– ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ತನಿಖೆಯಲ್ಲಿ ಬಯಲು
ಮಂಡ್ಯ: ಮದ್ದೂರಿನಲ್ಲಿ (Maddur Stone Pelting) ಗಣೇಶ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆ ವೇಳೆ ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬ ಸತ್ಯ ಬಯಲಾಗಿದೆ. ಅಷ್ಟೇ ಅಲ್ಲ ದುಷ್ಕರ್ಮಿಗಳ ಪ್ಲಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಕಳೆದ ಸೆಪ್ಟೆಂಬರ್ 7ರಂದು ಮಂಡ್ಯದ ಮದ್ದೂರಿನಲ್ಲಿ ದುಷ್ಕರ್ಮಿಗಳು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಿದ್ದರು. ಆ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ಅದೊಂದು ಪ್ರೀ ಪ್ಲಾನ್ ಕೃತ್ಯ ಎಂದು ಶಂಕಿಸಲಾಗಿತ್ತು. ಇದೀಗ ಪೊಲೀಸ್ ತನಿಖೆಯಲ್ಲಿ ಮತ್ತಷ್ಟು ರಹಸ್ಯ ಬಟಾಬಯಲಾಗಿದ್ದು, ಕಿಡಿಗೇಡಿಗಳು ಕಲ್ಲು ಹೊಡೆಯಲು ಪ್ಲಾನ್ ಮಾಡಿಕೊಂಡಿದ್ದು ಬೇರೆ ಗಣೇಶ ಮೂರ್ತಿಯ ಮೇಲೆ ಎಂಬುದು ಬಯಲಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕರ ಬಣ್ಣ ಬಯಲಾಗುತ್ತಿದೆ, ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ: ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಸಿಎಂ ಮನವಿ

ಮದ್ದೂರಿನಲ್ಲಿ ಚನ್ನೇಗೌಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುತ್ತಿತು. ರಾಮ್ ರಹೀಮ್ ನಗರದ ಮಸೀದಿ ಮುಂದೆ ಡಿಜೆ ಆಫ್ ಮಾಡುವಂತೆ ಪೊಲೀಸರು ಸೂಚಿಸಿದಾಗ ಯುವಕರು ಒಪ್ಪಿಕೊಂಡಿದ್ದರು. ಮಸೀದಿಯಿಂದ ಸ್ವಲ್ಪ ದೂರ ಸಾಗಿದ ಬಳಿಕ ಮತ್ತೆ ಡಿಜೆ ಆನ್ ಮಾಡಿಸಿ ಸಂಭ್ರಮಿಸುತ್ತಾ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ್ದರು. ಇದೊಂದು ಪೂರ್ವ ಯೋಜಿತ ಕೃತ್ಯ ಅಂತ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸಿದ್ದರು. ಮುಸ್ಲಿಮ್ ಮುಖಂಡರು ನಮ್ಮ ಸಮುದಾಯದ ಯುವಕರೇ ಕಲ್ಲು ಎಸೆದಿದ್ದು, ಅವರನ್ನ ಬಂಧಿಸುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ – ಅ.9ರಂದು ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ
ಪ್ರಕರಣ ಸಂಬಂಧ ಮದ್ದೂರು ಪೊಲೀಸರು ಮೊದಲಿಗೆ 22 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ 29 ಮಂದಿಗೆ ಏರಿಕೆಯಾಗಿತ್ತು. ತನಿಖೆ ಮುಂದುವರಿದಂತೆ 32 ಮಂದಿ ವಿರುದ್ಧ ಕೇಸು ದಾಖಲಿಸಿ ವಿಚಾರಣೆ ಮಾಡಿದಾಗ ದುಷ್ಕರ್ಮಿಗಳು ಇಡೀ ಪ್ರಕರಣದ ರಹಸ್ಯ ಬಾಯಿ ಬಿಟ್ಟಿದ್ದಾರೆ. ಗಣೇಶನ ಮೇಲೆ ಕಲ್ಲು ತೂರಿ ಗಲಭೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ಸ್ವಾಮಿ ಎಂಬವರ ನೇತೃತ್ವದಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ಮೇಲೆ ಕಲ್ಲು ತೂರಲು ಕಿರಾತಕರು ಪ್ಲಾನ್ ಮಾಡಿಕೊಂಡಿದ್ದರಂತೆ. ಆ ಗಣೇಶ ವಿಸರ್ಜನೆ ಇನ್ನು ಒಂದು ವಾರ ಬಾಕಿ ಇದ್ದಿದ್ದರಿಂದ ಸೆಪ್ಟೆಂಬರ್ 7ರಂದು ವಿಸರ್ಜನೆ ಮಾಡುತ್ತಿದ್ದ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ರೈತರ ವಿಚಾರದಲ್ಲಿ ತಾತ್ಸಾರ ಬೇಡ, ಸಿಎಂ ಬೆಂಗಳೂರಿಗೆ ಸೀಮಿತರಾಗಿದ್ದಾರೆ – ಬಿವೈವಿ ಕಿಡಿ
ಸದ್ಯ ಪ್ರಕರಣ ಸಂಬಂಧ ಅರೋಪಿಗಳನ್ನ ಮತ್ತಷ್ಟು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದು, ಯಾವುದಾದರೂ ದ್ವೇಷದಿಂದ ಕಲ್ಲು ತೂರಿದ್ರಾ ಅಥವ ಧರ್ಮದ ವಿಚಾರ ಇಟ್ಟುಕೊಂಡು ಗಲಭೆ ಎಬ್ಬಿಸಲು ಮುಂದಾಗಿದ್ರಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್- ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ













