Tag: ಗಧೆ

  • ಸಿ.ಎಂ.ಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ ಬಿ.ಸಿ.ಪಾಟೀಲ್

    ಸಿ.ಎಂ.ಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ ಬಿ.ಸಿ.ಪಾಟೀಲ್

    ಹಾವೇರಿ: ಸಿ.ಎಂ.ಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನ ಆಂಜನೇಯ ದೇವಸ್ಥಾನಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಮರ್ಪಣೆ ಮಾಡಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 28, ರಂದು ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ ಸಿಎಂಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೆಳ್ಳಿ ಗದೆಯನ್ನು ಉಡುಗೊರೆ ನೀಡಿದ್ದರು. ಇದನ್ನೂ ಓದಿ:  ಮಳೆಯಿಂದ ಹಾಸ್ಟೆಲ್ ಜಲಾವೃತ: ರಾತ್ರಿಯಿಡೀ ಛಾವಣಿ ಹತ್ತಿ ಕುಳಿತ ವಿದ್ಯಾರ್ಥಿಗಳು

    ಈ ಉಡುಗೊರೆಯನ್ನ ಆಂಜನೇಯ ದೇವಸ್ಥಾನಕ್ಕೆ ನೀಡುವಂತೆ ಸಿಎಂ ಬೊಮ್ಮಾಯಿ ಹೇಳಿದ್ದರು. ಹೀಗಾಗಿ ಇಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಆಂಜನೇಯ ದೇವಸ್ಥಾನಕ್ಕೆ ಬೆಳ್ಳಿ ಗದೆ ಸಮರ್ಪಣೆ ಮಾಡಲಾಗಿದೆ. ಆಂಜನೇಯ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೆಸರಿನಲ್ಲಿ ಪೂಜೆ ಮಾಡಿಸಿ, ಗದೆಯನ್ನ ದೇವಸ್ಥಾನಕ್ಕೆ ಬಿ.ಸಿ.ಪಾಟೀಲ್ ಬೆಳ್ಳಿ ಗದೆ ಅರ್ಪಿಸಿದ್ದಾರೆ. ಇದನ್ನೂ ಓದಿ:  ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    ಬಿ.ಸಿ.ಪಾಟೀಲ್ ಅವರಿಗೆ ಬ್ಯಾಡಗಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾದ ಆರ್.ಎನ್.ಗಂಗೋಳ, ರವಿ ಮೆಣಸಿನಕಾಯಿ ಸಾಥ್ ನೀಡಿದರು. ಸಿ.ಎಂ ಉಡುಗೊರೆಯನ್ನು ತೆಗೆದುಕೊಳ್ಳದೆ, ಅದನ್ನ ದೇವರಿಗೆ ನೀಡಿ ಸರಳತೆ ಮೆರೆದಿದ್ದಾರೆ.