Tag: ಗರಡಿ

  • ರಿಲೀಸ್ ಆಯಿತು ‘ಗರಡಿ’ ಸಿನಿಮಾದ ಮೂರನೇ ಹಾಡು

    ರಿಲೀಸ್ ಆಯಿತು ‘ಗರಡಿ’ ಸಿನಿಮಾದ ಮೂರನೇ ಹಾಡು

    ನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ‘ಗರಡಿ’ (Garadi) ಚಿತ್ರದ ಮೂರನೇ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಯೋಗರಾಜ್ ಭಟ್ ಅವರು ಬರೆದಿರುವ ‘ಬಡವನ ಹೃದಯ’ ಎಂಬ ಮನಸ್ಸಿಗೆ ಹತ್ತಿರವಾಗುವ ಈ ಹಾಡು ಸೋಮವಾರ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ (Harikrishna)ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಕರುನಾಡ ಕಲಾರಸಿಕರು ತಲೆದೂಗುತ್ತಿದ್ದಾರೆ. ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಹಾಡು ಬಿಡುಗಡೆ ಮಾಡಿದ ಚಿತ್ರತಂಡ, ಪತ್ರಿಕಾಗೋಷ್ಠಿಯಲ್ಲಿ ಹಾಡಿನ ಬಗ್ಗೆ ವಿವರಣೆ ನೀಡಿತು.

    ಎರಡನೇ ಲಾಕ್‌ಡೌನ್ ಸಮಯದಲ್ಲೇ ಈ ಹಾಡು ಬರೆದಿದ್ದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್, ಈ ಹಾಡು, ನನಗೆ ಹಾಗೂ ನಿರ್ಮಾಪಕರಿಗೆ ಅಚ್ಚುಮೆಚ್ಚು. ಬಾದಾಮಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಹಾಡಿನ ಚಿತ್ರೀಕರಣ ನಡೆದಿದೆ. ಹರಿಕೃಷ್ಣರ ಸಂಗೀತ, ವಿಜಯ್ ಪ್ರಕಾಶ್ ಗಾಯನ, ಸೂರ್ಯ, ಸೋನಾಲ್ ಮೊಂತೆರೊ ಹಾಗೂ ಸುಜಯ್ ಅವರ ಅಭಿನಯ ಚೆನ್ನಾಗಿದೆ. ‘ದಯಮಾಡಿ ಉರಿಸ ಬೇಡ ಬಡವನ ಹೃದಯ’ ಎಂಬ ಮೊದಲ ಸಾಲೇ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ ಎಂದರು.

    ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡು ಕೇಳಿದಾಗ ನನಗೆ “ಮುಂಗಾರು ಮಳೆ” ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಹಾಡು ನೆನಪಾಯಿತು. ಈ ಹಾಡಿನ ಸಾಹಿತ್ಯ, ಗಾಯನ ಹಾಗೂ ನಟನೆ ಎಲ್ಲವೂ ಚೆನ್ನಾಗಿದೆ. ನವೆಂಬರ್ 1 ರಂದು ರಾಣಿಬೆನ್ನೂರಿನಲ್ಲಿ ಅದ್ದೂರಿಯಾಗಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ದರ್ಶನ್ ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ನವೆಂಬರ್ 10 ರಂದು ಚಿತ್ರ ಬಿಡುಗಡೆಯಾಗುತ್ತಿದೆ‌. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಹಾಗೂ ನಟ ಬಿ.ಸಿ.ಪಾಟೀಲ್.

    ಈ ಹಾಡಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ‘ಬಡವನ ಹೃದಯ’ ಹಾಡು ಯೋಗರಾಜ್ ಭಟ್ ಅವರು ನನಗಾಗಿ ಬರೆದ ಹಾಗಿದೆ. ಈ ಹಾಡನ್ನು ದರ್ಶನ್ ಸರ್‌ಗೆ ಕೇಳಿಸಿದ್ದೆ.‌‌ ಹಾಡಿನ ಸಾಹಿತ್ಯವನ್ನು ಅವರು ಬಹಳ ಇಷ್ಟ ಪಟ್ಟಿದ್ದರು.‌ ವಿ.ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ವಿಜಯ್ ಪ್ರಕಾಶ್  ಗಾಯನ ಹಾಗೂ ಮದನ್ – ಹರಿಣಿ ಅವರ ನೃತ್ಯ ನಿರ್ದೇಶನ ಹಾಡಿನ ಹೈಲೆಟ್ ಎಂದು ನಾಯಕ ಸೂರ್ಯ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಶಸ್ಸಿಗಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡರಾ ಯಶಸ್ ಸೂರ್ಯ

    ಯಶಸ್ಸಿಗಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡರಾ ಯಶಸ್ ಸೂರ್ಯ

    ನ್ನಡ ಸಿನಿಮಾ ರಂಗದಲ್ಲಿ ಅದ್ಭುತವಾದ ಒಂದು ಯಶಸ್ಸಿಗಾಗಿ ಕಾಯುತ್ತಿರುವ ಯಶಸ್ ಸೂರ್ಯ (Yashas Surya) , ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಗರಡಿ ಸಿನಿಮಾದಿಂದ ಅವರು ಕೇವಲ ಸೂರ್ಯನಾಗಿ ಉಳಿಯಲಿದ್ದಾರೆ. ಅಷ್ಟಕ್ಕೂ ಈ ಹೆಸರನ್ನು ಬದಲಾಯಿಸಿದ್ದು ನಟ ದರ್ಶನ್ ಎನ್ನುವುದು ವಿಶೇಷ.

    ಗರಡಿ ಸಿನಿಮಾದಲ್ಲಿ ಸೂರ್ಯ, ಗರಡಿ ಸೂರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಅವರನ್ನು ಎಲ್ಲರೂ ಗರಡಿ ಸೂರಿ ಅಂತಾನೇ ಕರೆಯುತ್ತಾರಂತೆ. ಸಿನಿಮಾದಾಚೆಯೂ ತಮಗೆ ಗರಡಿ ಸೂರ್ಯ ಎಂದು ಕರೆಯಿಸಿಕೊಳ್ಳಲು ಇಷ್ಟವೆಂದು ಅವರು ಹೇಳಿಕೊಂಡಿದ್ದಾರೆ. ಇನ್ಮುಂದೆ ತಮ್ಮ ಹೆಸರಿನ ಮುಂದೆ ಯಶಸ್ ಎನ್ನುವ ಪದವು ಇರುವುದಿಲ್ಲವೆಂದು ನಟ ತಿಳಿಸಿದ್ದಾರೆ.

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗರಡಿ (Garadi) ಸಿನಿಮಾದಲ್ಲಿ ಸೂರ್ಯ (Surya), ಪ್ರಮುಖವಾದ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ದರ್ಶನ್ (Darshan), ಬಿ.ಸಿ.ಪಾಟೀಲ್ ಸೇರಿದಂತೆ ಹಲವಾರು ಹೆಸರಾಂತ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಹೊಸ ಹುಡುಗರನ್ನು ಗೆಲ್ಲಿಸಿದ ಯೋಗರಾಜ್ ಭಟ್ಟರು, ಸೂರ್ಯಗೂ ಯಶಸ್ಸು ತಂದು ಕೊಡುತ್ತಾರಾ ಕಾದು ನೋಡಬೇಕು.

     

    ಯುಗ ಯುಗಗಳೇ ಸಾಗಲಿ ಸಿನಿಮಾದಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಸೂರ್ಯ, ಆನಂತರ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ದಕ್ಕಿಲ್ಲ. ಗರಡಿ ಮೂಲಕ ಮತ್ತೊಮ್ಮೆ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗರಡಿ’ ಟೈಟಲ್ ಟ್ರ್ಯಾಕ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ

    ‘ಗರಡಿ’ ಟೈಟಲ್ ಟ್ರ್ಯಾಕ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ

    ನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’  (Garadi) ಚಿತ್ರದ ಟೈಟಲ್ ಟ್ರ್ಯಾಕ್ (Title Track) ಇತ್ತೀಚೆಗೆ ಬಿಡುಗಡೆಯಾಗಿದೆ. ಯೋಗರಾಜ್ ಭಟ್ (Yogaraj Bhatt) ಅವರು ಬರೆದಿರುವ ‘ಲೋಕಾನೆ ಗರಡಿ.. ಬಾಳೇ ಅಖಾಡ’ ಎಂಬ ಅದ್ಭುತ ಹಾಗೂ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ (Harikrishna) ಅವರ ಜೊತೆಗೆ ಸಾಕಷ್ಟು ಪ್ರತಿಭಾವಂತ ‌ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

    ಗರಡಿ ಎಂದರೆ ಒಂದು ಊರನ್ನು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ಹಿಂದೆ ಒಂದು ಊರಿನ ರಕ್ಷಣೆಗೆ ಗರಡಿ ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ ಗರಡಿ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ (BC Patil) ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಅಭಿನಯಿಸಿದ್ದಾರೆ. ಇದು ಒಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಇನ್ನು ಇಂದು ಬಿಡುಗಡೆಯಾಗಿರುವ ಹಾಡನ್ನು ಹರಿಕೃಷ್ಣ ಅದ್ಭುತವಾಗಿ ಸಂಯೋಜಿಸಿ ಹಾಡಿದ್ದಾರೆ. ಚಿತ್ರ ನವೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು.

    ಗರಡಿ ಚಿತ್ರ ಆರಂಭವಾಗಿ ಈ ನವೆಂಬರ್ 14ಕ್ಕೆ ಎರಡು ವರ್ಷಗಳಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್ ಅವರು ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ (ನವೆಂಬರ್ 10) ಚಿತ್ರ ಬಿಡುಗಡೆಯಾಗುತ್ತದೆ. ಯೋಗರಾಜ್ ಭಟ್ ಅವರು ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿ ಪಟ್ಟಿದ್ದೇನೆ. ನಿಮಗೂ ಚಿತ್ರ ಹಿಡಿಸಲಿದೆ ಎಂದರು ಹಿರಿಯ ನಟ ಬಿ.ಸಿ.ಪಾಟೀಲ್. ಇದನ್ನೂ ಓದಿ:‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ ಅಂತ. ಎಲ್ಲರೂ ಗರಡಿ ಸೂರಿ ಅಂತ ಕರೆಯುತ್ತಿರುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಟೈಟಲ್ ಸಾಂಗ್ ನಲ್ಲಿ ನಾನು ಸಖತ್ ಡ್ಯಾನ್ಸ್ ಮಾಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ನಾಯಕ ಸೂರ್ಯ.

    ನಾಯಕಿ ಸೋನಾಲ್ ಮಾಂತೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ಧರ್ಮಣ್ಣ, ರಾಘು, ಛಾಯಾಗ್ರಾಹಕ ನಿರಂಜನ್ ಬಾಬು, ನೃತ್ಯ ನಿರ್ದೇಶಕ ಧನಂಜಯ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ವನಜಾ ಪಾಟೀಲ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್ ಗರಡಿ ಚಿತ್ರ ಸಾಗಿಬಂದ ಬಗ್ಗೆ ವಿವರಣೆ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯೋಗರಾಜ್ ಭಟ್ಟರು ಹೊಡೆದ ಹಲಗಿ ಭಾರೀ ಸೌಂಡು

    ಯೋಗರಾಜ್ ಭಟ್ಟರು ಹೊಡೆದ ಹಲಗಿ ಭಾರೀ ಸೌಂಡು

    ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi) ಚಿತ್ರದ ಮೊದಲ ಹಾಡು ‘ಹೊಡಿರೆಲೆ ಹಲಗಿ’ (Hodirele Halagi) ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಈ ಹಾಡಿನ ಮಾಧುರ್ಯಕ್ಕೆ ಕನ್ನಡಿಗರು ಮನ ಸೋತ್ತಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡನ್ನು 16ಲಕ್ಷ ಜನ ವೀಕ್ಷಿಸಿದ್ದಾರೆ.  ಪ್ರಶಂಸೆಯ ಮಳೆಯನ್ನೇ ಸುರಿಸುತ್ತಿದ್ದಾರೆ. ಮುಂದಿನ ಹಾಡು ಯಾವಾಗ ಬಿಡುಗಡೆಯಾಗುವುದೊ? ಎಂಬ ನಿರೀಕ್ಷೆಯಲ್ಲಿದ್ದಾರೆ.

    ಮೊದಲ ಹಾಡಿಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ‘ಗರಡಿ’ ತಂಡ ಸಂತಸ ವ್ಯಕ್ತಪಡಿಸಿದೆ. ಯೋಗರಾಜ್ ಭಟ್  (Yogaraj Bhat) ಅವರು ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು (Nishvika Naidu) ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಕ್ವೀನ್ ನಿಶ್ವಿಕಾ ನಾಯ್ಡು (Nishvika Naidu) ಅವರು ಪ್ರತಿಭಾವಂತ ನಟಿ ಮಾತ್ರವಲ್ಲ ಅದ್ಭುತ ಡ್ಯಾನ್ಸ್ರ್ ಕೂಡ ಹೌದು. ತಾನು ಡ್ಯಾನ್ಸ್ ಮಾಡೋಕೂ ಸೈ ಅಂತಾ ಭಟ್ರ ಗರಡಿಯಲ್ಲಿ ನಟಿ ಸೊಂಟ ಬಳುಕಿಸಿರೋದೇ ಸಾಕ್ಷಿ. ‘ಹೊಡಿರಲೆ ಹಲಗಿ’ ಅಂತಾ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಚಿತ್ರರಂಗದಲ್ಲಿ ಈಗ ಟ್ರೆಂಡ್ ಬದಲಾಗಿದೆ. ನಾಯಕಿಯಾಗಿಯೇ ಗುರುತಿಸಿಕೊಳ್ಳಬೇಕು ಅನ್ನೋದಕ್ಕಿಂತ ಒಳ್ಳೆಯ ಪಾತ್ರದಲ್ಲಿ ತಾವು ಕಾಣಿಸಿಕೊಳ್ಳಬೇಕು ಎಂದು ಯೋಚಿಸುವ ಮನಸ್ಥಿತಿ ಬದಲಾಗಿದೆ. ನಾಯಕಿ ಪಾತ್ರಕ್ಕೆ ಅಂಟಿಕೂರದೇ ಐಟಂ ಹಾಡಿಗೂ ನಾಯಕಿಯರು ಹೆಜ್ಜೆ ಹಾಕಲು ಮನಸ್ಸು ಮಾಡ್ತಿದ್ದಾರೆ. ಈ ಪ್ರಯೋಗವನ್ನ ಕತ್ರಿನಾ ಕೈಫ್, ಕರೀನಾ, ಸಮಂತಾ, ತಮನ್ನಾ ಭಾಟಿಯಾ ಹೀಗೆ ಹಲವು ನಟಿಯರು ಸೊಂಟ ಬಳುಕಿಸಿ ಗೆದ್ದಿದ್ದಾರೆ. ಈಗ ಅದೇ ದಾರಿಯಲ್ಲಿ ಕನ್ನಡದ ನಟಿ ನಿಶ್ವಿಕಾ ನಾಯ್ಡು ಕೂಡ ಹೆಜ್ಜೆ ಇಟ್ಟಿದ್ದಾರೆ. ಯೋಗರಾಜ್ ಭಟ್ಟರ ಗರಡಿಯಲ್ಲಿ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

    ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi Film Kannada) ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿದ್ದಾರೆ. ಭಟ್ಟರು ಬರೆದ ‘ಹೊಡಿರೆಲೆ ಹಲಗಿ’ ಹಾಡು ಇಂದು (ಜೂನ್ 14) ಬಿಡುಗಡೆ ಆಗಿದೆ. ಈ ಲಿರಿಕಲ್ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್ ಸ್ಟೆಪ್‌ಗಳ ಝಲಕ್ ತೋರಿಸಲಾಗಿದೆ. ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದರಲ್ಲಿ ಇದೆ. ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಕುಣಿತ ನೋಡಿ ಪಡ್ಡೆಗಳಿಗೆ ಕಿಕ್ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ’ ಸಾಂಗ್ ಮೂಡಿಬಂದಿದೆ. ಮೇಘನಾ ಹಳಿಯಾಳ್ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ.

     

    ಯೋಗರಾಜ್ ಭಟ್ ಅವರು ಮತ್ತಾರೂ ಊಹಿಸಲಾಗದಂತಹ ಪದಪುಂಜಗಳ ಮೂಲಕ ಅವರು ಸಾಹಿತ್ಯ ರಚಿಸುತ್ತಾರೆ. ‘ಹೊಡಿರೆಲೆ ಹಲಗಿ’ ಸಾಂಗ್ ಕೂಡ ಅದೇ ಶೈಲಿಯಲ್ಲಿ ಮೂಡಿ ಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ಅವರು ಈ ಸಾಂಗ್ ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್‌ಗಳಲ್ಲಿ ಇಡೀ ಹಾಡನ್ನು ಶೂಟ್ ಮಾಡಲಾಗಿದೆ. ಸೌಮ್ಯ ಫಿಲ್ಮ್ಸ್, ಕೌರವ ನಿರ್ಮಾಣ ಸಂಸ್ಥೆ ಕಡೆಯಿಂದ ಗರಡಿ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಸೂರ್ಯ, ಬಿಸಿ ಪಾಟೀಲ್ (B.C. Patil), ಸೋನಾಲ್, ಧರ್ಮಣ್ಣ ಕಡೂರು ಸೇರಿದಂತೆ ಹಲವರು ನಟಿಸಿದ್ದಾರೆ.

  • ಗರಡಿಯಲ್ಲಿ ಸುಂದರ ಹುಡುಗಿಯರ ಜೊತೆ ಕಾಣಿಸಿಕೊಂಡ ಸೂರ್ಯ

    ಗರಡಿಯಲ್ಲಿ ಸುಂದರ ಹುಡುಗಿಯರ ಜೊತೆ ಕಾಣಿಸಿಕೊಂಡ ಸೂರ್ಯ

    ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi) ಚಿತ್ರದ ಮೊದಲ ಹಾಡು ‘ಹೊಡಿರೆಲೆ ಹಲಗಿ’ (Hodirele Halagi) ಲಿರಿಕಲ್ ವಿಡಿಯೋ ಇತ್ತೀಚಿಗೆ ಬಿಡುಗಡೆಯಾಯಿತು. ವಿ.ಹರಿಕೃಷ್ಣ (V. Harikrishna) ಸಂಗೀತ ನೀಡಿರುವ, ಯೋಗರಾಜ್ ಭಟ್ (Yogaraj Bhat) ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ.

    ಜನಸಾಮಾನ್ಯವಾಗಿ ಮಾತನಾಡಬೇಕಾದರೆ ಇವರು, ಅವರ ಗರಡಿಯಲ್ಲಿ ಪಳಗಿದವರು ಅಂತ ಹೇಳುತ್ತಾರೆ. ಗರಡಿ ಎಂದರೆ ಅದೊಂದು ಸಮರ ಕಲೆ. ವ್ಯಾಯಾಮ ಶಾಲೆ. ಈ ಗರಡಿ ಮನೆಯ ಮುಖ್ಯಸ್ಥ ರಂಗಪ್ಪ. ಆ ಪಾತ್ರದಲ್ಲಿ ಬಿ.ಸಿ.ಪಾಟೀಲ್ (B.C. Patil) ಅವರು ಕಾಣಿಸಿಕೊಂಡಿದ್ದಾರೆ‌. ಆ ಗುರುವಿಗೆ ಸಾಕಷ್ಟು ಶಿಷ್ಯರು. ಅದರಲ್ಲಿ ನಾಯಕ ಸೂರ್ಯ ಕೂಡ ಒಬ್ಬ. ಕಾರಣಾಂತರದಿಂದ ಗುರುವಿಗೆ ಶಿಷ್ಯ ಎದುರು ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಹಾಡು ಹುಟ್ಟಲು ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರು ಕಾರಣ. ಅವರು ನನಗೆ ಕರೆ ಮಾಡಿ ಉತ್ತರ ಕರ್ನಾಟಕದಲ್ಲಿ ಹಲಗಿ ಹೊಡಯಬೇಕಾದರೆ ಒಂದು ರಾಗ ಬರುತ್ತದೆ. ಅದರ ಮೇಲೆ ಹಾಡು ಮಾಡಿ ಎಂದರು. ಆಗ ಈ ಹಾಡು ಬರೆದೆ. ಮೇಘನಾ ಹಳಿಯಾಳ್ ಅದ್ಭುತವಾಗಿ ಹಾಡಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ಯೋಗರಾಜ್ ಭಟ್ ತಿಳಿಸಿದರು. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ತಮನ್ನಾ ಭಾಟಿಯಾ- ಹಾಟ್ ವೀಡಿಯೋ ವೈರಲ್

    ಗರಡಿ ಚಿತ್ರ ಆರಂಭವಾದ ಬಗ್ಗೆ ತಿಳಿಸಿದ ಬಿ.ಸಿ.ಪಾಟೀಲ್ ಅವರು, ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ಈಗ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ ಕೌಸಲ್ಯ ಸುಪ್ರಜಾ ರಾಮ  ನಿರ್ಮಿಸುತ್ತಿದ್ದೇವೆ‌. ಉತ್ತಮ ಕಥೆ ತರುವ ಯುವ ನಿರ್ದೇಶಕರಿಗೂ ನಮ್ಮ ಸಂಸ್ಥೆಯಿಂದ ಅವಕಾಶ ನೀಡಲಾಗುತ್ತದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

    ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದೆ. ಆ ಸ್ಪರ್ಧೆಗೆ ಬಿ.ಸಿ.ಪಾಟೀಲ್ ಸರ್ ಜಡ್ಜ್ ಆಗಿ ಆಗಮಿಸಿದ್ದರು. ಮುಂದೆ ಒಳ್ಳೆಯ ನಟಿ ಆಗುತ್ತೀಯಾ ಎಂದು ಆಶೀರ್ವದಿಸಿದರು. ಇಂದು ಅವರ ನಿರ್ಮಾಣದ ಈ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ನೃತ್ಯ ಎಂದರೆ ಇಷ್ಟ. ಇನ್ನು ಭಟ್ಟರು ಬರೆದಿರುವ ಈ ಹಲಗಿ ಹಾಡಿಗೆ ಹೆಜ್ಜೆ ಹಾಕಿದ್ದು ಮತ್ತಷ್ಟು ಖುಷಿಯಾಗಿದೆ ಎಂದು ನಿಶ್ವಿಕಾ ನಾಯ್ಡು ತಿಳಿಸಿದರು. ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ರಾಘವೇಂದ್ರ, ಧರ್ಮಣ್ಣ, ನಿರ್ಮಾಪಕರಾದ ವನಜಾ ಪಾಟೀಲ್ ಗರಡಿ ಕುರಿತು ಮಾತನಾಡಿದರು.

  • ʼಹೊಡಿರಲೆ ಹಲಗಿ’ ಎಂದು ಭಟ್ಟರ ಗರಡಿಯಲ್ಲಿ ಸೊಂಟ ಬಳುಕಿಸಿದ ನಿಶ್ವಿಕಾ ನಾಯ್ಡು

    ʼಹೊಡಿರಲೆ ಹಲಗಿ’ ಎಂದು ಭಟ್ಟರ ಗರಡಿಯಲ್ಲಿ ಸೊಂಟ ಬಳುಕಿಸಿದ ನಿಶ್ವಿಕಾ ನಾಯ್ಡು

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಕ್ವೀನ್ ನಿಶ್ವಿಕಾ ನಾಯ್ಡು (Nishvika Naidu) ಅವರು ಪ್ರತಿಭಾವಂತ ನಟಿ ಮಾತ್ರವಲ್ಲ ಅದ್ಭುತ ಡ್ಯಾನ್ಸ್ರ್ ಕೂಡ ಹೌದು. ತಾನು ಡ್ಯಾನ್ಸ್ ಮಾಡೋಕೂ ಸೈ ಅಂತಾ ಭಟ್ರ ಗರಡಿಯಲ್ಲಿ ನಟಿ ಸೊಂಟ ಬಳುಕಿಸಿರೋದೇ ಸಾಕ್ಷಿ. ‘ಹೊಡಿರಲೆ ಹಲಗಿ’ ಅಂತಾ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಚಿತ್ರರಂಗದಲ್ಲಿ ಈಗ ಟ್ರೆಂಡ್ ಬದಲಾಗಿದೆ. ನಾಯಕಿಯಾಗಿಯೇ ಗುರುತಿಸಿಕೊಳ್ಳಬೇಕು ಅನ್ನೋದಕ್ಕಿಂತ ಒಳ್ಳೆಯ ಪಾತ್ರದಲ್ಲಿ ತಾವು ಕಾಣಿಸಿಕೊಳ್ಳಬೇಕು ಎಂದು ಯೋಚಿಸುವ ಮನಸ್ಥಿತಿ ಬದಲಾಗಿದೆ. ನಾಯಕಿ ಪಾತ್ರಕ್ಕೆ ಅಂಟಿಕೂರದೇ ಐಟಂ ಹಾಡಿಗೂ ನಾಯಕಿಯರು ಹೆಜ್ಜೆ ಹಾಕಲು ಮನಸ್ಸು ಮಾಡ್ತಿದ್ದಾರೆ. ಈ ಪ್ರಯೋಗವನ್ನ ಕತ್ರಿನಾ ಕೈಫ್, ಕರೀನಾ, ಸಮಂತಾ, ತಮನ್ನಾ ಭಾಟಿಯಾ ಹೀಗೆ ಹಲವು ನಟಿಯರು ಸೊಂಟ ಬಳುಕಿಸಿ ಗೆದ್ದಿದ್ದಾರೆ. ಈಗ ಅದೇ ದಾರಿಯಲ್ಲಿ ಕನ್ನಡದ ನಟಿ ನಿಶ್ವಿಕಾ ನಾಯ್ಡು ಕೂಡ ಹೆಜ್ಜೆ ಇಟ್ಟಿದ್ದಾರೆ. ಯೋಗರಾಜ್ ಭಟ್ಟರ ಗರಡಿಯಲ್ಲಿ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

    ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi Film Kannada) ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿದ್ದಾರೆ. ಭಟ್ಟರು ಬರೆದ ‘ಹೊಡಿರೆಲೆ ಹಲಗಿ’ ಹಾಡು ಇಂದು (ಜೂನ್ 14) ಬಿಡುಗಡೆ ಆಗಿದೆ. ಈ ಲಿರಿಕಲ್ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್ ಸ್ಟೆಪ್‌ಗಳ ಝಲಕ್ ತೋರಿಸಲಾಗಿದೆ. ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದರಲ್ಲಿ ಇದೆ. ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಕುಣಿತ ನೋಡಿ ಪಡ್ಡೆಗಳಿಗೆ ಕಿಕ್ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ’ ಸಾಂಗ್ ಮೂಡಿಬಂದಿದೆ. ಮೇಘನಾ ಹಳಿಯಾಳ್ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ.

    ಯೋಗರಾಜ್ ಭಟ್ ಅವರು ಮತ್ತಾರೂ ಊಹಿಸಲಾಗದಂತಹ ಪದಪುಂಜಗಳ ಮೂಲಕ ಅವರು ಸಾಹಿತ್ಯ ರಚಿಸುತ್ತಾರೆ. ‘ಹೊಡಿರೆಲೆ ಹಲಗಿ’ ಸಾಂಗ್ ಕೂಡ ಅದೇ ಶೈಲಿಯಲ್ಲಿ ಮೂಡಿ ಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ಅವರು ಈ ಸಾಂಗ್ ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್‌ಗಳಲ್ಲಿ ಇಡೀ ಹಾಡನ್ನು ಶೂಟ್ ಮಾಡಲಾಗಿದೆ. ಸೌಮ್ಯ ಫಿಲ್ಮ್ಸ್, ಕೌರವ ನಿರ್ಮಾಣ ಸಂಸ್ಥೆ ಕಡೆಯಿಂದ ಗರಡಿ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಸೂರ್ಯ, ಬಿಸಿ ಪಾಟೀಲ್, ಸೋನಾಲ್, ಧರ್ಮಣ್ಣ ಕಡೂರು ಸೇರಿದಂತೆ ಹಲವರು ನಟಿಸಿದ್ದಾರೆ.

    ಅಮ್ಮಾ ಐ ಲವ್‌ಯೂ, ಜೆಂಟಲ್‌ಮೆನ್, ಪಡ್ಡೆಹುಲಿ, ದಿಲ್ ಪಸಂದ್, ಗುರು ಶಿಷ್ಯರು, ಸಖತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

  • ‘ಗರಡಿ’ ಶೂಟಿಂಗ್ ಮುಗಿಸಿ, ಹೊಸ ಸಿನಿಮಾದಲ್ಲಿ ಯೋಗರಾಜ್ ಭಟ್ ಬ್ಯುಸಿ

    ‘ಗರಡಿ’ ಶೂಟಿಂಗ್ ಮುಗಿಸಿ, ಹೊಸ ಸಿನಿಮಾದಲ್ಲಿ ಯೋಗರಾಜ್ ಭಟ್ ಬ್ಯುಸಿ

    ಟ ಹಾಗೂ ಶಾಸಕ  ಬಿ.ಸಿ.ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರಾಮುಹಳ್ಳಿಯ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ‌ಗರಡಿಮನೆ ಸೆಟ್ ಹಾಕಲಾಗಿತ್ತು. ಅಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸುವುದರೊಂದಿಗೆ “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

    ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಇಂದು “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ “ಗರಡಿ” ಮನೆ ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಹಂತದ ವಿಶೇಷವೆಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು  ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ, ಸೋನಾಲ್ ‍ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರಿಗೆ ವಿಶೇಷ ಧನ್ಯವಾದ. “ಗರಡಿ” ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ.‌ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ‌ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಯೋಗರಾಜ್ ಭಟ್. ಇದನ್ನೂ ಓದಿ: ದುಬೈಗೆ ಹಾರಿದ ಮಾಲಾಶ್ರೀ ಪುತ್ರಿ ರಾಧನಾ ರಾಮ್

    ಇಂದು “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದ ಆಡಿಯೋ ಹಕ್ಕು ಸರಿಗಮಪ‌ ಸಂಸ್ಥೆಗೆ ಒಂದು ಕೋಟಿಗೆ ಮಾರಾಟವಾಗಿದೆ. ಡಬ್ಬಿಂಗ್, ರಿಮೇಕ್ ರೈಟ್ಸ್ ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ  ಸಂಸ್ಥೆಯ ನಿರ್ಮಾಣದ ಹದಿನಾರನೇ ಚಿತ್ರ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದ ಬಿ.ಸಿ.ಪಾಟೀಲ್ ಅವರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ನಾನು ಪೈಲ್ವಾನ್ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ.  ಅನುಭವಿ ಕಲಾವಿದರೊಂದಿಗೆ ‌ನಟಿಸಿರುವ ಖುಷಿಯಿದೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕ ಯಶಸ್ ಸೂರ್ಯ.

    ನಾಯಕಿ ಸೋನಾಲ್ ಮೊಂತೆರೊ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟ “ಆರ್ಮುಗಂ” ರವಿಶಂಕರ್ ಮಾತನಾಡಿ, ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಯೋಗರಾಜ್ ಭಟ್ ಹಾಗೂ ಬಿ.ಸಿ.ಪಾಟೀಲ್ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು. ನಟ ಸುಜಯ್ ಬೇಲೂರ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಕಲಾವಿದರಾದ ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಹಾಗೂ ಕಥೆ ಬರೆದಿರುವ  ವಿಕಾಸ್ “ಗರಡಿ” ಚಿತ್ರದ ಕುರಿತು ಮಾತನಾಡಿದರು. ನಿರ್ಮಪಕಿ ಸೃಷ್ಟಿ ಪಾಟೀಲ್ ಚಿತ್ರೀಕರಣ ಸರಾಗವಾಗಿ ಮುಗಿಯಲು ಸಹಕಾರ ನೀಡಿದ್ದ ಸಮಸ್ತ ತಂಡಕ್ಕೂ ಧನ್ಯವಾದ ತಿಳಿಸಿದರು. ನಿರ್ಮಾಪಕ ಬಿ.ಸಿ.ಪಾಟೀಲ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಾಯಕ ಯಶಸ್ ಸೂರ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ದರ್ಶನ್ ಅವರಿಗೆ ಧನ್ಯವಾದ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬದಾಮಿಯಲ್ಲಿ ಬೀಡು ಬಿಟ್ಟಿತ್ತು ಯೋಗರಾಜ್ ಭಟ್‌ & ಟೀಮ್

    ಬದಾಮಿಯಲ್ಲಿ ಬೀಡು ಬಿಟ್ಟಿತ್ತು ಯೋಗರಾಜ್ ಭಟ್‌ & ಟೀಮ್

    ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ ಗರಡಿ ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೂರ್ಯ ನಾಯಕನಾಗಿ ನಟಿಸುತ್ತಿರುವ, ಸೋನಾಲ್ ಮಾಂಟೆರೊ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಸುಂದರ ತಾಣದಲ್ಲಿ “ಗರಡಿ” ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಕರ್ನಾಟಕ ರಾಜ್ಯದ ಮಂತ್ರಿಗಳು, ನಟರು, ನಿರ್ಮಾಪಕರೂ ಆಗಿರುವ ಕೌರವ ಬಿ.ಸಿ.ಪಾಟೀಲ್ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಗರಡಿ ಮನೆಯಲ್ಲಿ ತರಭೇತಿ ಪಡೆದಿರುವ ಸಾಕಷ್ಟು ಕುಸ್ತಿಪಟುಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.  ಬರೀ ಹಾಡಿನ ಚಿತ್ರೀಕರಣವಷ್ಟೇ ಅಲ್ಲದೇ ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಕೌರವ ಬಿ‌.ಸಿ.ಪಾಟೀಲ್ ಮುಂತಾದವರ ಅಭಿನಯದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಹ ನಡೆದಿದೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ಬಹಳ ದಿನಗಳ ನಂತರ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ವಿ.ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸೂರ್ಯ, ಸೋನಾಲ್ ಮಾಂಟೆರೊ, ಕೌರವ ಬಿ.ಸಿ.ಪಾಟೀಲ್, ರವಿಶಂಕರ್, ಎಸ್.ಟಿ.ಸೋಮಶೇಖರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ(ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಮುಂತಾದವರು “ಗರಡಿ” ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಯೋಗರಾಜ್ ಭಟ್ಟ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಅನೇಕ ನಾಯಕಿಯರು ಈ ಹೊತ್ತಿಗೂ ಕಾಯುತ್ತಿದ್ದಾರೆ. ಭಟ್ಟರ ಸಿನಿಮಾದಲ್ಲಿ ನಟಿಸಿದ ಬಹುತೇಕ ಕಲಾವಿದರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಇವರ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಇಂತಹ ಹೊತ್ತಿನಲ್ಲಿ ಸಿಕ್ಕಿರುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ಇದನ್ನೂ ಓದಿ :ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ

    ಅಂದುಕೊಂಡಂತೆ ಆಗಿದ್ದರೆ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು ರಚಿತಾ ರಾಮ್. ಈ ಚಿತ್ರವನ್ನು ನಟ, ಸಚಿವ ಬಿ.ಸಿ.ಪಾಟೀಲ್ ನಿರ್ಮಾಣ ಮಾಡುತ್ತಿರುವುದರಿಂದ, ಅವರ ಮನೆಗೂ ರಚಿತಾ ಹೋಗಿ ಬಂದಿದ್ದರು. ಸಿನಿಮಾದ ಪೂಜೆ, ಮುಹೂರ್ತ ಇತ್ಯಾದಿ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಿದ್ದರು. ಇನ್ನೇನು ಭಟ್ಟರು ಶೂಟಿಂಗ್ ಗೆ ಹೊರಡಬೇಕು ಎನ್ನುವಾಗ ರಚಿತಾ ರಾಮ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ರಚಿತಾ ರಾಮ್ ಸಿನಿಮಾದಲ್ಲಿ ಇಲ್ಲ ಎನ್ನುತ್ತಿದ್ದಂತೆಯೇ ಗಾಂಧಿನಗರದಲ್ಲಿ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು. ಈ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸುತ್ತಿರುವುದೇ ರಚಿತಾ ಹೊರ ಹೋಗಲು ಕಾರಣ ಎನ್ನಲಾಗಿತು. ಸಂಭಾವನೆಯ ವಿಚಾರವೂ ಕೇಳಿ ಬಂತು. ಅಸಲಿ ವಿಚಾರವೆಂದರೆ, ಸದ್ಯ ರಚಿತಾ ರಾಮ್ ಅವರು ‘ಕ್ರಾಂತಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ರಿಯಾಲಿಟಿ ಶೋ ಜಡ್ಜ್ ಆಗಿ ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಗರಡಿ ಸಿನಿಮಾಗೆ ಡೇಟ್ ಹೊಂದಿಸಲು ಸಾಧ್ಯವಾಗದೇ ಸಿನಿಮಾ ಬಿಡಬೇಕಾಗಿ ಬಂತಂತೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ರಚಿತಾ ರಾಮ್ ಜಾಗಕ್ಕೆ ಬೇರೆ ನಟಿಯು ಬಂದಾಗಿದೆ. ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ. ಅಂದಹಾಗೆ ರಚಿತಾ ರಾಮ್ ಮಾಡಬೇಕಿದ್ದ ಪಾತ್ರವನ್ನು ಈಗ ಮಾಡುತ್ತಿರುವುದು ಸೋನಲ್ ಮೆಂಥೆರೋ.