Tag: ಗರ್ಲ್ ಫ್ರೆಂಡ್

  • ಪ್ರೇಯಸಿಯ ಕೊಚ್ಚಿ ಕೊಚ್ಚಿ ಕೊಂದು ಮಾಂಸವನ್ನು ಟಾಯ್ಲೆಟಲ್ಲಿ ಫ್ಲಷ್ ಮಾಡ್ದ!

    ಪ್ರೇಯಸಿಯ ಕೊಚ್ಚಿ ಕೊಚ್ಚಿ ಕೊಂದು ಮಾಂಸವನ್ನು ಟಾಯ್ಲೆಟಲ್ಲಿ ಫ್ಲಷ್ ಮಾಡ್ದ!

    ಮಾಸ್ಕೋ: ಪ್ರಿಯತಮೆ ತನ್ನ ಜೊತೆ ಬಂದು ವಾಸಿಸಲು ತಯಾರಾಗಿಲ್ಲ ಎಂದು ಸಿಟ್ಟಿಗೆದ್ದ ಕಾಮುಕನೊಬ್ಬ ತನ್ನ ಪ್ರೇಯಸಿಯನ್ನು ಕೊಂದಿದ್ದಾನೆ. ಕೊಂದ ಬಳಿಕ ಆತ ಮಾಡಿದ ಕೆಲಸಕ್ಕೆ ಆತನ ಸಂಬಂಧಿಕರೇ ಬೆಚ್ಚಿ ಬಿದ್ದಿದ್ದು, ಆತ ಇಷ್ಟು ಕ್ರೂರನಾಗಿದ್ದು ಹೇಗೆ ಎಂದು ಕೇಳುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ ಈತನಿಗೆ ಈ ಹಿಂದೆಯೇ ಮದುವೆಯಾಗಿ ಮಕ್ಕಳೂ ಇದ್ದಾರೆ. ಈ ಎಲ್ಲಾ ವಿಚಾರ ಮುಚ್ಚಿಟ್ಟು ಆತ ಇನ್ನೊಬ್ಬಳ ಜೊತೆ ಪ್ರೇಮದಾಟ ಶುರು ಮಾಡಿದ್ದನಂತೆ.

    ಕೊಂದಿದ್ದು ಯಾಕೆ..?
    ರಷ್ಯಾದ 36 ವರ್ಷದ ಡಿಮಿಟ್ರಿ ಝೆಲೆನ್ಸ್ಕಿ 27 ವರ್ಷನ ಟಾಟಿಯಾನಾ ಮೆಲೆಖಿನಾ ಎಂಬಾಕೆಯನ್ನು ಲವ್ ಮಾಡ್ತಿದ್ದ. ಅಲ್ಲದೆ ಆಕೆಯ ಜೊತೆ ಒಂದಾಗಿ ಬಾಳುವ ಕನಸನ್ನೂ ಬಿತ್ತಿದ್ದ. ಟಾಟಿಯಾನ ವಿದ್ಯಾಭ್ಯಾಸ ಮುಗಿದ ಬಳಿಕ ರಷ್ಯಾದ ಪೇಮ್ ನಗರದಲ್ಲಿ ನವ ಜೀವನ ಶುರು ಮಾಡಲು ಯೋಚಿಸಿದ್ದರು. ಹೀಗಾಗಿ ತನ್ನ ವಿದ್ಯಾಭ್ಯಾಸ ಮುಗಿಸಿದ ಬಳಿಕ ಟಾಟಿಯಾನಾ ಪೇಮ್ ನಗರಕ್ಕೆ ಬಂದಿದ್ದಾಳೆ. ಆದರೆ ಈ ಊರಿಗೆ ಬಂದಾಗ ಆಕೆಗೆ ಡಿಮಿಟ್ರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ನಾನು ಯಾವುದೇ ಕಾರಣಕ್ಕೂ ಪೇಮ್ ನಲ್ಲಿ ವಾಸ ಮಾಡಲ್ಲ ಎಂದು ಟಾಟಿಯಾನಾ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಡಿಮಿಟ್ರಿ ಆಕೆಯನ್ನು ಕೊಂದಿದ್ದಾನೆ.

    ಮಾಂಸ, ಮೂಳೆ ಬೇರ್ಪಡಿಸಿ ಪುಡಿ ಪುಡಿ ಮಾಡ್ದ!
    ಪ್ರಿಯತಮೆಯ ವರ್ತನೆಯಿಂದ ಸಿಟ್ಟಿಗೆದ್ದ ಈತ ಪ್ರಿಯತಮೆಯನ್ನು ಕೊಂದಿದ್ದೇನೋ ಆಯ್ತು. ಆದರೆ ಕೊಲೆ ಮಾಡಿದ ವಿಚಾರ ಹೊರಜಗತ್ತಿಗೆ ಗೊತ್ತಾಗಬಾರದಲ್ಲ. ಅದಕ್ಕಾಗಿ ಹೊಸ ಪ್ಲ್ಯಾನ್ ಮಾಡ್ದ. ಪ್ರಿಯತಮೆಯ ಅಂಗಾಂಗಗಳನ್ನು ಕೊಚ್ಚಿ ಕೊಚ್ಚಿ ಕಟ್ ಮಾಡಿದ ಆತ ಅದರಿಂದ ಮೂಳೆ ಹಾಗೂ ಮಾಂಸವನ್ನು ಬೇರ್ಪಡಿಸಿದ. ಇಲ್ಲಿಗೇ ಈತನ ವಿಕೃತಿ ಮುಗಿಯಲಿಲ್ಲ. ಹೇಗಿದ್ದರೂ ತಾನವಳ ಮೃತದೇಹ ಹೊರಗಡೆ ಸಾಗಿಸಲು ಸಾಧ್ಯವಿಲ್ಲ ಎಂದು ಅರಿತಿದ್ದ ಆತ ಆ ಮಾಂಸಗಳನ್ನು ಮತ್ತೆ ಕೊಚ್ಚಿ ಪುಡಿ ಪುಡಿ ಮಾಡಿದ. ಬಳಿಕ ಆ ಮಾಂಸದ ಮುದ್ದೆಯನ್ನು ಟಾಯ್ಲೆಟ್ ನ ಕಮೋಡ್ ಗೆ ಹಾಕಿ ಫ್ಲಷ್ ಮಾಡಿದ್ದಾನೆ. ಬಳಿಕ ಆಕೆಯ ಎಲುಬನ್ನು ಚೂರು ಚೂರು ಮಾಡಿ ಮೀನುಗಳಿಗೆ ಆಹಾರವಾಗಲಿ ಎಂದು ನದಿಗೆಸೆದಿದ್ದಾನೆ. ಆದರೆ ಯಾವಾಗ ಟಾಟಿಯಾನಾಳ ತಂದೆ ಪೊಲೀಸರಿಗೆ ದೂರು ನೀಡಿದರೋ ತನಿಖೆ ಶುರುವಾಗಿದೆ. ಇದರ ವಿಚಾರಣೆ ಆರಂಭಿಸಿದ ಪೊಲೀಸರು ನೇರವಾಗಿ ಬಂದು ಡಿಮಿಟ್ರಿ ಮನೆ ಬಾಗಿಲು ಬಡಿದಿದ್ದಾರೆ.

    ಬರಲಿಲ್ಲ ಫೋನು, ಮಾಡಿದ್ರು ಕಂಪ್ಲೇಂಟು!
    ಯಾವಾಗ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಶುರು ಮಾಡಿದರೋ ಡಿಮಿಟ್ರಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ್ದು ಯಾರಿಗೂ ಗೊತ್ತಾಗದೇ ಇರಲಿ ಎಂದು ಮಾಂಸವನ್ನು ಪುಡಿ ಪುಡಿ ಮಾಡಿ ಟಾಯ್ಲೆಟ್ ಗೆ ಹಾಕಿದ್ದೇನೆ. ಮೂಳೆಗಳನ್ನು ನದಿಗೆ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಮನೆಯಿಂದ ಹೊರಟಿದ್ದ ಟಾಟಿಯಾನಾ ನಾನು ಪೇಮ್ ತಲುಪುತ್ತಿದ್ದಂತೆ ಫೋನ್ ಮಾಡುತ್ತೇನೆ ಎಂದು ಅಪ್ಪನಿಗೆ ಮಾತು ಕೊಟ್ಟಿದ್ದಾಳೆ. ಆದರೆ ಮಗಳ ಫೋನ್ ಕಾಲ್ ಬಾರದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾದ ಅಪ್ಪ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದಾರೆ.

    ಡಿಮಿಟ್ರಿ ಈಗಾಗಲೇ ಮದುವೆಯಾಗಿದ್ದವಳ ಹೆಸರೂ ಟಾಟಿಯಾನಾ. ಸ್ಥಳೀಐ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ನಾವಿಬ್ಬರೂ ಬೇರೆ ಬೇರೆಯಾಗೇ ವಾಸ ಮಾಡುತ್ತಿದ್ದೆವು. ಆದರೆ ಡೈವೋರ್ಸ್ ಆಗಿರಲಿಲ್ಲ. ಆತ ಇಷ್ಟೊಂದು ಕ್ರೂರಿ ಎಂದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಡಿಮಿಟ್ರಿ ಪೊಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವಯಸ್ಸು 63 ಆದ್ರೂ ಐವರು ಗರ್ಲ್ ಫ್ರೆಂಡ್-ಇದು ಶೋಕಿಲಾಲ ತಾತನ ಕಥೆ

    ವಯಸ್ಸು 63 ಆದ್ರೂ ಐವರು ಗರ್ಲ್ ಫ್ರೆಂಡ್-ಇದು ಶೋಕಿಲಾಲ ತಾತನ ಕಥೆ

    ನವದೆಹಲಿ: ಕೆಲವರಿಗೆ ವಯಸ್ಸಾದ್ರೂ ಚಪಲ ಮಾತ್ರ ಕಡಿಮೆ ಆಗಲ್ಲ. ಅಂತಹ ವ್ಯಕ್ತಿಯೊಬ್ಬನು 63 ವರ್ಷವಾದ್ರೂ, ಈತನಿಗೆ ಐವರು ಗರ್ಲ್ ಫ್ರೆಂಡ್ ಇದ್ದಾರೆ ಅಂತೆ. ಐವರು ಗರ್ಲ್ ಫ್ರೆಂಡ್ ಇದ್ದರೂ, ಈತನಿಗೆ ಕೈಯಲ್ಲಿ ಒಂದು ಕೆಲಸವಿಲ್ಲ. ಯುವತಿಯರ ಜೊತೆ ಐಶಾರಾಮಿ ಜೀವನ ನಡೆಸಲು ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

    ಬಂಧು ಸಿಂಗ್ ಬಂಧಿತ ಚಪಲ ಚೆನ್ನಿಗರಾಯ. ಬಂಧು ಸಿಂಗ್‍ಗೆ ವಯಸ್ಸು 63 ಆದರೂ ಮದುವೆ ಆಗಿಲ್ಲ. ಕೇವಲ ಯುವತಿಯರೊಂದಿಗೆ ಮೋಜು, ಮಸ್ತಿ ಮಾಡುವ ಮೂಲಕ ಜೀವನ ಸಾಗಿಸುತ್ತಾ ಬಂದಿದ್ದಾನೆ. ಮೋಜು ಮಸ್ತಿ ನಡೆಸಲು ಬೇಕಾಗುವ ಹಣಕ್ಕಾಗಿ ಕಳ್ಳತನ ಮಾಡಿಕೊಂಡಿದ್ದ. ಆದರೆ ಇವರೆಗೂ ಬಂಧು ಸಿಂಗ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಸದ್ಯ ಕಳ್ಳತನದ ಆರೋಪದಡಿಯಲ್ಲಿ ರೋಹಿಲ್ಲಾ ಠಾಣೆಯ ಪೊಲೀಸರು ಬಂಧು ಸಿಂಗ್‍ನನ್ನು ಬಂಧಿಸಿದ್ದಾರೆ.

    ಸಿಕ್ಕಿದ್ದು ಹೇಗೆ?:
    ಜುಲೈ 28ರ ರಾತ್ರಿ ಬಂಧು ಸಿಂಗ್, ರೋಹಿಲ್ಲಾದ ಇಂಡಸ್ಟ್ರಿ ಏರಿಯಾದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನು. ಕೆಲವು ಕಳ್ಳತನದ ದೃಶ್ಯಗಳು ಫ್ಯಾಕ್ಟರಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ರೊಹಿಲ್ಲಾ ಠಾಣೆಯ ಎಎಸ್‍ಪಿ ಪಿಯೂಷ್, ಎಸ್‍ಹೆಚ್‍ಓ ರಾಮಚಂದ್ರ ತಂಡ ಆರೋಪಿ ಬಂಧು ಸಿಂಗ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧು ಸಿಂಗ್ ಆನಂದ ಪರ್ವತ ನಗರದ ನಿವಾಸಿಯಾಗಿದ್ದು, ಅವಿವಾಹಿತನಾಗಿದ್ದಾನೆ. ಆರೋಪಿ ಐವರು ಗರ್ಲ್ ಫ್ರೆಂಡ್‍ಗಳನ್ನು ಹೊಂದಿದ್ದು, ಅವರನ್ನು ಸಂತೋಷವಾಗಿ ಇರಿಸಲು ಕಳ್ಳತನ, ದರೋಡೆ ಮಾಡಿಕೊಂಡಿದ್ದನು ಎಂದು ತನಿಖೆ ವೇಳೆ ಹೇಳಿದ್ದಾನೆ. ಬಂಧಿತನಿಂದ 2 ಲ್ಯಾಪ್‍ಟಾಪ್, ಎಲ್‍ಇಡಿ ಸ್ಕ್ರೀನ್ ಮತ್ತು 5 ಸಾವಿರ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿಎಸ್‍ಪಿ ನೂಪುರ ಚಂದ್ರ ತಿಳಿಸಿದ್ದಾರೆ.

  • ಗಂಡನಿಗಾಗಿ ನಡುರಸ್ತೆಯಲ್ಲಿಯೇ ಮಹಿಳೆಯರ ಡಿಶುಂ ಡಿಶುಂ-ಇಬ್ಬರ ಜಗಳದಲ್ಲಿ ಸುಸ್ತಾದ ಪತಿರಾಯ

    ಗಂಡನಿಗಾಗಿ ನಡುರಸ್ತೆಯಲ್ಲಿಯೇ ಮಹಿಳೆಯರ ಡಿಶುಂ ಡಿಶುಂ-ಇಬ್ಬರ ಜಗಳದಲ್ಲಿ ಸುಸ್ತಾದ ಪತಿರಾಯ

    ಬೀಜಿಂಗ್: ಇಬ್ಬರೂ ಮಹಿಳೆಯರು ತಮ್ಮ ಗಂಡನಿಗಾಗಿ ಕೂದಲು ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆ ಚೀನಾದ ಹ್ಯಾಂಝ್ಹೊಂಗ್ ನಲ್ಲಿ ನಡೆದಿದೆ. ಇಬ್ಬರೂ ಪತ್ನಿಯರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಈ ಹಿಂದೆಯೂ ನಾನು ನನ್ನ ಕುಟುಂಬ ಮತ್ತು ಗಂಡನಿಂದ ದೂರ ಹೋಗು ಅಂತಾ ಎಚ್ಚರಿಕೆ ನೀಡಿದ್ದೆ ಎಂದು ಜೋರು ಜೋರಾಗಿ ಕಿರುಚುತ್ತಾ ಕೂದಲು ಹಿಡಿದು ಎಳೆದಾಡಿದ್ದಾರೆ. ಈ ಘಟನೆ ನಗರದ ನಡುರಸ್ತೆಯಲ್ಲೆ ನಡೆದಿದ್ದು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ: ಬರಿಗಾಲಿನಲ್ಲಿರುವ ಮಹಿಳೆ ತನ್ನ ಪತಿಯ ಗರ್ಲ್ ಫ್ರೆಂಡ್‍ಳನ್ನು ಮಾರುಕಟ್ಟೆಯಲ್ಲಿ ಭೇಟಿಯಾಗಿದ್ದಾಳೆ. ಕೂಡಲೇ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಪತಿಯ ಗರ್ಲ್ ಫ್ರೆಂಡ್ ಹೈ ಹೀಲ್ ಸ್ಯಾಂಡಲ್ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ ಆಗಿಲ್ಲ. ಕೂಡಲೇ ಮಹಿಳೆ ಪತಿಯ ಗರ್ಲ್ ಫ್ರೆಂಡ್ ಕೂದಲು ಹಿಡಿದು ಎಳೆದಾಡಿದ್ದಾರೆ.

    ಈ ವೇಳೆ ಸ್ಥಳಕ್ಕಾಗಮಿಸಿದ ಪತಿ ತನ್ನ ಪತ್ನಿಗೆ ಆಕೆಯ ಹಲ್ಲೆ ಮಾಡಬೇಡವೆಂದು ಆದೇಶಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳೆ `ಏ ನೀನು ಮಾಡಿದ್ದು ತಪ್ಪು’ ಅಂತಾ ಬೈದಿದ್ದಾರೆ. ಕೊನೆಗೆ ಇಬ್ಬರ ಜಗಳವನ್ನು ಬಿಡಿಸಲು ಪತಿ ಸುಸ್ತಾಗಿದ್ದಾನೆ. ಕೊನೆಗೆ ಮಹಿಳೆ ಮೊದಲು ನನಗೆ ವಿಚ್ಛೇದನ ನೀಡಿ ಆನಂತರ ಮಾತನಾಡು ಅಂತಾ ಹೇಳಿ ಹೊರಟು ಹೋಗಿದ್ದಾಳೆ.

  • ಬಾಯ್‍ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತ: ಬಿಜೆಪಿ ಶಾಸಕ

    ಬಾಯ್‍ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತ: ಬಿಜೆಪಿ ಶಾಸಕ

    ಭೋಪಾಲ್: ನೀವು ಸುರಕ್ಷಿತವಾಗಿ ಇರಬೇಕಾದರೆ ಬಾಯ್‍ಫ್ರೆಂಡ್ ಸಹವಾಸ ಮಾಡಬೇಡಿ ಎಂದು ಮಧ್ಯಪ್ರದೇಶದ ಗುನಾ ಕ್ಷೇತ್ರದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರು ಹುಡುಗಿಯರಿಗೆ ಸಲಹೆ ನೀಡಿದ್ದಾರೆ.

    ಸ್ಥಳೀಯ ಗುನಾ ಸರ್ಕಾರಿ ಕಾಲೇಜಿನಲ್ಲಿ ಮಾತನಾಡಿದ ಅವರು, ಹುಡುಗಿಯರಿಗೆ ಬಾಯ್ ಫ್ರೆಂಡ್ ಏಕೆ ಬೇಕು? ಎಂದು ಪ್ರಶ್ನಿಸಿದ್ದು, ಹುಡುಗಿಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಾದರೆ ಗೆಳೆಯರಿಂದ ದೂರವಿರಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ತಾವು ಭಾಗವಹಿಸಿದ್ದ ಖಾಸಗಿ ಟಿವಿ ವಾಹಿನಿವೊಂದರ ವೇಳೆಯೂ ತಾನು ಮಧ್ಯಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತ ಪ್ರಶ್ನೆಗೂ ಇದೇ ಉತ್ತರವನ್ನು ನೀಡಿರುವುದಾಗಿ ತಿಳಿಸಿದರು.

    ಇಂದಿನ ಯುವಕರಿಗೂ ಗರ್ಲ್ ಫ್ರೆಂಡ್ ಗಳನ್ನು ಮಾಡಿಕೊಳ್ಳದಿರಲು ಸಲಹೆ ನೀಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡದಿರಲು ತಿಳಿಸಿದರು. ಅಲ್ಲದೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿದೇಶಿ ಸಂಸ್ಕೃತಿ ಪ್ರತಿರೂಪವಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿದೆ. ವರ್ಷದಲ್ಲಿ ನಾವು ನಾಲ್ಕು ಬಾರಿ ಮಹಿಳಾ ದಿನ ಆಚರಿಸುತ್ತೇವೆ. ನಾಲ್ಕು ಬಾರಿ ಅವರನ್ನು ಪೂಜಿಸುತ್ತೇವೆ ಎಂದರು.

    ಶಾಸಕ ಪನ್ನಾಲಾಲ್ ಈ ಹಿಂದೆಯೂ ಹಲವು ಬಾರಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಇಟಲಿಯಲ್ಲಿ ವಿವಾಹವಾಗಿದ್ದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

  • ಗರ್ಲ್ ಫ್ರೆಂಡ್ ಜೊತೆ ಸೇರಿ ತಾಯಿ, ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ

    ಗರ್ಲ್ ಫ್ರೆಂಡ್ ಜೊತೆ ಸೇರಿ ತಾಯಿ, ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ

    ಬೆಂಗಳೂರು: ಗರ್ಲ್ ಫ್ರೆಂಡ್ ಜೊತೆ ಸೇರಿಕೊಂಡು ಪತ್ನಿ ಹಾಗೂ ತನ್ನ ತಾಯಿಯ ಮೇಲೆ ಪತಿರಾಯನೊಬ್ಬ ಹಲ್ಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದಿದೆ.

    ರೋಹಿತ್ ತನ್ನ ಕುಟುಂಬದವರ ಮೇಲೆ ಹಲ್ಲೆಗೆ ಯತ್ನಿಸಿರೋ ವ್ಯಕ್ತಿ. ರೋಹಿತ್ ತನ್ನ ಪ್ರೇಯಸಿ ಅಬಂತಿಕಾ ಜೊತೆ ಸೇರಿ ಪತ್ನಿ ಸ್ನೇಹಾ ಹಾಗೂ ತಾಯಿ ನಂದಾರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರು ವರ್ಷಗಳ ಹಿಂದೆ ಸ್ನೇಹಾ ಅವರನ್ನ ಮದುವೆಯಾಗಿದ್ದ ರೋಹಿತ್, ಇತ್ತೀಚಿನ ದಿನಗಳಲ್ಲಿ ಅಬಂತಿಕಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

    ಈ ಬಗ್ಗೆ ಮನೆಯಲ್ಲಿ ಪ್ರಶ್ನಿಸಿದ್ದಕ್ಕೆ ತಾಯಿ ಮತ್ತು ಹೆಂಡತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಈ ಭೂಪ. ಪ್ರೇಯಸಿ ಮಾತಿಗೆ ಮರುಳಾಗಿ ಪತ್ನಿ ಸ್ನೇಹಾಗೆ ಡೈವೋರ್ಸ್ ನೀಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದಾನೆ. ಇದಕ್ಕೆ ಒಲ್ಲೆ ಎಂದಾಗ ಸಾಕಷ್ಟು ಬಾರಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

    ಮಂಗಳವಾರ ರಾತ್ರಿ ರೋಹಿತ್ ಮತ್ತು ಅಬಂತಿಕಾ ಇಬ್ಬರು ಸೇರಿ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪತ್ನಿ ಸ್ನೇಹ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

    ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪುಲಿಕೇಶಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಗರ್ಲ್ ಫ್ರೆಂಡ್ಸ್ ಜೊತೆ ಲಾಂಗ್ ರೈಡಿಗೆ 28 ಬೈಕ್ ಕದ್ದ!

    ಗರ್ಲ್ ಫ್ರೆಂಡ್ಸ್ ಜೊತೆ ಲಾಂಗ್ ರೈಡಿಗೆ 28 ಬೈಕ್ ಕದ್ದ!

    – ಬೈಕ್ ಇಲ್ಲಾಂದ್ರೆ ಬರಲ್ಲ ಅಂತಾರಂತೆ ಗರ್ಲ್ ಫ್ರೆಂಡ್
    – ಬೈಕ್ ಕದ್ದಿದ್ದಕ್ಕೆ 5ನೇ ಬಾರಿ ಜೈಲು ಸೇರಿದ ಅಜರ್

    ಹೈದರಾಬಾದ್: ಪ್ರೇಮಿಗಳು ಬೈಕ್ ನಲ್ಲಿ ಸುತ್ತಾಡೋದನ್ನು ನೀವು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಗರ್ಲ್ ಫ್ರೆಂಡ್ಸ್ ಗಾಗಿ 28 ಬೈಕ್ ಗಳನ್ನೇ ಕದ್ದಿರೋ ಘಟನೆ ನಡೆದಿದೆ.

    ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಈತ 4 ಬಾರಿ ಜೈಲಿಗೆ ಹೋಗಿದ್ದರೂ ಈತನಿಗೆ ಬುದ್ಧಿ ಬಂದಿಲ್ಲ. ಮತ್ತೆ ಮತ್ತೆ ಬೈಕ್ ಕಳ್ಳತನವನ್ನೇ ಮಾಡುತ್ತಿರುವ ಈತ ಈಗ ಹೈದರಾಬಾದ್ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದಾನೆ.

    ಸಾಮಾನ್ಯವಾಗಿ ಬೈಕ್ ಕಳ್ಳತನ ಮಾಡಿದವರು ಅದನ್ನು ಹಣಕ್ಕಾಗಿ ಮಾರಾಟ ಮಾಡುತ್ತಾರೆ. ಆದರೆ ಬೇಗಂಪೇಡೆಯ ಪಾತಿಗಡ್ಡದ ಅಜರ್ ಹುಸೇನ್ ಬೈಕ್ ಗಳನ್ನು ಕದ್ದು ಯಾವತ್ತೂ ಮಾರಾಟ ಮಾಡಿಲ್ಲ. ಬದಲಾಗಿ ಕದ್ದಾಗ ಬೈಕ್ ನಲ್ಲಿದ್ದ ಪೆಟ್ರೋಲ್ ನಲ್ಲಿ ಎಷ್ಟು ದೂರಕ್ಕೆ ಹೋಗುತ್ತೋ ಅಲ್ಲಿಯವರೆಗೆ ಹೋಗಿ ಪೆಟ್ರೋಲ್ ಖಾಲಿಯಾಗುತ್ತಿದ್ದಂತೆಯೇ ಬೈಕ್ ಅಲ್ಲೇ ಬಿಟ್ಟು ಜಾಗ ಖಾಲಿ ಮಾಡುತ್ತಾನೆ.

    ಅಷ್ಟಕ್ಕೂ ಈತ ಬೈಕ್ ಕಳ್ಳತನ ಮಾಡೋದು ಯಾಕೆ ಅಂತಾ ಕೇಳಿದ್ರೆ ವಿಚಿತ್ರವಾದ ವಿಷಯ ಬಿಚ್ಚಿಡ್ತಾನೆ ಅಜರ್. ಈತನಿಗೆ ಈಗಾಗಲೇ ಮದುವೆ ಆಗಿದೆ. ಆದರೆ ಹೆಂಡ್ತಿಗೆ ಡೈವೋರ್ಸ್ ಕೊಟ್ಟಿದ್ದಾನೆ. ಬಳಿಕ ನಗರದ ಕೆಲವು ಮಹಿಳೆಯರ ಜೊತೆ ಗೆಳೆತನ ಬೆಳೆಸಿದ್ದಾನೆ. ನಂತರ ಇವರನ್ನು ಲಾಂಗ್ ರೈಡ್ ಗೆ ಕರೆದುಕೊಂಡು ಹೋಗುತ್ತಾನೆ. ತನ್ನ ಈ ಗರ್ಲ್ ಫ್ರೆಂಡ್ ಗಳನ್ನು ಸುತ್ತಾಡಿಸಲೆಂದೇ ಬೈಕ್ ಕಳ್ಳತನಕ್ಕೆ ಇಳಿದಿದ್ದಾನೆ. ಇದುವರೆಗೆ ಪೊಲೀಸರು 4 ಬಾರಿ ಅಜರ್ ನನ್ನು ಬಂಧಿಸಿದ್ದಾರೆ. ಗರ್ಲ್ ಫ್ರೆಂಡ್ ಗಳು ಇದ್ದಾಗ ಮಾತ್ರ ಪೆಟ್ರೋಲ್ ಹಾಕಿಸ್ತಾನೆ ಅನ್ನೋದು ಬಿಟ್ಟರೆ ಉಳಿದ ಟೈಮ್ ಬೈಕ್ ಎಲ್ಲಿ ನಿಲ್ಲುತ್ತೋ ಅಲ್ಲೇ ಪಾರ್ಕ್ ಮಾಡಿ ಪರಾರಿಯಾಗ್ತಾನೆ ಅಜರ್.

    ಪ್ರತಿ ಬಾರಿ ಪೊಲೀಸ್ ತನಿಖೆ ಮಾಡಿದಾಗಲೂ, ಬೈಕ್ ಇಲ್ಲ ಎಂದರೆ ಗರ್ಲ್ ಫ್ರೆಂಡ್ ನನ್ನ ಜೊತೆ ಬರಲ್ಲ ಅಂತಾರೆ. ಹೀಗಾಗಿ ನಾನು ಬೈಕ್ ಕದ್ದಿದ್ದೇನೆ ಎನ್ನುತ್ತಾನೆ. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಗೆ ಬರುತ್ತಾನೆ. ಇದೇ ಮಂಗಳವಾರ ಅಜರ್ 5ನೇ ಬಾರಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ.