Tag: ಗಣೇಶ್

  • ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

    ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

    ಮೈಸೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸುರಪುರ ಶಾಸಕ ರಾಜೂಗೌಡ ಅವರು ಫ್ಯಾಮಿಲಿ ಜೊತೆಗೆ ಹೆಚ್ ಡಿ ಕೋಟೆಯ ಸುತ್ತಮುತ್ತ ಪ್ರದೇಶಗಳಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದಾರೆ.

    ಸಚಿವ ಸ್ಥಾನದಿಂದ ವಂಚಿತಗೊಂಡು ಮತ್ತು ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರದಲ್ಲಿ ಸದಾ ಸುದ್ದಿಯಲ್ಲಿದ್ದ ಸುರಪುರ ಶಾಸಕ ಈಗ ಫ್ಯಾಮಿಲಿ ಜೊತೆಗೆ ಜಾಲಿ ಟ್ರಿಪ್‍ನಲ್ಲಿದ್ದಾರೆ. ಗಣೇಶ್ ಮತ್ತು ರಾಜೂಗೌಡರ ಕುಟುಂಬದ ಜೊತೆಗೆ ಸದ್ಯ ಎಂಜಾಯ್ಮೆಂಟ್ ಮೂಡ್‍ನಲ್ಲಿದ್ದಾರೆ. ಇದನ್ನೂ ಓದಿ: ಮತದಾರ ಪ್ರಭುಗಳ ಖುಣ ತೀರಿಸುವ ಕೆಲಸ ಮಾಡುತ್ತೇನೆ: ಮುನಿರತ್ನ

     

    View this post on Instagram

     

    A post shared by Ganesh (@goldenstar_ganesh)

    ಹೆಚ್ ಡಿ ಕೋಟೆ ಕಾನನ ಪ್ರದೇಶದಲ್ಲಿ ಚಾರಣ ಮಾಡುತ್ತಿರುವ ರಾಜೂಗೌಡರಿಗೆ, ಗಣೇಶ್ ಮತ್ತು ನಟ ರವಿಶಂಕರ್ ಜೊತೆಯಾಗಿದ್ದಾರೆ. ಮೊದಲಿಂದಲೂ ಸಿನಿಮಾ ಮಂದಿಜೊತೆಗೆ ಉತ್ತಮ ಒಡನಾಟ ಹೊಂದಿರುವ ರಾಜೂಗೌಡ ಒಂದೆರಡು ದಿನ ರಾಜಕೀಯ ಜಂಜಾಟ ಬಿಟ್ಟು ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಹೆಚ್ ಡಿ ಕೋಟೆ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು

     

    View this post on Instagram

     

    A post shared by Ganesh (@goldenstar_ganesh)

    ಕಬಿನಿ ನದಿಯಲ್ಲಿ ಫ್ಯಾಮಿಲಿ ಜೊತೆಗೆ ಬೋಟ್‍ನಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಕಬಿನಿ ಫಾರೆಸ್ಟ್‌ನಲ್ಲಿ ಸಫಾರಿ ಹೋಗುವಾಗ ಗಣೇಶ್ ಅವರ ಕ್ಯಾಮೆರಾಗೆ ಚಿರತೆ ಸೆರೆ ಸಿಕ್ಕಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಗಣೇಶ್ ಅವರು ಕುಟುಂಬದ ಜೊತೆಗೆ ಜಾಲಿ ಟ್ರಿಪ್ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

  • ಚಂದನವನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಎಂಟ್ರಿ

    ಚಂದನವನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಎಂಟ್ರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್‍ರವರ ಮುದ್ದಿನ ಮಗ ವಿಹಾನ್ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ನಟ ದುನಿಯಾ ವಿಜಯ್, ಬುಲೆಟ್ ಪ್ರಕಾಶ್ ಸೇರಿದಂತೆ ಹಲವಾರು ನಟರ ಪುತ್ರರು ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ನಡುವೆ ಇದೀಗ ಈ ಸಾಲಿಗೆ ಗಣೇಶ್ ಪುತ್ರ ವಿಹಾನ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಗಣೇಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಖತ್ ಸಿನಿಮಾದಲ್ಲಿ ಗಣೇಶ್‍ರವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದಾರೆ. ಅಲ್ಲದೇ ಗಾಳಿಪಟ-2 ಸಿನಿಮಾದಲ್ಲಿಯೂ ವಿಹಾನ್ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸದ್ಯ ಶುಕ್ರವಾರ ವಿಹಾನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಗಣೇಶ್, ಮಗನ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸಿನಿಮಾದ ಪೋಸ್ಟರ್‍ವೊಂದನ್ನು ಶೇರ್ ಮಾಡಿದ್ದಾರೆ. ಜೊತೆಗೆ, ಮೊಳಕೆಯ ಬೆಳೆಯುವ ಸಿರಿಯನು ತೆರೆಯ ಮೇಲೆ ನೀವೇ ನೋಡಿ ಹರಸಿ ಹಾರೈಸಿ ಆಶೀರ್ವದಿಸಿ. ಜ್ಯೂನಿಯರ್ ವಿಹಾನ್ ಗಣೇಶ್ ಸಖತ್ ಸಿನಿಮಾದಲ್ಲಿ ಬಾಲು ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಮಗನೇ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದಂದು ‘ಸಖತ್’ ಲುಕ್‍ನಲ್ಲಿ ಮಿಂಚಿದ ಗಣೇಶ್

     

    View this post on Instagram

     

    A post shared by Ganesh (@goldenstar_ganesh)

    ಈ ಮುನ್ನ ಗಣೇಶ್ ಹಾಗೂ ನಟಿ ರಶ್ಮಿಕಾ ನಟಿಸಿದ್ದ ಚಮಕ್ ಸಿನಿಮಾದಲ್ಲಿ ಮಗಳು ಚಾರಿತ್ರ್ಯರನ್ನು ಗಣೇಶ್ ಪರಿಚಯ ಮಾಡಿಕೊಟ್ಟಿದ್ದರು. ಇದೀಗ ವಿಹಾನ್ ಇದೇ ಮೊದಲ ಬಾರಿಗೆ ಅಪ್ಪನ ಚಿತ್ರಕ್ಕಾಗಿ ಬಣ್ಣಹಚ್ಚಲಿದ್ದಾರೆ. ಇದನ್ನೂ ಓದಿ:ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್

     

    View this post on Instagram

     

    A post shared by Ganesh (@goldenstar_ganesh)

  • ಹುಟ್ಟುಹಬ್ಬದಂದು ‘ಸಖತ್’ ಲುಕ್‍ನಲ್ಲಿ ಮಿಂಚಿದ ಗಣೇಶ್

    ಹುಟ್ಟುಹಬ್ಬದಂದು ‘ಸಖತ್’ ಲುಕ್‍ನಲ್ಲಿ ಮಿಂಚಿದ ಗಣೇಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ್‍ರವರು ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಪ್ರತಿವರ್ಷ ಕುಟುಂಬದವರು, ಸ್ನೇಹಿತರು ಹಾಗೂ ಅಭಿಮಾನಿಗಳೊಟ್ಟಿಗೆ ಬಹಳ ಸಡಗರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳತ್ತಿದ್ದ ಗಣೇಶ್‍ರವರು ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ತಮ್ಮ ಬರ್ತ್‍ಡೇ ವ್ಯರ್ಥ ಮಾಡುವ ಹಣವನ್ನು ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

     

    View this post on Instagram

     

    A post shared by Ganesh (@goldenstar_ganesh)

    ಸದ್ಯ ಬರ್ತ್‍ಡೇ ಸೆಲೆಬ್ರೆಶನ್‍ಗೆ ಬ್ರೇಕ್ ಹಾಕಿರುವುದರ ಹಿನ್ನೆಲೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಣೇಶ್ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ವಿಶ್ ಮಾಡುತ್ತಿದ್ದಾರೆ. ಜೊತೆಗೆ ಸೆಲೆಬ್ರೆಟಿಗಳು ಕೂಡ ಗಣೇಶ್‍ರವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.

    ಈ ವಿಶೇಷದಿನದಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ‘ಸಖತ್’ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಪೋಸ್ಟರ್‌ನಲ್ಲಿ ಕೋರ್ಟ್ ಕಟಕಟ್ಟೆಯಲ್ಲಿ ಕನ್ನಡಕ ಹಾಕಿಕೊಂಡು ಅಂದನಂತೆ ಗೋಲ್ಡನ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

    ಈ ಸಿನಿಮಾಕ್ಕೆ ನಿರ್ದೇಶಕ ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅಲ್ಲದೇ ಸಿನಿಮಾ ರೈತರು ಕಾದ ಮಳೆ.. ಹೊನ್ನಿನ ನಕ್ಷತ್ರದ ಬೆಳೆ.. ಚೆಲುವಿನ ಹೂ ನ ಪಕಳೆ.. ಕರ್ನಾಟಕದ ಮಾತಿನ ಕಹಳೆ. ಗಣೇಶ್‍ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಸಖತ್ತಾಗಿರಲಿ ನಿಮ್ಮ ಜೀವನ ಎಂದು ಸಿಂಪಲ್ ಸುನಿ ಟ್ವಿಟ್ಟರ್‌ನಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ – ಗಣೇಶ್ ಪತ್ರ

  • ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ – ಗಣೇಶ್ ಪತ್ರ

    ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ – ಗಣೇಶ್ ಪತ್ರ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.

    ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್‍ರವರವ ಹುಟ್ಟುಹಬ್ಬವಿದ್ದು, ಪ್ರತಿವರ್ಷ ಅಭಿಮಾನಿಗಳೊಟ್ಟಿಗೆ ಬಹಳ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಗಣೇಶ್‍ರವರು ತಮ್ಮ ಬರ್ತ್‍ಡೇಗಾಗಿ ವ್ಯರ್ಥ ಮಾಡುವ ಹಣವನ್ನು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ‘ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದೊ, ಅರಿವಿಲ್ಲದೆಯೋ ಈ ಕೋವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂಧರೆ ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾದದ್ದು, ನೋವು ತರಿಸಿದೆ. ಅದೆಷ್ಟೋ ಜನರ ಜೀವಗಳು ನಲುಗಿ ಹೋಗಿವೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲವೆಂದಿನಿಸಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ.

    ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬದ ಆಚರಣೆಗೆ ನೀವುಗಳು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೆ ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೆಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ ಎಂದು ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದಾರೆ.

    ಸದ್ಯ ಗಣೇಶ್‍ರವರು ಗಾಳಿಪಟ-2 ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಈ ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಈ ಚಿತ್ರದಲ್ಲಿ ದಿಗಂತ್, ನಿರ್ದೇಶಕ ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮತ್ತು ಶರ್ಮೀಲಾ ಮಾಂಡ್ರೆ ಅಭಿನಯಿಸುತ್ತಿದ್ದಾರೆ.

     

    View this post on Instagram

     

    A post shared by Ganesh (@goldenstar_ganesh)

  • ಗೋಲ್ಡನ್​  ಸ್ಟಾರ್ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

    ಗೋಲ್ಡನ್​ ಸ್ಟಾರ್ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಸಿನಿ ಜೀವನದಲ್ಲಿ ಹಿಂದೆಂದೂ ಮಾಡದ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ.

     ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ..ಮೊದಲ ಬಾರಿಗೆ ನನ್ನ ನೋಟವನ್ನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಣುಗಳಿಗೆ, ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಬರೆದುಕೊಂಡು ಗಣೇಶ್ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಗಣೇಶ್, ತಾನು ಅಭಿನಯಿಸುತ್ತಿರುವ ಹೊಸ ಸಿನಿಮಾ ಕುರಿತಾಗಿ ಅಭಿಮಾನಿಗಳಿಗೆ ಒಂದು ಕ್ಲೂ ಕೊಟ್ಟಿದ್ದಾರೆ.

     

    View this post on Instagram

     

    A post shared by Ganesh (@goldenstar_ganesh)

    ಸ್ಯಾಂಡಲ್‍ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗಷ್ಟೆ ತಮ್ಮ ಗಾಳಿಪಟ-2 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಮುಚ್ಚಿಟ್ಟ ಕಣ್ಣುಗಳಿಗೆ ಬಿಚ್ಚಿಟ್ಟ ಪ್ರೀತಿಯ ಬೆಳಕ ಚೆಲ್ಲಿ ಅಂತೆಲ್ಲ ಬರೆದುಕೊಂಡು ಕೋರ್ಟ್ ಕಟಕಟೆಯಲ್ಲಿ ನಿಂತಿರುವ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ.

    ಸಿಂಪಲ್ ಸುನಿ ನಿರ್ದೇಶನದ ಸಖತ್ ಸಿನಿಮಾದಲ್ಲಿ ಗಣೇಶ್ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸಖತ್ ಸಿನಿಮಾದಲ್ಲಿ ಗಣೇಶ್ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಗಣೇಶ್ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‍ನಲ್ಲಿ ಕಾವ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಗೋಲ್ಡನ್ ಸ್ಟಾರ್ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ.

  • ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್

    ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್

    – ಚರಿತ್ರಿಯಾ ಮುದ್ದು ಮಾತಿಗೆ ನೆಟ್ಟಿಗರು ಫಿದಾ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ತನ್ನ ಮಗಳು ಮುದ್ದು ಮುದ್ದಾಗಿ ಮಾತನಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ವೈರಲ್ ಆಗಿದೆ.

    ಗಣೇಶ್ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ತಮ್ಮ ಸಿನಿಮಾ ವಿಚಾರಗಳ ಜೊತೆ ತಮ್ಮ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮಿನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಮಗಳು ಆಮ್ಲೆಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಗಣೇಶ್ ಮಗಳ ಮುದ್ದು ಮಾತಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ವಿಡಿಯೋದಲ್ಲಿ ಏನಿದೆ
    ಗಣೇಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮಗಳು ಚರಿತ್ರಿಯಾ ಗಣೇಶ್ ಅವರು ಆಮ್ಲೆಟ್ ಮಾಡುತ್ತಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಾ ಅಲ್ಲಿಗೆ ಬಂದ ಗಣೇಶ್ ಅವರು ಮಗಳೇ ಏನ್ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಚರಿತ್ರಿಯಾ ಇಂಗ್ಲಿಷಿನಲ್ಲಿ ಆಮ್ಲೆಟ್ ಮಾಡುವ ವಿಧಾವನ್ನು ವಿವರಿಸುತ್ತಾರೆ. ಈ ವೇಳೆ ಹತ್ತಿರ ಬಂದ ಗಣೇಶ್ ಮಗಳೇ ಏನ್ ಮಾಡುತ್ತಿದ್ದೀಯಾ ಸರಿಯಾಗಿ ಹೇಳು ಅಂದಾಗ ಕನ್ನಡದಲ್ಲಿ ಆಮ್ಲೆಟ್ ಮಾಡುವ ವಿಧಾನವನ್ನು ಹೇಳಿಕೊಡುತ್ತಾರೆ.

    ಈ ವಿಡಿಯೋದಲ್ಲಿ ಚಿರಿತ್ರಿಯಾ ಮುದ್ದು ಮುದ್ದಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾತನಾಡಿರುವುದು ಗಣೇಶ್ ಅಭಿಮಾನಿಗಳ ಹೃದಯ ಕದ್ದಿದೆ. ಜೊತೆಗೆ ಕೆಲ ನಟ ನಟಿಯರು ಕೂಡ ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಮೊದಲಿಗೆ ಕಮೆಂಟ್ ಮಾಡಿರುವ ನಟಿ ಅಮೂಲ್ಯ ಅವರು ಚೆರ್ರಿ ಎಂದು ಬರೆದುಕೊಂಡರೆ, ಪ್ರಜ್ವಲ್ ದೇವರಾಜ್ ಅವರು ಕಮೆಂಟ್ ಮಾಡಿ ಸೋ ಕ್ಯೂಟ್ ಎಂದಿದ್ದಾರೆ. ಜೊತೆಗೆ ಆರ್.ಜೆ ನೇತ್ರಾ ಮತ್ತು ರ್ಯಾಪಿಡ್ ರಶ್ಮಿ ಕೂಡ ಕಮೆಂಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಮಗ ಸೇಬು ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದ ಗಣೇಶ್ ಅವರು, ಟಿವಿ ಪೇಪರ್ ನೋಡಿ. ಏನೋ ಪ್ಲ್ಯಾನು ಮಾಡಿ. ಕೇಳಿದ ಒಂದು ಸೇಬು, ತಿನೋಕೆ ಅನ್ಕೊಂಡ್ರೆ ಕೊಟ್ಟ ಕೊರೊನಾ ಜವಾಬು. ಎಲ್ಲರೂ ಕೊರೊನಾದಿಂದ ಓಡಿದರೆ, ವಿಹಾನ್ ಕೊರೊನಾವನ್ನೆ ಸೃಷ್ಠಿಸುತ್ತಿದ್ದಾನೆ. ನನಗೆ ನಿಜವಾಗಲೂ ಆಶ್ಚರ್ಯವಾಯಿತು ಎಂದು ಬರೆದುಕೊಂಡಿದ್ದರು. ಸದ್ಯ ಗಣೇಶ್ ಅವರ ಗಾಳಿಪಟ-2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ.

  • ದೇವರು ಕೊಟ್ಟ ವರದಿಂದ 6 ತಿಂಗಳು ದೂರವಾಗಿದ್ದೆ: ಗಣೇಶ್

    ದೇವರು ಕೊಟ್ಟ ವರದಿಂದ 6 ತಿಂಗಳು ದೂರವಾಗಿದ್ದೆ: ಗಣೇಶ್

    – ನಮ್ಮ ಸಲುಗೆಗೆ ಅದ್ಯಾವ ಕಣ್ಣು ತಗುಲಿತ್ತೋ?

    ಬೆಂಗಳೂರು: ಲಾಕ್‍ಡೌನ್ ಬಳಿಕ ಕೊರೊನಾ ವೈರಸ್ ಆತಂಕದ ನಡುವೆ ಚಿತ್ರರಂಗದ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಸ್ಥಗಿತಗೊಂಡಿದ್ದ ಚಿತ್ರೀಕರಣ ಸಹ ಆರಂಭಗೊಂಡಿದ್ದು, ಕಲಾವಿದರು ಕಾಯಕಕ್ಕೆ ಹಿಂದಿರುಗಿದ್ದಾರೆ. ಆರು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾಗಿರುವ ಮುಂಗಾರು ಮಳೆ ಹುಡುಗ ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ನಿಂದಾಗಿ ಇಡೀ ಬಣ್ಣದ ಲೋಕ ತೆರೆಯ ಹಿಂದೆ ಸರಿದಿತ್ತು. ಅನ್‍ಲಾಕ್ ಬಳಿಕ ಸರ್ಕಾರ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಬಣ್ಣದ ಲೋಕ ಹಿಂದಿರುಗಿದೆ. ಚಿತ್ರಮಂದಿರಗಳು ತೆರೆದಿದ್ದು, ಪ್ರೇಕ್ಷಕರು ಸಹ ಥಿಯೇಟರ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿರುವ ಗೋಲ್ಡನ್ ಸ್ಟಾರ್ ತಮ್ಮ ಮತ್ತು ಕ್ಯಾಮೆರಾ ಜೊತೆಗಿನ ಅವಿನಾಭಾವ ಸಂಬಂಧ ಎಂತಹದ್ದು ಎಂಬುದನ್ನ ಕೆಲ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

    ಗಣೇಶ್ ಪೋಸ್ಟ್: ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ. ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ? 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ‘ಕ್ಯಾಮೆರಾ’. ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ನಿಮ್ಮ ಹಾರೈಕೆ ಇರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

  • ಶಾಸಕ ಕಂಪ್ಲಿ ಗಣೇಶ್ ಸಮಯ ಪ್ರಜ್ಞೆಯಿಂದ ಬದುಕಿತು ಬಡಜೀವ

    ಶಾಸಕ ಕಂಪ್ಲಿ ಗಣೇಶ್ ಸಮಯ ಪ್ರಜ್ಞೆಯಿಂದ ಬದುಕಿತು ಬಡಜೀವ

    ಬಳ್ಳಾರಿ: ಹೃದಯಾಘಾತದಿಂದ ರಸ್ತೆ ಪಕ್ಕದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿಯನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಶಾಸಕ ಸಮಯ ಪ್ರಜ್ಞೆ ಮೆರೆದಿದ್ದಾರೆ.

    ಕೆಲಸದ ನಿಮಿತ್ತವಾಗಿ ಕಂಪ್ಲಿಯಿಂದ ಕರುಗೋಡ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ, ಕುರುಗೋಡಿನ ಅಗ್ನಿಶಾಮಕ ದಳ ಕಛೇರಿ ಬಳಿ ಪಕ್ಕಿರಪ್ಪ ಎಂಬ ವ್ಯಕ್ತಿ, ಹೃದಯಾಘಾತವಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದರು. ಅದನ್ನು ಗಮನಿಸಿದ ಶಾಸಕ ಗಣೇಶ್ ಕೂಡಲೇ ಅಂಬುಲೆನ್ಸ್ ಕರೆಸಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಪಕ್ಕಿರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಕಿರಪ್ಪ ಕುರಗೋಡ ನಿವಾಸಿಯಾ. ಸ್ಥಳೀಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಇವರು, ಸಂಜೆ ವಾಕಿಂಗ್ ಎಂದು ಬಂದಾಗ ಹೃದಯಾಘಾತವಾಗಿದೆ.

  • ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ 2 ದಿನ ಮುಂಚೆಯೇ ಕಿಚ್ಚ ವಿಶ್

    ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ 2 ದಿನ ಮುಂಚೆಯೇ ಕಿಚ್ಚ ವಿಶ್

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಅವರು ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದಾರೆ.

    ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇದೆ. ಈ ದಿನಾಂಕವನ್ನು ಗೊಂದಲ ಮಾಡಿಕೊಂಡ ಕಿಚ್ಚ ಎರಡು ದಿನ ಮುಂಚಿತವಾಗಿಯೇ ತಮ್ಮ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ನಂತರ ಗಣಿ ಹುಟ್ಟುಹಬ್ಬ ಜುಲೈ 2ಕ್ಕೆ ಎಂದು ತಿಳಿದು, ಈ ವಿಶ್ ಅನ್ನು ಅಡ್ವಾನ್ಸ್ ಆಗಿ ಪರಿಗಣಿಸಿ ಎಂದು ಮತ್ತೆ ರಿಟ್ವೀಟ್ ಮಾಡಿದ್ದಾರೆ.

    ದಿನಾಂಕವನ್ನು ತಪ್ಪಾಗಿ ಗ್ರಹಿಸಿ ವಿಶ್ ಮಾಡಿರುವ ಸುದೀಪ್, ಹುಟ್ಟುಹಬ್ಬದ ಶುಭಾಶಯಗಳು ಗೆಳೆಯ, ದೇವರು ನಿನಗೆ ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ. ಕ್ವಾರಂಟೈನ್ ಸಮಯದಲ್ಲಿ ಗಡ್ಡ ಹೊಸ ಸಿಕ್ಸ್ ಪ್ಯಾಕ್ ಆಗಲಿ. ನಿನಗೆ ದೇವರು ಹೆಚ್ಚಿನ ಶಕ್ತಿ ಮತ್ತು ಯಶಸ್ಸನ್ನು ಕೊಟ್ಟು ಆಶೀರ್ವದಿಸಲಿ. ಮಚ್ ಲವ್ ಯೂ ಚೀಯರ್ಸ್ ಎಂದು ಬರೆದು ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದರು.

    ಸುದೀಪ್ ವಿಶ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇರುವುದು ಎಂದು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಇದರಿಂದ ತಕ್ಷಣ ಎಚ್ಚೆತ್ತ ಕಿಚ್ಚ, ಈ ಟ್ವೀಟ್ ಮಾಡಿದ ಒಂದು ಗಂಟೆಯ ನಂತರ ಇನ್ನೊಂದು ಟ್ವೀಟ್ ಮಾಡಿದ್ದು, ನಾನು ತಪ್ಪು ದಿನಾಂಕವನ್ನು ಪಡೆದು ವಿಶ್ ಮಾಡಿದೆ. ಇದನ್ನು ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿ. ಸರಳವಾಗಿ ಹುಟ್ಟುಹಬ್ಬ ಆಚರಿಸಲು ತೀರ್ಮಾನ ಮಾಡಿರುವುದು ಒಳ್ಳೆಯ ನಿರ್ಧಾರ ಎಂದು ರಿಟ್ವೀಟ್ ಮಾಡಿದ್ದಾರೆ.

    ನೆಚ್ಚಿನ ಗೆಳೆಯ ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದಕ್ಕೆ ಖುಷಿಯಾಗಿ ರಿಟ್ವೀಟ್ ಮಾಡಿರುವ ಗಣೇಶ್, ನೀವೇ ನನಗೆ ಮೊದಲು ವಿಶ್ ಮಾಡಿದ್ದು, ನಿಮಗೆ ಧನ್ಯವಾದಗಳು ಸರ್ ಎಂದು ಬರೆದುಕೊಂಡಿದ್ದಾರೆ. ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ರಂದು ಇದ್ದು, ಕೊರೊನಾ ವೈರಸ್ ಕಾರಣದಿಂದ ಈ ವರ್ಷದ ಹುಟ್ಟುಹಬ್ಬವನ್ನು ಗಣೇಶ್ ಅವರು ಸರಳವಾಗಿ ಆಚರಿಸಲು ತೀರ್ಮಾನ ಮಾಡಿದ್ದಾರೆ.

    ಈ ವಿಚಾರವಾಗಿ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಗಣೇಶ್, ನನ್ನ ರಾಜ್ಯದ ಜನತೆ ಕೊರೊನಾ ವೈರಸ್ ಭೀತಿಯಲ್ಲಿ ಕಷ್ಟಪಡುತ್ತಿರುವ ಸಮಯದಲ್ಲಿ ನಾನು ಅದ್ಧೂರಿಯಿಂದ ಹುಟ್ಟುಹಬ್ಬ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಈ ಬಾರಿ ನನ್ನ ಅಭಿಮಾನಿಗಳು ನನ್ನ ಮನೆಯ ಬಳಿ ಬರಬೇಡಿ. ನೀವು ಎಲ್ಲಿ ಇರುತ್ತೀರಾ ಅಲ್ಲೇ ನನಗೆ ಶುಭಾ ಕೋರಿ ನನಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದರು.

  • ಹಾಯ್ ಹೇಳಿದ್ದಾಗ ನಿನ್ನ ಮುಖದಲ್ಲಿದ್ದ ನಗು ಮರೆಯಲು ಸಾಧ್ಯವಿಲ್ಲ: ಗಣೇಶ್

    ಹಾಯ್ ಹೇಳಿದ್ದಾಗ ನಿನ್ನ ಮುಖದಲ್ಲಿದ್ದ ನಗು ಮರೆಯಲು ಸಾಧ್ಯವಿಲ್ಲ: ಗಣೇಶ್

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 12ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಪತ್ನಿ ಶಿಲ್ಪಾ ಗಣೇಶ್ ಜೊತೆಗಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಅಂದು ನಾನು ಹಾಯ್ ಎಂದಾಗ ನೀನು ನನಗೆ ಹಾಯ್ ಎಂದು ಹೇಳಿದ್ದೆ. ಆ ದಿನ ನಿನ್ನ ಮುಖದಲ್ಲಿದ್ದ ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿಗೆ ನಮ್ಮ ಮದುವೆಯಾಗಿ 12 ವರ್ಷಗಳೇ ಕಳೆದಿವೆ. ನೀನು ನನ್ನ ಪ್ರೀತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಮಹಾರಾಣಿ. ನನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    2008, ಫೆಬ್ರವರಿ 11ರಂದು ತಮ್ಮ ಜೆಪಿ ನಗರದ ನಿವಾಸದಲ್ಲಿಯೇ ಗಣೇಶ್ ಹಾಗೂ ಶಿಲ್ಪಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೆ. 18ರಂದು ಗಣೇಶ್ ಅವರ ಮದುವೆ ನಿಗದಿಯಾಗಿತ್ತು. ಆದರೆ ಅಭಿಮಾನಿಗಳ ಒತ್ತಡದಿಂದ ಗಣೇಶ್ ಹಾಗೂ ಶಿಲ್ಪಾ ಫೆ. 11ರಂದು ಜೆಪಿ ನಗರದ ಮನೆಯಲ್ಲಿಯೇ ಮದುವೆಯಾಗಿದ್ದರು. ಇವರಿಬ್ಬರ ಮದುವೆಗೆ ನಿರ್ದೇಶಕ ಯೋಗರಾಜ್ ಭಟ್, ನಾಗಶೇಖರ್, ನಿರ್ಮಾಪಕ ಕೆ. ಮಂಜು ಹಾಗೂ ಶಿಲ್ಪಾ ಅವರ ಆತ್ಮೀಯ ಸಂಬಂಧಿಕರು ಹಾಜರಿದ್ದರು.

    ಗಣೇಶ್ ಹಾಗೂ ಶಿಲ್ಪಾ ದಂಪತಿಗೆ ಮಗಳು ಚರಿತ್ರ್ಯ ಹಾಗೂ ಮಗ ವಿಹಾನ್ ಇದ್ದಾರೆ. ಗಣೇಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಬ್ಬರ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.