Tag: ಗಣೇಶ ಚತುರ್ಥಿ ಹಬ್ಬ

  • ಶ್ರೀಮಂತ ಗಣಪನಿಗೆ ಈ ಬಾರಿ 474 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?

    ಶ್ರೀಮಂತ ಗಣಪನಿಗೆ ಈ ಬಾರಿ 474 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?

    ದೇಶಾದ್ಯಂತ ಗಣೇಶ ಹಬ್ಬದ (Ganesh Chaturthi 2025) ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನ ಮನೆ, ಮಂದಿರ, ಏರಿಯಾಗಳಲ್ಲಿ ಕೂರಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನ ನಿವಾರಣೆಯಾಗಲಿ ವಿನಾಯಕ ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.

    Mumbai Ganesha 2

    ಗಣೇಶ ಚತುರ್ಥಿ ಹಬ್ಬ ಆಚರಣೆಗೆಂದೇ ದೇಶಾದ್ಯಂತ ನಾನಾ ಕಡೆ ಚಿತ್ತಾಕರ್ಷಕ ಗಣೇಶ ಮೂರ್ತಿಗಳ (Ganesha Idol) ಮಾರಾಟ ನಡೆಯುತ್ತಿದೆ. ಗಲ್ಲಿ-ಗಲ್ಲಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಪೂಜೆ ನಡೆಯುತ್ತದೆ. ಬಳಿಕ ವಿಸರ್ಜನೆಯೂ ಅಷ್ಟೇ ವಿಜ್ರಂಭಣೆಯಿಂದ ಆಗುತ್ತದೆ. ಆದ್ರೆ ಪ್ರತಿ ವರ್ಷ ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ಭಾರೀ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲ್ (GSB Seva Mandal) ಕೂಡ ಒಂದು. ಪ್ರತಿ ಬಾರಿಯೂ ಗಣೇಶ್‌ ಮೂರ್ತಿ, ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸುತ್ತಲೇ ಗಮನ ಸೆಳೆಯುವ ಮಂಡಲ್‌ ಈ ಬಾರಿಯೂ ವಿಶ್ವದ ಹಾಗೂ ದೇಶದ ಶ್ರೀಮಂತ ಗಣಪನನ್ನು ಕೂರಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಎಸ್‌ಬಿ ಗಣಪನಿಗೆ ಈ ಬಾರಿ ದಾಖಲೆಯ 474.46 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಕಳೆದ ವರ್ಷ 400.58 ಕೋಟಿ ರೂ. ವಿಮೆ ಮಾಡಲಾಗಿತ್ತು. ಆದ್ರೆ ಈ ಗಣೇಶ ಮೂರ್ತಿಯ ಅಧಿಕೃತ ಬೆಲೆ ಎಷ್ಟು ಎಂದು ಮಂಡಲ್‌ ಸುಳಿವು ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ: ಮಕ್ಕಳಿಗೆ ಗಣೇಶ ಅಂದ್ರೆ ಯಾಕಿಷ್ಟ ಗೊತ್ತಾ…? ಗಣಪನಿಗೂ ಪುಟಾಣಿಗಳಿಗೂ ಇದೆ ತುಂಟ ಸಂಬಂಧ!

    Mumbai Ganesha 4

    ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಈ ಬಾರಿಯೂ 5 ದಿನಗಳ ಗಣೇಶೋತ್ಸವ ಆಚರಿಸಲಿದೆ. ಆಗಸ್ಟ್‌ 27ರಿಂದ 5 ದಿನಗಳ ಕಾಲ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಲಿದೆ. ಜಿಎಸ್‌ಬಿ ಗಣೇಶನ ದರ್ಶನ ಪಡೆಯಲು ಈಗಾಗಲೇ ಭಕ್ತರು ಸಜ್ಜಾಗಿದ್ದಾರೆ. ಆದರೆ ಗಣೇಶನ ಅನಾವರಣ ಆ.27ರಂದು ಸಿಯಾನ್‌ನ ಕಿಂಗ್ಸ್ ಸರ್ಕಲ್‌ನಲ್ಲಿ ಜಿಎಸ್‌ಬಿ ಸೇವಾ ಮಂಡಲ ಮಾಡಲಿದೆ. ಜಿಎಸ್‌ಬಿ ಸೇವಾ ಮಂಡಲ್‌ ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 71ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ ಎಂದು ಜಿಎಸ್‌ಬಿ ಸೇವಾ ಮಂಡಲ್‌ನ ಅಧ್ಯಕ್ಷ ಅಮಿತ್ ಪೈ ತಿಳಿಸಿದ್ದಾರೆ.

    ಜಿಎಸ್‌ಬಿ ಮಂಡಲ್‌ ಈ ಬಾರಿ ಗಣೇಶಮೂರ್ತಿಗೆ ಬರೋಬ್ಬರಿ 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿ ಹಾಗೂ ಇತರ ಅತ್ಯಮೂಲ್ಯ ಆಭರಣಗಳನ್ನು ತೊಡಿಸಲಾಗುತ್ತದೆ. ಹೀಗಾಗಿ ಇದಕ್ಕೆ ಅಷ್ಟೇ ದುಬಾರಿ ಮೊತ್ತದ ವಿಮೆ ಮಾಡಿಸಲಾಗಿದೆ. 474.46 ಕೋಟಿ ರೂ. ವಿಮೆ ಮೊತ್ತಕ್ಕೆ ಪ್ರಿಮಿಯಂ ಎಷ್ಟು ಪಾವತಿ ಮಾಡಲಾಗಿದೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇದನ್ನೂ ಓದಿ: ಈ ಬಾರಿ ಗಣೇಶೋತ್ಸವದಲ್ಲಿ ರಾರಾಜಿಸಲಿದೆ ಧರ್ಮಸ್ಥಳ

    Mumbai Ganesha 3

    ಪ್ರತೀ ವರ್ಷದಂತೆ ಈ ವರ್ಷವೂ 5 ದಿನಗಳ ಗಣೇಶೋತ್ಸವ ಆಚರಿಸಲಾಗುತ್ತಿದೆ. ಎಂದಿನಂತೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಸೇರಿದಂತೆ ಯಾವುದೇ ಹಾನಿಕಾರ ವಸ್ತುಗಳ ಬಳಕೆ ಮಾಡಿಲ್ಲ. ಪೂರ್ತಿಯಾಗಿ ಮಣ್ಣಿನ ಗಣಪನನ್ನ ಕೂರಿಸಿ ಪೂಜೆ ಮಾಡಲಾಗುತ್ತದೆ ಎಂದು ಪೈ ಹೇಳಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

    ಕಳೆದ ವರ್ಷ ಇದೇ ರೀ ವೈಭವೋಪೇತ ಗಣೇಶಮೂರ್ತಿಯೊಂದನ್ನ ಸೇವಾ ಮಂಡಲ ಪ್ರತಿಷ್ಠಾಪಿಸಿತ್ತು. ಈ ಗಣೇಶನ ಮೂರ್ತಿಯ ಅಲಂಕಾರಕ್ಕೆ 66 ಕೆಜಿ ಚಿನ್ನ ಹಾಗೂ 326 ಕೆಜಿ ಬೆಳ್ಳಿ ಬಳಕೆ ಮಾಡಲಾಗಿತ್ತು. ಕಳೆದ ವರ್ಷ 400.58 ಕೋಟಿ ರೂ. ವಿಮೆ ಮಾಡಲಾಗಿತ್ತು. ಈ ಬಾರಿ ಈ ಮೊತ್ತವನ್ನು ಏರಿಕೆ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿದೆ. ಸ್ವಯಂ ಸೇವಕರು, ಕಾರ್ಯಕರ್ತರು ಎಲ್ಲರು ಸಜ್ಜಾಗಿದ್ದಾರೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾಳ್ಮೆಯಿಂದ ದರ್ಶನ ಮಾಡಬೇಕು. ಯಾವುದೇ ನೂಕು ನುಗ್ಗಲಿಗೆ ಅವಕಾಶವಿಲ್ಲ.

    ದಿನದ 24 ಗಂಟೆಯೂ ಪೂಜೆ
    ದಕ್ಷಿಣ ಭಾರತೀಯ ಶೈಲಿಯ ಈ ವಿಗ್ರಹವನ್ನು ಜೇಡಿಮಣ್ಣು ಮತ್ತು ಹುಲ್ಲಿನಿಂದ ತಯಾರಿಸಲಾಗಿದೆ. ವಿಘ್ನೇಶ್ವರನನ್ನು ಕೂರಿಸಿದ ದಿನದಿಂದ ದಿನದ 5 ದಿನಗಳ ವರೆಗೆ ದಿನದ 24 ಗಂಟೆಯೂ ಪೂಜಾ ಕೈಂಕರ್ಯಗಳು ನೆರವೇರಲಿದೆ. ಭಕ್ತರಿಗೆ ಅನ್ನ / ಪ್ರಸಾದ ವಿನಿಯೋಗವೂ ಇರಲಿದೆ. ಇದನ್ನೂ ಓದಿ: ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

    Mumbai Ganesha

    ಚಿನ್ನ ಬೆಳ್ಳಿ ಇತರ ಆಭರಣಗಳಿಗಾಗಿ 67.03 ಕೋಟಿ ರೂ.ಗಳನ್ನ ಖರ್ಚು ಮಾಡಲಾಗಿದೆ. ಮಂಡಲ್‌ನ ಸ್ವಯಂಸೇವಕರು, ಅಡುಗೆಯವರು, ಪುರೋಹಿತರು, ಪಾದರಕ್ಷೆ ಮಳಿಗೆ ಕೆಲಸಗಾರರು, ಸೇವಕರು ಮತ್ತು ಭದ್ರತಾ ಸಿಬ್ಬಂದಿಗೆ 375 ಕೋಟಿ ವಿಮಾ ಸುರಕ್ಷತೆ ಇರಲಿದೆ. ಇದರೊಂದಿಗೆ ಸಾರ್ವಜನಿಕ ಹೊಣೆಗಾರಿಕೆ, ಪೆಂಡಾಲ್‌, ಕ್ರೀಡಾಂಗಣ ಮತ್ತು ಭಕ್ತರ ಸುರಕ್ಷತೆಗಾಗಿ 30 ಕೋಟಿ ರೂ. ಮೀಸಲಿಡಲಾಗಿದೆ. ಸ್ಥಳದಲ್ಲಿ ಪೀಠೋಪಕರಣಗಳು, ನೆಲೆವಸ್ತುಗಳು, ಡಿಜಿಟಲ್ ಸ್ವತ್ತುಗಳು ಮತ್ತು ಇತರ ಸಾಮಗ್ರಿಗಳಿಗೆ ಪ್ರಮಾಣಿತ ಅಗ್ನಿಶಾಮಕ ಮತ್ತು ವಿಶೇಷ ಅಪಾಯ ವಿಮೆಯನ್ನು ಸಹ ಒಳಗೊಂಡಿದೆ.

  • ಶ್ರೀಮಂತ ಗಣಪನಿಗೆ ಈ ಬಾರಿ 400 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?

    ಶ್ರೀಮಂತ ಗಣಪನಿಗೆ ಈ ಬಾರಿ 400 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?

    ದೇಶಾದ್ಯಂತ ಗಣೇಶ ಹಬ್ಬದ (Ganesh Chaturthi 2024) ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನ ಕೂರಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.

    ಗಣೇಶ ಚತುರ್ಥಿ ಹಬ್ಬ ಆಚರಣೆಗೆಂದೇ ದೇಶಾದ್ಯಂತ ನಾನಾ ಕಡೆ ಗಣೇಶ ಮೂರ್ತಿಗಳ (Ganesha Idol) ಮಾರಾಟ ನಡೆಯುತ್ತಿದೆ. ಗಲ್ಲಿ-ಗಲ್ಲಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಪೂಜೆ ನಡೆಯುತ್ತದೆ. ಬಳಿಕ ವಿಸರ್ಜನೆಯೂ ಅಷ್ಟೇ ವಿಜ್ರಂಭಣೆಯಿಂದ ಆಗುತ್ತದೆ. ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ಭಾರೀ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲ್ (GSB Seva Mandal) ಕೂಡ ಒಂದು. ಪ್ರತಿ ಬಾರಿಯೂ ಗಣೇಶ್‌ ಮೂರ್ತಿ, ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸುತ್ತಲೇ ಗಮನ ಸೆಳೆಯುವ ಮಂಡಲ್‌ ಈ ಬಾರಿಯೂ ವಿಶ್ವದ ಶ್ರೀಮಂತ ಗಣಪನನ್ನು ಕೂರಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಎಸ್‌ಬಿ ಗಣಪನಿಗೆ ಈ ಬಾರಿ ದಾಖಲೆಯ 400.58 ಕೋಟಿ ರೂ. ವಿಮೆ ಮಾಡಲಾಗಿದೆ. ಆದ್ರೆ ಈ ಗಣೇಶ ಮೂರ್ತಿಯ ಅಧಿಕೃತ ಬೆಲೆ ಎಷ್ಟು ಎಂದು ಮಂಡಲ್‌ ಸುಳಿವು ಬಿಟ್ಟುಕೊಟ್ಟಿಲ್ಲ.

    ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಈ ಬಾರಿ 5 ದಿನಗಳ ಗಣೇಶೋತ್ಸವ ಆಚರಿಸಲಿದೆ. ಸೆಪ್ಟೆಂಬರ್ 7 ರಿಂದ 11ರ ವರೆಗೆ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಲಿದೆ. ಜಿಎಸ್‌ಬಿ ಗಣೇಶನ ದರ್ಶನ ಪಡೆಯಲು ಈಗಾಗಲೇ ಭಕ್ತರು ಸಜ್ಜಾಗಿದ್ದಾರೆ. ಆದರೆ ಗಣೇಶನ ಅನಾವರಣ ಸೆಪ್ಟೆಂಬರ್ 5 ರಂದು ಜಿಎಸ್‌ಬಿ ಸೇವಾ ಮಂಡಲ ಮಾಡಲಿದೆ. ಜಿಎಸ್‌ಬಿ ಸೇವಾ ಮಂಡಲ್‌ ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 70ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ.

    ಜಿಎಸ್‌ಬಿ ಮಂಡಲ್‌ ಈ ಬಾರಿ ಗಣೇಶಮೂರ್ತಿಗೆ ಬರೋಬ್ಬರಿ 66 ಕೆಜಿ ಚಿನ್ನ, 325 ಕೆಜಿ ಬೆಳ್ಳಿ ಹಾಗೂ ಇತರ ಅತ್ಯಮೂಲ್ಯ ಚಿನ್ನಾಭರಣಗಳನ್ನು ತೊಡಿಸಲಾಗುತ್ತದೆ. ಹೀಗಾಗಿ ಇದಕ್ಕೆ ಅಷ್ಟೇ ದುಬಾರಿ ಮೊತ್ತದ ವಿಮೆ ಮಾಡಿಸಲಾಗಿದೆ. 400.58 ಕೋಟಿ ರೂ. ವಿಮೆ ಮೊತ್ತಕ್ಕೆ ಪ್ರಿಮಿಯಂ ಎಷ್ಟು ಪಾವತಿ ಮಾಡಲಾಗಿದೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇದನ್ನೂ ಓದಿ: ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!

    ಪ್ರತೀ ವರ್ಷದಂತೆ ಈ ವರ್ಷವೂ 5 ದಿನಗಳ ಗಣೇಶೋತ್ಸವ ಆಚರಿಸಲಾಗುತ್ತಿದೆ. ಎಂದಿನಂತೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಸೇರಿದಂತೆ ಯಾವುದೇ ಹಾನಿಕಾರ ವಸ್ತುಗಳ ಬಳಕೆ ಮಾಡಿಲ್ಲ. ಪೂರ್ತಿಯಾಗಿ ಮಣ್ಣಿನ ಗಣಪನನ್ನ ಕೂರಿಸಿ ಪೂಜೆ ಮಾಡಲಾಗುತ್ತದೆ ಎಂದು ಜಿಎಸ್‌ಬಿ ಸೇವಾ ಮಂಡಲ್ ಮುಖ್ಯಸ್ಥ ಅಮಿತ್ ದಿನೇಶ್ ಪೈ ಹೇಳಿದ್ದಾರೆ. ಇದನ್ನೂ ಓದಿ: ಗಣಪನಿಗಾಗಿ ವಿಭಿನ್ನ ಬಗೆಯ ಮೋದಕ ಹೀಗೆ ಮಾಡಿ!

    ಕಳೆದ ವರ್ಷ ಇದೇ ರೀ ವೈಭವೋಪೇತ ಗಣೇಶಮೂರ್ತಿಯೊಂದನ್ನ ಸೇವಾ ಮಂಡಲ ಪ್ರತಿಷ್ಠಾಪಿಸಿತ್ತು. ಈ ಗಣೇಶನ ಮೂರ್ತಿಯ ಅಲಂಕಾರಕ್ಕೆ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿ ಬಳಕೆ ಮಾಡಲಾಗಿತ್ತು. ಕಳೆದ ವರ್ಷ 360.40 ಕೋಟಿ ರೂ. ವಿಮೆ ಮಾಡಲಾಗಿತ್ತು. ಈ ಬಾರಿ ಈ ಮೊತ್ತವನ್ನು ಏರಿಕೆ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿದೆ. ಸ್ವಯಂ ಸೇವಕರು, ಕಾರ್ಯಕರ್ತರು ಎಲ್ಲರು ಸಜ್ಜಾಗಿದ್ದಾರೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾಳ್ಮೆಯಿಂದ ದರ್ಶನ ಮಾಡಬೇಕು. ಯಾವುದೇ ನೂಕು ನುಗ್ಗಲಿಗೆ ಅವಕಾಶವಿಲ್ಲ . ಇದನ್ನೂ ಓದಿ: ಗುಡಿ ಗೋಪುರವಿಲ್ಲದ ʼಸೌತಡ್ಕ ಮಹಾಗಣಪತಿʼಗೆ ಬಯಲೇ ಆಲಯ!

    5 ದಿನ, 24 ಗಂಟೆಯೂ ಪೂಜೆ:
    ದಕ್ಷಿಣ ಭಾರತೀಯ ಶೈಲಿಯ ಈ ವಿಗ್ರಹವನ್ನು ಜೇಡಿಮಣ್ಣು ಮತ್ತು ಹುಲ್ಲಿನಿಂದ ತಯಾರಿಸಲಾಗಿದೆ. ವಿಘ್ನೇಶ್ವರನನ್ನು ಕೂರಿಸಿದ ದಿನದಿಂದ ದಿನದ 5 ದಿನಗಳ ವರೆಗೆ ದಿನದ 24 ಗಂಟೆಯೂ ಪೂಜಾ ಕೈಂಕರ್ಯಗಳು ನೆರವೇರಲಿದೆ. ಪ್ರತಿದಿನ ದಿನಕ್ಕೆ 20 ಸಾವಿರದಂತೆ 5 ದಿನಗಳಲ್ಲಿ 1 ಲಕ್ಷ ಭಕ್ತರಿಗೆ ಅನ್ನದಾನ ಮತ್ತು ದೇವರ ಸೇವೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಪ್ರದರ್ಶನಗಳು ಇರಲಿವೆ. 5 ದಿನಗಳಲ್ಲಿ ಒಟ್ಟು 60,000 ಪೂಜೆಗಳನ್ನು ನೆರವೇರಿಸಲಾಗುತ್ತದೆ. ಈ ಬಾರಿ ಸುಮಾರು 5 ಲಕ್ಷ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ಸಾಧ್ಯೆಯಿದೆ ಎಂದು ಮಂಡಲದ ಭಕ್ತರು ತಿಳಿಸಿದ್ದಾರೆ.

  • ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 33 ಷರತ್ತುಗಳು

    ತುಮಕೂರು: ಗೌರಿ-ಗಣೇಶ ಮೂರ್ತಿ (Ganesha Idol) ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಸಮಯದಲ್ಲಿ ಆಯೋಜಕರು ಜಿಲ್ಲಾಧಿಕಾರಿಗಳ (Tumkur DC) ಆದೇಶದಂತೆ ಪ್ರಸಾದ ವಿತರಿಸಲು ಕಡ್ಡಾಯವಾಗಿ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಪಟೂರು ತಾಲೂಕು ದಂಡಾಧಿಕಾರಿ ಪವನ್‌ಕುಮಾ‌ರ್ ತಿಳಿಸಿದ್ದಾರೆ.

    ತಾಲ್ಲೂಕು ಆಡಳಿತ ಸೌಧದಲ್ಲಿ ಗೌರಿ-ಗಣೇಶ ಮೂರ್ತಿ (Gowri Ganesha Idol) ಪ್ರತಿಷ್ಠಾಪನೆಗೆ ಸಂಬಧಿಸಿದಂತೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನೆಡಸಿ ವಿವಿಧ ಇಲಾಖೆಗಳ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ-ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಏಕ ಗವಾಕ್ಷಿ ತಂತ್ರಾಶಗಳ ಮೂಲಕ ಅನುಮತಿ ಪಡೆಯಬೇಕು ಎಂದು ದಂಡಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಂಡರಿಂದ ವ್ಹೀಲಿಂಗ್‌ ಹುಚ್ಚಾಟ; ಬೈಕ್‌ಗಳನ್ನು ಕಿತ್ತುಕೊಂಡು ಫ್ಲೈಓವರ್‌ನಿಂದ ಎಸೆದ ಸಾರ್ವಜನಿಕರು

    ಏನು ಆ 33 ಷರತ್ತುಗಳು?
    ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಗಣೇಶ ಮೂರ್ತಿ ಪ್ರತಿಷ್ಟಾಪನೆ ಸಂದರ್ಭದಲ್ಲಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ಗಣೇಶ ಮಂಟಪದಲ್ಲಿ ನಿರ್ಮಿಸಬೇಕು. ಮಂಟಪದ ಹತ್ತಿರ ನೀರು, ಮರಳು ಸಂಗ್ರಹಿಸಬೇಕು. ಗಣೇಶ ಮಂಟಪದ ಹತ್ತಿರ ಬೆಳಕಿನ ವ್ಯವಸ್ಥೆ ಆಯೋಜನೆ, ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ವಿದ್ಯುತ್ ಕಂಬ, ದೂರವಾಣಿ ಕಂಬಗಳಿಗೆ ಆಳವಡಿಸದಂತೆ ಎಚ್ಚರಿಕೆ ವಹಿಸಬೇಕು. ಜನಸಂದಣಿ ನಿಯಂತ್ರಿಸಲು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಲುಗಳಿರಬೇಕು. ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಉಪಯೋಗಿಸಬೇಕು.

    ಡಿಜೆ ಹಾಗೂ ಪ್ರಚೋದನಕಾರಿ ಭಾಷಣಗಳಿಗೆ ಅವಕಾಶ ಇರುವುದಿಲ್ಲ, ಮಂಟಪಗಳ ಹತ್ತಿರ ಆಕ್ರಮ ಮಧ್ಯ ಸೇವನೆ ಮಾಡುವುದನ್ನು ಕಡ್ಡಾಯವಾಗಿ ನಿಯಂತ್ರಿಸಲಾಗಿದೆ. ಗಣಪತಿ ಮಂಟಪದ ಹತ್ತಿರ ಪ್ರಥಮ ಚಿಕಿತ್ಸಾ ಪಟ್ಟಿಗೆ ಇಡುವುದು, ಪಿಒಪಿ ಮತ್ತು ಬಣ್ಣಲೇಪಿತ ಗಣೇಶಗಳನ್ನು ಹೊರತುಪಡಿಸಿ ಮಣ್ಣಿನಿಂದ ಮಾಡಿರುವ ಗಣಪತಿಯನ್ನು ಸ್ಥಾಪನೆಗೆ ಅವಕಾಶ ಮಾಡಿಕೊಡುವುದು. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಕಿರಿಕ್ – ಊಟ ನೀಡದ್ದಕ್ಕೆ ಡಾಬಾ ಮಾಲೀಕನಿಗೆ ಚಾಕು ಇರಿತ

    ನಗರ ಸಭೆಯಿಂದ ಸೂಚಿಸಿರುವ ಕೆರೆಯ ಆವರಣದ ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ಮಾಡಬೇಕು ಹಾಗೂ ಪಂಚಾಯಿತಿಯ ಪಿಡಿಒ ತಿಳಿಸಿರುವಂತೆ ಗಣಪತಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ಮಾಡಬೇಕು. ಪ್ರಸಾದ ವಿನಿಯೋಗ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಇಲಾಖೆ ವತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ 133 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

    ಸಭೆಯಲ್ಲಿ ನಗರಸಭೆ ಪೌರಯುಕ್ತ ವಿಶ್ವೇಶ್ವರಯ್ಯ ಬದರಗಡೆ, ತಾಪಂ ಇಒ ಸುದರ್ಶನ್, ನಗರ ಆರಕ್ಷಕ ಅಧಿಕಾರಿ ವೆಂಕಟೇಶ್, ಬೆಸ್ಕಾಂ ಎಇಇ ಮನೋಹರ್, ತೋಟಗಾರಿಕೆ ಅಧಿಕಾರಿ ಚಂದ್ರಶೇಖರ್, ಆರ್‌ಟಿಒ ಅಧಿಕಾರಿ ಭಗವಂತ್ ದಾಸ್, ತಾಲೂಕು ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿ, ಅಗ್ನಿಶಾಮಕ ದಳದ ಭರತ್ ಹಾಜರಿದ್ದರು. ಇದನ್ನೂ ಓದಿ: ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

  • ಪೊಲೀಸ್ ಇಲಾಖೆಯಿಂದ ಟಫ್ ರೂಲ್ಸ್ – ಗಣೇಶೋತ್ಸವಕ್ಕೆ ಏನೆಲ್ಲಾ ನಿರ್ಬಂಧ?

    ಪೊಲೀಸ್ ಇಲಾಖೆಯಿಂದ ಟಫ್ ರೂಲ್ಸ್ – ಗಣೇಶೋತ್ಸವಕ್ಕೆ ಏನೆಲ್ಲಾ ನಿರ್ಬಂಧ?

    ಬೆಂಗಳೂರು: ಗಣೇಶೋತ್ಸವ (Ganesha Chaturthi) ಸಂಭ್ರಮಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವವರಿಗೆ ನಗರ ಪೊಲೀಸ್ ಇಲಾಖೆ (Bengaluru City Police), ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಮಾರ್ಗಸೂಚಿಗಳನ್ನ (Ganesha Festival Guidelines) ಜಾರಿಗೊಳಿಸಿದೆ.

    ಅನುಮತಿ, ಮೆರವಣಿಗೆ, ಸುರಕ್ಷತಾ ಕ್ರಮಗಳು ಸೇರಿದಂತೆ ವಿವಿಧ ವಿಷಯಗಳನ್ನ ಉಲ್ಲೇಖಿಸಲಾಗಿದೆ. ನಿಯಮಗಳನ್ನ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ನಗರ ಪೊಲೀಸ್ ಆಯುಕ್ತ ದಯಾನಂದ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಸಾರ್ವಜನಿಕ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಗೈಡ್‌ಲೈನ್ಸ್

    • ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ.
    • ಚೌತಿ ಕಾರ್ಯಕ್ರಮಕ್ಕೆ ಕಾನೂನು ಬಾಹಿರವಾಗಿ ವಂತಿಕೆ ಸಂಗ್ರಹ ಮಾಡುವಂತಿಲ್ಲ
    • ಕಾರ್ಯಕ್ರಮ ನಡೆಸಲು ಚಪ್ಪರ, ಶಾಮಿಯಾನ, ಪೆಂಡಾಲ್‌ಗೆ ವಿಶೇಷ ಅನುಮತಿ ಪಡೆಯಬೇಕು.
    • ವಿವಾದಿತ ಜಾಗದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ.
    • ಮೆರವಣಿಗೆ ವೇಳೆ ಏನೇ ಅಹಿತಕರ ಘಟನೆ ನಡೆದರೆ ಸಂಘಟಕರೇ ನೇರ ಹೊಣೆ
    • ಆಯೋಜಕರು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳು ಹಾಗೂ ಅಡುಗೆ ಮಾಡುವಂತಿಲ್ಲ.
    • ಗಣೇಶೋತ್ಸವದ ವೇದಿಕೆ ಸುತ್ತಮುತ್ತ ಸಿಸಿಟಿವಿ ಸೇರಿದಂತೆ ಅಗತ್ಯ ಕ್ರಮವಹಿಸಬೇಕು.
    • ಮೂರ್ತಿ ಸ್ಥಾಪನೆ ಮಾಡಿರುವ ಜಾಗದಲ್ಲಿ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಒಟ್ಟಾರೆ ಬೆಂಕಿ ಸಂಬಂಧಿಸಿದ ಸಾಮಗ್ರಿಗಳನ್ನು ಇಡಬಾರದು.
    • ವಿದ್ಯುತ್ ಸಂಪರ್ಕ ಬೇಕಾಗಿರುವ ಬಗ್ಗೆ ಬೆಸ್ಕಾಂ ಮತ್ತು ಅಗ್ನಿ ಶಾಮಕ ಇಲಾಖೆಯ ಅನುಮತಿ ಕಡ್ಡಾಯ.
    • ಧ್ವನಿ ವರ್ಧಕ ಬಳಕೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಡೆಡ್ ಲೈನ್.
    • ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ಸಿಸ್ಟಮ್ ಅಳವಡಿಕೆಗೆ ಅವಕಾಶ ಇಲ್ಲ.
    • ಮೆರವಣಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಾರ್ಥನೆ ಸ್ಥಳಗಳ ಮುಂಭಾಗದಲ್ಲಿ ಪಟಾಕಿ, ಸಿಡಿ ಮದ್ದು ನಿಷೇಧ.
    • ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮಕ್ಕೆ ರಾತ್ರಿ 10 ವರೆಗೆ ಮಾತ್ರ ಅವಕಾಶ ಇದನ್ನೂ ಓದಿ: ಚೈತ್ರಾ ಗ್ಯಾಂಗ್ ಮಾದರಿಯಲ್ಲೇ ಮತ್ತೊಂದು ಪ್ರಕರಣ – ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]