Tag: ಗರಂ

  • ಜಾನಿ ಲಿವರ್ ನನ್ನು ಕನ್ನಡಕ್ಕೆ ಪರಿಚಯಿಸಿದ್ದ ನಿರ್ದೇಶಕ ಮುರಳಿ ಕೃಷ್ಣ ನಿಧನ

    ಜಾನಿ ಲಿವರ್ ನನ್ನು ಕನ್ನಡಕ್ಕೆ ಪರಿಚಯಿಸಿದ್ದ ನಿರ್ದೇಶಕ ಮುರಳಿ ಕೃಷ್ಣ ನಿಧನ

    ನ್ನಡ ಸಿನಿಮಾ ರಂಗದ ನಿರ್ದೇಶಕ, ನಿರ್ಮಾಪಕ ಕೆ.ಆರ್. ಮುರಳಿ ಕೃಷ್ಣ ನಿಧನರಾಗಿದ್ದಾರೆ. 63 ವಯಸ್ಸಿನ ಇವರು ಬ್ರೈನ್ ಟೂಮರ್ ನಿಂದ ಬಳಲುತ್ತಿದ್ದರು. ಸಣ್ಣ ಸತ್ಯ, ಗರ ಸೇರಿದಂತೆ ಹಲವು ಚಿತ್ರಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. ಗರ ಸಿನಿಮಾದ ಮೂಲಕ ಬಾಲಿವುಡ್ ನ ಖ್ಯಾತ ಹಾಸ್ಯ ಕಲಾವಿದ ಜಾನಿ ಲಿವರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಈ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.

    ಬ್ರೈನ್ ಟೂಮರ್ ಇರುವುದು ತಡವಾಗಿ ಪತ್ತೆ ಆಗಿದ್ದರಿಂದ, ಶಸ್ತ್ರ ಚಿಕಿತ್ಸೆಗಾಗಿ ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ‍ಸ್ತ್ರ ಚಿಕಿತ್ಸೆ ಫಲಕಾರಿಯಾದರೂ, ಹೃದಯಾಘಾತ ಕಾರಣದಿಂದಾಗಿ ಅವರು ನಿನ್ನ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದರೂ, ಪ್ರವೃತ್ತಿಯಲ್ಲಿ ಸಿನಿಮಾ ನಿರ್ದೇಶಕರಾಗಿ, ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ನಿರ್ಮಿಸಿದ್ದರು

    ಬೆಂಗಳೂರಿನ ಸಹಕಾರ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, 12.30ಕ್ಕೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಪತ್ನಿಯನ್ನ ಇವರು ಅಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಳೆದ 10 ವರ್ಷದಿಂದ ಟಿ.ವಿ ನೋಡ್ತಿಲ್ಲ, ಪೇಪರ್ ಓದ್ತಿಲ್ಲ- ಸಚಿವ ಅನಂತ್ ಕುಮಾರ್ ಹೆಗ್ಡೆ

    ಕಳೆದ 10 ವರ್ಷದಿಂದ ಟಿ.ವಿ ನೋಡ್ತಿಲ್ಲ, ಪೇಪರ್ ಓದ್ತಿಲ್ಲ- ಸಚಿವ ಅನಂತ್ ಕುಮಾರ್ ಹೆಗ್ಡೆ

    ಕಾರವಾರ: ಪತ್ರಿಕೆಯಲ್ಲಿ, ಟಿ.ವಿಯಲ್ಲಿ ನಮ್ಮ ಪರವಾಗಿ ಬರೆಯೋದಿಲ್ಲ. ಅವರು ಬೇಕಾದ್ದು ಬರೆದುಕೊಂಡು ಹೋಗಲಿ ನೀವ್ಯಾರೂ ತಲೆಕೆಡಿಸಿಕೊಳ್ಳಬೇಡಿ. ಕಳೆದ ಹತ್ತು ವರ್ಷದಿಂದ ನಾನು ಟಿ.ವಿ ನೋಡುತ್ತಿಲ್ಲ, ಪೇಪರ್ ಓದುತ್ತಿಲ್ಲ ಅದಕ್ಕೋಸ್ಕರ ನನ್ನ ತಲೆ ಸರಿ ಇದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

    ಅಂಕೋಲ ತಾಲೂಕಿನ ಅಲಗೆರೆಯಲ್ಲಿ ತಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಯಾರೂ ಟಿವಿ, ಪೇಪರ್ ನೋಡ್ತಾರೋ ಅವರ ತಲೆ ದಿನ ಹಾಳಾಗುತ್ತದೆ. ತಲೆ ಸರಿ ಇರಬೇಕು, ಡಯಾಬಿಟಿಕ್ ಸರಿ ಇರಬೇಕು, ಬಿಪಿ ಸರಿ ಇರಬೇಕು ಎಂದರೆ ಟಿ.ವಿ ನೋಡಬೇಡಿ ಪೇಪರ್ ಓದಬೇಡಿ. ನಿಮಗೆ ಕುತೂಹಲ, ಟೆನ್ಷನ್, ಅದು ಹಂಗಾಗುತ್ತೆ, ಹಿಂಗಾಗುತ್ತೆ, ಮಹಾಘಟಬಂದನ್ ಹಾಗಾದ್ರೆ ಮಹಾ ಸ್ಫೋಟ, ಎಂತದ್ದೂ ಆಗೋದಿಲ್ಲ ಆಗೋದು ಘಟಸ್ಫೋಟವೇ. ಬೇರೆ ಎಂತದ್ದೂ ಆಗೋದಿಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

    ಮಾಧ್ಯಮದ ಮೇಲೆ ಸಿಟ್ಟು ಯಾಕೆ..?
    ಕಳೆದ ಒಂದು ತಿಂಗಳ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ ಮಾಧ್ಯಮಗಳನ್ನು ತುಚ್ಛವಾಗಿ ನಡೆಸಿಕೊಂಡಿದ್ದರು. ಇದಲ್ಲದೇ ರಾಜ್ಯದಲ್ಲಿ ಬಿಜೆಪಿ ಆಪರೇಶನ್ ಹಾಗೂ ಶಾಸಕರ ಖರೀದಿ ಕುರಿತು ಪ್ರತಿಕ್ರಿಯೆಯನ್ನು ಮಾಧ್ಯಮದವರು ಪಡೆಯಲು ತೆರಳಿದಾಗ ಅವರ ಅಂಗ ರಕ್ಷಕರು ಪತ್ರಕರ್ತರನ್ನು ತಳ್ಳಿ ದೂಡಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕಾರವಾರದ ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ಪತ್ರಕರ್ತರಿಗೆ ಗೇಲಿ ಮಾಡಿದ್ದರು. ಇದರಿಂದಾಗಿ ಪತ್ರಕರ್ತರು ಅವರ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು.

    ಇದರ ಬಿಸಿ ಹೇಗಿತ್ತೆಂದರೆ ಕೆಲವು ವಾರಗಳ ಹಿಂದೆ ಅಂಕೋಲದಲ್ಲಿ ನಡೆದ ಪಾಸ್ ಪೋರ್ಟ್ ಕೇಂದ್ರದ ಉದ್ಘಾಟನೆ ವೇಳೆ ಸಚಿವರು ಮಾತನಾಡಲು ನಿಂತಿದ್ದರು ಅವರ ಪ್ರತಿಕ್ರಿಯೆ ತೆಗೆದುಕೊಳ್ಳಲು ಯಾವೊಬ್ಬ ಪತ್ರಕರ್ತರೂ ತೆರಳಲಿಲ್ಲ. ಇದರಿಂದಾಗಿ ಮುಜುಗರಗೊಂಡ ಸಚಿವರು ತಮ್ಮ ಆಪ್ತ ಮುಖಂಡರ ಬಳಿ ಚರ್ಚಿಸಿದ್ದರು ಕೂಡ. ಇದಾದ ನಂತರ ಸಚಿವರಿಗೆ ಮಾಧ್ಯಮಗಳ ಮೇಲೆ ಮತ್ತಷ್ಟು ಕೋಪ ಹೆಚ್ಚಾಗಿದೆ. ಸದಾ ಅವರ ಸುತ್ತ ತಿರುಗುತಿದ್ದ ಮಾಧ್ಯಮಗಳ ಮೇಲೆ ತಮ್ಮ ನಾಲಿಗೆ ಹರಿಬಿಡುತ್ತಿದ್ದು ಮಾಧ್ಯಮಗಳು ಎಡಪಂಥಿಯರ ಪರವಿದೆ ನಮ್ಮ ಸುದ್ದಿಗಳನ್ನು ಮಾಡುವುದಿಲ್ಲ ಎಂದು ತಮ್ಮ ಕೋಪ ಹೊರಹಾಕಿದ್ದಾರೆ.

    ಕಾರ್ಯಕರ್ತರ ಸಂಖ್ಯೆ ಏರಿಕೆ:
    ಮುಂದಿನ ಚುನಾವಣೆ ಬಿಜೆಪಿ ಗೆಲುವಿನ ಚುನಾವಣೆ. ಕಳೆದ ವರ್ಷ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಮೂರು ಮುಕ್ಕಾಲು ಕೋಟಿ ಬಿಜೆಪಿ ಕಾರ್ಯಕರ್ತರಿದ್ದರು. ಅವರು ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಮಾಡಿದ್ರು. ಇಂದು ನಮ್ಮ ಕಾರ್ಯಕರ್ತರ ಸಂಖ್ಯೆ ಹದಿಮೂರುವರೆ ಕೋಟಿ ಇದೆ. ಮೂರು ಮುಕ್ಕಾಲು ಕೋಟಿ ಜನರೇ ದೇಶದ ವ್ಯವಸ್ಥೆ ಬದಲಾವಣೆ ಮಾಡಿದರೂ ಎಂದರೆ ನಮ್ಮ ಹದಿಮೂರುವರೆ ಕೋಟಿ ಜನರು ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ನೋಡಿ ಎಂದರು.

    ಮುಂದಿನ ಚುನಾವಣೆಯಲ್ಲಿ ಜನರ ಬಳಿ ವೋಟು ಕೇಳಲು ಹೋಗುತ್ತಿಲ್ಲ. ಜನರ ಹತ್ತಿರ ಈ ದೇಶದ ಭವಿಷ್ಯಕ್ಕೋಸ್ಕರ ಬದುಕನ್ನು ಕೇಳಲು ಹೋಗುತಿದ್ದೇವೆ. ಈ ದೇಶ ಮುಂದಿನ ಸಾವಿರ ವರ್ಷ ಕಾಲ ಜೀವಂತವಾಗಿರಬೇಕು ಎಂದರೆ ಧರ್ಮ ಜೀವಂತವಾಗಿರಬೇಕು ಎಂದರೆ ನಮಗೆ ಅವಕಾಶ ಕೊಡಿ ಎಂದು ಕೇಳುತ್ತೇವೆ. ಯಾವುದೇ ಕ್ಷುಲ್ಲಕ ರಾಜಕಾರಣ ಮಾಡಲು ಅಲ್ಲ. ಅಲ್ಲಿ 25 ಸಾವಿರ ಹಣ ಕೊಡುತ್ತೇನೆ ನನ್ನ ಫೋಟೋ ಹಾಕಿಕೊಳ್ಳಲಿ. 50 ಸಾವಿರ ಕೊಡುತ್ತೇನೆ ನನ್ನ ಫೋಟೋ ಹಾಕಿಕೊಳ್ಳಿ. ಈ ರೀತಿ ರಾಜಕಾರಣ ಮಾಡಲು ಅಲ್ಲ ಎಂದು ಟೀಕಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿ ಸಿನಿಮಾದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಮಾಧ್ಯಮದ ಮೇಲೆ ರಕ್ಷಿತಾ ಗರಂ

    ಪತಿ ಸಿನಿಮಾದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಮಾಧ್ಯಮದ ಮೇಲೆ ರಕ್ಷಿತಾ ಗರಂ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಅವರಿಗೆ ತಮ್ಮ ಪತಿ ಪ್ರೇಮ್ ಅವರ ಚಿತ್ರದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ.

    ನಿರ್ದೇಶಕ ಮಹೇಶ್ ಬಾಬು ಅವರ ಹೊಸ ಸಿನಿಮಾ ಪೂಜೆಗೆ ರಕ್ಷಿತಾ ಪ್ರೇಮ್ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರು ಪ್ರೇಮ್ ಅವರು ಆರು ಜನ ಸ್ಟಾರ್ ಗಳನ್ನು ಹಾಕಿಕೊಂಡು ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

    ಆಗ ರಕ್ಷಿತಾ ಅವರು, ಸ್ಟುಪಿಡ್ ಪ್ರಶ್ನೆಗೆ ಆನ್ಸರ್ ಮಾಡಲ್ಲ. ಆ ಸಿನಿಮಾ ಬಗ್ಗೆ ಪ್ರೇಮ್‍ನ ಕೇಳಿ. ‘ದಿ-ವಿಲನ್’ ಸಿನಿಮಾ ಟೈಮ್‍ನಲ್ಲಿ ನಮಗೆ ತುಂಬಾ ಬೇಜಾರ್ ಆಗಿದೆ. ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ನಮ್ಮ ಫ್ಯಾಮಿಲಿನಾ ಟಾರ್ಗೆಟ್ ಮಾಡಿ ಟ್ರೋಲ್ ಮಾಡುವುದು ಸರಿಯಲ್ಲ. ಟ್ರೋಲ್ ಪೇಜ್ ಟ್ವೀಟ್ ಹಾಗೂ ಕೆಲವರು ಮಾತನಾಡಿರುವುದನ್ನು ನೋಡಿ ನಮಗೆ ಪರ್ಸನಲಿ ಸಿಕ್ಕಾಪಟ್ಟೆ ಬೇಜಾರ್ ಆಗಿದೆ ಎಂದು ಟ್ರೋಲ್ ಮಾಡಿದವರ ಕೋಪವನ್ನು ರಕ್ಷಿತಾ ಮಾಧ್ಯಮದವರ ಮೇಲೆ ತೋರಿಸಿದ್ದಾರೆ.

    ದಿ-ವಿಲನ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್ ಅವರು ಡಿಸಿಪಿ ರವಿ ಚನ್ನಣ್ಣನವರ್ ಅವರ ಕಚೇರಿಗೆ ಹೋಗಿ ದೂರು ಸಲ್ಲಿಸಿದ್ದರು. ನಟಿ ರಕ್ಷಿತಾ ಮತ್ತು ಪ್ರೇಮ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಆರೋಪದ ಮೇರೆಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹೋಗಿ ನಿರ್ದೇಶಕ ಪ್ರೇಮ್ ದೂರು ನೀಡಿದ್ದರು. ದಿ ವಿಲನ್ ಸಿನಿಮಾದ ಬಗ್ಗೆ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವು ಕಿಡಿಗೇಡಿಗಳು ನನ್ನ ಮತ್ತು ನನ್ನ ಕುಟುಂಬದವರ ಬಗ್ಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾರೆ ಎಂದು ನಿರ್ದೇಶಕ ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೀ ನೀವು ಭಾಷಣ ಮಾಡಿ ಹೋಗ್ತೀರಿ – ಸಿದ್ದರಾಮಯ್ಯ ಭಾಷಣಕ್ಕೆ ವ್ಯಕ್ತಿಯಿಂದ ಅಡ್ಡಿ

    ರೀ ನೀವು ಭಾಷಣ ಮಾಡಿ ಹೋಗ್ತೀರಿ – ಸಿದ್ದರಾಮಯ್ಯ ಭಾಷಣಕ್ಕೆ ವ್ಯಕ್ತಿಯಿಂದ ಅಡ್ಡಿ

    ಬಾಗಲಕೋಟೆ: ರೀ ನೀವು ಭಾಷಣ ಮಾಡಿ ಹೋಗುತ್ತೀರಿ. ಆದರೆ ಅಧಿಕಾರಿಗಳು ಕೆಲಸವನ್ನೇ ಮಾಡುವುದಿಲ್ಲ ಅಂತ ಕೂಗಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾಷಣಕ್ಕೆ ವ್ಯಕ್ತಿಯೊಬ್ಬ ಅಡ್ಡಿ ಪಡಿಸಿದ್ದಾನೆ.

    ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಿಮ್ಮ ಊರಿಗೆ ಒಳಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ ಎಂದು ಹೇಳಿದರು.

    ಈ ವೇಳೆ ಗುಂಪಿನಲ್ಲಿ ಕೊನೆಗೆ ನಿಂತಿದ್ದ ವ್ಯಕ್ತಿಯೊರ್ವ ಭಾಷಣಕ್ಕೆ ಅಡ್ಡಿಪಡಿಸಿ, ನೀವು ಹೋದ ಮೇಲೆ ಯಾರು ಇಲ್ಲಿಗೆ ಬರಲ್ಲ. ನೀವು ಹೇಳಿ ಹೋಗ್ತೀರಿ. ಇದಾದ ಮೇಲೆ ಅಧಿಕಾರಿಗಳು ಕೇರ್ ಮಾಡಲ್ಲ. ನೀವು ಇದ್ದಾಗ ಮಾತ್ರ ಇದೆಲ್ಲಾ ಡ್ರಾಮಾ ಮಾಡ್ತಾರೆ ಎಂದು ಮೂರು ಬಾರಿ ಕೂಗಿ ಹೇಳಿದ.

    ಭಾಷಣಕ್ಕೆ ಅಡ್ಡಿಪಡಿಸಿದ್ದ ವ್ಯಕ್ತಿಯ ವಿರುದ್ಧ ಗರಂ ಆದ ಸಿದ್ದರಾಮಯ್ಯ, ಹೇ ಸುಮ್ನಿರಪ್ಪಾ ಎಷ್ಟು ಸಾರಿ ಮಾತಾಡ್ತೀಯಾ ಎದುರು ಬಂದು ಮಾತಾಡು. ನಿನ್ನಂತವರ ಸಮಸ್ಯೆ ಕೇಳುವುದಕ್ಕೆ ಅಂತಲೇ ನಾನು ಇಲ್ಲಿಗೆ ಬಂದಿದ್ದು ಎಂದು ಗುಡುಗಿ ಆತನನ್ನು ಆಚೆಗೆ ಕಳುಹಿಸಿ ಅಂತ ಪೊಲೀಸರಿಗೆ ಸೂಚನೆ ನೀಡಿದರು.

    ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, ಈ ಕಡೆ ಕೇಳಿ, ಆ ಕಡೆ ನೋಡಬೇಡಿ. ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಅವನಾ ಅಥವಾ ನಾನೇ ಎಂದು ಸಭಿಕರನ್ನು ಪ್ರಶ್ನಿಸಿದರು. ನಾನು ನಿಮ್ಮನ್ನ ಉದ್ದೇಶಿಸಿ ಮಾತನಾಡಲು ಬಂದಿದ್ದೇನೆ. ನೀವು ನನ್ನ ಮಾತನ್ನು ಕೇಳಬೇಕು ಎಂದು ಹೇಳಿ ತಮ್ಮ ಭಾಷಣ ಮುಂದುವರಿಸಿದರು. ಮಾಜಿ ಸಿಎಂ ಅವರಿಂದ ಸೂಚನೆ ಬರುತ್ತಿದ್ದಂತೆ ಪೊಲೀಸರು ಆ ವ್ಯಕ್ತಿಯನ್ನ ಹೊರಗೆ ಕಳುಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಪುನೀತ್ ರಾಜ್‍ಕುಮಾರ್ ಗರಂ

    ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಪುನೀತ್ ರಾಜ್‍ಕುಮಾರ್ ಗರಂ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಐಟಿ ದಾಳಿ ಮುಗಿದ ತಕ್ಷಣ ಮನೆಯಿಂದ ಹೊರ ಬಂದು ಅಭಿಮಾನಿಗಳನ್ನು ಮಾತನಾಡಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ. ಈ ಮಧ್ಯೆ ಮಾಧ್ಯಮದವರು ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಗರಂ ಆಗಿದ್ದಾರೆ.

    ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಟಿ ದಾಳಿ ನಡೆದ ನಂತರ ನನ್ನ ಯಾವುದೇ ರಿಯಾಕ್ಷನ್ ಇಲ್ಲ. ನಾನು ನಾರ್ಮಲ್ ಆಗಿದ್ದೇನೆ ಅಂದರು. ಇದೇ ವೇಳೆ ಐಟಿ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸೋಮವಾರ ವಿಚಾರಣೆಗೆ ಕರೆದಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ ಆ ವಿಷಯ ನಾನ್ಯಾಕೆ ನಿಮಗೆ ಹೇಳಬೇಕು. ಇದು ಐಟಿ ಅಧಿಕಾರಗಳ ಹಾಗೂ ನನ್ನ ನಡುವೆಯ ವಿಷಯ ಎಂದು ಗರಂ ಆದರು. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ಬಳಿಕ ಪುನೀತ್ ಐಟಿ ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನೂ ತೊಂದರೆ ಆಗಿಲ್ಲ ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರೇಡ್ ಆಗ್ತಿದ್ದಾಗ ಸ್ವಲ್ಪ ಬೇಜಾರ್ ಆಗ್ತಿತ್ತು, ಇರಿಟೇಟ್ ಆದ್ರೂ ಸಹಕಾರ ನೀಡ್ಬೇಕಿತ್ತು- ಶಿವಣ್ಣ

    ಇಂದು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಪುನೀತ್ ಅಭಿನಯದ `ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ರಾತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪುನೀತ್ ಹುಬ್ಬಳ್ಳಿಗೆ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ಸಿಎಂ ಮೇಲೆ ಉತ್ತರ ಕರ್ನಾಟಕ ನಿಂಬೆ ರೈತರು ಗರಂ!

    ಸಿಎಂ ಮೇಲೆ ಉತ್ತರ ಕರ್ನಾಟಕ ನಿಂಬೆ ರೈತರು ಗರಂ!

    ವಿಜಯಪುರ: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನ ಮಾಡಿದ್ದರೂ ಅವರ ಮೇಲೆ ಮತ್ತೆ ಉತ್ತರ ಕರ್ನಾಟಕದ ರೈತರು ಗರಂ ಆಗಿದ್ದಾರೆ.

    ನಿಂಬೆನಾಡು ವಿಜಯಪುರದ ಜನ ಬರದ ನಡುವೆಯೂ ಹೇಗೋ ಸಾಲಸೂಲ ಮಾಡಿ ನಿಂಬೆ ಬೆಳೆದಿದ್ದರು. ಆದರೆ ನೀರಿನ ಕೊರತೆಯಿಂದಾಗಿ ಕೈಗೆ ಬಂದ ಬೆಳೆ ಒಣಗಿ ಹೋಗುತ್ತಿದ್ದು ರೈತರು ಕಂಗೆಟ್ಟಿದ್ದಾರೆ. ಇದನ್ನೂ ಓದಿ: ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

    ಬೇರೆ ದಾರಿ ಇಲ್ಲದೆ ರೈತರು ಇದೀಗ ಸಾಲಮಾಡಿ ದುಡ್ಡು ಕೊಟ್ಟು ನೀರು ಕೊಂಡುಕೊಂಡು ಜಮೀನುಗಳಿಗೆ ನೀರುಣಿಸುತ್ತಿದ್ದಾರೆ. ಇನ್ನು ಕಾಲುವೆಗಳಿದ್ದರೂ ಅದರಲ್ಲಿ ನೀರಿಲ್ಲ. ಅಲ್ಲದೇ ಜಿಲ್ಲೆಯ ನಿಂಬೆ ಪ್ರದೇಶವಾದ ಇಂಡಿ ತಾಲೂಕು ಬರಪೀಡಿತ ಅಂತ ಘೋಷಣೆಯಾಗಿದ್ದರೂ ಈವರೆಗೆ ಅಲ್ಲಿನ ರೈತರಿಗೆ ಪರಿಹಾರ ಬಂದಿಲ್ಲ.

    ಕೇಂದ್ರ ಬರ ಅಧ್ಯಯನ ತಂಡ ಸೇರಿದಂತೆ ರಾಜ್ಯ ಬರ ಅಧ್ಯಯನ ತಂಡ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರು ಸರ್ಕಾರ ರೈತರ ಕಣ್ಣೊರೆಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಂಡ್ರ್ಯೂ ವಿಷಯಕ್ಕೆ ಸ್ನೇಹಿತ ಶಶಿ ಮೇಲೆ ಕವಿತಾ ಗರಂ

    ಆಂಡ್ರ್ಯೂ ವಿಷಯಕ್ಕೆ ಸ್ನೇಹಿತ ಶಶಿ ಮೇಲೆ ಕವಿತಾ ಗರಂ

    ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಕವಿತಾ ತಮ್ಮ ಸ್ನೇಹಿತ ಶಶಿ ಮೇಲೆ ಗರಂ ಆಗಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ಬಾರಿ ‘ಬಿಗ್‍ಬಾಸ್ ನಗರ’ ಟಾಸ್ಕ್ ನೀಡಿದರು. ಈ ಟಾಸ್ಕ್ ನಲ್ಲಿ ಬಿಗ್ ಬಾಸ್ ಆಂಡ್ರ್ಯೂ ಹಾಗೂ ನಯನ ಅವರನ್ನು ನಿಯಮ ರೂಪಿಸುವ ಅಧಿಕಾರಿಯಾಗಿ ಮಾಡಿದರು. ನವೀನ್ ಹಾಗೂ ಅಕ್ಷತಾರನ್ನು ಆಟೋ ಚಾಲಕರಾಗಿ ಮಾಡಿ ಮನೆಯ ಉಳಿದ ಸದಸ್ಯರನ್ನು ನಾಗರಿಕರಾಗಿ ಮಾಡಿದರು.

    ಈ ಟಾಸ್ಕ್ ನಲ್ಲಿ ಅಡುಗೆ ವಿಷಯಕ್ಕಾಗಿ ಅಧಿಕಾರಿಗಳ ಹಾಗೂ ನಾಗರಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಂಡ್ರ್ಯೂ ತಮಗೆ ಇಷ್ಟ ಬಂದಂತೆ ನಿಯಮಗಳನ್ನು ರೂಪಿಸುತ್ತಿದ್ದರು. ಈ ನಿಯಮಗಳ ಬಗ್ಗೆ ಧ್ವನಿ ಎತ್ತದೆ ಆಂಡ್ರ್ಯೂ ಮಾತಿಗೆ ಒಪ್ಪಿಗೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿ ಕವಿತಾ ಶಶಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

    ನಿಯಮ ರೂಪಿಸುವ ಅಧಿಕಾರಿಯಾಗಿದ್ದ ಆಂಡ್ರ್ಯೂ ತನಗೆ ಇಷ್ಟ ಬಂದಂತೆ ನಿಯಮಗಳನ್ನು ಬದಲಾಯಿಸುತ್ತಿದ್ದರು. ಹಾಗಾಗಿ ಕವಿತಾ, ಆಂಡ್ರ್ಯೂ ಮೇಲೆ ಕೋಪಗೊಂಡಿದ್ದರು. ಶಶಿ ಈ ನಿಯಮಗಳ ಬಗ್ಗೆ ಸರಿಯಾಗಿ ಮಾತನಾಡಿಲ್ಲ. ಶಶಿ ಸರಿಯಾಗಿ ಮಾತನಾಡಿದ್ದರೆ, ನಾನು ರಾತ್ರಿಯಿಡಿ ಜೈಲಲ್ಲಿ ಕಾಲ ಕಳೆಯುತ್ತಿರಲಿಲ್ಲ ಎಂದು ಶಶಿ ವಿರುದ್ಧ ಗರಂ ಆಗಿದ್ದಾರೆ.

    ಅಧಿಕಾರಿಗಳಿಗೆ ಅಧಿಕಾರ ಇರುವುದರಿಂದ ಅವರು ನಿಯಮಗಳನ್ನು ಬದಲಾಯಿಸುತ್ತಿದ್ದಾರೆ. ಅಡುಗೆ ಮಾಡುವ ವಿಚಾರದಲ್ಲಿ ಇಡೀ ತಂಡ ತೆಗೆದುಕೊಂಡ ನಿರ್ಧಾರ ಪರವಾಗಿ ನಾನು ನಿಂತೆ. ನಾನು ಯಾವುದೇ ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಶಿ, ಕವಿತಾಗೆ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ: ಗಲಾಟೆ ಮಾಡಬಾರದು? ಅಂದಿದ್ದು ಯಾರಿಗೆ ಚಾಲೆಂಜಿಂಗ್ ಸ್ಟಾರ್?

    ವಿಡಿಯೋ: ಗಲಾಟೆ ಮಾಡಬಾರದು? ಅಂದಿದ್ದು ಯಾರಿಗೆ ಚಾಲೆಂಜಿಂಗ್ ಸ್ಟಾರ್?

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ನಡೆದ ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ರಾಕ್‍ಲೈನ್ ವೆಂಕಟೇಶ್ ಹಾಗೂ ದರ್ಶನ್ ಚಾಲನೆ ನೀಡಿದ್ದಾರೆ. ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆ ಪಾರಿವಾಳ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ್ದಾರೆ.

    ಮುರುಘಾಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದರು. ದರ್ಶನ್ ಮಠಕ್ಕೆ ಬರುತ್ತಿದ್ದಂತೆ ಮಠದ ಆನೆ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ ಆನೆಯ ಆರೋಗ್ಯದ ಬಗ್ಗೆಯೂ ವಿಚಾರಿಸಿ ತಿಂಡಿ ಏನು ಕೊಟ್ಟಿದ್ದೀರಿ ಎಂದು ಮಾವುತರಿಗೆ ಕೇಳಿದ್ದಾರೆ. ಅಷ್ಟೇ ಅಲ್ಲದೇ ಆನೆಯ ದಂತವನ್ನು ಕೈಯಿಂದ ಮುಟ್ಟಿ ನೋಡಿ ಚೆನ್ನಾಗಿದೆ ಹೇಳಿದರು. ಈ ವೇಳೆ ದರ್ಶನ್ ಅಭಿಮಾನಿಯೊಬ್ಬರ ಮೇಲೆ ಗರಂ ಆದರು. ಗಲಾಟೆ ಮಾಡಬಾರದು ಆವಾಗಿನಿಂದ ನಿನ್ನದೇ ಗಲಾಟೆ ಎಂದು ಹೇಳಿ ಖಡಕ್ ವಾರ್ನಿಂಗ್ ಕೊಟ್ಟರು.

    ನಗರದ ಗಾಂಧಿ ವೃತ್ತದಿಂದ ಮುರುಘಾ ಮಠದವರೆಗೆ ಜಾಥಾ ಆರಂಭವಾಗಿದ್ದು, ದರ್ಶನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಸದ್ಯ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರಿಂದ ಹರಸಾಹಸಪಟ್ಟರು. ದರ್ಶನ್ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಸಾಥ್ ನೀಡಿದ್ದಾರೆ.

    ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ಚಾಲನೆ ನೀಡುವ ಮುನ್ನ ಮಾತನಾಡಿದ ರಾಕ್‍ಲೈನ್ ವೆಂಕಟೇಶ್ ಅವರು, ದಸರಾ ಆಚರಣೆ ಮಾಡಲು ಬಂದಿದ್ದೇವೆ, ದಸರಾ ಹಬ್ಬ ಮಾಡೋಣ. ಹಬ್ಬ ಆಚರಿಸಲು ನಮ್ಮನ್ನು ಮುರುಘಾ ಶರಣರು ಕರೆಸಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಮಾತನಾಡುವುದು ಬೇಡ ವೀರ ಮದಕರಿ ಚಿತ್ರದ ಬಗ್ಗೆ ಮಾತನಾಡಲು ಪ್ರತ್ಯೇಕ ವೇದಿಕೆ ಸೃಷ್ಟಿಸುತ್ತೇವೆ. ಈಗ ಚಿತ್ರದುರ್ಗ ಹಾಗು ಚಿತ್ರದ ಬಗ್ಗೆ ಮಾತನಾಡುವುದು ಸರಿಯಲ್ಲ ಅಂತಾ ತಿಳಿಸಿದ್ರು.

    ಇದೇ ವೇಳೆ ರಾಕ್‍ಲೈನ್ ವೆಂಕಟೇಶ್ ಅವರು ಮಾಧ್ಯಮಗಳ ಮುಂದೆ ಮಾತನಾಡದೇ ದರ್ಶನ್ ಅವರು ಕೂಡ ದಸರಾ ಹಬ್ಬದ ಶುಭಾಶಯ ತಿಳಿಸಿ ಅಲ್ಲಿಂದ ಹೊರಟು ಹೋದರು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟರಾದ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆ.ಆರ್ ಮಾರ್ಕೆಟ್‍ನಲ್ಲಿ ಕಸದ ರಾಶಿ ನೋಡಿ ಮೇಯರ್ ಪದ್ಮಾವತಿ ಗರಂ, ಅಧಿಕಾರಿಗಳಿಗೆ ಕ್ಲಾಸ್

    ಕೆ.ಆರ್ ಮಾರ್ಕೆಟ್‍ನಲ್ಲಿ ಕಸದ ರಾಶಿ ನೋಡಿ ಮೇಯರ್ ಪದ್ಮಾವತಿ ಗರಂ, ಅಧಿಕಾರಿಗಳಿಗೆ ಕ್ಲಾಸ್

    ಬೆಂಗಳೂರು: ಕೆಆರ್ ಮಾರ್ಕೆಟ್‍ಗೆ ಭೇಟಿ ನೀಡಿದ ಮೇಯರ್ ಪದ್ಮಾವತಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರ ಮೇಲೆ ಗರಂ ಆಗಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

     

    ಜನರಿಗೆ ಓಡಾಡೊಕ್ಕೆ ಜಾಗ ಇಲ್ಲ. ರಸ್ತೆ ಮಧ್ಯದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ, ಏನ್ ಮಾಡುತ್ತಿದ್ದಿರಾ? ನಾನೇನು ಮೇಸ್ತ್ರಿನಾ? ದಿನಾ ಬಂದು ಇವರನ್ನ ಓಡಿಸೋಕೆ ಹುಷಾರ್ ಎಂದು ಪದ್ಮಾವತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಕೆಆರ್ ಮಾರ್ಕೆಟ್ ನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ ಹಿನ್ನಲೆಯಲ್ಲಿ ಯಾರ್ರೀ ನಿಮಗೆ ಮಾರ್ಕೆಟ್ ನಲ್ಲಿ ಗಣೇಶ ಇಡೋಕೆ ಪರ್ಮಿಷನ್ ಕೊಟ್ಟಿದು? ಮೊದಲು ಇದನ್ನ ತೆಗೆಸ್ರಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈಗ ಗಣೇಶ ಇಡ್ತಾರೆ. ಆಮೇಲೆ ಇಲ್ಲೆ ದೇವಸ್ಥಾನ ಕಟ್ಟುತ್ತಾರೆ. ಮೊದಲು ಇದನ್ನ ಇಲ್ಲಿಂದ ತೆಗೆಸಿ. ಮಾರ್ಕೆಟ್ ನಲ್ಲಿ ಇಟ್ಟಿರುವ ಗಣೇಶ ಮೂರ್ತಿಯನ್ನ ಮೊದ್ಲು ತೆಗೆಸಿ. ಯಾರಾದರೂ ದೇವಸ್ಥಾನ ಕಟ್ಟಿದ್ರೆ ಯಾರು ಸಸ್ಪೆಂಡ್ ಆಗ್ತೀರೋ ಗೊತ್ತಿಲ್ಲ. ಸಂಜೆ ಒಳಗೆ ಯಾವ ಮೂರ್ತಿನೂ ಇರಬಾರದು ಎಂದು ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.

    ಮಾರುಕಟ್ಟೆಯಲ್ಲಿ ಕಸದ ರಾಶಿ ಕಂಡು ಮೇಯರ್ ಗರಂ ಆಗಿದ್ದು, ಸ್ಥಳದಲ್ಲಿಯೇ ಇದ್ದ ಆರೋಗ್ಯ ಅಧಿಕಾರಿ ಶಶಿಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರರ ವಿರುದ್ಧ ಹರಿಹಾಯ್ದು ಮಾರ್ಕೆಟ್ ಕ್ಲೀನ್ ಇಡೋಕೆ ಏನ್ ನಿಮಗೆ? ಎಂದು ಹೇಳಿ ಕಸದ ರಾಶಿ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹೊಟ್ಟೆಗೆ ಏನ್ ತಿನ್ನುತ್ತೀರಾ? ಮಾರ್ಕೆಟ್ ಕ್ಲಿನ್ ಆಗಿ ಇಡೋಕೆ ಏನ್ ದಾಡಿ ನಿಮಗೆ? ರಸ್ತೆ ಮಧ್ಯೆದಲ್ಲೇ ತರಕಾರಿ ಮಾರುತ್ತಿದ್ದಾರೆ ಎಂದು ಕ್ಲಾಸ್ ಮಾಡಿದ್ರು. ಹೂವಿನ ಮಾರ್ಕೆಟ್‍ನಲ್ಲಿ ಕಸ ತೆಗೆಯದ ಅಧಿಕಾರಿ ಫಾಜಲ್‍ಗೆ ಮೇಯರ್ ನೋಟಿಸ್ ಜಾರಿ ಮಾಡಿದ್ರು. ಕಳೆದ ಮೂರು ದಿನಗಳಿಂದ ಮಾರ್ಕೆಟ್ ನಲ್ಲಿ ಕಸ ತೆರವು ಮಾಡದ ಹಿನ್ನಲೆಯಲ್ಲಿ ಅಧಿಕಾರಿ ಫಜಲ್‍ಗೆ ನೋಟಿಸ್ ಜಾರಿ ಮಾಡಿದ್ದಾರೆ.

     

    ಜಂಟಿ ಆಯುಕ್ತ ಸರ್ಫರಾಜ್ ಖಾನ್ ಕೂಡ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೂವಿನ ಮಾರ್ಕೆಟ್ ನಲ್ಲಿ ಕಸ ತೆಗೆಯದ ನೋಡಲ್ ಅಧಿಕಾರಿ ಫಜಲ್ ಗೆ ಮೇಯರ್ ರಿಂದ ನೋಟಿಸ್ ಜಾರಿಯಾಗಿದ್ದು ಆರೋಗ್ಯ ಅಧಿಕಾರಿ ಶಶಿ ಕುಮಾರ್ ವಿರುದ್ಧವು ಕ್ರಮ ತೆಗೆದುಕೊಂಡಿದ್ದಾರೆ. ಎಂಟು ಅಂಗಡಿಗಳಿಗೆ ತಲಾ 500 ರೂ. ದಂಡ ಹಾಕಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮೇಯರ್ ಪದ್ಮಾವತಿ ಸೂಚನೆ ನೀಡಿದ್ದಾರೆ.