Tag: ಗಬ್ಬರ್ ಸಿಂಗ್

  • ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ

    ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ

    ಟಾಲಿವುಡ್‌ (Tollywood) ಸೂಪರ್ ಹೀರೋ ಪವನ್ ಕಲ್ಯಾಣ್‌ಗೆ (Pawan Kalyan) ಅಪಾರ ಅಭಿಮಾನಿಗಳ ಬಳಗವಿದೆ. ಅವರ ಜನ್ಮದಿನವನ್ನು ಹಬ್ಬದಂತೆ ಸೆಲೆಬ್ರೇಟ್ ಮಾಡುವ ಅಭಿಮಾನಿಗಳಿದ್ದಾರೆ. ಈಗ ಅವರ ಹುಟ್ಟುಹಬ್ಬದ ಪ್ರಯುಕ್ತ ಪವನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಮಾಲಾಶ್ರೀ ಕೋರಿಕೆಯನ್ನ ಈಡೇರಿಸಿದ ದೈವ- ಕೊರಗಜ್ಜನ ಆದಿಸ್ಥಳಕ್ಕೆ ನಟಿ ಭೇಟಿ

    ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರಾಗಿರೋ ಪವನ್ ಕಲ್ಯಾನ್ ಅವರು ಸಿನಿಮಾ- ರಾಜಕೀಯ ಎರಡರಲ್ಲೂ ಸದ್ದು ಮಾಡ್ತಿದ್ದಾರೆ. ರಾಜಕೀಯದ ಜೊತೆಗೆ ಆಕ್ಟಿಂಗ್ ಪವನ್ ಬ್ಯಾಲೆನ್ಸ್ ಮಾಡ್ತಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 2ರಂದು ಅವರ ಹುಟ್ಟುಹಬ್ಬವಾಗಿದ್ದು, ನಟನ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ.

    ಪವನ್ ಕಲ್ಯಾಣ್ ನಟನೆಯ ಎರಡು ಟಾಪ್ ಸಿನಿಮಾಗಳು ಇದೀಗ ಅಭಿಮಾನಿಗಳಿಗೋಸ್ಕರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ರಿ-ರಿಲೀಸ್ ಆಗಲಿವೆ. 2004ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ‘ಗುಡುಂಬಾ ಶಂಕರ್’ ಮತ್ತು 2012ರಲ್ಲಿ ಪ್ರೇಕ್ಷಕರ ಮನಗೆದ್ದ ‘ಗಬ್ಬರ್ ಸಿಂಗ್’ ಚಿತ್ರಗಳು ತೆರೆ ಮೇಲೆ ಮತ್ತೊಮ್ಮೆ ರಾರಾಜಿಸಲಿದೆ. ಈ ಬಗ್ಗೆ ನಾಗಬಾಬು ಅವರು ಮಾಹಿತಿ ನೀಡಿದ್ದು, ಸಿನಿಮಾಗಳನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮರು ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದ್ದಾರೆ.

    ಪವನ್ ಕಲ್ಯಾಣ್ ನಟನೆಯ ಚಿತ್ರ ಮರು ಬಿಡುಗಡೆಯಲ್ಲಿ ಗಳಿಸುವ ಆದಾಯವನ್ನು ಜನಸೇನಾ ಪಕ್ಷಕ್ಕೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಬ್ಬರ್ ಸಿಂಗ್ ಸಾಂಗ್ ಪ್ಲೇ ಮಾಡಿ ಪಿಎಸ್‍ಐ ದರ್ಪ- ಡಾನ್ಸ್ ಮಾಡುತ್ತಾ ವ್ಯಕ್ತಿಗೆ ಮನಸೋ ಇಚ್ಛೆ ಥಳಿತ

    ಗಬ್ಬರ್ ಸಿಂಗ್ ಸಾಂಗ್ ಪ್ಲೇ ಮಾಡಿ ಪಿಎಸ್‍ಐ ದರ್ಪ- ಡಾನ್ಸ್ ಮಾಡುತ್ತಾ ವ್ಯಕ್ತಿಗೆ ಮನಸೋ ಇಚ್ಛೆ ಥಳಿತ

    ಕೋಲಾರ: ಪಿಎಸ್‍ಐ ಒಬ್ಬರು ಥೇಟ್ ತೆಲುಗು ಗಬ್ಬರ್ ಸಿಂಗ್ ಸಿನಿಮಾದ ದೃಶ್ಯದಂತೆ ವ್ಯಕ್ತಿಯೊಬ್ಬರ ಮೇಲೆ ಅಮಾಮವೀಯವಾಗಿ ಥಳಿಸಿರುವ ಘಟನೆ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕೆಜಿಎಫ್ ತಾಲೂಕಿನ ರಾಮಸಾಗರದಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಈ ವೇಳೆ ಠಾಣೆಯ ಪಿಎಸ್‍ಐ ಹೊನ್ನೇಗೌಡ ತೆಲುಗಿನ ಗಬ್ಬರ್ ಸಿಂಗ್ ಸಿನಿಮಾದ ರೀತಿಯಲ್ಲಿ ಸಂಗ್ ಪ್ಲೇ ಮಾಡಿ ಡಾನ್ಸ್ ಮಾಡುವಂತೆ ಸೂಚಿಸಿದ್ದಾರೆ.

    ಪಿಎಸ್‍ಐ ಹಾಡಿಗೆ ಡಾನ್ಸ್ ಮಾಡುತ್ತಾ ಇರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಇಬ್ಬರು ವ್ಯಕ್ತಿಗಳಿಗೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ವಿಡಿಯೋದಲ್ಲಿ ಪೊಲೀಸರು ವ್ಯಕ್ತಿಗೆ ಹಾಡಿಗೆ ತಕ್ಕಂತೆ ಡಾನ್ಸ್ ಮಾಡಿದರೆ ಮಾತ್ರ ನೀನು ಮನೆಗೆ ಹೋಗಲು ಸಾಧ್ಯ ಎಂದು ಹೇಳುತ್ತಿರುವುದು ಕೂಡ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews