Tag: ಗಾಂಜಾ ಗಿಡ

  • ಮನೆ ಮುಂದೆಯೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಮಹಿಳೆ

    ಮನೆ ಮುಂದೆಯೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಮಹಿಳೆ

    ಚಿಕ್ಕಬಳ್ಳಾಪುರ: ಅಕ್ರಮವಾಗಿ ಗಾಂಜಾ (Ganja) ಗಿಡಗಳನ್ನ ಬೆಳೆದಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಮನೆ ಮಾಲೀಕಳನ್ನ ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಆಸ್ಪತ್ರೆಯ (Government Hospital) ಮುಂಭಾಗದ ಪ್ರಮೀಳಮ್ಮ ಎಂಬಾಕೆ ಮನೆಯ ಕಾಂಪೌಂಡ್‌ನಲ್ಲೇ ಅಕ್ರಮವಾಗಿ ಗಾಂಜಾ ಗಿಡಗಳನ್ನ ಬೆಳೆಸಿದ್ದಳು. ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಉಪ ವಿಭಾಗದ ಎಸಿಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ದಾಳಿ ನಡೆಸಿ ಬರೋಬ್ಬರಿ 66 ಸಾವಿರ ರೂ. ಮೌಲ್ಯದ 11.5 ಕೆಜಿಯಷ್ಟು ಹಸಿ ಗಾಂಜಾ ಗಿಡಗಳನ್ನ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಅವಕಾಶಕ್ಕಾಗಿ ಯಶ್ ಈ ನಟನ ಬಳಿ ಕಣ್ಣೀರಿಟ್ಟಿದ್ದರಂತೆ : ವಿಡಿಯೋ ವೈರಲ್

    ಮನೆ ಮಾಲೀಕಳಾದ ಪ್ರಮೀಳಮ್ಮನನ್ನ ಬಂಧಿಸಿದ್ದು, ಆಕೆ ವಿರುದ್ಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಂತ್ಯಕ್ರಿಯೆ ವೇಳೆ ಬದುಕಿದ್ದ ಮಗು ಬಳಿಕ ಸಾವು – ಆಸ್ಪತ್ರೆಯಲ್ಲಿ ಸಾವನ್ನಪ್ಪಿರಲಿಲ್ಲ: ಕಿಮ್ಸ್ ಸ್ಪಷ್ಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 1 ಕ್ವಿಂಟಾಲ್ ಒಣ ಗಾಂಜಾ ಗಿಡ ನಾಶ – 13 ವರ್ಷದ ದಾಸ್ತಾನಿಗೆ ಅಬಕಾರಿ ಇಲಾಖೆ ಮುಕ್ತಿ

    1 ಕ್ವಿಂಟಾಲ್ ಒಣ ಗಾಂಜಾ ಗಿಡ ನಾಶ – 13 ವರ್ಷದ ದಾಸ್ತಾನಿಗೆ ಅಬಕಾರಿ ಇಲಾಖೆ ಮುಕ್ತಿ

    ಶಿವಮೊಗ್ಗ: ಅಬಕಾರಿ ಇಲಾಖೆಯಲ್ಲಿ ಕಳೆದ 13 ವರ್ಷದಿಂದ ದಾಸ್ತಾನು ಮಾಡಲಾಗಿದ್ದ ಒಂದು ಕ್ವಿಂಟಾಲ್‍ಗೂ ಅಧಿಕ ಒಣ ಗಾಂಜಾ ಗಿಡಗಳನ್ನು ಇಲಾಖೆ ನಾಶಪಡಿಸಿದೆ.

    ಮಾದಕ ವಸ್ತು ಸಾಮಾಗ್ರಿಗಳ ವಿಲೇವಾರಿ ಸಮಿತಿ ಶಿಫಾರಸು ಅನ್ವಯ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಶುಶೃತ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಗಾಂಜಾ ಗಿಡಗಳನ್ನು ನಾಶಪಡಿಸಲಾಯಿತು.

    ಶಿವಮೊಗ್ಗ ಅಬಕಾರಿ ಇಲಾಖೆಯಲ್ಲಿ 2007ರಿಂದ ಇಲ್ಲಿಯವರೆಗೆ ಒಟ್ಟು 56 ಪ್ರಕರಣಗಳಲ್ಲಿ 1,07,835 ಕೆ.ಜಿ ತೂಕದ 11,358 ಗಿಡಗಳನ್ನು ವಶಪಡಿಸಿಕೊಂಡು ಇಲಾಖೆಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು.

    ಮಾದಕ ಸಾಮಾಗ್ರಿಗಳ ವಿಲೇವಾರಿ ಸಮಿತಿ ನಿರ್ಧಾರದಂತೆ ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಜಂಟಿ ಆಯುಕ್ತರಾದ ಶೈಲಜಾ ಎ.ಕೋಟೆ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲೆಯ ಅಬಕಾರಿ ಉಪ ಆಯಕ್ತ ವೈ.ಆರ್ ಮೋಹನ್ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ನಾಶಪಡಿಸಲಾಯಿತು.

  • ಮನೆ ಹಿತ್ತಲಲ್ಲಿ 12 ಕೆ.ಜಿ ಗಾಂಜಾ ಗಿಡ ಬೆಳೆದ ಆರೋಪಿ ಅರೆಸ್ಟ್

    ಮನೆ ಹಿತ್ತಲಲ್ಲಿ 12 ಕೆ.ಜಿ ಗಾಂಜಾ ಗಿಡ ಬೆಳೆದ ಆರೋಪಿ ಅರೆಸ್ಟ್

    ರಾಯಚೂರು: ಗಾಂಜಾ ಬೆಳೆ ಬೆಳೆಯುವುದು ನಿಷೇಧವಾಗಿದ್ದರೂ ರಾಯಚೂರಿನ ಕೆಲ ತಾಲೂಕುಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆ ಹಿತ್ತಲಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

    ಲಿಂಗಸಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಗಾಂಜಾ ಬೆಳೆಯುತ್ತಿರುವುದನ್ನ ಪತ್ತೆ ಮಾಡಿರುವ ಪೊಲೀಸರು, ಸೋಮವಾರ ರಾತ್ರಿ ವೇಳೆ ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ. ಯಾರಿಗೂ ತಿಳಿಯದಂತೆ ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಗೋವಿಂದಪ್ಪನನ್ನ ಲಿಂಗಸುಗೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಪೊಲೀಸರ ದಾಳಿ ಬಗ್ಗೆ ತಿಳಿದ ಇನ್ನೋರ್ವ ಆರೋಪಿ ಗುಂಡಪ್ಪ ಪರಾರಿಯಾಗಿದ್ದಾನೆ.

    ದಾಳಿ ವೇಳೆ 20 ಸಾವಿರ ರೂಪಾಯಿ ಮೌಲ್ಯದ 12 ಕೆ.ಜಿ ಗಾಂಜಾ ಗಿಡಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಎಲ್ಲೆ ಗಾಂಜಾ ಬೆಳೆದಿದ್ದಾರೆ ಎಂಬ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.