Tag: ಗಣೇಶ್

  • ಇಲ್ಲಿದೆ `ಮುಗುಳು ನಗೆ’ಯ ನಗುವಿನ ರಹಸ್ಯ-ಈ ಪಾತ್ರಗಳಲ್ಲಿ ಕಾಣಿಸಲಿದ್ದಾರೆ ನಾಲ್ವರು ನಾಯಕಿಯರು

    ಇಲ್ಲಿದೆ `ಮುಗುಳು ನಗೆ’ಯ ನಗುವಿನ ರಹಸ್ಯ-ಈ ಪಾತ್ರಗಳಲ್ಲಿ ಕಾಣಿಸಲಿದ್ದಾರೆ ನಾಲ್ವರು ನಾಯಕಿಯರು

    ಬೆಂಗಳೂರು: ಹತ್ತು ವರ್ಷಗಳ ನಂತರ ಸ್ಯಾಂಡಲ್‍ವುಡ್ ಹಿಟ್ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ರು ಒಂದಾಗಿದ್ದು, ಸಿನಿರಸಿಕರನ್ನು ಮುಗುಳ್ನಗೆಯಲ್ಲಿ ತೇಲಿಸಲು ಶುಕ್ರವಾರ ನಿಮ್ಮ ಮುಂದೆ ಬರಲಿದ್ದಾರೆ. ಈಗಾಗಲೇ ಗಣೇಶ್ ತಮ್ಮ ಮುಗುಳ್ನಗೆ ಮೂಲಕ ಅಭಿಮಾನಿಗಳನ್ನ ಸಿನಿಮಾದೆಡೆ ಸೆಳೆಯಲು ಯಶಸ್ವಿಯಾಗಿದ್ದಾರೆ.

    ಗಣೇಶ್ ಮುಗುಳು ನಗೆಯಲ್ಲಿ ಒಟ್ಟು ನಾಲ್ಕು ನಾಯಕಿಯರ ನಗು ಸಹ ಸೇರಿಕೊಂಡಿದೆ. ಗಣೇಶರೊಂದಿಗೆ ಆಶಿಕಾ, ನಿಖಿತಾ, ಅಮೂಲ್ಯ ಮತ್ತು ಅಪೂರ್ವ ಅರೋರಾ ಹಿತವಾದ ನಗು ನಿಮ್ಮನ್ನು ಸೆಳೆಯಲಿದೆ. ಸಿನಿಮಾದ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಗಣೇಶ್ ಸ್ಕ್ರಿಪ್ಟ್ ನ ಕೆಲವೊಂದು ಡೈಲಾಗ್ ಗಳನ್ನು ಮಾರ್ಕ್ ಮಾಡಿಕೊಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ಹಿಂದೆ ಗಣೇಶ್ ಮುಂಗಾರು ಮಳೆಯ ಸಿನಿಮಾದಲ್ಲಿಯೂ ಕೆಲವೊಂದು ಡೈಲಾಗ್ ಗಳನ್ನು ಮಾರ್ಕ್ ಮಾಡಿದ್ದರು.

    ಹೀಗೆ ಕಾಣಿಸಲಿದ್ದಾರೆ ನಾಯಕಿಯರು:
    1. ಆಶಿಕಾ: ಮೈಸೂರಿನ ಹುಡುಗಿಯಾಗಿ ಆಶಿಕಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಜಿನಿಯರಿಂಗ್ ಅಥವಾ ಪದವಿ ಮುಗಿದಾಗ ಉಂಟಾಗುವ ಲವ್ ಮತ್ತು ಭಾವನೆಗಳನ್ನು ಮರೆಮಾಚುವ ಚೆಂದದ ಹುಡುಗಿಯಾಗಿ ಆಶಿಕಾ ಬಣ್ಣ ಹಚ್ಚಿದ್ದಾರೆ.

    2. ನಿಖಿತಾ: ಪ್ರಬುದ್ಧತೆಯನ್ನು ಹೊಂದಿರುವ ಹುಡುಗಿಯಾಗಿ ನಿಖಿತಾ ಮಿಂಚಿದ್ದಾರೆ. ಜೀವನವನ್ನು ಶಿಸ್ತುಬದ್ಧ ಮತ್ತು ಕೆಲವೊಂದು ತನ್ನದೇ ಕಂಡೀಷನ್ ಗಳ ನಡೆಸಬೇಕು ಎಂದು ನಂಬಿರುವ ಮಾಡರ್ನ್ ಥಾಟ್ ಹೊಂದಿರುವ ಹುಡುಗಿ.

    3. ಅಮೂಲ್ಯ: ಇಲ್ಲಿ ಅಮೂಲ್ಯ ಮಧ್ಯಮ ವರ್ಗದಲ್ಲಿ ಬೆಳೆದ ಸುಂದರ ಹುಡುಗಿ. ನಾಯಕನೂ ಸಹ ಮಧ್ಯಮ ವರ್ಗದವನಾಗಿರುತ್ತಾನೆ. ಹಾಗೆಯೇ ಇಬ್ಬರ ನಡುವೆ ಉಂಟಾಗುವ ತೊಂದರೆ ಮತ್ತು ಅವುಗಳಿಂದ ಹೊರ ಬರಲು ಪ್ರಯತ್ನಿಸುವ ಪಾತ್ರವನ್ನು ಅಮೂಲ್ಯ ನಿರ್ವಹಿಸಿದ್ದಾರೆ.

    4. ಅಪೂರ್ವ ಅರೋರಾ: ಗ್ರಾಮೀಣ ಸೊಗಡಿನ, ಮುದ್ದಾದ ಮುಗ್ಧ ಹುಡುಗಿ ಅಪೂರ್ವ. ಗ್ರಾಮದಲ್ಲಿ ಹುಟ್ಟಿದ ಹುಡುಗಿ, ಬೇರೆ ಜಗತ್ತಿನ ಬಗ್ಗೆ ಅಷ್ಟಾಗಿ ತಿಳುವಳಿಕೆಯನ್ನು ಹೊಂದಿರುವ ಸಾದಾ ಸೀದಾ ಹಳ್ಳಿಯ ಚೆಲುವೆಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅಪೂರ್ವರ ಕುಂದಾಪುರ ಶೈಲಿಯ ಕನ್ನಡ ಭಾಷೆ ನಿಮಗೆ ಖಂಡಿತಾ ಇಷ್ಟವಾಗುತ್ತದೆ.

    ಸಿನಿಮಾ ಕಹಾನಿ: ಕಣ್ಣಲ್ಲಿ ಒಂದು ಹನಿ ಕಣ್ಣೀರು ಬರದ ಹುಡುಗನ ಜೀವನದಲ್ಲಿ ನಾಲ್ಕು ವಿಭಿನ್ನ ಹುಡುಗಿಯರು ಬಂದು ಹೋಗುತ್ತಾರೆ. ಈ ನಾಲ್ವರು ಹುಡುಗನ ಕಣ್ಣಲ್ಲಿ ಕಣ್ಣೀರು ತರಿಸುವ ಪ್ರಯತ್ನವನ್ನು ನಡೆಸುವ ಕಥೆಯನ್ನು ಸಿನಿಮಾ ಒಳಗೊಂಡಿದೆ.

    ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಿಡುಗಡೆಗೊಂಡಾಗ ಅದು ಒಂದು ಟ್ರೆಂಡ್ ಸೃಷ್ಟಿ ಮಾಡಿತ್ತು. ಅಂದು ಆ ಟ್ರೆಂಡ್ ಸೃಷ್ಟಿ ಮಾಡಿದ್ದ ಜೋಡಿ 10 ವರ್ಷಗಳ ಬಳಿಕ ಒಂದಾಗಿದೆ. ಹಾಗಾಗಿ ಭಟ್ರು ಮತ್ತು ನನಗೆ ಹೆಚ್ಚಿನ ಜವಬ್ದಾರಿ ಇದೆ ಎಂದು ನಟ ಗಣೇಶ್ ಹೇಳಿದರು.

    ಹರಿಕೃಷ್ಣರ 100ನೇ ಸಿನಿಮಾ: ಚಿತ್ರ ಒಟ್ಟು 8 ಹಾಡುಗಳನ್ನು ಹೊಂದಿದ್ದು, ಪ್ರತಿಯೊಂದು ಹಾಡು ಒಂದು ವಿಷಯವನ್ನು ಒಳಗೊಂಡಿದೆ. ಎಲ್ಲ ಹಾಡುಗಳು ಚೆನ್ನಾಗಿ ಮೂಡಿಬಂದಿದೆ. 5 ಮುಖ್ಯ ಹಾಡುಗಳು, 3 ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಸಿನಿಮಾದಲ್ಲಿ ಬರಲಿವೆ. ಇದು ಹರಿಕೃಷ್ಣರ ನೂರನೇ ಸಿನಿಮಾದ ಸಂಗೀತ ಸಂಯೋಜನೆಯನ್ನು ಹೊಂದಿದೆ. ಅವರ ಪರಿಶ್ರಮವಿಲ್ಲದ ಈ ಹಾಡುಗಳು ಹಿಟ್ ಆಗಲು ಸಾಧ್ಯವಿರಲಿಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು.

    ಮುಗುಳು ನಗೆ ಚಿತ್ರ ಎಸ್.ಎಸ್.ಫಿಲಂಸ್, ಗೋಲ್ಡನ್ ಮೂವೀಸ್ ಮತ್ತು ಯೋಗರಾಜ್ ಸಿನಿಮಾಸ್ ಬ್ಯಾನರ್‍ಗಳಲ್ಲಿ ನಿರ್ಮಾಣವಾಗಿದ್ದು, ಸೈಯದ್ ಸಲಾಂ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನೂ ಸಿನಿಮಾದ ವಿಶೇಷ ಪಾತ್ರದಲ್ಲಿ ನಿರ್ಮಾಪಕ ಸೈಯದ್ ಸಲಾಂ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.

  • ಹುಡುಗಿಯನ್ನ ತಬ್ಬಿಕೊಂಡಾಗ ಹೇಗಾಯ್ತು ಎಂಬುದನ್ನು ಗಣೇಶ್ ಹೀಗೆ ಹೇಳ್ತಾರೆ ನೋಡಿ

    ಹುಡುಗಿಯನ್ನ ತಬ್ಬಿಕೊಂಡಾಗ ಹೇಗಾಯ್ತು ಎಂಬುದನ್ನು ಗಣೇಶ್ ಹೀಗೆ ಹೇಳ್ತಾರೆ ನೋಡಿ

    ಬೆಂಗಳೂರು: ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ಮುಗುಳು ನಗೆ’ಯ ಟ್ರೇಲರ್ ಬಿಡುಗಡೆಗೊಂಡಿದ್ದು, ನೋಡುಗರನ್ನು ಮತ್ತೊಮ್ಮೆ ಮುಂಗಾರು ಮಳೆಯ ಲೋಕಕ್ಕೆ ಕರೆದುಕೊಂಡು ಹೋಗುವ ಪಥವನ್ನು ತೋರಿಸುತ್ತಿದೆ.

    ಹೌದು. ಡೈಲಾಗ್ ಗಳಿಂದಲೇ ಗೆದ್ದ ಮುಂಗಾರುಮಳೆ ಸಿನಿಮಾದಲ್ಲಿ ಈ ಚಿತ್ರದಲ್ಲೂ ಡೈಲಾಗ್ ಗಳಿಗೆ ಕೊರತೆ ಇಲ್ಲ ಎನ್ನುವಂತೆ ಟ್ರೇಲರ್ ಮೂಡಿಬಂದಿದೆ. “ತಬ್ಕೊಂಡಾಗ ಬಿಟ್ಟಾಂಗಾಯ್ತು..ಬಿಟ್ಟಾಗ ತಬ್ಕೊಂಡಗಾಯ್ತು..ಸೂರ್ಯ ತಂಪ ತಂಪಗೆ ಕಾಣಿಸ್ತಾಯಿದ್ದಾ.. ಚಂದ್ರ ಹೀಟ್ ಆದಹಾಗೆ ಕಾಣಿಸ್ತು.. ಒಂದು ದೊಡ್ಡ ಕಥೆ, ಇನ್ನೊಂದು ಪುಟ್ಟ ಕಥೆ…” ಎನ್ನುವ ಡೈಲಾಗ್ ಮುಗುಳುನಗೆಯಲ್ಲಿದೆ.

    ಸಿನಿಮಾದಲ್ಲಿ ಗಣೇಶ್‍ಗೆ ನಾಯಕಿಯರಾಗಿ ಅಮೂಲ್ಯ, ಆಶಿಕಾ, ಅಪೂರ್ವ ಅರೋರಾ ಮತ್ತು ನಿಖಿತಾ ನಾರಾಯಣ್ ಕಾಣಿಸಿಕೊಂಡಿದ್ದು, ಭಾವನಾ ವಿಶೇಷ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದಶಕಗಳ ಹಿಂದೆ ಮುಂಗಾರು ಮಳೆ ಮತ್ತು ಗಾಳಿಪಟ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಗಣೇಶ್-ಯೋಗರಾಜ್ ಭಟ್ ಜೋಡಿ ಒಂದಾಗಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.

    ಚಿತ್ರ ಯುವ ಮನಸ್ಸುಗಳ ನಡುವಿನ ಪ್ರೀತಿ-ಪ್ರೇಮದ ಕಥಾ ಹಂದರವನ್ನು ಒಳಗೊಂಡಿದ್ದು, ಯುವ ಮನಸ್ಸುಗಳ ಪ್ರೇಮ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಕಾಲೇಜನಲ್ಲಿ ಉಂಟಾಗುವ ಪ್ರೀತಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಬದಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

    ಮುಗುಳು ನಗೆ ಚಿತ್ರವನ್ನು ಎಸ್.ಎಸ್.ಫಿಲಂಸ್, ಗೋಲ್ಡನ್ ಮೂವೀಸ್ ಮತ್ತು ಯೋಗರಾಜ್ ಸಿನಿಮಾಸ್ ಬ್ಯಾನರ್‍ಗಳಲ್ಲಿ ನಿರ್ಮಾಣವಾಗಿದ್ದು, ಸೈಯದ್ ಸಲಾಂ ಚಿತ್ರವನ್ನು ನಿರ್ಮಿಸಿದ್ದಾರೆ. ಮುಗುಳು ನಗೆಯ ಹಾಡುಗಳು ಈಗಾಗಲೇ ಜನರ ಮೆಚ್ಚುಗೆಯನ್ನು ಪಡೆದುಕೊಂಡಿವೆ.

    https://www.youtube.com/watch?v=x1cHJWz8M6U

  • ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬ- ಆರೇಂಜ್ ಚಿತ್ರದ ಲೋಗೋ ರಿಲೀಸ್

    ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬ- ಆರೇಂಜ್ ಚಿತ್ರದ ಲೋಗೋ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್‍ಗೆ ಹುಟ್ಟುಹಬ್ಬದ ಸಂಭ್ರಮ, 38ನೇ ವಸತಂತಕ್ಕೆ ಕಾಲಿಟ್ಟ ಗಣೇಶ್ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ್ರು.

    ಈ ತಿಂಗಳಲ್ಲಿ ಮುಗುಳ್ನಗೆ ಚಿತ್ರ ಆಡಿಯೋ ರಿಲೀಸ್ ಆಗಲಿದ್ದು, ಇಂದಿನ ಹುಟ್ಟುಹಬ್ಬಕ್ಕೆ `ಆರೇಂಜ್’ ಚಿತ್ರದ ಲೋಗೋ ಬಿಡುಗಡೆ ಮಾಡಿದ್ದಾರೆ. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಗಣೇಶ್, ನನ್ನ ಅಭಿಮಾನಿ ಹಾಗೂ ಗೆಳೆಯರ ಜೊತೆ ಸೇರಲು ಪ್ರತಿ ವಷ್ಧ ಹುಟ್ಟುಹಬ್ಬ ನನಗೊಂದು ಅವಕಾಶ ಮಾಡಿಕೊಡುತ್ತದೆ. ಈ ಒಂದು ದಿನವನ್ನು ಅಭಿಮಾನಿ, ಗೆಳೆಯರಿಗೋಸ್ಕರವೇ ನೀಡುತ್ತಿದ್ದು, ಅವರ ಜೊತೆನೇ ಇರುತ್ತೇವೆ. ಹುಟ್ಟು ಹಬ್ಬ ಆಚರಿಸಕೊಳ್ಳೆಮದು ಬೇರೆ ಊರುಗಳಿಂದ ಅಭಿಮಾನಿಗಳು ಆಗಮಿಸುತ್ತಾರೆ ಅವರಿಗೆಲ್ಲರಿಗೂ ನನ್ನ ಧನ್ಯವಾದಗಳು ಅಂತಾ ಹೇಳಿದ್ರು.

    ಹುಟ್ಟುಹಬ್ಬದ ಜೊತೆಗೆ ಆರೇಂಜ್ ಚಿತ್ರದ ಲೋಗೋವನ್ನು ಬಿಡುಗಡೆ ಮಾಡಿದ್ದೇವೆ. ಸದ್ಯ ನಾನು ಚಮಕ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಒಂದು ವಾರದ ಬಳಿಕ ಮುಗುಳ್ನಗೆ ಆಡಿಯೋ ರಿಲೀಸ್ ಕೂಡ ಮಾಡಬೇಕೆಂದಿದ್ದೇವೆ.

     

  • ಅಮ್ಮು ಜಗ್ಗಿ ಕಲ್ಯಾಣೋತ್ಸವ: ಫೋಟೋಗಳಲ್ಲಿ ಅರಿಶಿಣ ಶಾಸ್ತ್ರ, ಮೆಹಂದಿ ಕಾರ್ಯಕ್ರಮ

    ಅಮ್ಮು ಜಗ್ಗಿ ಕಲ್ಯಾಣೋತ್ಸವ: ಫೋಟೋಗಳಲ್ಲಿ ಅರಿಶಿಣ ಶಾಸ್ತ್ರ, ಮೆಹಂದಿ ಕಾರ್ಯಕ್ರಮ

    ಬೆಂಗಳೂರು: ಬಂತು ಬಂತು ಅನ್ನುವಷ್ಟರಲ್ಲಿ ಅಮೂಲ್ಯ ಯ ಮದುವೆ ಬಂದೇ ಬಿಟ್ಟಿತು. ಇನ್ನೇನು ಶುಕ್ರವಾರ ಬೆಳಗಾದರೆ ಅಮ್ಮುಗೆ ತಾಳಿ ಕಟ್ಟುವ ಶುಭವೇಳೆ ಕಣ್ಣೆದುರು ಬರುತ್ತದೆ. ಆದಿಚುಂಚನಗಿರಿ ಮಠದಲ್ಲಿ ಈಗಾಗಲೇ ಇದಕ್ಕಾಗಿ ಎಲ್ಲಾ ತಯಾರಿಗಳು ನಡೆಯುತ್ತಿದೆ. ಕುಟುಂಬದ ಆಪ್ತರು, ಬಂಧುಗಳು, ಸ್ನೇಹಿತರು ಹಾಜರಿರಲಿದ್ದಾರೆ.

    ಬುಧವಾರ ಮತ್ತು ಗುರುವಾರ ಬೆಂಗಳೂರಿನ ವಧು ವರರ ಮನೆಗಳಲ್ಲಿ ಹಲವು ವಿಶೇಷ ಪೂಜೆಗಳು ನಡೆಯಿತು. ಬುಧವಾರ ಮದುಮಗ ಜಗದೀಶ್ ಮನೆಯಲ್ಲಿ ಅದ್ಧೂರಿಯಾಗಿ ಅರಿಶಿಣ ಶಾಸ್ತ್ರ ನೆರವೇರಿದರೆ, ನಟ ಗಣೇಶ್ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಿತು. ಇಂದು ಅದರ ಮುಂದುವರಿದ ಭಾಗವಾಗಿ ಅಮೂಲ್ಯ ಅರಿಶಿಣ ಶಾಸ್ತ್ರದಲ್ಲಿ ಪಾಲುಗೊಂಡರು. ಮನೆ ಮಂದಿ ಸೇರಿದಂತೆ ಬಂಧು ಬಾಂಧವರು ಅಮ್ಮುಗೆ ಅರಿಶಿಣ ಹಚ್ಚುವ ಮೂಲಕ ಮದುಮಗಳ ಕಳೆ ತಂದರು.

    ಅರಿಶಿಣ ಶಾಸ್ತ್ರ ಮುಗಿಸಿದ ಮೇಲೆ ಅಮೂಲ್ಯ ಮತ್ತವರ ಕುಟುಂಬ ನೇರವಾಗಿ ಆದಿಚುಂಚನಗಿರಿಗೆ ಪ್ರಯಾಣ ಬೆಳೆಸಿತು. ದೇವರ ದರ್ಶನ ಪಡೆದ ನಂತರ ಮಠದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಟುಂಬದ ಎಲ್ಲಾ ಸದಸ್ಯರು ಮಧ್ಯಾಹ್ನದ ಭೋಜನವನ್ನು ಅಲ್ಲಿಯೇ ಮುಗಿಸಿದರು. ಇತ್ತ ಜಗದೀಶ್ ಮನೆಯಲ್ಲಿ ಪೂಜೆ ನಡೆಯಿತು. ಅವರೂ ಮಧ್ಯಾಹ್ನದ ಹೊತ್ತಿಗೆ ಆದಿಚುಂಚನಗಿರಿಗೆ ಹೊರಟರು.

    ವರನನ್ನು ಮದುಮಗಳ ಕುಟುಂಬ ಆತ್ಮೀಯವಾಗಿ ಬರ ಮಾಡಿಕೊಂಡಿತು. ಎಲ್ಲರ ಮುಖಗಳಲ್ಲಿ ಅದಾಗಲೇ ಅಮ್ಮು ಮದುವೆಯ ಕಳೆಯೇ ನಲಿದಾಡುತ್ತಿತ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ಅಮ್ಮುಗೆ ತಾಳಿ ಕಟ್ಟುವ ಶುಭ ವೇಳೆ ಬರಲಿದೆ ಅನ್ನೋದೆ ಎದ್ದು ಕಾಣುತ್ತಿತ್ತು. ಗುರುವಾರ ಸಂಜೆಯಿಂದಲೇ ಅಮ್ಮು ಮತ್ತು ಜಗ್ಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲವೂ ಅವರ ಸಂಪ್ರದಾಯದ ಪ್ರಕಾರ ನಡೆಯುತ್ತಿದೆ.

     

  • ಹೊಸ ಲುಕ್‍ನಲ್ಲಿ ಗೋಲ್ಡನ್ ಸ್ಟಾರ್ ‘ಮುಗುಳು ನಗೆ’

    ಹೊಸ ಲುಕ್‍ನಲ್ಲಿ ಗೋಲ್ಡನ್ ಸ್ಟಾರ್ ‘ಮುಗುಳು ನಗೆ’

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ‘ಮುಗುಳುನಗೆ’ಯಲ್ಲಿ ಹೊಸ ಲುಕ್‍ನಿಂದ ಗಮನ ಸೆಳೆಯುತ್ತಿದ್ದಾರೆ. ಫಸ್ಟ್ ಟೈಂ ಗಣೇಶ್ ವಿಭಿನ್ನ ಹೇರ್ ಸ್ಟೈಲ್‍ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಇದೊಂದು ಟ್ರೆಂಡಿ ಹೇರ್ ಸ್ಟೈಲ್ ಆಗಿದ್ದು ಈ ಲುಕ್ ಅವ್ರ ಮುಂದಿನ ಚಿತ್ರ ಮುಗುಳು ನಗೆಯಲ್ಲಿ ನೋಡಬಹುದು. ಇತ್ತೀಚೆಗೆ ಸ್ಟಾರ್ ನಟರು ಪ್ರತಿಯೊಂದು ಸಿನಿಮಾಕ್ಕೂ ಹೇರ್ ಸ್ಟೈಲ್ ಬದಲಾಯಿಸೋ ಪದ್ಧತಿ ಜಾರಿಯಲ್ಲಿದೆ. ಆದ್ರೆ ಗಣೇಶ್ ಹೆಚ್ಚಾಗಿ ಹೇರ್ ಸ್ಟೈಲ್ ಮೇಲೆ ಪ್ರಯೋಗ ಮಾಡ್ತಿರಲಿಲ್ಲ. ಇದೀಗ ಫಸ್ಟ್ ಟೈಂ ಇಂಥದ್ದೊಂದು ಲುಕ್‍ನಲ್ಲಿ ಗಣೇಶ್ ಕಾಣಿಸಿಕೊಡು ಆಶ್ಚರ್ಯ ಮೂಡಿಸಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ತಮ್ಮ ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದರು. ಸುದೀಪ್ ಅಭಿಮಾನಿಗಳಂತೂ ಇದೇ ಹೇರ್ ಸ್ಟೈಲ್ ಮಾಡಿಸಿಕೊಂಡು ಕಿಚ್ಚ ಸುದೀಪ್ ಮೇಲಿನ ಅಭಿಮಾನವನ್ನು ಮೆರೆದಿದ್ದರು

     

  • ಎಸ್ ನಾರಾಯಣ್, ಗಣೇಶ್ ಕೇಸ್ ವಿಚಾರಣೆ ಮಾರ್ಚ್ 6ಕ್ಕೆ ಮುಂದೂಡಿಕೆ

    ಎಸ್ ನಾರಾಯಣ್, ಗಣೇಶ್ ಕೇಸ್ ವಿಚಾರಣೆ ಮಾರ್ಚ್ 6ಕ್ಕೆ ಮುಂದೂಡಿಕೆ

    ಬೆಂಗಳೂರು: ಚೆಲುವಿನ ಚಿತ್ತಾರ ಚಿತ್ರದ ಫೋಟೋ ಬಳಕೆ ಸಂಬಂಧ ನಟ ಗಣೇಶ್ ಹಾಗೂ ನಿರ್ದೇಶಕ ಎಸ್.ನಾರಾಯಣ್ ಪ್ರಕರಣದ ವಿಚಾರಣೆಯನ್ನು ಸಿಟಿ ಸಿವಿಲ್‍ಕೋರ್ಟ್ ಮಾರ್ಚ್ 6ಕ್ಕೆ ಮುಂದೂಡಿದೆ.

    ಎಸ್.ನಾರಾಯಣ್ ಪ್ರತಿಕ್ರಿಯಿಸಿ, ಇದು ಮಾತನಾಡಿ ಇತ್ಯರ್ಥ ಮಾಡಿಕೊಳ್ಳುವ ಸಮಸ್ಯೆ. ಆದರೆ ಗಣೇಶ್ ಫೋನ್‍ಗೂ ಸಿಗುತ್ತಿಲ್ಲ. ಪ್ರಕರಣ ಹಿಂಪಡೆಯದಿದ್ದರೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದರು.

    ಏನಿದು ಪ್ರಕರಣ?
    ಚೆಲುವಿನ ಚಿತ್ತಾರದ ಪ್ರಚಾರದ ಸಲುವಾಗಿ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿಯ ಜೊತೆ ನಿರ್ದೇಶಕ ಎಸ್.ನಾರಾಯಣ್ ಮೂರು ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಅವಧಿ ಅವಧಿ ಮುಗಿದ ಬಳಿಕವೂ ಸಂಸ್ಥೆ ಚಿತ್ರದ ಹೆಸರನ್ನು ಪ್ರಚಾರಕ್ಕೆ ಬಳಸಿತ್ತು. 2008ರಲ್ಲಿ ಒಪ್ಪಿಗೆಯಿಲ್ಲದೆ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ತನ್ನ ಫೋಟೋಗನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಚಿತ್ರನಟ ಗಣೇಶ್ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ವಿರುದ್ಧ 75 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.

    ಆದರೆ, ಮೋಕ್ಷ ಅಗರಬತ್ತಿ ಕಂಪೆನಿ ಚೆಲುವಿನ ಚಿತ್ತಾರ ಚಿತ್ರದ ನಿರ್ದೇಶಕ ಎಸ್.ನಾರಾಯಣ್‍ರನ್ನು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯಕ್ಕೆ ಕೋರಿದ್ದರಿಂದ ಕೋರ್ಟ್ ನಾರಾಯಣ್ ಅವರಿಗೂ ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿರುವ ನಾರಾಯಣ್, ಗಣೇಶ್ ದಾಖಲಿಸಿದ ದೂರಿನಿಂದ ತಮಗೂ ಸಮನ್ಸ್ ಬಂದಿದ್ದು, ಮಾನಹಾನಿಯುಂಟಾಗಿದೆ. ಹೀಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ತಮ್ಮ ವಕೀಲ ಶಂಕರಪ್ಪ ಅವರಿಂದ ಗಣೇಶ್‍ಗೆ ನೋಟಿಸ್ ಕೊಡಿಸಿದ್ದಾರೆ.

     

  • ಸೆಲ್ಫಿ ಅಪ್ಲೋಡ್ ಮಾಡಿ ಗಣೇಶ್ ದಂಪತಿಗೆ ಥ್ಯಾಂಕ್ಸ್ ಎಂದ ಅಮೂಲ್ಯ

    ಸೆಲ್ಫಿ ಅಪ್ಲೋಡ್ ಮಾಡಿ ಗಣೇಶ್ ದಂಪತಿಗೆ ಥ್ಯಾಂಕ್ಸ್ ಎಂದ ಅಮೂಲ್ಯ

    ಬೆಂಗಳೂರು: ನಟಿ ಅಮೂಲ್ಯ, ಜಗದೀಶ್ ಅವರ ನಿಶ್ಚಿತಾರ್ಥ ಸಮಾರಂಭ ಮಾರ್ಚ್ 6 ರಂದು ನಡೆಯಲಿರುವುದು ನಿಮಗೆ ಗೊತ್ತೇ ಇದೆ. ಈ ಮದುವೆಗೆ ಕಾರಣರಾದ ಶಿಲ್ಪಾ ಗಣೇಶ್ ದಂಪತಿಗೆ ಅಮೂಲ್ಯ ಈಗ ಧನ್ಯವಾದ ಹೇಳಿದ್ದಾರೆ.

    ಅಮೂಲ್ಯ ಅವರು ಬಾವಿ ಪತಿ ಜೊತೆಗಿರುವ ಸೆಲ್ಫಿಯನ್ನು ಇದೇ ಮೊದಲ ಬಾರಿಗೆ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋದ ಜೊತೆ ಜಗದೀಶ್ ಅವರನ್ನು ಪರಿಚಯಿಸಿದ್ದಕ್ಕೆ ಗಣೇಶ ದಂಪತಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ನನ್ನ ಜೀವನದಲ್ಲಿ ಬೆನ್ನೆಲುಬಾಗಿ ನಿಂತಿರುವ ನೀವಿಬ್ಬರೂ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದು ಅಮುಲ್ಯ ಶಿಲ್ಪಾ ದಂಪತಿಯನ್ನು ಹೊಗಳಿ ಮತ್ತೊಂದು ಗ್ರೂಪ್ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಗುರುವಾರ ಇವರಿಬ್ಬರ ಮದುವೆ ವಿಚಾರವಾಗಿ ಮಾತುಕತೆ ನಡೆದಿತ್ತು. ಮಾರ್ಚ್ 6ಕ್ಕೆ ಅಮೂಲ್ಯ ಜಗದೀಶ್ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ.

    ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು

  • ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ಬೆಂಗಳೂರು: ಮನೆಯವರ ಒಪ್ಪಿಗೆಯಂತೆ ಗುರುವಾರ ಅಮೂಲ್ಯ-ಜಗದೀಶ್ ಮೊದಲನೇ ಶಾಸ್ತ್ರ ಮುಗಿಸಿದ್ದಾರೆ. ತುಂಬಾ ಸಂತೋಷವಾಗ್ತಿದೆ. ಜಗದೀಶ್ ಬಗ್ಗೆ ಹೆಚ್ಚಿಗೆ ಯಾರಿಗೂ ತಿಳಿದಿಲ್ಲ. ಆದ್ರೆ ನನಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರ ಇಡೀ ಕುಟುಂಬ ನನ್ನ ಕುಟುಂಬ ಇದ್ದಂತೆ. ಬಹಳ ಒಳ್ಳೆಯ ಕುಟುಂಬವಾಗಿದೆ. ಮಾತ್ರವಲ್ಲದೇ ಜಗದೀಶ್ ಕೂಡ ಒಳ್ಳೆಯ ಹುಡುಗ. ಹೀಗಾಗಿ ನಮ್ಮ ಅಮೂಲ್ಯ ಕೂಡ ಒಳ್ಳೆಯ ಹುಡುಗಿ ಅಂತಾ ತಿಳಿದಿರುವ ವಿಷಯ. ಹೀಗಾಗಿ ಇವರಿಬ್ಬರು ಬಾಳಲ್ಲಿ ಒಂದಾಂದ್ರೆ ಮುಂದೆ ಚೆನ್ನಾಗಿರಬಹುದೆಂದು ನಮ್ಮ ನಂಬಿಕೆ. ಒಟ್ಟಿನಲ್ಲಿ ಇದೀಗ ಮೊದಲನೇ ಶಾಸ್ತ್ರ ಮುಗಿಸಿದ್ದೀವಿ. ಮಾರ್ಚ್ 6ರಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಎಲ್ಲವೂ ಚೆನ್ನಾಗಿ ನಡೆಯಲಿ ಅಂತಾ ನಟ ಗಣೇಶ್ ಆಶಿಸಿದ್ರು.

    ಪ್ರಪೋಸಲ್ ಹೇಗೆ ಬಂತು?: ಜಗದೀಶ್ ಗೆ ಮನೆಯಲ್ಲಿ ಹುಡುಗಿ ಹುಡುತ್ತಾ ಇದ್ರು. ಇತ್ತ ನಮ್ಮಿಬ್ರಿಗೂ ಬಹಳ ಬೇಕಾದವ್ರು ಒಬ್ಬರು ಇದ್ರು. ಅವರ ಕೈಯಲ್ಲಿ ಈ ಪ್ರಪೋಸಲನ್ನು ನಾವು ಕರೆಸಿದ್ವಿ. ಆಮೇಲೆ ಜಾತಕ ಕೂಡಿ ಬರುತ್ತಾ ಅಂತಾ ಚೆಕ್ ಮಾಡಿದ್ವಿ. ಆ ಸಂದರ್ಭದಲ್ಲಿ ಇಬ್ಬರ ಜಾತಕವೂ ಕೂಡಿ ಬಂತು ಅಂತಾ ಗಣೇಶ್ ಹೇಳಿದ್ರು.

    ಸಾಮಾನ್ಯವಾಗಿ ಒಕ್ಕಲಿಗರ ಮದುವೆ ಕಾರ್ಯಕ್ರಮದಲ್ಲಿ ಹುಡುಗಿ ನೋಡಿ ಓಕೆ ಆದ ಬಳಿಕ ಎರಡೂ ಕಡೆಯವರು ಒಬ್ಬರನೊಬ್ಬರ ಮನೆಗೆ ಹೋಗಿ ಮಾತುಕತೆ ನಡೆಲಿದೆ. ಅಂತೆಯೇ ಇಲ್ಲಿ ಕೂಡ ಅದೇ ಸಂಪ್ರದಾಯವನ್ನು ಮಾಡಿದ್ದೇವೆ ಅಂತಾ ಹೇಳಿದ್ರು.

    ಅಮೂಲ್ಯ ಸಾಕಷ್ಟು ಸಿನಿಮಾಗಳನ್ನು ನಿಮ್ಮ ಜೊತೆ ಮಾಡಿದ್ದಾರೆ. ಆದ್ರೆ ಇದೂವರೆಗೆ ಯಾವ ಹಿರೋ, ಹೀರೋಯಿನ್ ಮದುವೆಗೆ ಸಹಾಯ ಮಾಡಿಲ್ಲ ಅಲ್ಲವೇ ಎಂದು ಕೇಳಿದ್ದಕ್ಕೆ, ನಮ್ಮದೇ ಹುಡ್ಗಿ. ಜಗದೀಶ್ ಕೂಡ ನಮ್ಮ ಮನೆಯವರಂತೆ ಇದ್ದಾರೆ. ಆದುದರಿಂದ ಇನ್ನು ಮುಂದೆ ಅಮೂಲ್ಯನೂ ನಮ್ಮ ಮನೆಯಲ್ಲೇ ಇರ್ತಾರೆ ಅನ್ನೋ ಖುಷಿಯಿದೆ ಅಂತಾ ಹೇಳಿದ್ರು.

    ಇಷ್ಟೊಂದು ಗೌಪ್ಯವಾಗಿಟ್ಟು, ಶಾಕಿಂಗ್ ಕೊಡುವ ಪ್ಲಾನ್ ನಿಮ್ಮದಾಗಿತ್ತಾ ಅಂತ ಕೇಳಿದ್ದಿಕೆ, ಹೌದು ಯಾಕಂದ್ರೆ ನಾನು ಕೂಡ ಅಭಿಮಾನಿಗಳಿಗೆ ಶಾಕ್ ಕೊಟ್ಟೆ ಮದುವೆ ಆಗಿದ್ದೆ. ಹಾಗಾಗಿ ನನ್ನ ಜೊತೆ ಇರುವವರೂ ಅಭಿಮಾನಿಗಳಿಗೆ ಶಾಕಿಂಗ್ ಆಗಿ ಸುದ್ದಿ ನೀಡಬೇಕು ಅಂತಾ ನಕ್ಕುಬಿಟ್ಟರು.

    ಯಾವತ್ತು ಅಷ್ಟೇ ಯಾವುದೇ ಕೆಲಸವಾಗಲಿ ಮುಗಿದ ಬಳಿಕ ಹೇಳೋದೆ ಒಳ್ಳೆಯದು. ಅದ್ರಲ್ಲೂ ಮದುವೆ ಮುಂತಾದ ವಿಚಾರಗಳನ್ನು ಹುಡುಗ-ಹುಡುಗಿ ಒಪ್ಪಿಕೊಂಡ ಮೇಲೆ ಬಹಿರಂಗಪಡಿಸುವುದು ಒಳ್ಳೆಯದು ಅಂತಾ ನನ್ನ ಅನಿಸಿಕೆ ಗಣೇಶ್ ಹೇಳಿದರು.

    ಒಟ್ಟಿನಲ್ಲಿ ಜಗದೀಶ್ ಖುಷಿಯಿಂದ ಓಡಾಡ್ತಾ ಇದ್ದ, ಇತ್ತ ಅಮೂಲ್ಯ ಮನೆಯಲ್ಲಿ ಸುಮ್ನೆ ಕುಳಿತಿದ್ದಳು. ಅದಕ್ಕೆ ಇಬ್ರಿಗೂ ಜವಾಬ್ದಾರಿ ಕೊಡಿಸೋಣ ಎಂದು ಮದುವೆ ಮಾಡಲು ಮುಂದಾದ್ವಿ ಅಂತಾ ನಟ ಗಣೇಶ್ ಮತ್ತು ಪತ್ನಿ ಶಿಲ್ಪಾ ಕಿಚಾಯಿದ್ರು.

     

  • ಸ್ಯಾಂಡಲ್‍ವುಡ್ `ಚಿತ್ತಾರ’ದ ಬೆಡಗಿಗೆ ಮ್ಯಾರೇಜ್ ಫಿಕ್ಸ್

    ಸ್ಯಾಂಡಲ್‍ವುಡ್ `ಚಿತ್ತಾರ’ದ ಬೆಡಗಿಗೆ ಮ್ಯಾರೇಜ್ ಫಿಕ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಚಿತ್ತಾರ ಹುಡುಗಿ ಅಮೂಲ್ಯ ಸದ್ದಿಲ್ಲದೇ ಸದ್ಯದಲ್ಲಿಯೇ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಮಾಜಿ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗನಾಗಿರುವ ಜಗದೀಶ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

    ಲಂಡನ್‍ನಲ್ಲಿ ಉನ್ನತ ವ್ಯಾಸಂಗ ಮಾಡಿಕೊಂಡು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಜಗದೀಶ್ ಗೋಲ್ಡನ್ ಸ್ಟಾರ್ ಗಣೇಶ್ ಶಿಲ್ಪಾ ದಂಪತಿಗೆ ಪರಿಚಿತರು. ನಟ ಗಣೇಶ್ ಮನೆಗೆ ಆಗಾಗ ಪಾರ್ಟಿಗೆ ಹೋಗುತ್ತಿದ್ದಾಗ ಅಮೂಲ್ಯರ ಪರಿಚಯ ಜಗದೀಶ್ ಅವರಿಗೆ ಆಗಿದೆ. ಈ ಪರಿಚಯ ಪ್ರೇಮವಾಗಿ ಈಗ ಮದುವೆಯ ತನಕ ಬಂದು ನಿಂತಿದೆ.

    ಅಮೂಲ್ಯ ಹಾಗೂ ಜಗದೀಶ್ ಕುಟುಂಬದ ಸಮ್ಮತಿಯ ಮೇರೆಗೆ ಮಾರ್ಚ್ 6ಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ನವ ಜೋಡಿ ಸಪ್ತಪದಿ ತುಳಿಯಲಿದೆ.

    ಮದುವೆಯ ನಂತರ ಚಿತ್ರರಂಗದಲ್ಲಿ ಮುಂದುವರೆಯಲ್ಲಿದ್ದಾರಾ ಎನ್ನುವ ಪ್ರಶ್ನೆಗೆ ಅಮೂಲ್ಯ ಕಡೆಯಿಂದ ಉತ್ತರ ಸಿಗಬೇಕಿದೆ.