Tag: ಗಲ್ಲಿ ಕ್ರಿಕೆಟ್

  • ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್

    ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್

    ದುಬೈ: ಐಪಿಎಲ್‍ಗಾಗಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿದಿರುವ ಧೋನಿ ದುಬೈ ಕ್ರೀಡಾಂಗಣದಲ್ಲಿ ಸಿಕ್ಸ್ ಗಳ ಮಳೆ ಸುರಿಸಿದ್ದಾರೆ. ಬಳಿಕ ಸಿಕ್ಸ್ ಹೊಡೆದ ಬಾಲ್‍ಗಳು ಕಾಣೆಯಾದಾಗ ತಾವೇ ಹುಡುಕಿ ತಂದು ಗಲ್ಲಿ ಕ್ರಿಕೆಟ್ ನೆನಪಿಸಿದ್ದಾರೆ.

    ಐಪಿಎಲ್ ಆರಂಭಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಈ ನಡುವೆ ಎಲ್ಲ ತಂಡಗಳು ಕೂಡ ದುಬೈನತ್ತ ಪ್ರಯಾಣ ಬೆಳೆಸಿವೆ. ಅದರಂತೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ದುಬೈನಲ್ಲಿ ಬೀಡುಬಿಟ್ಟಿದ್ದು, ಭರ್ಜರಿ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ವೇಳೆ ಧೋನಿ ಸಿಕ್ಸ್ ಮೇಲೆ ಸಿಕ್ಸ್ ಹೊಡೆದು ಮೈದಾನದಿಂದ ಹೊರ ಹೋದ ಬಾಲ್‍ಗಳು ಕಾಣೆಯಾಗುವಂತೆ ಮಾಡಿದ್ದಾರೆ. ಬಳಿಕ ಸ್ವತಃ ತಾವೇ ಪೊದೆಗಳಲ್ಲಿ ಸಿಲುಕೊಂಡಿದ್ದ ಬಾಲ್‍ಗಳನ್ನು ಹೆಕ್ಕಿತಂದಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬರು ಕೂಡ ತಮ್ಮ ಗಲ್ಲಿಕ್ರಿಕೆಟ್ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಸೆಣಸಾಟ

    ಧೋನಿ ಸಿಕ್ಸ್ ಸಿಡಿಸಿ ಬಾಲ್‍ಗಳನ್ನು ಪೊದೆಗಳಲ್ಲಿ ಬ್ಯಾಟ್‍ನಿಂದ ಹುಡುಕುತ್ತಿರುವ ವೀಡಿಯೋವನ್ನು ಸಿಎಸ್‍ಕೆ ಫ್ರಾಂಚೈಸ್ ಪೋಸ್ಟ್ ಮಾಡಿ ಧೋನಿಯ ಸಿಕ್ಸರ್‍ಗಳಿಗೆ ಮತ್ತು ಧೋನಿಯ ಪ್ರೀತಿಗೆ ಗಡಿರೇಖೆಗಳಿಲ್ಲ ಎಂದು ಅಡಿಬರಹ ನೀಡಿದ್ದಾರೆ. ಇದನ್ನು ನೋಡಿದ ಮಾಹಿ ಅಭಿಮಾನಿಗಳು ಖುಷಿಯಾಗಿದ್ದಾರೆ.

    ದುಬೈನಲ್ಲಿ ನಡೆಯುವ ಐಪಿಎಲ್‍ನ ಸೆಕೆಂಡ್ ಇನ್ನಿಂಗ್ಸ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು

  • ಗಲ್ಲಿ ಕ್ರಿಕೆಟ್‍ಗೆ ಮೂರನೇ ಅಂಪೈರ್ ಆಗಿ ತೀರ್ಪು ಕೊಟ್ಟ ಐಸಿಸಿ!

    ಗಲ್ಲಿ ಕ್ರಿಕೆಟ್‍ಗೆ ಮೂರನೇ ಅಂಪೈರ್ ಆಗಿ ತೀರ್ಪು ಕೊಟ್ಟ ಐಸಿಸಿ!

    ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಗಲ್ಲಿ ಕ್ರಿಕೆಟ್ ಒಂದಕ್ಕೆ ಮೂರನೇ ಅಂಪೈರ್ ಆಗಿ ತೀರ್ಪು ನೀಡಿದೆ.

    ಸುದ್ದಿ ಓದಿ ಕನ್‍ಫ್ಯೂಸ್ ಆಗಬೇಡಿ. ಕ್ರಿಕೆಟ್ ಅಭಿಮಾನಿಯೊಬ್ಬರು ಗಲ್ಲಿ ಕ್ರಿಕೆಟ್ ಒಂದರ ವಿಡಿಯೋ ಒಂದನ್ನು ಕಳುಹಿಸಿ ತೀರ್ಪು ಪ್ರಕಟಿಸಿ ಎಂದು ಕೇಳಿದ್ದರು. ಈ ವಿಡಿಯೋ ವನ್ನು ಐಸಿಸಿ ಟ್ವೀಟ್ ಮಾಡಿ ಔಟ್ ಎಂದು ಹೇಳಿದೆ.

    ಟ್ವಿಟ್ಟರ್ ನಲ್ಲಿ ಹಂಝಾ ಎಂಬವರು, ಗಲ್ಲಿ ಕ್ರಿಕೆಟ್‍ನಲ್ಲಿ ಬ್ಯಾಟ್ಸ್ ಮ್ಯಾನ್ ಬಾಲ್‍ನನ್ನು ಹೊಡೆದಿದ್ದಾನೆ. ಆದರೆ ಬಾಲ್ ಸ್ವಿಂಗ್ ಆಗಿ ಬ್ಯಾಟ್ಸ್ ಮ್ಯಾನ್ ಕಾಲಿನಡಿ ಹೋಗಿ ವಿಕೆಟ್‍ಗೆ ತಾಗಿದೆ. ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿ ಇದು ಔಟಾ ಅಥವಾ ನಾಟೌಟಾ ಎಂದು ಕೇಳಿದ್ದಾರೆ.

    ಇದಕ್ಕೆ ಐಸಿಸಿ, ಅಭಿಮಾನಿ ಹಂಝಾ ಅವರು ಈ ವಿಡಿಯೋವನ್ನು ಬೆಳಗ್ಗೆ ನಮಗೆ ಕಳುಹಿಸಿ ತೀರ್ಪು ನೀಡಬೇಕೆಂದು ಕೇಳಿಕೊಂಡರು. ಐಸಿಸಿ ನಿಯಾಮಾವಳಿ 32.1ರ ಪ್ರಕಾರ ಬ್ಯಾಟ್ಸ್ ಮ್ಯಾನ್ ಬಾರಿಸಿದ ಬಾಲ್ ವಿಕೆಟ್‍ಗೆ ತಾಗಿದರೆ ಅದು ಔಟ್ ಎಂದು ಟ್ವೀಟ್ ಮಾಡಿ ತನ್ನ ತೀರ್ಪನ್ನು ಪ್ರಕಟಿಸಿದೆ.

    ಸದ್ಯ ಈ ಗಲ್ಲಿ ಕ್ರಿಕೆಟ್ ಆಡಿರುವುದು ಎಲ್ಲಿ ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಬಂದಿಲ್ಲ. ಈ ಟ್ವೀಟ್ ಅನ್ನು 4 ಸಾವಿರ ಮಂದಿ ರಿಟ್ವೀಟ್ ಮಾಡಿದ್ದರೆ, 13 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

  • ಮುಂಬೈ ಬೀದಿಯಲ್ಲಿ ಸಚಿನ್ ಗಲ್ಲಿ ಕ್ರಿಕೆಟ್ – ವಿಡಿಯೋ ವೈರಲ್

    ಮುಂಬೈ ಬೀದಿಯಲ್ಲಿ ಸಚಿನ್ ಗಲ್ಲಿ ಕ್ರಿಕೆಟ್ – ವಿಡಿಯೋ ವೈರಲ್

    ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಚಿನ್ ತೆಂಡೂಲ್ಕರ್ ರಾತ್ರಿ ಕಾರಿನಲ್ಲಿ ಬಾಂದ್ರಾ ಬಳಿ ಹೋಗುತ್ತಿದ್ದಾಗ ಮೆಟ್ರೋ ಕೆಲಸಗಾರರು ಕ್ರಿಕೆಟ್ ಆಡುತ್ತಿರುವುದನ್ನು ಗಮನಿಸಿದ್ದಾರೆ. ಈ ದೃಶ್ಯವನ್ನು ನೋಡಿದ ಸಚಿನ್ ಕಾರು ನಿಲ್ಲಿಸಿ ಅವರ ಜೊತೆ ಆಟವಾಡಿದ್ದಾರೆ.

    ಆರಂಭದಲ್ಲಿ ಸಚಿನ್ ಆಟಗಾರರ ಕೈ ಕುಲುಕಿ ನಂತರ ಬ್ಯಾಟ್ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಆಟಗಾರರು ಸಚಿನ್ ಜೊತೆ ಸೆಲ್ಫಿ ಫೋಟೋ ಕ್ಲಿಕ್ಕಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ವೈರಲ್ ಆಗಿದೆ.

     

     

    https://www.youtube.com/watch?v=hHJWX3cjtdo