Tag: ಗಾಳಿ ಆಂಜನೇಯ ದೇವಸ್ಥಾನ

  • ಚಂದ್ರಗ್ರಹಣ: ಗವಿಗಂಗಾಧರ ದೇವಾಲಯ ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದ್

    ಚಂದ್ರಗ್ರಹಣ: ಗವಿಗಂಗಾಧರ ದೇವಾಲಯ ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದ್

    – ಬೆಂಗ್ಳೂರಿನ ಬಹುತೇಕ ದೇವಸ್ಥಾನಗಳ ದರ್ಶನ ಸಮಯದಲ್ಲಿ ಬದಲಾವಣೆ

    ಬೆಂಗಳೂರು: ಇದೇ ಭಾನುವಾರ (ಸೆ.7) ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ನಗರದ ಗವಿಗಂಗಾಧರ ದೇವಾಲಯ (Gavi Gangadhareshwara Temple) ಬೆಳಗ್ಗೆ 11 ಗಂಟೆಗೆ ಬಂದ್ ಆಗಲಿದೆ.

    ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್‌ ಅವರು ಮಾತನಾಡಿ, ಸೂರ್ಯಗ್ರಹಣವಾದರೆ ಗ್ರಹಣಕ್ಕೂ ಸ್ವಲ್ಪ ಹೊತ್ತಿನ ಮೊದಲು ದೇವಸ್ಥಾನ ಬಂದ್ ಮಾಡುತ್ತಿದ್ದೆವು. ಆದರೆ ಚಂದ್ರಗ್ರಹಣದಲ್ಲಿ ಹಾಗೇ ಮಾಡಲು ಬರುವುದಿಲ್ಲ. ಗ್ರಹಣಕ್ಕೂ ಮೊದಲು ಸುಮಾರು 6 ಗಂಟೆ ದೇವಾಲಯ ಬಂದ್ ಮಾಡಬೇಕಾಗುತ್ತದೆ. ಹೀಗಾಗಿ ಬೆಳಗ್ಗೆ ಗಂಗಾಧರನಿಗೆ ಕ್ಷೀರ ನೈವೇದ್ಯ ನೀಡುತ್ತೇವೆ. ಕ್ಷೀರ ಬಿಟ್ಟು ಬೇರೆ ಪ್ರಸಾದ ನೀಡಲ್ಲ. ಬೆಳಗ್ಗೆ 11 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಬಳಿಕ ಬಾಗಿಲು ಬಂದ್ ಮಾಡಲಾಗುತ್ತದೆ. ಗ್ರಹಣ ಮೋಕ್ಷಗೊಂಡ ಕೂಡಲೇ ಶುದ್ಧೀಕರಣ ಮಾಡಲು ಆಗಲ್ಲ, ಮರುದಿನ ಬೆಳಗ್ಗೆ ಶುದ್ಧೀಕರಣ ಮಾಡಿದ ಬಳಿಕ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಸೆಪ್ಟೆಂಬರ್ 7, 8 ರಂದು ಸಂಭವಿಸಲಿದೆ ಚಂದ್ರಗ್ರಹಣ

    ಇನ್ನೂ ರಕ್ತಚಂದ್ರಗ್ರಹಣ ಹಿನ್ನೆಲೆ ನಗರದ ಬಹುತೇಕ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆಯಾಗಲಿದೆ. ಯಾವ ದೇವಸ್ಥಾನ, ದರ್ಶನ ಸಮಯ ಯಾವಾಗ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

    ಬನಶಂಕರಿ ದೇವಾಲಯ:
    ಬನಶಂಕರಿ ದೇವಿ ಜನ್ಮೋತ್ಸವದ ದಿನವೇ ರಕ್ತಚಂದ್ರಗ್ರಹಣ ಸಂಭವಿಸುತ್ತಿದೆ. ಗ್ರಹಣದ ದಿನ ಬೆಳಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ ನಡೆಯುತ್ತದೆ. ಜೊತೆಗೆ ದೇವಿಯ ಜನ್ಮೋತ್ಸವವಿರುವುದರಿಂದ ಚಂಡಿಕಾ ಹೋಮ ನಡೆಸಲಾಗುತ್ತದೆ. ಸಂಜೆ 4 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದ್ದು, ಬಳಿಕ 4:30ಕ್ಕೆ ದೇವಾಲಯ ಬಂದ್ ಮಾಡಲಾಗುತ್ತದೆ. ಮರುದಿನ ಬೆಳಗ್ಗೆ 6 ಗಂಟೆಗೆ ದೇವಾಲಯ ಹಾಗೂ ಆವರಣ ಶುದ್ಧೀಕರಣ ಮಾಡಲಾಗುತ್ತದೆ. ನಂತರ ಪೂಜೆ ಮಾಡಿ, ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ.

    ಗಾಳಿ ಆಂಜನೇಯ ದೇವಸ್ಥಾನ:
    ಗ್ರಹಣದ ದಿನ ಮಧ್ಯಾಹ್ನ 3 ಗಂಟೆಗೆ ದೇವಾಲಯವನ್ನು ಬಂದ್ ಮಾಡಲಾಗುತ್ತದೆ. ಹೀಗಾಗಿ 2:30ರ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. 2:30ರಿಂದ 3ಗಂಟೆವರೆಗೆ ದೇವಾಲಯದ ಒಳಗೆ ದರ್ಬೆ ಇಡಲಾಗುತ್ತದೆ. ಗ್ರಹಣ ಮುಗಿದ ಬಳಿಕ ಬೆಳಗ್ಗೆ ಶಾಂತಿ ಪೂಜೆ ಮಾಡಿ, ಎಂದಿನಂತೆ ಭಕ್ತರಿಗೆ ದರ್ಶನ ವ್ಯವಸ್ಥೆ ಇರುತ್ತದೆ.

    ಕಾಡು ಮಲ್ಲೇಶ್ವರ ದೇವಾಲಯ:
    ಗ್ರಹಣದ ದಿನ ಬೆಳಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಮಧ್ಯಾಹ್ನ 2:30ವರೆಗೆ ಮಾತ್ರ ಭಕ್ತರಿಗೆ ದರ್ಶನ ವ್ಯವಸ್ಥೆ ಇರುತ್ತದೆ. ಗ್ರಹಣದ ಸಮಯದಲ್ಲಿ ಎಲ್ಲಾ ದೇವರುಗಳ ಮೇಲೆ ದರ್ಬೆ ಇಡಲಾಗುತ್ತದೆ. ಗ್ರಹಣ ಮುಗಿದ ಮರುದಿನ ಬೆಳಿಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಶುದ್ಧೀಕರಣ ಮಾಡಿ, ನಂತರ ಗ್ರಹಣ ಶಾಂತಿಗಾಗಿ ರುದ್ರ ಹೋಮ, ಪ್ರಸಾದ ಸೇವೆ ಇರಲಿದೆ. ನಂತರ ದರ್ಶನಕ್ಕೆ ಅವಕಾಶವಿರುತ್ತದೆ.ಇದನ್ನೂ ಓದಿ: ರಾಜಸ್ಥಾನ, ಗುಜರಾತ್‌ ಸೇರಿ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

  • ಗಾಳಿ ಆಂಜನೇಯ ದೇಗುಲ ಭಕ್ತರಿಗೆ ಗುಡ್‌ನ್ಯೂಸ್ – ಶೀಘ್ರದಲ್ಲೇ ಹೋಮ, ಹವನ ಮಾಡಿಸೋಕೆ ಆನ್‌ಲೈನ್ ಸೇವೆ ಆರಂಭ

    ಗಾಳಿ ಆಂಜನೇಯ ದೇಗುಲ ಭಕ್ತರಿಗೆ ಗುಡ್‌ನ್ಯೂಸ್ – ಶೀಘ್ರದಲ್ಲೇ ಹೋಮ, ಹವನ ಮಾಡಿಸೋಕೆ ಆನ್‌ಲೈನ್ ಸೇವೆ ಆರಂಭ

    ಬೆಂಗಳೂರು: ಗಾಳಿ ಆಂಜನೇಯ ದೇವಸ್ಥಾನ (Gali Anjaneya Temple) ಮುಜರಾಯಿ ವ್ಯಾಪ್ತಿಗೆ ಬಂದ ಬೆನ್ನಲ್ಲೆ ಭಕ್ತರಿಗೆ ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲೇ ಹೋಮ, ಹವನ ಮಾಡಿಸಲು ಆನ್‌ಲೈನ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಲು ಮುಂದಾಗಿದೆ.ಇದನ್ನೂ ಓದಿ: 10,000 ಕೊಡ್ತೀನಿ ಬಾ – ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್

    ಮುಜರಾಯಿ ಇಲಾಖೆ (Muzrai Department) ಆಯುಕ್ತ ವೆಂಕಟೇಶ್ ಅವರು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಗಾಳಿ ಆಂಜನೇಯ ದೇವಸ್ಥಾನದ ಯಂತ್ರ, ಪ್ರಸಾದವನ್ನು ಆನ್‌ಲೈನ್ ಮೂಲಕ ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಜೊತೆಗೆ ಹೋಮ, ಹವನ ಮಾಡಿಸಲು ಶೀಘ್ರದಲ್ಲೇ ಆನ್‌ಲೈನ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ದೇಗುಲ ಮುಜರಾಯಿ ವ್ಯಾಪ್ತಿಗೆ ಸೇರಿದ ಬಳಿಕ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಅಲ್ಲದೇ ಪೂಜಾದರ, ಹೋಮ, ಹವನ, ಪ್ರಸಾದ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಹೀಗಾಗಿ ಆನ್‌ಲೈನ್ ಮೂಲಕ ಎಲ್ಲಾ ಸೇವೆಗಳನ್ನು ಭಕ್ತರಿಗೆ ಸಿಗುವಂತೆ ಮಾಡಲು ಮುಜರಾಯಿ ಇಲಾಖೆ ಮುಂದಾಗಿದೆ ಎಂದಿದ್ದಾರೆ.ಇದನ್ನೂ ಓದಿ: ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದ್ರೆ ಎಸ್‌ಐಟಿ ಮುಖ್ಯಸ್ಥರ ಬದಲಾವಣೆ – ಸಿಎಂ

  • ಗಾಳಿ ಆಂಜನೇಯ ದೇವಸ್ಥಾನ | ಅವ್ಯವಹಾರ ನಡೆದ್ರೆ 5 ವರ್ಷ ವಶಕ್ಕೆ ಪಡೆಯಲು ಅವಕಾಶವಿದೆ:ರಾಮಲಿಂಗಾ ರೆಡ್ಡಿ ಸಮರ್ಥನೆ

    ಗಾಳಿ ಆಂಜನೇಯ ದೇವಸ್ಥಾನ | ಅವ್ಯವಹಾರ ನಡೆದ್ರೆ 5 ವರ್ಷ ವಶಕ್ಕೆ ಪಡೆಯಲು ಅವಕಾಶವಿದೆ:ರಾಮಲಿಂಗಾ ರೆಡ್ಡಿ ಸಮರ್ಥನೆ

    ಮಂಗಳೂರು: ಖಾಸಗಿ ದೇವಸ್ಥಾನಗಳಲ್ಲಿ (Private Temple) ಅವ್ಯವಹಾರ ನಡೆದರೆ ಐದು ವರ್ಷ ಸರ್ಕಾರದ ವಶಕ್ಕೆ ಪಡೆಯಲು ಅವಕಾಶ ಇದೆ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

    ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನ (Sri Gali Anjaneya Swamy Temple) ಸರ್ಕಾರದ ವಶಕ್ಕೆ ಪಡೆದ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ನಮ್ಮ ರಾಜ್ಯದಲ್ಲಿ ಸುಮಾರು 1,85,000 ದೇವಸ್ಥಾನಗಳಿದ್ದು, ಇದರಲ್ಲಿ 35 ಸಾವಿರ ಮುಜರಾಯಿ ಇಲಾಖೆಗೆ ಸಂಬಂಧಿಸಿದೆ. 1,50,000 ಖಾಸಗಿ ದೇವಸ್ಥಾನಗಳಿವೆ. ಗಾಳಿ ಆಂಜನೇಯ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದ್ದಕ್ಕೆ ಸರ್ಕಾರ ದೇವಸ್ಥಾನವನ್ನು ವಶಕ್ಕೆ ಪಡೆದಿದೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಪತ್ನಿಯಿಂದ ವಿಚ್ಛೇದನ 40 ಲೀಟರ್ ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!

     

    ದೇವಸ್ಥಾನದ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ವಿಡಿಯೋವನ್ನು ಎಲ್ಲಾ ನೀವೇ ನೋಡಿದ್ದೀರಿ. ಐದು ವರ್ಷವಾದ ಮೇಲೆ ವಾಪಸ್‌ ನೀಡುತ್ತೇವೆ. ಬಿಜೆಪಿ‌ ಸರ್ಕಾರ ಅವ್ಯವಹಾರ ನಡೆದಿದ್ದಕ್ಕೆ ಎಂಟು ದೇವಸ್ಥಾನವನ್ನು ವಶಕ್ಕೆ ಪಡೆದಿತ್ತು ಎಂದು ಹೇಳುವ ಮೂಲಕ ಕಮಲ ನಾಯಕರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!

    ಖಾಸಗಿ ದೇವಸ್ಥಾನಗಳಲ್ಲಿ ಅವ್ಯಹಾರ ನಡೆದಾಗ ವಶಕ್ಕೆ ಪಡೆಯಲು ಅಧಿಕಾರ ಇರುತ್ತದೆ. ಬಿಜೆಪಿ ಸರ್ಕಾರ ಇದ್ದಾಗ ವಶ ಪಡಿಸಿಕೊಂಡಾಗ ಯಾಕೆ ಮಾತನಾಡಿಲ್ಲ. ಬಿಜೆಪಿಯವರು ವಶಕ್ಕೆ ಪಡೆದ ಪೈಕಿ ಕೆಲವೊಂದನ್ನು ಮರಳಿ ನೀಡಿದ್ದಾರೆ. ನಮ್ಮ ಸರ್ಕಾರವನ್ನು ಪ್ರಶ್ನೆ ಮಾಡಿದವರು ಬಿಜೆಪಿ ಸರ್ಕಾರವನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಕೇಳಿದರು.

    ಸರ್ಕಾರದಲ್ಲಿ ದುಡ್ಡು ಇಲ್ಲದ್ದಕ್ಕೆ ಹೆಚ್ಚು ಹಣ ಬರುವ ದೇವಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಪ್ರಶ್ನೆಗೆ, ಗಾಳಿ ಆಂಜನೇಯ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಅವ್ಯವಹಾರ ನಡೆಯುತ್ತಿದೆ. ಈಗಲೂ ಆಡಳಿತ ಮಂಡಳಿಯವರು ಚೆನ್ನಾಗಿ ಮಾಡುತ್ತೇವೆ ಎಂದರೆ ವಾಪಸ್‌ ನೀಡುತ್ತೇವೆ ಎಂದು ತಿಳಿಸಿದರು.

  • ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಕೋರ್ಟ್ ಮೊರೆಹೋದ ಆಡಳಿತ ಮಂಡಳಿ

    ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಕೋರ್ಟ್ ಮೊರೆಹೋದ ಆಡಳಿತ ಮಂಡಳಿ

    ಬೆಂಗಳೂರು: ನಗರದ ಸುಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಾಲಯ (Gali Anjaneya Temple) ಮುಜರಾಯಿ ಇಲಾಖೆ (Muzrai Department) ಸುಪರ್ದಿಗೆ ಬಂದಿದೆ. ದೇವಾಲಯದ ಆಡಳಿತವನ್ನು ಸರ್ಕಾರ ತನ್ನ ಅಧೀನಕ್ಕೆ ಪಡೆದಿದ್ದು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಇನ್ಮುಂದೆ ದೇವಾಲಯದ ಉಸ್ತುವಾರಿಯ ನಡೆಸಿಕೊಂಡು ಹೋಗಲಿದೆ. ದೇವಾಲಯದ ಆಡಳಿತ ಮಂಡಳಿ ಈಗ ಬೇರೆ ದಾರಿ ಕಾಣದೇ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೊರೆಹೋಗಲು ಸಜ್ಜಾಗಿದೆ..

    ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ದೇವಾಲಯದ ನಿರ್ವಹಣೆಗೆ ಕಾರ್ಯಪಾಲಕ ಅಧಿಕಾರಿಯನ್ನು ನೇಮಕ ಮಾಡಿದೆ. ಇಓ ನಾರಾಯಣಸ್ವಾಮಿ ಅಧಿಕಾರ ವಹಿಸಿಕೊಂಡು ದೇವಾಲಯದ ಅಧಿಕಾರ ಪಡೆದುಕೊಂಡಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ದೇವಾಲಯದ ಆಡಳಿತ ಮಂಡಳಿ ಖಂಡಿಸಿದೆ. ನಮ್ಮ ಪೂರ್ವಿಕರಿಂದ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯತ್ವ ದೊರತಿದ್ದು, ಇಷ್ಟು ವರ್ಷ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸಿದ ನಮಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥರು ಮತ್ತು ಟ್ರಸ್ಟಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಪ್ರಾಣಿ ಪ್ರಿಯರಿಗೆ ಟಿಕೆಟ್ ದರ ಏರಿಕೆ ಶಾಕ್ – ಬನ್ನೇರುಘಟ್ಟ ಜೈವಿಕ ಉದ್ಯಾನ ಟಿಕೆಟ್ ದರ 20% ಏರಿಕೆ

    ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನದ ಸಂಪೂರ್ಣ ಆಡಳಿತವನ್ನ ತನ್ನ ಅಧೀನಕ್ಕೆ ತೆಗೆದುಕೊಂಡಿದೆ. ಸೋಮವಾರ ಹೈಕೋರ್ಟ್‌ನಲ್ಲಿ (High Court) ಅರ್ಜಿ ಹಾಕಿ ಸರ್ಕಾರದ ವಿರುದ್ಧ ಕಾನೂನಿನ ಹೋರಾಟ ಮಾಡಲು ಟ್ರಸ್ಟಿಗಳು ಸಜ್ಜಾಗಿದ್ದಾರೆ. ಆಡಳಿತ ಮಂಡಳಿಯ ಕಿತ್ತಾಟದ ಮಧ್ಯೆ ಪ್ರತಿನಿತ್ಯ ಸಾವಿರಾರು ಭಕ್ತರು ಗಾಳಿ ಆಂಜನೇಯನ ದರ್ಶನ ಪಡೆಯುತ್ತಾರೆ. ಭಕ್ತರಿಗೆ ಮತ್ತು ಅಲ್ಲಿನ ಪುರೋಹಿತ ವರ್ಗಕ್ಕೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಇದನ್ನೂ ಓದಿ: ಮಂತ್ರಾಲಯ | ಸ್ನಾನಘಟ್ಟದ ಬಳಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆ

  • ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ

    ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ

    – ಮುಜರಾಯಿ ಇಲಾಖೆ ಆದೇಶ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇಗುಲವನ್ನು (Gali Anjaneya Temple) ಮುಜರಾಯಿ ಇಲಾಖೆ (Muzrai Department) ತನ್ನ ವಶಕ್ಕೆ ಪಡೆದುಕೊಂಡು ಆದೇಶ ಹೊರಡಿಸಿದೆ.

    ಕಳೆದ ವರ್ಷ ದೇವಸ್ಥಾನದ ಹುಂಡಿ ಹಣ ಎಣಿಸುವಾಗಲೇ ಆಡಳಿತ ಮಂಡಳಿಯ ಸದಸ್ಯರು ಹಣ ಎಗರಿಸಿದ್ದರು. ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ಕಪಿಲ್‌ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿ

    ಇದೀಗ ಮುಜರಾಯಿ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ವರದಿಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ. ಇದನ್ನು ಒಪ್ಪಿದ ಸರ್ಕಾರ 1997ರ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಅಂತ ಘೋಷಣೆ ಮಾಡಿದೆ. ಇದನ್ನೂ ಓದಿ: ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

  • ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೂರ್ತಿ ಪತ್ತೆ- ಹನುಮಂತನನ್ನು ನೋಡಲು ಮುಗಿಬಿದ್ದ ಜನತೆ

    ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೂರ್ತಿ ಪತ್ತೆ- ಹನುಮಂತನನ್ನು ನೋಡಲು ಮುಗಿಬಿದ್ದ ಜನತೆ

    ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರೋ ಗಾಳಿ ಆಂಜನೇಯ ದೇವಸ್ಥಾನದ ಬಳಿ ಹನುಮಂತನ ವಿಗ್ರಹವೊಂದು ಪತ್ತೆಯಾಗಿದ್ದು, ಇದೀಗ ಆ ಮೂರ್ತಿಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

    ರಾಜಕಾಲುವೆ ಸ್ವಚ್ಛತೆಯ ವೇಳೆ ಈ ಮೂರ್ತಿ ಪತ್ತೆಯಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ವಿಗ್ರಹ ಕಾಣಿಸಿಕೊಂಡಿದ್ದು, ಕೂಡಲೇ ರಾಜಕಾಲುವೆ ಸ್ವಚ್ಛತೆ ಸಿಬ್ಬಂದಿ ಅದನ್ನು ರಸ್ತೆಬದಿಯಿಟ್ಟಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿ ಪೂಜೆ ಸಲ್ಲಿಸಿದ್ದಾರೆ.


    ಬಿಬಿಎಂಪಿಯವರು ಮೋರಿ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಗ್ರಹ ಸಿಕ್ಕಿದೆ. ಬಳಿಕ ಅವರು ಆ ಮೂರ್ತಿಯನ್ನು ತೊಳೆದು ರಸ್ತೆ ಬದಿಯಲ್ಲಿಟ್ಟಿದ್ದಾರೆ. ನಂತರ ನಾವು ಅದಕ್ಕೆ ಪೂಜೆ ಸಲ್ಲಿಸಿದ್ದೇವೆ. ಹೀಗಾಗಿ ಇಲ್ಲಿ ದೇವಸ್ಥಾನ ಕಟ್ಟಬೇಕು. ಇಲ್ಲವೆಂದಲ್ಲಿ ನಾವೆಲ್ಲಾ ಸೇರಿ ಚಿಕ್ಕದಾದ ಒಂದು ದೇವಸ್ಥಾನವನ್ನು ಕಟ್ಟಿಯೇ ಕಟ್ಟುತ್ತೇವೆ ಅಂತ ಸ್ಥಳೀಯ ನಿವಾಸಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಶನಿವಾರವೇ ಮೂರ್ತಿ ಸಿಕ್ಕಿದ ಕಾರಣ ಇಲ್ಲಿ ದೇವಸ್ಥಾನವನ್ನು ಕಟ್ಟಬೇಕು. ಯಾಕಂದ್ರೆ ಈ ಪ್ರದೇಶದಲ್ಲಿ ಯಾವುದೇ ದೇವಸ್ಥಾನವಿಲ್ಲ. ಹೀಗಾಗಿ ಇಲ್ಲೊಂದು ದೇವಸ್ಥಾನವನ್ನು ಕಟ್ಟಿದ್ರೆ ಎಲ್ಲರಿಗೂ ಅನುಕೂಲವಾಗುತ್ತದೆ ಅಂತ ಮಹಿಳೆಯೊಬ್ಬರು ಶಾಸಕರು ಹಾಗೂ ಸ್ಥಳೀಯ ರಾಜಕೀಯ ಮುಖಂಡರಲ್ಲಿ ಆಗ್ರಹಿಸಿದ್ದಾರೆ. ಶನಿವಾರ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ್ರೆ ಶನಿ ಗ್ರಹದ ದೋಷಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv