Tag: ಗಾಂಧಿ

  • ಗಾಂಧಿ ಟೋಪಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸಮಾಜಕ್ಕೆ ಟೋಪಿ ಹಾಕಿದೆ: ಕಟೀಲ್

    ಗಾಂಧಿ ಟೋಪಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸಮಾಜಕ್ಕೆ ಟೋಪಿ ಹಾಕಿದೆ: ಕಟೀಲ್

    ಧಾರವಾಡ: ಕಾಂಗ್ರೆಸ್ (Congress) ಪಕ್ಷ ಗಾಂಧಿ ಟೋಪಿಯನ್ನು ಮುಂದಿಟ್ಟುಕೊಂಡು ಇಡೀ ಸಮಾಜಕ್ಕೆ ಟೋಪಿ ಹಾಕುವ ಕೆಲಸ ಮಾಡಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel)  ವಾಗ್ದಾಳಿ ನಡೆಸಿದರು.

    ಧಾರವಾಡದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರವಾದವನ್ನು ಬದಿಗಿಟ್ಟು ಪರಿವಾರ ವಾದವನ್ನು ಮುಂದಿಟ್ಟಿತ್ತು. ಮಹಾತ್ಮ ಗಾಂಧಿಗೂ ಹಾಗೂ ರಾಹುಲ್ ಗಾಂಧಿಗೂ ಏನು ಸಂಬಂಧ, ಯಾರಾದರೂ ಹೇಳಬಲ್ಲಿರಾ?. ದೇಶವನ್ನು ಜೋಡಿಸಿದವರು ಯಾರು, ವಿಭಜನೆ ಮಾಡಿದವರು ಯಾರು ಎಂಬುದು ಜನತೆಗೆ ಗೊತ್ತಿದೆ. ಇದೀಗ ಕಾಂಗ್ರೆಸ್ ಭಾರತ್ ಜೋಡೋ (Bharat Jodo Yatra) ಯಾತ್ರೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಜನರಿಂದ 2.69 ಕೋಟಿ ಸಂಗ್ರಹ, ಕೇವಲ 29 ಲಕ್ಷ ಬಳಕೆ – ಅಯ್ಯೂಬ್‌ ವಿರುದ್ಧ ಇಡಿ ಚಾರ್ಜ್‌

    ಜಾತಿ ಹೆಸರಿನಲ್ಲಿ ಈ ದೇಶವನ್ನು ಇಬ್ಭಾಗ ಮಾಡಲಾಯಿತು, ಅದೇ ರೀತಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಎಂದು ಒಡೆಯಲು ಮುಂದಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಈ ದೇಶವನ್ನು ಜೋಡಿಸುವ ಕೆಲಸ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ಮಾಡಿಸುವ ಮೂಲಕ ದೇಶವನ್ನು ಜೋಡಣೆ ಮಾಡಿದವರು ವಾಜಪೇಯಿ. ಈಗ ಅದೇ ರಸ್ತೆಯಲ್ಲಿ ರಾಹುಲ್ ಗಾಂಧಿ  (Rahul Gandhi) ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಹಾಗೂ ಉತ್ತರವನ್ನು ಮೋದಿ (Narendra Modi) ಜೋಡಿಸುತ್ತಿದ್ದಾರೆ. ಒಂದು ಕಡೆ ಡಿಕೆಶಿ (D.K Shivakumar), ಇನ್ನೊಂದು ಕಡೆ ಸಿದ್ದು, ಇಬ್ಬರನ್ನೂ ಮುಗಿಸಲು ಖರ್ಗೆ ಬಣ ರೆಡಿಯಾಗಿದೆ. ಖರ್ಗೆಯನ್ನು ಸೋಲಿಸಲು ಪ್ರಯತ್ನಿಸಿದ್ದು ಸಿದ್ದರಾಮಯ್ಯ (Siddaramaiah). ಆದರೆ, ಇದೀಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯನವರನ್ನು ಓಡಿಸಿದರು. ಬಾದಾಮಿ ಜನ ಈ ಬಾರಿ ನಮ್ಮ ಕ್ಷೇತ್ರಕ್ಕೆ ಬರಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಈಗ ಜಾಗ ಹುಡುಕುವ ಯಾತ್ರೆ ಮಾಡಬೇಕು ಎಂದರು. ಇದನ್ನೂ ಓದಿ: 19 ವರ್ಷದ ಯುವತಿ ಅನುಮಾನಸ್ಪದ ಸಾವು- ಅತ್ಯಾಚಾರ, ಕೊಲೆ ಶಂಕೆ

    Live Tv
    [brid partner=56869869 player=32851 video=960834 autoplay=true]

  • ನೆಹರೂ-ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಶೂನ್ಯ: ದಿಗ್ವಿಜಯ್‌ ಸಿಂಗ್

    ನೆಹರೂ-ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಶೂನ್ಯ: ದಿಗ್ವಿಜಯ್‌ ಸಿಂಗ್

    ನವದೆಹಲಿ: ನೆಹರೂ-ಗಾಂಧಿ (Nehru-Gandhi) ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ (Congress party) ಏನೂ ಅಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್ (Digvijiaya Singh) ಹೇಳಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನಕ್ಕೂ ಮುಂಚಿತವಾಗಿಯೇ ಮಾಧ್ಯಮದವರೊಂದಿಗೆ ಮಾತನಾಡಿದ ದಿಗ್ವಿಜಯ್‌ ಸಿಂಗ್ ಅವರು ನೆಹರೂ-ಗಾಂಧಿ ಕುಟುಂಬ ಇಲ್ಲದೇ ಹೋಗಿದ್ದರೆ ಕಾಂಗ್ರೆಸ್ ಶೂನ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಸ್ನಾನದ ವೀಡಿಯೋ ಮಾಡಿದ್ದಾರೆ – ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಠಾಣೆ ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ

    ಕಾಂಗ್ರೆಸ್ ರಾಜ್ಯ ಘಟಕಗಳಲ್ಲಿನ ಇತ್ತೀಚಿನ ಬಿಕ್ಕಟ್ಟು ಕುರಿತಂತೆ ದಿಗ್ವಿಜಯ ಸಿಂಗ್ ಅವರು, ಈ ಪಕ್ಷದಲ್ಲಿ ಹಲವಾರು ಬಾರಿ ವಿಭಜನೆಗಳಾಗಿವೆ. ಆದರೂ ಶೇ.99ರಷ್ಟು ಕಾಂಗ್ರೆಸ್ಸಿಗರು ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ಸೇವೆ ಸಲ್ಲಿಸಿದ ಗಾಂಧಿ ಕುಟುಂಬವನ್ನು ಬೆಂಬಲಿಸಿದ್ದಾರೆ.

    ಕಾಂಗ್ರೆಸ್ ಪಕ್ಷದ ಚಹರೆ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ದಿಗ್ವಿಜಯ ಸಿಂಗ್, ನೆಹರೂ-ಗಾಂಧಿ ಕುಟುಂಬ ಇಲ್ಲದಿದ್ದರೆ ಕಾಂಗ್ರೆಸ್‍ಗೆ ಯಾವುದೇ ಗುರುತಿರುತ್ತಿರಲಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: RSSನ ಕೂದಲನ್ನು ಸಹ ಮುಟ್ಟಲು ಸಾಧ್ಯವಿಲ್ಲ – ಸಿದ್ದರಾಮಯ್ಯಗೆ ಬಿ.ವೈ.ರಾಘವೇಂದ್ರ ತಿರುಗೇಟು

    Live Tv
    [brid partner=56869869 player=32851 video=960834 autoplay=true]

  • ನಾನು ಗಾಂಧಿ, ನೆಹರೂ ಕುಟುಂಬದ ಗುಲಾಮ: ಕಾಂಗ್ರೆಸ್ ಶಾಸಕ

    ನಾನು ಗಾಂಧಿ, ನೆಹರೂ ಕುಟುಂಬದ ಗುಲಾಮ: ಕಾಂಗ್ರೆಸ್ ಶಾಸಕ

    ಜೈಪುರ: ನಾನು ಗಾಂಧಿ-ನೆಹರೂ ಕುಟುಂಬದ ಗುಲಾಮ ಎಂದು ಕಾಂಗ್ರೆಸ್ ಶಾಸಕ ಸಂಯಮ್ ಲೋಧಾ ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ರಾಜಸ್ಥಾನದ ಸಿರೋಹಿ ಶಾಸಕ ಸಂಯಮ್ ಲೋಧಾ, ರಾಜಸ್ಥಾನ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನವದ ವೇಳೆ ಮಾತನಾಡಿದ್ದಾರೆ. ನಾನು ನೆಹರು, ಗಾಂಧಿ ಕುಟುಂಬದ ಗುಲಾಮ. ಕೊನೇ ಉಸಿರು ಇರುವ ತನಕವೂ ನಾವು ನೆಹರು ಹಾಗೂ ಗಾಂಧಿ ಕುಟುಂಬದ ಗುಲಾಮರಾಗಿಯೇ ಉಳಿಯುತ್ತೇವೆ. ಈ ದೇಶವೂ ರೂಪು ಗೊಂಡಿರುವುದೇ ನೆಹರು ಮತ್ತು ಗಾಂಧಿ ಕುಟುಂಬದಿಂದಾಗಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

    ಈ ಹೇಳಿಕೆ ಬಿಜೆಪಿ ಶಾಸಕರಿಂದ ಭಾರೀ ಗದ್ದಲಕ್ಕೆ ಕಾರಣವಾಯಿತು. ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಪ್ರತಿಕ್ರಿಯಿಸಿ, ಇದೊಂದು ಹೊಸ ಸಂಸ್ಕೃತಿ ಹುಟ್ಟಿಕೊಂಡಿದೆ. ಗುಲಾಮಗಿರಿಗೆ ಅಭಿನಂದನೆಗಳು. ಸಮಾಜಕ್ಕೆ ಏನು ಸಂದೇಶ ನೀಡುತ್ತೀರಿ? ಎಂದು ಧ್ವನಿ ಎತ್ತುವ ಮೂಲಕವಾಗಿ ಸಭಾತ್ಯಾಗ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ ಭಾರತ ಜಗತ್ತಿಗೆ ಮಾದರಿ- ಜಾಗತಿಕ ನಾಯಕರು

    ಈ ಲೋಧಾ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರೂ ಆಗಿದ್ದಾರೆ. ಹರಿದೇವ್ ಜೋಶ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತಿದ್ದುಪಡಿ ಮಸೂದೆ ಸಂಬಂಧ ಮಾತನಾಡುವಾಗ ಹೀಗೆ ಹೇಳಿದ್ದಾರೆ.

    ಮಾರ್ಚ್ 15 ರಂದು ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಮಾರ್ಷಲ್‍ಗಳ ಸಹಾಯದಿಂದ ಲೋಧಾ ಅವರನ್ನು ರಾಜಸ್ಥಾನ ವಿಧಾನಸಭೆಯಿಂದ ಹೊರಹಾಕಲಾಗಿತ್ತು. ಇದೀಗ ಈ ಹೇಳಿಕೆಯಿಂದ ಮತ್ತೆ  ಸುದ್ದಿಯಾಗಿದೆ.

  • ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಬೆಂಗಳೂರು: ಗಾಂಧೀಜಿ ಅಹಿಂಸಾ ಮಾರ್ಗದ ಬಗ್ಗೆ ವ್ಯಂಗ್ಯವಾಡಿದ್ದ ಬಾಲಿವುಡ್‌ ನಟಿ ಕಂಗನಾ ರಣಾವತ್‌ ವಿರುದ್ಧ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಕಿಡಿಕಾರಿದ್ದಾರೆ. ಬಟ್ಟೆ ಬಿಚ್ಚಿ ಓಡಾಡುವವರಿಗೆ ಗಾಂಧಿ ಮೌಲ್ಯದ ಬಗ್ಗೆ ಏನು ಗೊತ್ತು ಎಂದು ತಿರುಗೇಟು ನೀಡಿದರು.

    ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ರಮೇಶ್‌ ಕುಮಾರ್‌, ಹೊಟ್ಟೆಪಾಡಿಗಾಗಿ ಬಟ್ಟೆಬಿಚ್ಚಿ ತಿರುಗುವವರು ಅವರು. ಅಂಥವರ ಬಗ್ಗೆ ಇಲ್ಲಿ ಮಾತನಾಡಿದರೆ ಅವರೇ ದೊಡ್ಡವರಾಗುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

    ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದ ಮಾಜಿ ಸ್ಪೀಕರ್‌, ಈ ದೇಶಕ್ಕೆ ಸ್ವಾತಂತ್ರ್ಯ ಯಾರೂ ಗಿಫ್ಟ್ ಕೊಡ್ಲಿಲ್ಲ. ಏನು ಮಾಡಿದೀರ ಅಂತ ಕೇಳ್ತೀರಲ್ಲ, ನೀವು ಹುಟ್ಟಿದ್ರಾ ಆಗ? ಬೇರೆಯವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿದ್ರು, ನೀವ್ಯಾಕೆ ಇರಲಿಲ್ಲ? ಆವತ್ತಿನ ಕಾಂಗ್ರೆಸ್‌ಗೂ ಇವತ್ತಿನ ಕಾಂಗ್ರೆಸ್‌ಗೆ ಸಂಬಂಧ ಇಲ್ಲ, ಒಪ್ಕೋತೀವಿ. ಆದರೆ ಅದರಿಂದಲೇ ಬಂದವರಲ್ವಾ ನಾವು? ಕಾಂಗ್ರೆಸ್ ಏನೂ ಮಾಡಿಲ್ಲ ಅಂತೀರ, ಹೆಡ್ಗೇವಾರ್ ಅವರೇ ನೀವು ದೇಶದ ಶಾಂತಿ ಭಂಗ ಮಾಡಿದವರು. ನಿಮ್ಮ ಗುರು ಮುಸಲೋನಿ. 1925ರಲ್ಲಿ ಹೆಡ್ಗೆವಾರ್ ಆರ್‌ಎಸ್‌ಎಸ್‌ ಸ್ಥಾಪಿಸಿದ್ದರು. ಇಡೀ ದೇಶ ಸ್ವಾತಂತ್ರ್ಯಕ್ಕೆ ಹೋರಾಡ್ತಿದ್ರೆ ಇವರು ಆರ್‌ಎಸ್‌ಎಸ್‌ ಸ್ಥಾಪಿಸಿ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬಿದರು. ಆರ್‌ಎಸ್‌ಎಸ್‌ ಘೋಷಣೆ 2023 ರೊಳಗೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾತು ತಪ್ಪಿದ ಸಿಎಂ – ಝೀರೋ ಟ್ರಾಫಿಕ್‍ನಲ್ಲಿ ಬೊಮ್ಮಾಯಿ ಸಂಚಾರ

    ಈಗ ದೇಶಭಕ್ತಿಯನ್ನು ನಾವು ಬಿಜೆಪಿಯಿಂದ ಕಲಿಯಬೇಕಾ? ಗಾಂಧಿ ಹಾರ್ಟ್ ಅಟ್ಯಾಕ್, ಆಕ್ಸಿಡೆಂಟ್, ಕ್ಯಾನ್ಸರ್‌ನಿಂದ ಸತ್ತಿಲ್ಲ. ಗಾಂಧಿ ದೊಡ್ಡ ರಾಮಭಕ್ತ. ಈ ದೇಶದಲ್ಲಿ ಗಾಂಧಿಗಿಂತ ದೊಡ್ಡ ರಾಮಭಕ್ತ ಇಲ್ಲ. ಅಂಥ ರಾಮಭಕ್ತನನ್ನೇ ಕೊಂದರು. ಭಕ್ತನ ಹಾಗೆ ನಟಿಸಿ ಬಗ್ಗಿ ನಮಸ್ಕರಿಸಿ ಬಚ್ಚಿಟ್ಕೊಂಡಿದ್ದ ಪಿಸ್ತೂಲಿನಿಂದ ಗೋಡ್ಸೆ ಗಾಂಧೀನ ಕೊಂದರು. ನಲವತ್ತು ಕೆ.ಜಿ. ತೂಕದ ದೇಹ ಗಾಂಧಿಯವರದ್ದು. ಅಂಥ ಗೋಡ್ಸೆಗೆ ಇವತ್ತು ದೇವಸ್ಥಾನ ಕಟ್ಟುತ್ತಾರಂತೆ. ಯಾಕೆ ಗಾಂಧಿಯನ್ನು ಕೊಂದ್ರಿ? ಅದರಿಂದ ನಿಮಗೆ ಏನ್ ಲಾಭ ಆಯ್ತು ಎಂದು ಖಾರವಾಗಿ ಪ್ರಶ್ನಿಸಿದರು.

  • ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ

    ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ

    ಮೈಸೂರು: ಮೈಸೂರು-ಕೊಡಗು ವ್ಯಾಪ್ತಿಯ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮರುನಾಮಕರಣಕ್ಕೆ ಪ್ರಸ್ತಾವನೆ ಹಿನ್ನೆಲೆಯಲ್ಲಿ ಫಿಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರಿಡಿ ಎಂದು ಸಂಸದ ಪ್ರತಾಪ್ ಸಿಂಹ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.

    ರಾಜ್ಯ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಗೆ ಮನವಿ ಪತ್ರ ನೀಡಿದ ಪ್ರತಾಪ್ ಸಿಂಹ, ರಾಷ್ಟ್ರೀಯ ಉದ್ಯಾನವನಕ್ಕೆ ಭಾರತೀಯ ಸೇನೆಯ ಮೊದಲ ಫೀಲ್ಡ್ ಮಾರ್ಷಲ್ ಜನರಲ್ ಕೆ. ಎಂ ಕಾರ್ಯಪ್ಪ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

    ಉದ್ಯಾನವನ ಮೈಸೂರು ಕೊಡಗು ಭಾಗಕ್ಕೆ ಸೇರಿದೆ. ಈ ಬಗ್ಗೆ ಈಗಾಗಲೇ ಆನ್‍ಲೈನ್ ಕ್ಯಾಂಪೇನ್ ಆರಂಭವಾಗಿದ್ದು, ಕೊಡಗಿನ ಜನಸಂಖ್ಯೆ ಬಹಳ ಕಡಮೆ ಇದ್ದರು, ಅದರಲ್ಲಿ ಬಹುತೇಕರು ಭಾರತೀಯ ಸೇನೆಯ ಸೇವೆಯಲ್ಲಿದ್ದಾರೆ. ಅವರಿಗೆ ಗೌರವ ಸಮರ್ಪಿಸಲು ಕಾರ್ಯಪ್ಪ ಅವರ ಹೆಸರು ಬಹಳ ಸೂಕ್ತ. ಅವರ ನಿಸ್ವಾರ್ಥ ಸೇವೆಗೆ ಗೌರವ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ದೇಶದ ಹಲವು ಭಾಗದ ರಾಷ್ಟ್ರೀಯ ಉದ್ಯಾನವನಗಳಿಗೆ ನೆಹರು, ಗಾಂಧಿ ಕುಟುಂಬದ ಹೆಸರಿದೆ. ಇದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಹೆಸರು ಸೂಕ್ತವಲ್ಲ. ಕೊಡಗಿನ ಜನರು ಭಾರತೀಯ ಸೇನೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗೌರವಿಸಿ ಅವರ ಭಾವನೆಗಳಿಗೆ ಪೂರಕವಾಗಿ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರು ಇಡಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ

  • ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್- ಸಂಸದೀಯ ಸಭೆಗೆ ನಿಷೇಧ

    ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್- ಸಂಸದೀಯ ಸಭೆಗೆ ನಿಷೇಧ

    ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್ ನೀಡಿದೆ. ಹೆಗ್ಡೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದ್ದು ನಾಳಿನ ಸಂಸದೀಯ ಸಭೆಗೆ ಆಗಮಿಸದಂತೆ ತಾಕೀತು ಮಾಡಿದೆ.

    ಇಂದು ಬೆಳಗ್ಗೆ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಹೈಕಮಾಂಡ್ ಮಾಧ್ಯಮಗಳ ಮೂಲಕ ಬೇಷರತ್ ಕ್ಷಮೆ ಕೇಳಲು ಸೂಚಿಸಿತ್ತು. ಅನಂತ ಕುಮಾರ್ ಕ್ಷಮೆಯಾಚಿಸದ ಹಿನ್ನೆಲೆ ಶೋಕಾಸ್ ನೋಟಿಸ್ ನೀಡಿದ್ದು, ಬಲು ಅಪರೂಪ ಎನ್ನುವಂತೆ ಸಂಸದೀಯ ಸಭೆಗೆ ನಿಷೇಧ ಹೇರಿದೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತ್ ಕುಮಾರ್, ಬ್ರಿಟಿಷರ ಬೆಂಬಲದಿಂದ ನಡೆದ ಪೂರ್ವ ನಿಯೋಜಿತ ನಾಟಕದಲ್ಲಿ ಗಾಂಧಿ ಪಾತ್ರಧಾರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈ ನಾಯಕರನ್ನು ಪೊಲೀಸರು ಎಂದು ಮುಟ್ಟಿಲ್ಲ. ಬ್ರಿಟಿಷರ ಅನುಮತಿಯಿಂದ ಸತ್ಯಾಗ್ರಹ, ಪ್ರತಿಭಟನೆ ನಾಟಕ ನಡೆಸಲಾಗಿತ್ತು. ಇದು ನಿಜವಾದ ಸ್ವಾತಂತ್ರ್ಯ ಹೋರಾಟವೇ ಅಲ್ಲ, ಅನುಕೂಲ ಸ್ವಾತಂತ್ರ್ಯ ಚಳುವಳಿ ಎಂದು ಗಾಂಧಿಯನ್ನು ಟೀಕಿಸಿದ್ದರು.

    ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧಿ ಅವರು ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹವೇ ಕಾರಣ ಎಂದು ಬಿಂಬಿಸಲಾಗಿದೆ. ಆದರೆ ಇದು ನಿಜವಲ್ಲ ಸತ್ಯಾಗ್ರಹದಿಂದ ಬ್ರಿಟಿಷರು ಭಾರತವನ್ನು ತೊರೆಯಲಿಲ್ಲ. ಭಾರತದ ಇತಿಹಾಸ ಓದಿದರೆ ನನ್ನ ರಕ್ತಕುದಿಯುತ್ತದೆ. ಇಂಥವರನ್ನು ಹೇಗೆ ಮಹಾತ್ಮ ಎಂದು ಕರೆಯಲಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ಮಹಾತ್ಮಗಾಂಧಿ ವಿರುದ್ಧ ಅನಂತಕುಮಾರ್ ವಾಗ್ದಾಳಿ ನಡೆಸಿದ್ದರು.

    ಅನಂತಕುಮಾರ್ ಹೆಗ್ಡೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ತೀವ್ರ ಟೀಕೆಗೆ ಗ್ರಾಸವಾಗಿತ್ತು. ಸ್ವಪಕ್ಷಿಯರಿಂದಲೇ ಅಸಮಾಧಾನಕ್ಕೆ ಕಾರಣವಾಗಿದ್ದ ಈ ಹೇಳಿಕೆ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ತಂದಿಟ್ಟಿತ್ತು.