ಯಾ ಅವರನ್ನು ರಕ್ಷಿತ್ ಮುಖತಃ ಭೇಟಿ ಆಗದೇ ಇದ್ದರೂ, ಕಾಲೇಜು ದಿನಗಳಲ್ಲಿ ರಮ್ಯಾ ಮೇಲೆ ಅವರಿಗೆ ಕ್ರಶ್ ಆಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

    ರಮ್ಯಾ ಹೆಸರಾಂತ ತಾರೆ. ಸಹಜವಾಗಿ ಕಾಲೇಜು ದಿನಗಳಲ್ಲಿ ಕ್ರಶ್ ಆಗಿಯೇ ಆಗುತ್ತದೆ. ನನಗಷ್ಟೇ ಅಲ್ಲ, ಅದೆಷ್ಟೋ ಹುಡುಗರಿಗೆ ರಮ್ಯಾ ಅವರ ಮೇಲೆ ಕ್ರಶ್ ಆಗಿದೆ. ಹಾಗೆಯೇ ನನಗೂ ಆಗಿತ್ತು. ಅಷ್ಟೇ, ಅದರ ಹೊರತಾಗಿ ಉಳಿದದ್ದೆಲ್ಲ ಶುದ್ಧ ನಾನ್ಸೆನ್ಸ್ ಎನ್ನುತ್ತಾರೆ ರಕ್ಷಿತ್ ಶೆಟ್ಟಿ. ನಾನು ಯಾವುದೇ ಹುಡುಗಿಯ ಜತೆ ಫೋಟೋ ಶೇರ್ ಮಾಡಿದರೂ, ಅವರೊಂದಿಗೆ ಸಂಬಂಧ ಕಟ್ಟಿ ಗಾಸಿಪ್ ಮಾಡುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ರಕ್ಷಿತ್ ಹೇಳಿದ್ದಾರೆ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ರಮ್ಯಾ ಜೊತೆಗಿನ ಸಿನಿಮಾದ ಬಗ್ಗೆಯೂ ಮಾತನಾಡಿರುವ ರಕ್ಷಿತ್, ‘ಉಳಿದವರು ಕಂಡಂತೆ ಸಿನಿಮಾದಲ್ಲಿ ರಮ್ಯಾ ಅವರೇ ನಾಯಕಿ ಪಾತ್ರ ಮಾಡಬೇಕು ಎನ್ನುವುದು ನನ್ನಾಸೆ ಆಗಿತ್ತು. ಹಾಗಾಗಿ ಅವರಿಗೆ ಕಥೆ ಹೇಳಿದ್ದೆ. ಈ ಸಿನಿಮಾದ ಕಥೆಯು ನನಗೆ ಅರ್ಥವಾಗಲಿಲ್ಲ ಎಂದು ಹೇಳಿ ಒಪ್ಪಿಕೊಳ್ಳಲಿಲ್ಲ. ಆನಂತರ ಮತ್ತೆ ನಾನು ಅವರೊಂದಿಗೆ ಕೆಲಸ ಮಾಡಲಿಲ್ಲ. ಅವರ ಜೊತೆ ಕೆಲಸ ಮಾಡುವ ಆಸೆಯಿದೆ. ಆದರೆ, ಸದ್ಯಕ್ಕಲ್ಲ’ ಎಂದು ಮಾತನಾಡಿದ್ದಾರೆ.