Tag: ಗಾಯಕ

  • ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

    ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

    – ಹೈಕೋರ್ಟ್ ಸೂಚನೆಗೂ ಗಾಯಕ ಡೋಂಟ್‌ಕೇರ್

    ಬೆಂಗಳೂರು: ಕನ್ನಡಿಗರಿಗೆ ಅಪಮಾನ ಪ್ರಕರಣ ಸಂಬಂಧ ಗಾಯಕ ಸೋನು ನಿಗಮ್ ಪೊಲೀಸರ ಜೊತೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಪೊಲೀಸರ ಭೇಟಿಗೆ ಸಮಯ ಕೊಡದೇ ಸೋನು ನಿಗಮ್ (Sonu Nigam) ಸತಾಯಿಸುತ್ತಿದ್ದಾರೆ.

    ಹೈಕೋರ್ಟ್ ಸೂಚನೆಗೂ ಕೇರ್ ಮಾಡದ ಗಾಯಕ ಸೋನು ನಿಗಮ್. ಘಟನೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂದರು ಇನ್ನೂ ಹೇಳಿಕೆ ಕೊಟ್ಟಿಲ್ಲ. ಈ ಹಿಂದೆ ಹೈಕೋರ್ಟ್, ‘ಬಲವಂತದ ಕ್ರಮ ಬೇಡ. ತನಿಖೆಗೆ ಸಹಕರಿಸಿ’ ಎಂದಿತ್ತು. ಇದನ್ನೂ ಓದಿ: EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ

    ಅಲ್ಲದೇ ಪೊಲೀಸರಿಗೆ ಸೋನು ಬಳಿಯೇ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ಸೂಚನೆ ನೀಡಿತ್ತು. ಪೊಲೀಸರ ಸತತ ಪ್ರಯತ್ನದ ನಡುವೆಯೂ ಇದುವರೆಗೂ ಸೋನು ನಿಗಮ್ ಪೊಲೀಸರ ಸಂಪರ್ಕಕ್ಕೆ ಸಿಗಲಿಲ್ಲ. ಪೊಲೀಸರು ಕರೆ ಮಾಡಿದಾಗಲೆಲ್ಲ ಸಮಯ ಕೋಡೋದಾಗಿ ಸತಾಯಿಸುತ್ತಿದ್ದಾರೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಹಾಗಾದ್ರೆ ಹೈಕೋರ್ಟ್ ಮಾತಿಗೆ ಸೋನು ನಿಗಮ್ ಬೆಲೆ ನೀಡುತ್ತಿಲ್ವಾ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಇನ್ನೆರೆಡು ದಿನ ಕಾದು ನೋಡಲು ಪೊಲೀಸರು ಚಿಂತನೆ ನಡೆಸಿದ್ದು, ನಂತವೂ ಸಮಯ ಕೊಟ್ಟಿಲ್ಲ ಅಂದರೆ ಕೋರ್ಟ್ ಗಮನಕ್ಕೆ ತರಲು ಅವಲಹಳ್ಳಿ ಪೊಲೀಸರು (Avalahlli Police) ನಿರ್ಧಾರ ಮಾಡಿದ್ದಾರೆ.

  • ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ

    ಒಲವಿನ ಉಡುಗೊರೆ ಕೊಡಲೇನು ಹಾಡಿಗೆ ದನಿಯಾಗಿದ್ದ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ

    – 16 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ ಗಾಯಕ

    ತಿರುವನಂತಪುರಂ: ಒಲವಿನ ಉಡುಗೊರೆ ಕೊಡಲೇನು ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗೀತೆಗಳನ್ನು ಹಾಡಿದ್ದ ಲೆಜೆಂಡರಿ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್‌ (80) ನಿಧನರಾಗಿದ್ದಾರೆ.

    ಆರು ದಶಕಗಳಿಗೂ ಹೆಚ್ಚು ಕಾಲ ಮಲಯಾಳಿಗಳ ಹೃದಯಗಳನ್ನು ಸೂರೆಗೊಂಡಿದ್ದ ಹಿರಿಯ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ (P.Jayachandran) ಅವರು. ತಮ್ಮ ಸುಪ್ರಸಿದ್ಧ ವೃತ್ತಿಜೀವನದುದ್ದಕ್ಕೂ, ಜಯಚಂದ್ರನ್ ಅವರು ಪ್ರೀತಿ, ಹಂಬಲ, ಭಕ್ತಿ ಮುಂತಾದ ಪ್ರತಿಯೊಂದು ಭಾವನೆಯನ್ನು ತಮ್ಮ ಭಾವಪೂರ್ಣ ಗಾಯನದ ಮೂಲಕ ಹೊಮ್ಮಿಸಿದ್ದಾರೆ. ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: ಬೆಂಕಿ ಅವಘಡದಿಂದ ತಪ್ಪಿಸಿಕೊಂಡ ನೋರಾ ಫತೇಹಿ

    ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧ ಧ್ವನಿಗಳಲ್ಲಿ ಒಂದಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರ ಕಾಲಾತೀತ ಧ್ವನಿ ಮತ್ತು ಭಾವನಾತ್ಮಕ ಗಾಯನಗಳು ಅವರ ಹಾಡುಗಳಿಗೆ ಶಾಶ್ವತವಾದ ಮೋಡಿಯನ್ನು ನೀಡಿವೆ, ಕೇಳಿದ ನಂತರವೂ ಕೇಳುಗರ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.

    ಮಂದಾರ ಪುಷ್ಪವು ನೀನು, ಭೂಮಿ ತಾಯಾಣೆ ನೀ ಇಷ್ಟ ಕಣೆ, ಹಿಂದೂಸ್ತಾನವು ಎಂದೂ ಮರೆಯದ, ಕನ್ನಡ ನಾಡಿನ ಕರಾವಳಿ, ನನ್ನವರು ಯಾರೂ ಇಲ್ಲ.. ಯಾರಿಗೆ ಯಾರೂ ಇಲ್ಲ, ಕಾಲ ಮತ್ತೊಮ್ಮೆ ನಮಗಾಗಿ ಬಂತು ಹೀಗೆ ಹಲವಾರು ಕನ್ನಡದ ಸುಪ್ರಿಸಿದ್ಧ ಗೀತೆಗಳನ್ನು ಹಾಡಿ ಜನಪ್ರಿಯತೆ ಗಳಿಸಿದ್ದರು. ಇದನ್ನೂ ಓದಿ: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್‌ ನೇಮಕ

  • ಪದ್ಮಶ್ರೀ ಪುರಸ್ಕೃತ ಮೊಗಿಲಯ್ಯರವರ ನೆರವಿಗೆ ನಿಂತ ನಟಿ ಜ್ಯೋತಿ ರೈ

    ಪದ್ಮಶ್ರೀ ಪುರಸ್ಕೃತ ಮೊಗಿಲಯ್ಯರವರ ನೆರವಿಗೆ ನಿಂತ ನಟಿ ಜ್ಯೋತಿ ರೈ

    ಕಿರುತೆರೆ ನಟಿ ಜ್ಯೋತಿ ರೈ (Jyoti Rai) ಅಶ್ಲೀಲ ವಿಡಿಯೋ ಪ್ರಕರಣದಿಂದ ನೊಂದಿದ್ದಾರೆ. ಈ ಬೇಸರದ ನಡುವೆಯೂ ಪದ್ಮಶ್ರೀ ವಿಜೇತ ಮೊಗಿಲಯ್ಯ  (Mogiliah) ಅವರಿಗೆ ಧನ ಸಹಾಯ ಮಾಡಿದ್ದಾರೆ. ಅವರ ಆರ್ಥಿಕ ಸಂಕಷ್ಟಕ್ಕೆ ನೆರವಾಗಿದ್ದಾರೆ. ನಟಿಯ ನಡೆಗೆ ಅಭಿಮಾನಿಗಳು ಹೊಗಳಿದ್ದಾರೆ.

    ಜನಪದ ಗಾಯಕ (Folklorist) ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ತನ್ನ ನೋವನ್ನು ನುಂಗಿ ಜ್ಯೋತಿ ರೈ ಅವರು ಈ ಹಿರಿಯ ಕಲಾವಿದರ ನೆರವಿಗೆ ಧಾವಿಸಿದ್ದಾರೆ.

    ಅಕ್ಷಯ ತೃತೀಯ ದಿನದಂದು ಜ್ಯೋತಿ ರೈ ಅವರು ಮೊಗಿಲಯ್ಯ ಅವರಿಗೆ 50 ಸಾವಿರ ರೂ. ಧನ ಸಹಾಯ ನೀಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತು ಎಂದು ಜ್ಯೋತಿ ರೈ ಹೇಳಿದ್ದಾರೆ.

    ಮುಂದುವರಿದು, ಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಮೂಡಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹೀಗಾಗಿ ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ನೆರವಾಗೋಣ ಎಂದು ಕರೆ ನೀಡಿದ್ದಾರೆ.

    ಈ ಹಿಂದೆ ಪದ್ಮಶ್ರೀ ಮೊಗಿಲಯ್ಯ ಬಹಳ ಒಳ್ಳೆಯ ಜನಪದ ಗಾಯಕರು. ಪವನ್ ಕಲ್ಯಾಣ್ ನಟಿಸಿರುವ ‘ಭೀಮ್ಲಾ ನಾಯಕ್’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಆ ಹಾಡು ಸೂಪರ್ ಹಿಟ್ ಆಗಿದೆ. ಭೀಮ್ಲಾ ನಾಯಕ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಪವನ್ ಕಲ್ಯಾಣ್, ಮೊಗಿಲಯ್ಯಗೆ ಆರ್ಥಿಕ ಸಹಾಯ ಮಾಡಿದ್ದರು.

  • ಬಹುಭಾಷಾ ಗಾಯಕ ಪಂಕಜ್ ನಿಧನ: ಕನ್ನಡದ ‘ಸ್ಪರ್ಶ’ ಚಿತ್ರಕ್ಕೂ ಹಾಡಿದ್ದ ಸಿಂಗರ್

    ಬಹುಭಾಷಾ ಗಾಯಕ ಪಂಕಜ್ ನಿಧನ: ಕನ್ನಡದ ‘ಸ್ಪರ್ಶ’ ಚಿತ್ರಕ್ಕೂ ಹಾಡಿದ್ದ ಸಿಂಗರ್

    ಬಾಲಿವುಡ್ (Bollywood) ಚಿತ್ರರಂಗ ಹೆಸರಾಂತ ಗಾಯಕ, ಜಝಲ್ ಮಾಂತ್ರಿಕ ಪಂಕಜ್ ಉದಾಸ್ (Pankaj Udhas) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ (Passes away) ತ್ಯಜಿಸಿದ್ದಾರೆ.

    ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಅವರು ಹಾಡಿದ್ದಾರೆ. ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಗೀತೆಯು ಇವರ ಕಂಠದಲ್ಲೇ ಮೂಡಿ ಬಂದಿದ್ದು. ಇಟಗಿ ಈರಣ್ಣ ಅವರ ಸಾಹಿತ್ಯವನ್ನು ಈ ಹಾಡಿನ ಮೂಲಕ ನಾಡಿಗೆ ತಲುಪಿಸಿ ಕೀರ್ತಿ ಪಂಕಜ್ ಅವರದ್ದು.

     

    ಪಂಕಜ್ ಉದಾಸ್ ನಿಧನಕ್ಕೆ ಬಾಲಿವುಡ್, ಗಝಲ್ ಪ್ರೇಮಿಗಳ ಕಂಬನಿ ಮಿಡಿದಿದ್ದಾರೆ. ಅವರು ಹಾಡಿದ ಗೀತೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

  • ಬಾಲಿವುಡ್ ಖ್ಯಾತ ಗಾಯಕನ ಮೇಲೆ ಮತ್ತೆ ರೇಪ್ ಆರೋಪ: ಎಫ್.ಐ.ಆರ್ ದಾಖಲು

    ಬಾಲಿವುಡ್ ಖ್ಯಾತ ಗಾಯಕನ ಮೇಲೆ ಮತ್ತೆ ರೇಪ್ ಆರೋಪ: ಎಫ್.ಐ.ಆರ್ ದಾಖಲು

    ರಿಯಾಲಿಟಿ ಶೋ ಮೂಲಕ ಗಾಯನ ಪ್ರಪಂಚಕ್ಕೆ ಪರಿಚಯವಾದ, ಇದೀಗ ಬಾಲಿವುಡ್ ನಲ್ಲಿ ಸಖತ್ ಫೇಮಸ್ಸೂ ಆಗಿರುವ ಸಿಂಗರ್ ರಾಹುಲ್ ಜೈನ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಕೆಲಸದ ನೆಪದಲ್ಲಿ ರಾಹುಲ್ ಜೈನ್, ಮಹಿಳೆಯೊಬ್ಬರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ಎಸೆಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ರಾಹುಲ್ ಮೇಲೆ ಅವರು ದೂರನ್ನೂ ದಾಖಲಿಸಿದ್ದಾರೆ.

    ನಾನು ಅನೇಕ ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತೇನೆ. ಇದೇ ಆಗಸ್ಟ್ 11 ರಂದು ರಾಹುಲ್ ಜೈನ್, ತಮಗೂ ಪರ್ಸನಲ್ ಆಗಿ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎಂದು ಕೆಲಸದ ನೆಪದಲ್ಲಿ ನನ್ನನ್ನು ತಮ್ಮ ಫ್ಲ್ಯಾಟ್ ಗೆ ಕರೆದರು. ಅವರ ಮಾತನ್ನು ನಿಜವೆಂದು ನಂಬಿಕೊಂಡು ನಾನೂ ಹೋದೆ. ಅವರು ನನ್ನನ್ನು ತಮ್ಮ ಬೆಡ್ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ ಎಂದು ಮುಂಬೈನಲ್ಲಿ ಮಹಿಳೆ ದೂರು ನೀಡಿದ್ದಾರೆ. ಈ ಕುರಿತಂತೆ ಈಗಾಗಲೇ ಮುಂಬೈ ಪೊಲೀಸ್ ತನಿಖೆಗೆ ಇಳಿದಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಈ ಕುರಿತು ರಾಹುಲ್ ಜೈನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಮಹಿಳೆಯರು ನನ್ನ ಮೇಲೆ ಈ ರೀತಿಯ ದೂರು ನೀಡುವುದು ಹೊಸದಲ್ಲ. ಈ ಹಿಂದೆಯೂ ಒಬ್ಬರು ದೂರು ಕೊಟ್ಟಿದ್ದರು. ಆದರೆ, ನಾನು ಅದರಲ್ಲಿ ಗೆದ್ದೆ. ನನ್ನಿಂದ ತಪ್ಪಾಗಿಲ್ಲ ಅಂತ ನನಗೆ ನ್ಯಾಯ ಸಿಕ್ಕಿತು. ಈಗ ಆರೋಪ ಮಾಡಿರುವ ಹುಡುಗಿ ಯಾರೆಂದು ನನಗೆ ಗೊತ್ತಿಲ್ಲ. ಈ ಹಿಂದೆ ದೂರು ಕೊಟ್ಟಿರುವ ಹುಡುಗಿಗೂ ಈಕೆಗೂ ಏನಾದರೂ ಸಂಬಂಧ ಇದೆಯಾ ತನಿಖೆ ಮಾಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಂಜಾಬಿ ಖ್ಯಾತ ಗಾಯಕ ಬಲ್ವಿಂದರ್ ಸಫ್ರಿ ನಿಧನ

    ಪಂಜಾಬಿ ಖ್ಯಾತ ಗಾಯಕ ಬಲ್ವಿಂದರ್ ಸಫ್ರಿ ನಿಧನ

    ಬ್ರಿಟನ್ ಸಂಗೀತ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದ್ದ, ಪಂಜಾಬಿ ಮೂಲದ ಗಾಯಕ ಬಲ್ವಿಂದರ್ ಸಫ್ರಿ ನಿಧನರಾಗಿದ್ದಾರೆ. 63ರ ವಯಸ್ಸಿನ ಸಂಫ್ರಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸ್ವತಃ ಕುಟುಂಬದ ಮೂಲಗಳೇ ತಿಳಿಸಿವೆ. ಭಾರತೀಯ ಮೂಲದ ಬ್ರಿಟನ್ ನಲ್ಲಿ ಫೇಮಸ್ ಆಗಿದ್ದ ಸಫ್ರಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನೆಲೆಸಿದ್ದರು.

    ಪಂಜಾಬಿನಲ್ಲಿ ಜನಿಸಿದ್ದರೂ, ಬರ್ಮಿಂಗ್ ಹ್ಯಾಮ್ ನಲ್ಲಿ ನೆಲೆ ಕಂಡುಕೊಂಡಿದ್ದ ಬಲ್ವಿಂದರ್ ಸಫ್ರಿ, 1989ರಿಂದ ಯುಕೆ ಭಾಂಗ್ರಾದ ಭಾಗವಾಗಿದ್ದ ಅವರು 1990ರಲ್ಲಿ ಸಫ್ರಿ ಬಾಯ್ಸ್ ಬ್ಯಾಂಡ್ ಕಟ್ಟಿಕೊಂಡು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಫ್ರಿ ಬಾಯ್ಸ್ ಬ್ಯಾಂಡ್ ಅತೀ ದುಬಾರಿ ಬ್ಯಾಂಡ್ ಎಂದೂ ಖ್ಯಾತಿಗಳಿಸಿತ್ತು. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

    ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಫ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಶಸ್ತ್ರ ಚಿಕಿತ್ಸೆಯ ನಂತರ ಅವರು ಕೋಮಾಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ ಬ್ರೈನ್ ಡ್ಯಾಮೇಜ್ ಕೂಡ ಆಗಿತ್ತಂತೆ. ಆನಂತರ ಜುಲೈ 15ರಂದು ಆಸ್ಪತ್ರೆಯಿಂದ ಅವರನ್ನು ಮನೆಗೆ ಕರೆತರಲಾಗಿತ್ತು. ಮನೆಯಲ್ಲೇ ಸಫ್ರಿ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಗೃಹಪ್ರವೇಶದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಗಾಯಕ ನವೀನ್ ಸಜ್ಜು

    ಗೃಹಪ್ರವೇಶದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಗಾಯಕ ನವೀನ್ ಸಜ್ಜು

    ಸ್ಯಾಂಡಲ್‌ವುಡ್‌ನ ಗಾಯಕ, ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬಿಗ್‌ ಬಾಸ್‌ ಖ್ಯಾತಿಯ ನವೀನ್ ಸಜ್ಜು ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದೆ.

    ಚಂದನವನದಲ್ಲಿ ಗಾಯಕ, ಸಂಗೀತ ಸಂಯೋಜಕ, ಬರಹಗಾರ ಮೂಲಕ ಮೋಡಿ ಮಾಡಿರುವ `ಬಿಗ್ ಬಾಸ್’ ಖ್ಯಾತಿಯ ನವೀನ್ ಸಜ್ಜು ಮನೆಯಲ್ಲಿ ಸಂತಸ ಮಾಡಿದೆ. ಹೊಸ ಮನೆಯ ಹೊಸ ಹೊಸ್ತಿಲಲ್ಲಿ ಗಾಯಕ ನವೀನ್ ಸಜ್ಜು ಇದ್ದಾರೆ. ಮೈಸೂರಿನಲ್ಲಿ ತಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ನಟಿ ಅಕ್ಷತಾ ಪಾಂಡವಪುರ ಕೂಡ ನವೀನ್ ಮನೆಯ ಗೃಪ್ರವೇಶದಲ್ಲಿ ಪಾಲ್ಗೋಂಡಿದ್ದಾರೆ. ನವೀನ್ ಹೊಸ ಮನೆಯ ಫೋಟೋ ಶೇರ್ ಮಾಡಿ ಶುಭ ಹಾರೈಸಿದ್ದಾರೆ.‌ ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    `ಮಾನಸು’ ಇವತ್ತು ಮೈಸೂರಿನಲ್ಲಿ ನಮ್ಮ ನವೀನ್‌ನ ಮನೆ ಓಪನಿಂಗ್ ಇತ್ತು. ಚಂದದ ಮನೆ, ಮುಂದಿನ ಎಲ್ಲಾ ದಿನಗಳೂ ಹೀಗೆ ಮನೆಯಷ್ಟೇ ಚಂದವಾಗಿರಲಿ ಎಂದು ನಟಿ ಅಕ್ಷತಾ ಶುಭಹಾರೈಸಿದ್ದಾರೆ. ಸಾಕಷ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ನವೀನ್ ಸಜ್ಜು, ಹೊಸ ಮನೆಯ ಸಂಭ್ರಮಕ್ಕೆ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರು ಸಾಕ್ಷಿಯಾಗಿದ್ದಾರೆ.

    Live Tv

  • ಸಿಧು ಮೂಸೆವಾಲಾ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    ಸಿಧು ಮೂಸೆವಾಲಾ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    ಚಂಡೀಗಢ: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಪಂಜಾಬಿ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ನಿವಾಸಕ್ಕೆ ಸಂಸದ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಪಂಜಾಬ್‌ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಈ ವೇಳೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪರತಾಪ್ ಸಿಂಗ್ ಬಜ್ವಾ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ಜೊತೆಗಿದ್ದರು. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ

    ರಾಹುಲ್ ಗಾಂಧಿ ಭೇಟಿ ಹಿನ್ನೆಲೆ ಭದ್ರತೆಯನ್ನು ಹೆಚ್ಚು ಮಾಡಲಾಗಿತ್ತು. ಸಿಧು ಮೂಸೆವಾಲಾ ಹತ್ಯೆ ಬಳಿಕ ಹಲವು ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದು, ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಅದಕ್ಕೂ ಮುನ್ನ ಸಿಎಂ ಭಗವಂತ್ ಮಾನ್ ಭೇಟಿ ನೀಡಿದ್ದರು.

    ಸಿಧು ಮೂಸೆವಾಲಾ, ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದು, ಮಾನ್ಸಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮೇ 29 ರಂದು ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಅವರ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಭರವಸೆಯ ನಾಯಕ ಮತ್ತು ಪ್ರತಿಭಾವಂತ ಕಲಾವಿದ ಸಿಧು ಮೂಸೆವಾಲಾ ಅವರ ಹತ್ಯೆಯಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ. ಪ್ರಪಂಚದಾದ್ಯಂತದ ಅವರ ಪ್ರೀತಿಪಾತ್ರರಿಗೆ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಹೇಳಿದ್ದರು. ಇದನ್ನೂ ಓದಿ: ಅಗಲಿದ ಕೆಕೆ ಕೊನೆ ಹಾಡು ರಿಲೀಸ್ : ಭಾವುಕರಾದ ಕೇಳುಗರು

     

  • ಸಿದ್ದು ಮೂಸೆವಾಲಾ ಹತ್ಯಾ ಪ್ರಕರಣ ಸಿಬಿಐಗೆ ವರ್ಗಾಯಿಸುವಂತೆ ಸುಪ್ರೀಂಗೆ ಅರ್ಜಿ

    ಸಿದ್ದು ಮೂಸೆವಾಲಾ ಹತ್ಯಾ ಪ್ರಕರಣ ಸಿಬಿಐಗೆ ವರ್ಗಾಯಿಸುವಂತೆ ಸುಪ್ರೀಂಗೆ ಅರ್ಜಿ

    ನವದೆಹಲಿ: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಕಾಂಗ್ರೆಸ್ ನಾಯಕ ಹಾಗೂ ಖ್ಯಾತ ಗಾಯಕ ಸಿದ್ದು ಮೂಸೆವಾಲಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

    ಬಿಜೆಪಿ ನಾಯಕ ಜಗಜಿತ್ ಸಿಂಗ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಗಳ ಅಡಿಯಲ್ಲಿ ದಾಖಲಾಗಿರುವ ಮೇ 29 ರ ಪ್ರಥಮ ಮಾಹಿತಿ ವರದಿಯನ್ನು(ಎಫ್‌ಐಆರ್) ಸಿಬಿಐಗೆ ವರ್ಗಾಯಿಸುವಂತೆ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ದಾಳಿ – 177 ಶಿಕ್ಷಕರ ವರ್ಗಾವಣೆ

    ಹಗಲು ಹೊತ್ತಿನಲ್ಲಿ ಕೋಲ್ಡ್ ಬ್ಲೆಡ್ ಹತ್ಯೆಯನ್ನು ನಡೆಸಿದ ರೀತಿ, ಪಂಜಾಬ್ ರಾಜ್ಯದ ಆಡಳಿತ ಯಂತ್ರವು ಅಪರಾಧವನ್ನು ತಡೆಗಟ್ಟುವಲ್ಲಿ ಮಾತ್ರವಲ್ಲದೆ ದರೋಡೆಕೋರರ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವ ಕರ್ತವ್ಯದಲ್ಲೂ ವಿಫಲವಾಗಿದೆ ಎಂಬ ಅಂಶವನ್ನು ಸೂಚಿಸುತ್ತದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಾನ್ಪುರದಲ್ಲಿ ಘರ್ಷಣೆ – ಸಾವಿರ ಮಂದಿ ಮೇಲೆ ಎಫ್‍ಐಆರ್, 18 ಮಂದಿ ಅರೆಸ್ಟ್

    ಗಾಯಕ ಮೂಸೆವಾಲಾ ಕಳೆದ ವಾರ ತನ್ನ ಸ್ಪೋರ್ಟ್ಸ್ ಯುಟಿಲಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಕೊಲೆಯಲ್ಲಿ ಭಾಗಿಯಾಗಿದ್ದು, ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಈ ಕೊಲೆಯನ್ನು ನಾವೇ ಎಸಗಿದ್ದಾನೆ ಎಂದು ಹೇಳಿದ್ದಾನೆ.

    ಹತ್ಯೆಗೂ ಒಂದು ದಿನದ ಮೊದಲು ಪಂಜಾಬ್ ಸರ್ಕಾರ ಮೂಸೆವಾಲಾ ಭದ್ರತೆಯನ್ನು ಹೇಗೆ ತೆಗೆದುಹಾಕಿತ್ತು ಮತ್ತು ಅದರ ಬಗ್ಗೆ ಮಾಧ್ಯಮಗಳಲ್ಲಿ ಹೇಗೆ ಮಾಹಿತಿ ಪ್ರಕಟವಾಯಿತು ಎಂಬುದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಿ ಹೇಳಲಾಗಿದೆ.

    ಪ್ರಕರಣದ ಓರ್ವ ಆರೋಪಿ ಮನ್‌ಪ್ರೀತ್ ಸಿಂಗ್‌ನನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ. ಆದರೆ ಇತರ ಸಹ ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

  • ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಅವರ ಅಂತ್ಯ ಸಂಸ್ಕಾರ ಮುಂಬೈನಲ್ಲಿ ಇಂದು ನಡೆಯಲಿದೆ. ಇಂದು ಮಧ್ಯಾಹ್ನ 1 ಗಂಟೆಗೆ ವಿಧಿವಿಧಾನಗಳ ಮೂಲಕ ಕೆಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಕೆಕೆ ಅವರ ಪ್ರಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಬಾಲಿವುಡ್ ನಟ ನಟಿಯರು, ಕೆಕೆ ಅಭಿಮಾನಿಗಳು ಕೆಕೆ ಮನೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ :  ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

    ಕೆಕೆ ನಿಧನಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಗಾಯಕರಾದ ವಿಜಯ ಪ್ರಕಾಶ್, ಶ್ರೇಯಾ ಘೋಷಾಲ್ ಸೇರಿದಂತೆ ಸಾಕಷ್ಟು ತಾರೆಯರು ಸಂತಾಪ ಸೂಚಿಸಿದ್ದರು.  ಅವರೊಂದಿಗಿನ  ಒಡನಾಟವನ್ನು ಹಂಚಿಕೊಂಡಿದ್ದರು. ಕೋಲ್ಕತ್ತಾ ಸರಕಾರ ಸರಕಾರಿ ಗೌರವ ಕೂಡ ನೀಡಿದೆ. ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

    ಮಂಗಳವಾರ ರಾತ್ರಿ ಕೆಕೆ ಅವರು ಕೋಲ್ಕತ್ತಾ ಠಾಕೂರ್ಪುಕೂರ್ ವಿವೇಕಾನಂದ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಲು ಹೋಗಿದ್ದರು. ಒಂದು ಗಂಟೆ ಕಾರ್ಯಕ್ರಮ ನೀಡಿದ ನಂತರ, ಮಧ್ಯದಲ್ಲೇ ಅವರು ಅಸ್ವಸ್ಥರಾಗಿದ್ದರು. ವಿಶ್ರಾಂತಿ ಪಡೆಯಲೆಂದೇ ಅವರು ಹೋಟೆಲ್ ಗೆ ತೆರೆಳಿದರು. ಅಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲದೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಯಾವುದೇ ಪ್ರಯೋಜನವಾಗಲಿಲ್ಲ.