Tag: ಗಣೇಶ ಹಬ್ಬ

  • ಕನ್ನಡದಲ್ಲೇ ಗಣೇಶೋತ್ಸವ ಶುಭಾಶಯ ತಿಳಿಸಿದ RCB – ಅಭಿಮಾನಿಗಳು ಫುಲ್‌ ಖುಷ್‌

    ಕನ್ನಡದಲ್ಲೇ ಗಣೇಶೋತ್ಸವ ಶುಭಾಶಯ ತಿಳಿಸಿದ RCB – ಅಭಿಮಾನಿಗಳು ಫುಲ್‌ ಖುಷ್‌

    ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ನಾಡಿನ ಸಮಸ್ತ ಜನತೆಗೆ ಹಾಗೂ ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಕನ್ನಡದಲ್ಲೇ ಗಣೇಶೋತ್ಸವದ ಶುಭಾಶಯ (Happy Ganesh Chaturthi) ಕೋರಿದೆ.

    ನಾಡಿನಾದ್ಯಂತ ಗಣೇಶ ಹಬ್ಬದ (Ganesha Chaturthi) ಸಂಭ್ರಮ ಮನೆ ಮಾಡಿದೆ. ಮನೆ-ಮನೆಯಲ್ಲಿ, ನೆರೆ ಹೊರೆಯಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ ವಿಘ್ನೇಶ್ವರನ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ನೋಟು, ನಾಣ್ಯ ಮಧ್ಯೆ ಗಣಪನ ಪ್ರತಿಷ್ಠಾಪನೆ- ಕೋಟಿ ಕೋಟಿ ರೂಪಾಯಿಗಳಲ್ಲಿ ದೇಗುಲ ಸಿಂಗಾರ

    ಈ ನಡುವೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅಭಿಮಾನಿಗೂ ಸೇರಿದಂತೆ ರಾಜ್ಯದ ಜನರಿಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದೆ. ನಾಡಿನ ಸಮಸ್ತ ಜನರಿಗೆ ಗೌರಿ – ಗಣೇಶ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ ಎಲ್ಲರಿಗೂ ನೆಮ್ಮದಿ, ಯಶಸ್ಸು, ಸಮೃದ್ಧಿ ಮತ್ತು ಆರೋಗ್ಯಭಾಗ್ಯ ಕರುಣಿಸಲಿ ಎಂದು ಆಶಿಸುತ್ತೇವೆ ಎಂದು ಟ್ವಿಟ್ಟರ್‌ (X) ಖಾತೆಯಲ್ಲಿ ಶುಭಾಶಯ ಕೋರಿದೆ. ಇದಕ್ಕಾಗಿ ವಿಶೇಷ ವೀಡಿಯೋವೊಂದನ್ನೂ ಹಂಚಿಕೊಂಡಿದೆ.

    ಕ್ರೀಡೆಯೊಂದೇ ಅಲ್ಲದೇ ಸಾಂಪ್ರದಾಯಿಕ ಹಬ್ಬದ ಸಂಭ್ರಮದಲ್ಲೂ ಆರ್‌ಸಿಬಿ ತಂಡ ಭಾಗಿಯಾಗುತ್ತಿರುವುದನ್ನು ಕಂಡು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್ ಟಿವಿ ಕಚೇರಿಯಲ್ಲಿ ಗಣೇಶ ಹಬ್ಬ ಆಚರಣೆ

    ಪಬ್ಲಿಕ್ ಟಿವಿ ಕಚೇರಿಯಲ್ಲಿ ಗಣೇಶ ಹಬ್ಬ ಆಚರಣೆ

    ಬೆಂಗಳೂರು: ನಾಡಿನ ಕೆಲವೆಡೆ ಇಂದಿನಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಅಂತೆಯೇ ಪ್ರತಿವರ್ಷದಂತೆ ಈ ಬಾರಿಯೂ ಪಬ್ಲಿಕ್ ಟಿವಿ (Public TV Office) ಕಚೇರಿಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ.

    ಇಂದಿನಿಂದ ಮೂರು ದಿನಗಳ ಕಾಲ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇಂದು ಬೆಳಗ್ಗೆ ಪೂಜಾ- ಕೈಂಕರ್ಯಗಳೊಂದಿಗೆ ಗೌರಿ- ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದನ್ನೂ ಓದಿ: ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ (HR Ranganath), ಸಿಇಓ ಅರುಣ್ ಕುಮಾರ್, ಮುಖ್ಯ ಸಂಪಾದಕರಾದ ದಿವಾಕರ್‌.ಸಿ ಹಾಗೂ ಕಚೇರಿಯ ಸಿಬ್ಬಂದಿ ಹಾಜರಿದ್ದರು.

    ಪೂಜೆಯ ಬಳಿಕ ಕಚೇರಿಯ ಸಿಬ್ಬಂದಿಗೆ ಪ್ರಸಾದ ವಿತರಣೆ ಮಾಡಲಾಯಿತು.  ಇದನ್ನೂ ಓದಿ: ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

    ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

    ಇಡೀ ಭಾರತ ದೇಶವೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಅಂದರೆ ಗಣೇಶ ಚತುರ್ಥಿ. ಹಬ್ಬಗಳು ಬಂದರೆ ಸಾಕು ಸಿಹಿ ತಿನಿಸುಗಳನ್ನು ಮಾಡಬೇಕು. ಅದರಲ್ಲೂ ಗಣೇಶ ಹಬ್ಬವೆಂದರೆ ಮುಂಚಿತವಾಗಿ ಗಣಪನಿಗೆ ಇಷ್ಟವಾಗುವ ತಿಂಡಿ-ತಿನಿಸುಗಳನ್ನು ಮಾಡಿ ಸಿದ್ಧ ಮಾಡಿಕೊಳ್ಳಬೇಕು. ಗಣೇಶನಿಗೆ ವಿಶೇಷವಾಗಿ ಸಿಹಿ ಕಡುಬು ಎಂದರೆ ಇಷ್ಟವಾಗುತ್ತದೆ. ಆದ್ದರಿಂದ ಗಣಪನಿಗೆ ಸಿಹಿ ಕಡುಬು ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಅಕ್ಕಿ ಹಿಟ್ಟು – ಅರ್ಧ ಕೆಜಿ
    2. ಬೆಲ್ಲ – 1 ಅಚ್ಚು
    3. ಹುರಿಗಡಲೆ – 1/4 ಕೆಜಿ
    4. ಕೊಬ್ಬರಿ ತುರಿ – 1 ಬಟ್ಟಲು
    5. ಏಲಕ್ಕಿ – 2-3
    6. ತುಪ್ಪ – 2 ಚಮಚ
    7. ಬಾಳೆ ಎಲೆ ಇದನ್ನೂ ಓದಿ: ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಮಾಡುವ ವಿಧಾನ
    * ಬೆಲ್ಲವನ್ನು ತುರಿದುಕೊಳ್ಳಿ. ಹಾಗೆಯೇ ಹುರಿಗಡಲೆಯನ್ನು ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಪುಡಿ ಮಾಡಿದ ಹುರಿಗಡಲೆ, ತುರಿದ ಬೆಲ್ಲ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಊರ್ಣ ತಯಾರಿಸಿಕೊಳ್ಳಿ. (ಸಿಹಿ ಜಾಸ್ತಿ ಬೇಕಾದ್ರೆ ಬೆಲ್ಲ ಸೇರಿಸಿ, ಬೇಕಿದ್ದರೆ ಗೋಡಂಬಿ, ದ್ರಾಕ್ಷಿ. ಬಾದಾಮಿಯನ್ನು ಸಣ್ಣಗೆ ಕಟ್ ಮಾಡಿ ಸೇರಿಸಬಹುದು. ಗಸಗಸೆ ಕೂಡ ಸೇರಿಸಬಹುದು)
    * ಒಂದು ಅಗಲವಾದ ತಳಹತ್ತದ ಅಥವಾ ನಾನ್ ಸ್ಟಿಕ್ ಪಾತ್ರೆಗೆ ಒಂದು ಲೋಟ ನೀರು ಹಾಕಿ ಕುದಿಸಿ.
    * ನೀರು ಕುದಿಯುತ್ತಿರುವಾಗ ನಿಧಾನವಾಗಿ ಅಕ್ಕಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿ ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಿ.
    * ಕೈ ಬಿಡದೇ ಹಿಟ್ಟಿನ ಕೋಲನ್ನು ಬಳಸಿ ತಿರುಗಿಸುತ್ತೀರಿ. ಈಗ 2 ಚಮಚ ತುಪ್ಪ ಸೇರಿಸಿ.
    * ಹಿಟ್ಟು ತೀರ ತೆಳ್ಳಗೂ ಅಲ್ಲದೆ, ತೀರ ಗಟ್ಟಿಯಾಗಿಯೂ ಇರಬಾರದು.

    * ಈಗ ಲಾಡು ಸೈಜ್‍ನ ಅಕ್ಕಿ ಹಿಟ್ಟಿನ ಮುದ್ದೆ ತೆಗೆದುಕೊಂಡು ಕೈಯಲ್ಲೇ ಅಗಲ ಮಾಡಿ ಒಳಗೆ ಊರ್ಣ ಇಟ್ಟು ಕಡುಬು ಶೇಪ್‍ನಲ್ಲಿ ಮಡಿಚಿ.
    * ಹಿಟ್ಟು ಬಿಸಿ ಇರುವಾಗಲೇ ಮಾಡಬೇಕು, ಆಮೇಲೆ ಮಾಡಿದರೆ ಹಿಟ್ಟು ಒಡೆಯುತ್ತದೆ. ಬಿಸಿ ಆರಿದ್ರೆ ಬೇಕಾದಲ್ಲಿ ಮತ್ತೆ ಒಲೆಯ ಮೇಲಿಟ್ಟು ಬಿಸಿ ಮಾಡಿಕೊಳ್ಳಬಹುದು.
    * ಹೀಗೆ ಮಾಡಿಟ್ಟುಕೊಂಡ ಕಡುಬುಗಳನ್ನು ಬಾಳೆಎಲೆಯಲ್ಲಿ ಅಥವಾ ಅರಿಶಿನ ಎಲೆಯ ಒಳಗಿಟ್ಟು ಇಡ್ಲಿ ಕುಕ್ಕರ್ ನಲ್ಲಿಟ್ಟು 10-12 ನಿಮಿಷ ಬೇಯಿಸಿ.
    * ಬಿಸಿಬಿಸಿ ಇರುವಾಗಲೇ ಸರ್ವ್ ಮಾಡಿ. ಕಾಯಿ ಹಾಲು, ತುಪ್ಪ ಸೇರಿಸಿ ತಿಂದರೆ ಟೇಸ್ಟೇ ಬೇರೆಯಾಗಿರುತ್ತದೆ. ಇದನ್ನೂ ಓದಿ: ಒಂದು ಬೈಟ್ ಸಾಕಾಗಲ್ಲ – ಮತ್ತೆ ಮತ್ತೆ ಬೇಕೆನಿಸೋ ಕ್ಯಾರಮೆಲ್ ಮಿಠಾಯಿ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೋಟು, ನಾಣ್ಯ ಮಧ್ಯೆ ಗಣಪನ ಪ್ರತಿಷ್ಠಾಪನೆ- ಕೋಟಿ ಕೋಟಿ ರೂಪಾಯಿಗಳಲ್ಲಿ ದೇಗುಲ ಸಿಂಗಾರ

    ನೋಟು, ನಾಣ್ಯ ಮಧ್ಯೆ ಗಣಪನ ಪ್ರತಿಷ್ಠಾಪನೆ- ಕೋಟಿ ಕೋಟಿ ರೂಪಾಯಿಗಳಲ್ಲಿ ದೇಗುಲ ಸಿಂಗಾರ

    ಬೆಂಗಳೂರು: ಗಣೇಶ ಚತುರ್ಥಿಗೆ (Ganesh Chaturthi) ಎಲ್ಲ ಕಡೆ ವಿಭಿನ್ನವಾಗಿ ವಿಶೇಷವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾರೆ. ಅನೇಕ ವರ್ಷಗಳಿಂದ ಗಣೇಶನನ್ನ ಹೀಗೂ ಕೂರಿಸಬಹುದಾ ಅಂತಾ ಅಚ್ಚರಿ ಪಡುವಂತೆ ವಿನಾಯಕನನ್ನ ಕೂರಿಸಿ ಹಬ್ಬ ಮಾಡುತ್ತಾ ಬಂದಿರೋ ಜೆಪಿ ನಗರದ ಬಳಿ ಇರೋ ಪುಟ್ಟೇನಹಳ್ಳಿಯ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನವರು ಈ ಬಾರಿ ಅತ್ಯಂತ ವಿಭಿನ್ನವಾದ ಅಲಂಕಾರವನ್ನ ಮಾಡಿದ್ದಾರೆ.

    ಹೌದು, ಗಣೇಶ ಹಬ್ಬದ ಪ್ರಯುಕ್ತ 52.5 ಲಕ್ಷ ರೂ. ಮೊತ್ತದ ನಾಣ್ಯ, ಕೋಟ್ಯಂತರ ರೂ ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದೆ. ಇಡೀ ದೇವಾಲಯದ ಆವರಣವನ್ನ 5,10,20 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು 10, 20, 50, 100, 200, 500 ರೂಪಾಯಿ ನೋಟ್‍ಗಳನ್ನ ಬಳಸಿಕೊಂಡು ಹೂವಿನಂತೆ ಮಾಲೆಗಳನ್ನ ಮಾಡಿ ಅಲಂಕಾರ ಮಾಡಿದ್ದಾರೆ. ಇದನ್ನೂ ಓದಿ: ವಿಘ್ನ ನಿವಾರಕ ಗಣೇಶ ಹಬ್ಬದ ಮಹತ್ವವೇನು?

    ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳ ಮೂಲಕ ಅಲಂಕಾರ ಮಾಡಿದ್ದು, ಇದಕ್ಕಾಗಿ 150 ಜನ ಒಂದು ತಿಂಗಳಿಂದ ಶ್ರಮಿಸಿದೆ. ಯಾವುದೇ ಸಮಸ್ಯೆಗಳು ಆಗದಂತೆ 25 ಜನ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಆಳವಡಿಸಿದ್ದಾರೆ. ಭಕ್ತಿರಿಗೆ ದೇವರ ದರ್ಶನಕ್ಕೆ ಬ್ಯಾರಿಕೇಟ್ ಹಾಕಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನಾಣ್ಯಗಳಿಂದಲೇ ಗಣೇಶನ ಫೋಟೋಗಳು, ಭಾರತದ ನಕ್ಷೆ, ಕರ್ನಾಟಕದ ನಕ್ಷೆ, ಚಂದ್ರಯಾನದ ಚಿತ್ರ ಸೇರಿದಂತೆ ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನ ಮಾಡಿದ್ದಾರೆ. ಈ ಅಲಂಕಾರ ನೋಡಿದ ಭಕ್ತರು ಸಹ ತುಂಬಾ ಸಂತೋಷಗೊಂಡಿದ್ದಾರೆ.

    ಒಟ್ಟಿನಲ್ಲಿ ನೋಟು ಹಾಗೂ ಕಾಯಿನ್ಸ್‍ಗಳಿಂದ ಅಲಂಕಾರವಾಗಿರೋ ದೇವಾಲದಲ್ಲಿ ಗಣೇಶನ ದರ್ಶನ ಪಡೆಯೋ ಫೀಲೇ ಬೇರೆ. ಇನ್ನೂ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಭಕ್ತರು, ದೇವಾಲಯದ ಟ್ರೆಸ್ಟಿಗಳು, ಮತ್ತು ಸಿನಿ ನಾಯಕರು ದಾನವಾಗಿ ನೀಡಿದ್ದಾರೆ. ಭಕ್ತರ ಡಿಮ್ಯಾಂಡ್ ಇರೋವರೆಗೆ ಈ ಅಲಂಕಾರವನ್ನ ಉಳಿಸಿಕೊಳ್ಳೋ ಯೋಜನೆಯನ್ನ ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಬ್ಬಕ್ಕೆ ಊರಿಗೆ ಹೊರಟ ಜನ- ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್

    ಹಬ್ಬಕ್ಕೆ ಊರಿಗೆ ಹೊರಟ ಜನ- ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್

    ಬೆಂಗಳೂರು: ಸೋಮವಾರ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜನ ತಮ್ಮೂರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರಿಂದ ಮೆಜೆಸ್ಟಿಕ್ ನ KSRTC ಬಸ್ ನಿಲ್ದಾಣ ತುಂಬಿ ತುಳುಕ್ತಿದ್ದು, ಹೆಚ್ಚುವರಿಯಾಗಿ 12,00 ಬಸ್ ಗಳನ್ನ ಬಿಡಲಾಗಿದೆ. ಬಿಎಂಟಿಸಿ ಬಸ್ ಗಳು ಕೂಡ ಜಿಲ್ಲೆಗಳಿಗೆ ಸಂಚಾರ ಮಾಡ್ತಿವೆ.

    ಹಬ್ಬದ ಸಲುವಾಗಿ ಊರಿಗೆ ಹೋಗಲಿರುವ ಹಲವಾರು ಮಂದಿ ಇಂದೇ ಹೊರಟಿರುವುದರಿಂದ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದ ಸುತ್ತಮುತ್ತ ಜನರಿಂದ ತುಂಬಿ ತುಳುಕಿದೆ. ಮಾತ್ರವಲ್ಲದೆ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರೂ ಪರದಾಡುವಂತಾಗಿದೆ. ಕಾರ್ಪೋರೇಷನ್, ಮೆಜೆಸ್ಟಿಕ್,ಮೈಸೂರು ಬ್ಯಾಂಕ್ ಸರ್ಕಲ್ , ನವರಂಗ್ ಸೇರಿದಂತೆ ವಿವಿಧ ರಸ್ತೆಗಳು ಸಂಪೂರ್ಣ ಜಾಮ್ ಆಗಿವೆ.

    ವಾರಾಂತ್ಯದ ರಜೆ ಜೊತೆಗೆ ಹಬ್ಬದ ರಜೆಯೂ ಸೇರಿ ಮೂರ್ನಾಲ್ಕು ದಿನಗಳ ಸರಣಿ ರಜೆ ಸಿಗುವುದರಿಂದ ಹಲವರು ಇಂದೇ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಸುತ್ತಮುತ್ತಲಿನ ರಸ್ತೆಗಳು ಬಹುತೇಕ ಜಾಮ್‌ ಆಗಿವೆ. ಜನಸಂಚಾರ ಜಾಸ್ತಿ ಇರುವುದರಿಂದ ಊರಿಗೆ ಹೊರಟ ಬಸ್ ಹಾಗೂ ಇತರ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಟೌನ್​ಹಾಲ್​ನಿಂದ ಮೆಜೆಸ್ಟಿಕ್​ವರೆಗೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿತ್ತು.

    ಟ್ರಾಫಿಕ್ ಜಾಮ್​ ಕೂಡ ಜಾಸ್ತಿ ಇದ್ದಿದ್ದರಿಂದ 2-3 ಕಿ.ಮೀ. ದೂರ ವಾಹನದಟ್ಟಣೆ ಉಂಟಾಗಿ, ನಿಧಾನಗತಿಯ ಚಲನೆ ಕಂಡುಬಂದಿದೆ. ಪರಿಣಾಮವಾಗಿ ಕೆಲವರು ನಡೆದೇ ಬಸ್​ ನಿಲ್ದಾಣ ತಲುಪುವಂತಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈಕೋರ್ಟ್ ವರ ಕೊಟ್ರೂ ಆಯುಕ್ತರು ಬಿಡ್ತಿಲ್ಲ- ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶ ಹಬ್ಬಕ್ಕೆ ಸಿಗದ ಅನುಮತಿ

    ಹೈಕೋರ್ಟ್ ವರ ಕೊಟ್ರೂ ಆಯುಕ್ತರು ಬಿಡ್ತಿಲ್ಲ- ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶ ಹಬ್ಬಕ್ಕೆ ಸಿಗದ ಅನುಮತಿ

    – ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

    ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ (Hubballi Idgah Maidan )ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ (High Court) ಗ್ರೀನ್ ಸಿಗ್ನಲ್ ನೀಡದರೂ ಪಾಲಿಕೆ ಆಯುಕ್ತರು ಬಿಡುತ್ತಿಲ್ಲ.

    ಈದ್ಗಾದಲ್ಲಿ ಗಣೇಶೋತ್ಸವ ಸಂಬಂಧ ಪಾಲಿಕೆ ಹೊರಡಿಸಿದ್ದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ವಜಾ ಮಾಡಿದೆ. ಈ ಮೂಲಕ ಪಾಲಿಕೆ ಹೊರಡಿಸಿದ್ದ ಠರಾವು ಪ್ರಕಾರ ಮೂರು ದಿನ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಇದ್ದ ಅಡೆತಡೆ ನಿವಾರಣೆಯಾಯ್ತು ಎಂದು ಎಲ್ಲರೂ ಭಾವಿಸಿದ್ರು. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಾಚರಣೆ ಕೂಡ ಮಾಡಿದ್ರು.

    ದಲಿತ ಸಂಘಟನೆಗಳು ಮಾತ್ರ ಈದ್ಗಾದಲ್ಲಿ ಗಣೇಶನನ್ನು ಕೂರಿಸಲು ಅವಕಾಶ ನೀಡಬಾರದು ಎಂದು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು. ಆದರೆ ಇದಕ್ಕೆ ಮಣೆ ಹಾಕಲ್ಲ ಅಂತಾ ಮೇಯರ್ ಹೇಳಿದ್ರು. ಇಷ್ಟೆಲ್ಲಾ ಆದ್ಮೇಲೂ ಪಾಲಿಕೆ ಆಯುಕ್ತರ ತಕರಾರು ಮುಂದುವರಿದಿದೆ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಆಯುಕ್ತರು ಇನ್ನೂ ಮೀನಾಮೇಷ ಎಣಿಸ್ತಿದ್ದಾರೆ. ನನಗೆ ಇನ್ನೂ ಕೋರ್ಟ್ ಪ್ರತಿ ಸಿಕ್ಕಿಲ್ಲ ಎಂಬ ಸಬೂಬು ಹೇಳ್ತಿದ್ದಾರೆ. ಇದರಿಂದ ಕೇಸರಿ ಪಡೆ ಮತ್ತೆ ಕೆರಳಿದೆ.

    ಹುಬ್ಬಳ್ಳಿ-ಗದಗ ಮುಖ್ಯರಸ್ತೆ ತಡೆದು, ಕಾಂಗ್ರೆಸ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಿಂದ ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಆಹೋರಾತ್ರಿ ಧರಣಿ ನಡೆಸಿತ್ತು. ಇದಕ್ಕೆ ಶ್ರೀರಾಮಸೇನೆ ಸೇರಿ ಹಲವು ಸಂಘಟನೆಗಳು ಸಾಥ್ ನೀಡಿದ್ದವು. ಗಣೇಶೋತ್ಸವ ಬೇಡ ಅನ್ನೋರು ಪಾಕಿಸ್ತಾನಕ್ಕೆ ಹೋಗಲಿ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ ಹಬ್ಬಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ- ಡಿಸಿ, ಸಿಇಓಗಳಿಗೆ ಸಿಎಂ ಸೂಚನೆ

    ಗಣೇಶ ಹಬ್ಬಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ- ಡಿಸಿ, ಸಿಇಓಗಳಿಗೆ ಸಿಎಂ ಸೂಚನೆ

    ಬೆಂಗಳೂರು: ಗಣೇಶ ಹಬ್ಬಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳಿಗೆ ಸೂಚನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ (Vidhanasoudha) ನಡೆದ ಡಿಸಿ, ಸಿಇಓಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಹೈಅಲರ್ಟ್ ಇರುವಂತೆ ಸಂದೇಶ ಕೊಟ್ಟರು. ಗಣೇಶ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಪರಿಸರ ಹಾನಿಯಾಗದಂತೆ ಹಬ್ಬ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಕೋಮುಶಕ್ತಿಗಳು ಕಾನೂನು ಸುವ್ಯವಸ್ಥೆ ಹಾಳು ಮಾಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವ ಧರ್ಮದವರಿಗೂ ತೊಂದರೆಯಾಗಬಾರದು ಅಂತ ಡಿಸಿ, ಸಿಇಓಗಳಿಗೆ ಸೂಚನೆ ಕೊಟ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಿಓಪಿ, ಬಣ್ಣದ ಮೂರ್ತಿ ತಯಾರಿಕೆ, ದಾಸ್ತಾನು ಮಾರಾಟ ಮಾಡದಂತೆ ಈಶ್ವರ್ ಖಂಡ್ರೆ ಮನವಿ

    ಪಿಓಪಿ, ಬಣ್ಣದ ಮೂರ್ತಿ ತಯಾರಿಕೆ, ದಾಸ್ತಾನು ಮಾರಾಟ ಮಾಡದಂತೆ ಈಶ್ವರ್ ಖಂಡ್ರೆ ಮನವಿ

    – ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂಜಿಸಲು ಕರೆ

    ಬೆಂಗಳೂರು: ನೀರಿನಲ್ಲಿ ಸರಿಯಾಗಿ ಕರಗದ ಮತ್ತು ಬಾವಿ, ಕೆರೆ, ಕುಂಟೆ, ಸರೋವರ, ನದಿ ನೀರನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ, ಪಿಓಪಿ ಗಣಪತಿ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡದಂತೆ ಜನಜಾಗೃತಿ ಮೂಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.

    ಕಲುಷಿತ ನೀರು ಸೇವನೆಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಜೀವಹಾನಿಯೂ ಆಗಿದ್ದು, ಅಮೂಲ್ಯವಾದ ಜನ, ಜಾನುವಾರುಗಳ ಜೀವ ಉಳಿಸಲು ಮತ್ತು ಆರೋಗ್ಯ ರಕ್ಷಿಸಲು ಪಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.)ನಿಂದ ತಯಾರಿಸಿದ ಹಾಗೂ ಲೋಹಯುಕ್ತ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.

    ಹಬ್ಬಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಈಗಿನಿಂದಲೇ ಪಿಓಪಿ ಗೌರಿ, ಗಣಪತಿ ಮೂರ್ತಿಗಳನ್ನು ತಯಾರಿಸದಂತೆ, ಬೇರೆ ರಾಜ್ಯದಿಂದ ಮಾರುಕಟ್ಟೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಈ ಬಾರಿ ಸೆಪ್ಟೆಂಬರ್ 18ರಂದು ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ನಮ್ಮ ಭಕ್ತಿ, ಭಾವ, ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣಪತಿ ತಂದು ಪೂಜಿಸಿ ಹಬ್ಬ ಆಚರಿಸೋಣ. ಆದರೆ ನಮ್ಮ ಆಚರಣೆಯಿಂದ ಜಲ, ನೆಲ, ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ ಎಂದು ಈಶ್ವರ್ ಖಂಡ್ರೆ ರಾಜ್ಯದ ಜನತೆಯಲ್ಲಿ ಮುಂಚಿತವಾಗಿಯೇ ಮನವಿ ಮಾಡಿದ್ದಾರೆ.

    ಸಂಪ್ರದಾಯ: ಗೌರಿ ಮತ್ತು ಗಣೇಶನ ಹಬ್ಬದ ವೇಳೆ ಮಾವಿನ ತೋರಣ ಕಟ್ಟಿ, ತೆಂಗಿನ ಗರಿಯಿಂದ ಮಂಟಪ ಮಾಡಿ, ಬಾಳೆ ಕಂದು ಕಟ್ಟಿ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನು ತಂದು, ಹೂ, ಪತ್ರೆಗಳಿಂದ ಪೂಜಿಸಿ, ನೀರಿನಲ್ಲಿ ವಿಸರ್ಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.

    ನಮ್ಮ ಪೂರ್ವಿಕರು ಕೆರೆಯಲ್ಲೇ ಸಿಗುವ ಜೇಡಿಮಣ್ಣಿನಲ್ಲಿ ಗೌರಿ, ಗಣಪತಿ ವಿಗ್ರಹ ಮಾಡಿ ಅದಕ್ಕೆ ನೈಸರ್ಗಿಕ ಬಣ್ಣ ಲೇಪಿಸಿ, ಪೂಜಿಸಿ, ನೀರಲ್ಲಿ ವಿಸರ್ಜಿಸುತ್ತಿದ್ದರು. ಆ ವಿಗ್ರಹಗಳು 2-3 ದಿನದಲ್ಲಿ ಕರಗುತ್ತಿದ್ದವು. ಆದರೆ ಕಳೆದ ಕೆಲವು ದಶಕದಿಂದ ಪಿ.ಓ.ಪಿ. ಗಣಪತಿ ವಿಗ್ರಹ ಮಾಡುತ್ತಿದ್ದು, ಇದಕ್ಕೆ ರಾಸಾಯನಿಕ ಬಣ್ಣ ಲೇಪಿಸುತ್ತಾರೆ. ಈ ಬಣ್ಣಗಳಿಂದಾಗಿ ಜಲಚರಗಳು ಸಾವಿಗೀಡಾಗುತ್ತಿದ್ದು, ಈ ವಿಗ್ರಹಗಳು ನೀರಲ್ಲಿ ಕರಗುವುದೂ ಇಲ್ಲ. ಜಲ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

    ಗಣಪತಿಯ ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಅಲಂಕಾರಿಕ ವಸ್ತು ಬಳಸದೆ ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಗೆಜ್ಜೆ, ವಸ್ತ್ರ ಬಳಸುವಂತೆ ಮತ್ತು ಪರಿಸರ ಉಳಿಸುವಂತೆ ಅವರು ಮನವಿ ಮಾಡಿದ್ದಾರೆ.

    ಕರಗದ ವಿಗ್ರಹ: ನಾವು ಭಕ್ತಿಯಿಂದ ಪೂಜಿಸುವ ಗೌರಿ, ಗಣಪತಿಯ ಪಿ.ಓ.ಪಿ ವಿಗ್ರಹಗಳು ನೀರಲ್ಲಿ ಹತ್ತಾರು ದಿನ ಕಳೆದರೂ ಕರಗುವುದಿಲ್ಲ. ಅವುಗಳು ಕೆರೆ, ಕಟ್ಟೆಗಳ ಬಳಿ ಅರ್ಧ ಕರಗಿ, ಮುರಿದು ಬಿದ್ದಿರುವ ಸ್ಥಿತಿ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ತಿಳಿಸಿರುವ ಅವರು ವಿಸರ್ಜನೆಯಾದ ಪಿಓಪಿ ಗಣಪತಿ ಮೂರ್ತಿಗಳ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ

    ಗಣೇಶ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ

    ಹುಬ್ಬಳ್ಳಿ: ಹಿಂದೂ ಕಾರ್ಯಕರ್ತರ (Hindu Activists) ರಕ್ಷಣೆ ವಿಚಾರದಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರದ (BJP State Government) ವಿರುದ್ಧ ಹಿಂದೂ ಯುವಕರ (Hindhu Youth) ಆಕ್ರೋಶ ಮುಂದುವರಿದಿದೆ. ಇದಕ್ಕೆ ಗಣೇಶ ವಿಸರ್ಜನೆ ಮೆರಣಿಗೆಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

    ಗಣೇಶಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹಿಂದೂ ಯುವಕರು ಘೋಷಣೆ ಕೂಗಿರುವ ವಿಡಿಯೋ (Video) ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆಗೆ ಕಸಾಪ ಮುಂದಾಗಿಲ್ಲ: ಮಹೇಶ್‌ ಜೋಶಿ ಸ್ಪಷ್ಟನೆ

    ಹುಬ್ಬಳ್ಳಿಯಲ್ಲಿ ನಡೆದ 11 ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಯುವಕರು ಘೋಷಣೆ ಕೂಗಿರುವ ವೀಡಿಯೋ ವೈರಲ್ ಆಗಿದ್ದು, `ಬಿಜೆಪಿ 40 ಪರ್ಸೆಂಟ್ ಕಮಿಷನ್ ಸರ್ಕಾರ, ಗಲ್ಲಿಗಲ್ಲಿ ಮೇ ಚೋರ್ ಹೈ, ಬಿಜೆಪಿ ಚೋರ್ ಹೈ’ ಎಂಬ ಘೋಷಣೆಯನ್ನು ನೂರಾರು ಯುವಕರು ಮೆರವಣಿಗೆಯಲ್ಲಿ ಕೂಗಿದ್ದಾರೆ. ಇದನ್ನೂ ಓದಿ: ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

    ಈಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವಾರು ಜನ ವಿಡಿಯೋ ಎಲ್ಲೆಡೆ ಶೆರ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

    ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

    ಹೈದರಾಬಾದ್: ಗಣೇಶ ಹಬ್ಬ (Ganesha Festival) ಮುಗಿದ ಬಳಿಕವೂ ಶ್ರೀಗಣಪತಿ ದೇವಸ್ಥಾನಗಳಲ್ಲಿ (Laksmi Ganapathy) ಪ್ರಸಾದಕ್ಕೆ (Prasad) ಭಾರೀ ಬೇಡಿಕೆ ಶುರುವಾಗಿದೆ. ನೆಚ್ಚಿನ ವಿಘ್ನೇಶ್ವರನಿಗಾಗಿ ಸಿದ್ಧಪಡಿಸಿದ ನೈವೇದ್ಯ ಪ್ರಸಾದ ದಾಖಲೆಯ ಹರಾಜಿಗೆ ಮಾರಾಟವಾಗುತ್ತಿವೆ. ಹಾಗೆಯೇ ಇಲ್ಲಿನ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾಸನ್ ಸಿಟಿಯಲ್ಲಿ 10 ರಿಂದ 12 ಕೆಜಿ ತೂಕದ ಲಡ್ಡು (Ladoo) ಬರೋಬ್ಬರಿ 60.8 ಲಕ್ಷ ರೂ.ಗೆ ಹರಾಜಾಗಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಳಾಪುರದ ಗಣೇಶ ದೇವಸ್ಥಾನದಲ್ಲಿ 24.60 ಲಕ್ಷಕ್ಕೆ ಲಡ್ಡು ಹರಾಜಾಗಿತ್ತು. ನಿನ್ನೆಯೂ ಸಹ ಇದೇ ಶ್ರೀಲಕ್ಷ್ಮೀ ಗಣಪತಿ (Laksmi Ganapathy) ದೇವಸ್ಥಾನದಲ್ಲಿ (Temple) 12 ಕೆಜಿ ಲಡ್ಡು 45 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಇಂದು ಅಷ್ಟೇ ತೂಕದ ಲಡ್ಡು ಬರೋಬ್ಬರಿ 60.8 ಲಕ್ಷಕ್ಕೆ ಹರಾಜಾಗಿ ದಾಖಲೆ ನಿರ್ಮಿಸಿದೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಗೆದ್ದರೆ ಮನೆ ಬಾಗಿಲಿಗೇ RTO ಸೇವೆ – ಕೇಜ್ರಿವಾಲ್

    ಹಿಂದೂ, ಮುಸ್ಲಿಂ, ಕ್ರೈಸ್ತರು ಹಾಗೂ ಸಿಖ್ಖರು ಸೇರಿದಂತೆ ಸುಮಾರು 100 ಮಂದಿ ಒಟ್ಟಾಗಿ ಸೇರಿ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಪ್ರಸಾದವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.

    ಗಣೇಶನಿಗೆ ಮಾಡಿದ ಲಡ್ಡೂಗಳನ್ನು ಪ್ರಸಾದವಾಗಿ ಹರಾಜು ಹಾಕುವುದು ಇಲ್ಲಿನ ಸಂಪ್ರದಾಯವಾಗಿದೆ. ಅಲ್ಲದೇ ಲಡ್ಡು ಪಡೆದವರು ದೇವರ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ ಎಂದು ನಂಬಲಾಗಿದೆ. ಲಡ್ಡು ಅವರಿಗೆ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನೂ ಶ್ರೀಗಣೇಶ ಕರುಣಿಸುತ್ತಾರೆ ಎಂದು ಜನರ ನಂಬಿಕೆಯಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

    ಹರಾಜಿನಿಂದ ಬಂದ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]