Tag: ಗರ್ಲ್ ಫ್ರೆಂಡ್

  • ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ SIT ನೋಟಿಸ್

    ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ SIT ನೋಟಿಸ್

    ಬೆಂಗಳೂರು: ಅತ್ಯಾಚಾರ ಆರೋಪದಡಿಯಲ್ಲಿ ಬಂಧನವಾಗಿರೋ ಹಾಸನದ ಮಾಜಿ ಸಂಸದ ಆರೋಪಿ ಪ್ರಜ್ವಲ್ ರೇವಣ್ಣಗೆ (Prajwal Revanna) ವಿದೇಶದಲ್ಲಿದ್ದಾಗ ಗರ್ಲ್‍ಫ್ರೆಂಡ್ ಸಹಾಯ ಮಾಡಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ವಿಶೇಷ ತನಿಖಾ ದಳ (ಎಸ್‍ಐಟಿ) ತನಿಖೆಯ ವೇಳೆ ಬಹಿರಂಗವಾಗಿದೆ.

    ಆರೋಪಿ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯ ಜೊತೆ ಇರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜರ್ಮನಿಗೆ (Germany) ಹೋಗಿ ಅಡಿಗಿಕೊಂಡಿದ್ದ. ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಜರ್ಮನಿಯಲ್ಲಿದ್ರು. ಈ ವೇಳೆ ಆರೋಪಿ ಪ್ರಜ್ವಲ್‍ಗೆ ಗರ್ಲ್‍ಫ್ರೆಂಡ್ ಸಹಾಯ ಮಾಡಿರೋದು ಬೆಳಕಿಗೆ ಬಂದಿದೆ.

    ಹಾಗಾಗಿ ಎಸ್‍ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಜ್ವಲ್‍ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ದಾಖಲೆಗಳಿದ್ದು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ಕೋರಿ ಎಸ್‍ಐಟಿ ಅಧಿಕಾರಿಗಳು ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ ನೋಟಿಸ್ ಕೊಟ್ಟಿದೆ. ಇದನ್ನೂ ಓದಿ: ಗುಜರಿ ಗೋಡೌನ್‍ನಲ್ಲಿ ವಿಷಾನಿಲ ಸೋರಿಕೆ- 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಐವರ ಸ್ಥಿತಿ ಗಂಭೀರ

  • ದೀಕ್ಷಿತ್ ಶೆಟ್ಟಿಗೆ ‘ಗರ್ಲ್ ಫ್ರೆಂಡ್’ ಆಗ್ತಾರಾ ರಶ್ಮಿಕಾ ಮಂದಣ್ಣ?

    ದೀಕ್ಷಿತ್ ಶೆಟ್ಟಿಗೆ ‘ಗರ್ಲ್ ಫ್ರೆಂಡ್’ ಆಗ್ತಾರಾ ರಶ್ಮಿಕಾ ಮಂದಣ್ಣ?

    ನಿನ್ನೆಯಷ್ಟೇ ರಶ್ಮಿಕಾ ಮಂದಣ್ಣ(Rashmika Mandanna)  ನಟನೆಯ ‘ಗರ್ಲ್ ಫ್ರೆಂಡ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಗೆ ಅತ್ಯುತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಟೀಸರ್ ನಲ್ಲಿ ಗಂಡು ಧ್ವನಿಯೊಂದು ನಿರೂಪಣೆ ಮಾಡಿದ್ದು, ಅದು ಥೇಟ್ ಕನ್ನಡದ ಪ್ರತಿಭಾವಂತ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಅವರ ಧ್ವನಿಯಂತಿದೆ. ಪಕ್ಕಾ ಅದು ದೀಕ್ಷಿತ್ ಶೆಟ್ಟಿ ಅವರದ್ದೇ ಧ್ವನಿ ಆಗಿರುವುದರಿಂದ ಈ ಸಿನಿಮಾದಲ್ಲಿ ದೀಕ್ಷಿತ್ ಇರಲಿದ್ದಾರಾ ಎನ್ನುವ ಕುತೂಹಲ ಮೂಡಿದೆ.

    ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ದೀಕ್ಷಿತ್ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಗರ್ಲ್ ಫ್ರೆಂಡ್ ಸಿನಿಮಾದಲ್ಲೂ ಅವರು ನಟಿಸಿರುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ಸಿನಿಮಾ ತಂಡದವರು ಈವರೆಗೂ ಹಂಚಿಕೊಂಡಿಲ್ಲ. ಮುಂದೆ ಹಂಚಿಕೊಳ್ಳಬಹುದು. ಬಟ್, ಟೀಸರ್ ನಲ್ಲಿ ಕೇಳಿಸುವ ವಾಯ್ಸ್ ಸಖತ್ ಆಗಿ ಮೋಡಿ ಮಾಡುತ್ತಿದೆ.

    ‘ದಿ ಗರ್ಲ್‌ಫ್ರೆಂಡ್’ (The Girlfriend) ಮಹಿಳಾ ಪ್ರದಾನ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಸಣ್ಣ ಪ್ರೋಮೋ ಒಂದು ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೋ ಸಹ ಕುತೂಹಲ ಮೂಡಿಸುತ್ತಿದೆ. ನೀರಿನಲ್ಲಿ ಮುಳುಗಿರುವ ರಶ್ಮಿಕಾ ಮಂದಣ್ಣ ನಗುತ್ತಿರುತ್ತಾರೆ, ಆದರೆ ಹಠಾತ್ತನೆ ಬೇಸರದ ಮುಖಚಹರೆ ಪ್ರದರ್ಶಿಸುತ್ತಾರೆ, ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆ ಕಣ್ಣು ಮುಚ್ಚಿಬಿಡುತ್ತಾರೆ. ರಶ್ಮಿಕಾ ನೀರಿಗೆ ಇಳಿದಿದ್ದು ಏಕೆ? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ರಶ್ಮಿಕಾರನ್ನು ಕಾಪಾಡುವವರು ಯಾರು? ಇನ್ನೂ ಹಲವು ಪ್ರಶ್ನೆಗಳನ್ನು ಈ ಪ್ರೋಮೋ ಮೂಡಿಸುತ್ತಿದೆ.

    ಸಿನಿಮಾದ ಪ್ರೋಮೋ ನೋಡಿದರೆ ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ಖಾತ್ರಿ ಆಗುತ್ತಿದೆ. ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಪ್ರೇಮ ಸಂಬಂಧದಿಂದ ಗರ್ಲ್‌ಫ್ರೆಂಡ್ ರಶ್ಮಿಕಾ ಮಂದಣ್ಣ ಎದುರಿಸುವ ಭಾವನೆಗಳ ಏರಿಳಿತ, ಸಮಸ್ಯೆಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ರಶ್ಮಿಕಾ ಎಕ್ಸ್‌ಪ್ರೆಶನ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ (Rahul Ravindran) ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿದ್ದು, ವಿದ್ಯಾ ಕೊಪ್ಪಿನೇಡಿ- ಧೀರಜ್ ಮೊಗಿಲಿನೇನಿ ಅವರುಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಹೃದಯಂ’ ಚಿತ್ರದ ಖ್ಯಾತಿಯ ಮಲಯಾಳಂ ಸಂಗೀತ ನಿರ್ದೇಶನ ಹೆಷಾಮ್ ಅಬ್ದುಲ್ ವಹಾಬ್ ಅವರು ಸಂಗೀತ ನೀಡುತ್ತಿದ್ದಾರೆ.

     

    ಇದೇ ಡಿ.1ಕ್ಕೆ ಅನಿಮಲ್ (Animal) ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ರಣ್‌ಬೀರ್‌ಗೆ ಜೋಡಿಯಾಗಿ ಬರುತ್ತಿದ್ದಾರೆ. ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗರ್ಲ್‍ಫ್ರೆಂಡ್ ರೇಪ್ ಮಾಡಿ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ ಹಾಕಿದ ವಿವಾಹಿತ!

    ಗರ್ಲ್‍ಫ್ರೆಂಡ್ ರೇಪ್ ಮಾಡಿ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ ಹಾಕಿದ ವಿವಾಹಿತ!

    ಗಾಂಧಿನಗರ: ಸೂರತ್‍ (Surat) ನಲ್ಲಿ ವ್ಯಕ್ತಿಯೊಬ್ಬ ತನ್ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಆರೋಪಿಯನ್ನು ನಿಕುಂಜ್ ಕುಮಾರ್ ಅಮೃತ್ ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಆದರೆ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಆರೋಪಿಗಳು ಆಕೆಯ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ (Chilli Powder) ಹಾಕಿ ವಿಕೃತಿಯನ್ನು ಕೂಡ ಮೆರೆದಿದ್ದು, ಸದ್ಯ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಿಕುಂಜ್‍ಗೆ ಈಗಾಗಲೇ ಮದುವೆಯಾಗಿರುವ ಸತ್ಯವನ್ನು ಆತ ತನ್ನ ಗರ್ಲ್ ಫ್ರೆಂಡ್‍ಗೆ ಹೇಳಿರಲಿಲ್ಲ. ಆದರೆ ಕೆಲ ದಿನಗಳ ಬಳಿಕ ಆತನ ವೈವಾಹಿಕ ಸ್ಥಿತಿಯ ಬಗ್ಗೆ ಗೆಳತಿಗೆ ತಿಳಿದಾಗ, ಇಬ್ಬರ ಮಧ್ಯೆ ಜಗಳ ನಡೆದಿದೆ. ಅಲ್ಲದೆ ಯುವತಿ, ಪಟೇಲ್‍ನಿಂದ ದೂರವಿರಲು ನಿರ್ಧರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಕೆಲವೇ ತಿಂಗಳಲ್ಲಿ ರಾಜಕೀಯ ಬದಲಾವಣೆ ಆಗಲಿದೆ: ಹೆಚ್‌ಡಿಕೆ ಭವಿಷ್ಯ

    ಆಕೆಯ ನಿರ್ಧಾರದಿಂದ ಕೋಪಗೊಂಡ ಪಟೇಲ್, ತನ್ನ ಗೆಳತಿಯನ್ನು ಕೇಬಲ್ ವೈರ್ ನಿಂದ ಹೊಡೆದು ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ಗೆಳೆಯರ ಜೊತೆ ಸೇರಿ ಆಕೆಯ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ ತುಂಬಿದ್ದಾರೆ. ಬಳಿಕ ಆಕೆಯ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.  ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಆರೋಪಿಯನ್ನು ಓಲಪಾಡ್ ಠಾಣೆಯ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ 376 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

     

  • ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ನವದೆಹಲಿ: ಯುವತಿಯೊಬ್ಬಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ವಿವಾಹಿತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ರೋಹಿತ್ ಗುಪ್ತಾ ಹಾಗೂ ಮೃತ ದುರ್ದೈವಿಯನ್ನು ಸಲ್ಮಾ ಎಂದು ಗುರುತಿಸಲಾಗಿದೆ. ಈತ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಕರೋಲ್ ಭಾಗ್‍ನಲ್ಲಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

    ರೋಹಿತ್ ಮೃತ ಯುವತಿ ಜೊತೆ ಸಂಬಂಧ ಹೊಂದಿದ್ದನು. ಆದರೆ ಇದೀಗ ಆಕೆಯ ಜೊತೆಗಿನ ಸಂಬಂಧ ಬೇರ್ಪಟ್ಟಿದೆ. ಹೀಗಾಗಿ ಹತಾಶೆಗೊಂಡ ರೋಹಿತ್ ಯುವತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು

    ಅಕ್ಟೋಬರ್ 28ರಂದು ಜೆಜೆ ಕಾಲೋನಿಯಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿರುವ ವಿಚಾರವೊಂದು ಪೊಲೀಸರಿಗೆ ತಿಳಿಯುತ್ತಿದೆ. ಆ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದಾಗ ಶೂಟೌಟ್‍ಗೊಳಗಾದ ಸ್ಥಿತಿಯಲ್ಲಿ ಪತ್ತೆಯಾದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ (CCTV) ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ವಿವಿಧ ಸ್ಥಳಗಳು ಮತ್ತು ಸಂಭವನೀಯ ಅಡಗುತಾಣಗಳಲ್ಲಿ ದಾಳಿ ನಡೆಸಲಾಯಿತು. ವಿವರವಾದ ತನಿಖೆಯ ನಂತರ, ಆರೋಪಿಯನ್ನು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ನಿರಂತರ ವಿಚಾರಣೆಯ ವೇಳೆ, ಅವನು ಸಾವಿಗೀಡಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನೆಂದು ಬಹಿರಂಗಪಡಿಸಿದನು. ಆಕೆ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದರಿಂದ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದನು. ಅಪರಾಧ ಎಸಗಿದ ಬಳಿಕ ಬೇರೆ ಬೇರೆ ಹೊಟೇಲ್‍ಗಳಲ್ಲಿ ತಲೆಮರೆಸಿಕೊಂಡಿದ್ದ. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಸ್ಥಳ ಬದಲಿಸುತ್ತಿದ್ದನು. ಕೊಲೆಗೆ ಬಳಸಲಾದ ಆಯುಧವನ್ನು ಚರಂಡಿಗೆ ಎಸೆದಿರುವುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ – ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಪತ್ನಿಯಿಂದ ಗೂಸಾ

    ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ – ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಪತ್ನಿಯಿಂದ ಗೂಸಾ

    ಲಕ್ನೋ: ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ ಮಾಡುತ್ತಿದ್ದ ಪತಿಯನ್ನು ರೆಡ್ ಹ್ಯಾಂಡ್ ಆಗಿ ನೋಡಿದ ಪತ್ನಿ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗಾಜಿಯಾಬಾದ್ ಮಾರುಕಟ್ಟೆಯಲ್ಲಿ (Ghaziabad market) ನಡೆದಿದೆ.

    ಸದ್ಯ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆ ತನ್ನ ಕೆಲವು ಸ್ನೇಹಿತೆಯರ ಜೊತೆ ಸೇರಿ ಗಂಡನ ಕಾಲರ್ ಹಿಡಿದು ಸಾರ್ವಜನಿಕವಾಗಿ ಥಳಿಸಿದ್ದಾಳೆ. ಈ ವೇಳೆ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿದ ಗರ್ಲ್ ಫ್ರೆಂಡ್ ಮೇಲೂ ಮಹಿಳೆ ಹಲ್ಲೆ ನಡೆಸಿದ್ದಾಳೆ. ಇದನ್ನೂ ಓದಿ: ಮಣಿಪಾಲ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ಬ್ಲಡ್ ಗ್ರೂಪ್‍ನ ಕಿಡ್ನಿ ಕಸಿ ಯಶಸ್ವಿ

    ಈ ವೇಳೆ ಅಂಗಡಿಯ ಮಾಲೀಕರೊಬ್ಬರು ಈ ವಿಚಾರವನ್ನು ಹೊರಗಡೆ ಇಟ್ಟುಕೊಳ್ಳಿ, ಹೊರಗೆ ಹೋಗಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಇದೀಗ ಈ ಸಂಬಂಧ ಮಹಿಳೆ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪತಿಯೊಂದಿಗೆ ಜಗಳವಾದ ನಂತರ ಮಹಿಳೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಕರ್ವಾ ಚೌತ್‍ಗಾಗಿ (Karwa Chauth) ಶಾಪಿಂಗ್ ಮಾಡಲು ತನ್ನ ತಾಯಿಯೊಂದಿಗೆ ಬಂದಿದ್ದಳು. ಈ ವೇಳೆ ತನ್ನ ಪತಿ ಮತ್ತೊಬ್ಬಳೊಂದಿಗೆ ಓಡಾಡುತ್ತಿರುವುದನ್ನು ನೋಡಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ಇದನ್ನೂ ಓದಿ: ಮುರುಘಾ ಶ್ರೀಗೆ ಮತ್ತೆ ಸಂಕಷ್ಟ – ಮೈಸೂರಿನಲ್ಲಿ ಮತ್ತೊಂದು FIR ದಾಖಲು

    ಕರ್ವಾ ಚೌತ್ ಹಿಂದೂ ಹಬ್ಬವಾಗಿದ್ದು, ಈ ಹಬ್ಬವನ್ನು ದೇಶದಲ್ಲಿ ಹೆಚ್ಚಾಗಿ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ದಿನ ವಿವಾಹಿತ ಮಹಿಳೆಯರು ಉಪವಾಸ ಮಾಡುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಕರ್ವಾ ಚೌತ್ ಅನ್ನು ಕೃಷ್ಣ ಪಕ್ಷದ ನಾಲ್ಕನೇ ದಿನ ಅಥವಾ ಕಾರ್ತಿಕ್ ತಿಂಗಳ ಹಿಂದೂ ಕ್ಯಾಲೆಂಡರ್ ತಿಂಗಳಿನ ಕರಾಳ ಹದಿನೈದು ದಿನದಂದು ಆಚರಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ನೀನು ಕಪ್ಪು, ದಪ್ಪ, ಕೊಳಕು – ಪತಿ ವಿರುದ್ಧ ದೂರು ನೀಡಿದ ಪತ್ನಿ

    ನೀನು ಕಪ್ಪು, ದಪ್ಪ, ಕೊಳಕು – ಪತಿ ವಿರುದ್ಧ ದೂರು ನೀಡಿದ ಪತ್ನಿ

    ಗಾಂಧಿನಗರ: ಪತ್ನಿ ಕಪ್ಪು ಹಾಗೂ ನೋಡಲು ದಪ್ಪ, ಕೊಳಕು ಎಂದು ಕಿರುಕುಳ ನೀಡುತ್ತಿದ್ದ ಪತಿ ವಿರುದ್ಧ 23 ವರ್ಷದ ಮಹಿಳೆ ಗುಜರಾತಿನ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಮಹಿಳೆ 2008ರಲ್ಲಿ ವಿವಾಹವಾಗಿದ್ದು, ಆಕೆಯ ಪತಿ ವರದಕ್ಷಿಣೆ ನೀಡುವಂತೆ ಕಿರುಕುಳ ಕೊಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಅಲ್ಲದೆ ಮಹಿಳೆಯ ಪೋಷಕರು ವರದಕ್ಷಿಣೆ ನೀಡಲು ಸಾಧ್ಯವಾಗದಿದ್ದಾಗ ಅವಳ ಪತಿ ನೀನು ದಪ್ಪಗಿದ್ದೀಯಾ, ನೋಡಲು ನೀನು ಕಪ್ಪಾಗಿರುವೆ ಎಂದು ಅಣಕಿಸಿ ಥಳಿಸುತ್ತಿದ್ದನು. ಜೊತೆಗೆ ತನ್ನ ಗರ್ಲ್ ಫ್ರೆಂಡ್ ನೋಡಲು ಬಹಳ ತೆಳ್ಳಗಿದ್ದಾಳೆ ಹಾಗೂ ಬಿಳುಪಾಗಿದ್ದಾಳೆ ಎಂದು ಹೋಲಿಸಿದ್ದಾನೆ. ಜೊತೆಗೆ ಉತ್ತಮವಾಗಿ ಅಡುಗೆ ಮಾಡುವುದಿಲ್ಲ, ತನಗೆ ಕಿರುಕುಳ ನೀಡುತ್ತಾಳೆ ಎಂದು ಪತಿ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ.

    ನನ್ನ ಪತಿ ನನ್ನನ್ನು ದಪ್ಪ, ಕಪ್ಪು ಮತ್ತು ಕೊಳಕು ಎಂದು ವ್ಯಂಗ್ಯ ಮಾಡಿ ತನ್ನ ಗರ್ಲ್ ಫ್ರೆಂಡ್ ನೋಡಲು ತೆಳ್ಳಗೆ ಹಾಗೂ ಬಿಳುಪಾಗಿದ್ದು ಸುಂದರವಾಗಿದ್ದಾಳೆ ಎಂದು ಅವಳೊಟ್ಟಿಗೆ ತನ್ನನ್ನು ಹೋಲಿಸುತ್ತಾನೆ. ಇದನ್ನು ನಾನು ವಿರೋಧಿಸಿದಾಗ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದನು.

    ಪತಿ ಮನೆಯವರು ಕೂಡ ನನ್ನನ್ನು ಹೊಡೆಯಲು ಪ್ರಚೋದಿಸುತ್ತಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಅಲ್ಲದೆ ಹೆಣ್ಣು ಮಗುವಿಗೆನಾದರೂ ಜನ್ಮ ನೀಡಿದರೆ ತೀವ್ರವಾಗಿ ಪರಿಣಾಮವನ್ನು ಹೆದರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿದ್ದಾಳೆ.

  • ಅವಳೊಂದಿಗೆ 3, ಇವಳೊಂದಿಗೆ 3 ದಿನ, ಒಂದು ದಿನ ರಜೆ- ಪತ್ನಿ, ಗೆಳತಿ ಜೊತೆ ವ್ಯಕ್ತಿ ಶೇರಿಂಗ್

    ಅವಳೊಂದಿಗೆ 3, ಇವಳೊಂದಿಗೆ 3 ದಿನ, ಒಂದು ದಿನ ರಜೆ- ಪತ್ನಿ, ಗೆಳತಿ ಜೊತೆ ವ್ಯಕ್ತಿ ಶೇರಿಂಗ್

    – ಇಬ್ಬರಿಗೂ ಸಮಯ ನೀಡುವ ಉದ್ದೇಶದಿಂದ ಪ್ಲಾನ್

    ರಾಂಚಿ: ಪತ್ನಿ ಜೊತೆ 3 ಹಾಗೂ ಗರ್ಲ್ ಫ್ರೆಂಡ್ ಜೊತೆ 3 ದಿನ ಬಳಿಕ ಒಂದು ರಜೆ ಎಂದು ವ್ಯಕ್ತಿಯೊಬ್ಬ ಒಪ್ಪಂದ ಮಾಡಿಕೊಂಡಿದ್ದು, ಖುಷಿಯಾಗಿ ಸಂಸಾರ ನಡೆಸುತ್ತಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

    ಜಾರ್ಖಂಡ್‍ನ ರಾಂಚಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಪತ್ನಿ ಹಾಗೂ ಗರ್ಲ್ ಫ್ರೆಂಡ್ ಇಬ್ಬರಿಗೂ ಸಮಯ ನೀಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದಾನೆ. ಹೌದು ಪತ್ನಿ ಜೊತೆ 3 ದಿನ ಹಾಗೂ ಗರ್ಲ್ ಫ್ರಂಡ್ ಜೊತೆ ಮೂರು ದಿನ, ಒಂದು ದಿನ ಸ್ವತಂತ್ರವಾಗಿರಲು ರಜೆ ತೆಗೆದುಕೊಳ್ಳುತ್ತಾನೆ. ಹೀಗೆ ವಾರದ ದಿನಗಳನ್ನು ಎಂಜಾಯ್ ಮಾಡುತ್ತಾನೆ.

    ವಿವಾಹಿತ ವ್ಯಕ್ತಿಯನ್ನು ರಾಜೇಶ್ ಮಹತೋ ಎಂದು ಗುರುತಿಸಲಾಗಿದ್ದು, ರಾಂಚಿಯ ಕೊಕಾರ್ ತಿರಿಲ್ ರಸ್ತೆಯ ನಿವಾಸಿಯಾಗಿದ್ದಾನೆ. ವ್ಯಕ್ತಿ ಪತ್ನಿ ಹಾಗೂ ಮಕ್ಕಳು ಇದ್ದರೂ ವಿವಾಹವಾಗಿಲ್ಲ ಎಂದು ಸುಳ್ಳು ಹೇಳಿ ಬೇರೊಬ್ಬ ಯುವತಿಯ ಜೊತೆ ಸಂಬಂಧ ಬೆಳೆಸಿದ್ದಾನೆ. ಬಳಿಕ ಪತ್ನಿ ಮಕ್ಕಳನ್ನು ಬಿಟ್ಟು ರಾಜೇಶ್ ಗರ್ಲ್ ಫ್ರಂಡ್ ಜೊತೆ ಓಡಿ ಹೋಗಿದ್ದ.

    ಬಳಿಕ ಪ್ರಕರಣ ಸಂಬಂಧ ಕಳೆದ ವರ್ಷ ಜನವರಿಯಲ್ಲಿ ರಾಜೇಶ್ ಪತ್ನಿ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ನಂತರ ಗರ್ಲ್ ಫ್ರೆಂಡ್ ಮನೆಯವರು ಸಹ ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ರಾಜೇಶ್ ಹಾಗೂ ಈತನ ಗರ್ಲ್ ಫ್ರೆಂಡ್ ನ್ನು ಪತ್ತೆ ಹಚ್ಚಿದ್ದು, ಇಷ್ಟರಲ್ಲಾಗಲೇ ಇಬ್ಬರೂ ವಿವಾಹವಾಗಿದ್ದರು. ಇಬ್ಬರೂ ಓಡಿ ಹೋಗಿ ವಿವಾಹವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

    ಇದಾದ ಬಳಿಕ ಪತ್ನಿ ಹಾಗೂ ಗರ್ಲ್ ಫ್ರೆಂಡ್ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಇಬ್ಬರು ಮಹಿಳೆಯರ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಗೆಹರಿಸಿದ್ದಾರೆ. ಅಲ್ಲದೆ 3 ದಿನ ಪತ್ನಿ ಜೊತೆ ಹಾಗೂ 3 ದಿನ ಗರ್ಲ್ ಫ್ರೆಂಡ್ ಜೊತೆ, ಉಳಿದ ಒಂದು ದಿನ ರಜೆ ತೆಗೆದುಕೊಳ್ಳುವಂತೆ ರಾಜೇಶ್‍ಗೆ ಪೊಲೀಸರು ತಿಳಿಸಿದ್ದಾರೆ. ಬಳಿಕ ಎರಡೂ ಕಡೆಯವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಒಪ್ಪಿಗೆ ಸೂಚಿಸಿದ್ದಾರೆ.

    ಬಳಿಕ ಕೆಲವೇ ದಿನಗಳಲ್ಲಿ ರಾಜೇಶ್ ಒಪ್ಪಂದ ಮುರಿದಿದ್ದು, ಈ ವೇಳೆ ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಗರ್ಲ್ ಫ್ರೆಂಡ್ ದೂರು ದಾಖಲಿಸಿದ್ದಾಳೆ. ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ರಾಜೇಶ್ ವಿರುದ್ಧ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಇದೀಗ ಪೊಲೀಸರು ರಾಜೇಶ್‍ನನ್ನು ಬಂಧಿಸಲು ಮುಂದಾಗಿದ್ದಾರೆ.

    ಮೊದಲ ಪತ್ನಿ ರಾಜೇಶ್‍ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಪೊಲೀಸರು ಬಂಧಿಸಲು ಆತನ ಮನೆಗೆ ತೆರಳುತ್ತಿದ್ದಂತೆ ಆತ ಓಡಿ ಹೋಗಲು ಸಹಾಯ ಮಾಡುತ್ತಿದ್ದಾಳೆ. ಪೊಲೀಸರು ಆತನನ್ನು ಬಂಧಿಸಲು ದಾಳಿ ನಡೆಸುತ್ತಲೇ ಇದ್ದಾರೆ.

  • ‘ಗರ್ಲ್ ಫ್ರೆಂಡ್’ ಪರಿಚಯಿಸಿದ ದರ್ಶನ್

    ‘ಗರ್ಲ್ ಫ್ರೆಂಡ್’ ಪರಿಚಯಿಸಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹೊಸ ಗರ್ಲ್ ಫ್ರೆಂಡ್ ಅನ್ನು ಪರಿಚಯ ಮಾಡಿಸಿದ್ದಾರೆ.

    ‘ಇಂಡಿಯಾ V/s ಇಂಗ್ಲೆಂಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಟಿ ಮಾನ್ವಿತಾ ಹರೀಶ್ ಅವರನ್ನು ಗರ್ಲ್ ಫ್ರೆಂಡ್ ಎಂದು ದರ್ಶನ್ ಪರಿಚಯ ಮಾಡಿಕೊಟ್ಟಿದ್ದಾರೆ.

    ಸಿನಿಮಾದ ಟೈಟಲ್ ತುಂಬಾ ಚೆನ್ನಾಗಿದೆ. ನಾನು ಅದಕ್ಕೆ ಒಂದು ಟ್ವಿಸ್ಟ್ ಕೊಡುತ್ತೇನೆ. ಸಿನಿಮಾದ ಟೈಟಲ್ ಮುಂದೆ ಮದರ್ ಹಾಕಿದರೆ ನಮ್ ‘ಮದರ್ ಇಂಡಿಯಾ’ ಆಗುತ್ತಾರೆ. ಇಂಗ್ಲೆಂಡ್ ಮುಂದೆ ಗರ್ಲ್ ಫ್ರೆಂಡ್ ಹಾಕಿದರೆ, ‘ಗರ್ಲ್ ಫ್ರೆಂಡ್ ಆಫ್ ಇಂಗ್ಲೆಂಡ್’ ಆಗುತ್ತದೆ ಎಂದರು.

    ಅದೇ ರೀತಿ ಇಬ್ಬರನ್ನೂ ನಾನು ಈಗಲೇ ತೋರಿಸುತ್ತೇನೆ. ನಮ್ಮ ಸುಮಮ್ಮ ಮದರ್ ಇಂಡಿಯಾ ಆಗುತ್ತಾರೆ. ಮಾನ್ವಿತಾ ಹರೀಶ್ ಅವರು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಹೀಗಾಗಿ ಅವರೇ ಗರ್ಲ್ ಫ್ರೆಂಡ್. ಇನ್ನೂ ಟೈಟಲ್‍ನಲ್ಲಿ ಇರುವ ಡೈಮಂಡ್ ವಸಿಷ್ಠ ಸಿಂಹ ಎಂದು ಇಡೀ ಚಿತ್ರತಂಡಕ್ಕೆ ಶುಭಾಶಯವನ್ನು ತಿಳಿಸಿದರು.

    ದರ್ಶನ್ ಸಿನಿಮಾ ಟೈಟಲ್‍ನ ವರ್ಣನೆ ಕೇಳಿ ಕಾರ್ಯಕ್ರಮದಲ್ಲಿದ್ದವರು ಖುಷಿಪಟ್ಟು ಚಪ್ಪಾಳೆ ತಟ್ಟಿದ್ದಾರೆ.

  • ಎಚ್ಚರಿಸಿದರೂ ಕೇಳಿಲ್ಲ – ಪತಿಯ ಗೆಳತಿಗೆ ಆಸಿಡ್ ಎರಚಿದ ಪತ್ನಿ

    ಎಚ್ಚರಿಸಿದರೂ ಕೇಳಿಲ್ಲ – ಪತಿಯ ಗೆಳತಿಗೆ ಆಸಿಡ್ ಎರಚಿದ ಪತ್ನಿ

    ವಿಶಾಖಪಟ್ಟಣ: ಪತಿಯೊಂದಿಗೆ ಗರ್ಲ್ ಫ್ರೆಂಡ್ ಸಂಪರ್ಕ ಹೊಂದಿದ್ದನ್ನು ತಿಳಿದು ಸಿಟ್ಟಿಗೆದ್ದ ಪತ್ನಿ ಆಕೆಯ ಮೇಲೆ ಆಸಿಡ್ ಎರಚಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ವಿಶಾಖಪಟ್ಟಣದ ಗಜುವಾಕಾ ಪ್ರದೇಶದಲ್ಲಿ ಪ್ರಕರಣ ನಡೆದಿದ್ದು, ಆಸಿಡ್ ಎರಚಿದ್ದರಿಂದಾಗಿ ಸಂತ್ರಸ್ತೆಯ ದೇಹವು ಶೇ.30 ರಷ್ಟು ಸುಟ್ಟು ಹೋಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಆರೋಪಿಯು 30 ವರ್ಷದ ಸಂತ್ರಸ್ತೆಯನ್ನು ಟಾರ್ಗೆಟ್ ಮಾಡಿದ್ದಾಳೆ. ಜಗಳ ನಡೆದ ನಂತರ ಸಂತ್ರಸ್ತೆಯು ಹೈದರಾಬಾದಿಗೆ ಮರಳಿದ್ದಾರೆ.

    ವರದಿ ಪ್ರಕಾರ, ಮಹಿಳೆ ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ವ್ಯಕ್ತಿಯ ಪತ್ನಿಗೆ ತಿಳಿದಿದೆ. ಈ ಹಿಂದೆ ಆರೋಪಿ ತನ್ನ ಪತಿಯೊಂದಿಗೆ ಹೊಂದಿರುವ ಸಂಬಂಧದಿಂದ ದೂರ ಇರು ಎಂದು ಎಚ್ಚರಿಸಿದ್ದಳು. ಆದರೂ ಸಹ ಸಂತ್ರಸ್ತೆ ಕೇಳಿರಲಿಲ್ಲ, ಮತ್ತೆ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಳು. ಹೀಗಾಗಿ ಆರೋಪಿ ಆಸಿಡ್ ಎರಚಿದ್ದಾಳೆ.

    ಆರೋಪಿ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅಲ್ಲದೆ ಸಂತ್ರಸ್ತೆ ಸಹ ಈ ಕುರಿತು ದೂರು ನೀಡಿಲ್ಲ.

    ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿ, ಮದುವೆಯಾಗಲು ನಿರಾಕರಿಸಿದ್ದಕ್ಕೆ ಬಾಯ್ ಫ್ರೆಂಡ್ ಮೇಲೆಯೇ ಹುಡುಗಿ ಆಸಿಡ್ ಎರಚಿದ್ದಳು. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಮದುವೆಯಾಗಲು ಹುಡುಗ ನಿರಾಕರಿಸಿದನೆಂದು ಸಿಟ್ಟಿಗೆದ್ದ ಹುಡುಗಿ ಯುವಕನ ಮೇಲೆಯೇ ಆಸಿಡ್ ಎರಚಿದ್ದಳು. ಇದರಿಂದಾಗಿ ಹುಡುಗನ ಮುಖದಲ್ಲಿ ವಿಪರೀತ ಸುಟ್ಟ ಗಾಯಗಳಾಗಿದ್ದವು.

    ಆರೋಪಿ ಹಾಗೂ 20 ವರ್ಷದ ಸಂತ್ರಸ್ತ ಆರು ತಿಂಗಳಿಂದ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಇದ್ದಕ್ಕಿದ್ದಂತೆ ಸಂತ್ರಸ್ತನು ತನ್ನ ಗರ್ಲ್ ಫ್ರೆಂಡ್‍ನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದಾನೆ. ಅಲ್ಲದೆ ಅವಳ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಬಾಯ್ ಫ್ರೆಂಡ್ ಮೇಲೆ ಆಸಿಡ್ ಎರಚಿದ್ದಳು. ನಂತರ ಸಂತ್ರಸ್ತ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿ ಯುವತಿಯನ್ನು ಐಪಿಸಿ ಸೆಕ್ಷನ್ 326(ಎ) ಅಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು.

  • ಗರ್ಲ್ ಫ್ರೆಂಡ್ ಜೊತೆ ಮಾತಾಡ್ತಿದ್ದಿದೀಕೆ 16ರ ಹುಡುಗನ ಹೊಡೆದು ಕೊಂದ್ರು!

    ಗರ್ಲ್ ಫ್ರೆಂಡ್ ಜೊತೆ ಮಾತಾಡ್ತಿದ್ದಿದೀಕೆ 16ರ ಹುಡುಗನ ಹೊಡೆದು ಕೊಂದ್ರು!

    ಪಾಟ್ನಾ: ಗರ್ಲ್ ಫ್ರೆಂಡ್ ಜೊತೆ ಮಾತಾಡುತ್ತಿದ್ದ 16 ವರ್ಷದ ಹುಡಗನೊಬ್ಬನನ್ನು ಗುಂಪೊಂದು ಹಿಗ್ಗಾಮುಗ್ಗವಾಗಿ ಥಳಿಸಿ ಬರ್ಬರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಕಿಡ್ವಾಯಿ ನಗರ್ ನಲ್ಲಿ ಗುರುವಾರ ನಡೆದಿದೆ.

    ಮೃತ ದುರ್ದೈವಿ ಹುಡುಗ 11ನೇ ತರಗತಿಯಲ್ಲಿ ಓದುತ್ತಿದ್ದನು. ಈತನಿಗೆ ಹುಡುಗರ ಗುಂಪೊಂದು ಬುಧವಾರ ಚೆನ್ನಾಗಿ ಥಳಿಸಿದೆ ಅಂತ ಕಿಡ್ವಾಯಿ ನಗರ್ ಪೊಲೀಸ್ ಠಾಣೆಯ ಅಧಿಕಾರಿ ಅನುರಾಗ್ ಮಿಶ್ರ ತಿಳಿಸಿದ್ದಾರೆ.

    ಥಳಿತದ ಪರಿಣಾಮ ಗಂಭೀರ ಗಾಯಗೊಂಡಿದ್ದ ಹುಡುಗನನ್ನು ಕೂಡಲೇ ಲಾಲ್‍ ಲಜ್‍ಪತ್ ರಾಯ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸೋದರಿಯನ್ನು ಪ್ರೀತಿಸ್ತಿದ್ದಾನೆಂದು ಹೊಡೆದು ಕೊಂದೇ ಬಿಟ್ಟ!

    ಹುಡುಗ ತನ್ನ ನೆರೆಮನೆಯ ಹುಡುಗಿ ಜೊತೆ ಮಾತನಾಡುತ್ತಿದ್ದನು. ಹುಡುಗಿ ಪದೇ ಪದೇ ಹುಡುಗನ ಜೊತೆ ಮಾತನಾಡುತ್ತಿದ್ದಿದ್ದನ್ನು ಆಕೆಯ ಬಾಯ್ ಫ್ರೆಂಡ್ ನೋಡಿದ್ದನು. ಅಲ್ಲದೇ ಈತ ಹುಡುಗನಿಗೆ ತನ್ನ ಹುಡುಗಿಯಿಂದ ದೂರ ಇರು. ಅವಳ ಜೊತೆ ಜಾಸ್ತಿ ಮಾತನಾಡದಂತೆ ಹಲವು ಬಾರಿ ಎಚ್ಚರಿಕೆ ಕೂಡ ನೀಡಿದ್ದನು. ಇದನ್ನೂ ಓದಿ: ರ‍್ಯಾಗಿಂಗ್‌ ತಪ್ಪಿಸಿಕೊಂಡಿದ್ದಕ್ಕೆ ಟೆಕ್ ವಿದ್ಯಾರ್ಥಿಗೆ ಶಿಕ್ಷೆ – ಮೈದಾನದಲ್ಲೇ ಮೂರು ಗಂಟೆ ಥಳಿಸಿದ ಹಿರಿಯ ವಿದ್ಯಾರ್ಥಿಗಳು!

    ಆದ್ರೆ ಬುಧವಾರ ಸಂಜೆ ಮೃತ ಹುಡುಗ, ಹುಡುಗಿ ಜೊತೆ ಮಾತನಾಡುತ್ತಿದ್ದ ವೇಳೆ ಆಕೆಯ ಬಾಯ್ ಫ್ರೆಂಡ್ ತನ್ನ ಸಂಗಡಿಗರೊಂದಿಗೆ ಬಂದು ಹುಡುಗನಿಗೆ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಹುಡುಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv