Tag: ಗಾಲಿ ಸೋಮಶೇಖರ್ ರೆಡ್ಡಿ

  • ಕುಮಾರಸ್ವಾಮಿ ಏಕಪತ್ನಿ ವ್ರತಸ್ಥ ಅಲ್ಲ, ಎಲ್ಲರಿಗೂ ಗೊತ್ತಿರುವ ವಿಚಾರ: ಗಾಲಿ ಸೋಮಶೇಖರ್ ರೆಡ್ಡಿ

    ಕುಮಾರಸ್ವಾಮಿ ಏಕಪತ್ನಿ ವ್ರತಸ್ಥ ಅಲ್ಲ, ಎಲ್ಲರಿಗೂ ಗೊತ್ತಿರುವ ವಿಚಾರ: ಗಾಲಿ ಸೋಮಶೇಖರ್ ರೆಡ್ಡಿ

    ಬಳ್ಳಾರಿ: RSS ವಿರುದ್ಧ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಗಾಲಿ ಸೋಮಶೇಖರ್ ರೆಡ್ಡಿ ಗುಡುಗಿದ್ದಾರೆ. ಅವರು ಏಕ ಪತ್ನಿ ವ್ರತಸ್ಥ ಅಲ್ಲ, ಈ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

    ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅವರಿಗೆ ಆಗಾಗ ತೆಲೆ ಕೆಟ್ಟು ಮಾನಸಿಕ ಸ್ಥಿಮಿತ ಕಳೆದುಕೊಂಡು ಬುದ್ದಿ ಮಾಂದ್ಯನ ಹಾಗೆ ಮಾತನಾಡುತ್ತಾರೆ. ಅಶ್ಲೀಲ ಚಿತ್ರ ನೋಡಲು ಆರ್‍ಎಸ್‍ಎಸ್ ಸೇರಬೇಕಾ ಎಂಬ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ಹೀಗೆ ಮಾತನಾಡಲು ಅವರು ಏಕಪತ್ನಿ ವ್ರತಸ್ಥ ಅಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಕಾಫಿನಾಡ ಯುವಕನೇ ಸಾರಥಿ

    ಒಂದು ಸಾರಿಯಾದರೂ  RSS ಕಾರ್ಯಕ್ರಮದಲ್ಲಿ ಭಾಗವಹಿಸಲಿ ಆಗ ಅವರಿಗೆ ತಿಳಿಯುತ್ತದೆ. ಇನ್ನು ಅವರೊಬ್ಬ ಮಾಜಿ ಮುಖ್ಯಮಂತ್ರಿ ಅವರು ಹೀಗೆಲ್ಲಾ ಮಾತನಾಡಬಾರದು. ಮೊದಲು ಮಾತನಾಡುವಾಗ ಒಂದು ಸಾರಿ ಯೋಚನೆ ಮಾಡಲಿ. ಇನ್ನು ಪ್ರತಿ ಸಾರಿ ಚುನಾವಣಾ ಬಂದಾಗ ಅವರಿಗೆ ತಲೆ ಕೆಟ್ಟು, ಬುದ್ಧಿ ಭ್ರಮಣೆ ಆಗುತ್ತೆ ಎಂದಿದ್ದಾರೆ.  ಇದನ್ನೂ ಓದಿ: ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

  • ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ

    ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ

    ಬಳ್ಳಾರಿ: ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ ಮಾಡಲಾಗುತ್ತದೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಬಳ್ಳಾರಿ ನಗರ ಹೊರವಲಯದ ಅಲ್ಲೀಪುರ ಕೆರೆಯ ಎಚ್‍ಎಲ್‍ಸಿ ಕಾಲುವೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರೋದು ನಮಗೆಲ್ಲ ಖುಷಿ ತಂದಿದೆ. ಅಂಜನಾದ್ರಿ ಬೆಟ್ಟದಲ್ಲಿ ವಾಯು, ಸುಗ್ರೀವ, ರಾಮನೂ ಕೂಡ ನೆಲೆಸಿದ್ದ ಎಂಬ ಪ್ರತೀತಿಯಿದೆ. ಹೀಗಾಗಿ ಅಲ್ಲಿಂದ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಒಂದು ಕಲ್ಲನ್ನು ಒಯ್ಯಲಾಗಿದೆ. ರಾಮಮಂದಿರದಲ್ಲೂ ಕೂಡ ಅಂಜನಾದ್ರಿ ಬೆಟ್ಟದ ಕಲ್ಲನ್ನು ನಾವು ನೋಡಬಹುದಾಗಿದೆ ಎಂದರು.

    ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿರುವ ವಿಚಾರ ನಿನ್ನೆ ಗೊತ್ತಾಯ್ತು. ವಿಷಯ ಕೇಳಿ ತುಂಬಾ ನೋವಾಯ್ತು. ಮುಖ್ಯಮಂತ್ರಿಗಳು ಆದಷ್ಟು ಬೇಗ ಗುಣಮುಖರಾಗಿ ಬರಬೇಕು. ಈ ನಾಡಿಗೆ ಅವರ ಸೇವೆ ಅತ್ಯಗತ್ಯವಾಗಿದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆರೋಗ್ಯ ಮಾತೆಯಲ್ಲಿ ಪ್ರಾರ್ಥಿಸುವುದಾಗಿ ಎಂದು ಸೋಮಶೇಖರ್ ತಿಳಿಸಿದರು.