Tag: ಗಣೇಶ ಹಬ್ಬ

  • Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

    Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

    ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭ ಪ್ರಾರಂಭಿಸುವ ಮೊದಲು ಯಾವುದೇ ಅಡಚಣೆ ಅಥವಾ ತೊಂದರೆ ಆಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಗಣೇಶನಿಗೆ ಹಲವು ನಾಮ. ಗಜಾನನ, ಗಣಪತಿ, ವಕ್ರತುಂಡ, ವಿನಾಯಕ, ಏಕದಂತ, ಗಣೇಶ ಹೀಗೆ ಹತ್ತು ಹಲವು ಹೆಸರುಗಳಿಂದ ಗಣಪತಿಯನ್ನು ಆರಾಧಿಸಲಾಗುತ್ತದೆ. ಅವುಗಳಲ್ಲಿ ಏಕದಂತ ಎನ್ನುವ ಹೆಸರೂ ಒಂದು. ಗಣೇಶನ ಒಂದು ದಂತ ಮುರಿದಿರುವ ಕಾರಣ ಆತನನ್ನು ಏಕದಂತ ಎಂದು ಕರೆಯಲಾಗುತ್ತದೆ. ಗಣೇಶ ಏಕದಂತನಾಗಲು ಕಾರಣವೇನು? ಪುರಾಣದ ಕಥೆ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

    ಪರಶುರಾಮ ಮತ್ತು ಗಣೇಶನ ನಡುವೆ ಯುದ್ಧ:
    ಒಮ್ಮೆ ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ್‌ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು. ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.

    ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ. ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವನ್ನು ನಾನು ಶೀಘ್ರವಾಗಿ ಭೇಟಿ ಆಗಲೇಬೇಕು ಎಂದು ಪರಶುರಾಮರು ಗಣೇಶನಿಗೆ ತಿಳಿಸಿದರು. ಆದರೆ ಗಣೇಶ ಅವರನ್ನು ಒಳಗೆ ಬಿಡುವುದಿಲ್ಲ.

    ಇದರಿಂದ ಕೋಪಗೊಂಡ ಪರಶುರಾಮರು ನನ್ನನ್ನು ಒಳಗೆ ಬಿಡದಿದ್ದರೆ ನನ್ನೊಂದಿಗೆ ಯುದ್ಧ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ನಾನು ಗೆದ್ದರೆ ಶಿವನನ್ನು ಭೇಟಿಯಾಗಲು ನನ್ನನ್ನು ಒಳಗೆ ಬಿಡಬೇಕು ಎಂದು ಪರಶುರಾಮರು ಗಣೇಶನಿಗೆ ಸವಾಲೆಸೆದರು. ಗಣೇಶನು ಯುದ್ಧದ ಸವಾಲನ್ನು ಸ್ವೀಕರಿಸಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಯುದ್ಧದ ಸಮಯದಲ್ಲಿ, ಪರಶುರಾಮರು ತಮ್ಮ ಕೊಡಲಿಯಿಂದ ಗಣೇಶನ ಮೇಲೆ ದಾಳಿ ಮಾಡಿದರು. ಇದನ್ನು ಎದುರಿಸಲು ಗಣೇಶ ತನ್ನ ಎಡಗಡೆಯ ದಂತವನ್ನು ಬಳಸಿದರು. ಇದರ ಪರಿಣಾಮವಾಗಿ ಗಣೇಶನ ದಂತ ಮುರಿಯುತ್ತದೆ. ಗಣೇಶನ ಒಂದು ಹಲ್ಲು ಮುರಿದ ಕಾರಣ ಆತನನ್ನು ಏಕದಂತ ಎಂದು ಕರೆಯುತ್ತಾರೆ.

    ಗಣೇಶನಷ್ಟೇ ಪರಶುರಾಮರು ಯುದ್ಧದಲ್ಲಿ ನಿಪುಣರಾಗಿರದ್ದರು. ಇವರಿಬ್ಬರ ನಡುವಿನ ಯುದ್ಧ ಎನ್ನುವಂತಹದ್ದು ಭಯಾನಕವಾಗಿದ್ದು, ಈ ಯುದ್ಧದಲ್ಲಿ ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ಗಣೇಶನು ಒಂದೇ ದಂತವನ್ನು ಹೊಂದಿದ್ದು, ಏಕದಂತ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತಾನೆ.

    ಮಹಾಭಾರತದ ಕಥೆ:
    ಮತ್ತೊಂದು ಕಥೆಯ ಪ್ರಕಾರ, ಮಹಾಭಾರತವನ್ನು ಗಣೇಶ ಮಹಾಭಾರತವನ್ನ ಬರೆಯುವ ಸಮಯದಲ್ಲಿ, ಮಹರ್ಷಿ ವೇದವ್ಯಾಸರು ಗಣೇಶ ನಾನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗಬೇಕು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿರುತ್ತಾರೆ. ಇದಕ್ಕೆ ಒಪ್ಪಿ ಗಣೇಶ ಬರೆಯುತ್ತಿರುತ್ತಾನೆ. ಆದರೆ ಬರೆಯುವಾಗ ಯಾವುದೋ ಸಮಸ್ಯೆ ಎದುರಾಗುತ್ತದೆ. ತಕ್ಷಣ ಗಣೇಶ ತನ್ನ ದಂತವನ್ನು ಮುರಿದು ಅದರಲ್ಲಿ ಬರೆಯಲು ಆರಂಭಿಸಿದ ಎನ್ನುವ ನಂಬಿಕೆ ಇದೆ.

  • ಗೌರಿ-ಗಣೇಶ ಹಬ್ಬಕ್ಕೆ ಕರೆಯಲು ತವರಿನವರಿಲ್ಲವೆಂದು ಮನನೊಂದು ಗೃಹಿಣಿ ಸೂಸೈಡ್

    ಗೌರಿ-ಗಣೇಶ ಹಬ್ಬಕ್ಕೆ ಕರೆಯಲು ತವರಿನವರಿಲ್ಲವೆಂದು ಮನನೊಂದು ಗೃಹಿಣಿ ಸೂಸೈಡ್

    ಚಾಮರಾಜನಗರ: ಗೌರಿ-ಗಣೇಶ ಹಬ್ಬಕ್ಕೆ (Ganesh Chaturthi) ತವರು ಮನೆಗೆ ಕರೆಯಲು ಯಾರು ಇಲ್ಲವೆಂದು ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ (Kollegala) ತಾಲೂಕಿನ ಮಧುವನಹಳ್ಳಿ ಗ್ರಾಮದ ಆರುವನಪುರ ಬಡಾವಣೆಯಲ್ಲಿ ನಡೆದಿದೆ.

    ಆರುವನಪುರ ಬಡಾವಣೆಯ ಸಿದ್ದರಾಜು ಎನ್ನುವವರ ಪತ್ನಿ ರಶ್ಮಿ(32) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಚಿಕ್ಕಬಳ್ಳಾಪುರ: ಗೌರಿ-ಗಣೇಶ ಹಬ್ಬದಂದೇ ವಿದ್ಯುತ್ ಶಾಕ್‌ಗೆ ತಾಯಿ, ಮಲಮಗ ಸಾವು

    ರಶ್ಮಿ ಅವರ ತಂದೆ, ತಾಯಿ ಹಾಗೂ ಅಣ್ಣ ಈ ಹಿಂದೆಯೇ ಮೃತಪಟ್ಟಿದ್ದರು. ಹೀಗಾಗಿ ಈ ಬಾರಿಯ ಹಬ್ಬಕ್ಕೆ ಕರೆದು ಅರಿಶಿಣ-ಕುಂಕುಮ ನೀಡಲು ಯಾರಿಲ್ಲವೆಂದು ಮನನೊಂದಿದ್ದರು. ಹಬ್ಬದ ಹಿನ್ನೆಲೆ ಇಂದು ಪತಿ ಮನೆಯಲ್ಲಿ ಗಣೇಶನಿಗೆ ಪೂಜೆ ಮಾಡಲು ರಶ್ಮಿ ಎಲ್ಲಾ ತಯಾರಿಯನ್ನು ಸಹ ಮಾಡಿಕೊಂಡಿದ್ದರು. ಆದರೆ ತವರಿನವರಿಲ್ಲ ಎಂದು ಮನನೊಂದಿದ್ದ ರಶ್ಮಿ, ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ತವರು ಮನೆಯಲ್ಲಿ ರಾಧಿಕಾ ಪಂಡಿತ್ ಗೌರಿ-ಗಣೇಶ ಹಬ್ಬ; ಕೊಂಕಣಿ ಖಾದ್ಯದ ಲಿಸ್ಟ್ ಅಬ್ಬಬ್ಬಾ!

    ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಪತಿ ಮನೆಯವರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

  • ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

    ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ

    ರಾಜಾ-ರಾಣಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ ಐಶ್ವರ್ಯ- ವಿನಯ್ ದಂಪತಿ (Aishwarya Vinay) ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಗಣೇಶ ಹಬ್ಬದಂದು ಪುಟ್ಟ ವಿಗ್ರಹ ಹಿಡಿದುಕೊಂಡು ಚತುರ್ಥಿ ಹಬ್ಬ ಆಚರಿಸಿದ್ದಾರೆ.

    ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ವಿಶೇಷ ದಿನದಂದು ನಿಮಗೆ ಪುಟ್ಟ ರಹಸ್ಯವೊಂದನ್ನು ಹೇಳುತ್ತಿದ್ದೇವೆ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಜೊತೆ ಇರಲಿ. ದೃಷ್ಟಿ ಹಾಕಬೇಡಿ ಎಂದು ಬರೆದುಕೊಂಡಿದ್ದಾರೆ.

    ಮೂಲತಃ ಉತ್ತರ ಕರ್ನಾಟಕದವರಾದ ಇವರು ಹಲವುಗಳ ವರ್ಷಗಳ ಕಾಲ ಪ್ರೀತಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಐಶ್ವರ್ಯ ಅಗ್ನಿಸಾಕ್ಷಿ, ರಾಮಾಚಾರಿ ಸೇರಿದಂತೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನೂ ವಿನಯ್ ಕೂಡ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಇಬ್ಬರು ಒಟ್ಟಿಗೆ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

    ಇತ್ತೀಚಿಗೆ ರಾಮಾಚಾರಿ ಧಾರಾವಹಿಯಲ್ಲಿ ನಟಿಸುತ್ತಿದ್ದ ಐಶ್ವರ್ಯ ಅವರು ಕೆಲ ದಿನಗಳಿಂದ ಕಾಣಿಸುತ್ತಿರಲಿಲ್ಲ. ಸದ್ಯ ದಂಪತಿ ಗಣೇಶ ಹಬ್ಬದಂದು ಮೊದಲ ಮಗುವಿನ ಬಗ್ಗೆ ಸಿಹಿ ಹಂಚಿಕೊಂಡಿದ್ದಾರೆ.

  • ಬಸ್ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ – ಗಣೇಶ ಹಬ್ಬದಂದೇ ಅತ್ತೆ, ಅಳಿಯ ಸಾವು

    ಬಸ್ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ – ಗಣೇಶ ಹಬ್ಬದಂದೇ ಅತ್ತೆ, ಅಳಿಯ ಸಾವು

    ರಾಮನಗರ: ಚಲಿಸುತ್ತಿದ್ದ ಖಾಸಗಿ ಬಸ್‌ನ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾಗಡಿ ತಾಲೂಕಿನ ಜುಟ್ಟನಹಳ್ಳಿ ಗೇಟ್ ಬಳಿ ನಡೆದಿದೆ.

    ಮಾಗಡಿ ತಾಲೂಕಿನ ಅರಳಕುಪ್ಪೆ ಗ್ರಾಮದ ಗಂಗಮ್ಮ(58), ಶಿವಣ್ಣ(45) ಮೃತ ಬೈಕ್ ಸವಾರರು. ಗಣೇಶನ ಹಬ್ಬಕ್ಕೆ ಅತ್ತೆ ಗಂಗಮ್ಮರನ್ನ ಅಳಿಯ ಶಿವಣ್ಣ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಬರುತ್ತಿದ್ದ ಖಾಸಗಿ ಬಸ್‌ನ ಟೈಯರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಬಾರ್‌ ಬಳಿ ಯುವಕನಿಂದ ಹಲ್ಲೆ – ಒಂದೇ ಏಟಿಗೆ ಕುಸಿದು ಬಿದ್ದ ವ್ಯಕ್ತಿ

    ಸ್ಟೋಟದ ರಭಸಕ್ಕೆ ಬಸ್‌ನಿಂದ ಟೈಯರ್ ಬೇರ್ಪಟ್ಟು ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

    ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

    ಅಂತೂ ಇಂತೂ ಗಣೇಶ ಹಬ್ಬವೂ ಬಂತು. ಮಕ್ಕಳಿಗೆ, ಪುರುಷರಿಗೆ ವಿಘ್ನ ವಿನಾಯಕನಿಗೆ ಬಪ್ಪ ಮೋರೆಯಾ ಎಂದು ಜಯಘೋಷ ಕೂಗುತ್ತಾ ಆತನನ್ನು ಮೂರ್ತಿಯನ್ನು ಮನೆಗೆ ತರೋದು ಒಂದು ಖುಷಿಯಾದರೆ, ಹೆಣ್ಮಕ್ಕಳಿಗೆ ಗಣೇಶ ಹಬ್ಬದ ಮುಂದಿನ ಆಚರಿಸುವ ಗೌರಿ ಹಬ್ಬ ತುಂಬಾ ವಿಶೇಷವಾಗಿರುತ್ತದೆ.

    ಹೌದು, ಆ.27 ಗಣೇಶ ಹಬ್ಬ ಆದ್ರೆ, ಅದರ ಮುಂದಿನ ದಿನ ಅಂದ್ರೆ ಆ.26 ಮಂಗಳವಾರ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ದಾಂಪತ್ಯ ಜೀವನವು ಸದಾ ಸಂತೋಷದಿಂದ, ಸುಖ ನೆಮ್ಮದಿಯಿಂದ ಕೂಡಿರಲ್ಲಿ ಎಂದು ಮಹಿಳೆಯರು ಗೌರಿಯನ್ನು ಪೂಜಿಸುತ್ತಾರೆ.

    ಗೌರಿ ಹಬ್ಬದ ಇತಿಹಾಸವೇನು?
    ಪಾರ್ವತಿಯು ಶಿವನನ್ನೇ ವಿವಾಹವಾಗಬೇಕೆಂಬ ಬಯಕೆಯಿಂದ ತಪಸ್ಸು ಮಾಡುತ್ತಾಳೆ. ಶಿವ ಅವಳಿಗೆ ಒಲಿದು, ಕೈಲಾಸದಿಂದ ಭೂಮಿಗೆ ಬಂದು ಅವಳನ್ನು ವರಿಸುತ್ತಾನೆ. ಸಂಪ್ರದಾಯದಂತೆ ಪತ್ನಿಯನ್ನು ತಾನಿರುವ ಸ್ಥಳಕ್ಕೆ ಅಂದರೆ ಕೈಲಾಸಕ್ಕೆ ಕರೆದೊಯ್ಯುತ್ತಾನೆ.

    ಮದುವೆಯಾದ ಹೆಣ್ಣುಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗುವ ಪದ್ಧತಿ ಇದೆ. ಅಂತೆಯೇ ಪಾರ್ವತಿ ದೇವಿಯು ಭಾದ್ರಪದ ಶುಕ್ಲದ ತೃತೀಯದಂದು ಭೂಲೋಕಕ್ಕೆ ಬರುತ್ತಾಳೆ. ಈ ಸಂದರ್ಭ ತವರಿನಲ್ಲಿ ಮನೆಮಗಳನ್ನು ತುಂಬು ಪ್ರೀತಿಯಿಂದ ಸತ್ಕರಿಸಲಾಗುತ್ತದೆ. ಸಂಭ್ರಮದಿಂದ ಆಕೆಯ ಇರುವಿಕೆಯನ್ನು ಆಚರಿಸಲಾಗುತ್ತದೆ. ಮರುದಿನ ಪಾರ್ವತಿ ಸುತ ಗಣೇಶನು ತನ್ನ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಹಾಗಾಗಿ, ಪಾರ್ವತಿ ದೇವಿಯ ತವರು ಮನೆಗೆ ಆಗಮಿಸುವುದನ್ನು ಗೌರಿ ಹಬ್ಬವಾಗಿ ಆಚರಿಸಲಾಗುತ್ತದೆ.

    ಏಕೆ ಆಚರಿಸುತ್ತಾರೆ?
    ಗೌರಿ ಹಬ್ಬದ ಆಚರಣೆಯ ಹಿಂದೆಯೂ ಪುರಾಣ ಕಥೆಯಿದೆ. ಹಿಂದೆ ಪಾರ್ವತಿ ದೇವಿಯು ಕಠಿಣ ತಪಸ್ಸು ಮಾಡುವ ಮೂಲಕ ಮಹಾಶಿವನನ್ನು ಒಲಿಸಿಕೊಂಡಳು. ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಗೌರಿಯನ್ನು ಪ್ರಾರ್ಥಿಸುತ್ತಾರೆ. ಇನ್ನು ಅವಿವಾಹಿತರು ಒಳ್ಳೆಯ ಬಾಳ ಸಂಗಾತಿ ಸಿಗಲೆಂದು ಪ್ರಾರ್ಥಿಸುತ್ತಾರೆ.

     

    ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆಗಳನ್ನು ಮಾಡುವುದರಿಂದ ತಮ್ಮ ಮನೆಗಳಿಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ಮನೆಮಾಡುತ್ತದೆ ಎಂಬುದು ನಂಬಿಕೆ. ಮುಖ್ಯವಾಗಿ ದಾಂಪತ್ಯ ಜೀವನವು ಚೆನ್ನಾಗಿರಲು ಗೌರಿ ಹಬ್ಬವನ್ನು ಮಹಿಳೆಯರು ಆಚರಿಸುತ್ತಾರೆ.

    ಗೌರಿ ಪೂಜೆ ಮಾಡುವ ವಿಧಾನ
    ಮೊದಲಿಗೆ ಹೆಣ್ಣುಮಕ್ಕಳು ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿ, ಹೂವುಗಳು, ರಂಗೋಲಿ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಅರಿಶಿನ, ಕುಂಕುಮ, ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಪೂಜೆಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
    ಗೌರಿ ಹಬ್ಬದ ದಿನದಂದು ಗೌರಿ ದೇವಿಯ ವಿಗ್ರಹ ಹೂವಿನಿಂದ ಅಲಂಕರಿಸಲಾಗುತ್ತದೆ. ತಾಯಿ ಗೌರಿಗೆ ಹೊಸ ಸೀರೆ, ಆಭರಣ ಹಾಕಿ, ಹೂವುಗಳಿಂದ ಅಲಂಕರಿಸುತ್ತಾರೆ. ನಂತರ ಕಲಶವನ್ನ ಸಿದ್ಧ ಮಾಡಬೇಕು. ಬಳಿಕ ತಾಯಿ ಗೌರಿಗೆ ಭಕ್ತಿಯಿಂದ ಪೂಜೆ ಮಾಡಬೇಕು. ಪೂಜೆಯ ಕೊನೆಯಲ್ಲಿ ಸುಮಂಗಲಿಯರಿಗೆ ಬಾಗಿನ ನೀಡುವುದು ಕೂಡ ಗೌರಿ ಹಬ್ಬದ ವಿಶೇಷವಾಗಿದೆ.

  • ಅಂಬಾನಿ ಮನೆಯ ಗಣೇಶ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್

    ಅಂಬಾನಿ ಮನೆಯ ಗಣೇಶ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್

    ದ್ಯಮಿ ಮುಖೇಶ್ ಅಂಬಾನಿ (Mukesh Ambani) ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಂಬಾನಿ ಕುಟುಂಬದ ಹಬ್ಬದಲ್ಲಿ ಬಾಲಿವುಡ್ (Bollywood) ನಟ, ನಟಿಯರು ಭಾಗಿಯಾಗಿ ಗಣಪನ ಆಶೀರ್ವಾದ ಪಡೆದಿದ್ದಾರೆ. ಪಾಲ್ಗೊಂಡಿರುವ ಸೆಲೆಬ್ರಿಟಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

     

    View this post on Instagram

     

    A post shared by Viral Bhayani (@viralbhayani)

    ಹಬ್ಬದಲ್ಲಿ ಸಲ್ಮಾನ್ ಖಾನ್ (Salman Khan) ಭಾಗಿಯಾಗಿ ಗಣೇಶನ ಆಶೀರ್ವಾದ ಪಡೆದಿದ್ದಾರೆ. ಸೌತ್‌ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ತಮ್ಮ ಕುಟುಂಬದ ಜೊತೆ ಆಗಮಿಸಿ ಗಣಪನ ದರ್ಶನ ಪಡೆದಿದ್ದಾರೆ.

    ಆಯುಷ್ಮಾನ್ ದಂಪತಿ ಕೂಡ ಅಂಬಾನಿ ಮನೆಯ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಬಳಿಕ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಹೆರಿಗೆ ಆಸ್ಪತ್ರೆಗೆ ಅಡ್ಮಿಟ್ ಆದ ದೀಪಿಕಾ ಪಡುಕೋಣೆ

    ಪತಿ ಜೊತೆ ಮಾಧುರಿ ದೀಕ್ಷೀತ್ ಭೇಟಿ ಕೊಟ್ಟಿರೋದು ಅಭಿಮಾನಿಗಳ ಗಮನ ಸೆಳೆದಿದೆ. ಶಿಲ್ಪಾ ಶೆಟ್ಟಿ, ಕಾಜಲ್ ಅಗರ್‌ವಾರ್, ನಟಿ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ (Shraddha Kapoor), ಕಿಯಾರಾ ಅಡ್ವಾಣಿ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ಗಣಪನ ದರ್ಶನ ಪಡೆದಿದ್ದಾರೆ.

    ಇತ್ತ ಮಗ ಅನಂತ್ ಮತ್ತು ಸೊಸೆ ರಾಧಿಕಾ ಜೊತೆ ನೀತಾ ಅಂಬಾನಿ ಕೂಡ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಹಬ್ಬದ ಝಲಕ್‌ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

  • ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

    ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

    ಶಿವಮೊಗ್ಗ: ನಾಡಿನಲ್ಲೆಡೆ ಶನಿವಾರ ಸಂಭ್ರಮದಿಂದ ಗಣಪತಿ ಹಬ್ಬ (Ganesha festival) ಆಚರಿಸಲಾಗುತ್ತಿದೆ. ಆದರೆ ಶಿವಮೊಗ್ಗ (Shivamogga) ಜಿಲ್ಲೆ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್‌ನಲ್ಲಿ ಗಣಪತಿ ಪ್ರತಿಷ್ಠಾಪನೆ ವೇಳೆಯೇ ಗಲಾಟೆ ನಡೆದಿದೆ.

    ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರುವ ವೇಳೆ ಡೊಳ್ಳು ಬಾರಿಸಲು ಎರಡು ಸಮುದಾಯದವರು ಒಂದೇ ತಂಡಕ್ಕೆ ಡೊಳ್ಳು ಬಾರಿಸಲು ಆರ್ಡರ್ ಕೊಟ್ಟಿದ್ದರು. ಆದರೆ ಎರಡು ಸಮುದಾಯದವರು ಒಂದೇ ಸಮಯದಲ್ಲಿ ಗಣಪತಿ ತರುತ್ತಿದ್ದರು. ಈ ವೇಳೆ ನಮ್ಮ ಸಮುದಾಯದ ಗಣಪತಿ ಮೆರವಣಿಗೆಗೆ ಡೊಳ್ಳು ಬಾರಿಸುವವರು ಹಣ ಪಡೆದು ಬಂದಿಲ್ಲ ಎಂದು ಗಲಾಟೆ ನಡೆದಿದೆ. ಡೊಳ್ಳುನವರ ಮೇಲೆ ಕಲ್ಲು ತೂರಾಟ ನಡೆಸಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಅತ್ಯಾಚಾರ ಕೇಸ್ – ವಿಡಿಯೋ ಮಾಡಿ ಹರಿಬಿಟ್ಟಿದ್ದ ಆಟೋ ಚಾಲಕ ಅರೆಸ್ಟ್

    ಈ ವೇಳೆ ಮೆರವಣಿಗೆಯಲ್ಲಿದ್ದ ಗ್ರಾಮಸ್ಥರಿಗೂ ಗಾಯವಾಗಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನವರು ಕಲ್ಲು ತೂರಾಟ ನಡೆಸಿದ್ದಾರೆ. ಗಲಾಟೆ ನಡೆಯುತ್ತಿದ್ದ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ 8-10 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಅನರ್ಹ ಕುರಿತು ಟೀಕೆ – ದೇವರೇ ನಿಮಗೆ ಶಿಕ್ಷೆ ಕೊಟ್ಟಿದ್ದಾನೆ ಎಂದ ಬ್ರಿಜ್‌ ಭೂಷಣ್‌

    ಇನ್ನೂ ಘಟನೆ ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಎಲ್ಲಾ ಗಣೇಶ ಮೂರ್ತಿಯನ್ನು ಇಂದೇ ವಿಸರ್ಜನೆ ಮಾಡುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತಿಯುತವಾಗಿದೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿದಂತೆ 2 ಗುಂಪಿನ 22 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಹಲ್ಲೆ ನಡೆಸಲು ಪವಿತ್ರಾಗೆ ದರ್ಶನ್ ಪ್ರಚೋದನೆ – ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಕರಗದ ನಟಿ; ಚಾರ್ಜ್‌ಶೀಟ್‌ನಲ್ಲಿ ರಹಸ್ಯ ಸ್ಫೋಟ

  • ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!

    ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!

    ಮಡಿಕೇರಿ: ಸಾರ್ವಜನಿಕವಾಗಿ ಅಥವಾ ಬಲವಂತವಾಗಿ ಹಣ ಸಂಗ್ರಹಿಸದೇ, ಕೇವಲ ಸಮಿತಿ ಸದಸ್ಯರು, ಸ್ನೇಹಿತರು, ಹಿತೈಷಿಗಳು, ದಾನಿಗಳ ನೆರವಿನಿಂದ ಮಾತ್ರ ಪ್ರತಿಷ್ಠಾಪಿಸಲ್ಪಡುವ ಮಡಿಕೇರಿಯ (Madikeri) ಕೊಹಿನೂರು ರಸ್ತೆಯ ಹಿಂದೂ ಯುವ ಶಕ್ತಿಯ ಗಣಪ ಜಿಲ್ಲೆಯಲ್ಲೇ ಶ್ರೀಮಂತ ಗಣಪತಿ ಎಂದು ಪ್ರಸಿದ್ಧಿ ಪಡೆದಿದೆ.

    ಶ್ರೀಮಂತ ಗಣಪತಿ ಈ ಬಾರಿ ಇನ್ನಷ್ಟು ಸಿರಿವಂತನಾಗುತ್ತಿದ್ದಾನೆ. ಬೆಳ್ಳಿಯ ಕಿರೀಟ, ಕೊಡೆ, ಮೋದಕ, ಪಾಳ, ಅಂಕುಶ, ಹಣೆಮಾಲೆ, ಚಿನ್ನದ ಪದಕ, ಬಳೆಗಳು ಸೇರಿದಂತೆ ಅಂದಾಜು 15 ಲಕ್ಷ ರೂ. ಮೌಲ್ಯದ ಆಭರಣಗಳನ್ನು ತೊಡಿಸಿ ಈ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದನ್ನೂ ಓದಿ: ಸಹಾಯ ಕೇಳಿ ಬಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಕಾನ್ಸ್‌ಟೇಬಲ್ ಅರೆಸ್ಟ್

    ವರ್ಷದಿಂದ ವರ್ಷಕ್ಕೆ ಬೆಳ್ಳಿಯ ವಿವಿಧ ಬಗೆಯ ಪ್ರಭಾವಳಿಗಳನ್ನು ಸಂಘದ ಸದಸ್ಯರು ನೀಡುತ್ತಿದ್ದಾರೆ. ಗಣಪನ ಮೂರ್ತಿ ಹಳೆಯ ಆಭರಣಗಳೊಂದಿಗೆ ಲಕ್ಷ ಲಕ್ಷ ಮೌಲ್ಯದ ಬೆಳ್ಳಿಯ ಪ್ರಭಾವಳಿಯೊಂದಿಗೆ ಗಮನ ಸೆಳೆಯುತ್ತಿದೆ.

    ಇದರೊಂದಿಗೆ ಭಕ್ತಾದಿಯೊಬ್ಬರು 15 ಸಾವಿರ ರೂ. ಮೌಲ್ಯದ ಚಿನ್ನದ ಹಣೆಯ ತ್ರಿಶೂಲವನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ವಿಶೇಷವಾಗಿ ಪೂಜೆ ನೇರವೇರಿಸಿದ ಬಳಿಕ ಶನಿವಾರ ಸಂಜೆ ವೇಳೆಗೆ ಗಣಪತಿ ಮೂರ್ತಿಯನ್ನು ಗೌರಿ ಕೇರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ಕಾರು – 10 ಮೀಟರ್ ಎಳೆದೊಯ್ದು ಚಾಲಕ ಎಸ್ಕೇಪ್!

  • ಗಣೇಶ ಹಬ್ಬಕ್ಕೆ ವಿನಾಯಕನ ದರ್ಶನ ಪಡೆದ ಗರ್ಭಿಣಿ ದೀಪಿಕಾ

    ಗಣೇಶ ಹಬ್ಬಕ್ಕೆ ವಿನಾಯಕನ ದರ್ಶನ ಪಡೆದ ಗರ್ಭಿಣಿ ದೀಪಿಕಾ

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇದೇ ತಿಂಗಳು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಪ್ಟೆಂಬರ್ ೨೮ ಕ್ಕೆ ಪ್ರಸವದ ಡೇಟ್ ಕೊಟ್ಟಿದ್ದಾರೆ ಎನ್ನಲಾಗುತ್ತೆ. ಇದೇ ವೇಳೆ ದೀಪಿಕಾ ಗಣೇಶ ಹಬ್ಬದ ವಿಶೇಷವಾಗಿ ಸಿದ್ಧಿವಿನಾಯಕನ ದರ್ಶನ ಪಡೆದಿದ್ದಾರೆ. ಪತಿ ರಣ್ವೀರ್ ಸಿಂಗ್ ಜೊತೆ ದೀಪಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

     

    ಹಸಿರುಬಣ್ಣದ ಕಾಂಚೀವರಂ ಸೀರೆ ಧರಿಸಿದ್ದ ದೀಪಿಕಾ ಮುಖದಲ್ಲಿ ಹಬ್ಬದ ಕಳೆ ಜೊತೆ ಗರ್ಭಿಣಿ ಕಳೆಯೂ ಕಂಡುಬಂತು. ದೇವಸ್ಥಾನದ ಆವರಣ ಆಗಿರೋದ್ರಿಂದ ಬರಿಕಾಲಲ್ಲೇ ಹೆಜ್ಜೆ ಹಾಕಿದ್ರು. ತುಂಬು ಗರ್ಭಿಣಿ ದೀಪಿಕಾಳ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ ಪತಿ ರಣ್ವೀರ್ ಸಿಂಗ್. ಪ್ರತಿ ವರ್ಷವೂ ಗಣೇಶ ಹಬ್ಬಕ್ಕೆ ದೀಪಿಕಾ ಇಲ್ಲಿಗೆ ಭೇಟಿ ಕೊಡುವ ರೂಢಿ ಪಾಲಿಸಿಕೊಂಡು ಬಂದಿರುವ ದೀಪಿಕಾ ರಣ್ವೀರ್ ದಂಪತಿ ಈ ಬಾರಿಯೂ ತಪ್ಪದೆ ಆಗಮಿಸಿದ್ದು ವಿಶೇಷ.

     

    ಮುಂಬೈನಲ್ಲಿರುವ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಗಣೇಶ ಹಬ್ಬದ ವೇಳೆ ಹಲವು ಸೆಲೆಬ್ರಿಟಿಗಳು ಆಗಮಿಸೋದುಂಟು. ಹಾಗೆಯೇ ಈ ಬಾರಿ ಗಣೇಶ ಹಬ್ಬಕ್ಕೆ ದೀಪಿಕಾ ರಣ್ವೀರ್ ದಂಪತಿ ಕುಟುಂಬ ಸಮೇತ ಆಗಮಿಸಿ ವಿನಾಯಕನ ದರ್ಶನ ಪಡೆದಿದ್ದಾರೆ. ಹೆರಿಗೆ ಸಮಯ ಹತ್ತಿರ ಬಂದಂತೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮನೆಯೊಳಗೆ ಇದ್ದು ರೆಸ್ಟ್ ಮಾಡ್ತಾರೆ, ಆದರೆ ದೀಪಿಕಾ ಭಕ್ತಿಯಿಂದ ದೇವಸ್ಥಾನಕ್ಕೆ ಆಗಮಿಸಿದ್ದು ಗಮನ ಸೆಳೆದಿದೆ.

  • ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ

    ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ

    ಕೊಪ್ಪಳ: ರಾಜ್ಯದಲ್ಲಿ ಗಣೇಶ ಹಬ್ಬದ (Ganesha Festival) ಸಂಭ್ರಮ ಮನೆ ಮಾಡಿದೆ. ಈ ನಡುವೆ ಕೊಪ್ಪಳದಲ್ಲಿ ಮಸೀದಿ ಆವರಣದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕರು ಭಾವೈಕ್ಯತೆ ಸಂದೇಶ ಸಾರಿದ್ದಾರೆ.

    ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು (Hindu Muslim) ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ. ಇದನ್ನೂ ಓದಿ: Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು

    ಕಳೆದ ಮೂರು ವರ್ಷಗಳಿಂದ ಇಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಜನ ಒಟ್ಟಿಗೆ ಸೇರಿ ಮಸೀದಿ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಾ ಬರುತ್ತಿದ್ದಾರೆ. ಮುಸ್ಲಿಂ ಬಾಂಧವರೇ 5 ದಿನಗಳ ಕಾಲ ಪೂಜಾ ಕೈಂಕರ್ಯವನ್ನು ನೆರವೇರಿಸಲಿದ್ದಾರೆ. ಗಣೇಶ ವಿಸರ್ಜನೆಗೂ ಮುನ್ನಾ ದಿನ ಅನ್ನಸಂತರ್ಪಣೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!

    ಬೆಳಗಾವಿ: 2.21 ಲಕ್ಷ ಹುಣಸೆ ಬೀಜ ಬಳಸಿ ಮೂರ್ತಿ ತಯಾರು
    ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಬೆಳಗಾವಿ ಹಳೇ ಗಾಂಧಿನಗರದ ಸೃಜನಶೀಲ ಶಿಲ್ಪಿ ಸುನೀಲ್ ಸಿದ್ದಪ್ಪ ಆನಂದಚೆ ಈ ವರ್ಷ 2,21,111 ಹುಣಸೆ ಬೀಜಗಳನ್ನು ಬಳಸಿ ಭವ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚಿಸಿದ್ದು ವಿಶೇಷ ಆಕರ್ಷಣೆಗೆ ಕಾರಣವಾಗಿದೆ. ಸುನೀಲ್‌, ಕಳೆದ ಅನೇಕ ವರ್ಷಗಳಿಂದ ಜೇಡಿ ಮಣ್ಣು, ಹುಲ್ಲಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ವರ್ಷ ಮತ್ತೊಂದು ಹೆಜ್ಜೆ ಮುಂದಿಟ್ಟು ಮರುಬಳಕೆಯ ದಿನಪತ್ರಿಕೆಗಳು ಮತ್ತು ಕಾರ್ಡ್ಬೋರ್ಡ್, ಹುಲ್ಲಿನ ಸಹಾಯದಿಂದ ಹೆರಳವಾದ ಹುಣಸೆ ಬೀಜಗಳನ್ನು ಉಪಯೋಗಿಸಿ 8 ಅಡಿ ಎತ್ತರದ ಗಣೇಶ ಮುರ್ತಿ ನಿರ್ಮಿಸಿದ್ದಾರೆ.

    ದಿನ ನಿತ್ಯದ ತನ್ನ ಇತರೆ ಕೆಲಸಗಳ ಮಧ್ಯ ಒಂದೆರಡು ಗಂಟೆ ಬಿಡುವ ಮಾಡಿಕೊಂಡು ಮನೆಯವರ ಹಾಗೂ ಇತರರ ಸಹಕಾರಿಂದ ಒಂದು ತಿಂಗಳು ಕಾಲಾವಧಿಯಲ್ಲಿ ಸಾರ್ವಜನಿಕ ವೇದಿಕೆಯ ಭವ್ಯ ಮೂರ್ತಿ‌ ನಿರ್ಮಿಸಿದ್ದಾರೆ. ಇಂತಹ ಮೂರ್ತಿಗಳ ಬೇಡಿಕೆ ಹೆಚ್ಚಿದ್ದರೂ ಬಿಡುವಿಲ್ಲದ ಕಾರಣ ಪ್ರತಿವರ್ಷ ಒಂದು ಮಾತ್ರ ಮೂರ್ತಿ ರಚಿಸುತ್ತಿದ್ದಾರೆ. ಪರಿಸರ ಸ್ನೇಹಿ ಈ ವರ್ಷದ ಸುಂದರ ಮೂರ್ತಿಯನ್ನು ಬೆಳಗಾವಿ ಮಾಳಿಗಲ್ಲಿ ಪರಿಸರ ಸ್ನೇಹಿ ಯುವಕರು ಸೇರಿ ತಮ್ಮ ಓಣಿಯಲ್ಲಿ ಪ್ರತಿಷ್ಠಾಣೆ ಮಾಡಿ ಪರಿಸರ ಕಾಳಜಿ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ