Tag: ಗಾಜಾ ಯುದ್ಧ

  • ಕದನ ವಿರಾಮದ ಮೊದಲ ಹೆಜ್ಜೆ ಯಶಸ್ವಿ: ಹಮಾಸ್‌ನಿಂದ ಮೂವರು ಒತ್ತೆಯಾಳು ಬಿಡುಗಡೆ

    ಕದನ ವಿರಾಮದ ಮೊದಲ ಹೆಜ್ಜೆ ಯಶಸ್ವಿ: ಹಮಾಸ್‌ನಿಂದ ಮೂವರು ಒತ್ತೆಯಾಳು ಬಿಡುಗಡೆ

    ಜೆರುಸಲೇಂ: ಹಮಾಸ್ ಮೂವರು ಇಸ್ರೇಲಿ (Israel) ಮಹಿಳಾ ಒತ್ತೆಯಾಳುಗಳನ್ನು (Hostages) ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಗೆ ಹಸ್ತಾಂತರಿಸಿದ್ದು, ಮೂವರು ಒತ್ತೆಯಾಳುಗಳು ತಾಯ್ನಾಡಿಗೆ ತಲುಪಿದ್ದಾರೆ. ಇದು ಗಾಜಾ ಕದನ (Gaza War) ವಿರಾಮದ ಮೊದಲ ಹೆಜ್ಜೆಯಾಗಿದೆ ಎಂದು ಇಸ್ರೇಲಿ ರಕ್ಷಣಾ ಪಡೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

    ಬಿಡುಗಡೆಯಾದ ಮೂವರು ಒತ್ತೆಯಾಳುಗಳು ತನ್ನ ಸೈನಿಕರೊಂದಿಗೆ ದೇಶದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ. ಇದನ್ನೂ ಓದಿ: ʻಇಂಡಿಯನ್‌ ಸ್ಟೇಟ್‌ʼ ಹೇಳಿಕೆ – ವಿಪಕ್ಷ ನಾಯಕ ರಾಗಾ ವಿರುದ್ಧ ಎಫ್‌ಐಆರ್‌

    ‘ಸ್ವಲ್ಪ ಸಮಯದ ಹಿಂದೆ, ಬಿಡುಗಡೆಯಾದ ಒತ್ತೆಯಾಳುಗಳು ಐಡಿಎಫ್ (ಮಿಲಿಟರಿ) ಮತ್ತು ಐಎಸ್‌ಎ (ಭದ್ರತಾ ಸಂಸ್ಥೆ) ಪಡೆಗಳೊಂದಿಗೆ ಗಡಿಯನ್ನು ದಾಟಿ ಇಸ್ರೇಲ್‌ನ ಭೂಪ್ರದೇಶಕ್ಕೆ ಬಂದರು. ಬಿಡುಗಡೆಯಾದ ಒತ್ತೆಯಾಳುಗಳು ಪ್ರಸ್ತುತ ದಕ್ಷಿಣ ಇಸ್ರೇಲ್‌ನ ಆರಂಭಿಕ ಸ್ವಾಗತ ಕೇಂದ್ರಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಅವರು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ’ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಹೃದಯಾಘಾತದಿಂದ 18ರ ವಿದ್ಯಾರ್ಥಿನಿ ಸಾವು

    ಒತ್ತೆಯಾಳುಗಳು ನಮ್ಮ ವಶದಲ್ಲಿದ್ದಾರೆ. ಅವರು ತಮ್ಮ ತಮ್ಮ ಮನೆಗೆ ತೆರಳುತ್ತಿದ್ದಾರೆ ಎಂದು ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ನಮ್ಮ ಹೃದಯಗಳು ಈಗ ಅಮಾನವೀಯ ಸ್ಥಿತಿಯಲ್ಲಿರುವ ಎಲ್ಲ ಒತ್ತೆಯಾಳುಗಳ ಜೊತೆಗಿವೆ. ಉಳಿದ ಒತ್ತೆಯಾಳುಗಳ ಮರಳುವಿಕೆಗಾಗಿ ನಾವು ಕಾಯುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ವರದಿಗಾರ ಕೆ.ಪಿ ನಾಗರಾಜ್‌ಗೆ ರಾಜ್ಯ ಪ್ರಶಸ್ತಿ

    15 ತಿಂಗಳ ಸುದೀರ್ಘ ಯುದ್ಧದ ನಂತರ ಮೊದಲ ಬಾರಿಗೆ ಒತ್ತೆಯಾಳುಗಳ ವಿನಿಮಯವಾಗಿದೆ. ನಂತರ 90 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಇಸ್ರೇಲ್ ಬಂಧನದಿಂದ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ಏಳು ದಿನಗಳಲ್ಲಿ ಹಮಾಸ್ ನಾಲ್ಕು ಇತರ ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲ್ ಹೇಳಿದೆ. ಇದನ್ನೂ ಓದಿ: Kodagu | ಹುಲಿ ದಾಳಿಗೆ ಎರಡು ಹಸುಗಳು ಬಲಿ

  • ಸುದೀರ್ಘ ಯುದ್ಧ ಅಂತ್ಯಗೊಳಿಸಲು ನಿರ್ಧಾರ; ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ

    ಸುದೀರ್ಘ ಯುದ್ಧ ಅಂತ್ಯಗೊಳಿಸಲು ನಿರ್ಧಾರ; ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ

    ಟೆಲ್‌ ಅವಿವ್‌: ಕಳೆದ 15 ತಿಂಗಳಿಂದ ಸುದೀರ್ಘ ಯುದ್ಧದಲ್ಲಿ ಸಿಲುಕಿರುವ ಇಸ್ರೇಲ್‌-ಹಮಾಸ್‌ (Israel, Hamas) ಕೊನೆಗೂ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

    ಜಗತ್ತಿನಾದ್ಯಂತ ಅಲ್ಲಲ್ಲಿ ನಡೆಯುತ್ತಿರುವ ಯುದ್ಧಗಳಿಗೂ ವಿರಾಮ (Ceasefire Agreement) ಹಾಕೋಕೆ ದೇಶ ದೇಶಗಳ ನಡುವೆ ಒಪ್ಪಂದ ಏರ್ಪಡುವುದು ಹೊಸದೇನೂ ಅಲ್ಲ. ಆದರೆ, ಜಿದ್ದಿಗೆ ಬಿದ್ದವರಂತೆ ನಿರಂತರವಾಗಿ ವರ್ಷಕ್ಕೂ ಹೆಚ್ಚು ಸಮಯದಿಂದ ಸಮರ ನಡೆಸುತ್ತಿರುವ ಇಸ್ರೇಲ್‌-ಹಮಾಸ್, ರಷ್ಯಾ-ಉಕ್ರೇನ್‌ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಜಾಗತಿಕ ನಾಯಕರು ನಿರಂತರ ಯತ್ನ ನಡೆಸಿದ್ದರು. ಇದೀಗ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಮಾತುಕತೆ ಬಹುತೇಕ ಯಶಸ್ವಿಯಾಗಿದೆ. ಇದೀಗ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ ವಿರಾಮಕ್ಕೆ ಸಂಬಂಧಿಸಿದಂತೆ ಒಪ್ಪಂದದ ಅಂತಿಮ ಡ್ರಾಫ್ಟ್‌ ಸಿದ್ಧವಾಗಿದ್ದು, ಇಸ್ರೇಲ್‌-ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.

    2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರ ಗುಂಪು ಇಸ್ರೇಲ್‌ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿತ್ತು. ಅಂದಿನಿಂದ ಸಾವಿರಾರು ಪ್ಯಾಲೆಸ್ತೀನಿಯನ್ನರನ್ನು ಇಸ್ರೇಲ್‌ ಕೊಂದಿತ್ತು. ಮಧ್ಯ ಪ್ರಾಚ್ಯದಲ್ಲಿ ಯುಧ್ಧದ ಕಾರ್ಮೋದಿಂದ ಸಾವು ನೋವು ಮುಂದುವರಿದಿತ್ತು. ಇದೀಗ ಇಸ್ರೇಲ್‌ ಮತ್ತು ಹಮಾಸ್‌ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ವರದಿಗಳು ತಿಳಿಸಿವೆ.

    ಇಸ್ರೇಲ್‌ ಮತ್ತು ಹಮಾಸ್‌ ಯುದ್ಧ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಕರಡನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇತ್ತೀಚೆಗಷ್ಟೇ ದೂರವಾಣಿ ಮೂಲಕ ಚರ್ಚೆ ಮಾಡಿದ್ದರು.

    ಈಗಾಗಲೇ ಹತ್ತಾರು ತಿಂಗಳಿನಿಂದಲೂಸ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿತ್ತು. ಯುದ್ಧಕ್ಕೆ ಬ್ರೇಕ್ ಹಾಕುವ ಒಪ್ಪಂದವು ಇನ್ನೇನು ಆಗಿಯೇ ಹೋಯ್ತು ಅನ್ನುವಷ್ಟರಲ್ಲಿ ಅಹಂ ಎದುರಾಯಿತು. ಎಲ್ಲ ಪ್ರಯತ್ನಗಳೂ, ಮಾತುಗತೆಗಳೂ ಅರ್ಧಕ್ಕೆ ನಿಂತು ಹೋದವು. ಅತ್ತ ಇಸ್ರೇಲ್‌ ಕೂಡ ತಣ್ಣಗಾಗಲು ಬಯಸಲಿಲ್ಲ, ಇತ್ತ ಹಮಾಸ್ ಕೂಡ ಅಡಗಿ ನಡೆಸುವ ದಾಳಿಗಳನ್ನು ನಿಲ್ಲಿಸಲಿಲ್ಲ. ಇನ್ನು ಸಂಧಾನಕ್ಕೆ ಬಂದ ದೇಶಗಳು ಸುಮ್ಮನೆ ನಮಗ್ಯಾಕೆ ತಲೆನೋವು ಅಂತ ಸುಮ್ಮನಾಗಿದ್ದವು. ಇಸ್ರೇಲ್‌ನ ವಿದೇಶಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಬೈಡನ್ ಅವರ ಉನ್ನತ ಸಲಹೆಗಾರ ಬ್ರೆಟ್ ಮೆಕ್‌ಗುರ್ಕ್‌ ಇಬ್ಬರೂ ಕತಾರ್ ರಾಜಧಾನಿ ದೋಹಾದಲ್ಲಿದ್ದಾರೆ. ಅಲ್ಲಿಯೂ ಒಪ್ಪಂದದ ಬಗ್ಗೆ ಅಂತಿಮ ಚರ್ಚೆಗಳು ನಡೆದಿವೆ.

    ಈಗ ಇಸ್ರೇಲ್, ಹಮಾಸ್ ಎರಡೂ ಕಡೆಯವರಿಗೆ ಪ್ರಸ್ತುತಪಡಿಸಬೇಕಾದ ಅಂತಿಮ ವಿವರಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಟ್ರಂಪ್ ಅಧಿಕಾರ ಸ್ವೀಕಾರ ಜನವರಿ 20ರಂದು ನಡೆಯಲಿದೆ. ಅದಕ್ಕೂ ಮುಂಚೆಯೇ ಕದನ ವಿರಾಮ ಒಪ್ಪಂದ ಪೂರ್ಣಗೊಂಡರೆ, ಬೈಡನ್‌ ಪ್ರಯತ್ನವೂ ಇತಿಹಾಸದಲ್ಲಿ ಉಳಿಯಲಿದೆ. ಈ ಕಾರಣಕ್ಕಾಗಿಯೇ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಇದರ ಮಧ್ಯಸ್ಥಿತಿ ವಹಿಸಿದ್ದಾರೆ ಎನ್ನಲಾಗಿದೆ.

    2023ರ ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ನ ಗಡಿಯೊಳಕ್ಕೆ ನುಗ್ಗಿ ಮನಬಂದಂತೆ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದರು. ಸುಮಾರು 1,200 ಜನರ ಹತ್ಯೆ ನಡೆದಿತ್ತು ಹಾಗೂ 250 ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಇಸ್ರೇಲ್‌ ಪಡೆಗಳು ಗಾಜಾ ಮೇಲೆ ಆಕ್ರಮ ಶುರು ಮಾಡಿತ್ತು. ಈವರೆಗೂ ಯುದ್ಧದಿಂದ ಗಾಜಾದಲ್ಲಿ 46 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.