Tag: ಗರ್ಭಿಣಿ ಪತ್ನಿ

  • 3 ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ!

    3 ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಕ್ಷಸ ಪ್ರವೃತ್ತಿಯ ಗಂಡನೊಬ್ಬನು ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ಮಾರ್ಚ್ 9 ರಂದು ನಗರದ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು 37 ವರ್ಷದ ಆರೋಪಿ ಬಾಬುವನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಏಳು ವರ್ಷದ ಹಿಂದೆ ಮೀನಾ ವಿಜಯಕಾಂತ್ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ 3 ಜನ ಹೆಣ್ಣು ಮಕ್ಕಳಿದ್ದು ವಿಧಿವಶಾತ್ ಮೂರು ವರ್ಷದ ಹಿಂದೆಯೇ ಅವರ ಮೊದಲನೇಯ ಪತಿ ತೀರಿಹೋಗಿದ್ದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

    ನಂತರ ಮೀನಾಗೆ ಬಾಬು ಪರಿಚಯವಾಗುತ್ತದೆ. ಮೀನಾ ತನ್ನ ಬಾಳು ಬಂಗಾರವಾಗುತ್ತದೆ ಅಂತ ಬಾಬುನನ್ನು ಎರಡನೇ ಮದುವೆ ಆಗಿದ್ದರು. ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು. ನಂತರದಲ್ಲಿ ಇವರ ದಾಂಪತ್ಯ ಜೀವನವು ಚೆನ್ನಾಗಿಯೇ ಇತ್ತು. ಆದರೆ ಮೀನಾ ಕೂಲಿ ಮಾಡಿ ಕೂಡಿಟ್ಟ ಹಣವನ್ನೆಲ್ಲಾ ಅವನು ಕುಡಿದು ಹಾಳು ಮಾಡುತ್ತಿದ್ದನು.

    ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು. ಮಾರ್ಚ್ 9 ರಂದು ದಂಪತಿಯ ನಡುವೆ ಜೋರಾಗಿ ಜಗಳ ನಡೆದಿದ್ದು, ಪತ್ನಿಯು ಇನ್ನೂ ದುಡ್ಡು ಕೇಳಿದರೆ ನಾನು ಮೈ ಮೇಲೆ ಡೀಸೆಲ್ ಸುರಿದುಕೊಂಡು ಸತ್ತು ಹೋಗುತ್ತೆನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

    ಈ ವೇಳೆ ಸಾಯುತ್ತೇನೆ ಎಂದ ಪತ್ನಿಯನ್ನು ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆ ಬಾ ಅಂತ ಅಲ್ಲಿಯೇ ಸ್ಟೌ ನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಮೀನಾರ ಮೊದಲ ಪತಿಗೆ ಜನಿಸಿದ್ದ ಪುಟ್ಟ ಹೆಣ್ಣು ಮಗುವನ್ನು ಕೂಡಾ ಕಚ್ಚಿ ವಿಕೃತಿ ಮೆರೆದಿದ್ದಾನೆ. ಘಟನೆ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತ್ತೆ, ಗರ್ಭಿಣಿ ಪತ್ನಿ, ಇಬ್ಬರು ಮಕ್ಳಳ ಬರ್ಬರವಾಗಿ ಕೊಂದ ಕುಡುಕ..!

    ಅತ್ತೆ, ಗರ್ಭಿಣಿ ಪತ್ನಿ, ಇಬ್ಬರು ಮಕ್ಳಳ ಬರ್ಬರವಾಗಿ ಕೊಂದ ಕುಡುಕ..!

    ಮೈಸೂರು: ಮದ್ಯವ್ಯಸನಿಯೊಬ್ಬ ತನ್ನ ಅತ್ತೆ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಚಾಮೇಗೌಡನ ಹುಂಡಿಯಲ್ಲಿ ಈ ಘಟನೆ. ನಡೆದಿದೆ. ಅತ್ತೆ ಕೆಂಪಾಜಮ್ಮ (60), ಗರ್ಭಿಣಿ ಪತ್ನಿ ಗಂಗಾ(28), ಇಬ್ಬರು ಗಂಡು ಮಕ್ಳಳಾದ ರೋಹಿತ್ (4) ಮತ್ತು ಸಾಮ್ರಾಟ್ (2) ಕೊಲೆಯಾದ ದುರ್ದೈವಿಗಳು. ಈ ನಾಲ್ವರನ್ನೂ ಆರೋಪಿ ಮಣಿಕಂಠಸ್ವಾಮಿ ಕೊಲೆ ಮಾಡಿದ್ದಾನೆ.

    ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯವೆಸಗಿದ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಸರಗೂರು ಪಿಎಸ್‍ಐ ದಿವ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರವಾಸದ ಬಯಕೆ ತೀರಿಸಲೆಂದು ಕರೆದೊಯ್ದು ಪತಿಯಿಂದಲೇ ಗರ್ಭಿಣಿಯ ಕೊಲೆ!

    ಪ್ರವಾಸದ ಬಯಕೆ ತೀರಿಸಲೆಂದು ಕರೆದೊಯ್ದು ಪತಿಯಿಂದಲೇ ಗರ್ಭಿಣಿಯ ಕೊಲೆ!

    ಬೆಂಗಳೂರು: ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯ ಬಯಕೆ ತೀರಿಸುವುದಾಗಿ ಕರೆದೊಯ್ದು ಕೊಲೆ ಮಾಡಿದ ಘಟನೆ ಎರಡು ತಿಂಗಳ ನಂತರ ಬೆಳಕಿಗೆ ಬಂದಿದೆ.

    ಶಶಿಕಲಾ ಕೊಲೆಯಾದ ಗರ್ಭಿಣಿ. ಆರೋಪಿ ಪತಿ ಸತ್ಯರಾಜ್ ಶಶಿಕಲಾ ಅವರನ್ನು ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

    ನಡೆದದ್ದು ಏನು?
    ಗರ್ಭಿಣಿಯಾಗಿದ್ದ ಶಶಿಕಲಾ ತಾನು ಪ್ರವಾಸ ಮಾಡಬೇಕೆಂಬ ಬಯಕೆಯನ್ನು ಪತಿ ಸತ್ಯರಾಜ್ ಮುಂದಿಟ್ಟಿದ್ದರು. ಹೀಗಾಗಿ ಸತ್ಯರಾಜ್ ಎರಡು ತಿಂಗಳ ಹಿಂದೆ ಶಶಿಕಲಾ ಅವರನ್ನು ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಯ ಹಿನ್ನೀರಿನ ಜಾಗಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲದೇ ಅಲ್ಲಿಯೇ ಆಕೆಯನ್ನು ನೀರಿಗೆ ನೂಕಿ ಕೊಲೆ ಮಾಡಿದ್ದನು.

    ಕೊಲೆ ಮಾಡಿ ಮನೆಗೆ ಬಂದ ಸತ್ಯರಾಜ್, ‘ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದು ಶಶಿಕಲಾ ಫೋನ್‍ನಿಂದ ಆಕೆಯ ಸಂಬಂಧಿಕರಿಗೆ ಮೆಸೇಜ್ ಮಾಡಿದ್ದನು. ಅಷ್ಟಕ್ಕೆ ಬಿಡದೇ ಪುಟ್ಟೇನಹಳ್ಳಿ ಠಾಣೆಯಲ್ಲಿ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಇಷ್ಟು ಮಾತ್ರವಲ್ಲದೇ ಪೊಲೀಸರಿಗೆ ತನಿಖೆಯಲ್ಲಿ ಸಹಾಯ ಮಾಡುವವನಂತೆ ಕೂಡ ನಟಿಸಿದ್ದನು.

    ಸತ್ಯರಾಜ್ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಆತನನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಸತ್ಯರಾಜ್‍ನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸತ್ಯರಾಜ್ ಹಾಗೂ ಶಶಿಕಲಾ ಮಧ್ಯೆ ಜಗಳವಾಗಿತ್ತು. ಆತ ಸಾಲ ಮಾಡಿಕೊಂಡಿದ್ದನು. ಹೀಗಾಗಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.