Tag: ಗವಿ ಗಂಗಾಧರೇಶ್ವರ

  • ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಲಿದೆ ಸಂಕ್ರಾಂತಿ ಸೂರ್ಯ ರಶ್ಮಿ..!

    ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಲಿದೆ ಸಂಕ್ರಾಂತಿ ಸೂರ್ಯ ರಶ್ಮಿ..!

    – ಉತ್ತರಾಯಣಕ್ಕೆ ಪಥ ಬದಲಾಯಿಸುವ ಸೂರ್ಯ
    – ವಿಸ್ಮಯ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರು ಕಾತುರ

    ಬೆಂಗಳೂರು: 2023 ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು (Sankranti Festival) ಬಸವನಗುಡಿಯ ಗವಿಗಂಗಾಧರೇಶ್ವರನನ್ನ (Gavi Gangadhareshwara) ಸೂರ್ಯ ರಶ್ಮಿ ಸ್ಪರ್ಶಿಸಲಿದೆ.

    ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಾಯಿಸಲಿದ್ದು, ಈ ವೇಳೆ 30 ರಿಂದ 40 ಸೆಕೆಂಡ್ ಗಳ ಕಾಲ ಗವಿಗಂಗಾಧರೇಶ್ವರರ ಮೇಲೆ ಸೂರ್ಯನ ಕಿರಣಗಳು ಬೀಳಲಿವೆ. ಸಂಜೆ 5:17 ರಿಂದ 5:37ರ ನಡುವೆ ಸೂರ್ಯನ ಕಿರಣಗಳು ಗವಿ ಗಂಗಾಧರ ಸ್ವಾಮಿಯನ್ನು ಸ್ಪರ್ಶಿಸಲಿದೆ. ಪ್ರತಿ ವರ್ಷ ಸಂಕ್ರಾಂತಿಯಂದು ಪ್ರಕೃತಿಯ ಈ ವಿಸ್ಮಯದ ವೀಕ್ಷಣೆಗೆ ಭಕ್ತರು ಕಾತುರರಾಗಿದ್ದಾರೆ.

    ಮೊದಲು ನಂದಿಯನ್ನು ಹಾದುಹೋಗುವ ಸೂರ್ಯನ ಕಿರಣಗಳು ನಂತರ ಪಾಣಿ ಪೀಠದ ಮೂಲಕ ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ವಿಸ್ಮಯ ಕಣ್ತುಂಬಿಸಿಕೊಳ್ಳಲು ದೇವಸ್ಥಾನದ ಹೊರ ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್‌ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತೆ. ಇನ್ನೂ ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ (Devotees) ಟೆಂಟ್, ಶಾಮಿಯಾನದ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2020ಕ್ಕಿಂತಲೂ ಘೋರವಾಗಲಿದೆಯಂತೆ 2021ನೇ ವರ್ಷ..!

    2020ಕ್ಕಿಂತಲೂ ಘೋರವಾಗಲಿದೆಯಂತೆ 2021ನೇ ವರ್ಷ..!

    – ಭಾರೀ ತೊಂದರೆಯ ಮುನ್ಸೂಚನೆ ಎಂದು ಜ್ಯೋತಿಷಿಗಳು

    ಬೆಂಗಳೂರು: ವರ್ಷದ ಆರಂಭದಲ್ಲಿಯೇ ಅಪಶಕುನದ ಮುನ್ಸೂಚನೆ ಕೇಳಿ ಬಂದಿದೆ. ಇಡೀ ಜಗತ್ತು ಯುದ್ಧದ ಭೀಕರತೆಯಿಂದ ಅಲ್ಲೋಲ ಕಲ್ಲೋಲವಾಗಬಹುದು. ಕೊರೊನಾದಿಂದ ಹೇಗೆ ಸಾವು-ನೋವುಗಳು ಸಂಭವಿಸಿತೋ ಅದೇ ರೀತಿ ಈ ಬಾರಿಯೂ ಸಾವಿನ ಮಹಾಯಜ್ಞ ಸಂಭವಿಸಬಹುದು ಅಂತ ವೈದಿಕರೇ ಭವಿಷ್ಯ ನುಡಿದಿದ್ದಾರೆ.

    ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನ ಬದಲಾವಣೆ ಮಾಡುವ ದಿನ. ಪ್ರತೀವರ್ಷ ಮಕರಸಂಕ್ರಮಣ ದಿನದಂದು ಬೆಂಗಳೂರಿನ ಗವಿಗಂಗಾದರೇಶ್ವರ ದೇವಸ್ಥಾನದ ಶಿವಲಿಂಗವನ್ನ ಸೂರ್ಯ ಕಿರಣಗಳು ಸ್ಪರ್ಶಿಸುತ್ತಿತ್ತು. ನಾಲ್ಕೈದು ನಿಮಿಷಗಳ ಕಾಲ ಸಂಭವಿಸೋ ಈ ಸೂರ್ಯ ಚಮತ್ಕಾರನ ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದರು. ಈ ವರ್ಷವೂ ಭಕ್ತಗಣ, ದೇವಾಲಯದಲ್ಲಿ ಅರ್ಚಕರು ಸೂರ್ಯನನ್ನು ಎದುರು ನೋಡ್ತಿದ್ರು. ಆದರೆ ಈ ಬಾರಿ ಸೂರ್ಯ ರಶ್ಮಿ ಸ್ಪರ್ಶಿಸಲಿಲ್ಲ. ಅಗೋಚರವಾಗಿಯೇ ಸೂರ್ಯ ತನ್ನ ಪಥ ಬದಲಿಸಿದ.

    ಸೂರ್ಯ ಗೋಚರಿಸದೇ, ಕಿರಣಗಳನ್ನು ಶಿವಲಿಂಗಕ್ಕೆ ಸ್ಪರ್ಶಿಸದೇ ಪಥ ಬದಲಿಸಿದ್ದು ಮಹಾ ಗಂಡಾಂತರದ ಮುನ್ಸೂಚನೆ ಅಂತಾ ಹೇಳಲಾಗ್ತಿದೆ. 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸದೆ ಪಥ ಬದಲಿಸಿಕೊಂಡಿದ್ದಾನೆ. ಅಗೋಚರವಾಗಿ ಈಶ್ವರನಿಗೆ ಪೂಜೆ ಸಲ್ಲಿಸಿ ಭಾಸ್ಕರ ಹೊರಟಿದ್ದಾನೆ ಅಂತ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

    ಇದು ಮತ್ತೊಂದು ಆತಂಕದ ಅಲೆ ಎಬ್ಬಿಸಿದೆ. 2021ರಲ್ಲಿಯೂ ಕೂಡ 2020ರಲ್ಲಿ ನಡೆದಂತೆ ಸಾವು-ನೋವು ಸಂಭವಿಸಲಿದ್ಯಾ..? ಜಗತ್ತೇ ಅಲ್ಲೋಲ ಕಲ್ಲೋಲವಾಗಲಿದೆಯಾ..? ಸೋಮಸುಂದರ್ ದೀಕ್ಷಿತ್ ಗುರೂಜಿ ಹೇಳಿದಂತೆ ಯುದ್ಧಕಾಂಡದಿಂದ ರಕ್ತಪಾತವೇ ನಡೆದೋಗುತ್ತಾ ಅನ್ನೋ ಹಲವು ಭಯಗಳು ಕಾಡ್ತಿವೆ. ಈ ಗಂಡಾಂತರ ನಿವಾರಣೆಗೆ ಅಂತಿಂಥ ಯಾಗವಲ್ಲ, ಮಹಾರುದ್ರಯಾಗ ನಡೆಸೋದು ಸೂಕ್ತ ಅಂತಾನೂ ಎಚ್ಚರಿಸಿದ್ದಾರೆ.

    ಪ್ರಕೃತಿಯಲ್ಲಾದ ಸಣ್ಣ ಬದಲಾವಣೆ, ಸೂರ್ಯನ ಕಿರಣ ಈಶ್ವರನ ಮೇಲೆ ಬೀಳದಂತೆ ಮಾಡಿದೆ. ಹೀಗಾಗಿ ಈ ಘಟನೆಯಿಂದ ಈ ವರ್ಷವೂ ಮತ್ತೇನಾದ್ರೂ ಅನಾಹುತಗಳು ಆಗಿಬಿಡ್ತಾವಾ ಎಂಬ ಭಯ ಕಾಡತೊಡಗಿದೆ. ಕಳೆದ ವರ್ಷ ವಿಶ್ವವೇ ಕೊರೋನಾ ಹೊಡೆತಕ್ಕೆ ತತ್ತರಿಸಿತ್ತು. ಈಗ ಲಸಿಕೆ ಸಿಕ್ಕಿದೆ. ಎಲ್ಲಾ ಮುಗೀತು ಅನ್ನುವಷ್ಟರಲ್ಲಿ ಈ ಗಂಡಾಂತರ ಮುನ್ಸೂಚನೆ ಮತ್ತಷ್ಟು ದಿಗ್ಭ್ರಾಂತಗೊಳಿಸಿದೆ.

  • ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

    ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

    ಶವರಿಮಲೆ/ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಶವರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವನ್ನು ಪಡೆದ ಭಕ್ತರು ಪುನೀತರಾಗಿದ್ದಾರೆ. ಈ ಬಾರಿ ಮಕರ ಜ್ಯೋತಿ ಭಾನುವಾರ ಸಂಜೆ 6.44ರ ಸುಮಾರಿಗೆ ಕಾಣಿಸಿಕೊಂಡಿತು.

    ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡರು. ಈ ವಿಶೇಷವು ಪ್ರತಿ ವರ್ಷ ಜನವರಿ 14 ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ಜ್ಯೋತಿ ಕಾಣಿಸಿಕೊಂಡ ತಕ್ಷಣ ನೆರೆದಿದ್ದ ಭಕ್ತ ಸಮೂಹ ಗಟ್ಟಿ ಸ್ವರದಲ್ಲಿ ಅಯ್ಯಪ್ಪ ಸ್ವಾಮಿಯ ಹೆಸರನ್ನು ಹೇಳಿ ಜಯಘೋಷ ಮಾಡಿದರು.

    ದೇಶದ ವಿವಿಧ ಭಾಗಗಳಿಂದ ಜಾತಿ, ಧರ್ಮ ಬೇದಭಾವವಿಲ್ಲದೆ ಆಗಮಿಸುವ ಭಕ್ತರು, ಅಯ್ಯಪ್ಪ ಸನ್ನಿಧಾನದಲ್ಲಿ ಜ್ಯೋತಿಯ ದರ್ಶನ ಪಡೆಯಲು ಎರಡು ಮೂರು ದಿನಗಳ ಮುಂಚೆಯೇ ಆಗಮಿಸುತ್ತಾರೆ.

    ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಈ ವೇಳೆ ಪೊನ್ನಂಬಲ ಬೆಟ್ಟದಲ್ಲಿ ಜ್ಯೋತಿ ಭಕ್ತರಿಗೆ ದರ್ಶನವಾಗುತ್ತದೆ.

    ಗಂಗಾಧರನಿಗೆ ಭಾಸ್ಕರನ ಪೂಜೆ:
    ಗವಿ ಗಂಗಾಧರ ನ ಸನ್ನಿಧಿಯಲ್ಲಿ ಸಂಜೆ 5.15 ರಿಂದ 5.30ರ ತನಕ ಭಾಸ್ಕರ ಮತ್ತು ಶಿವನ ಮುಖಾಮುಖಿಯಾಗಿದೆ. ಆದರೆ ಸಾಮಾನ್ಯವಾಗಿ ಮುವತ್ತು ಸೆಕೆಂಡ್ ಗಳ ಕಾಲ ಶಿವನನ್ನು ಆವರಿಸಿ ಪಥ ಬದಲಿಸುವ ಸೂರ್ಯ ಇಂದು ಬರೋಬ್ಬರಿ ಒಂದು ನಿಮಿಷ ಏಳು ಸೆಕೆಂಡ್ ಗಳ ಕಾಲ ಗಂಗಾಧರನನ್ನು ಬೆಳಕಿನಿಂದ ತೋಯಿಸಿ ಬಿಟ್ಟಿದ್ದ. ಈ ಘಟನೆಗೆ ಮುಖ್ಯ ಅರ್ಚಕರೇ ಅಚ್ಚರಿ ವ್ಯಕ್ತ ಪಡಿಸಿದ್ದು ಇದು ಸಾಮಾನ್ಯ ಪೂಜೆಯಲ್ಲ, ಮುಂದೆ ಬರುವ ರಕ್ತ ಚಂದನ ಎನ್ನುವ ಭೀಕರ ಗ್ರಹಣದ ಅಪಾಯವನ್ನು ಈ ಸೂರ್ಯನ ಪೂಜೆ ತಡೆಯಲಿದೆ ಎಂದು ವಿಶ್ಲೇಷಣೆ ನೀಡಿದ್ದಾರೆ.