Tag: ಗಣೇಶ ಮೂರ್ತಿ ಮೆರವಣಿಗೆ

  • ಹಾಸನ| ಗಣೇಶ ಮೆರವಣಿಗೆ ವೇಳೆ ಭೀಕರ ಅಪಘಾತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

    ಹಾಸನ| ಗಣೇಶ ಮೆರವಣಿಗೆ ವೇಳೆ ಭೀಕರ ಅಪಘಾತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

    – ಘಟನಾ ಸ್ಥಳಕ್ಕೆ ಧಾವಿಸಿದ ಹೆಚ್‌ಡಿ ರೇವಣ್ಣ, ಸೂರಜ್‌, ನಿಖಿಲ್‌; ದುರಂತಕ್ಕೆ ಕೇಂದ್ರ ಸಚಿವ ಹೆಚ್‌ಡಿಕೆ ಸಂತಾಪ

    ಹಾಸನ: ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಟ್ರಕ್‌ ಹರಿದು 8 ಮಂದಿ ದಾರುಣ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದುರಂತಕ್ಕೆ ವಿಷಾದ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮೃತರ ಕಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಸಿಎಂ ಟ್ವೀಟ್‌ನಲ್ಲಿ ಏನಿದೆ?
    ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

    ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ ಎಂದು ಸಿಎಂ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತ ಸಾವು ಕಂಡಿದ್ದಾರೆ. ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇವರು ವಿದ್ಯಾಭ್ಯಾಸ ಮಾಡುತ್ತಿದ್ದರು.

    ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಹಾಸನದಿಂದ ಹೊಳೆನರಸೀಪುರದ ಕಡೆಗೆ ಕಂಟೇನರ್ ವಾಹನ ಹೋಗುತ್ತಿತ್ತು. ಈ ವೇಳೆ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾಗಿದ್ದಾನೆ. ಆದರೆ, ಬೈಕ್‌ಗೆ ಡಿಕ್ಕಿಯಾಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿದೆ. ಬೈಕ್‌ ಸಾವರ ಕೂಡ ಮೃತಪಟ್ಟಿದ್ದಾನೆ.

    ಚಾಲಕ ಭುವನೇಶ್‌ಗೂ ಗಂಭೀರ ಗಾಯಗಳಾಗಿವೆ. ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ಚಾಲಕ ಭುವನೇಶ್‌ನನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ದುರಂತಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.

  • ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 8 ಮಂದಿ ಸ್ಥಳದಲ್ಲೇ ಸಾವು

    ಹಾಸನ| ಗಣಪತಿ ಮೆರವಣಿಗೆ ವೇಳೆ ಭೀಕರ ದುರಂತ – ಟ್ರಕ್‌ ಹರಿದು 8 ಮಂದಿ ಸ್ಥಳದಲ್ಲೇ ಸಾವು

    – ದುರಂತ ಸಾವು ಕಂಡ ಐವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು

    ಹಾಸನ: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭೀಕರ ದುರಂತ ಸಂಭವಿಸಿದೆ. ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್‌ ಹರಿದು 6 ಮಂದಿ ಮೃತಪಟ್ಟಿದ್ದಾರೆ.

    ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ದೌಡಾಯಿಸಿದ್ದಾರೆ.

    ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತ ಸಾವು ಕಂಡಿದ್ದಾರೆ. ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇವರು ವಿದ್ಯಾಭ್ಯಾಸ ಮಾಡುತ್ತಿದ್ದರು.

    ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಹಾಸನದಿಂದ ಹೊಳೆನರಸೀಪುರದ ಕಡೆಗೆ ಕಂಟೇನರ್ ವಾಹನ ಹೋಗುತ್ತಿತ್ತು. ಈ ವೇಳೆ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿದೆ.

    ಚಾಲಕ ಭುವನೇಶ್‌ಗೂ ಗಂಭೀರ ಗಾಯಗಳಾಗಿವೆ. ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ಚಾಲಕ ಭುವನೇಶ್‌ನನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

  • ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್‌ – ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿ ವರ್ಗಾವಣೆ

    ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್‌ – ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿ ವರ್ಗಾವಣೆ

    ಮಂಡ್ಯ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ.

    ಅಡಿಷನಲ್ ಎಸ್ಪಿ ತಿಮ್ಮಯ್ಯ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗೃಹ ಇಲಾಖೆ ವರ್ಗಾವಣೆ ಮಾಡಿ ಇನ್ನೂ ಜಾಗ ತೋರಿಸಿಲ್ಲ.

    ಮದ್ದೂರು ಪ್ರಕರಣದಲ್ಲಿ ತಿಮ್ಮಯ್ಯಗೆ ಹೆಚ್ಚುವರಿ ಜವಾಬ್ದಾರಿ ನೀಡಿಯೇ ಇರಲಿಲ್ಲ. ಹೀಗಿದ್ದರೂ ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಲ್ಲು ತೂರಾಟ ತಡೆಯಬೇಕಿದ್ದು ಮದ್ದೂರು ಇನ್‌ಸ್ಪೆಕ್ಟರ್‌ ಹಾಗೂ ಇತರ ಪೊಲೀಸರ ಕರ್ತವ್ಯವಾಗಿತ್ತು. ಸೋಮವಾರ ಪ್ರತಿಭಟನೆ ಬಂದೋಬಸ್ತ್ ನೇತೃತ್ವ ವಹಿಸಿದ್ದು ಎಸ್ಪಿ. ಕೇವಲ ಸ್ಥಳದಲ್ಲಿ ಬಂದೋಬಸ್ತ್ ಕೆಲಸ ಮಾಡುತ್ತಿದ್ದವರು ತಿಮ್ಮಯ್ಯ. ಹೀಗಿದ್ದರೂ ಸಹ ಅಮಾಯಕ ಅಧಿಕಾರಿಯನ್ನು ಸರ್ಕಾರ ಬಲಿಪಶು ಮಾಡಿದೆ ಎಂಬ ದೂಷಣೆ ಕೇಳಿಬಂದಿದೆ.

  • ಪಾಕಿಸ್ತಾನಕ್ಕೆ ಜೈ ಎಂದವರ ಬಾಯಿಗೆ ಗುಂಡು ಹೊಡೆಯಬೇಕು: ಯತ್ನಾಳ್ ಕಿಡಿ

    ಪಾಕಿಸ್ತಾನಕ್ಕೆ ಜೈ ಎಂದವರ ಬಾಯಿಗೆ ಗುಂಡು ಹೊಡೆಯಬೇಕು: ಯತ್ನಾಳ್ ಕಿಡಿ

    ಮಂಡ್ಯ: ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಎನ್ನುವವರ ಬಾಯಿಗೆ ಗುಂಡು ಹೊಡೆದು ಎನ್‌ಕೌಂಟರ್ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದರು.

    ಮದ್ದೂರಿನಲ್ಲಿ (Maddur) ಭಾಷಣ ಮಾಡಿದ ಯತ್ನಾಳ್, ನಮ್ಮ ಮಣ್ಣಿನಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಎನ್ನೋದು ಇಲ್ಲಿ ಇರಲು ಅರ್ಹತೆ ಇಲ್ಲ. ಜನರು ಇನ್ಮುಂದೆ ಜಾತಿ ನೋಡಿ ಓಟು ಹಾಕಬೇಡಿ. ಸಿದ್ದರಾಮಯ್ಯ ಸರ್ಕಾರ ಔರಂಗಜೇಬನ ಸರ್ಕಾರವಾಗಿದೆ. ಸಾಬರಿಗೆ ಮೀಸಲಾತಿ, ಗುತ್ತಿಗೆ ಮೀಸಲಾತಿ ವಕ್ಫ್ ದೇಣಿಗೆ ಕೊಡುತ್ತಿರುವ ಮುಸ್ಲಿಂ ಸರ್ಕಾರ ಬೇಕಾ? ವಿಧಾನಸಭೆಯಲ್ಲಿ ಮಾತನಾಡುವುದೇ ಬೇರೆ ಆಮೇಲೆ ಸಿದ್ದರಾಮಯ್ಯ, ಡಿಕೆಶಿ ಮನೆಗೆ ಹೋಗುವುದೇ ಬೇರೆಯಾಗಿದೆ. ಹೊಂದಾಣಿಕೆ ರಾಜಕಾರಣ ಮಾಡಿ ಎಲ್ಲರಿಗೂ ಮೋಸ ಮಾಡ್ತಿದ್ದಾರೆ. ಮುಸ್ಲಿಂ ಸರ್ಕಾರ ನಡೆಸಿದ್ರೆ 3 ತಿಂಗಳಲ್ಲಿ ಕಿತ್ತೊಗೆದು ಹಿಂದೂ ಸರ್ಕಾರ ಬರುತ್ತದೆ ಎಂದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಲಾಠಿ ಏಟು ತಿಂದಿದ್ದ ಮಹಿಳೆ ವಿರುದ್ಧ ಎಫ್‌ಐಆರ್‌

    ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಲು ಬಿಡಲ್ಲ ಅಂತಾರೆ. ಇವರು ಕಟ್ಟಿದ ಮಸೀದಿ ಅಕ್ರಮ ಅಲ್ಲವಾ? ಇನ್ಮುಂದೆ ಕರ್ನಾಟಕದಲ್ಲಿ ಇದು ನಡೆಯಲ್ಲ. ನೀವು ನನಗೆ ಆಶೀರ್ವಾದ ಮಾಡಿದ್ರೆ ರಾಜ್ಯಾದ್ಯಂತ ಅಕ್ರಮ ಮಸೀದಿಗಳನ್ನ ನಿಲ್ಲಿಸುತ್ತೇನೆ. ಕರ್ನಾಟಕಕ್ಕೆ ಒಬ್ಬ ಬುಲ್ಡೋಜರ್ ಬಾಬ ಬೇಕೋ? ಬೇಡವೋ? ಆ ನನ್ಮಕ್ಕಳು ಕಲ್ಲು ಹೊಡೆದರು. ಆದರೆ, ನಮ್ಮ 500 ಹಿಂದೂಗಳ ಮೇಲೆ FIR ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ನಾವು ಪೊಲೀಸರ ವಿರೋಧಿಗಳಲ್ಲ. ಪೊಲೀಸರೇ ನಿಮಗೂ ನಿಮ್ಮ ಹಿಂದೂ ಧರ್ಮ ಶ್ರೇಷ್ಠ. ನಮ್ಮವರು ತಪ್ಪು ಮಾಡಿಲ್ಲ. ನಮ್ಮ ಸರ್ಕಾರ ಬಂದರೆ ಅನಧಿಕೃತ ಮಸೀದಿ ನಿಲ್ಲಿಸುತ್ತೇನೆ. ನಮ್ಮ‌ ದೇಶದಲ್ಲಿ ಇರಬೇಕಾದರೆ ನಮ್ಮೊಂದಿಗೆ ಚೆನ್ನಾಗಿರಿ‌. ಆ ಗಾಂಧಿ ನಿಮಗೆ ಪಾಕಿಸ್ತಾನ್ ಮಾಡಿಕೊಟ್ಟನಲ್ಲ ಅಲ್ಲಿಗೆ ಹೋಗಿ. ಈದ್ ಮಿಲಾದ್ ನಡೆದಾಗ ಯಾರೂ ಕಲ್ಲು ಹೊಡೆದಿಲ್ಲ. ಭ್ರಷ್ಟ ಸರ್ಕಾರ ಬೇಕಾಗಿಲ್ಲ. ಇವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಬಿಟ್ಟು ಯಾರನ್ನ ಉದ್ಧಾರ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

    ಮುಸ್ಲಿಂ ಆಗಿ ಹುಟ್ಟುತ್ತೀನಿ ಅಂತಾರೆ. ಈಗಲೇ ಆಗಿಬಿಡ್ರೋ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ತೀನಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ಹಾಲುಮತದಲ್ಲಿ ಹುಟ್ಟಿ ಈ ಮಾತ ಹೇಳ್ತಾರೆ. ಕುಂಕುಮ, ಪೇಟಾ ಬೇಡ ಎಂದವರು ಸಾಬ್ರ ಟೋಪಿ ಹಾಕಿಕೊಳ್ತಾರೆ. ಸಿದ್ದರಾಮಯ್ಯ ಯಾಕೆ ಹಿಂದೂಗಳ ಕುಂಕುಮ, ಪೇಟಾ ಮೇಲೆ ದ್ವೇಷ? ಡಿಜೆ ಬೇಡ ಅಂತಾರೆ. ದಿನಕ್ಕೆ ಐದು ಬಾರಿ ಮೈಕ್ ಹಾಕ್ತಾರೆ‌. ಸಿದ್ದರಾಮಯ್ಯ, ಡಿಕೆಶಿ, ಗೃಹಮಂತ್ರಿ ತಾಕತ್ ಇದ್ರೆ ಮಸೀದಿ ಮೈಕ್ ನಿಲ್ಲಿಸಿ‌‌. ಮುಸ್ಲಿಂ ಏಜೆಂಟ್‌ಗಳಾಗಿ ಕೆಲಸ ಮಾಡಬೇಡಿ. ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಯಾರಿಗೂ ಹೆದರುವುದಿಲ್ಲ. ಮಂಡ್ಯ ಜಿಲ್ಲೆಯಿಂದಲೇ ನನ್ನ ಯುದ್ಧ ಪ್ರಾರಂಭವಾಗಿದೆ. ಹಿಂದೂ ಕಾರ್ಯಕರ್ತರಿಗೆ ಕಲ್ಲು ಹೊಡೆದವರಿಗೆ ಸರಿಯಾದ ಶಿಕ್ಷೆ ಆಗಬೇಕು. ಸನಾತನ ಹಿಂದೂ ಧರ್ಮ ಜಾಗೃತವಾಗಿದೆ. ನೇಪಾಳದ‌ ಪರಿಸ್ಥಿತಿ ಬರುವ ಮೊದಲೇ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಿ ಎಂದು ಹೇಳಿದರು.