Tag: ಗರ್ಲಾನಿ

  • ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

    ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

    ಮಾಜಮುಖಿ ಕಾರ್ಯಕ್ಕಾಗಿ ನಟಿ ಸಂಜನಾ ಗರ್ಲಾನಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಎರಡ್ಮೂರು ದಿನಗಳಿಂದ ಹರಿದಾಡುತ್ತಿತ್ತು. ತುಂಬು ಗರ್ಭಿಣಿಯಾಗಿರುವ ಸಂಜನಾ ಹೀಗೇಕೆ ಮಾಡಿಕೊಂಡರು ಎನ್ನುವ ಚರ್ಚೆ ಕೂಡ ನಡೆದಿತ್ತು. ಅವರು ಮದುವೆ ಆಗಿದ್ದು ಬೇರೆ ಧರ್ಮದ ಹುಡುಗನಾಗಿದ್ದರಿಂದ, ಆ ಕುಟುಂಬ ತಲೆ ಬೋಳಿಸಿಕೊಳ್ಳಲು ಒಪ್ಪುತ್ತದಾ ಎನ್ನುವ ಅನುಮಾನವೂ ಮೂಡಿತ್ತು. ಏನೇ ಆದರೂ, ಒಳ್ಳೆಯ ಕೆಲಸಕ್ಕಾಗಿ ಅವರು ಕೇಶಮುಂಡನ ಮಾಡಿಸಿದ್ದರಿಂದ ನಾಡಿಗೆ ನಾಡೇ ಅವರನ್ನು ಹೊಗಳಿತ್ತು. ಇದೀಗ ನಂಬಿದ ಎಲ್ಲರಿಗೂ ಸಂಜನಾ ಫೂಲ್ ಮಾಡಿದ್ದಾರೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ದೇವರಿಗೆ ಹರಕೆ ಹೊತ್ತಿರಬಹುದು ಅಥವಾ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿರಬಹುದು ಎಂದು ನಂಬಿದ್ದ ಜನಕ್ಕೆ ಸಂಜನಾ ಫೂಲ್ ಮಾಡಿದ್ದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಈ ರೀತಿ ಭಾವನಾತ್ಮಕವಾಗಿ ಯಾರೊಂದಿಗೂ ಆಟ ಆಡಬಾರದು ಎಂದು ಕೆಲವರು ಕಟುವಾಗಿಯೇ ತಿವಿದಿದ್ದರೆ, ಇದು ಫೇಕ್ ಎಂದು ಮೊದಲೇ ಗೊತ್ತಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಟ್ರೋಲ್ ಪೇಜ್ ಗಳು ಮಾತ್ರ ಸಂಜನಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿವೆ. ಇದೊಂದು ಭಾವನಾತ್ಮಕ ವಿಷಯವಾಗಿದ್ದರಿಂದ ಈ ರೀತಿಯಾಗಿ ಜನರನ್ನು ಮೂರ್ಖರನ್ನಾಗಿ ಮಾಡಬಾರದು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

     

    ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳು, ಅದು ಕೇವಲ ಏಪ್ರಿಲ್ ಫೂಲ್ ಗಾಗಿ ಮಾಡಿದ್ದು ಎಂದು ಮನವರಿಕೆ ಮಾಡಿಕೊಡಲು ಸಂಜನಾ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.  ಅದಕ್ಕೂ ಮುನ್ನ ಬೋಳು ತಲೆಯ  ಫೋಟೋ ಹಾಕಿ ‘ಚೆಲುವು ಎನ್ನುವುದು ನೋಡುವವರ ಕಣ್ಣಿನಲ್ಲಿದೆ. ನಾನು ದೇವರ ಮೇಲಿಟ್ಟ ನಂಬಿಕೆಗಾಗಿ ನನ್ನ ತಲೆಗೂದಲನ್ನು ನಾನು ತ್ಯಾಗ ಮಾಡಿದ್ದೇನೆ.  ನಾನು ಈಗಾಗಲೇ ಅನೇಕ ಸಂಕಷ್ಟಗಳನ್ನು ದಾಟಿಕೊಂಡು ಬಂದಿದ್ದೇನೆ. ಅವೆಲ್ಲದಕ್ಕೂ ಶಕ್ತಿ ಕೊಟ್ಟಿದ್ದು ದೇವರು. ಹಾಗಾಗಿ ನಾನು ದೇವರಿಗೆ ಅವುಗಳನ್ನು ಅರ್ಪಿಸಿದ್ದೇನೆ. ನನ್ನ ಮಗುವಿಗಾಗಿ ನಾನು ಹರಕೆ ತೀರಿಸಿದ್ದೇನೆ’ ಹೀಗೆ ಭಾವನಾತ್ಮಕವಾಗಿ ಕರಳು ಹಿಂಡುವಂತೆ ಫೋಟೋ ಜತೆ ಬರೆದುಕೊಂಡಿದ್ದರು. ಇದನ್ನೂ ಓದಿ : ನೀನಾಸಂ ಸತೀಶ್ ಫಸ್ಟ್ ಫೋಟೋ ಶೂಟ್ ಸ್ಟೋರಿ ವಿತ್ ಫೋಟೋ ಆಲ್ಬಂ

    ತಮಗೆ ಪ್ರಚಾರದ ಅಗತ್ಯವಿಲ್ಲವೆಂದು ಹಲವಾರು ಭಾರೀ ಸಂಜನಾ ಹೇಳಿಕೊಂಡಿದ್ದರೂ, ತಲೆ ಬೋಳಿಸಿದ ಫೋಟೋವನ್ನು ಹಾಕಿರುವುದು ಏತಕ್ಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ತಲೆ ಬೋಳಿಸಿಕೊಂಡಿರುವ ಫೋಟೋ ಅಷ್ಟೇ ಹಾಕಿದ್ದರೆ  ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆ ಫೋಟೋ ಜತೆ ಹಾಕಿರುವ ಅಕ್ಷರಗಳ ಸಾಲುಗಳು ಅಭಿಮಾನಿಗಳನ್ನು ಕೆರಳಿಸಿವೆ. ಧಾರ್ಮಿಕ ಹೆಸರಿನಲ್ಲಿ ಈ ರೀತಿ ಆಟ ಆಡುವುದು ಸರಿಯಲ್ಲ ಎಂದು ಖಾರವಾಗಿಯೇ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.