ಕನ್ನಡದ ಹಲವು ಯಶಸ್ವಿ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು (Srinivasaraj) ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಾಯಕರಾಗಿ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಚಿತ್ರದ ಚಿತ್ರೀಕರಣ ವಿಯೆಟ್ನಾಂ ನಲ್ಲಿ ಮುಕ್ತಾಯವಾಗಿದೆ. ಅಲ್ಲಿ ಚಿತ್ರದ ಎರಡು ಹಾಡುಗಳು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಇದರೊಂದಿಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ.
ಚಿತ್ರದಲ್ಲಿ ಐದು ಸುಮಧುರ ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.
ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ (Ganesh) ಸದ್ಯದಲ್ಲೇ ವಿಯೆಟ್ನಾಂನ (Vietnam) ವಿಮಾನ ಏರಲಿದ್ದಾರೆ. ಅವರ ನಟನೆಯ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಚಿತ್ರದ ಕೊನೆಯ ಹಂತದ ಚಿತ್ರೀಕರಣ ವಿಯೆಟ್ನಾಂನಲ್ಲಿ ನಡೆಯಲಿದ್ದು, ಇಡೀ ತಂಡ ಅಲ್ಲಿಗೆ ಪ್ರಯಾಣ ಬೆಳೆಸಲಿದೆ. ಶ್ರೀನಿವಾಸರಾಜು (Srinivasaraju) ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ಚಿತ್ರೀಕರಣ ನಡೆದಿದೆ.
ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.
ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ (Malavika Nair) ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ತೆಲುಗು ಸಿನಿಮಾ ರಂಗದ ಜನಪ್ರಿಯ ನಟ, ರಾಜಕಾರಣಿ ಮತ್ತು ನಿರ್ಮಾಪಕರೂ ಆಗಿರುವ ಬಂಡ್ಲ ಗಣೇಶ್ (Ganesh) ಗೆ ಒಂದು ವರ್ಷ ಜೈಲು ಹಾಗೂ 95 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಗೂಲ್ ನ್ಯಾಯಾಲಯವು ಶಿಕ್ಷೆಯ (Punishment) ಜೊತೆಗೆ 95 ಲಕ್ಷ ರೂಪಾಯಿ ಪಾವಂತಿಸುವಂತೆ ಸೂಚಿಸಿದೆ.
ಒಂಗೂಲಿನ ಜೆಟ್ಟಿ ವೆಂಕಟೇಶ್ವರ (Venkateswara) ಎನ್ನುವವರ ಹತ್ತಿರ ಬಂಡ್ಲ ಗಣೇಶ್ ಹಣಕಾಸು ವ್ಯವಹಾರ ಮಾಡಿದ್ದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ 95 ಲಕ್ಷ ರೂಪಾಯಿ ಮೊತ್ತದ ಚೆಕ್ ಕೂಡ ನೀಡಿದ್ದರು. ಕೊಟ್ಟಿರೋ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ವೆಂಕಟೇಶ್ವರ ಕೋರ್ಟ್ ಮೆಟ್ಟಿಲು ಏರಿದ್ದರು.
ಹಾಸ್ಯ ನಟರಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗಣೇಶ್, ಕೇವಲ ಕಲಾವಿದರಾಗಿ ಉಳಿದುಕೊಂಡಿಲ್ಲ. ನಿರ್ಮಾಪಕರಾಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕರಾಗಿ ಭಾರೀ ಬಜೆಟ್ ಸಿನಿಮಾಗಳನ್ನೂ ಮಾಡಿದ್ದಾರೆ.
ಸಿಂಪಲ್ ಸುನಿ (Simple Suni) ನಿರ್ದೇಶಿಸಿ ವಿನಯ್ ರಾಜ್‌ಕುಮಾರ್ (Vinod Rajkumar) ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಬೆಂಗಳೂರಿನ ಜಿಟಿ ಮಾಲ್‌ನಲ್ಲಿರುವ ಎಂಎಂ ಲೆಗಸಿಯಲ್ಲಿ ಗುನುಗುನುಗು ಎಂಬ ಮೆಲೋಡಿ ಮಸ್ತಿಯನ್ನು ಗೋಲ್ಡನ್ ಸ್ಟಾರ್ ಗಣೇಶ್ (Ganesh) ರಿಲೀಸ್ ಮಾಡಿ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಸಿನಿಮಾಗೆ ಸಾಥ್ ನೀಡಿದರು.
ಹಾಡು ಬಿಡುಗಡೆ ಮಾತನಾಡಿದ ಗಣೇಶ್, ಹಾಡು ಬಹಳ ಚೆನ್ನಾಗಿದೆ. ಆ ಹುಕ್ ಲೈನ್ ಬಹಳ ಇಷ್ಟವಾಯಿತು. ಗುನು ಗುನುಗು ಅಂತಾ. ನನಗೆ ಈ ರೀತಿ ಸಾಂಗ್ ಕೇಳಲು ಬಹಳ ಇಷ್ಟ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ವಿನಯ್ ಹಾಗೂ ಹೀರೋಯಿನ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ಅದು ಸಿಂಪಲ್ ಸುನಿ ಅಲ್ಲ ಕಂಪ್ಲಿಕೇಟೇಡ್ ಸುನಿ. ಕಥೆ ಮಾಡುವ ವಿಚಾರದಲ್ಲಿ ಕಂಪ್ಲಿಕೇಷನ್ ಇದೆ. ಸುನಿ ಕಥೆ ಹೇಳಬೇಕಾದರೆ ಸಿಂಪಲ್ ಆಗಿ ಹೇಳ್ತಾರೆ. ಸುನಿ ಅವರ ಜೊತೆ ನನ್ನ ದೊಡ್ಡ ಜರ್ನಿ ಇದೆ. ಚಮಕ್ ಆದ್ಮೇಲೆ ಸಿಕ್ತಾ ಇದ್ದೇವು. ಯಾವುದಾದರೂ ಲೈನ್ ಬಂದರೆ ಹೇಳುವವರು. ಮೂರ್ನಾಲ್ಕು ಲೈನ್ ಹೇಳಿದಾಗ ಗೊತ್ತಾಯ್ತು ಸಿಂಪಲ್ ಸುನಿ ಅಲ್ಲ ಕಂಪ್ಲಿಕೇಟೆಡ್ ಸುನಿ. ಒಂದ್ ಒಂದು ಸಾರಿಗೆ ಒಂದೊಂದು ಐಡಿಯಾ ತರುತ್ತಾರೆ. ಅದೇ ತರ ಈ ಸಿನಿಮಾ ಕೂಡ ವಿಭಿನ್ನವಾಗಿ ಇರುತ್ತದೆ ಅಂದುಕೊಂಡಿದ್ದೇನೆ. ಸುನಿಯ ಡೈಲಾಗ್, ಬರವಣಿಗೆ ಶೈಲಿ ನಾನು ದೊಡ್ಡ ಅಭಿಮಾನಿ. ಯಾವ ನಿರ್ದೇಶಕನಿಗೆ ಬರವಣಿಗೆ, ಭಾಷೆ ಹಿಡಿತ ಇರುತ್ತದೆಯೋ ಆತನಿಗೆ ತುಂಬಾ ಚೆನ್ನಾಗಿ ಹೊಳೆಯುತ್ತದೆ ಎಲ್ಲಾ. ನಮ್ಮ ಭಾಷೆ, ಅಕ್ಷರ, ವ್ಯಾಕರಣ ಮೇಲೆ ಹಿಡಿತ ಇರುವ ನಿರ್ದೇಶಕರಲ್ಲಿ ಒಬ್ಬರು ಸುನಿ ಎಂದರು.
ನಟ ವಿಜಯ್ ರಾಜ್ ಕುಮಾರ್ ಮಾತನಾಡಿ, ಗುನು ಗುನುಗು ತುಂಬಾ ಇಷ್ಟವಾದ ಹಾಡು. ವೀರ್ ಸಮರ್ಥ್ ಅವರು ತುಂಬಾ ಚೆನ್ನಾಗಿ ಮ್ಯೂಸಿಕ್ ಮಾಡಿದ್ದಾರೆ. ಸಚಿನ್ ಅವರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಇದೊಂದೇ ಕೊರಿಯೋಗ್ರಾಫ್ ಸಾಂಗ್ ಈ ಚಿತ್ರದಲ್ಲಿ ಇರುವುದು. ಇಡೀ ಟೀಂಗೆ ಧನ್ಯವಾದ. ಈ ಬಾರಿ ಫೈಟ್ ಇಲ್ಲ ಬರೀ ಪ್ರೀತಿ. ಒಂದು ಸರಳ ಪ್ರೇಮಕಥೆ ನೋಡಿ. ನೆಕ್ಸ್ಟ್ ಆಕ್ಷನ್ ನೋಡಿ.ನನ್ನದು ಅತಿಷಯ ಎಂಬ ಪಾತ್ರ. ಚಿಕ್ಕಪೇಟೆಯಲ್ಲಿ ಇಡೀ ಕುಟುಂಬ ಕಥೆ. ಈ ಕಥೆಯನ್ನು ಸುನಿ ಅವರು ತುಂಬಾ ಸರಳವಾಗಿ ಹೇಳಿದ್ದಾರೆ ಎಂದರು.
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನಿರ್ಮಾಪಕರಾದ ರಮೇಶ್ ಸರ್ ಸಿನಿಮಾಗೆ ಏನೂ ಬೇಕು ಎಲ್ಲಾ ಕೊಟ್ಟಿದ್ದಾರೆ. ಪಾತ್ರಕ್ಕೆ ಏನೂ ಬೇಕು ಎಲ್ಲವನ್ನೂ ವಿನಯ್ ಅವರು ಕಲಿತ್ತಿದ್ದಾರೆ. ಸ್ವಾದಿಷ್ಟ, ಮಲ್ಲಿಕಾ ಇಬ್ಬರು ಅದ್ಭುತವಾಗಿ ನಟಿಸಿದ್ದಾರೆ. ಸಚಿನ್ ಅದ್ಭುತವಾಗಿ ಹಾಡು ಬರೆದಿದ್ದಾನೆ. ವೀರ ಸಮರ್ಥ್ ಸರ್ ಫರ್ಪೆಕ್ಟ್ ಟೈಮ್ ಗೆ ಡಿಲಿವರಿ ಮಾಡುವವರು. ಯಾವಾಗಲೂ ಕೀ ಬೋರ್ಡ್ ಮುಂದೆ ಕುಳಿತಿರುತ್ತಾರೆ. ಸಿನಿಮಾ ನೋಡಿದ ನಂತರ ಅವರ ಸ್ಟ್ರೇಂಥ್ ಏನೂ ಅನ್ನೋದು ಗೊತ್ತಾಗುತ್ತದೆ ಎಂದರು. ಸ್ವಾತಿಷ್ಠ ಕೃಷ್ಣನ್ ಮಾತನಾಡಿ, ಸುನಿ ಸರ್ ನನ್ನ ಈ ಚಿತ್ರಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ರಮೇಶ್ ಸರ್ ಅಂತಾ ಪ್ರೊಡ್ಯೂಸರ್ ಎಲ್ಲಾ ಆರ್ಟಿಸ್ಟ್ ಗೆ ಸಿಗಬೇಕು. ತುಂಬಾ ಫ್ರೆಂಡ್ಲಿ. ವಿನಯ್ ಅವರ ಬಗ್ಗೆ ತುಂಬಾ ಹೇಳಬೇಕಿದೆ. ಮುಂದಿನ ಇವೆಂಟ್ ನಲ್ಲಿ ಒಂದೊಂದಾಗಿ ಹೇಳುತ್ತೇನೆ. ನನಗೆ ಒಳ್ಳೆ ಕೋ ಆರ್ಟಿಸ್ಟ್. ನಿಮ್ಮ ಜೊತೆ ನಟಿಸಲು ಮತ್ತಷ್ಟು ಅವಕಾಶಗಳು ಸಿಗಲಿ. ಟೆಕ್ನಿಷಿಯನ್ಸ್ ತುಂಬಾ ಫ್ರೆಂಡ್ಲಿಯಾಗಿ ಟ್ರೀಟ್ ಮಾಡಿದರು. ಇದು ನನ್ನ ಎರಡನೇ ಮೂವೀ. ಅನುರಾಧಾ ಪಾತ್ರ ನಿಮಗೆ ಇಷ್ಟ ಆಗುತ್ತದೆ ಎಂದರು.
ಮಲ್ಲಿಕಾ ಸಿಂಗ್ ಮಾತನಾಡಿ, ಈ ಅದ್ಭುತ ಪ್ರಾಜೆಕ್ಟ್ ಭಾಗವಾಗಿದ್ದಕ್ಕೆ ಖುಷಿ ಇದೆ. ಮೊದಲು ಈ ಪ್ರಾಜೆಕ್ಟ್ ನಲ್ಲಿ ನಟಿಸುವಾಗ ಭಯವಾಗಿತ್ತು. ಆ ನಂತರ ಎಲ್ಲಾ ಸುಲಭವಾಗಿ ಆಯ್ತು. ನಿಮಗೆ ಈ ಚಿತ್ರ ಇಷ್ಟವಾಗುತ್ತದೆ ಎಂದರು. ಗುನುಗುನುಗು ಹಾಡಿಗೆ ಸಚಿನ್ ಸಂಘೈ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದ್ದು, ಕೇಶವ್ ಆನಂದ್ ಧ್ವನಿಯಾಗಿದ್ದಾರೆ. ವಿನಯ್ ರಾಜ್ ಕುಮಾರ್ ಹಾಗೂ ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಸ್ಪೆಷಲ್ ರೋಲ್ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ. ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆದವರು. ಇದೀಗ ಅವರು ‘ಒಂದು ಸರಳ ಪ್ರೇಮಕಥೆ’ ಹೇಳೋದಿಕ್ಕೆ ಬರ್ತಿದ್ದಾರೆ. ರಾಮ್ ಮೂವೀಸ್ ಬ್ಯಾನರ್ ನಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.
ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಚಿತ್ರದ ನಾಯಕಿ ಮಾಳವಿಕ ನಾಯರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ನಾಯಕಿ ಮಾಳವಿಕ ನಾಯರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.
ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಇಟಲಿ ಮತ್ತು ಮಾಲ್ಟಾದಲ್ಲಿ ನಡೆಯಲಿದೆ. ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕ ನಾಯರ್ ಹಾಗೂ ಶರಣ್ಯ ಶೆಟ್ಟಿ ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಳಲಿದ್ದಾರೆ.
ಹಾಡುಗಳ ಚಿತ್ರೀಕರಣಕ್ಕಾಗಿ ಮೂವತ್ತು ಜನರ ತಂಡ ಇಟಲಿಗೆ ಪ್ರಯಾಣ ಬೆಳಸಲಿದೆ. ಹೊಸವರ್ಷ ಆರಂಭದ ಸಂದರ್ಭದಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಚಿತ್ರತಂಡ ಹೊಸವರ್ಷದ ಶುಭಾಶಯ ತಿಳಿಸಿದೆ.
ಯಶಸ್ವಿ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕಿದೆ.
ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಅನಂತ್ ನಾಗ್, ತಾರಾ ಹಾಗೂ ಸಾಧುಕೋಕಿಲ ಪ್ರಮುಖ ಭೂಮಿಕೆಯಲ್ಲಿದ್ದ ‘ಶ್ರಾವಣಿ ಸುಬ್ರಮಣ್ಯ’ (Shravani Subramanya) ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ದಶಕದ ಸಂಭ್ರಮದ ನೆನಪಿನಲ್ಲಿಯೇ “ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ” ಸಿನಿಮಾ ಅನೌನ್ಸ್ ಮಾಡಿದ್ದಾರೆ ನಿರ್ಮಾಪಕ ಕೆ.ಎ.ಸುರೇಶ್.
27 ಡಿಸೆಂಬರ್ 2013 ರಲ್ಲಿ ತೆರೆಕಂಡಿದ್ದ ಶ್ರಾವಣಿ ಸುಬ್ರಮಣ್ಯ, ಸೂಪರ್ ಹಿಟ್ ಆಗುವ ಮೂಲಕ ಎಲ್ಲರಿಗೂ ಬ್ರೇಕ್ ಕೊಟ್ಟಿತ್ತು. ಗಣೇಶ್ – ಅಮೂಲ್ಯ ಜೋಡಿಯ ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರಿಂದ ಸಿನಿಮಾ ಶತಕ ಪೂರೈಸುವಲ್ಲಿ ಯಶಸ್ವಿಯಾಯಿತು. ಇದೀಗ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಅಧಿಕೃತವಾಗಿ ಘೋಷಣೆಯಾಗಿದೆ. ಸದ್ಯ ಹರಿಬಿಟ್ಟಿರುವ ಕಲರ್ ಫುಲ್ ಪೋಸ್ಟರ್ ಸಿನಿಮಾ ಮೇಲೆ ಕೂತುಹಲ ಮಾಡುವಂತಿದೆ. ಶ್ರಾವಣಿ ಸುಬ್ರಮಣ್ಯ ಗೆದ್ದಿರುವುದರಿಂದ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಜೋಡಿ ಮೋಡಿ ಮಾಡಲಿದೆ ಎಂಬುದು ಪೋಸ್ಟರ್ ನೋಡಿದವರ ಅನಿಸಿಕೆ.
ಮಂಜು ಸ್ವರಾಜ್ ಅವರೇ ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಕಲಾವಿದರ ಆಯ್ಕೆಗಾಗಿ ಆಡಿಷನ್ ಕರೆದಿದೆ ಚಿತ್ರತಂಡ. ಇದೊಂದು ಯೂತ್ ಫುಲ್ ಲವ್ ಕಮ್ ಫ್ಯಾಮಿಲಿ ಸ್ಟೋರಿ ಆಗಿರುವುದರಿಂದ ಚಿತ್ರದ ನಾಯಕ, ನಾಯಕಿ ಪಾತ್ರಕ್ಕೆ ಹುಡುಕಾಟ ಶುರುವಾಗಿದೆ. 20 ವರ್ಷದ ಆಸುಪಾಸು ಇದ್ದವರು ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಯಾಗಲು ಅರ್ಜಿ ಸಲ್ಲಿಸಬಹುದು.
ಎಲ್ಲಾ ಅಂದುಕೊಂಡಂತೆ ನಡೆದರೆ ಹೊಸ ವರ್ಷದಲ್ಲಿ ಹೊಸ ಶ್ರಾವಣಿ ಸುಬ್ರಮಣ್ಯ ಲವ್ ಕಹಾನಿ ಶುರುವಾಗಲಿದೆ. ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಕುರಿತು ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.
ಕೆಸಿಸಿ (KCC) ಪಂದ್ಯಾವಳಿ ನಿನ್ನೆಗೆ ಮುಕ್ತಾಯವಾಗಿದೆ. ಅಂತಿಮ ಹಣಾಹಣೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನೇತೃತ್ವದ ಗಂಗಾ ವಾರಿಯರ್ಸ್ ಟೀಮ್ ಈ ವರ್ಷದ ಕ್ರಿಕೆಟ್ ಕಪ್ ಅನ್ನು ಗೆದ್ದು ಬೀಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗಣೇಶ್ ಮತ್ತು ಶಿವರಾಜ್ ಕುಮಾರ್ (Shivaraj Kumar) ಟೀಮ್ ನಡುವೆ ಅಂತಿಮ ಪಂದ್ಯ ಏರ್ಪಟ್ಟಿತ್ತು. ಗಣೇಶ್ ಟೀಮ್ ಮುಂದೆ ಶಿವಣ್ಣ ಟೀಮ್ ಶರಣಾಗಬೇಕಾಯಿತು. ವಿನ್ನರ್ ಆಗಿ ಗಂಗಾ ವಾರಿಯರ್ಸ್ ಹೊರ ಹೊಮ್ಮಿದ್ದಾರೆ.
ಶುಭ ಕೋರಿದ ಡಿಕೆಶಿ
ನಮ್ಮ ಚಂದನವನದ ನಟರು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಸೇರಿ ಒಟ್ಟಿಗೆ ಕ್ರಿಕೆಟ್ (Kannada Chalanchitra Cup) ಪಂದ್ಯ ಆಡುವ ಮೂಲಕ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಶ್ಲಾಘಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಕೆಸಿಸಿ ಕಪ್ ಫೈನಲ್ ಪಂದ್ಯ ವೀಕ್ಷಿಸಿದ ಉಪಮುಖ್ಯಮಂತ್ರಿಗಳು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಭಿಮಾನಿಗಳ ಜತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರುತ್ತದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ ಎಂದರು.
ಸ್ಟಾರ್ ಕಲಾವಿದರ ಕೆಸಿಸಿ ಪಂದ್ಯ ಡಿಸೆಂಬರ್ 23ರಿಂದ ನಡೆಯುತ್ತಿದೆ. ಈ ಪಂದ್ಯ 3 ದಿನಗಳ ಕಾಲ ಸ್ಟಾರ್ ಟೀಮ್‌ಗಳ ಮಧ್ಯೆ ಹಣಾಹಣಿ ನಡೆಯಿತು. ಡಿಸೆಂಬರ್ 25ರಂದು ಕಡೆಯ ದಿನದ ರೋಚಕ ಪಂದ್ಯ ವೀಕ್ಷಿಸಲು ಡಿ.ಕೆ ಶಿವಕುಮಾರ್ ಭಾಗಿಯಾಗಿ ಕಿಚ್ಚ ಸುದೀಪ್ ಜೊತೆ ಕೆಲ ಕಾಲ ಸಮಯ ಕಳೆದರು. ಕ್ರಿಕೆಟ್ ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ.
ಶ್ರೀನಿವಾಸರಾಜು (Srinivasaraju) ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಾಯಕರಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಡಬ್ಬಿಂಗ್ ನಡೆಯುತ್ತಿದ್ದು, ಡಬ್ಬಿಂಗ್ ಕೂಡ ಮುಕ್ತಾಯ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಲಿದೆ.
ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.
ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಮತ್ತೊಂದು ಜೋಡಿ ತೆರೆಯ ಮೇಲೆ ಕಾಣಲು ಸಜ್ಜಾಗಿದೆ. ಈ ಜೋಡಿಯನ್ನು ಒಂದಾಗಿಸಲು ಈಗಾಗಲೇ ಹಲವರು ಪ್ರಯತ್ನ ಪಟ್ಟರೂ ಆಗಿರಲಿಲ್ಲ. ಇದೀಗ ಅದು ಸಾಧ್ಯವಾಗಿದೆ. ಹೀಗಾಗಿ ಇಬ್ಬರೂ ಅಭಿಮಾನಿಗಳಿಗೆ ಸಂಭ್ರಮ ಮನೆ ಮಾಡಿದೆ.
ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಮೂಲಕ ಪುಷ್ಪಕ ವಿಮಾನ, ಇನ್ಸ್ ಪೆಕ್ಟರ್ ವಿಕ್ರಂ, ಮಾನ್ಸೂನ್ ರಾಗದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ನಿರ್ಮಾಪಕ ವಿಖ್ಯಾತ್ (Vikyata) ತಮ್ಮ ಸಂಸ್ಥೆಯ ನಿರ್ಮಾಣದ ಆರನೇ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಪ್ರಥಮ ಪ್ರಯತ್ನದಲ್ಲೇ ಮಲ್ಟಿ ಸ್ಟಾರ್ ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ- ಸೋಮವಾರ ಆಟೋ, ಟ್ಯಾಕ್ಸಿ ಸಿಗೋದು ಅನುಮಾನ
ಸ್ಟಾರ್ ನಟರಾದ ರಮೇಶ್ ಅರವಿಂದ್ (Ramesh Aravind) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಇಬ್ಬರನ್ನೂ ನಾಯಕರನ್ನಾಗಿಟ್ಟುಕೊಂಡು ದೇಶ ಕಾಯುವ ವೀರಯೋಧರ ಕುರಿತಾಗಿ ಒಂದಷ್ಟು ಮಹತ್ವದ ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.
ಈ ಸಿನಿಮಾದಲ್ಲಿ ವೀರ ಸೇನಾನಿಗಳ ನಡುವೆ ನಾಯಕರಿಬ್ಬರೂ ವಿದೂಷಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈಗ ಉದ್ಭವಿಸಿರುವ ಎಲ್ಲಾ ಕುತೂಹಲಗಳಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ವಿಖ್ಯಾತ್ ಅವರೇ ಉತ್ತರ ನೀಡಬೇಕಿದೆ. ಇಬ್ಬರ ಕಲಾವಿದರ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ಅವರೇ ಹೇಳಬೇಕು.