Tag: ಗಾಂಧಿ ನಗರ

  • PUBLiC TV Impact | ಕಾರ್ಮಿಕರಿಗೆ ಥಳಿತ ಪ್ರಕರಣ – ಮಾಲೀಕ ಸೇರಿ ಮೂವರು ಅರೆಸ್ಟ್

    PUBLiC TV Impact | ಕಾರ್ಮಿಕರಿಗೆ ಥಳಿತ ಪ್ರಕರಣ – ಮಾಲೀಕ ಸೇರಿ ಮೂವರು ಅರೆಸ್ಟ್

    ವಿಜಯಪುರ: ಜಿಲ್ಲೆಯಲ್ಲಿ ಕಾರ್ಮಿಕರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಎಪಿಎಂಸಿ (APMC) ಪೊಲೀಸರು ಬಂಧಿಸಿದ್ದಾರೆ.

    ವಿಜಯಪುರದ (Vijayapura) ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ `ಪಬ್ಲಿಕ್ ಟಿವಿ’ ಸುದ್ದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೆ ಆರೋಪಿ ಖೇಮು ರಾಠೋಡ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.ಇದನ್ನೂ ಓದಿ: ಮೊದಲು ಕಾಂಗ್ರೆಸ್ ಶಾಸಕರನ್ನ ಉಳಿಸಿಕೊಳ್ಳಲಿ: ಎಂ.ಬಿ ಪಾಟೀಲ್‌ಗೆ ವಿಜಯೇಂದ್ರ ಟಕ್ಕರ್

    ಈ ಕುರಿತು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದೇವೆ. ಆದಷ್ಟು ಬೇಗ ಅವರನ್ನ ಬಂಧಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಬಿಎನ್‌ಎಸ್ ಸೆಕ್ಷನ್ 109ರ ಅಡಿಯಲ್ಲಿ (ಕೊಲೆಗೆ ಯತ್ನ) ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ಏನು?
    ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿಜಯಪುರದ ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದಿತ್ತು.

    ಬಾಗಲಕೋಟೆ ಜಿಲ್ಲೆಯ ಚಿಕ್ಕಲಗಿ ಗ್ರಾಮದ ನಿವಾಸಿಗಳಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಕಾರ್ಮಿಕರ ಮೇಲೆ ಖೇಮು ರಾಠೋಡ ಹಾಗೂ ಸಂಬಂಧಿಕರು ಮನಬಂದಂತೆ ಹಲ್ಲೆ ನಡೆಸಿದ್ದರು. ಸದ್ಯ ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಲೀಕ ಪ್ರತಿದಿನ ಕಾರ್ಮಿಕರಿಗೆ 600 ರೂ. ಕೂಲಿ ನೀಡಲಾಗುತ್ತಿತ್ತು. ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16 ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಂದ ಕಾರ್ಮಿಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು.

    ಈ ವಿಚಾರ ತಿಳಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಹೇಳಿ ತನ್ನ ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದ. ಮೂರು ದಿನ ಕೂಡಿ ಹಾಕಿ ಪೈಪ್‌ನಿಂದ ಬೆನ್ನು, ಕಾಲು, ಸೊಂಟದ ಮೇಲೆ ಮನಬಂದಂತೆ ಥಳಿಸಿದ್ದರು.ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು

  • ರಸ್ತೆಯೇ ಹಾಸಿಗೆ, ಆಕಾಶವೇ ಹೊದಿಕೆ – ನಡುರಸ್ತೆಯಲ್ಲಿ ಜೀವನ ದೂಡ್ತಿರುವ ಮಹಿಳೆ

    ರಸ್ತೆಯೇ ಹಾಸಿಗೆ, ಆಕಾಶವೇ ಹೊದಿಕೆ – ನಡುರಸ್ತೆಯಲ್ಲಿ ಜೀವನ ದೂಡ್ತಿರುವ ಮಹಿಳೆ

    ಬೆಂಗಳೂರು: ಗಾಂಧಿನಗರದ ರಸ್ತೆಯಲ್ಲಿ ನೀವು ಓಡಾಡಿದ್ರೆ ಈ ಮಹಿಳೆಯ ಪುಟ್ಟ ಬದುಕು ನೀವು ನೋಡಿರಬಹುದು. ಇರಲು ಮನೆ ಇಲ್ಲದೇ ಮಗು ಮತ್ತು ವಯಸ್ಸಾದ ತಾಯಿ ಜೊತೆ ಫುಟ್‍ಪಾತ್ ನಲ್ಲಿಯೇ ಜೀವನ ದೂಡುತ್ತಿದ್ದಾರೆ. ಮನೆಗಾಗಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ರೂ ಇವರಿಗೊಂದು ಸೂರು ಇದುವರೆಗೂ ದೊರಕಿಲ್ಲ.

    ಬಿಎ ಪದವಿಧರೆಯಾಗಿರುವ ಪೂರ್ಣಿಮಾ ದೋಬಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಗೆ ದುಡ್ಡುಕಟ್ಟೋಕೆ ಆಗದೇ ಗಾಂಧಿನಗರದ ಫುಟ್‍ಪಾತ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ವಯಸ್ಸಾದ ತಾಯಿ ಹಾಗೂ ಮಗುವನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕೊರೊನಾ ಬಂದು ದುಡಿಮೆ ನೆಲಕಚ್ಚಿದೆ. ಹೀಗಾಗಿ ಮನೆ ಬಾಡಿಗೆ ಕಟ್ಟೋಕೆ ಸಾಧ್ಯವಾಗದೇ ಗಾಂಧಿನಗರದ ರಸ್ತೆಯಲ್ಲಿಯೇ ರಾತ್ರಿಯನ್ನು ಕಳೆಯುತ್ತಿದ್ದಾರೆ. ಕೈಯಲ್ಲಿ ಚಾಕು, ಕೋಲು, ಮೆಣಸಿನ ಪೌಡರ್ ಇಟ್ಕೊಂಡು ರಾತ್ರಿ ಕಳೆಯುತ್ತಿದ್ದಾರೆ. ಅದೆಷ್ಟೇ ಬಾರಿ ಜನಪ್ರತಿನಿಧಿಗಳಿಗೆ ಸೂರಿಗಾಗಿ ಮನವಿ ಮಾಡಿದರೂ ಈಡೇರಲಿಲ್ಲ.

    ಕೆಲವರು ಬಂದು ನಿಮ್ಮನ್ನ ಇಲ್ಲಿಂದ ಜಾಗ ಖಾಲಿ ಮಾಡಿಸ್ತೀವಿ ಅಂತ ಧಮ್ಕಿ ಹಾಕ್ತಾರೆ. ಹಾಗಾದ್ರೆ ನಮಗೆ ರೇಷನ್ ಕಾರ್ಡ್, ವೋಟರ್ ಐಡಿ ಕೊಟ್ಟಿರೋದು ಯಾಕೆ? ಬಾಡಿಗೆ ಹಣ ನೀಡಲು ಸಾಧ್ಯವಾಗದ ಹಿನ್ನೆಲೆ ರಸ್ತೆಯ ಬದಿಯಲ್ಲಿ ತಾಯಿ ಮತ್ತು ಮಗು ಜತೆ ವಾಸವಾಗಿದ್ದೇನೆ. ರಾತ್ರಿ ಮಲಗುವಾಗ ಸೇಫ್ಟಿಗಾಗಿ ಮೆಣಸಿನ ಪುಡಿ, ಕೋಲು, ಚಾಕುಗಳನ್ನ ಇಟ್ಟಿಕೊಂಡಿರುತ್ತೇವೆ. ಹಾಗೆ ನಾಯಿ ಸಹ ಸಾಕಿಗೊಂಡಿದ್ದೇನೆ ಎಂದು ಪೂರ್ಣಿಮಾ ಹೇಳುತ್ತಾರೆ.

    ಇನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೂರ್ಣಿಮಾ ತಾಯಿ ತುಳಸಿ, ಯಾರು ಬಂದು ನಮ್ಮ ಕಷ್ಟ ಕೇಳುತ್ತಿಲ್ಲ. ಇಲ್ಲೇ ಹುಟ್ಟಿ ಬೆಳೆದವರು ನಾನು. ಲಾಕ್‍ಡೌನ್ ವೇಳೆ ಎಷ್ಟೋ ದಿನ ಹಸಿವಿನಿಂದ ಮಲಗಿದ್ದೇವೆ. ಕೊರೊನಾ ಸಮಯದಲ್ಲಿ ರೇಷನ್ ಸಹ ನಮಗೆ ಸಿಗಲಿಲ್ಲ. ಕೆಲ ಪುಡಾರಿಗಳು ರಾತ್ರಿ ಬಂದು ಸಮಸ್ಯೆ ಮಾಡ್ತಾರೆ ಎಂದು ಕಣ್ಣೀರು ಹಾಕುತ್ತಾರೆ.

    ಪೂರ್ಣಿಮಾ ಅವರಿಗೆ ಮದ್ವೆಯಾಗಿ ಮಗುವಾದ ಮೇಲೆ ಗಂಡ ಕೈಕೊಟ್ಟು ಹೋಗಿದ್ದಾನೆ. ಅತ್ತ ಕಾಯಿಲೆ ಬಿದ್ದ ತಾಯಿಯನ್ನು ಈ ಪುಟ್ಟ ಸೂರಿನಲ್ಲಿ ನೋಡಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ಮಳೆ ಬಂದಾಗ ಇವರ ಕಷ್ಟ ನೋಡಲು ಆಗಲ್ಲ. ಸ್ಥಳೀಯ ಶಾಸಕರಾಗಿರುವ ದಿನೇಶ್ ಗುಂಡೂರಾವ್ ನಮ್ಮ ಸಹಾಯಕ್ಕೆ ಬರಲಿ ಎಂದು ಬಡ ಕುಟುಂಬ ಮನವಿ ಮಾಡಿಕೊಂಡಿದೆ.

  • ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ಗುಜರಾತ್ ಸರ್ಕಾರ

    ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ಗುಜರಾತ್ ಸರ್ಕಾರ

    ನವದೆಹಲಿ: ಗುಜರಾತ್ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸುತ್ತಿದ್ದ ವ್ಯಾಟ್ ಕಡಿತಗೊಳಿದೆ. ಶೇ.4 ವ್ಯಾಟ್ ಕಡಿತಗೊಳಿಸಿದ ಪರಿಣಾಮ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.93 ರೂ., ಡೀಸೆಲ್ 2.72 ರೂ. ಇಳಿಕೆಯಾಗಿದೆ.

    ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ವ್ಯಾಟ್ ಇಳಿಸಿದ ಮೊದಲ ರಾಜ್ಯ ಗುಜರಾತ್ ಆಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.

    ವ್ಯಾಟ್ ಕಡಿತದಿಂದ ಗುಜರಾತ್ ರಾಜ್ಯ ಸರ್ಕಾರಕ್ಕೆ ವಾರ್ಷಿಕ 2,316 ಕೋಟಿ ರೂ ಹೊರೆಯಾಗಲಿದೆ. ಆದರೂ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಎಂದು ಸಿಎಂ ವಿಜಯ್ ರುಪಾನಿ ತಿಳಿಸಿದರು.

    ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಕೆಲ ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ರಾಜ್ಯ ಸರ್ಕಾರಗಳು ವ್ಯಾಟ್ ಇಳಿಸಬೇಕೆಂದು ಹೇಳಿದ್ದರು.

    ತೈಲಗಳ ಮೇಲೆ ವಿಧಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳ ವಿಧಿಸುವ ವ್ಯಾಟ್ ಪ್ರಮಾಣ ಅಧಿಕವಾಗಿದ್ದು, ಕೇಂದ್ರದ ಅಬಕಾರಿ ಸುಂಕದಲ್ಲೂ ಶೇ.42 ರಷ್ಟು ಹಣವನ್ನು ಪಡೆಯುತ್ತಿವೆ. ಇದರಲ್ಲಿ ಸಂಗ್ರಹವಾದ ಹಣವನ್ನು ರಾಜ್ಯಗಳ ಕಲ್ಯಾಣ ಯೋಜನೆಗೆ ಕೇಂದ್ರ ನೀಡುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದರು.

    ಪ್ರಧಾನ್ ಅವರ ಮನವಿಗೆ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರಕ್ಕೆ ತೈಲ ಉತ್ಪನ್ನಗಳ ಮೂಲ ಬೆಲೆಯನ್ನು ಕಡಿತಗೊಳಿಸಲು ತಿಳಿಸಿದ್ದರು. ಈ ಕುರಿತ ಉದಾಹರಣೆಯಾಗಿ ನೆರೆಯ ರಾಜ್ಯ ಜಾರ್ಖಂಡ್ ರಾಜ್ಯದಲ್ಲಿ ಬಿಹಾರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ತೈಲ ಉತ್ಪನ್ನಗಳು ದೊರೆಯುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ ಕೇರಳ ಸರ್ಕಾರವು ತೈಲಗಳ ಮೇಲಿನ ವ್ಯಾಟ್ ಕಡಿತಗೊಳಿಸಲು ನಿರಾಕರಿಸಿತ್ತು.

    ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಸಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ)ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಇದಾದ ಬಳಿಕ ಬಿಜೆಪಿ ಸರ್ಕಾರಗಳು ವ್ಯಾಟ್ ಇಳಿಸಲು ಚಿಂತನೆ ನಡೆಸಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ವ್ಯಾಟ್ ಇಳಿಸಲಾಗುವುದು ಎಂದು ಕಳೆದ ಗುರುವಾರ ಹೇಳಿದ್ದರು.

    ಈ ವರ್ಷದ ಅಂತ್ಯದ ವೇಳೆಗೆ ಗುಜರಾತ್ ರಾಜ್ಯದ ವಿಧಾನ ಸಭಾ ಕ್ಷೇತ್ರ ಚುನಾವಣೆಗಳು ನಡೆಯಲಿವೆ ಹೀಗಾಗಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಗುಜರಾತ್ ನಂತರ ಬಿಜೆಪಿ ಆಡಳಿತ ಇರುವ ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಲು ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.

    https://publictv.in/it-is-central-govts-responsibility-to-reduce-petrol-diesel-rate-cm/