ಹಾವೇರಿ: ತಾಲೂಕಿನ ನೆಗಳೂರು ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವನ್ನ ಭಾವೈಕ್ಯತೆಯಿಂದ ಆಚರಿಸಲಾಯಿತು. ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರು ಗಣೇಶನಿಗೆ ಪೂಜೆ ಸಲ್ಲಿಸಿದರು.
ಸರ್ವಧರ್ಮ ಮಹಾ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಭಾಂದವರು, ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದ್ದಾರೆ. ಹಿಂದೂ-ಮುಸ್ಲಿಂ ಬಾಂಧವರೆಲ್ಲ ಸೇರಿ ಗಣಪನಿಗೆ ಪೂಜೆ ಸಲ್ಲಿಸಿ ಮಾರ್ಲಾಪಣೆ ಮಾಡಿದರು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಈದ್ ಮಿಲಾದ್ ಹಬ್ಬ ಮೆರವಣಿಗೆ ಮಾಡಿ ಅರ್ಥಪೂರ್ಣವಾಗಿ ಆಚರಿಸಿದರು.
ಪ್ರತಿ ವರ್ಷ ಗ್ರಾಮದಲ್ಲಿ ಸರ್ವಧರ್ಮ ಆಶಯದೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತದೆ. ವಿವಿಧ ಧರ್ಮದ ಜನರೂ ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ಸಹ ಪ್ರಾರ್ಥನೆ ಸಲ್ಲಿಸಿ ಪೂಜೆಯನ್ನ ಮಾಡುತ್ತಾರೆ.
ಬೆಂಗಳೂರು: ಕನ್ನಡದ ಸುದ್ದಿವಾಹಿನಿ ನಿಮ್ಮ ʻಪಬ್ಲಿಕ್ ಟಿವಿʼ (Public TV) ಕಚೇರಿಯಲ್ಲಿ 13ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ ಎಳೆಯಲಾಯಿತು. ಭಾನುವಾರ ನಗರದ ಜೆ.ಪಿ ಪಾರ್ಕ್ ಕೆರೆಯಲ್ಲಿ ಗಣೇಶ ಮೂರ್ತಿ (Ganesha Idol) ವಿಸರ್ಜನೆ ಮಾಡಲಾಯಿತು.
ʻಪಬ್ಲಿಕ್ ಟಿವಿʼಯಲ್ಲಿ ಸತತವಾಗಿ 13 ವರ್ಷಗಳಿಂದ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅದರಂತೆ ಈ ಬಾರಿಯೂ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಹೋದ್ಯೋಗಿಗಳು ಹಾಡು, ಕುಣಿತ ಪ್ರದರ್ಶಿಸುವ ಮೂಲಕ ಮೆರವಣಿಗೆಯೊಂದಿಗೆ ಕೊಂಡೊಯ್ದು ಗಣೇಶಮೂರ್ತಿಯನ್ನು ಜೆ.ಪಿ ಪಾರ್ಕ್ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಇದನ್ನೂ ಓದಿ: ಮಸೀದಿಯಲ್ಲಿ ಗಣೇಶನ ಪ್ರತಿಷ್ಠಾಪನೆ; ಭಾವೈಕ್ಯತೆ ಮೆರೆದ ಗ್ರಾಮಸ್ಥರು
ಈ ಬಾರಿ 5 ದಿನಗಳ ಕಾಲ ಕಚೇರಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಸಹೋದ್ಯೋಗಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಸಹೋದ್ಯೋಗಿಗಳಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಭಾನುವಾರ ಬೆಳಗ್ಗೆ ಪೂಜೆ ನೆರವೇರಿಸಿದ ಬಳಿಕ ಪ್ರಸಾದ ವಿತರಣೆ ಮಾಡಿ, ಬಳಿಕ ಗಣೇಶ ಮೂರ್ತಿಯನ್ನ ವಿಸರ್ಜನೆ ಮಾಡಲಾಯಿತು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
ಗದಗ: ಮಸೀದಿಯೊಳಗೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುವ ಮೂಲಕ ಭಾವೈಕ್ಯತೆ ಮೆರೆದ ಘಟನೆ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ (Sandigawada) ಗ್ರಾಮದಲ್ಲಿ ಕಂಡುಬಂದಿದೆ.
ಜಾತಿ, ಧರ್ಮಗಳ ಹೆಸರಿನಲ್ಲಿ ಕಿತ್ತಾಟ ಮಾಡುವವರಿಗೆ ಸಂದಿಗವಾಡ ಗ್ರಾಮಸ್ಥರು ಮಾದರಿಯಾಗಿದೆ. ಕಳೆದ 3 ವರ್ಷಗಳಿಂದ ಸಂದಿಗವಾಡದ ಮಸೀದಿಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ. ಸ್ವತಃ ಮುಸ್ಲಿಂ ಯುವಕರೇ ಸೇರಿ ಗಣೇಶ ಮೂರ್ತಿಯನ್ನು ತಂದು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದು ಗಮನಾರ್ಹವಾಗಿದೆ. ಮುಸ್ಲಿಂ ಯುವಕರ ಜೊತೆಗೆ ಹಿಂದುಗಳು ಸೇರಿ ಒಟ್ಟಾಗಿ ಗಣೇಶನ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮರಸ್ಯ, ಭಾವೈಕ್ಯತೆಯಿಂದ ಗಣೇಶ ಹಬ್ಬವನ್ನು (Ganesha Chaturthi) ಆಚರಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ: ಯತ್ನಾಳ್ ಹೊಸ ಬಾಂಬ್
ದೀಪಾವಳಿ, ದಸರಾ, ಯುಗಾದಿ, ಹೋಳಿ, ಜಾತ್ರೆ, ಮೊಹರಂ, ರಂಜಾನ್, ಈದ್‌ಮಿಲಾದ್, ಗಣೇಶ ಚತುರ್ಥಿ ಹೀಗೆ ಗ್ರಾಮದಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳನ್ನು ಯಾವುದೇ ಜಾತಿ-ಭೇದವಿಲ್ಲದೇ ಆಚರಿಸಿಕೊಂಡು ಬರುವ ಮೂಲಕ ಸಂದಿಗವಾಡ ಗ್ರಾಮಸ್ಥರು ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭ ಪ್ರಾರಂಭಿಸುವ ಮೊದಲು ಯಾವುದೇ ಅಡಚಣೆ ಅಥವಾ ತೊಂದರೆ ಆಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಗಣೇಶನಿಗೆ ಹಲವು ನಾಮ. ಗಜಾನನ, ಗಣಪತಿ, ವಕ್ರತುಂಡ, ವಿನಾಯಕ, ಏಕದಂತ, ಗಣೇಶ ಹೀಗೆ ಹತ್ತು ಹಲವು ಹೆಸರುಗಳಿಂದ ಗಣಪತಿಯನ್ನು ಆರಾಧಿಸಲಾಗುತ್ತದೆ. ಅವುಗಳಲ್ಲಿ ಏಕದಂತ ಎನ್ನುವ ಹೆಸರೂ ಒಂದು. ಗಣೇಶನ ಒಂದು ದಂತ ಮುರಿದಿರುವ ಕಾರಣ ಆತನನ್ನು ಏಕದಂತ ಎಂದು ಕರೆಯಲಾಗುತ್ತದೆ. ಗಣೇಶ ಏಕದಂತನಾಗಲು ಕಾರಣವೇನು? ಪುರಾಣದ ಕಥೆ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಪರಶುರಾಮ ಮತ್ತು ಗಣೇಶನ ನಡುವೆ ಯುದ್ಧ:
ಒಮ್ಮೆ ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ್ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು. ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ. ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವನ್ನು ನಾನು ಶೀಘ್ರವಾಗಿ ಭೇಟಿ ಆಗಲೇಬೇಕು ಎಂದು ಪರಶುರಾಮರು ಗಣೇಶನಿಗೆ ತಿಳಿಸಿದರು. ಆದರೆ ಗಣೇಶ ಅವರನ್ನು ಒಳಗೆ ಬಿಡುವುದಿಲ್ಲ.
ಇದರಿಂದ ಕೋಪಗೊಂಡ ಪರಶುರಾಮರು ನನ್ನನ್ನು ಒಳಗೆ ಬಿಡದಿದ್ದರೆ ನನ್ನೊಂದಿಗೆ ಯುದ್ಧ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ನಾನು ಗೆದ್ದರೆ ಶಿವನನ್ನು ಭೇಟಿಯಾಗಲು ನನ್ನನ್ನು ಒಳಗೆ ಬಿಡಬೇಕು ಎಂದು ಪರಶುರಾಮರು ಗಣೇಶನಿಗೆ ಸವಾಲೆಸೆದರು. ಗಣೇಶನು ಯುದ್ಧದ ಸವಾಲನ್ನು ಸ್ವೀಕರಿಸಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಯುದ್ಧದ ಸಮಯದಲ್ಲಿ, ಪರಶುರಾಮರು ತಮ್ಮ ಕೊಡಲಿಯಿಂದ ಗಣೇಶನ ಮೇಲೆ ದಾಳಿ ಮಾಡಿದರು. ಇದನ್ನು ಎದುರಿಸಲು ಗಣೇಶ ತನ್ನ ಎಡಗಡೆಯ ದಂತವನ್ನು ಬಳಸಿದರು. ಇದರ ಪರಿಣಾಮವಾಗಿ ಗಣೇಶನ ದಂತ ಮುರಿಯುತ್ತದೆ. ಗಣೇಶನ ಒಂದು ಹಲ್ಲು ಮುರಿದ ಕಾರಣ ಆತನನ್ನು ಏಕದಂತ ಎಂದು ಕರೆಯುತ್ತಾರೆ.
ಗಣೇಶನಷ್ಟೇ ಪರಶುರಾಮರು ಯುದ್ಧದಲ್ಲಿ ನಿಪುಣರಾಗಿರದ್ದರು. ಇವರಿಬ್ಬರ ನಡುವಿನ ಯುದ್ಧ ಎನ್ನುವಂತಹದ್ದು ಭಯಾನಕವಾಗಿದ್ದು, ಈ ಯುದ್ಧದಲ್ಲಿ ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ಗಣೇಶನು ಒಂದೇ ದಂತವನ್ನು ಹೊಂದಿದ್ದು, ಏಕದಂತ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತಾನೆ.
ಮಹಾಭಾರತದ ಕಥೆ:
ಮತ್ತೊಂದು ಕಥೆಯ ಪ್ರಕಾರ, ಮಹಾಭಾರತವನ್ನು ಗಣೇಶ ಮಹಾಭಾರತವನ್ನ ಬರೆಯುವ ಸಮಯದಲ್ಲಿ, ಮಹರ್ಷಿ ವೇದವ್ಯಾಸರು ಗಣೇಶ ನಾನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗಬೇಕು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿರುತ್ತಾರೆ. ಇದಕ್ಕೆ ಒಪ್ಪಿ ಗಣೇಶ ಬರೆಯುತ್ತಿರುತ್ತಾನೆ. ಆದರೆ ಬರೆಯುವಾಗ ಯಾವುದೋ ಸಮಸ್ಯೆ ಎದುರಾಗುತ್ತದೆ. ತಕ್ಷಣ ಗಣೇಶ ತನ್ನ ದಂತವನ್ನು ಮುರಿದು ಅದರಲ್ಲಿ ಬರೆಯಲು ಆರಂಭಿಸಿದ ಎನ್ನುವ ನಂಬಿಕೆ ಇದೆ.
ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಈ ಬಾರಿಯ ಗಣೇಶ ಚತುರ್ಥಿ ಹಬ್ಬವನ್ನ ಅಮ್ಮನ ಮನೆಯಲ್ಲಿ ಆಚರಿಸಿದ್ದಾರೆ. ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ತವರು ಮನೆಯಲ್ಲಿ ಗಣೇಶ ಪೂಜೆ ಮಾಡಿ ಬಾಳೆ ಎಲೆ ಊಟ ಸವಿದಿದ್ದಾರೆ. ರಾಧಿಕಾ ಕೊಂಕಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಮಾಡುವ ಖಾದ್ಯದ ಲಿಸ್ಟ್ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ ರಾಧಿಕಾ. ಹಬ್ಬದ ಫೋಟೋಗಳನ್ನ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಬಾರಿ ಹಬ್ಬ ಅಮ್ಮನ ಮನೆಯಲ್ಲಿ’ ಎಂದು ಹಬ್ಬದ ತಯಾರಿಯ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ. ಪುಟ್ಟ ಮಕ್ಕಳು ಅಮ್ಮನಿಗೆ ಅಡುಗೆ ಮಾಡಲು ಸಹಾಯ ಮಾಡ್ತಿರುವ ಫೋಟೋ ಹಾಗೂ ಊಟ ಮಾಡುವ ಎಲೆಯಲ್ಲಿ ಇದ್ದ ಖಾದ್ಯಗಳನ್ನೂ ತೋರಿಸಿದ್ದಾರೆ. ಮಕ್ಕಳು ಗಣೇಶನಿಗೆ ಆರತಿ ಮಾಡಿ ಪೂಜೆ ಮಾಡಿದ್ದಾರೆ. ಕೊಂಕಣಿ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬಕ್ಕೆ ವಿಶೇಷವಾಗಿ ಮಾಡಲಾಗುವ ವೈನಡೋರಿಯಿಂದ ಹಿಡಿದು, ಪಥೋಳಿ, ಮೋದಕ, ಚಕ್ಲಿ, ನೆವ್ರಿ, ಫೋಡಿ, ಅಂಬೊಡೆ, ಕಾರಟೆ ಘಸ್ಸಿ ಎಲ್ಲವೂ ತಮಗೆ ಸಿಕ್ಕಿತು ಎಂದು ಹೇಳಿ ಖುಷಿಪಟ್ಟಿದ್ದಾರೆ ರಾಧಿಕಾ. ಊಟ ಹಾಗೂ ಪೂಜೆಯ ತಯಾರಿಗಾಗಿ ಪುಟ್ಟ ಮಕ್ಕಳು ಮಾಡಿರುವ ಸಹಾಯ ಹೃದಯ ಹಾಗೂ ಹೊಟ್ಟೆಯನ್ನು ತುಂಬಿತು ಎಂದಿದ್ದಾರೆ ರಾಧಿಕಾ. ಇದನ್ನೂ ಓದಿ: ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ
ಯಶ್ ಹಾಗೂ ರಾಧಿಕಾ ಸಕಲ ಹಬ್ಬಗಳನ್ನ ಸಂಪ್ರದಾಯವಾಗಿ ಆಚರಿಸುತ್ತಾರೆ. ಈ ಬಾರಿ ಯಶ್ ಮುಂಬೈನಲ್ಲಿ ಬಿಡುವಿಲ್ಲದೆ ಟಾಕ್ಸಿಕ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. 45 ದಿನಗಳ ಕಾಲ ಫೈಟ್ ಸೀಕ್ವೆನ್ಸ್ ಜರುಗಲಿದೆ. ಹೀಗಾಗಿ ಕುಟುಂಬದ ಜೊತೆ ಯಶ್ ಗೌರಿ-ಗಣೇಶ ಹಬ್ಬ ಆಚರಿಸಲಿಲ್ಲ. ಹೀಗಾಗಿ, ರಾಧಿಕಾ ಮಕ್ಕಳ ಸಮೇತ ಈ ಬಾರಿ ಬೆಂಗಳೂರಿನಲ್ಲೇ ಇರುವ ಅಮ್ಮನ ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ.
ಗದಗ: ಗಣೇಶ್ ಹಬ್ಬದ ಸಂದರ್ಭದಲ್ಲಿ ಯಾರಾದ್ರು ಗಲಾಟೆ, ತೊಂದರೆ ಮಾಡಿದ್ರೆ ಅಥವಾ ಶಾಂತಿ ಭಂಗ ಮಾಡಿದ್ರೆ ಅಂತವರ ಮೇಲೆ ಸೂಕ್ತ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ತೇವೆ ಎಂದು ಗದಗ (Gadag) ಎಸ್ಪಿ ರೋಹನ್ ಜಗದೀಶ್ ಖಡಕ್ ವಾರ್ನ್ ನೀಡಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೆ ಸೂಕ್ಷ್ಮ, ಅತಿಸೂಕ್ಷ್ಮ, ಸಾಧಾರಣ ಎಂಬ ಪ್ರದೇಶಗಳನ್ನು ಗುರುತಿಸಲಾಗಿದೆ. ಎಲ್ಲಾ ಕಡೆಗಳಲ್ಲಿ ಸೂಕ್ತ ರೀತಿಯ ಭದ್ರತೆ ಕೈಗೊಳ್ಳಲಾಗಿದೆ. ಪೂರ್ವಭಾವಿಯಾಗಿ ರೌಡಿಶೀಟರ್, ಗುಂಡಾಗಳಿಗೆ ಈಗಾಗಲೇ ವಾರ್ನ್ ಮಾಡಿದೆ. ಅವರಿಂದ ಮುಚ್ಚಳಿಕೆ ಸಹ ಬರಿಸಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕೇಸ್; 5 ಕೋಟಿ ಮೌಲ್ಯದ ಆಸ್ತಿಗೆ ಇಡಿ ತಾತ್ಕಾಲಿಕ ಮುಟ್ಟುಗೋಲು
ಇನ್ನು ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ, ಗಣಪತಿ ಹೋಗುವ ಮಾರ್ಗದಲ್ಲಿ ಸಿಸಿ ಕ್ಯಾಮೆರಾಗಳು ಹಾಗೂ ಡ್ರೋನ್ ಕ್ಯಾಮೆರಾಗಳ ನಿಗಾವಹಿಸಲಾಗಿದೆ. ಗದಗ ಜಿಲ್ಲೆಯಾದ್ಯಂತ ಗಣೇಶ ಹಬ್ಬ ವಿಶೇಷವಾಗಿ ಹಾಗೂ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಸಾರ್ವಜನಿಕರ ಹಿತಾಸಕ್ತಿ ಹಾಗೂ ಭದ್ರತೆಗಾಗಿ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಪ್ಪಿ ಮನೆಯಲ್ಲಿ ಗಣೇಶ ಹಬ್ಬ ಭಲೇ ಜೋರು
ಜಿಲ್ಲೆಯಲ್ಲಿ ಡಿಜೆ ಬಳಕೆಯ ಮಾತೇ ಇಲ್ಲ
ಇನ್ನು ಡಿಜೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯ ನಿರ್ದೇಶನ ಜಾರಿ ಮಾಡಿದೆ. ನ್ಯಾಯಾಲಯದ ಆದೇಶಕ್ಕೆ ನಾವೆಲ್ಲ ತಲೆಬಾಗಲೇಬೇಕು. ಹಾಗಾಗಿ ಜಿಲ್ಲೆಯಾದ್ಯಂತ ಸುರಕ್ಷಿತವಾಗಿ ಹಬ್ಬ ಆಚರಣೆಗೆ ಜಿಲ್ಲಾ ಪೊಲೀಸ್ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಡಿಜೆ ಬಳಕೆಯ ಮಾತೇ ಇಲ್ಲ. ಬೇಕಾದ್ರೆ ಸೌಂಡ್ ಪರವಾನಿಗೆ ಪಡೆಯಬಹುದು. ಆದ್ರೆ ಅದಕ್ಕು ಯಾವ ಪ್ರದೇಶದಲ್ಲಿ ಇಷ್ಟೆಲ್ಲಾ ಡೆಸಿಮಲ್ ಇರಬೇಕು ಅಂತ ನಿಯಮ ಇದೆ ಎಂದು ಮಾಹಿತಿ ನೀಡಿದ್ದಾರೆ.
ಆ ನಿಯಮದ ಆಧಾರದ ಮೇಲೆ ಪರವಾನಗಿ ಪಡೆಯಬಹುದು. ನ್ಯಾಯಾಲಯದ ಆದೇಶ ಉಲ್ಲಂಘನೆಯಾದ್ರೆ ನಾವು ಮಾತ್ರ ಸುಮ್ನೆ ಬಿಡಲ್ಲ. ಸಾರ್ವಜನಿಕ ಹಬ್ಬ ಆಗಿರೋದ್ರಿಂದ ಎಲ್ಲರು ಸಹಕಾರ, ಸಹಮತದಿಂದ ಆಚರಿಸಬೇಕು. ಬೇರೆ ಏನಾದ್ರು ಬೆಳವಣಿಗೆಗಳಾದ್ರೆ ಪೊಲೀಸ್ ಇಲಾಖೆ ಮಾತ್ರ ಸುಮ್ಮನಿರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.
ನಟ, ನಿರ್ದೇಶಕ ಉಪೇಂದ್ರ ನಿವಾಸದಲ್ಲಿ ಪ್ರತಿ ವರ್ಷವೂ ಗಣೇಶ ಚತುರ್ಥಿ (Ganesha Chaturthi) ಹಬ್ಬ ಬಹಳ ಜೋರಾಗಿರುತ್ತೆ. ಕುಟುಂಬಸ್ಥರು ಇಂಡಸ್ಟ್ರಿಯ ಆಪ್ತರನ್ನ ಕರೆದು ಹಬ್ಬ ಮಾಡ್ತಾರೆ ಉಪೇಂದ್ರ (Upendra). ಈ ಬಾರಿಯೂ ಅಷ್ಟೇ ಜೋರಾಗಿ ಹಬ್ಬ ನಡೆದಿದೆ.
ಮನೆಯ ಮೇಲ್ಛಾವಣಿಯ ಕೊಠಡಿಯಲ್ಲಿ ಗಣೇಶ ಮೂರ್ತಿ ಕೂರಿಸಿ ಅದ್ಧೂರಿ ಮತ್ತು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಈ ಬಾರಿಯೂ ಹಬ್ಬ ವಿಜೃಂಭಣೆಯಿಂದ ನಡೆದಿದೆ. ಈ ಸಂಭ್ರಮದ ಫೋಟೋಗಳನ್ನ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಉಪೇಂದ್ರ-ಪ್ರಿಯಾಂಕ ದಂಪತಿ ಸಮೇತ ಕುಳಿತು ಗಣೇಶ ಪೂಜೆ ಮಾಡ್ತಾರೆ. ಗಣಪತಿ ಹೋಮ ಮಾಡ್ತಾರೆ. ತಂದೆ ತಾಯಿ, ಅಣ್ಣ ಅತ್ತಿಗೆ ಅಣ್ಣನ ಮಕ್ಕಳು ಹಾಗೂ ತಮ್ಮ ಕುಟುಂಬದ ಜೊತೆ ರಿಯಲ್ ಸ್ಟಾರ್ ಉಪ್ಪಿ ಅದ್ಧೂರಿಯಾಗಿ ಹಬ್ಬ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ `ಕೂಲಿ’ ಚಿತ್ರದ ವಿಶೇಷ ಪಾತ್ರದಲ್ಲಿ ಮಿಂಚಿರುವ ಉಪ್ಪಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಇದೀಗ ಉಪ್ಪಿ ಮನೆಯ ಅದ್ದೂರಿ ಸಡಗರ ವೈರಲ್ ಆಗಿದೆ.
ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳ್ಳಂಬೆಳಗ್ಗೆ ಕಲಾವಿದರ ಮನೆಯಿಂದ ಪೂಜೆ ಮಾಡಿ ವಿಶೇಷ ಗಣಪತಿಗಳನ್ನು ಮನೆ, ಪೆಂಡಾಲ್ ಗಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ಕಿನ್ನಿಮೂಲ್ಕಿಯ ಕಾರ್ತಿಕ್ ಕೌಶಿಕ್ ಸಹೋದರರು ಕೃಷ್ಣನನ್ನು ಗಣಪತಿಯನ್ನು ಸೃಷ್ಟಿ ಮಾಡಿದ್ದಾರೆ. ಎಐ ಫೋಟೋದಿಂದ ಪ್ರೇರಣೆಯಿಂದ ಗಣಪತಿಯನ್ನು ರಚಿಸಿದ್ದಾರೆ. ಕೈಯಲ್ಲಿ ಕಬ್ಬು ಹಿಡಿದು ಬಾಲ ಗಣಪತಿ ಕಂಗೊಳಿಸುತ್ತಿದ್ದಾನೆ.
ಈ ನಡುವೆ 20ನೇ ವರ್ಷದ ಕಿನ್ನಿಮೂಲ್ಕಿ ಗಣೇಶೋತ್ಸವಕ್ಕೆ ಪಂಚಮುಖಿ ಗಣಪತಿ ರಚಿಸಲಾಗಿದೆ. ಐದು ಮುಖಗಳ ಸುಂದರ ಗಣಪತಿ ಎಲ್ಲರನ್ನ ಸೆಳೆಯುತ್ತಿದ್ದಾನೆ.
ಕೋಲಾರ: ದೇಶದಲ್ಲೆಡೆ ಇಂದು ಗಣೇಶ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ ಅದರಂತೆ ಕೋಲಾರ (Kolar) ಜಿಲ್ಲೆಯ ಪುರಾಣ ಪ್ರಸಿದ್ಧ ಕುರುಡುಮಲೆ ವಿನಾಯಕನ ಸನ್ನಿಧಿಯಲ್ಲೂ (Kurudumale Vinayaka Temple) ಹಬ್ಬದ ಸಂಭ್ರಮ ಕಳೆಕಟ್ಟಿದೆ.
ಪೌರಾಣಿಕ ಹಿನ್ನೆಲೆ ಇರುವ ಕುರುಡುಮಲೆ ವಿನಾಯಕನ ದೇವಸ್ಥಾನ ರಾಜಕೀಯವಾಗಿಯೂ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಏಕಶಿಲಾ ಸಾಲಿಗ್ರಾಮ ಮೂರ್ತಿ ಗಣೇಶನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಕುರುಡುಮಲೆ ವಿನಾಯಕನ ದರ್ಶನಕ್ಕೆ ಜನರ ದಂಡು ಆಗಮಿಸಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ವಿನಾಯಕನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದು ಪುನೀತರಾದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರನಿಗೆ ಜೈಲಲ್ಲಿ ಇಡಿ ಡ್ರಿಲ್
ಗಣೇಶ ಚತುರ್ಥಿ (Ganesha Chaturthi) ಹಿನ್ನೆಲೆಯಲ್ಲಿ ವಿನಾಯಕನ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಕೋಲಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹೊರ ರಾಜ್ಯದಿಂದಲೂ ಭಕ್ತರ ಸಮೂಹ ಬಂದಿದೆ. ಇನ್ನೂ ವಿಶ್ವದ ಏಕೈಕ ಏಕಶಿಲಾ ಸಾಲಿಗ್ರಾಮ ಶಿಲಾಗಣಪತಿ ಅನ್ನೋ ನಂಬಿಕೆ ಇಲ್ಲಿದ್ದು, ಸಾವಿರಾರು ಭಕ್ತರು ಇಂದು ವಿನಾಯಕನ ದರ್ಶನ ಪಡೆದಿದ್ದಾರೆ. ಇನ್ನೂ ಗಣಪನ ದರ್ಶನ ಪಡೆಯಲು ಇಂದು ಬೆಳಗಿನಿಂದಲೇ ಭಕ್ತರ ದಂಡು ದೇವಸ್ಥಾನದ ಬಳಿ ನೆರೆದಿದ್ದು, ಇಲ್ಲಿನ ಇತಿಹಾಸದ ಪ್ರಕಾರ ಈ ಗಣಪತಿ ಮೂರ್ತಿಯನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನು ಪ್ರತಿಷ್ಠಾಪಿಸಿದರು ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಇದನ್ನೂ ಓದಿ: ಬಸ್ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ – ಗಣೇಶ ಹಬ್ಬದಂದೇ ಅತ್ತೆ, ಅಳಿಯ ಸಾವು
ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕನ ವಿಗ್ರಹವು 13 ಅಡಿ ಎತ್ತರವಿದೆ. ಇಲ್ಲಿರುವ ದೇಗುಲವು ಶ್ರೀಕೃಷ್ಣ ದೇವರಾಯನ ಆಡಳಿತ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. ಕುರುಡುಮಲೆ ಐತಿಹ್ಯ ಹೊಯ್ಸಳರ ಕಾಲದಲ್ಲಿ ಇದೊಂದು ಉಪನಗರವಾಗಿಯೇ ಪ್ರಸಿದ್ಧವಾಗಿತ್ತು. ತದನಂತರ ವಿಜಯನಗರವನ್ನು ಆಳಿದ ಆರಂಭಿಕ ಅರಸರ ಕಾಲದಲ್ಲಿ ಮುಳುವಾಯಿ ನಗರದ ಜೊತೆಜೊತೆಯಲ್ಲೇ ಇಲ್ಲಿಯೂ ದೇವಾಲಯಗಳ ಅಭಿವೃದ್ಧಿಗೊಂಡವು ಅನ್ನೋದು ಇತಿಹಾಸ ಎನ್ನಲಾಗಿದೆ. ಇದನ್ನೂ ಓದಿ: ದೇವರಿಗೆ ಧರ್ಮವಿಲ್ಲ, ಪ್ರಾರ್ಥನೆ ಯಾರೊಬ್ಬರ ಸ್ವತ್ತಲ್ಲ – ಡಿಕೆಶಿ
ಬೆಂಗಳೂರು: ದೇಶದೆಲ್ಲೆಡೆ ಸಂಭ್ರಮದ ಗಣೇಶ ಚತುರ್ಥಿ (Ganesh Chaturthi) ಆಚರಿಸಲಾಗುತ್ತಿದ್ದು ಪಬ್ಲಿಕ್ ಟಿವಿ (PUBLiC TV) ಕಚೇರಿಯಲ್ಲಿ 13ನೇ ವರ್ಷದ ಗಣೇಶೋತ್ಸವ ಆಚರಿಸಲಾಗುತ್ತಿದೆ.