Tag: ಗರ್ಭಕೋಶ ಕಸಿ

  • ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    – ಮಗಳಿಗೆ ಗರ್ಭಕೋಶ ದಾನ ನೀಡಿದ ತಾಯಿ

    ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ಗರ್ಭಕೋಶ ಕಸಿ ವಿಧಾನದ ಮೂಲಕ ಹೆಣ್ಣು ಮಗು ಜನನವಾಗಿದೆ. ಮಹಾರಾಷ್ಟ್ರದ ಪುಣೆ ನಗರದ ಆಸ್ಪತ್ರೆಯಲ್ಲಿ ಗರ್ಭಕೋಶ ಕಸಿ ವಿಧಾನದ ಮೂಲಕ ತಾಯಿ ಹಣ್ಣು ಮಗವನ್ನು ಹೆತ್ತಿದ್ದಾರೆ.

    ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ 28 ವರ್ಷದ ಮೀನಾಕ್ಷಿ ವಾಲನ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗುಜರಾತ್ ರಾಜ್ಯದ ವಡೋದರ ನಗರದ ಮೀನಾಕ್ಷಿ ಅವರು 2017ರಿಂದಲೂ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೀನಾಕ್ಷಿ ಅವರಿಗೆ ಪದೇ ಪದೇ ಗರ್ಭಪಾತ ಆಗುತ್ತಿದ್ದ ಕಾರಣ ಮೇ 2017ರಲ್ಲಿಯೇ ಅವರ ತಾಯಿಯೇ ತಮ್ಮ ಗರ್ಭಕೋಶವನ್ನು ಮಗಳಿಗೆ ದಾನ ಮಾಡಿದ್ದರು.

    ಗರ್ಭಕೋಶ ಕಸಿಯ ಬಳಿಕ ಮೀನಾಕ್ಷಿ ಅವರಿಗೆ ಐವಿಎಫ್ (in-vitro fertilisation) ವಿಧಾನದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ತಾಯಿ ಮತ್ತು ಮಗುವನ್ನು ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗರ್ಭಕೋಶದ ಕಸಿ ಮೂಲಕ ಹುಟ್ಟಿದ ಭಾರತದ ಮೊದಲು ಮಗು ಮಾತ್ರವಲ್ಲದೇ, ಏಷ್ಯಾ ಪೆಸಿಫಿಕ್ ವಲಯದ ವ್ಯಾಪ್ತಿಯ ಮೊದಲ ಮಗು ಎನ್ನುವ ಹೆಗಳ್ಳಿಕೆಗೆ ಪಾತ್ರವಾಗಿದೆ.

    ವಿಶ್ವದಲ್ಲಿ ಈವರೆಗೆ ಸ್ವೀಡನ್ ನಲ್ಲಿ 9, ಅಮೆರಿಕದಲ್ಲಿ 2 ಮಕ್ಕಳು ಜನಿಸಿವೆ. 12ನೇ ಮಗು ಭಾರತದ ನಮ್ಮ ಆಸ್ಪತ್ರೆಯಲ್ಲಿ ಜನಿಸಿದೆ ಅಂತಾ ಡಾ.ವರ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv