ಬೆಂಗಳೂರು: ಪತಿಯೊಂದಿಗೆ ಗಲಾಟೆ ಹಿನ್ನೆಲೆ ಮನನೊಂದು ಗೃಹಿಣಿ (Housewife) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಲಗ್ಗೇರೆಯ (Laggere) ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿದೆ.
ರಕ್ಷಿತಾ (26) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ರಕ್ಷಿತಾ ನಾಲ್ಕು ವರ್ಷದ ಹಿಂದೆ ರವೀಶ್‌ನನ್ನು ಮದುವೆಯಾಗಿದ್ದರು. ಕಳೆದ ಮೂರು ವರ್ಷದಿಂದ ರವೀಶ್ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ರವೀಶ್ ಜೊತೆ ಸಹೋದರ ಲೋಕೇಶ್ ಕೂಡ ರಕ್ಷಿತಾ ಜೊತೆ ಗಲಾಟೆ ಮಾಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಲೋಕೇಶ್ ರವೀಶ್ ಮನೆಯಲ್ಲೇ ವಾಸವಾಗಿದ್ದ. ಭಾನುವಾರ ರಾತ್ರಿ ಕೂಡ ರಕ್ಷಿತಾ ಜೊತೆ ರವೀಶ್ ಹಾಗೂ ಲೋಕೇಶ್ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದು ರಕ್ಷಿತಾ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ರೇಣುಕಾಸ್ವಾಮಿ ಕೇಸ್‌ಗೆ 2ನೇ ಸ್ಥಾನ
ರವೀಶ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ. ಗಂಡನೇ ರಕ್ಷಿತಾಳನ್ನು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಮೂರು ವರ್ಷದ ಹೆಣ್ಣು ಮಗುವಿನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಕಾರ್ಯಕಾರಣಿ ಸಭೆ ಮಾಡಲು ಸರ್ವ ಸದಸ್ಯರು ಗೋವಾ (Goa) ಟ್ರಿಪ್ ಮಾಡಿದ್ದರು. ರಾತ್ರಿ ಹೋಟೆಲ್ ನಲ್ಲಿ ಮೋಜು ಮಸ್ತಿ ಮಾಡುವಾಗ ನಿರ್ಮಾಪಕರ ಮಧ್ಯ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಇಬ್ಬರು ನಿರ್ಮಾಪಕರು ತೀವ್ರ ಗಾಯಗೊಂಡಿದ್ದಾರೆ. ಇವರು ಗೋವಾಗೆ ಹೋಗಿದ್ದು ಕನ್ನಡ ಚಿತ್ರೋದ್ಯಮದ ಉದ್ದಾರಕ್ಕೆ. ಸಿನಿ ರಂಗವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸೋಕೆ. ಹೋದವರ‍್ಯಾರು ಕಾಂಜಿಪಿಂಜಿಗಳಲ್ಲ. ಪುಡಿರೌಡಿಗಳೂ ಅಲ್ಲವೇ ಅಲ್ಲ. ಕನ್ನಡ ಸಿನಿರಂಗಕ್ಕೆ ಅಪರೂಪದ ಸಿನಿಮಾ ಕೊಟ್ಟವರು. ಸ್ಯಾಂಡಲ್‌ವುಡ್ಡನ್ನು ಹುಲುಸಾಗಿ ಬೆಳೆಸಿದವರು. ಗಟ್ಟಿಯಾಗಿ ನಿಲ್ಲಿಸಿದವರು. ಆದ್ರೆ, ಈ ಗುಂಪಿನಲ್ಲಿದ್ದ ಕೆಲವರು ಮಾಡಿದ್ದೇನು? ಎಣ್ಣೆ ಏಟಲ್ಲಿ ಬಡಿದಾಡ್ಕೊಂಡಿದ್ದಾರೆ. ಕನ್ನಡ ಚಿತ್ರೋದ್ಯಮದ ಮಾನ ಮರ‍್ಯಾದೇನ ಮೂರುಕಾಸಿಗೆ ಹರಾಜಾಕಿದ್ದಾರೆ. ಬಡಿದಾಡ್ಕೊಂಡವ್ರ ಮುಖದಿಂದ ರಕ್ತ ಸೋರಿದೆ, ತಲೆಬುರುಡೆ ಒಡೆದಿದೆ. ಮಾರಣಾಂತಿಕ ಹಲ್ಲೆ ನಡೆದಿದೆ.
ಕನ್ನಡ ಸಿನಿಮಾ ರಂಗಕ್ಕೀಗ ಬರೋಬ್ಬರಿ 90 ವರ್ಷ. ಈ ಹಾದಿ ಸುಗಮವಾದುದಲ್ಲ. ಮದ್ರಾಸ್‌ನಿಂದ ಬಿಡಿಸಿಕೊಂಡು ಕರ್ನಾಟಕದಲ್ಲೇ ಚಿತ್ರರಂಗ ಕಟ್ಟಿದ ಇತಿಹಾಸವಿದೆಯಲ್ಲ ಅದು ರೋಚಕ. `ಮದ್ರಾಸ್’ ಎಂಬ ನಮ್ಮದಲ್ಲದ ನೆಲದಲ್ಲಿ ನೆಲೆನಿಂತು, ಕಷ್ಟಪಟ್ಟು, ಅವರು ಕೊಟ್ಟ ಸಮಯಕ್ಕೆ ಚಿತ್ರೀಕರಣ ಮಾಡಿ, ಹಗಲು ರಾತ್ರಿ ಲೆಕ್ಕಿಸದೇ ಕಟ್ಟಿದ ಚಿತ್ರರಂಗ ನಮ್ಮದು. ನಾವೀಗ 90ರ ಸಂಭ್ರಮದಲ್ಲಿದ್ದೇವೆ. ಇಡೀ ರಾಷ್ಟ್ರವೇ ಕನ್ನಡ ಸಿನಿಮಾ ರಂಗದತ್ತ ನೋಡುವಂತಾಗಿದೆ. ಮೂಕಿ ಯುಗದಿಂದ ಇಲ್ಲೀತನಕ ಮಾಡಿದ ಪ್ರಯೋಗಗಳು ಇತರ ಚಿತ್ರರಂಗಕ್ಕೆ ಮಾದರಿ ಆಗಿವೆ. ಈ ಮಾದರಿ ಇವರಿಂದಾಗಿ ಮಣ್ಣುಪಾಲಾಗಿದೆ. 90ರ ಸಂಭ್ರಮವನ್ನು ಸೆಲೆಬ್ರೇಟ್ ಮಾಡೋದು ಹೇಗೆ? ಅಂತ ಪ್ಲ್ಯಾನ್ ಮಾಡೋಕೆ ಹೋದವರು ಮಾನ ಕಳೆದು ಬಂದಿದ್ದಾರೆ.
ಚಿತ್ರರಂಗದ ಮಾತೃಸಂಸ್ಥೆ ಈ ಫಿಲ್ಮ್ ಚೇಂಬರ್. ಚಿತ್ರೋದ್ಯಮದ ಪುಣ್ಯಾತ್ಮರು ನಡೆದಾಡಿದ ಕರ್ಮಭೂಮಿ ಅದು. ಅದಕ್ಕೆ ಅದರದ್ದೇ ಆದ ಗೌರವವಿದೆ. ಈಗದು ತನ್ನ ಖದರ್ ಕಳೆದುಕೊಳ್ಳುತ್ತಿದ್ದರೂ, ಈಗಲೂ ಈ ಸಂಸ್ಥೆಯ ಮೇಲೆ ಅಪಾರ ವಿಶ್ವಾಸ, ನಂಬಿಕೆ ಚಿತ್ರಕರ್ಮಿಗಳದ್ದು. ಇಂಥದ್ದೊಂದು ಜವಾಬ್ದಾರಿಯ ಅರಿವು ಈಗಿರುವವರಿಗೆ ಇರಬೇಕಿತ್ತು ಅಲ್ಲವಾ?.. ಗೋವಾಗೆ ಹೋಗಿದ್ದು ಯಾಕೆ? ಅಲ್ಲಿಗೇ ಯಾಕೆ ಹೋಗಬೇಕಿತ್ತು? ಅಷ್ಟೂ ಜನರನ್ನು ಕರೆದುಕೊಂಡು ಹೋಗಿದ್ದು ಯಾರು? ಹಣ ಎಲ್ಲಿಂದ ಬಂತು? ಈ ಯಾವ ಪ್ರಶ್ನೆಯನ್ನೂ ಜನರು ಕೇಳ್ತಿಲ್ಲ.. ಗೋವಾಗೆ ಹೋಗಿದ್ದು ತಪ್ಪು ಅಂತಾನೂ ಹೇಳ್ತಿಲ್ಲ. ಮಾತೃಸಂಸ್ಥೆಯ ಹೆಸರಿನಲ್ಲಿ ಹೋದರು ಮರ್ಯಾದೆ ಕಳೆಯುವಂಥ ಕೆಲಸ ಮಾಡ್ಬೋದಾ ಅಂತಿದ್ದಾರೆ ಜನರು. ಗೋವಾಗೆ ಹೋದವರೇ ಹೇಳ್ತಿರೋ ಪ್ರಕಾರ.. ಇವರೆಲ್ಲ ಹೋಗಿದ್ದು ಜಾಲಿಟ್ರಿಪ್‌ಗೆ ಅಲ್ಲವಂತೆ. ಸಿನಿಮಾ ರಂಗಕ್ಕೆ 90 ವರ್ಷ ತುಂಬಿರೋ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗ್ತಿದೆ. ಈ ಕಾರ್ಯಕ್ರಮದ ರೂಪರೇಷೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ದರಂತೆ. ಇದರ ಜೊತೆಗೆ ಫಿಲ್ಮ್ ಚೇಂಬರ್‌ನ ಕಾರ್ಯಕಾರಿಣಿ ಸಭೆ ಕೂಡ ಪ್ಲ್ಯಾನ್ ಆಗಿತ್ತಂತೆ. ಇಷ್ಟೊಂದು ಮಹತ್ವದ ಕೆಲಸ ಇಟ್ಕೊಂಡು ಹೋದವರು ಬಡಿದಾಡಿಕೊಂಡಿದ್ದು ಯಾಕೆ?.. ಉಳಿದುಕೊಂಡ ಹೋಟೆಲ್‌ನಲ್ಲಿ ನೆತ್ತರು ಹರಿಸಿದ್ದು ಯಾಕೆ?.. ಅಷ್ಟಕ್ಕೂ ಇವರೇನು ಸಣ್ಣ ಮಕ್ಕಳಾ? ಫಿಲ್ಮ್ ಚೇಂಬರ್ ಸದಸ್ಯರಾಗಿದ್ದವರಿಗೆ ಕಾಮನ್‌ಸೆನ್ಸ್ ಬೇಡವಾ?.
ಫಿಲ್ಮ್ ಚೇಂಬರ್‌ನಲ್ಲಿ ಈ ರೀತಿ ಗಲಾಟೆ ಆಗೋದು ಹೊಸದೇನೂ ಅಲ್ಲ. ಚುನಾವಣೆ ಟೈಮ್‌ನಲ್ಲಿ ಒಬ್ಬರಿಗೊಬ್ಬರು ತೊಡೆ ತಟ್ಟಿದ್ದಾರೆ.. ಕೂಗಾಡಿದ್ದಾರೆ.. ಕೈಕೈ ಮಿಲಾಯಿಸೋ ಹಂತಕ್ಕೂ ಹೋಗಿದ್ದಾರೆ. ಆದರೆ, ಈ ಪ್ರಮಾಣದಲ್ಲಿ ಯಾವತ್ತೂ ಜಗಳ ಆಗಿರಲಿಲ್ಲ. ಹಾಗಂತ ಈಗ ಯಾವ ಚುನಾವಣೆನೂ ನಡೆದಿಲ್ಲ. ಗೋವಾದಲ್ಲಿ ನಡೆದಿರೋ ಮಾರಣಾಂತಿಕ ಹಲ್ಲೇಲಿ ನಿರ್ಮಾಪಕ ಎ.ಗಣೇಶ್ ಹಣೆಯಿಂದ ರಕ್ತ ಚಿಮ್ಮಿದೆ. ದೇಹದ ತುಂಬಾ ಗಾಯಗಳಾಗಿವೆ. ಮತ್ತೋರ್ವ ನಿರ್ಮಾಪಕ ರಥಾವರ ಚಂದ್ರು ಕೂಡ ಗಂಭೀರ ಗಾಯದಿಂದ ನೆರಳ್ತಾ ಇದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಅಂಬುಲೆನ್ಸ್ ಬಾರದೇ ಇದ್ದರೆ, ಅನಾಹುತಾನೇ ಆಗಿರೋದು ಅಂತಿದ್ದಾರೆ ನಿರ್ಮಾಪಕ ಗಣೇಶ್.
ಅಂಬುಲೆನ್ಸ್ ತಡವಾಗಿದ್ದರೆ ಅನಾಹುತನೇ ಆಗಿರೋದು ಅಂತಿದ್ದಾರೆ ಅಂದ್ಮೇಲೆ.. ಹಲ್ಲೆ ಯಾವ ಪ್ರಮಾಣದಲ್ಲಿ ಆಗಿರೋದು ಅಂತ ನೀವೇ ಅಂದಾಜಿಸಿಕೊಳ್ಳಿ.. ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ಯಾಕೆ? ವೈಯಕ್ತಿಕ ಕಾರಣ ಏನಾದ್ರೂ ಇತ್ತಾ? ದ್ವೇಷ ತುಂಬಿಕೊಂಡೆ ಇವರು ಗೋವಾಗೆ ಹೋಗಿದ್ದಾರೆ? ದ್ವೇಷದಲ್ಲಿ ಹಲ್ಲು ಮಸೀತಾ ಇದ್ದೋರ್‌ನ ಗೋವಾಗೆ ಕರ‍್ಕೊಂಡು ಹೋಗಿದ್ದು ಯಾರು? ಸತೀಶ್ ಅನ್ನೋರು ಫೋರ್ಕ್ ಸ್ಪೂನ್‌ನಿಂದ ಹಲ್ಲೆ ಮಾಡಿದ್ದು ಯಾಕೆ? ಅಲ್ಲಿದ್ದವರಿಗೆ ಈ ಕಾಳಗವನ್ನು ತಪ್ಪಿಸೋಕೆ ಆಗ್‌ಲಿಲ್ಲವಾ? ಅಬ್ಬಬ್ಬಾ.. ಎಷ್ಟೊಂದು ಪ್ರಶ್ನೆಗಳು.. ಇದಕ್ಕೆ ಉತ್ತರಿಸೋರು ಯಾರು? ನಿರ್ಮಾಪಕ ಗಣೇಶ್ ಅವರೇ ಹೇಳಿದಂತೆ ಹಲ್ಲೆ ಮಾಡಿದ ವ್ಯಕ್ತಿ ಕಂಠಪೂರ್ತಿ ಕುಡಿದಿದ್ನಂತೆ.. ಅದು ಬರೀ ಕುಡಿತದ ಹಾರಾಟ ಮಾತ್ರ ಆಗಿರಲಿಲ್ಲವಂತೆ.. `ಬೇರೆ ಇನ್ನೇನಾದ್ರೂ ತಗೊಂಡಿದ್ನಾ?.’ ಅಂತ ಅನುಮಾನ ಹೊರ ಹಾಕಿದ್ದಾರೆ. `ಬೇರೆದು ಅಂದ್ರೇನು..?’ ಈ ಮಾತು ನಾನಾ ಅನುಮಾನಕ್ಕೆ ಕಾರಣವಾಗಿದೆ. `ಬೇರೆದು ಅಂದ್ರೇನು..?’ ಅಂತ ಗಣೇಶ್ ಅವರೇ ಬಿಡಿಸಿ ಹೇಳಬೇಕಿದೆ. ಒಟ್ನಲ್ಲಿ.. ಗೋವಾ ಟ್ರಿಪ್ ಸುಖಾಂತ್ಯ ಕಾಣದೆ.. ಹೊಡೆದಾಟದಲ್ಲಿ ಕೊನೆಗೊಂಡಿದೆ. ಹೋದ ಕೆಲ್ಸ ಆಯ್ತಾ ಅಂತ ಚೇಂಬರ್ ಅಧ್ಯಕ್ಷರೇ ಹೇಳ್ಬೇಕಿದೆ. ಅಂದಹಾಗೆ ಈ ಘಟನೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ತುಟಿಗೂ ಗಾಯ ಆಗಿದೆ ಅನ್ನೋದು ವಿಪರ್ಯಾಸ.
ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಾ (Bala) ಅವರು ತಮ್ಮ ಸಿನಿಮಾದ ನಟಿಯೊಬ್ಬರ ಮೇಲೆ ಕೈ ಮಾಡಿದ್ದಾರಂತೆ. ಈ ವಿಷಯವನ್ನು ಹೊಡೆತಕ್ಕೆ ಒಳಗಾದ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಕಾರಣಕ್ಕಾಗಿಯೇ ತಾವು ಆ ಸಿನಿಮಾದಿಂದ ಹೊರಬರಬೇಕಾಯಿತು ಎಂದಿದ್ದಾರೆ.
ಪಿತಾಮಗನ್, ಸೇತು, ನಾನ್ ಕಡವುಲ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ಬಾಲಾ. ತಮ್ಮ ಸಿನಿಮಾದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯೂ ಆದವರು. ದೇಸಿ ಗುಣದ ಸಿನಿಮಾಗಳ ಜನಕ ಎಂದೆಲ್ಲ ಕರೆಯಿಸಿಕೊಂಡವರು. ಅಂಥ ನಿರ್ದೇಶಕರು ತಮ್ಮದೇ ಸಿನಿಮಾದ ನಟಿಯನ್ನು ಹೊಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮಲಯಾಳಂ ಮೂಲದ ನಟಿ ಮಮತಾ ಬಿಜು (Mamitha Biju), ವಾನಂಗನ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ವಿಲ್ಲಡಿಚ್ಚಾಂಪಾಟನ್ ಕಲಾವಿದೆಯಂತೆ ವಾದ್ಯ ನುಡಿಸುತ್ತಾ ಡಾನ್ಸ್ ಮಾಡಬೇಕಿತ್ತಂತೆ. ನುರಿತ ಕಲಾವಿದರ ಜೊತೆ ಸಡನ್ನಾಗಿ ಬೆರೆಯೋದು ಕಷ್ಟವಾಯಿತು. ಹಾಗಾಗಿ ಮೂರು ಟೇಕ್ ತೆಗೆದುಕೊಂಡೆ. ಈ ಕಾರಣಕ್ಕಾಗಿ ನಿರ್ದೇಶಕರು ಹೊಡದೇ ಬಿಟ್ಟರು ಎಂದಿದ್ದಾರೆ ಮಮಿತಾ.
ಸೆಟ್ ನಲ್ಲಿ ನಾನು ಕೋಪಿಷ್ಠ. ಬೈದರೆ ಮನಸ್ಸಿಗೆ ತಗೋಬೇಡಿ ಎಂದು ಬಾಲಾ ಅವರು ಮೊದಲೇ ಹೇಳಿದ್ದರೂ, ಅವರು ಬೈದಾಗೊಮ್ಮೆ ಕಿರಿಕಿರಿ ಅನಿಸೋದು. ಆದರೆ, ಅವರು ನನಗೆ ಹೊಡೆದ ಮೇಲೆ ಕೆಲಸ ಮಾಡಲು ಮನಸ್ಸಾಗಲಿಲ್ಲ. ಹಾಗಾಗಿ ಸಿನಿಮಾದಿಂದ ಹೊರ ನಡೆದೆ ಎಂದಿದ್ದಾರೆ ಮಮಿತಾ.
ಮಂಗಳೂರು: ನ್ಯೂ ಇಯರ್ (New Year) ಪಾರ್ಟಿಯಲ್ಲಿ (Party) ಗಲಾಟೆ ನಡೆದ ಹಿನ್ನೆಲೆ ಯುವಕನ ಮೂಗನ್ನು (Nose) ಮತ್ತೊಬ್ಬ ಯುವಕ ಕಚ್ಚಿ ಹೊರೆತೆಗೆದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಪಿಲ್ಯ ಗ್ರಾಮದಲ್ಲಿ ನಡೆದಿದೆ.
ಉಲ್ಪೆ ಗ್ರಾಮದ ನಿವಾಸಿ ದೀಕ್ಷಿತ್ (28) ಮೂಗಿನ ಒಂದು ಭಾಗವನ್ನು ಕಳೆದುಕೊಂಡ ಯುವಕ. ಮೂಡಿಗೆರೆ ಮೂಲದ ರಾಕೇಶ್ ಮೂಗನ್ನು ಕಚ್ಚಿಕಿತ್ತ ಆರೋಪಿ. ರಾಕೇಶ್ ಹಾಗೂ ದೀಕ್ಷಿತ್ ಇಬ್ಬರೂ ಇಯರ್ ಎಂಡ್ ಪಾರ್ಟಿಯೊಂದಕ್ಕೆ ತೆರಳಿದ್ದು, ಪಾರ್ಟಿಯಲ್ಲಿ ಮದ್ಯಸೇವನೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವಕನ ಬರ್ಬರ ಹತ್ಯೆ
ಚಿಕ್ಕಬಳ್ಳಾಪುರ: ಗ್ರಾಮದ ಮಧ್ಯದಲ್ಲೇ ಯುವಕನೋರ್ವನನ್ನು (Youth) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ (Bagepalli) ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗಜೇಂದ್ರ (28) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಚಾಲಕನಾಗಿದ್ದ ಎಂದು ತಿಳಿದುಬಂದಿದೆ. ಬುಧಾವಾರ ರಾತ್ರಿ ಗ್ರಾಮದ ಎಂಎಸ್‌ಐಎಲ್ ಮದ್ಯದಂಗಡಿ ಬಳಿ ಯುವಕರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಆದರೆ ಯಾವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿಲ್ಲ. ಇಂದು ಬೆಳಗ್ಗೆ ನಡುರಸ್ತೆಯಲ್ಲಿ ಗಜೇಂದ್ರ ರಕ್ತಸಿಕ್ತವಾಗಿ ಪತ್ತೆಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮುಲ್ಕಿಯಲ್ಲಿ ಲಾರಿ ಡ್ರೈವರ್ ಅವಾಂತರ- ಬೈಕ್, ಆಟೋರಿಕ್ಷಾ, ಪೊಲೀಸ್ ಸಿಬ್ಬಂದಿಗೆ ಡಿಕ್ಕಿ
ಬೆಳಗ್ಗೆ ಎಂದಿನಂತೆ ಜನ ಎದ್ದು ಬಂದಾಗ ನಡುರಸ್ತೆಯಲ್ಲಿ ಮೃತದೇಹ ಕಂಡು ಬೆಚ್ಚಿ ಬಿದ್ದಿದ್ದಾರೆ. ಬಾಗೇಪಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಓವರ್‌ಟೇಕ್ ಭರದಲ್ಲಿ ಮರಕ್ಕೆ ಬಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು
ರಾಯಚೂರು: ಟಿಶ್ಯೂ ಪೇಪರ್ (Tissue Paper) ವಿಚಾರಕ್ಕೆ ಗಲಾಟೆ ನಡೆದ ಪರಿಣಾಮ ಪಾನ್ ಶಾಪ್ (Pan Shop) ಮಾಲೀಕ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ನಡೆದಿದೆ.
ವೀರೇಶ್ ಚಾಕು ಇರಿದ ಪಾನ್ ಶಾಪ್ ಮಾಲೀಕ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರನ್ನು ಅಟ್ಟಾಡಿಸಿ ವೀರೇಶ್ ಚಾಕು ಇರಿದಿದ್ದಾನೆ. ಗಲಾಟೆಯಲ್ಲಿ ರಮೇಶ್ ಮತ್ತು ಸತ್ತರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ರಮೇಶ್ ಹಾಗೂ ಸತ್ತರ್ ಸ್ನೇಹಿತರ ಜೊತೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಡಾಬಾದ ಒಳಗಡೆ ಬಂದಿದ್ದ ಪಾನ್ ಶಾಪ್ ಮಾಲೀಕ ವಿರೇಶ್‌ನನ್ನು ಕಂಡು ವೇಟರ್ ಟಿಶ್ಯೂ ಪೇಪರ್ ಕೊಡು ಎಂದು ಸತ್ತರ್ ಕೇಳಿದ್ದಾನೆ. ಇದರಿಂದ ಗಲಾಟೆ ಆರಂಭಗೊಂಡಿದ್ದು, ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ವೀರೇಶ್ ಯುವಕರಿಗೆ ಇರಿದಿದ್ದಾನೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಿಎಂಟಿಸಿಗೆ ಇಬ್ಬರು ಬಲಿ
ಗಲಾಟೆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಗಾಯಾಳುಗಳಿಗೆ ಮಾನ್ವಿ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿರೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು
ಯಾದಗಿರಿ: ಕ್ಷುಲ್ಲಕ ಕಾರಣಕ್ಕಾಗಿ ಎರಡು ಕುಟುಂಬಗಳ ನಡುವೆ ಬಡಿದಾಟದಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಗನೂರು ಗ್ರಾಮದಲ್ಲಿ ನಡೆದಿದೆ.
ನಗನೂರು ಗ್ರಾಮದ ಬಸವರಾಜ್ ಹಾಗೂ ಸದಾಶಿವ ಗಂಭೀರ ಗಾಯಗೊಂಡವರು. ಬಸವರಾಜ್ ಹಾಗೂ ಸದಾಶಿವ ಇಬ್ಬರೂ ಎತ್ತಿನ ಬಂಡಿ ಮೇಲೆ ಜಮೀನಿಗೆ ತೆರಳುತ್ತಿದ್ದಾಗ ಮೈಲಾರಿ, ಮುದಕಪ್ಪ, ಯಲ್ಲಪ್ಪ, ಸೇರಿ 9 ಜನರಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
ಪ್ರಶ್ನೆ ಮಾಡಿದ್ದನ್ನೇ ನೆಪಮಾಡಿಕೊಂಡ ಮೈಲಾರಿ, ಮುದುಕಪ್ಪ, ಯಲ್ಲಪ್ಪ ಸೇರಿದಂತೆ ಕುಟುಂಬಸ್ಥರೆಲ್ಲರೂ ಯುವಕರ ಮೇಲೆ ಎರಗಿ, ಮನಸ್ಸೋ ಇಚ್ಛೆ ಥಳಿಸಿದ್ದಾರೆ. 9 ಜನರ ದಾಳಿಗೆ ಒಳಗಾದ ಬಸವರಾಜ, ಸದಾಶಿವ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಡಿಕೇರಿ: ಹಳೇ ದ್ವೇಷದ ಹಿನ್ನೆಲೆ ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpet) ತಾಲೂಕಿನ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿ ನಡೆದಿದೆ.
ಕ್ರಿಸ್ಟಲ್ (28) ಹತ್ಯೆಯಾದ ದುರ್ದೈವಿ. ಗುರುವಾರ ರಾತ್ರಿ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ (Bar) ಕ್ರಿಸ್ಟಲ್ ಸ್ನೇಹಿತರು ಹಾಗೂ ರಂಜಿತ್ ಸ್ನೇಹಿತರು ಇಬ್ಬರು ಒಂದೇ ಬಾರಿನಲ್ಲಿ ಮದ್ಯಪಾನ ಮಾಡುತ್ತಿದ್ದ ಸಂದರ್ಭ ರಂಜಿತ್ ಹಾಗೂ ಕ್ರಿಸ್ಟಲ್ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇದನ್ನೂ ಓದಿ: ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ
ಗಲಾಟೆಯನ್ನು ಗಮನಿಸಿದ ಬಾರ್ ಮ್ಯಾನೇಜರ್ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಸ್ಥಳಕ್ಕೆ ಆಗಮಿಸುವ ವೇಳೆ ಕ್ರಿಸ್ಟಲ್ ತಂಡ ಹಾಗೂ ರಂಜಿತ್ ತಂಡದ ಯುವಕರು ಬಾರ್ ಒಳಗೆ ನುಗ್ಗಿ ಇನ್ನಷ್ಟು ಗಲಾಟೆ ಮಾಡಿಕೊಂಡು ಬಾರ್‌ನ ಶೌಚಾಲಯದ ಬಾಗಿಲು ಮುರಿದಿದ್ದಾರೆ. ಬಳಿಕ ಪೊಲೀಸರು ಕ್ರಿಸ್ಟಲ್‌ನ ಜೊತೆ ಇದ್ದ ಮೈಕೆಲ್ ಹಾಗೂ ಮತ್ತೊಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ. ಆದರೆ ಗಲಾಟೆ ಮಾಡಿದ ರಂಜಿತ್ ಹಾಗೂ ಕ್ರಿಸ್ಟಲ್ ಇಬ್ಬರಿಗೂ ಸ್ಥಳದಲ್ಲೇ ಬುದ್ದಿವಾದ ಹೇಳಿ ಮನೆಗೆ ಹೋಗುವಂತೆ ತಿಳಿಸಿದ್ದರು. ಇದನ್ನೂ ಓದಿ: ಕೊಂಬಿನಿಂದ ತಿವಿದು ಬಾಲಕಿಯನ್ನು ಬಿಸಾಕಿದ ಹಸು- ತಮಿಳುನಾಡಿನ ದೃಶ್ಯ ಭಾರೀ ವೈರಲ್
ಶುಕ್ರವಾರ ಬೆಳಗ್ಗೆ ಬಾರ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದ ಕ್ರಿಸ್ಟಲ್ (28) ಮೃತದೇಹ ಪಾಲಿಬೆಟ್ಟ ರಸ್ತೆಯಲ್ಲಿ ಗೋಚರಿಸಿದೆ. ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‍ನಲ್ಲಿ ಭೀಕರ ಅಪಘಾತ – ಹತ್ತು ಮಂದಿ ಸಾವು
ಘಟನೆಯ ವಿವರ:
ಕಳೆದ ಎರಡು ಮೂರು ತಿಂಗಳ ಹಿಂದೆ ಕ್ರಿಸ್ಟಲ್ ಹಾಗೂ ರಂಜಿತ್ ತಂಡದ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಏರ್ಪಟ್ಟಿದ್ದು, ಇಬ್ಬರ ನಡುವೆ ನಡೆದ ಗಲಾಟೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಗುರುವಾರವೂ ಹಳೆಯ ಗಲಾಟೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆಯನ್ನು ಮುಗಿಸಿಕೊಂಡು ಬಂದ ಇಬ್ಬರೂ ತಮ್ಮ ಸ್ನೇಹಿತರೊಂದಿಗೆ ರಾತ್ರಿ ಬಾರ್‌ನಲ್ಲಿ ಮುಖಾಮುಖಿ ಭೇಟಿಯಾಗಿ ಮತ್ತೊಮ್ಮೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಲಸಿಕೆ ಹಾಕ್ತಿದ್ದಾಗಲೇ ಕುಸಿದ ಅಂಗನವಾಡಿಯ ಮೇಲ್ಛಾವಣಿ- ಮಗುವಿನ ತಲೆಗೆ ಗಾಯ
ನಂತರ ಪೊಲೀಸರು ಬಂದು ಕ್ರಿಸ್ಟಲ್‌ನ ಜೊತೆಯಲ್ಲಿದ್ದ ಯುವಕರನ್ನು ಕರೆದುಕೊಂಡು ಹೋಗಿ ಕ್ರಿಸ್ಟಲ್‌ನನ್ನು ಮನೆಗೆ ಹೋಗುವಂತೆ ಹೇಳಿ ಹೋಗಿದ್ದಾರೆ. ಆದರೆ ಇಬ್ಬರ ನಡುವೆ ಗಲಾಟೆ ನಡೆದಿದ್ದು ಗೊತ್ತಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗದೆ ಪೊಲೀಸರು ಬಿಟ್ಟು ಹೋಗಿದ್ದರಿಂದ ರಾತ್ರಿ ಮತ್ತೊಮ್ಮೆ ರಸ್ತೆ ಮಧ್ಯದಲ್ಲೇ ಗಲಾಟೆ ನಡೆದು ಹತ್ಯೆ ಮಾಡಲಾಗಿದೆ. ಸಿದ್ದಾಪುರ ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಕ್ರಿಸ್ಟಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತ – ಪೊಲೀಸ್ ಕಾನ್ಸ್‌ಟೇಬಲ್ ನಿಧನ
ಶಿವಮೊಗ್ಗ: ವಾಸದ ಮನೆಯ ವಿಷಯಕ್ಕೆ ಕುಡಿದ ಮತ್ತಿನಲ್ಲಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದ (Shivamogga) ವಿದ್ಯಾನಗರದಲ್ಲಿ (Vidyanagar) ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸುಭಾಷ್ ನಗರದ ನಿವಾಸಿ ಜ್ಞಾನೇಶ್ವರ್ (45) ಎಂದು ಗುರುತಿಸಲಾಗಿದೆ. ವಿದ್ಯಾನಗರ ಬಡಾವಣೆಯಲ್ಲಿ ಜ್ಞಾನೇಶ್ವರ್ ಅವರ ಪತ್ನಿ, ತಾಯಿಗೆ ಸೇರಿದ ಮನೆ (Home) ಇದೆ. ಈ ಮನೆಯ ವಿಚಾರಕ್ಕೆ ಜ್ಞಾನೇಶ್ವರ್ ಹಾಗೂ ಪತ್ನಿಯ ಸೋದರಮಾವ ನಾಗರಾಜನ ನಡುವೆ ಶನಿವಾರ ಜಗಳ ನಡೆದಿದೆ. ಇದನ್ನೂ ಓದಿ: ಗ್ರೆನೇಡ್ ಮೇಲಿನ ಮೇಡ್ ಇನ್ ವಿವರವನ್ನೇ ಅಳಿಸಿ ಹಾಕಿರುವ ಶಂಕಿತ ಉಗ್ರರು
ಶನಿವಾರ ರಾತ್ರಿ ಇಬ್ಬರು ಮದ್ಯ ಸೇವಿಸಿ ಜಗಳವಾಡಿಕೊಂಡಿದ್ದಾರೆ. ಈ ವೇಳೆ ನಾಗರಾಜ್, ಜ್ಞಾನೇಶ್ವರ್‌ನನ್ನು ಬಲವಾಗಿ ನೆಲಕ್ಕೆ ತಳ್ಳಿದ್ದಾನೆ. ಜ್ಞಾನೇಶ್ವರ್ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಪೆಟ್ಟು ಬಿದ್ದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಜ್ಞಾನೇಶ್ವರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬೆಂಗ್ಳೂರಿನ 2 ಮನೆಗಳಲ್ಲಿ ಕೆಜಿಗಟ್ಟಲೆ ಸ್ಫೋಟಕ ಪತ್ತೆ