Tag: ಗಾಜಿಯಾಬಾದ್ ಪೊಲೀಸ್

  • ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಲಕ್ನೋ: ಹೋಟೆಲ್‌ನಲ್ಲಿ (Hotel) ಒಂದು ರಾತ್ರಿ ತನ್ನೊಂದಿಗೆ ಉಳಿಯಲು ನಿರಾಕರಿಸಿದ್ದಕ್ಕೆ ವಿವಾಹಿತ ಪ್ರೇಯಸಿಯನ್ನ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ (UttarPradesh) ಗಾಜಿಯಾಬಾದ್‌ನಲ್ಲಿ ನಡೆದಿದೆ.

    ಪ್ರೇಯಸಿಯನ್ನು (Lover) ಹತ್ಯೆ ಮಾಡಿದ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸರು (Ghaziabad Police) ಆರೋಪಿಯನ್ನ (Accused) ಬಂಧಿಸಿದ್ದಾರೆ. ಬಾಗ್‌ಪತ್ ಮೂಲದ ಯುವತಿ ರಚನಾ ಮದುವೆಯಾಗಿದ್ದರೂ ಆಗಾಗ್ಗೆ ತನ್ನ ಪ್ರಿಯಕರ ಗೌತಮ್‌ನನ್ನು ಭೇಟಿಯಾಗುತ್ತಿದ್ದಳು ಎಂದು ಆಕೆಯ ಪತಿ ರಾಜ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು

    ಸಂತ್ರಸ್ತೆ ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ಗಾಜಿಯಾಬಾದ್ ಹೋಟೆಲ್‌ನಲ್ಲಿ (Hotel) ಆರೋಪಿಯನ್ನ ಭೇಟಿಯಾಗಿದ್ದಳು. ಬಳಿಕ ಬೇಗನೇ ಹೊರಡಬೇಕೆಂದು ಕೇಳಿಕೊಂಡಿದ್ದಾಳೆ. ಮರುದಿನ ಹೋಟೆಲ್ ಸಿಬ್ಬಂದಿ ರೂಮ್‌ಗೆ ಹೋಗಿ ನೋಡಿದಾಗ ಆಕೆ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಿಸಿಟಿವಿ ಪರಿಶೀಲಿಸಿ, ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಬಳಿಕ ತನಿಖೆಯಲ್ಲಿ ತನಗೂ ಸಂತ್ರಸ್ತೆಗೂ ಕಳೆದ ಮೂರು ತಿಂಗಳಿಂದ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದಾನೆ. ಡಿಸೆಂಬರ್ 25 ರಂದು ಭೇಟಿಯಾದಾಗ ರಚನಾ ತನ್ನೊಂದಿಗೆ ರಾತ್ರಿ ಹೋಟೆಲ್‌ನಲ್ಲಿ ಉಳಿಯಲು ನಿರಾಕರಿಸಿದಳು. ಆದ್ದರಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂಬುದಾಗಿ ಗೌತಮ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಲವ್ವಿ-ಡವ್ವಿ – ಗಂಡನನ್ನ ಗುಂಡಿಟ್ಟು ಕೊಂದು, ಕತ್ತರಿಸಿ ಮನೆಯಲ್ಲೇ ಹೂತಿದ್ದ ಪತ್ನಿ

    ಪ್ರಿಯಕರನೊಂದಿಗೆ ಲವ್ವಿ-ಡವ್ವಿ – ಗಂಡನನ್ನ ಗುಂಡಿಟ್ಟು ಕೊಂದು, ಕತ್ತರಿಸಿ ಮನೆಯಲ್ಲೇ ಹೂತಿದ್ದ ಪತ್ನಿ

    ಲಕ್ನೋ: ರಾಷ್ಟ್ರರಾಜಧಾನಿಯಲ್ಲಿಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live In Relationship) ಗೆಳತಿಯನ್ನ ಕೊಂದು 35 ತುಂಡುಗಳಾಗಿ ಕತ್ತರಿಸಿ, ವಿವಿಧ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿದ್ದ ಮಹಿಳೆಯನ್ನು ಗಾಜಿಯಾಬಾದ್ ಪೊಲೀಸರು (Ghaziabad Police) ಬಂಧಿಸಿರುವ ಘಟನೆಯೂ ಬೆಳಕಿಗೆ ಬಂದಿದೆ.

    ನಾಲ್ಕು ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸೋಮವಾರ ಆರೋಪಿ ಸವಿತಾ ಹಾಗೂ ಪ್ರಿಯಕರ ಅರುಣ್ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಏನಿದು ಮರ್ಡರ್ ಮಿಸ್ಟ್ರಿ?
    ಕಳೆದ ನಾಲ್ಕು ವರ್ಷಗಳ ಹಿಂದೆ ಆರೋಪಿ ಸವಿತಾ ತನ್ನ ಪ್ರಿಯಕರ ಅರುಣ್ ಜೊತೆ ಸೇರಿಕೊಂಡು ಪತಿ ಚಂದ್ರವೀರ್ ಮೇಲೆ ಗುಂಡು ಹಾರಿಸಿ ಕೊಂದಿದ್ದಾಳೆ. ಬಳಿಕ ತುಂಡುತುಂಡಾಗಿ ಕತ್ತರಿಸಿ ಶವವನ್ನು ಚಂದ್ರವೀರ್‌ನ ಮನೆಯೊಳಗೆ 7 ಅಡಿ ಗುಂಡಿ ತೋಡಿ ಹೂತು ಹಾಕಲಾಗಿತ್ತು. ಶವದ ಕೊಳೆತ ದುರ್ವಾಸನೆ ಬರಬಾರದು ಎಂದು 7 ಅಡಿ ಗುಂಡು ತೆಗೆದು ಹೂತು ಹಾಕಿದ್ದರು. ಆದರೂ ಏನೂ ಆಗಿಲ್ಲವೆಂಬಂತೆ ಅದೇ ಮನೆಯಲ್ಲಿ ವಾಸವಾಗಿದ್ದರು.

    ಕೃತ್ಯ ಎಸಗುವುದಕ್ಕೂ ಮುನ್ನ ಚಂದ್ರವೀರ್ ಮನೆಯಲ್ಲಿ ಏಳು ಅಡಿಯ ಗುಂಡಿ ತೋಡಲಾಗಿತ್ತು. ಬಳಿಕ ಗಂಡನನ್ನು ಅಪಹರಣ ಮಾಡಿ ಗುಂಡಿಕ್ಕಿ ಕೊಲೆ ಮಾಡಿ, ಹೂತು ಹಾಕಿದ್ದಾರೆ. ಬಳಿಕ ಸವಿತಾ ಈ ಕೃತ್ಯವನ್ನು ತನ್ನ ಸಹೋದರನ ಮೇಲೆ ಹೊರಿಸಿದ್ದಳು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಇದೀಗ 4 ವರ್ಷಗಳ ಬಳಿಕ ಪ್ರಕರಣ ಬಯಲಾಗಿದ್ದು, ಹೂತು ಹಾಕಿದ್ದ ಜಾಗದಿಂದ ಪೊಲೀಸರು (Police) ಮೃತದೇಹವನ್ನು ಹೊರತೆಗೆದಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಆಯುಧಗಳನ್ನು ಮುಟ್ಟುಗೋಲು ಹಾಕಲಾಗಿದೆ. ಒಂದು ಪಿಸ್ತೂಲು ಹಾಗೂ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]