Tag: ಗಬ್ರು

  • ಚಂದ್ರಯಾನ-3 ಸಕ್ಸಸ್ ಆಗುತ್ತೆ – ಇಸ್ರೋಗೆ ಡಾಲಿ ಧನ್ಯವಾದ

    ಚಂದ್ರಯಾನ-3 ಸಕ್ಸಸ್ ಆಗುತ್ತೆ – ಇಸ್ರೋಗೆ ಡಾಲಿ ಧನ್ಯವಾದ

    ಬೆಂಗಳೂರು: ಚಂದ್ರಯಾನ-3 (Chandrayaan-3) ಸಕ್ಸಸ್ ಆಗ್ತಿದೆ, ನನ್ನ ಹುಟ್ಟುಹಬ್ಬದ ದಿನವೇ ಆಗ್ತಿರೋದು ತುಂಬಾ ಖುಷಿ ತಂದಿದೆ ಎಂದು ನಟ ಡಾಲಿ ಧನಂಜಯ್ (Dhananjay) ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಮ್ಮ ವಿಜ್ಞಾನಿಗಳ ಎಲ್ಲ ಪರಿಶ್ರಮ ಸಾರ್ಥಕವಾಗುವ ಗಳಿಗೆ ಅದು. ನಮ್ಮ ಇಸ್ರೋ (ISRO), ಇಸ್ರೋ ವಿಜ್ಞಾನಿಗಳು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಅವರಿಗೆ ಧನ್ಯವಾದ ಇನ್ನೂ ಇಂತಹ ಅನೇಕ ಕೆಲಸಗಳು ಅವರಿಂದ ಆಗಲಿ. ಜಗತ್ತಿನಲ್ಲಿ ಎಲ್ಲವೂ ಒಂದೇ ಬಾರಿಗೆ ಸಕ್ಸಸ್ ಆಗಲ್ಲ. ಕೆಲವೊಮ್ಮೆ ವಿಫಲವಾಗುತ್ತೆ. ಹಾಗೆಯೇ ನಮ್ಮ ಇಸ್ರೋ ಚಂದ್ರಯಾನ 3 ಸಕ್ಸಸ್ ಆಗುತ್ತೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಯೋಗಿಗಳ ಕಾಲು ಹಿಡಿಯುವುದು ನನ್ನ ಅಭ್ಯಾಸ : ರಜನಿ ಖಡಕ್ ಉತ್ತರ

    ನಿನ್ನೆ ಚಂದ್ರಯಾನ-3 ಕುರಿತಂತೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದರು. ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ. ನಾನು ಉಲ್ಲೇಖಿಸಿದ್ದು ನಮ್ಮ ಕೇರಳದ ಚಾಯ್‌ವಾಲಾರನ್ನ ವಿಜೃಂಭಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕ್. ಟ್ರೋಲಿಗರ ಕಣ್ಣಿಗೆ ಕಾಣಿಸಿದ ಚಾಯ್‌ವಾಲಾ ಯಾರು? ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ. ಬಾಲಿಶವಾಗಿ ವರ್ತಿಸುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಮೈಸೂರು ಹುಡುಗನ ಬೆತ್ತಲೆ ವಿಡಿಯೋ ಇಟ್ಕೊಂಡಿದ್ದಾರಂತೆ ನಟಿ ರಾಖಿ

    ಪ್ರಕಾಶ್ ರಾಜ್ ಅವರ ಪ್ರತಿಕ್ರಿಯೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇಡೀ ದೇಶವೇ ಹೆಮ್ಮೆ ಪಡುವಂತೆ ನಿಮ್ಮ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಜಗತ್ತೇ ಈ ಕೆಲಸಕ್ಕಾಗಿ ಕೊಂಡಾಡುತ್ತಿದೆ. ಆದರೆ ಪ್ರಕಾಶ್ ರೈ ಈ ರೀತಿ ಗೇಲಿ ಮಾಡುವುದು ಸರಿಯಲ್ಲ. ಭಾರತದ ಅಸ್ಮಿತೆಯನ್ನೇ ಪ್ರಶ್ನೆ ಮಾಡುವ ನಟನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದರು. ಇಂದು ಸಚಿವರೂ ಕೂಡ ಗರಂ ಆಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲಿ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್ ರಿಲೀಸ್

    ಡಾಲಿ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್ ರಿಲೀಸ್

    ಟ ಡಾಲಿ ಧನಂಜಯ್ (Dhananjay) ಹುಟ್ಟು ಹಬ್ಬದ (Birthday) ಮುನ್ನಾ ದಿನ ಇಂದು ಉತ್ತರಕಾಂಡ ಸಿನಿಮಾದ ಟೀಸರ್ (Teaser)  ರಿಲೀಸ್ ಆಗಿದೆ. ಜೊತೆಗೆ ಗಬ್ರು (Gabru) ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ‘ಉತ್ತರಕಾಂಡ’ ಸಿನಿಮಾದ ಮುಹೂರ್ತವಾಗಿ ಹಲವು ತಿಂಗಳುಗಳೇ ಕಳೆದಿವೆ. ಮುಹೂರ್ತದ ನಂತರ ಯಾವುದೇ ಅಪ್ ಡೇಟ್ ನೀಡಿರಲಿಲ್ಲ ಚಿತ್ರತಂಡ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿಲ್ಲ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.

    ರೋಹಿತ್ ಪದಕಿ ನಿರ್ದೇಶನದಲ್ಲಿ ಉತ್ತರಕಾಂಡ (Uttarkanda) ಸಿನಿಮಾ ಮೂಡಿ ಬರಲಿದ್ದು, ಮೋಹಕ ತಾರೆ ರಮ್ಯಾ ಮತ್ತೆ ಈ ಸಿನಿಮಾದ ಮೂಲಕ ನಟಿಯಾಗಿ ಚಿತ್ರೋದ್ಯಮಕ್ಕೆ ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ಡಾಲಿ ಜೊತೆ ರಮ್ಯಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಅದ್ದೂರಿ ಹುಟ್ಟು ಹಬ್ಬಕ್ಕೆ ಸಿದ್ಧತೆ

    ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿರುವ ಡಾಲಿ, ಅಂದು ತಾವು ಯಾವೆಲ್ಲ ಸ್ಥಳದಲ್ಲಿ ಸಿಗುತ್ತೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬದ ದಿನದಂದು ತಾವು ಮನೆಯಲ್ಲಿ ಇರದೇ ಇರುವ ಕಾರಣಕ್ಕಾಗಿ ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇಂದು ರಾತ್ರಿಯೇ 11 ಗಂಟೆಯಿಂದ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವುದಕ್ಕೂ ಡಾಲಿ ಸಿಗುತ್ತಾರಂತೆ. ಆಗಸ್ಟ್ 23ಕ್ಕೆ ಡಾಲಿ ಹುಟ್ಟು ಹಬ್ಬ. ಅಂದು ಮತ್ತೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಂದಿ ಲಿಂಕ್ಸ್ ಗ್ರೌಂಡ್‍ ನಲ್ಲೇ ಧನಂಜಯ್ ಅಭಿಮಾನಿಗಳೊಂದಿಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ ತರಬೇಡಿ ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.

    ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇಂದಿನಿಂದಲೇ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಡಾಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.

     

    ನೆರೆ, ಕೊರೊನಾ, ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ಧನಂಜಯ್ ಕಳೆದ 4 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳ ಕೈಗೂ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆಯೇ ಸಮಯ ಕಳೆಯಲು ನಿರ್ಧರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]