Tag: ಗಾನವಿ ಲಕ್ಷ್ಮಣ

  • ಬೋಲ್ಡ್ ಅವತಾರ ತಾಳಿದ `ವೇದ’ ನಟಿ ಗಾನವಿ ಲಕ್ಷ್ಮಣ್‌

    ಬೋಲ್ಡ್ ಅವತಾರ ತಾಳಿದ `ವೇದ’ ನಟಿ ಗಾನವಿ ಲಕ್ಷ್ಮಣ್‌

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ `ವೇದ’ (Vedha) ಖ್ಯಾತಿಯ ಗಾನವಿ ಇದೀಗ ಬೋಲ್ಡ್ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಶಿವಣ್ಣಗೆ ಜೋಡಿಯಾಗಿ ನಟಿಸುವ ಮೂಲಕ ಮೋಡಿ ಮಾಡಿದ್ದ ಗಾನವಿ ನಯಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಕಿರುತೆರೆಯಲ್ಲಿ `ಮಗಳು ಜಾನಕಿ’ (Magalu Janaki) ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಲೆನಾಡಿನ ಸುಂದರಿ ಗಾನವಿ, ರಿಷಬ್ ಶೆಟ್ಟಿ (Rishab Shetty) ನಟನೆಯ `ಹೀರೋ’, ಮತ್ತು ಭಾವಚಿತ್ರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅದರಲ್ಲೂ `ವೇದ’ ಚಿತ್ರದಲ್ಲಿ ಗಾನವಿ ಅಭಿನಯ ನೋಡಿ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಅಷ್ಟರ ಮಟ್ಟಿಗೆ ಗಾನವಿ ಆಕ್ಟಿಂಗ್ ಕಮಾಲ್ ಮಾಡಿತ್ತು.

    ಸದಾ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚ್ತಿದ್ದ ನಟಿ ಇದೀಗ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ನಟಿಯ ಮಾದಕ ನೋಟ, ಬೋಲ್ಡ್ ಅವತಾರ ಇವೆಲ್ಲವೂ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಸದ್ಯ `ವೇದ’ ನಟಿಯ ನಯಾ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    `ವೇದ’ ಚಿತ್ರದ ನಂತರ ಗಾನವಿ ಲಕ್ಷ್ಮಣ್ ತೆಲುಗಿನ `ರುದ್ರಂಗಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗು ಸಿನಿಮಾದಲ್ಲಿ ಕೂಡ ಗಾನವಿ ಕಾಣಿಸಿಕೊಳ್ತಿದ್ದಾರೆ.

  • ಒಟಿಟಿಯಲ್ಲೂ ಕಮಾಲ್ ಮಾಡಿದ ‘ವೇದ’ ಸಿನಿಮಾ

    ಒಟಿಟಿಯಲ್ಲೂ ಕಮಾಲ್ ಮಾಡಿದ ‘ವೇದ’ ಸಿನಿಮಾ

    ಶಿವರಾಜ್ ಕುಮಾರ್ (Shivraj Kumar) ಅಭಿನಯದ ಸೂಪರ್ ಹಿಟ್ ಸಿನಿಮಾ ‘ವೇದ’ (Veda) ಫೆಬ್ರವರಿ 10ರಂದು ZEE5 ಒಟಿಟಿಗೆ ಎಂಟ್ರಿ ಕೊಟ್ಟಿತ್ತು. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾದ ಈ ಚಿತ್ರ ಪ್ರೇಕ್ಷಕರ ಮನಗೆದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಶಿವಣ್ಣ ಸಿನಿ ಕೆರಿಯರ್ ನ 125ನೇ ಸಿನಿಮಾ ಹಾಗೂ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿರುವ ‘ವೇದ’ ಒಟಿಟಿಯಲ್ಲೂ ದಾಖಲೆ ಬರೆದಿದೆ.

    ‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ (A. Harsha) ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಈ ಚಿತ್ರ ಅಭೂತಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು. ದೊಡ್ಮನೆ ಅಭಿಮಾನಿ ಬಳಗ ಹಾಗೂ ಸಿನಿ ಪ್ರೇಕ್ಷಕರ ಮನಗೆದ್ದ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಫೆಬ್ರವರಿ 10ರಂದು ಜನಪ್ರಿಯ ಒಟಿಟಿ ಪ್ಲಾಟ್ ಫಾರ್ಮ್ ZEE5ನಲ್ಲಿ ವೇದ ಸಿನಿಮಾ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ಒಂದು ವಾರದೊಳಗೆ ಸಿನಿಮಾ 100 ಮಿಲಿಯನ್ ಗೂ ಅಧಿಕ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ

    ಗಾನವಿ ಲಕ್ಷ್ಮಣ್ (Ganavi Lakshmana), ಶ್ವೇತ ಚೆಂಗಪ್ಪ (Shweta Chengappa), ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

    ZEE5 ಅತ್ಯಂತ ವಿಶ್ವಾಸಾರ್ಹ ಒಟಿಟಿ ಪ್ಲಾಟ್ ಫಾರ್ಮ್ ಆಗಿದ್ದು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ಸಿನಿಮಾಗಳನ್ನು ನೀಡುತ್ತಾ ಬರುತ್ತಿದೆ. ‘ವಿಕ್ರಾಂತ್ ರೋಣ’, ‘ಗಾಳಿಪಟ-2’, ‘ಗುರು ಶಿಷ್ಯರು’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ZEE 5ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಣೆ ಕಂಡು ಹೊಸ ದಾಖಲೆ ಕೂಡ ಬರೆದಿದೆ. ಇದೀಗ ‘ವೇದ’ ಸಿನಿಮಾ ಕೂಡ ZEE5ನಲ್ಲಿ ಹೊಸ ದಾಖಲೆ ಬರೆದು ಎಲ್ಲರ ಗಮನ ಸೆಳೆದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಾಲಿವುಡ್‌ನಲ್ಲೂ ಅಬ್ಬರಿಸಲಿದೆ ಶಿವಣ್ಣ ನಟನೆಯ `ವೇದ’ ಸಿನಿಮಾ

    ಟಾಲಿವುಡ್‌ನಲ್ಲೂ ಅಬ್ಬರಿಸಲಿದೆ ಶಿವಣ್ಣ ನಟನೆಯ `ವೇದ’ ಸಿನಿಮಾ

    ನ್ನಡ, ತಮಿಳಿನಲ್ಲಿ ಗೆದ್ದು ಬೀಗಿದ `ವೇದ’ ಸಿನಿಮಾ ಇದೀಗ ಟಾಲಿವುಡ್ ಅಂಗಳದಲ್ಲಿ ಮಿಂಚಲು ರೆಡಿಯಾಗಿದೆ. ಶಿವರಾಜ್‌ಕುಮಾರ್ ನಟನೆಯ 125ನೇ ಸಿನಿಮಾ ವೇದ ಈಗ ತೆಲುಗಿನತ್ತ ಮುಖ ಮಾಡಿದೆ.

     

    View this post on Instagram

     

    A post shared by Geetha Pictures (@geethapictures)

    ಶಿವಣ್ಣ ನಟನೆಯ ವೇದ ಚಿತ್ರದ ಮೇಲೆ ಫ್ಯಾನ್ಸ್ ನಿರೀಕ್ಷೆಯಿತ್ತು. ಕಳೆದ ವರ್ಷ ಡಿಸೆಂಬರ್ 23ರಂದು ಕನ್ನಡ ಮತ್ತು ತಮಿಳಿನಲ್ಲಿ `ವೇದ’ ಚಿತ್ರ ತೆರೆಕಂಡಿತ್ತು. ಅಭಿಮಾನಿಗಳ ನಿರೀಕ್ಷೆಯನ್ನ ಎಲ್ಲೂ ಹುಸಿ ಮಾಡದೇ ವೇದ ಸಿನಿಮಾ ಗೆದ್ದು ಬೀಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತೆಲುಗಿನಲ್ಲಿ ಸಿನಿಮಾ ಡಬ್ ಮಾಡಲಾಗುತ್ತಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    ಕನ್ನಡ ಮತ್ತು ತಮಿಳು ಪ್ರೇಕ್ಷಕರಿಂದ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಮೇಲೆ `ವೇದ’ ತೆಲುಗಿನ ಪೋಸ್ಟರ್ ಇದೀಗ ಬಿಡುಗಡೆ ಮಾಡಲಾಗಿದೆ. ಸದ್ಯ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

    ಹೆಣ್ಣು ಮಕ್ಕಳ ಮೇಲೆ ಜರುಗುವ ಕಿರುಕುಳದ ವಿರುದ್ಧ ನಡೆಯುವ ಸೇಡಿನ ಕಥೆಯನ್ನು ಹೊಂದಿದ್ದ `ವೇದ’ ಚಿತ್ರಕ್ಕೆ ಕನ್ನಡ ಸಿನಿರಸಿಕರು ಫುಲ್ ಮಾರ್ಕ್ಸ್ ನೀಡಿದ್ದರು. ಇಂತಹ ಒಳ್ಳೆಯ ಕಥಾಹಂದರ ಇರುವ ಚಿತ್ರಗಳನ್ನು ವೀಕ್ಷಿಸಿ, ಭೇಷ್ ಎಂದಿದ್ದರು. ಚಿತ್ರಕ್ಕೆ ನಿರ್ದೇಶಕ ಎ.ಹರ್ಷ ನಿರ್ದೇಶಿಸಿದ್ದರು. ಶಿವಣ್ಣಗೆ ನಾಯಕಿಯಾಗಿ ಗಾನವಿ ಲಕ್ಷ್ಮಣ್ ಅಭಿನಯಿಸಿದ್ದಾರೆ. ಜೊತೆಗೆ ವೀಣಾ ಪೊನ್ನಪ್ಪ, ಶ್ವೇತಾ ಚೆಂಗಪ್ಪ, ಉಮಾಶ್ರೀ ಹಾಗೂ ಅದಿತಿ ಸಾಗರ್ ಉತ್ತಮವಾಗಿ ಅಭಿನಯಿಸಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಇನ್ನೂ `ವೇದ’ ತೆಲುಗು ಅವತರಣಿಕೆಯನ್ನು ಕಂಚಿ ಕಾಮಾಕ್ಷಿ ಕ್ರಿಯೇಷನ್ಸ್ ಬಿಡುಗಡೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಾಲಿವುಡ್‌ನತ್ತ `ವೇದ’ ಚಿತ್ರದ ನಾಯಕಿ ಗಾನವಿ ಲಕ್ಷ್ಮಣ

    ಟಾಲಿವುಡ್‌ನತ್ತ `ವೇದ’ ಚಿತ್ರದ ನಾಯಕಿ ಗಾನವಿ ಲಕ್ಷ್ಮಣ

    ಸ್ಯಾಂಡಲ್‌ವುಡ್‌ಗೆ `ಹೀರೊ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಗಾನವಿ ಲಕ್ಷ್ಮಣ. ಇದೀಗ ಶಿವರಾಜ್‌ಕುಮಾರ್ 125ನೇ ಸಿನಿಮಾ `ವೇದ’ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಳಿಕ ಟಾಲಿವುಡ್‌ನತ್ತ ಗಾನವಿ ಮುಖ ಮಾಡಿದ್ದಾರೆ.

    ಕಿರುತೆರೆಯ ಸೂಪರ್ ಹಿಟ್ `ಮಗಳು ಜಾನಕಿ’ ಸೀರಿಯಲ್‌ನಿಂದ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ, `ನೆನಪಿನ ಹುಡುಗಿಯೇ’ ಅಂತಾ ಹೀರೋ ರಿಷಬ್ ಶೆಟ್ಟಿಗೆ ಹೀರೋಯಿನ್ ಆಗಿ ಗಮನ ಸೆಳೆದರು. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ವೇದಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ವೇದ’ ಚಿತ್ರದ ಜೊತೆಗೆ ತೆಲುಗಿನ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಹರ್ಷ ನಿರ್ದೇಶನದ `ವೇದ’ ಚಿತ್ರ ಇದೊಂದು 1960ರ ದಶಕದ ಕಥೆಯಾಗಿದ್ದು, ಶಿವರಾಜ್‌ಕುಮಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. `ವೇದ’ ಚಿತ್ರದಲ್ಲಿ ನಟಿ ಗಾನವಿ ಮೃದು ಸ್ವಭಾದ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯ ಲುಕ್‌ನಲ್ಲಿ ಪುಷ್ಪ ಎಂಬ ಪಾತ್ರಕ್ಕೆ ಗಾನವಿ ಜೀವತುಂಬಿದ್ದಾರೆ. ಹೀರೋ ಚಿತ್ರದ ವಿರುದ್ಧ ಪಾತ್ರದಲ್ಲಿ ಚಾಲೆಂಜಿಂಗ್ ರೋಲ್‌ನಲ್ಲಿ ಈ ನಟಿ ಕಾಣಿಸಿಕೊಂಡಿದ್ದಾರೆ.

    ಚಿಕ್ಕಮಗಳೂರಿನ ಪ್ರತಿಭೆ ಗಾನವಿ ಇದೀಗ `ವೇದ’ ಚಿತ್ರದ ಜೊತೆ ಟಾಲಿವುಡ್‌ನಲ್ಲೂ ಡೆಬ್ಯೂ ಮಾಡ್ತಿದ್ದಾರೆ. ಸ್ಟಾರ್ ನಟ ಜಗಪತಿ ಬಾಬು ಸಿನಿಮಾದಲ್ಲಿ ಆಶಿಶ್ ಗಾಂಧಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಗಾನವಿ ಜತೆಗೆ ಮಮತಾ ಮೋಹನ್ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗಿನ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರದ ಕುರಿತು ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    `ವೇದ’ ಚಿತ್ರದ ಪೋಸ್ಟರ್‌ನಲ್ಲಿ ಶಿವಣ್ಣ ಲುಕ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. `ವೇದ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಿಲೀಸ್ ಮುಂಚೆ ಸಾಕಷ್ಟು ವಿಚಾರಗಳಿಂದ ವೇದ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗುತ್ತಿದೆ.ಚಿತ್ರ ರಿಲೀಸ್ ಆದಮೇಲೆ ಶಿವರಾಜ್‌ಕುಮಾರ್ ಮತ್ತು ಗಾನವಿ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಅಂತಾ ಕಾದು ನೋಡಬೇಕಿದೆ.