Tag: ಗಣೇಶ್

  • ಮತ್ತೆ ಒಂದಾಗಲಿದ್ದಾರೆ ಗೋಲ್ಡನ್ ಸ್ಟಾರ್, ಪ್ರೀತಂ ಗುಬ್ಬಿ

    ಮತ್ತೆ ಒಂದಾಗಲಿದ್ದಾರೆ ಗೋಲ್ಡನ್ ಸ್ಟಾರ್, ಪ್ರೀತಂ ಗುಬ್ಬಿ

    ಬೆಂಗಳೂರು: ‘ಮರೆಯುವ ಮುನ್ನಾ’ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಲು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಸಜ್ಜಾಗಿದ್ದಾರೆ.

    ದಿಲ್ ರಂಗೀಲಾ, ಮಳೆಯಲಿ ಜೊತೆಯಲಿ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ತೆರೆ ಮೇಲೆ ಮಿಂಚಿಸಿದ ಈ ಜೋಡಿ, ಇದೀಗ ಮತ್ತೆ ಚಂದನವನದಲ್ಲಿ ‘ಮರೆಯುವ ಮುನ್ನಾ’ ಎಂಬ ಸಿನಿಮಾದ ಮೂಲಕ ಚಾಪು ಮೂಡಿಸಲು ಬರುತ್ತಿದ್ದಾರೆ. ಗಣೇಶ ಹಬ್ಬದಂದೇ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

    ಈಗಾಗಲೇ ಪ್ರೀತಂ ಗುಬ್ಬಿ, ಯೋಗ್‍ರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಾರಥ್ಯದಲ್ಲಿ ಮುಂಗಾರು ಮಳೆ ಸಿನಿಮಾ ತೆರೆಯ ಮೇಲೆ ಮಿಂಚಿತ್ತು. ಇದೀಗ ಮೂರನೇ ಬಾರಿ ಇಬ್ಬರೂ ಸೇರಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

    ಚಿತ್ರದ ಬಗ್ಗೆ ಮಾತನಾಡಿದ ಪ್ರೀತಂ ಗುಬ್ಬಿ ‘ಮರೆಯುವ ಮುನ್ನಾ’ ರೋಮ್ಯಾಂಟಿಕ್ ಚಿತ್ರಕಥೆಯಾಗಿದ್ದು, ಇದು ಗಣೇಶ್ ಅವರಿಗೆ ಹೋಲುವಂತೆ ಇದೆ. ಕೆಲವು ತಿಂಗಳಿಂದ ಮರೆಯುವ ಮುನ್ನಾ ಸಿನಿಮಾದ ಪ್ರಾಜೆಕ್ಟ್ ಶುರು ಮಾಡಲಾಗಿದೆ. ಗಣೇಶ್ ಅವರು ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾ ಚಿತ್ರೀಕರಣ ಮುಗಿದ ಕೂಡಲೇ ಮರೆಯುವ ಮುನ್ನಾ ಸಿನಿಮಾ ಸ್ಟಾರ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಗಣೇಶ್ ಪ್ರಶಾಂತ್ ರಾಜ್ ಅವರ ನಿರ್ದೇಶನದ ‘ಅರೆಂಜ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅದು ಕೊನೆಯ ಹಂತ ತಲುಪಿದೆ. ಬಳಿಕ ನಾಗಣ್ಣ ನಿರ್ದೇನದ ‘ಗಿಮಿಕ್’ ಮತ್ತು ವಿಜಯ್ ನಾಗೇಂದ್ರ ಅವರ ‘ಗೀತಾ’ ಸಿನಿಮಾದ ನಂತರ ಮರೆಯುವ ಮುನ್ನಾ ಸಿನಿಮಾ ಚಿತ್ರೀಕರಣ ಆರಂಭಿಸಲಾಗುವುದು ಎಂದರು.

     

     

     

     

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮ್ಮ ಮನೆಯಲ್ಲಿ ಈಗ ಚಿನ್ನವಿದೆ, ನಾನು ಶ್ರೀಮಂತ: ಖುಷಿ ಹಂಚಿಕೊಂಡ್ರು ಸುದೀಪ್

    ನಮ್ಮ ಮನೆಯಲ್ಲಿ ಈಗ ಚಿನ್ನವಿದೆ, ನಾನು ಶ್ರೀಮಂತ: ಖುಷಿ ಹಂಚಿಕೊಂಡ್ರು ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಮನೆಗೆ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನೀಡಿದ್ದು, ಈ ಬಗ್ಗೆ ನಮ್ಮ ಮನೆಯಲ್ಲಿ ಈಗ ಚಿನ್ನವಿದೆ. ನಾನು ಶ್ರೀಮಂತನಾಗಿದ್ದೇನೆ ಎಂದು ನಟ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

    ನಟ ಸುದೀಪ್ ಮತ್ತು ಗಣೇಶ್ ಭೇಟಿಯಾಗಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದು, “ನಾನು ಗಣೇಶ್ ಜೊತೆ ಮಾತನಾಡುತ್ತಿದ್ದಾಗ ಗಣೇಶ್ ನಮ್ಮ ಸಂಬಂಧಿ ಎಂದು ಗೊತ್ತಾಯಿತು. ಈಗ ನಮ್ಮ ಮನೆಯಲ್ಲೂ ಚಿನ್ನ ಇದೆ. ನಾನು ಕೂಡ ಶ್ರೀಮಂತನಾಗಿದ್ದೇನೆ” ಎಂದು ಬರೆದು ಎರಡು ನಗು ಎಮೋಜಿಯನ್ನು ಹಾಕಿ ಗಣೇಶ್ ಮತ್ತು ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗೆ ಕೊಡಗು ಸಂತ್ರಸ್ತರಿಗಾಗಿ ಸ್ಯಾಂಡಲ್‍ವುಡ್ ಸ್ಟಾರ್ ಗಳು ಕರ್ನಾಟಕ ಚಲನಚಿತ್ರ ಕಪ್(ಕೆಸಿಸಿ) ಕ್ರಿಕೆಟ್ ಆಟವನ್ನು ಆಡಿದ್ದರು. ಎರಡು ದಿನಗಳ ಕಾಲ ಕೆಸಿಸಿ ನಡೆದಿದ್ದು, ಸ್ಟಾರ್ ನಟರು ಭಾಗಹಿಸಿದ್ದರು. ಈ ಆಟದಲ್ಲಿ ಗಣೇಶ್ ತಂಡ ಗೆಲುವನ್ನು ಸಾಧಿಸಿತ್ತು. ಅಂದಿನಿಂದಲೂ ಗಣೇಶ್ ಮತ್ತು ಸುದೀಪ್ ನಡುವೆ ಸ್ನೇಹ ಇತ್ತು. ಆದರೆ ಕೆಸಿಸಿ ಆಟದಿಂದ ಇವರಿಬ್ಬರು ಮತ್ತಷ್ಟು ಹತ್ತಿರವಾಗಿದ್ದಾರೆ.

    ಸುದೀಪ್ ಮಾಡಿರುವ ಟ್ವೀಟನ್ನೇ ಗಣೇಶ್ ಅವರು ರೀಟ್ವೀಟ್ ಮಾಡಿದ್ದಾರೆ, ಸದ್ಯಕ್ಕೆ ಸುದೀಪ್ ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಪೈಲ್ವಾನ್’ ಮತ್ತು ತೆಲುಗಿನ ‘ಸೈರಾ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಗಣೇಶ್ ‘ಆರೆಂಜ್’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್ ನಟರಿಂದ ಶುಭಾಶಯ

    ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್ ನಟರಿಂದ ಶುಭಾಶಯ

    ಬೆಂಗಳೂರು: ರಾಜ್ಯಾದ್ಯಂತ ಇಂದು ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ. ಅಲ್ಲದೇ ಸ್ಟಾರ್ ನಟರು ಕೂಡ ಗೌರಿ ಗಣೇಶ ಹಬ್ಬವನ್ನು ಆಚರಿಸಿ ನಾಡಿನ ಸಮಸ್ತ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಸಮಸ್ತ ಕರುನಾಡ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮೆಲ್ಲ ಸಂಕಷ್ಟಗಳು ದೂರವಾಗಿ ಜೀವನದ ಎಲ್ಲಾ ಸುಖ ಸಂತೋಷ ನಿಮ್ಮದಾಗಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಣೇಶನ ಮುಂದೆ ಕೈ ಮುಗಿಯುತ್ತಿರುವ ಫೋಟೋ ಹಾಕಿ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

    ಸಮಸ್ತ ಕನ್ನಡ ನಾಡಿನ ಜನತೆಗೆ ಗೌರಿ ಹಣೇಶ ಹಬ್ಬದ ಶುಭಾಶಯಗಳು. ಎಲ್ಲರೂ ಯಾವಾಗಲೂ ಖುಷಿಯಾಗಿರಿ, ಸಂತೋಷವಾಗಿರಿ ಹಾಗೂ ಖುಷಿಯನ್ನು ಹಂಚುತ್ತಿರಿ. ನಿಮ್ಮೆಲರಿಗೂ ನನ್ನ ಕಡೆಯಿಂದ ನಿಮ್ಮಗೆಲ್ಲ ಹೆಚ್ಚಿನ ಪ್ರೀತಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ರಾಜ್ಯದ ಜನರಿಗೆ ಶುಭಾಶಯ ತಿಳಿಸಿದ್ದಾರೆ.

    ನನ್ನ ಉಸಿರಿನಲ್ಲಿ ಬೆರೆತ ಕನ್ನಡ ನಾಡಿನ ಸಮಸ್ತ ಬಂಧುಗಳಿಗೆ ಗೌರಿ ಗಣೇಶನ ಹಬ್ಬದ ಶುಭಾಶಯಗಳು. ನೂರೂ ಕಾಲ ಸುಖ ಸಂತೋಷದಿಂದ ನೆಮ್ಮದಿಯಾಗಿ ನಗುತ ಬಾಳಿ. ಶುಭದಿನ ಶುಭೋದಯ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ರೋರಿಂಗ್ ಸ್ಟಾರ್ ಮುರಳಿ ಕೂಡ ‘ಭರಾಟೆ’ ಚಿತ್ರತಂಡದಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಶುಭಾಶಯ ತಿಳಿಸಿ ಎಲ್ಲರಿಗೂ ಗುಡ್ ಲಕ್ ಎಂದು ಟ್ವೀಟ್ ಮಾಡಿದ್ದಾರೆ.

    ಗೌರಿ ಶಕ್ತಿ, ಶೌರ್ಯದ ಪ್ರತೀಕವಾದರೆ, ಗಣಪತಿಯು ವಿದ್ಯೆ, ಜ್ಞಾನದ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಗೂ ಈ ಎರಡೂ ಗುಣಗಳಿಂದಲೇ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯ. ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.

    https://twitter.com/actressharshika/status/1039806642374823941

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಶ್, ಗಣೇಶ್ ಬಳಿಕ ಕೋಟ್ಯಧಿಪತಿಗೆ ಮತ್ತೊಬ್ಬ ಸ್ಯಾಂಡಲ್‍ವುಡ್ ಸ್ಟಾರ್

    ಯಶ್, ಗಣೇಶ್ ಬಳಿಕ ಕೋಟ್ಯಧಿಪತಿಗೆ ಮತ್ತೊಬ್ಬ ಸ್ಯಾಂಡಲ್‍ವುಡ್ ಸ್ಟಾರ್

    ಬೆಂಗಳೂರು: ಕನ್ನಡದ ಕೋಟ್ಯಧಿಪತಿ ಶೋಗೆ ಈಗಾಗಲೇ ಸ್ಯಾಂಡಲ್ ವುಡ್ ನಾಯಕರಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಬಂದು ಆಟವಾಡಿ ಹಣ ಗೆದ್ದು ಹೋಗಿದ್ದಾರೆ. ಈಗ ಮೂರನೇ ನಟನಾಗಿ ರಕ್ಷಿತ್ ಶೆಟ್ಟಿ ಆಗಮಿಸುತ್ತಿದ್ದಾರೆ.

    `ಕನ್ನಡದ ಕೋಟ್ಯಧಿಪತಿ’ 3ನೇ ಆವೃತ್ತಿಯಲ್ಲಿ ಸೆಲೆಬ್ರಿಟಿಗಳಿಗಿಂತ ಜನಸಾಮಾನ್ಯರಿಗೆ ಹೆಚ್ಚು ಅವಕಾಶ ಮಾಡಿಕೊಡಲಾಗಿತ್ತಿದೆ. ಇಲ್ಲಿಯವರೆಗೂ ಈ ಶೋನಲ್ಲಿ ಯಶ್ ಮತ್ತು ಗಣೇಶ್ ಕೇವಲ ಇಬ್ಬರು ನಟರು ಮಾತ್ರ ಭಾಗವಹಿಸಿದ್ದಾರೆ.

    `ಕನ್ನಡದ ಕೋಟ್ಯಧಿಪತಿ’ ಶೋ ಆರಂಭವಾಗಿ 50 ಸಂಚಿಕೆಯನ್ನು ಪೂರೈಸುತ್ತಿದೆ. ಆದ್ದರಿಂದ ಈ ವಿಶೇಷ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಸ್ಪರ್ಧಿಯಾಗಿ ಶೋಗೆ ಬರಲಿದ್ದಾರೆ. ಈಗಾಗಲೇ ಕನ್ನಡದ ಕೋಟ್ಯಧಿಪತಿ ಶೋಗೆ ರಕ್ಷಿತ್ ಶೆಟ್ಟಿ ಸ್ಪರ್ಧಿಯಾಗಿ ಬಂದಿರುವ ಪ್ರೋಮೋ ಪ್ರಸಾರವಾಗುತ್ತಿದೆ. ಆದ್ದರಿಂದ ಈ ಸಂಚಿಕೆ ವಾರತ್ಯಂದಲ್ಲಿ ಪ್ರಸಾರವಾಗಬಹುದು.

    ಈ ಹಿಂದೆ ಕನ್ನಡದ ಕೋಟ್ಯಧಿಪತಿಗೆ ಮೊದಲು ಗಣೇಶ್ ಬಂದು 12.5 ಲಕ್ಷ ರೂ. ಗೆದ್ದಿದ್ದರು. ನಂತರ ಯಶ್ ಬಂದು 25 ಲಕ್ಷ ರೂ. ಗೆದ್ದುಕೊಂಡು ಹೋಗಿದ್ದರು. ಈ ಶೋ ಖಾಸಗಿ ವಾಹಿನಿಯಲ್ಲಿ ವಾರದ 5 ದಿನಗಳು ಮಾತ್ರ ಒಂದು ಗಂಟೆಯ ಸಮಯ ಪ್ರಸಾರವಾಗುತ್ತದೆ. ನಟ ರಮೇಶ್ ಅರವಿಂದ್ ಈ ಶೋ ನಿರೂಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೋಲ್ಡನ್ ಸ್ಟಾರ್ ಗಣೇಶ್‍ಗೆ ಪಿತೃ ವಿಯೋಗ

    ಗೋಲ್ಡನ್ ಸ್ಟಾರ್ ಗಣೇಶ್‍ಗೆ ಪಿತೃ ವಿಯೋಗ

    ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ರವರ ತಂದೆ ಕಿಶನ್ (82) ರವರು ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

    ನೆಲಮಂಗಲ ಸಮೀಪದ ಅಡಕಿ ಮಾರನಹಳ್ಳಿಯಲ್ಲಿ ವಾಸವಿದ್ದ ಕಿಶನ್ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಿಶನ್ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು.

    ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಆಸ್ಪತ್ರೆಯಲ್ಲಿ  ಕಿಶನ್ ನಿಧನರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2 ವರ್ಷದಿಂದ ನನ್ನ ಹೆಂಡ್ತಿ ಏನು ಗಿಫ್ಟ್ ಕೊಟ್ಟಿಲ್ಲ : ಗಣೇಶ್

    2 ವರ್ಷದಿಂದ ನನ್ನ ಹೆಂಡ್ತಿ ಏನು ಗಿಫ್ಟ್ ಕೊಟ್ಟಿಲ್ಲ : ಗಣೇಶ್

    ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೇ ಗಣೇಶ್ ತನ್ನ ಹೆಂಡತಿ ಎರಡು ವರ್ಷದಿಂದ ಏನು ಗಿಫ್ಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

    ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಗಣೇಶ್ ನಿವಾಸದ ಮುಂದೆ ರಾತ್ರಿ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಣೇಶ್, ನಮ್ಮ ಬರ್ತ್ ಡೇಯನ್ನು ಅಭಿಮಾನಿಗಳು ತಮ್ಮ ಹುಟ್ಟುಹಬ್ಬದ ರೀತಿ ಆಚರಣೆ ಮಾಡುತ್ತಾರೆ. ಅವರಿಗೆ ನಮ್ಮ ಇಡೀ ಕುಟುಂಬ ಚಿರುಋಣಿ. ಅಭಿಮಾನಿಗಳ ಪ್ರೀತಿ, ಆಶೀರ್ವಾದಿಂದ ನಾವು ಈ ಮಟ್ಟಕ್ಕೆ ಬೆಳೆದಿರುವುದು. ಆದ್ದರಿಂದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

    ಈ ವೇಳೆ ಪತ್ನಿ ಶಿಲ್ಪಾ ಅವರು ಏನು ಗಿಫ್ಟ್ ಕೊಟ್ಟರು ಎಂದು ಕೇಳಿದಾಗ, ಗಂಡ-ಹೆಂಡತಿ ಮಧ್ಯೆ ಏನು ಗಿಫ್ಟ್ ಅಂತ ಏನು ಇರಲ್ಲ. ವರ್ಷಕ್ಕೆ ಏನಾದರೂ ತೆಗೆದುಕೊಳ್ಳಬೇಕು ಎಂದುಕೊಂಡಿರುತ್ತೇವೆ. ಅದನ್ನು ಹುಟ್ಟುಹಬ್ಬದ ದಿನದಂದೇ ತೆಗೆದುಕೊಳ್ಳುತ್ತೇವೆ. ಬಳಿಕ ಎರಡು ವರ್ಷದಿಂದ ಏನು ಗಿಫ್ಟ್ ಕೊಟ್ಟಿಲ್ಲ ನನ್ನ ಹೆಂಡತಿ ಎಂದು ಶಿಲ್ಪಾರಿಗೆ ತಮಾಷೆ ಮಾಡಿದರು.

    ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಆರೆಂಜ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ನನ್ನ ಮಗಳ ಬಲವಂತಕ್ಕೆ ಒಂದು ಹಾರರ್ ಸಿನಿಮಾ ಮಾಡುತ್ತಿದ್ದೇನೆ. ನಿರ್ದೇಶಕ ನಾಗಣ್ಣ ಅವರ ಜೊತೆ ಮಾಡುತ್ತಿರುವುದು ಸಂತಸವಾಗಿದೆ. ನಮ್ಮ ಹೋಮ್ ಪ್ರೊಡೆಕ್ಷನ್ ನಲ್ಲಿ `ಗೀತಾ’ ಸಿನಿಮಾ ಮಾಡುತ್ತಿದ್ದೇನೆ. ಕೊನೆಯಲ್ಲಿ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

    ಹೋಮ್ ಬ್ಯಾನರ್ಸ್ ಅಡಿಯಲ್ಲಿ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಬರ್ತ್ ಡೇ ಆಚರಿಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ.

  • ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ

    ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನ ಜನ್ಮದಿನದ ಸಂಭ್ರಮಕ್ಕಾಗಿಯೇ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಮುಂಗಾರು ಮಳೆ ಹುಡುಗನ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.

    ಅಭಿಮಾನಿಗಳ ಸಮ್ಮುಖದಲ್ಲಿ ಗಣೇಶ್ ಪತ್ನಿ ಶಿಲ್ಪಾ ಜೊತೆಗೆ ಕೇಕ್ ಕಟ್ ಮಾಡಿದ್ರು. ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಾಣವಾಗ್ತಿರೋ ಗೀತಾ ಸಿನಿಮಾವೇ ಗಿಫ್ಟ್ ಅಂದ್ರು ಶಿಲ್ಪಾ. ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಆರೆಂಜ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

    ಗೋಲ್ಡನ್ ಸ್ಟಾರ್ ಗಣೇಶ್ ಈಗ ‘ಗೀತಾ’ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಬರ್ತ್ ಡೇ ಆಚರಿಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ.

  • ಸಿನಿಮಾ ಶುರುವಾಗೋ ಮೊದಲೇ ಗಣೇಶ್ ಮನೆಮುಂದೆ ನಿಂತಿತು ಕಟೌಟ್!

    ಸಿನಿಮಾ ಶುರುವಾಗೋ ಮೊದಲೇ ಗಣೇಶ್ ಮನೆಮುಂದೆ ನಿಂತಿತು ಕಟೌಟ್!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈಗ ‘ಗೀತಾ’ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಸಿನಿಮಾ ಸೆಟ್ಟೇರುವ ಮೊದಲೇ ಗೋಲ್ಡನ್ ಸ್ಟಾರ್ ನಿವಾಸದ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ.

    ಈ ಹಿಂದೆ ಗೀತಾ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಆದರೆ ಈಗ ಸೆಟ್ಟೇರುವ ಮೊದಲೇ ಗಣೇಶ್ ಮನೆ ಮುಂದೆ ಸಿನಿಮಾದ ದೊಡ್ಡ ಕಟೌಟ್ ಅನ್ನು ಅಭಿಮಾನಿಗಳು ನಿಲ್ಲಿಸಿದ್ದಾರೆ.

    ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಆಚರಣೆ ನಡೆಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ. ಈ ಚಿತ್ರದ ಟೈಟಲ್ ಅನೌನ್ಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದ್ದು, ಗಣೇಶ್ ಅವರು ಈ ಚಿತ್ರಕ್ಕಾಗಿ ಹೊಸ ಲುಕ್ ನಲ್ಲಿ ಪ್ರಯತ್ನಿಸಿದ್ದಾರೆ.

    ಜುಲೈ 2ರಂದು ಗಣೇಶ್ ಹುಟ್ಟುಹಬ್ಬ ನಡೆಯಲಿದ್ದು, ಈ ಸಂದರ್ಭದಲ್ಲಿ ಗೋಲ್ಟನ್ ಸ್ಟಾರ್ ನಟನೆಯ ‘ಆರೆಂಜ್’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

  • ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಬೆಂಗಳೂರು: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಇಂದು ಸಾಮಾನ್ಯ ಜನರಿಂದ ಭಾರತದ ತಾರೆಯರು ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಸ್ಯಾಂಡಲ್‍ವುಡ್ ಗೋಲ್ದನ್ ಸ್ಟಾರ್ ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡಿದ್ದಾರೆ.

    ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಯೋಗಭ್ಯಾಸವನ್ನು ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರಾ ಹಾಗೂ ಪುತ್ರ ವಿಹಾನ್‍ನೊಂದಿಗೆ ಯೋಗ ಮಾಡಿದ್ದು, ತನ್ನ ತಂದೆ ಜೊತೆ ಸೇರಿ ಮಗಳು ಚಾರಿತ್ರ್ಯಾ ಕೂಡ ಯೋಗ ಮಾಡಿದ್ದಾರೆ. ಚಾರಿತ್ರ್ಯಾ ಕಷ್ಟ ಇರುವ ಆಸನಗಳನ್ನೆಲ್ಲಾ ತನ್ನ ತಂದೆ ಜೊತೆ ಮಾಡಿ ತೋರಿಸಿದ್ದಾರೆ.

    ಗಣೇಶ್ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನ ಜಿಮ್‍ಗೆ ಹೋಗಿ ಯೋಗವನ್ನು ಕೂಡ ಮಾಡುತ್ತಾರೆ. ಇದರಿಂದ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡುತ್ತಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿದೆ.

  • ಕುಷ್ಟಗಿಯಲ್ಲಿ ನೀತಿ ಸಂಹಿತೆಗಿಲ್ಲ ಕಿಮ್ಮತ್ತು – ಗಣೇಶ್, ಸುದೀಪ್ ಫೋಟೋ ಪ್ರಚಾರಕ್ಕೆ ಬಳಕೆ

    ಕುಷ್ಟಗಿಯಲ್ಲಿ ನೀತಿ ಸಂಹಿತೆಗಿಲ್ಲ ಕಿಮ್ಮತ್ತು – ಗಣೇಶ್, ಸುದೀಪ್ ಫೋಟೋ ಪ್ರಚಾರಕ್ಕೆ ಬಳಕೆ

    ಕೊಪ್ಪಳ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆದ್ರೆ ಕೊಪ್ಪಳದಲ್ಲಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ನಟರ ಫೋಟೋ ಬಳಕೆ ಮಾಡಿಕೊಂಡು ಅಬ್ಬರದ ಪ್ರಚಾರಕ್ಕೆ ಕೈ ಹಾಕಲಾಗಿದೆ.

    ಕುಷ್ಟಗಿ ತಾಲೂಕಿನಲ್ಲಿ ಚುನಾವಣಾ ಪ್ರಚಾರಗಳು ದಿನದಿಂದ ದಿನಕ್ಕೆ ರಂಗೇರ್ತಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಕೈ ಕಟ್ಟಿ ಹಾಕಿದ್ದಂತೆ ಆಗಿತ್ತು. ಆದ್ರೆ ಇದೀಗ ಅವರಿಗೆ ಫೇಸ್ ಬುಕ್ ವರದಾನವಾಗಿದೆ.

    ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಗಣೇಶ್ ಮತ್ತು ಸುದೀಪ್ ಫೋಟೋಗಳನ್ನು ಬಳಸಿಕೊಂಡು ಪ್ರಚಾರ ಮಾಡೋಕೆ ಶುರು ಮಾಡಿದ್ದಾರೆ. ಅಭ್ಯರ್ಥಿಗಳ ಫೋಟೋಗಳನ್ನು ನಟರು ತಮ್ಮ ಕೈಯಲ್ಲಿ ಹಿಡಿದಂತೆ ಎಡಿಟ್ ಮಾಡಿ ಫೇಸ್ ಬುಕ್ ಅಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ರೂ, ಚುನಾವಣಾಧಿಕಾರಿಗಳು ಮಾತ್ರ ಈವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.