Tag: ಗಲಿ ಗಲಿ

  • ಗಲಿ ಗಲಿ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್

    ಗಲಿ ಗಲಿ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್

    – ಮೌನಿ ಜೊತೆ ಹೆಜ್ಜೆ ಹಾಕಿ ಯಶ್ ಹೇಳಿದ್ದು ಹೀಗೆ

    ಬೆಂಗಳೂರು: ಕೆಜಿಎಫ್ ಹಿಂದಿ ಡಬ್ ಚಿತ್ರದ ‘ಗಲಿ ಗಲಿ’ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಹಾಡು ರಿಲೀಸ್ ಆದ ಬಳಿಕ ಬಾಲಿವುಡ್ ಅಂಗಳದಲ್ಲಿಯೇ ಸಖತ್ ಸದ್ದು ಮಾಡಿತ್ತು. ಇದೀಗ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಯಶ್ ತಮ್ಮ ಜೊತೆ ಹೆಜ್ಜೆ ಹಾಕಿದ ಮೌನಿ ರಾಯ್ ಬಗ್ಗೆ ಮಾತನಾಡಿದ್ದಾರೆ.

    ಮೌನಿ ರಾಯ್ ಅದ್ಭುತ ಡ್ಯಾನ್ಸರ್. ಹಾಡಿನಲ್ಲಿ ಹಲವು ಹೊಸ ಸ್ಟೆಪ್ಸ್ ಗಳನ್ನು ಪರಿಚಯಿಸಿದ್ದಾರೆ. ಎಲ್ಲವನ್ನು ಕಲಿತುಕೊಂಡ ಮೌನಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. 10 ಸಾವಿರಕ್ಕೂ ಅಧಿಕ ಹಾಡುಗಳಿಗೆ ಕೊರಿಯೊಗ್ರಾಫಿ ಮಾಡಿರೋ ಗಣೇಶ್ ಅಚಾರ್ಯ ನಮ್ಮ ಹಾಡನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ನನಗಾಗಿ ಸರಳ ಸ್ಟೆಪ್ಸ್ ಮಾಡಿಕೊಟ್ಟಿದ್ದು, ಚಿತ್ರದಲ್ಲಿ ನನ್ನ ಪಾತ್ರದ ವ್ಯಕ್ತಿತ್ವ ಹಾಡಿನಲ್ಲಿಯೇ ತೋರಿಸಿದ್ದಾರೆ ಎಂದು ಯಶ್ ಹೇಳಿದ್ದಾರೆ.

    ತ್ರೀದೇವ್ ಚಿತ್ರದಲ್ಲಿ ನಾನು ಗ್ರೂಪ್ ಡ್ಯಾನ್ಸರ್ ಆಗಿದ್ದೆ. ಇಂದು ಅದೇ ಹಾಡನ್ನು ನಾನು ರಿಕ್ರಿಯೇಟ್ ಮಾಡುತ್ತಿರೋದು ಖುಷಿ ತಂದಿದೆ. ಇಂದು ನನ್ನೊಂದಿಗೆ ಯಶ್, ಮೌನಿ ರಾಯ್ ಒಳಗೊಂಡಂತೆ ಅತ್ಯಂತ ಒಳ್ಳೆಯ ಕಲಾವಿದರ ತಂಡ ಹೊಂದಿದ್ದೇನೆ ಎಂದು ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ಸಂತೋಷವನ್ನು ಹಂಚಿಕೊಂಡಿದ್ದಾರೆ.

    1989ರಲ್ಲಿ ಬಿಡುಗಡೆಯಾಗಿದ್ದ `ತ್ರಿದೇವ್’ ಚಿತ್ರದ `ಗಲಿ ಗಲಿ’ ರಿಮಿಕ್ಸ್ ಹಾಡಿಗೆ ಮೌನಿ ರಾಯ್ ಸೊಂಟ ಬಳುಕಿಸಿದ್ದಾರೆ. 1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.

    ಗಲಿ ಗಲಿ ಮೇ ಹಾಡು ಬಿಡುಗಡೆಯಾದ ಮೊದಲ ದಿನವೇ 1.3 ಕೋಟಿ ವ್ಯೂ ಪಡೆದುಕೊಳ್ಳುವ ಮೂಲಕ ದಾಖಲೆಯನ್ನು ಬರೆದಿತ್ತು. ಇದೂವರೆಗೂ 2.6 ಕೋಟಿಗೂ ಅಧಿಕ ವೀಕ್ಷಣೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv