Tag: ಗರ್ಬಾ ಡ್ಯಾನ್ಸ್

  • ಕೋಬ್ರಾ ಹಿಡಿದು ಗರ್ಬಾ ಡ್ಯಾನ್ಸ್ ಮಾಡಿದ ಮಹಿಳೆಯರ ಬಂಧನ

    ಕೋಬ್ರಾ ಹಿಡಿದು ಗರ್ಬಾ ಡ್ಯಾನ್ಸ್ ಮಾಡಿದ ಮಹಿಳೆಯರ ಬಂಧನ

    ಗಾಂಧಿನಗರ: ನಾಗರಹಾವನ್ನು ಹಿಡಿದು ಗುಜರಾತಿ ಗರ್ಬಾ ನೃತ್ಯ ಮಾಡಿದ 13 ವರ್ಷದ ಬಾಲಕಿ ಸೇರಿ ಮೂರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

    ಇತ್ತೀಚಿಗೆ ಮುಕ್ತಾಯಗೊಂಡ ನವರಾತ್ರಿ ಉತ್ಸವದಲ್ಲಿ ಗುಜರಾತ್‍ನ ಶಿಲ್ ಎಂಬ ಗ್ರಾಮದಲ್ಲಿ ಮಹಿಳೆಯರು ಕೈಯಲ್ಲಿ ನಾಗರಹಾವನ್ನು ಹಿಡಿದು ಗರ್ಬಾ ನೃತ್ಯವನ್ನು ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈಗ ಹಾವನ್ನು ಹಿಡಿದು ಡ್ಯಾನ್ಸ್ ಮಾಡಿದ ಮಹಿಳೆಯರ ವಿರುದ್ಧ ದೂರು ದಾಖಲಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ವೈರಲ್ ಆದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಹಾವು ಹಿಡಿದು ನೃತ್ಯ ಮಾಡಿದ ಇಬ್ಬರು ಮಹಿಳೆಯರು, 12 ವರ್ಷದ ಬಾಲಕಿ, ಕಾರ್ಯಕ್ರಮ ಸಂಯೋಜಕರು ಮತ್ತು ಹಾವನ್ನು ಸರಬರಾಜು ಮಾಡಿದವನು ಸೇರಿ ಒಟ್ಟು ಐದು ಜನರನ್ನು ಅರೆಸ್ಟ್ ಮಾಡಿದ್ದೇವೆ. ಜೊತೆಗೆ 12 ವರ್ಷದ ಬಾಲಕಿಯನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ ನಾವು ಎರಡು ನಾಗರಹಾವುಗಳನ್ನು ನೋಡಬಹುದು. ಇದರಲ್ಲಿ ಒಂದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತದೆ. ಆದರೆ ಮಹಿಳೆ ಒಂದು ಕೈಯಲ್ಲಿ ಕತ್ತಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಹಾವನ್ನು ಹಿಡಿದುಕೊಂಡಿರುತ್ತಾಳೆ. ಇನ್ನೊಂದು ಹಾವನ್ನು ಮತ್ತೊಬ್ಬ ಮಹಿಳೆ ಎರಡು ಕೈಯಲ್ಲಿ ಹಿಡಿದುಕೊಂಡಿರುತ್ತಾಳೆ. ಇನ್ನುಳಿದ ಮಹಿಳೆಯರು ಇವರ ಸುತ್ತ ಗರ್ಬಾ ಡ್ಯಾನ್ಸ್ ಮಾಡುತ್ತಿರುತ್ತಾರೆ.

    https://twitter.com/puneet_bhp/status/1183054083852124160

    ಈ ಪ್ರಕರಣದಕ್ಕೆ ಸಂಬಂಧಿಸಿದ ಎಲ್ಲರನ್ನೂ ಬಂಧಿಸಿರುವ ಪೊಲೀಸರು, ಐವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಸ್ಥಳೀಯ ನ್ಯಾಯಾಲಯ ಐವರಿಗೂ ಜಾಮೀನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗರ್ಬಾ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಸಾವು

    ಗರ್ಬಾ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಸಾವು

    ಜೈಪುರ: ಗರ್ಬಾ ಡ್ಯಾನ್ಸ್(ಗುಜರಾತಿ ಶೈಲಿಯ ನೃತ್ಯ) ಮಾಡುತ್ತಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ರಾಜಸ್ಥಾನದ ಮೌಂಟ್ ಅಬುದಲ್ಲಿ ನಡೆದಿದೆ.

    ಜಗದೀಶ್ ಮೃತಪಟ್ಟ ವ್ಯಕ್ತಿ. ಜಗದೀಶ್ ಮೂಲತಃ ಗುಜರಾತ್‍ನ ಸುರತ್ ನಿವಾಸಿಯಾಗಿದ್ದು, ತಮ್ಮ ಪತ್ನಿ ಹಾಗೂ ಐವರು ದಂಪತಿ ಜೊತೆ ವೀಕೆಂಡ್ ಕಳೆಯಲು ರಾಜಸ್ಥಾನದ ಮೌಂಟ್ ಅಬುಗೆ ತೆರಳಿದ್ದರು. ಇಲ್ಲಿ ಅವರು ಗರ್ಬಾ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.

    ಈ ವೀಕೆಂಡ್ ಕಳೆಯಲು ನಾವು ಸುರತ್‍ನಿಂದ ಮೌಂಟ್ ಅಬುಗೆ ಬಂದಿದ್ದೇವು. ಭಾನುವಾರ ನಾವು ಹೊರಗೆ ಸುತ್ತಾಡಿ ನಮ್ಮ ಹೋಟೆಲಿಗೆ ಹಿಂತಿರುಗಿದ್ದೇವು. ಹೋಟೆಲಿಗೆ ಹಿಂತಿರುಗಿದ್ದಾಗ ಅಲ್ಲಿ ಗರ್ಬಾ ನೃತ್ಯವನ್ನು ಆಯೋಜಿಸಲಾಗಿತ್ತು. ಆಗ ನಾವು ಕೂಡ ಗರ್ಬಾ ಡ್ಯಾನ್ಸ್ ಮಾಡಲು ಶುರು ಮಾಡಿದ್ದೇವೆ ಎಂದು ಜಗದೀಶ್ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

    ಇದೇ ವೇಳೆ ಗರ್ಬಾ ಡ್ಯಾನ್ಸ್ ಮಾಡುತ್ತಿದ್ದ ಜಗದೀಶ್ ಏಕಾಏಕಿ ಕುಸಿದು ಬಿದ್ದರು. ತಕ್ಷಣ ನಾವು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೇವು. ಆದರೆ ಅಷ್ಟರಲ್ಲಿ ಜಗದೀಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು ಎಂದು ಜಗದೀಶ್ ಸ್ನೇಹಿತ ಹೇಳಿದ್ದಾರೆ.

    ಹೊರಗೆ ಸುತ್ತಾಡಿ ಬಂದ ನಂತರ ಇಡೀ ಕುಟುಂಬ ಹೋಟೆಲಿನಲ್ಲಿ ಗರ್ಬಾ ನೃತ್ಯ ಮಾಡುವ ಮೂಲಕ ಎಂಜಾಯ್ ಮಾಡಿದ್ದಾರೆ. ಸದ್ಯ ಜಗದೀಶ್ ಕುಸಿದು ಬಿದ್ದ ದೃಶ್ಯವನ್ನು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ಸೈನಿಕರಿಂದ ಗರ್ಬಾ ಡ್ಯಾನ್ಸ್ – ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರಿಂದ ಮನವಿ

    ಸೈನಿಕರಿಂದ ಗರ್ಬಾ ಡ್ಯಾನ್ಸ್ – ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರಿಂದ ಮನವಿ

    ವರಾತ್ರಿಗೆ ಗಡಿಯಲ್ಲಿ ಸೈನಿಕರು ಗರ್ಬಾ ಡ್ಯಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲದೆ ಮಹೀಂದ್ರ ಮೋಟಾರ್ ಮಾಲೀಕ ಆನಂದ್ ಮಹೀಂದ್ರಾ ಅವರು ಕೂಡ ಈ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿಕೊಂಡಿದ್ದು, ನೆಟ್ಟಿಗರು ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರಿನಲ್ಲಿ, “ಡಾಂಡಿಯಾ ಡ್ಯಾಡ್ ಸ್ಪರ್ಧೆಗೆ ನನಗೆ ಯಾವುದೇ ಎಂಟ್ರಿ ಸಿಗಲಿಲ್ಲ. ಆದರೆ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸುನಾಮಿ ತರಿಸುವಂತಿದೆ. ಅದರಲ್ಲಿ ಈ ವಿಡಿಯೋ ಕೂಡ ಒಂದಾಗಿದ್ದು, ನಾನು ಸೆಲ್ಯೂಟ್ ಮಾಡುತ್ತೇನೆ. ಈ ವಿಡಿಯೋ ನೋಡಿ ನನಗೆ ಈಗ ‘ಹೌ ಈಸ್ ದಿ ಜೋಶ್’ ಎಂದು ಕೇಳುವ ಅವಶ್ಯಕತೆ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    ವಿಡಿಯೋದಲ್ಲಿ 13 ಸೈನಿಕರು ಟೋಲಿ ಗುಜರಾತಿ ಹಾಡಿಗೆ ಗರ್ಬಾ ಡ್ಯಾನ್ಸ್(ಗುಜರಾತಿ ಶೈಲಿಯ ನೃತ್ಯ) ಮಾಡಿದ್ದಾರೆ. ಈ ವಿಡಿಯೋವನ್ನು ಮೊದಲು ದೀಪ್ತಿ ಚಾರೋಲ್ಕರ್ ಎಂಬವರು ಟ್ವೀಟ್ ಮಾಡಿಕೊಂಡಿದ್ದರು. ಬಳಿಕ ಆನಂದ್ ಅವರು ಈ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದಾರೆ. ಆನಂದ್ ಅವರು ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋಗೆ ಸಾವಿರ ಲೈಕ್ಸ್ ಹಾಗೂ ಕಮೆಂಟ್‍ಗಳು ಬಂದಿದೆ.

    ಅಲ್ಲದೆ ಆನಂದ್, ದೀಪ್ತಿ ಅವರಿಗೆ ಟ್ವೀಟ್ ಮಾಡುವ ಮೂಲಕ ಸೈನಿಕರು ನೃತ್ಯ ಮಾಡಿದ ಸ್ಥಳದ ಹೆಸರನ್ನು ಕೇಳಿದ್ದಾರೆ. ಈ ವೇಳೆ ನೆಟ್ಟಿಗರು ಸೈನಿಕರು ಇರುವ ಸ್ಥಳದ ಬಗ್ಗೆ ಪ್ರಶ್ನಿಸಬೇಡಿ. ಏಕೆಂದರೆ ಸೈನಿಕರು ಇರುವ ಸ್ಥಳದ ಹೆಸರನ್ನು ಹೇಳಿದರೆ ಅವರಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಬಳಿಕ ದೀಪ್ತಿ ಅವರು ರಿಪ್ಲೈ ಮಾಡುವ ಮೂಲಕ ನನಗೆ ಈ ವಿಡಿಯೋ ವಾಟ್ಸಾಪ್‍ನಲ್ಲಿ ಕಳುಹಿಸಲಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.