Tag: ಗಾಜಾ ಪಟ್ಟಿ

  • ಹಮಾಸ್‌ ಕಳ್ಳಾಟಕ್ಕೆ ಇಸ್ರೇಲ್‌ ಕೆಂಡ – ಗಾಜಾ ಮೇಲೆ ಮತ್ತೆ ದಾಳಿ, 30 ಬಲಿ

    ಹಮಾಸ್‌ ಕಳ್ಳಾಟಕ್ಕೆ ಇಸ್ರೇಲ್‌ ಕೆಂಡ – ಗಾಜಾ ಮೇಲೆ ಮತ್ತೆ ದಾಳಿ, 30 ಬಲಿ

    ಗಾಜಾ: ಹಮಾಸ್‌ (Hamas) ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ (Israel) ಭಾರೀ ಪ್ರಮಾಣದಲ್ಲಿ ನಡೆಸಿದ ದಾಳಿಗೆ ಗಾಜಾ ಪಟ್ಟಿಯಲ್ಲಿ (Gaza Strip) 30 ಮಂದಿ ಸಾವನ್ನಪ್ಪಿದ್ದಾರೆ ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

    ಇಸ್ರೇಲ್‌ ಉತ್ತರ ಗಾಜಾದ ಹಲವಾರು ಜಾಗಗಳನ್ನು ಗುರಿಯಾಗಿಸಿ ಇಸ್ರೇಲ್‌ ವಾಯು ದಾಳಿ ನಡೆಸಿದೆ. ಮಧ್ಯ ಗಾಜಾ ಪಟ್ಟಿಯಲ್ಲಿರುವ ಬುರೈಜ್ ನಿರಾಶ್ರಿತರ ಶಿಬಿರದಲ್ಲಿ ಮನೆ ಮೇಲೆ ದಾಳಿ ನಡೆಸಿದ ಐದು ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ನಗರ ಖಾನ್ ಯೂನಿಸ್‌ನಲ್ಲಿ, ಮತ್ತೊಂದು ದಾಳಿಯಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ.

    ಉತ್ತರ ಗಾಜಾದ ವೈದ್ಯಕೀಯ ಸೌಲಭ್ಯದ ಬಳಿ ಕನಿಷ್ಠ ಮೂರು ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಅಲ್ ಶಿಫಾ ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ.

    ಯಾಕೆ ಮತ್ತೆ ದಾಳಿ?
    ಸೋಮವಾರ ಹಮಾಸ್ ಒತ್ತೆಯಾಳಿನ ಮೃತದೇಹ ಇರುವ ಶವಪೆಟ್ಟಿಗೆಯನ್ನು ಹಸ್ತಾಂತರಿಸಿತ್ತು. ಆದರೆ ಈ ಶವಪೆಟ್ಟಿಗೆಯಲ್ಲಿ ಈ ಹಿಂದೆ ಮರಳಿಸಿದ ಒತ್ತೆಯಾಳಿನ ಮೃತದೇಹದ ಹೆಚ್ಚಿನ ಭಾಗಗಳಿದ್ದವು ಎಂದು ಇಸ್ರೇಲ್ ಹೇಳಿದೆ.

     

    ಸೋಮವಾರ ಹಸ್ತಾಂತರಿಸಲಾದ ದೇಹದ ಭಾಗಗಳು ಓಫಿರ್ ಝರ್ಫಾಟಿ ಎಂಬವರಿಗೆ ಸೇರಿದೆ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ದೃಢಪಟ್ಟಿತ್ತು. ಆದರೆ ಅವರ ಮೃತ ದೇಹವನ್ನು 2023ರ ಕೊನೆಯಲ್ಲಿ ಇಸ್ರೇಲ್‌ ಪಡೆಗಳು ವಶಪಡಿಸಿದ್ದವು. ಈಗ ಕಳುಹಿಸಿದ ಮೃತದೇಹಗಳು ಗಾಜಾದಲ್ಲಿ ಮೃತಪಟ್ಟ 13 ಮೃತ ಒತ್ತೆಯಾಳುಗಳದ್ದಲ್ಲ ಎಂದು ಎಂದು ತಿಳಿಸಿದೆ. ಇದನ್ನೂ ಓದಿ:  282 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ – ಚಂಡಮಾರುತದ ಹೊಡೆತಕ್ಕೆ ಜಮೈಕಾ ತತ್ತರ

    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದಲ್ಲಿ ಅರಬ್ ರಾಷ್ಟ್ರಗಳ ಸಮ್ಮುಖದಲ್ಲಿ ಕದನ ವಿರಾಮ ಘೋಷಣೆಯಾಗಿತ್ತು. ಈಗ ಬೇರೆ ವ್ಯಕ್ತಿಯ ಮೃತದೇಹವನ್ನು ಕಳುಹಿಸಿ ಹಮಾಸ್‌ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಇಸ್ರೇಲ್‌ ಹೇಳಿದೆ.

    ಒತ್ತೆಯಾಳುಗಳನ್ನು ಹತ್ಯೆ ಮಾಡಿ ನಂತರ ಇಸ್ರೇಲ್‌ ದಾಳಿಗೆ ಇವರು ಹತ್ಯೆಯಾಗಿದ್ದಾರೆ ಎಂದು ಹಮಾಸ್‌ ಬಿಂಬಿಸುತ್ತಿದೆ. ಇದಕ್ಕೆ ಸಾಕ್ಷ್ಯವಾಗಿ ಐಡಿಎಫ್‌ ವಿಡಿಯೋ ರಿಲೀಸ್‌ ಮಾಡಿದೆ. ಈ ವಿಡಿಯೋದಲ್ಲಿ ಕಟ್ಟಡದಿಂದ ಇಸ್ರೇಲ್‌ ಒತ್ತೆಯಾಳುವಿನ ಶವವನ್ನು ಎಸೆಯಲಾಗಿದ್ದು ನಂತರ ಅದನ್ನು ಮಣ್ಣಿನಲ್ಲಿ ಹೂಳಲಾಗಿದೆ.  ಈ ಎಲ್ಲಾ ದೃಶ್ಯಗಳು ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಮಾಸ್‌ ಕಳ್ಳಾಟಕ್ಕೆ ಇಸ್ರೇಲ್‌ ಈಗ ಸಿಟ್ಟಾಗಿದೆ. ಭದ್ರತಾ ಸಮಾಲೋಚನೆಗಳ ನಂತರ ಪ್ರಧಾನಿ ನೆತನ್ಯಾಹು ಅವರು ಗಾಜಾ ಪಟ್ಟಿ ಮೇಲೆ ತಕ್ಷಣವೇ ಪ್ರಬಲ ದಾಳಿಗಳನ್ನು ನಡೆಸುವಂತೆ ಮಿಲಿಟರಿಗೆ ಸೂಚನೆ ನೀಡಿದ್ದರು.

  • ಮೃತದೇಹದಲ್ಲೂ ಹಮಾಸ್‌ ಕಳ್ಳಾಟ, ಇಸ್ರೇಲ್‌ ಕೆಂಡಾಮಂಡಲ – ಗಾಜಾ ಮೇಲೆ ಭಾರೀ ದಾಳಿಗೆ ಆದೇಶ

    ಮೃತದೇಹದಲ್ಲೂ ಹಮಾಸ್‌ ಕಳ್ಳಾಟ, ಇಸ್ರೇಲ್‌ ಕೆಂಡಾಮಂಡಲ – ಗಾಜಾ ಮೇಲೆ ಭಾರೀ ದಾಳಿಗೆ ಆದೇಶ

    ಟೆಲ್‌ ಅವಿವ್‌: ಹಮಾಸ್‌ನಿಂದ (Hamas) ಕದನ ವಿರಾಮ ಒಪ್ಪಂದ ಉಲ್ಲಂಘನೆಯಾದ ಬೆನ್ನಲ್ಲೇ ಇಸ್ರೇಲ್‌ (Isreal) ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ತಕ್ಷಣವೇ ಪ್ರಬಲ ದಾಳಿ ನಡೆಸುವಂತೆ ಆದೇಶಿಸಿದ್ದಾರೆ.

    “ಭದ್ರತಾ ಸಮಾಲೋಚನೆಗಳ ನಂತರ, ಪ್ರಧಾನಿ ನೆತನ್ಯಾಹು ಅವರು ಗಾಜಾ ಪಟ್ಟಿ(Gaza Strip) ಮೇಲೆ ತಕ್ಷಣವೇ ಪ್ರಬಲ ದಾಳಿಗಳನ್ನು ನಡೆಸುವಂತೆ ಮಿಲಿಟರಿಗೆ ಸೂಚನೆ ನೀಡಿದ್ದಾರೆ” ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದೆ.

    ಯಾಕೆ ಮತ್ತೆ ದಾಳಿ?
    ಸೋಮವಾರ ಹಮಾಸ್ ಒತ್ತೆಯಾಳಿನ ಮೃತದೇಹ ಇರುವ ಶವಪೆಟ್ಟಿಗೆಯನ್ನು ಹಸ್ತಾಂತರಿಸಿತ್ತು. ಆದರೆ ಈ ಶವಪೆಟ್ಟಿಗೆಯಲ್ಲಿ ಈ ಹಿಂದೆ ಮರಳಿಸಿದ ಒತ್ತೆಯಾಳಿನ ಮೃತದೇಹದ ಹೆಚ್ಚಿನ ಭಾಗಗಳಿದ್ದವು ಎಂದು ಇಸ್ರೇಲ್ ಹೇಳಿದೆ.

    ಸೋಮವಾರ ಹಸ್ತಾಂತರಿಸಲಾದ ದೇಹದ ಭಾಗಗಳು ಓಫಿರ್ ಝರ್ಫಾಟಿ ಎಂಬವರಿಗೆ ಸೇರಿದೆ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ದೃಢಪಟ್ಟಿತ್ತು. ಆದರೆ ಅವರ ಮೃತ ದೇಹವನ್ನು 2023ರ ಕೊನೆಯಲ್ಲಿ ಇಸ್ರೇಲ್‌ ಪಡೆಗಳು ವಶಪಡಿಸಿದ್ದವು. ಈಗ ಕಳುಹಿಸಿದ ಮೃತದೇಹಗಳು ಗಾಜಾದಲ್ಲಿ ಮೃತಪಟ್ಟ 13 ಮೃತ ಒತ್ತೆಯಾಳುಗಳದ್ದಲ್ಲ ಎಂದು ಎಂದು ತಿಳಿಸಿದೆ.

    ಅಮೆರಿಕ ನೇತೃತ್ವದಲ್ಲಿ ಅರಬ್ ರಾಷ್ಟ್ರಗಳ ಸಮ್ಮುಖದಲ್ಲಿ ಕದನ ವಿರಾಮ ಘೋಷಣೆಯಾಗಿತ್ತು. ಈಗ ಬೇರೆ ವ್ಯಕ್ತಿಯ ಮೃತದೇಹವನ್ನು ಕಳುಹಿಸಿ ಹಮಾಸ್‌ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಇಸ್ರೇಲ್‌ ಹೇಳಿದೆ.

  • ಇಸ್ರೇಲ್‌ ಮತ್ತೆ ಸರಣಿ ವಾಯುದಾಳಿ – ಗಾಜಾದಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವು!

    ಇಸ್ರೇಲ್‌ ಮತ್ತೆ ಸರಣಿ ವಾಯುದಾಳಿ – ಗಾಜಾದಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವು!

    – 3 ದಿನಗಳ ಅಂತರದಲ್ಲಿ ಇಸ್ರೇಲ್‌ 2ನೇ ಬಾರಿ ದಾಳಿ

    ಗಾಜಾ: ಕದನ ವಿರಾಮ ಘೋಷಣೆಯಾದ ಬಳಿಕವೂ ಇಸ್ರೇಲ್‌ ತನ್ನ ವಾಯುದಾಳಿಯನ್ನು (Israel Airstrikes) ಮುಂದುವರಿಸಿದೆ. ಗುರುವಾರ ಗಾಜಾದಲ್ಲಿ (Gaza Strip) ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    Israel

    ಗಾಜಾಪಟ್ಟಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಲವು ಮನೆಗಳು ಹಾಗೂ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಸೇನೆ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಹಮಾಸ್‌ ನಾಯಕರೂ ಹತ್ಯೆಗೀಡಾಗಿದ್ದಾರೆ. ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾದ ಬಳಿಕ ಮೂರು ದಿನಗಳ ಅಂತರದಲ್ಲಿ ಇಸ್ರೇಲ್‌ ನಡೆಸಿದ 2ನೇ ವಾಯುದಾಳಿ ಇದಾಗಿದೆ. ಇದನ್ನೂ ಓದಿ: ಇಸ್ರೇಲ್‌ ಭೀಕರ ವಾಯುದಾಳಿ – ಗಾಜಾದಲ್ಲಿ 300ಕ್ಕೂ ಅಧಿಕ ಮಂದಿ ಸಾವು

    Israel 3

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಭೀಕರ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್‌, ಗಾಜಾದಲ್ಲಿ 400ಕ್ಕೂ ಅಧಿಕ ಮಂದಿಯನ್ನ ಹತ್ಯೆ ಮಾಡಿತ್ತು. ಗಾಜಾ ಪಟ್ಟಿಯಲ್ಲಿದ್ದ ಹಮಾಸ್‌ನ ಆಂತರಿಕ ಭದ್ರತಾ ಸೇವೆಗಳ ಮುಖ್ಯಸ್ಥ ಮಹಮೂದ್ ಅಬು ವತ್ಫಾ ಕೂಡ ಇಸ್ರೇಲ್‌ ದಾಳಿಗೆ ಬಲಿಯಾಗಿದ್ದ. ಇದನ್ನೂ ಓದಿ: ಹಮಾಸ್‌ ಉಗ್ರರಿಗೆ ಬೆಂಬಲ – ಭಾರತದ ಸಂಶೋಧಕ ಅಮೆರಿಕದಲ್ಲಿ ಅರೆಸ್ಟ್‌, ಶೀಘ್ರವೇ ಗಡೀಪಾರು

    ಕದನ ವಿರಾಮ ಘೋಷಣೆಯ ಬಳಿಕ ಒಪ್ಪಂದದ ಪ್ರಕಾರ ಬಾಕಿಯಿರುವ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ನಿರಾಕರಿಸಿದ ನಂತರ ಇಸ್ರೇಲ್‌ ದಾಳಿ ನಡೆಸಿರುವುದಾಗಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದರು. ಇದನ್ನೂ ಓದಿ: ಯುರೋಪ್‌ನಿಂದ ಹೆಚ್ಚಿನ ವಾಯು ರಕ್ಷಣೆ ಪಡೆಯಲು ಝೆಲೆನ್ಸ್ಕಿಗೆ ಟ್ರಂಪ್ ಸಹಾಯ: ಶ್ವೇತಭವನ ಮಾಹಿತಿ

  • ಇಸ್ರೇಲ್‌ ಭೀಕರ ವಾಯುದಾಳಿ – ಗಾಜಾದಲ್ಲಿ 300ಕ್ಕೂ ಅಧಿಕ ಮಂದಿ ಸಾವು

    ಇಸ್ರೇಲ್‌ ಭೀಕರ ವಾಯುದಾಳಿ – ಗಾಜಾದಲ್ಲಿ 300ಕ್ಕೂ ಅಧಿಕ ಮಂದಿ ಸಾವು

    ನವದೆಹಲಿ: ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾದ ಬಳಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಇಂದು ಮುಂಜಾನೆ ಇಸ್ರೇಲ್‌ ಸೇನೆಯು (Israeli military) ಗಾಜಾದ ಮೇಲೆ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ (Israel AirStrikes) ಕನಿಷ್ಠ 330 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಬೆಳ್ಳಂ ಬೆಳಗ್ಗೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್‌, ಉತ್ತರ ಗಾಜಾ, ಗಾಜಾ ನಗರ ಮತ್ತು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯ ದೇರ್ ಅಲ್-ಬಲಾಹ್, ಖಾನ್ ಯೂನಿಸ್ ಮತ್ತು ರಫಾ ಸೇರಿದಂತೆ ಅನೇಕ ಸ್ಥಳಗಳನ್ನು ಧ್ವಂಸಗೊಳಿಸಿದೆ. ಭೀಕರ ವಾಯುದಾಳಿಯಲ್ಲಿ ಮೃತಪಟ್ಟವರ ಪೈಕಿ ಪ್ಯಾಲೆಸ್ತೀನಿನ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೆಚ್ಚಿನವರು ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ.

    ಅಲ್ಲದೇ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಆಂತರಿಕ ಭದ್ರತಾ ಸೇವೆಗಳ ಮುಖ್ಯಸ್ಥ ಮಹಮೂದ್ ಅಬು ವತ್ಫಾ ಕೂಡ ಇಸ್ರೇಲ್‌ ದಾಳಿಗೆ ಬಲಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸತತ ಸಿನಿಮಾಗಳ ಸೋಲಿನ ನಡುವೆಯೂ ಸ್ಟಾರ್‌ ನಟನಿಗೆ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್

    ಕದನ ವಿರಾಮ ಘೋಷಣೆಯ ಬಳಿಕ ಒಪ್ಪಂದದ ಪ್ರಕಾರ ಬಾಕಿಯಿರುವ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ನಿರಾಕರಿಸಿದ ನಂತರ ಇಸ್ರೇಲ್‌ ದಾಳಿ ನಡೆಸಿರುವುದಾಗಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಅರೆಸ್ಟ್

    ಮೊದಲೇ ಎಚ್ಚರಿಕೆ ನೀಡಿದ್ದ ಇಸ್ರೇಲ್‌”
    ದಾಳಿ ನಡೆಸುವುದಕ್ಕೂ ಮುನ್ನವೇ ಇಸ್ರೇಲ್‌ ಎಚ್ಚರಿಸುವ ಕೆಲಸ ಮಾಡಿತ್ತು. ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಇಸ್ರೇಲ್‌ ಸೇನೆ, ಜಾಪಟ್ಟಿಯಲ್ಲಿರುವ ಹಮಾಸ್‌ ಭಯೋತ್ಪಾದಕ ಸಂಘಟನೆ ಸೇರಿದ ನೆಲೆಗಳ ಮೇಲೆ ಇಸ್ರೇಲ್‌ ಸೇನೆ ವ್ಯಾಪಕ ದಾಳಿ ನಡೆಸುತ್ತಿದೆ. ಹೀಗಾಗಿ ಗಾಜಾದ ನೆರೆಯ ಶಾಲೆಗಳನ್ನು ಮುಚ್ಚುವಂತೆ ಆದೇಶಿಸುತ್ತಿದೆ ಎಂದು ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಹೆಚ್‍ಡಿಕೆ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ

    ಟ್ರಂಪ್‌ ಎಚ್ಚರಿಕೆ:
    ಇಸ್ರೇಲ್‌ ದಾಳಿ ವಿಚಾರ ತಿಳಿಯುತ್ತಿದ್ದಂತೆ ಅಮೆರಿಕದ ಶ್ವೇತಭವನ ಪ್ರತಿಕ್ರಿಯಿಸಿದೆ. ಜೊತೆಗೆ ಹಮಾಸ್ ಮತ್ತು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೇರಿದಂತೆ ಇತರ ಭಯೋತ್ಪಾದಕ ಗುಂಪುಗಳು ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

  • ಕರಾಳ ಯುದ್ಧ ಭೂಮಿ ಗಾಜಾ ಮೇಲೆ ಕಣ್ಣು – ಟ್ರಂಪ್‌ ನಿರ್ಧಾರಕ್ಕೆ ವಿಶ್ವವೇ ನಿಬ್ಬೆರಗು!

    ಕರಾಳ ಯುದ್ಧ ಭೂಮಿ ಗಾಜಾ ಮೇಲೆ ಕಣ್ಣು – ಟ್ರಂಪ್‌ ನಿರ್ಧಾರಕ್ಕೆ ವಿಶ್ವವೇ ನಿಬ್ಬೆರಗು!

    ತೆರಿಗೆಯ ಅಸ್ತ್ರವನ್ನೇ ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಗ್ರೀನ್‌ಲ್ಯಾಂಡ್‌ ಖರೀದಿ ಮಾಡುವುದಾಗಿ ಹೇಳಿದ್ದ ಟ್ರಂಪ್‌, ಪನಾಮ ಕಾಲುವೆಯನ್ನು ತನ್ನ ಸುಪರ್ದಿಗೆ ಪಡೆಯುವ ಮಾತುಗಳನ್ನೂ ಆಡಿದ್ದರು. ಇದೀಗ ಯುದ್ಧ ಭೂಮಿಯಾದ ಗಾಜಾ ಮೇಲೆ ಟ್ರಂಪ್‌ ಕಣ್ಣಿಟ್ಟಿರುವುದು ಇಡೀ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಟ್ರಂಪ್‌ ಈ ನಿರ್ಧಾರಕ್ಕೆ ಕಾರಣವೇನು? ಟ್ರಂಪ್‌ ಹೇಳಿದ್ದೇಕೆ? ಗಾಜಾ ಪಟ್ಟಿ ನಿಯಂತ್ರಣದಿಂದ ಅಮೆರಿಕಕ್ಕೆ ಏನು ಲಾಭ ಎಂಬುದನ್ನು ತಿಳಿಯೋಣ.. ಅದಕ್ಕೂ ಮುನ್ನ ಗಾಜಾಪಟ್ಟಿಯ ಕರಾಳ ಇತಿಹಾಸವನ್ನರಿಯೋಣ…

    ಗಾಜಾ ಪಟ್ಟಿಯ ಇತಿಹಾಸ ನಿಮಗೆ ಗೊತ್ತೇ?
    ಪ್ಯಾಲೆಸ್ತೀನ್‌ ನೈರುತ್ಯ ಭಾಗದಲ್ಲಿರುವ ಗಾಜಾ ಪಟ್ಟಿಯು ಸಂಘರ್ಷದ ಭೂಮಿ ಎಂದೇ ಹೆಸರುವಾಸಿ. ರೋಮನ್ನರು ಸೇರಿದಂತೆ ವಿಶ್ವದ ಇತರ ಪ್ರಮುಖ ಶಕ್ತಿಗಳು ಗಾಜಾ ಪಟ್ಟಿಯನ್ನ ಆಳಿದ್ದವು. ಅದರಲ್ಲೂ 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಯುದ್ಧ ಶುರುವಾದ ಬಳಿಕ ಇದು ಅಕ್ಷರಶಃ ಯುದ್ಧ ಭೂಮಿಯಾಗಿ ಮಾರ್ಪಟ್ಟಿತು. ಇದೀಗ ಇಸ್ರೇಲ್‌-ಹಮಾಸ್‌ ನಡುವೆ ಕದನ ವಿರಾಮ ಏರ್ಪಟ್ಟಿದೆ. ಈ ನಡುವೆ ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಟ್ರಂಪ್‌ ಈ ಯುದ್ಧ ಭೂಮಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ.

    ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗಾಜಾ ಪಟ್ಟಿಯನ್ನು ಮೊದಲು ಅಶ್ಯೂರ್‌ ಎಂಬ ಸಾಮ್ರಾಜ್ಯ ಆಳುತ್ತಿತ್ತು. ನಂತರ ಗಾಜಾದಲ್ಲಿ ರೋಮನ್ನರ ಪ್ರಾಬಲ್ಯ ಸ್ಥಾಪನೆಯಾಯ್ತು. ಕ್ರಿ.ಪೂ. 1ನೇ ಶತಮಾನದಲ್ಲಿ ರೋಮನ್ನರ ಸಾಮ್ರಾಜ್ಯವು ಗಾಜಾವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಬಳಿಕ ಈ ಪ್ರದೇಶದ ಮಹತ್ವ ಅರಿತು ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಲು ಶುರು ಮಾಡಿದರು. ಏಷ್ಯಾ, ಯುರೋಪ್‌, ಆಫ್ರಿಕಾ ನಡುವಿನ ವ್ಯಾಪಾರ ಮಾರ್ಗಗಳು ಇದರ ಮೂಲಕವೇ ಹಾದುಹೋಗುತ್ತಿದ್ದರಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿಯೇ ಮಾರ್ಪಟ್ಟಿತ್ತು. ರೋಮನ್ನರ ಆಳ್ವಿಕೆ ಗಾಜಾದಲ್ಲಿ ಮಹತ್ವದ ಬದಲಾವಣೆಯನ್ನೇ ತಂದಿತು. ಆದ್ರೆ ರೋಮನ್ನರ ಆಳ್ವಿಕೆಯ ಕೊನೆ ಕೊನೆಯಲ್ಲಿ ಗಾಜಾ ಪಟ್ಟಿಯಲ್ಲಿ ಹಲವಾರು ದಂಗೆಗಳು ಮತ್ತು ಸಂಘರ್ಷಗಳು ಏರ್ಪಟ್ಟವು. ರೋಮ್‌ ಸಾಮ್ರಾಜ್ಯದ ಪತನದ ನಂತರ ಗಾಜಾ ಮುಸ್ಲಿಂ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು. ಕ್ರಿ.ಶ. 7ನೇ ಶತಮಾನದಲ್ಲಿ ಅರಬ್ಬರು ಗಾಜಾವನ್ನು ವಶಕ್ಕೆ ಪಡೆದುಕೊಂಡು ಸಂಪೂರ್ಣ ಇಸ್ಲಾಮಿಕ್‌ ಸಾಮ್ರಾಜ್ಯದ ಭಾಗವಾಗಿ ಪರಿವರ್ತಿಸಿದರು. ಇದನ್ನ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದ್ರು, ಇದರ ಹೊರತಾಗಿಯೂ ಯುದ್ಧ, ಸಂಘರ್ಷಗಳು ಮುಂದುವರಿಯಿತು.

    ಇನ್ನೂ 20ನೇ ಶತಮಾನದಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ಪ್ರಾಬಲ್ಯಕ್ಕೆ ಗಾಜಾಪಟ್ಟಿ ಒಳಪಟ್ಟಿತು. ಆದ್ರೆ ಬ್ರಿಟಿಷ್‌ ಆಳ್ವಿಕೆಯು ಪ್ಯಾಲೆಸ್ತೀನ್‌ನಲ್ಲಿ ಯಹೂದಿ ಮತ್ತು ಅರಬ್‌ ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಿಸಿತು. ಈ ಸಂದರ್ಭದಲ್ಲಿ ಲಕ್ಷಾಂತರ ಜನ ವಲಸೆ ಹೋದರು. ಹಲವು ಸಂಘರ್ಷ ಚಳವಳಿಗಳು ಹುಟ್ಟಿಕೊಂಡುವು ಪ್ರಮುಖವಾಗಿ ಪ್ಯಾಲೆಸ್ತೀನ್‌ ಸ್ವಾತಂತ್ರ್ಯ ಸಂಗ್ರಾಮ ಅಂದು ಹುಟ್ಟಿಕೊಟ್ಟ ಸಂಗ್ರಾಮ ಇಂದಿಗೂ ಮುಂದುವರಿಯುತ್ತಲೇ ಇದೆ.

    ಗಾಜಾ ಇಸ್ರೇಲ್‌ ಆಡಳಿತಕ್ಕೆ ಒಳಪಟ್ಟಿದ್ದು ಯಾವಾಗ?
    ಕಳೆದ ದಶಕಗಳಿಂದಲೂ ಗಾಜಾ ಪಟ್ಟಿ ಸಂಘರ್ಷ ಮತ್ತು ಹಿಂಸಾಚಾರದ ಕೇಂದ್ರವಾಗಿಯೇ ಉಳಿದಿದೆ. 1948ರಲ್ಲಿ ಇಸ್ರೇಲ್‌ ರಚನೆಯೊಂದಿಗೆ ಭೌಗೋಳಿಕ ಪ್ರಾಮುಖ್ಯತೆ ಹೆಚ್ಚಾಯಿತು. 1948ರಲ್ಲಿ ಇಸ್ರೇಲ್‌ ಪೂರ್ಣ ಪ್ರಮಾಣದಲ್ಲಿ ರಚನೆಯಾದಾಗ ಆ ಪ್ರದೇಶದಲ್ಲಿ ಅರಬ್ ಮತ್ತು ಯಹೂದಿ ಸಮುದಾಯಗಳನ್ನು ಪ್ರತ್ಯೇಕಿಸಲು ಕದನವಿರಾಮ ರೇಖೆ ಎಳೆಯಲಾಯಿತು. ಇದರ ಅಡಿಯಲ್ಲಿ, ಗಾಜಾ ಪಟ್ಟಿಯನ್ನು ಅರಬ್ ಬಹುಸಂಖ್ಯಾತ ಪ್ರದೇಶವಾಗಿ ಸ್ಥಾಪಿಸಲಾಯಿತು. ಆದರೆ ಯಹೂದಿ ಸಮುದಾಯವು ಇಸ್ರೇಲ್‌ನಲ್ಲಿ ಉಳಿಯಿತು. ೧೯೪೮ ರಿಂದ ೧೯೬೭ರ ವರೆಗೆ ಈಜಿಪ್ಟ್ ಈ ಪ್ರದೇಶವನ್ನು ನಿಯಂತ್ರಿಸಿತು. ಆದರೆ ೧೯೬೭ರಲ್ಲಿ ನಡೆದ 6 ದಿನಗಳ ಯುದ್ಧದಲ್ಲಿ ಇಸ್ರೇಲ್ ಈಜಿಪ್ಟ್ ಅನ್ನು ಸೋಲಿಸಿ ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಪ್ರದೇಶವು ಇಸ್ರೇಲ್‌ ಆಡಳಿತಕ್ಕೆ ಒಳಪಟ್ಟಿತು.

    2005 ರಲ್ಲಿ, ಪ್ಯಾಲೆಸ್ತೀನಿಯನ್ ಸ್ವಾತಂತ್ರ್ಯ ಸಂಸ್ಥೆ ಜೊತೆಗಿನ ಒಪ್ಪಂದದ ಭಾಗವಾಗಿ, ಇಸ್ರೇಲ್ ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿತು ಮತ್ತು ಯಹೂದಿ ವಸಾಹತುಗಳನ್ನು ಕೆಡವಿತು. ಆದರೆ 2007 ರಲ್ಲಿ ಹಮಾಸ್ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದು ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಯಿತು.

    ಟ್ರಂಪ್‌ ಗೇಮ್‌ ಪ್ಲ್ಯಾನ್‌ ಏನು?
    ಇತ್ತೀಚೆಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಭೇಟಿಯಾದ ನಂತರ ಟ್ರಂಪ್‌ ಗಾಜಾ ಪಟ್ಟಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಿಯಂತ್ರಣ ಮಾಡುವುದಾಗಿ ಹೇಳಿದರು. ಅಲ್ಲಿ ಇನ್ನೂ ಅಡಗಿಸಿಟ್ಟಿರುವ ಬಾಂಬ್‌ಗಳನ್ನು ಸ್ಫೋಟವಾಗದಂತೆ ನಾವು ತಡೆಯುತ್ತೇವೆ. ಆರ್ಥಿಕವಾಗಿ ಅಭಿವೃದ್ಧಿ ಮಾಡುತ್ತೇವೆ. ಉದ್ಯೋಗಾವಕಾಶ ಸೃಷ್ಟಿಸುತ್ತೇವೆ. ಗಾಜಾವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದು ಹಲವು ಆಫರ್‌ಗಳನ್ನ ಘೋಷಣೆ ಮಾಡಿದರು. ಆದ್ರೆ ಗಾಜಾದಲ್ಲಿರುವ 18 ರಿಂದ 20 ಲಕ್ಷ ಪ್ಯಾಲೆಸ್ತೀನಿಯನ್ನರು ಗಾಜಾವನ್ನು ತೊರೆದು ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹೇಳಿದ್ದಾರೆ.

    ಗಾಜಾ ವಾಸಕ್ಕೆ ಯೋಗ್ಯವಲ್ಲ. ಅಭಿವೃದ್ಧಿಪಡಿಸಿದ ನಂತರ ಇದು ವಿಶ್ವದಾದ್ಯಂತ ಜನರಿಗೆ ನೆಲೆಯಾಗಲಿದೆ. ರಿವೇರಿಯಾ ಆಗಿ ಗಾಜಾ ಬದಲಾಗಲಿದೆ. ರಿವೇರಿಯಾ ಎಂಬುದು ಇಟಾಲಿಯನ್‌ ಪದವಾಗಿದ್ದು, ಇದರ ಅರ್ಥ ಕರಾವಳಿ. ಇಟಾಲಿಯನ್‌ ಮತ್ತು ಫ್ರೆಂಚ್‌ ರಿವೇರಿಯಾದಂತೆ ಗಾಜಾವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಮುಖ್ಯವಾಗಿ ಗಾಜಾವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಉದ್ದೇಶವನ್ನು ಟ್ರಂಪ್‌ ಹೊಂದಿದ್ದಾರೆ. ಹಾಗಾಗಿ ಪ್ಯಾಲೆಸ್ತೀನಿಯರನ್ನು ಸ್ಥಳಾಂತರಿಸುವುದು ಅವಶ್ಯಕ ಎಂದು ಟ್ರಂಪ್‌ ಹೇಳಿದ್ದಾರೆ. ಟ್ರಂಪ್‌ ಅವರ ಈ ಆಫರ್‌ಗೆ ಇಸ್ರೇಲ್‌ ಪ್ರಧಾನಿ ಒಪ್ಪಿದರೂ. ಮಧ್ಯಪ್ರಾಚ್ಯ ಹಾಗೂ ಅನೇಕ ಯುರೋಪಿಯನ್‌ ದೇಶಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಟ್ರಂಪ್‌ ಇಡೀ ಗಾಜಾವನ್ನ ಸಂಪೂರ್ಣವಾಗಿ ಇಸ್ರೇಲ್‌ ನಿಯಂತ್ರಣಕ್ಕೆ ಕೊಡುವುದಕ್ಕಾಗಿ ಈ ಪ್ಲ್ಯಾನ್‌ ಮಾಡಿದ್ದಾರೆಂದು ಕೆಲ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮುಂದೆ ಟ್ರಂಪ್‌ ಅವರ ನಿಲುವು ಏನೆಂಬುದನ್ನು ಕಾದುನೋಡಬೇಕಿದೆ.

  • ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

    ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

    – ಟ್ರಂಪ್‌ ಪ್ಲ್ಯಾನ್‌ ಇತಿಹಾಸವನ್ನೇ ಬದಲಾಯಿಸಬಹುದು; ಇಸ್ರೇಲ್‌ ಪ್ರಧಾನಿ

    ವಾಷಿಂಗ್ಟನ್: ಕೆಲ ದಿನಗಳ ಹಿಂದೆಯಷ್ಟೇ ಇಸ್ರೇಲ್‌-ಹಮಾಸ್‌ ನಡುವಿನ ಕದನ ವಿರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (onald Trump) ಇದೀಗ ಗಾಜಾ ಪಟ್ಟಿಯ (Gaza Strip) ಮೇಲೆ ಕಣ್ಣಿಟ್ಟಿದ್ದಾರೆ. ಟ್ರಂಪ್‌ ಅವರ ಈ ಹೊಸ ಪ್ರಸ್ತಾಪ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ.

    ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಶ್ವೇತಭವನದ ಭೇಟಿಯ ಸಮಯದಲ್ಲಿ ಗಾಜಾವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಟ್ರಂಪ್ ಮಂಡಿಸಿದ್ದಾರೆ. ಟ್ರಂಪ್ ಆವರ ಆಫರ್ ಅನ್ನು ಎರಡು ರಾಷ್ಟ್ರಗಳು ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ, ಯುದ್ದ ಪೀಡಿತ ಪ್ರದೇಶದಿಂದ ಹೊರಕ್ಕೆ ಹೋಗಬೇಕು ಮತ್ತು ಈಜಿಪ್ಟ್ ಅಥವಾ ಜೋರ್ಡಾನ್ ಮುಂತಾದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ಯಾಲೆಸ್ತೀನಿಯನ್ನರು ಸ್ಥಳಾಂತರಗೊಳ್ಳಬೇಕು ಎಂದು ಟ್ರಂಪ್‌ ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನೆತನ್ಯಾಹು ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ಗಾಜಾವನ್ನು ಅಮೆರಿಕ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಇದನ್ನೂ ಓದಿ: USA vs China Tax War | ಅಮೆರಿಕದ ಕಲ್ಲಿದ್ದಲು, ಗ್ಯಾಸ್‌ ಮೇಲೆ ತೆರಿಗೆ ವಿಧಿಸಿದ ಚೀನಾ

    ಇದೇ ವೇಳೆ ಸ್ಫೋಟಗೊಳ್ಳದ ಬಾಂಬ್ ಗಳನ್ನು ನಿಷ್ಕಿಯಗೊಳಿಸಲಾಗುವುದು. ಯುದ್ದದಿಂದ ನೆಲಸಮವಾಗಿರುವ ಕಟ್ಟಡದ ಅವಶೇಷಗಳ ಜಾಗವನ್ನು ಸಮತಟ್ಟು ಮಾಡಲಾಗುವುದು. ಆರ್ಥಿಕತೆಯನ್ನು ಸರಿದಾರಿಗೆ ತರಲಾಗುವುದು ಮತ್ತು ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂಬ ಆಫರ್‌ಗಳನ್ನೂ ಟ್ರಂಪ್‌ ನೀಡಿದ್ದಾರೆ. ಜೊತೆಗೆ ಗಾಜಾದಲ್ಲಿರುವ ಸುಮಾರು 20 ಲಕ್ಷ ನಾಗರಿಕರು ಬೇರೆ ದೇಶಕ್ಕೆ ಹೋಗಬೇಕು ಎನ್ನುವ ಷರತ್ತನ್ನೂ ವಿಧಿಸಿದ್ದಾರೆ.

    ಮುಂದುವರಿದು… ನಮ್ಮ ಆಫರ್ ಸ್ವೀಕರಿಸಲು ಇವರು ಯೋಗ್ಯರಲ್ಲ, ಇವರಿಗಾಗಿ ನಾವು ಅಷ್ಟೊಂದು ಹಣ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ. ಅಷ್ಟೊಂದು ಅನಾಹುತ ನಡೆಯುತ್ತಿದ್ದರೂ, ತಮ್ಮ ಹಕ್ಕಿಗಾಗಿ, ತಮ್ಮ ಜೀವನಕ್ಕಾಗಿ ಇವರು ಪಣತೊಟ್ಟವರಲ್ಲ. ತಮ್ಮ ಇಂದಿನ ಶೋಚನೀಯ ಸ್ಥಿತಿಗೆ ಅವರೇ ಕಾರಣ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್‌

    ಆದ್ರೆ ಗಾಜಾಪಟ್ಟಿಯಿಂದ ಪ್ಲ್ಯಾಲೆಸ್ತೀನಿಯನ್ನರನ್ನು ಸ್ಥಳಾಂತರಿಸುವುದರಿಂದ ಅದು ಮಧ್ಯಪ್ರಾಚ್ಯದ ಇತರ ಪ್ರದೇಶಗಳನ್ನು ಅಸ್ತಿರಗೊಳಿಸಬಹುದು. ಸಂಘರ್ಷ ಹೆಚ್ಚಿಸಬಹುದು ಹಾಗೂ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ದೀರ್ಘಕಾಲಕ್ಕೆ ಧಕ್ಕೆಯಾಗಬಹುದು ಎಂದು ಟ್ರಂಪ್‌ಗೆ ಮಿತ್ರರಾಷ್ಟ್ರದ ನಾಯಕರು ಎಚ್ಚರಿಸಿದ್ದಾರೆ.

    ನೆತನ್ಯಾಹು ಅಮೆರಿಕ ಭೇಟಿ ನಡುವೆ ಇಸ್ರೇಲ್‌-ಹಮಾಸ್‌ ನಡುವಿನ ಕದನವಿರಾಮ ಮುಂದುವರಿದಿದೆ. 2023ರ ಅಕ್ಟೋಬರ್‌ 7ರಂದು ಸಂಭವಿಸಿದ ದಾಳಿಯ ನಂತರ ಈವರೆಗೆ 47,500 ಪ್ಯಾಲೆಸ್ತೀನಿಯನ್ನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

    ಇತಿಹಾಸ ಬದಲಾಯಿಸಬಹುದು:
    ಇನ್ನೂ ಶ್ವೇತಭವನಕ್ಕೆ ಭೇಟಿ ನೀಡಿರುವ ನೆತನ್ಯಾಹು, ಟ್ರಂಪ್‌ ಪ್ರಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯನ್‌ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಟ್ರಂಪ್‌ ಅವರ ಯೋಜನೆ ʻಇತಿಹಾಸವನ್ನೇ ಬದಲಾಯಿಸಬಹುದುʼ. ಹಾಗಾಗಿ ಟ್ರಂಪ್‌ ಅವರ ಯೋಜನೆ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

  • ಸುದೀರ್ಘ ಯುದ್ಧ ಅಂತ್ಯಗೊಳಿಸಲು ನಿರ್ಧಾರ; ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ

    ಸುದೀರ್ಘ ಯುದ್ಧ ಅಂತ್ಯಗೊಳಿಸಲು ನಿರ್ಧಾರ; ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ

    ಟೆಲ್‌ ಅವಿವ್‌: ಕಳೆದ 15 ತಿಂಗಳಿಂದ ಸುದೀರ್ಘ ಯುದ್ಧದಲ್ಲಿ ಸಿಲುಕಿರುವ ಇಸ್ರೇಲ್‌-ಹಮಾಸ್‌ (Israel, Hamas) ಕೊನೆಗೂ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

    ಜಗತ್ತಿನಾದ್ಯಂತ ಅಲ್ಲಲ್ಲಿ ನಡೆಯುತ್ತಿರುವ ಯುದ್ಧಗಳಿಗೂ ವಿರಾಮ (Ceasefire Agreement) ಹಾಕೋಕೆ ದೇಶ ದೇಶಗಳ ನಡುವೆ ಒಪ್ಪಂದ ಏರ್ಪಡುವುದು ಹೊಸದೇನೂ ಅಲ್ಲ. ಆದರೆ, ಜಿದ್ದಿಗೆ ಬಿದ್ದವರಂತೆ ನಿರಂತರವಾಗಿ ವರ್ಷಕ್ಕೂ ಹೆಚ್ಚು ಸಮಯದಿಂದ ಸಮರ ನಡೆಸುತ್ತಿರುವ ಇಸ್ರೇಲ್‌-ಹಮಾಸ್, ರಷ್ಯಾ-ಉಕ್ರೇನ್‌ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಜಾಗತಿಕ ನಾಯಕರು ನಿರಂತರ ಯತ್ನ ನಡೆಸಿದ್ದರು. ಇದೀಗ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಮಾತುಕತೆ ಬಹುತೇಕ ಯಶಸ್ವಿಯಾಗಿದೆ. ಇದೀಗ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ ವಿರಾಮಕ್ಕೆ ಸಂಬಂಧಿಸಿದಂತೆ ಒಪ್ಪಂದದ ಅಂತಿಮ ಡ್ರಾಫ್ಟ್‌ ಸಿದ್ಧವಾಗಿದ್ದು, ಇಸ್ರೇಲ್‌-ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.

    2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರ ಗುಂಪು ಇಸ್ರೇಲ್‌ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿತ್ತು. ಅಂದಿನಿಂದ ಸಾವಿರಾರು ಪ್ಯಾಲೆಸ್ತೀನಿಯನ್ನರನ್ನು ಇಸ್ರೇಲ್‌ ಕೊಂದಿತ್ತು. ಮಧ್ಯ ಪ್ರಾಚ್ಯದಲ್ಲಿ ಯುಧ್ಧದ ಕಾರ್ಮೋದಿಂದ ಸಾವು ನೋವು ಮುಂದುವರಿದಿತ್ತು. ಇದೀಗ ಇಸ್ರೇಲ್‌ ಮತ್ತು ಹಮಾಸ್‌ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ವರದಿಗಳು ತಿಳಿಸಿವೆ.

    ಇಸ್ರೇಲ್‌ ಮತ್ತು ಹಮಾಸ್‌ ಯುದ್ಧ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಕರಡನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇತ್ತೀಚೆಗಷ್ಟೇ ದೂರವಾಣಿ ಮೂಲಕ ಚರ್ಚೆ ಮಾಡಿದ್ದರು.

    ಈಗಾಗಲೇ ಹತ್ತಾರು ತಿಂಗಳಿನಿಂದಲೂಸ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿತ್ತು. ಯುದ್ಧಕ್ಕೆ ಬ್ರೇಕ್ ಹಾಕುವ ಒಪ್ಪಂದವು ಇನ್ನೇನು ಆಗಿಯೇ ಹೋಯ್ತು ಅನ್ನುವಷ್ಟರಲ್ಲಿ ಅಹಂ ಎದುರಾಯಿತು. ಎಲ್ಲ ಪ್ರಯತ್ನಗಳೂ, ಮಾತುಗತೆಗಳೂ ಅರ್ಧಕ್ಕೆ ನಿಂತು ಹೋದವು. ಅತ್ತ ಇಸ್ರೇಲ್‌ ಕೂಡ ತಣ್ಣಗಾಗಲು ಬಯಸಲಿಲ್ಲ, ಇತ್ತ ಹಮಾಸ್ ಕೂಡ ಅಡಗಿ ನಡೆಸುವ ದಾಳಿಗಳನ್ನು ನಿಲ್ಲಿಸಲಿಲ್ಲ. ಇನ್ನು ಸಂಧಾನಕ್ಕೆ ಬಂದ ದೇಶಗಳು ಸುಮ್ಮನೆ ನಮಗ್ಯಾಕೆ ತಲೆನೋವು ಅಂತ ಸುಮ್ಮನಾಗಿದ್ದವು. ಇಸ್ರೇಲ್‌ನ ವಿದೇಶಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಬೈಡನ್ ಅವರ ಉನ್ನತ ಸಲಹೆಗಾರ ಬ್ರೆಟ್ ಮೆಕ್‌ಗುರ್ಕ್‌ ಇಬ್ಬರೂ ಕತಾರ್ ರಾಜಧಾನಿ ದೋಹಾದಲ್ಲಿದ್ದಾರೆ. ಅಲ್ಲಿಯೂ ಒಪ್ಪಂದದ ಬಗ್ಗೆ ಅಂತಿಮ ಚರ್ಚೆಗಳು ನಡೆದಿವೆ.

    ಈಗ ಇಸ್ರೇಲ್, ಹಮಾಸ್ ಎರಡೂ ಕಡೆಯವರಿಗೆ ಪ್ರಸ್ತುತಪಡಿಸಬೇಕಾದ ಅಂತಿಮ ವಿವರಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಟ್ರಂಪ್ ಅಧಿಕಾರ ಸ್ವೀಕಾರ ಜನವರಿ 20ರಂದು ನಡೆಯಲಿದೆ. ಅದಕ್ಕೂ ಮುಂಚೆಯೇ ಕದನ ವಿರಾಮ ಒಪ್ಪಂದ ಪೂರ್ಣಗೊಂಡರೆ, ಬೈಡನ್‌ ಪ್ರಯತ್ನವೂ ಇತಿಹಾಸದಲ್ಲಿ ಉಳಿಯಲಿದೆ. ಈ ಕಾರಣಕ್ಕಾಗಿಯೇ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಇದರ ಮಧ್ಯಸ್ಥಿತಿ ವಹಿಸಿದ್ದಾರೆ ಎನ್ನಲಾಗಿದೆ.

    2023ರ ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ನ ಗಡಿಯೊಳಕ್ಕೆ ನುಗ್ಗಿ ಮನಬಂದಂತೆ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದರು. ಸುಮಾರು 1,200 ಜನರ ಹತ್ಯೆ ನಡೆದಿತ್ತು ಹಾಗೂ 250 ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಇಸ್ರೇಲ್‌ ಪಡೆಗಳು ಗಾಜಾ ಮೇಲೆ ಆಕ್ರಮ ಶುರು ಮಾಡಿತ್ತು. ಈವರೆಗೂ ಯುದ್ಧದಿಂದ ಗಾಜಾದಲ್ಲಿ 46 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

  • ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದ ಐಸಿಸಿ

    ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್‌ ಹೊರಡಿಸಿದ ಐಸಿಸಿ

    ಟೆಲ್‌ ಅವಿವ್‌: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿರುವ ಹೊತ್ತಿನಲ್ಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಹಾಗೂ ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ‌ ಯೋವ್‌ ಗ್ಯಾಲಂಟ್‌ (Yoav Gallant) ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ (ICC) ಬಂಧನ ವಾರೆಂಟ್‌ ಹೊರಡಿಸಿದೆ.

    ಗಾಜಾ ಪಟ್ಟಿಯಲ್ಲಿನ (Gaza Strip) ಯುದ್ಧ ಹಾಗೂ 2023ರ ಅಕ್ಟೋಬರ್‌ ನಲ್ಲಿ ನಡೆದ ಘರ್ಷಣೆಗಳಲ್ಲಿ ಯುದ್ಧಾಪರಾಧ ಹಾಗೂ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದ್ದಾರೆ ಎಂಬ ಆರೋಪದ ಮೇಲೆ ಕೋರ್ಟ್‌ ನೆತನ್ಯಾಹು ಹಾಗೂ ಗ್ಯಾಲಂಟ್ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ. ಇದನ್ನೂ ಓದಿ: Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    ಜೊತೆಗೆ ಹಮಾಸ್ (Hamas) ಮಿಲಿಟರಿ ಪಡೆಯ ಮುಖ್ಯಸ್ಥರಾದ ಮೊಹಮ್ಮದ್ ಡೆಫ್ (Mohammed Deif) ಹಾಗೂ ಮುಖ್ಯಸ್ಥ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ ವಿರುದ್ಧವೂ ಬಂಧನ ವಾರೆಂಟ್‌ ಹೊರಡಿಸಿದೆ. ಇದನ್ನೂ ಓದಿ: ಉಕ್ರೇನ್‌ ಮೇಲೆ ರಷ್ಯಾದ ICBM ದಾಳಿ – 60 ವರ್ಷಗಳ ಇತಿಹಾಸದಲ್ಲೇ ಯುದ್ಧಕ್ಕೆ ಕ್ಷಿಪಣಿ ಮೊದಲ ಬಳಕೆ

    ಕಳೆದ ಮೇ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ನ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರು ಇಸ್ರೇಲ್‌ ನಾಯಕರ ವಿರುದ್ಧ ಯುದ್ಧಾಪರಾಧಗಳು ಹಾಗೂ ಮಾನವೀಯತೆಯ ವಿರುದ್ಧದದ ಅಪರಾಧಗಳಿಗಾಗಿ ವಾರೆಂಟ್‌ ಜಾರಿಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಮನವಿಯನ್ನು ಕೋರ್ಟ್‌ ಪುರಸ್ಕರಿಸಿತು. ಐಸಿಸಿಯ ಪ್ರೀ-ಟ್ರಯಲ್ ಚೇಂಬರ್ I, ತ್ರಿಸದಸ್ಯ ನ್ಯಾಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

    ವಿಚಾರಣೆ ವೇಳೆ ಇಸ್ರೇಲ್‌ ದಾಳಿಯಿಂದ ಗಾಜಾದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಆಹಾರ, ನೀರು, ಔಷಧ, ವೈದ್ಯಕೀಯ ಸೌಲಭ್ಯ, ಇಂಧನ ಹಾಗೂ ವಿದ್ಯುತ್‌ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬ ಅಂಶಗಳನ್ನು ಕೋರ್ಟ್‌ ಉಲ್ಲೇಖಿಸಿತು. ಅಲ್ಲದೇ ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲು ನಿರ್ದೇಶನ ನೀಡುವುದು ಮತ್ತು ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದು ಅಪರಾಧ ಎಂದಿರುವ ನೆತನ್ಯಾಹು ಸೇರಿ ಹಲವರ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಇದನ್ನೂ ಓದಿ: 56 ವರ್ಷಗಳ ಬಳಿಕ ಗಯಾನದಲ್ಲಿ ಭಾರತದ ಪ್ರಧಾನಿ – ಮೋದಿಗೆ ಭವ್ಯವಾದ ಸ್ವಾಗತ

    ಈ ನಡುವೆ ನೆತನ್ಯಾಹು ನೆದರ್ಲೆಂಡ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ. ಒಂದು ವೇಳೆ ತೆರಳಿದರೆ, ಐಸಿಸಿ ವಾರೆಂಟ್‌ ಅಡಿಯಲ್ಲಿ ಅಲ್ಲಿಯೇ ಬಂಧಿಸಲಾಗುತ್ತದೆ ಎಂದು ಡಚ್ ವಿದೇಶಾಂಗ ಸಚಿವ ಕ್ಯಾಸ್ಪರ್ ವೆಲ್ಡ್‌ಕ್ಯಾಂಪ್ ಹೇಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌ 

  • ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ಟೆಲ್‌ ಅವೀವ್‌: ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧ (Israel Hamas War) ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಎರಡೂ ಸೇನೆಗಳೂ ತಂತ್ರ-ಪ್ರತಿತಂತ್ರ ನಡೆಸುತ್ತಲೇ ಇವೆ. ಆದರೀಗ ಹಮಾಸ್‌ ಉಗ್ರರು ಗಾಜಾಪಟ್ಟಿಯಲ್ಲಿ ಬಳಸಿದ ಸುರಂಗಗಳನ್ನ ಕೃತಕ ಪ್ರವಾಹ (Flood Tunnels) ಸೃಷ್ಟಿಸುವ ಮೂಲಕ ಧ್ವಂಸಗೊಳಿಸಲು ಇಸ್ರೇಲ್‌ ಸೇನೆ (Israel Army) ಪ್ಲ್ಯಾನ್‌ ಮಾಡಿದೆ ಎಂದು ವರದಿಯಾಗಿದೆ.

    ಹಮಾಸ್‌ ಉಗ್ರರ ವಿರುದ್ಧ ಸಮರ ಸಾರಿಸುವ ಇಸ್ರೇಲ್‌ ಸುರಂಗಗಳಲ್ಲಿ ಪ್ರವಾಸ ಸೃಷ್ಟಿ ಉಗ್ರರನ್ನು ಮಟ್ಟಹಾಕಲು ಕೆಲ ದಿನಗಳ ಹಿಂದೆಯೇ ಪ್ಲ್ಯಾನ್‌ ಮಾಡಿದಂತಿದೆ. ಏಕೆಂದರೆ ಕಳೆದ ನವೆಂಬರ್‌ ಮಧ್ಯದಲ್ಲಿಯೇ ಇಸ್ರೇಲ್‌ ಸೇನೆಯು ಅಲ್-ಶಾತಿ ನಿರಾಶ್ರಿತರ ಶಿಬಿರದ ಉತ್ತರಕ್ಕೆ ಕನಿಷ್ಠ ಒಂದು ಮೈಲಿಯಷ್ಟು ದೂರಕ್ಕೆ 5 ಪಂಪ್‌ಗಳನ್ನ ನಿರ್ಮಿಸಿದೆ. ಈ ಪಂಪ್‌ಗಳ ಮೂಲಕ ಗಂಟೆಗೆ ಸಾವಿರಾರು ಘನ ಮೀಟರ್‌ಗಳಷ್ಟು ನೀರನ್ನು ಚಿಮ್ಮಿಸಬಹುದು. ಕನಿಷ್ಠ ಒಂದೇ ವಾರದಲ್ಲಿ ಸುರಂಗಗಳಲ್ಲಿ ನೀರು ತುಂಬಿಕೊಂಡು ಪ್ರವಾಹ ಸೃಷ್ಟಿಬಹುದು ಅನ್ನೋದು ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌.

    ಮಾಹಿತಿ ಪ್ರಕಾರ, ಹಮಾಸ್‌ ಸುರಕ್ಷಿತ ಸ್ಥಳಗಳಾಗಿದ್ದ ಸುರಂಗಗಳಲ್ಲಿ ಒತ್ತೆಯಾಳುಗಳನ್ನ ಬಂಧಿಸಿ ಮರೆಮಾಚಿತ್ತು. ಅದಕ್ಕಾಗಿ ಇಸ್ರೇಲ್‌ ಸುರಂಗಗಳಲ್ಲಿ ಪ್ರವಾಹ ಸೃಷ್ಟಿಸಲು ಯೋಜನೆ ರೂಪಿಸಿದೆ. ಆದ್ರೆ ಹಮಾಸ್‌-ಇಸ್ರೇಲ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಪರಸ್ಪರ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದವಾಗಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್‌ ಪ್ರವಾಹ ಸೃಷ್ಟಿಸುವ ಕೆಲಸಕ್ಕೆ ಮುಂದಾಗುತ್ತದೆಯೇ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಚಂದ್ರನ ಕಕ್ಷೆಯಿಂದ ಭೂಮಿ ಕಕ್ಷೆಗೆ ಮತ್ತೆ ಮರಳಿದ ಚಂದ್ರಯಾನ-3 ಪ್ರೊಪಲ್ಷನ್‌ ಮಾಡ್ಯೂಲ್‌

    ಯುಸ್‌ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಕೇಳಿದಾಗ ಇಸ್ರೇಲ್‌ ಸುರಂಗಗಳನ್ನ ನಿಷ್ಕ್ರಿಯಗೊಳಿಸುವುದು ಸರಿಯಾದ ನಿರ್ಧಾರ. ಅದಕ್ಕಾಗಿ ಇಸ್ರೇಲ್‌ ಹಲವಾರು ಮಾರ್ಗಗಳನ್ನ ಅನ್ವೇಷಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Lokayukta Raid: ತಿಮ್ಮರಾಜಪ್ಪ ಒಡೆತನದ ಬಂಗಲೆಗಳನ್ನು ನೋಡಿ ಅಧಿಕಾರಿಗಳೇ ದಂಗಾದ್ರು!

    ಇಸ್ರೇಲ್‌ ರಕ್ಷಣಾ ಪಡೆ ಈವರೆಗೆ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ವಿವಿಧ ಮಿಲಿಟರಿ ಮತ್ತು ಸಾಂತ್ರಿಕ ಸಾಧನಗಳನ್ನು ಬಳಸಿಕೊಂಡು ಸಾಮರ್ಥ್ಯಗಳನ್ನ ಬಳಸಿಕೊಂಡೇ ಸುರಂಗಗಳನ್ನು ಕೆಡವುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

  • ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು

    ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು

    ಟೆಲ್‌ ಅವೀವ್‌: ಕಳೆದ ಒಂದು ವಾರದಿಂದ ಇಸ್ರೇಲ್‌-ಹಮಾಸ್‌ (Israel Hamas War) ನಡುವೆ ಕದನ ವಿರಾಮ ಏರ್ಪಟ್ಟಿದೆ. ಒತ್ತೆಯಾಳುಗಳ (Hostages) ಬಿಡುಗಡೆಯಾಗಿ 4 ದಿನಗಳಿಗೆ ಸೀಮಿತವಾಗಿದ್ದ ಕದನ ವಿರಾಮ ಅವಧಿ ವಿಸ್ತರಣೆಗೊಂಡಿದೆ. ಈ ನಡುವೆಯೂ ಗಾಜಾಪಟ್ಟಿಯಲ್ಲಿ ಐವರು ಒತ್ತೆಯಾಳುಗಳು ಮೃತಪಟ್ಟಿದ್ದಾರೆ.

    ಐವರು ಒತ್ತೆಯಾಳುಗಳು ಸಾವನ್ನಪ್ಪಿರುವುದಾಗಿ ಇಸ್ರೇಲ್‌ ಸೇನೆ (Israel Army) ಖಚಿತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಒತ್ತೆಯಾಳುಗಳಾದ ಎಲಿಯಾಹು ಮಾರ್ಗಲಿಟ್, ಮಾಯಾ ಗೊರೆನ್, ರೋನೆನ್ ಎಂಗಲ್ ಮತ್ತು ಆರ್ಯೆ ಜಲ್ಮನೋವಿಟ್ಜ್ ಅವರ ಸಾವಿನ ಬಗ್ಗೆ ಕುಟುಂಬದವರಿಗೆ ಇಸ್ರೇಲ್‌ ರಕ್ಷಣಾ ಪಡೆ ಹಾಗೂ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸೇನಾ ವಕ್ತಾರ ಡೇನಿಯಲ್ ಹಗರಿ ತಿಳಿಸಿದ್ದಾರೆ. ಒಫಿರ್‌ ತ್ಸರ್ಪಾತಿ ಎಂದು ಗುರುತಿಸಲಾದ 5ನೇ ವ್ಯಕ್ತಿಯ ಮೃತದೇಹವನ್ನು ಇಸ್ರೇಲ್‌ ಸೇನೆ ಮರಳಿ ಪಡೆದಿದೆ.

    ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದು, 3 ಬ್ಯಾಚ್‌ನಲ್ಲಿ 40ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ಹಮಾಸ್‌ ಬಿಡುಗಡೆ ಮಾಡಿದೆ. ಇನ್ನಷ್ಟು ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ವಿಸ್ತರಿಸಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ

    ಇಸ್ರೇಲ್ ಮತ್ತು ಹಮಾಸ್ (Israel- Hamas) ನಡುವಿನ ಒಪ್ಪಂದದ ಅಡಿಯಲ್ಲಿ 50 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರೆ, 150 ಪ್ಯಾಲೆಸ್ತೀನ್‌ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಹಾಗಾಗಿ ದಿನಗಳ ಕದನ ವಿರಾಮಕ್ಕೆ ಹಮಾಸ್ ಹಾಗೂ ಇಸ್ರೇಲ್ ಒಪ್ಪಿಗೆ ಸೂಚಿಸಿತ್ತು. ಇದನ್ನೂ ಓದಿ: 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್

    ಹಮಾಸ್‌ ಉಗ್ರರ ಗುಂಪು ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್‌ 7 ರಂದು ಗಾಜಾಪಟ್ಟಿಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೂ ದಾಳಿ ಮಾಡಿ ಸುಮಾರು 240 ಒತ್ತೆಯಾಳುಗಳನ್ನು ಅಪಹರಿಸಿದ್ದರು. ಆದ್ರೆ ಇಸ್ರೇಲ್‌ ದಾಳಿಗೆ 15 ಸಾವಿರ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಅದರಲ್ಲಿ 6,150 ಮಕ್ಕಳೂ ಸೇರಿದ್ದಾರೆ. ಅಲ್ಲದೇ 36,000 ಮಂದಿ ಗಾಯಗೊಂಡಿದ್ದು, 7 ಸಾವಿರಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವುದಾಗಿ ಹಮಾಸ್‌ ಹೇಳಿದೆ. ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿ ನೇಮಕ