Tag: ಗಣೇಶ್ ಹುಕ್ಕೇರಿ

  • ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

    ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

    ಚಿಕ್ಕೋಡಿ: ಹನುಮಂತನ ಜಯಂತಿ ಹಿನ್ನಲೆ ಶಾಸಕ ಗಣೇಶ್ ಹುಕ್ಕೇರಿಯವರು ತಮ್ಮ ಕಾರ್ಯಕರ್ತರ ಜೊತೆಗೆ ಬೆಳಗಾವಿ ಜಿಲ್ಲೆಯಿಂದ ಚಿಕ್ಕೋಡಿ ತೋರಣಹಳ್ಳಿಯ ಹನುಮಂತನ ದೇವಸ್ಥಾನದವರೆಗೆ ಪಾದಯಾತ್ರೆ ಮಾಡಿದ್ದಾರೆ.

    Ganesh Hukkeri

    ರಾಮಭಕ್ತ, ಪವನ ಪುತ್ರ ಹನುಮಂತ ಜಯಂತಿ ಹಿನ್ನಲೆ ಚಿಕ್ಕೋಡಿ ತಾಲೂಕಿನ ತೋರನಹಳ್ಳಿ ಹನುಮಂತ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ವಿಶೇಷವಾಗಿ ಗಣೇಶ್ ಹುಕ್ಕೇರಿಯವರು ತಮ್ಮ ಅಪಾರವಾದ ಕಾರ್ಯಕರ್ತರ ಜೊತೆಗೆ ಚಿಕ್ಕೋಡಿಯ ಬಸವ ವೃತ್ತದಿಂದ ತೋರಣಹಳ್ಳಿಯ ಹನುಮಂತನ ದೇವಸ್ಥಾನವರೆ ಪಾದಯಾತ್ರೆ ಮಾಡಿ ಆಂಜನೇಯನ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಪಾದಯಾತ್ರೆಯಲ್ಲಿ ಹನುಮಂತ ಭಕ್ತರು, ಗಣೇಶ್ ಹುಕ್ಕೇರಿ ಅವರ ಕಾರ್ಯಕರ್ತರು ಚಿಕ್ಕೋಡಿ ಪುರಸಭೆ ಸದಸ್ಯರು ಸೇರಿದಂತೆ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಜನರು ಭಾರೀ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಗಣೇಶ್ ಹುಕ್ಕೇರಿಯವರಿಗೆ ತೋರಣ ಹಳ್ಳಿಯ ಹನುಮಂತ ಎಂದರೆ ಅಪಾರವಾದ ಭಕ್ತಿ, ಶ್ರದ್ಧೆ. ಈ ಕಾರಣಕ್ಕಾಗಿ ಗಣೇಶ್ ಹುಕ್ಕೇರಿಯವರು ಇಲ್ಲಿನ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಹಾಗೂ ದೇವಸ್ಥಾನ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದ್ದಾರೆ.

    Ganesh Hukkeri

    ಪಾದಯಾತ್ರೆಯ ಉದ್ದಕೂ ಶ್ರೀರಾಮ ಜೈ…ಜೈ..ರಾಮ ಎನ್ನುವ ಘೋಷಣೆಗಳು ಮೊಳಗಿದವು. ಚಿಕ್ಕೋಡಿಯಿಂದ ತೋರಣಹಳ್ಳಿಯವರೆಗೆ ಸುಮಾರು 15 ಕಿ.ಮೀ. ವರೆಗೆ ಈ ಪಾದಯಾತ್ರೆ ನಡೆಯಿತು. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

  • ಕೆಎಲ್‍ಇ ಆಸ್ಪತ್ರೆಯಿಂದ ಲಸಿಕೆ ಖರೀದಿಸಿ ಯುವಕರಿಗೆ ಉಚಿತವಾಗಿ ಹಂಚಿದ ಗಣೇಶ್ ಹುಕ್ಕೇರಿ

    ಕೆಎಲ್‍ಇ ಆಸ್ಪತ್ರೆಯಿಂದ ಲಸಿಕೆ ಖರೀದಿಸಿ ಯುವಕರಿಗೆ ಉಚಿತವಾಗಿ ಹಂಚಿದ ಗಣೇಶ್ ಹುಕ್ಕೇರಿ

    ಬೆಳಗಾವಿ: ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕ ಗಣೇಶ್ ಹುಕ್ಕೇರಿಯವರು ಇಂದು ಮೊದಲ ಹಂತದಲ್ಲಿ ಚಿಕ್ಕೋಡಿ ಕೆ.ಎಲ್.ಇ ಆಸ್ಪತ್ರೆಯಿಂದ ಪ್ರತಿ ಡೋಸ್ ಗೆ ರೂ.780 ರಂತೆ 2 ಸಾವಿರ ಲಸಿಕೆ ಖರಿದಿ ಮಾಡಿ ಚಿಕ್ಕೋಡಿ – ಸದಲಗಾ ಕ್ಷೇತ್ರದ ಯುವಕರಿಗೆ ಉಚಿತವಾಗಿ ಹಂಚಿದರು.

    ಈ ವೇಳೆ ಶಾಸಕ ಗಣೇಶ್ ಹುಕ್ಕೇರಿ ಮಾತನಾಡಿ, ಸರ್ಕಾರ ಒಂದು ಲಸಿಕೆಗೆ ರೂ.780 ದರ ನಿಗಧಿ ಮಾಡಿ 18 ವರ್ಷಕ್ಕೂ ಮೆಲ್ಪಟ್ಟವರಿಗೆ ವ್ಯಾಕ್ಸಿನ್ ನಿಡುತ್ತಿದೆ. ಲಾಕಡೌನ್ ಹಾಗೂ ಕೊರೊನಾ ಮಹಾಮಾರಿಯಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ, ಪ್ರತಿ ಡೋಸ್ ಗೆ ರೂ.780 ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳುವುದು ಬಹಳಷ್ಟು ಕಷ್ಟದ ವಿಷಯ ಆಗಿದೆ, ಇದನ್ನು ಮನಗಂಡು ಚಿಕ್ಕೋಡಿ-ಸದಲಗಾ ಕ್ಷೇತ್ರದ ಯುವಕರನ್ನು ಕೊರೊನಾ ಮಹಾಮಾರಿಯಿಂದ ರಕ್ಷಿಸಲು, ಕೆ.ಎಲ್‍ಇ ಆಸ್ಪತ್ರೆಯಲ್ಲಿ ಇಂದು ಲಭ್ಯವಿರುವ 2 ಸಾವಿರ ಲಸಿಕೆಯನ್ನು ನಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಖರೀದಿ ಮಾಡಿ, ನನ್ನ ಕ್ಷೇತ್ರದ ಯುವಕರಿಗೆ ಉಚಿತವಾಗಿ ಹಂಚುತ್ತಿದ್ದೆನೆ ಎಂದು ತಿಳಿಸಿದರು.

    ಮೊದಲ ಹಂತದಲ್ಲಿ ಒಟ್ಟು ಎರಡು ಸಾವಿರ ಲಸಿಕೆ ಖರಿದಿ ಮಾಡಿದ್ದೂ, ಕ್ಷೇತ್ರದ ಪ್ರತಿ ಪಂಚಾಯತಿಗೆ 100 ಲಸಿಕೆ ನೀಡಿದ್ದೆವೆ. ಹೀಗೆ ಹಂತ ಹಂತವಾಗಿ ಕೆ.ಎಲ್.ಇ ಆಸ್ಪತ್ರೆಯಲ್ಲಿನ ಲಸಿಕೆಯ ಲಭ್ಯತೆಯ ಮೇರೆಗೆ, ವ್ಯಾಕ್ಸಿನ್ ಖರೀದಿ ಮಾಡಿ ಕ್ಷೇತ್ರದ ಪ್ರತಿಯೊಬ್ಬ ಯುವಕನಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಶಾಸಕ ಹುಕ್ಕೇರಿ ತಿಳಿಸಿದರು.

    ಈ ವೇಳೆ ಕೆ.ಎಲ್.ಇ ಆಸ್ಪತ್ರೆಯ ವೈದ್ಯರು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯರ್ತರು ಉಪಸ್ಥಿತರಿದ್ದರು.

  • 3 ತಿಂಗಳ ಸಂಬಳವನ್ನು ಆಶಾಕಾರ್ಯಕರ್ತೆಯರಿಗೆ ನೀಡುತ್ತೇನೆ: ಗಣೇಶ್ ಹುಕ್ಕೇರಿ

    3 ತಿಂಗಳ ಸಂಬಳವನ್ನು ಆಶಾಕಾರ್ಯಕರ್ತೆಯರಿಗೆ ನೀಡುತ್ತೇನೆ: ಗಣೇಶ್ ಹುಕ್ಕೇರಿ

    ಬೆಂಗಳೂರು: ಕಾರ್ಮಿಕರ ದಿನಾಚರಣೆಯಂದು ಕೋವಿಡ್ ವಾರಿಯರ್ ಗಳಿಗೆ ಸದಲಗಾ ಕ್ಷೇತ್ರದ ಶಾಸಕ ಗಣೇಶ್ ಹುಕ್ಕೇರಿಯವರಿಂದ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

    ಹೌದು. ಮುಂದಿನ ಮೂರು ತಿಂಗಳ ಸಂಬಳವನ್ನು ತಮ್ಮ ಕ್ಷೇತ್ರದ ಫ್ರಂಟ್ ಲೈನ್ ವಾರಿಯರ್ ಗಳಾದ ಆಶಾ ಕಾರ್ಯಕರ್ತೆಯರಿಗೆ ನೀಡಲು ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳ ಮನವಿಯಂತೆ ಒಂದು ತಿಂಗಳ ಸಂಬಳವನ್ನ ಕೋವಿಡ್ ನಿಧಿಗೆ ನೀಡಿದ್ದಾರೆ. ಜೊತೆಗೆ ಅದರ ಮುಂದಿನ ಮೂರು ತಿಂಗಳ ಸಂಬಳವನ್ನ ಕೋವಿಡ್ ವಾರಿಯರ್ ಗಳಿಗೆ ನೀಡಲು ಶಾಸಕರು ಮುಂದಾಗಿದ್ದಾರೆ.

    ರಾಜ್ಯ ಸರ್ಕಾರ‌ ನನಗೆ ನೀಡುವ ಸಂಬಳದಲ್ಲಿ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಮನವಿಯಂತೆ ಕೋವಿಡ್ ನಿಧಿಗೆ ನೀಡುತ್ತಿದ್ದೇನೆ.
    ಅದನ್ನು…

    Posted by Ganesh Hukkeri on Friday, April 30, 2021

    ಈ ಬಗ್ಗೆ ಖುದ್ದು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದು ಕೊಂಡಿರುವ ಶಾಸಕ ಗಣೇಶ್ ಹುಕ್ಕೇರಿ, ಈಗಾಗಲೇ ತಮ್ಮ ಸ್ವಂತ ಹಣದಲ್ಲಿ ಉಚಿತ ಅಂಬುಲೆನ್ಸ್ ಹಾಗೂ 120 ಬೆಡ್ ಗಳ ಕೋವಿಡ್ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ರೋಗಿಗಳಿಗೆ ಉಚಿತ ಊಟ, ತಿಂಡಿ, ಹಣ್ಣು ಎಲ್ಲವನ್ನೂ ತಮ್ಮ ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ನಿಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂಧಿ ಕೊರತೆ ಇರುವ ಹಿನ್ನೆಲೆ, ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಸಂಬಳ ನೀಡಿ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.

  • ಬೆಳಗಾವಿ ಜಿಲ್ಲೆಯಿಂದ್ಲೇ ಮೂವರು ಶಾಸಕರು ರಾಜೀನಾಮೆ?

    ಬೆಳಗಾವಿ ಜಿಲ್ಲೆಯಿಂದ್ಲೇ ಮೂವರು ಶಾಸಕರು ರಾಜೀನಾಮೆ?

    ಬೆಳಗಾವಿ: ರಾಜ್ಯ ರಾಜಕೀಯ ಕ್ರಿಕೆಟ್ ಆಟದಲ್ಲಿ ಮತ್ತೆ 3 ವಿಕೆಟ್ ಪತನವಾಗುವ ಸಾಧ್ಯತೆ ಇದ್ದು, ಅದರಲ್ಲೂ ಬೆಳಗಾವಿ ಜಿಲ್ಲೆಯಿಂದಲೇ ಮೂವರು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಕಾಗವಾಡ ಶ್ರೀಮಂತ್ ಪಾಟೀಲ್ ಮತ್ತು ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಈ ಮೂವರು ನಿರಂತರವಾಗಿ ರೆಬೆಲ್ ಶಾಸಕರ ಜೊತೆ ಸಂಪರ್ಕದಲ್ಲಿದ್ದವರು ಎಂದು ತಿಳಿದು ಬಂದಿದೆ.


    ಗಣೇಶ್ ಹುಕ್ಕೇರಿ ಅವರ ಮೊದಲಿನಿಂದಲೂ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗುತ್ತಿತ್ತು. ಬುಧವಾರ ಎಂಟಿಬಿ ನಾಗರಾಜ್ ಮತ್ತು ಸುಧಾಕರ್, ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಗಣೇಶ್ ಹುಕ್ಕೇರಿ ಕೂಡ ಸ್ಪೀಕರ್ ಕಚೇರಿಗೆ ಬಂದಿದ್ದರು. ಆಗ ಗಣೇಶ್ ಹುಕ್ಕೇರಿ ಕೂಡ ರಾಜೀನಾಮೆ ಕೊಟ್ಟೆ ಬಿಟ್ಟರು ಎಂದು ಹೇಳಲಾಗುತ್ತಿತ್ತು. ಆದರೆ ಅಂದು ಗಣೇಶ್ ಹುಕ್ಕೇರಿ ರಾಜೀನಾಮೆ ಸಲ್ಲಿಸಿರಲಿಲ್ಲ. ಇದೀಗ ರಾಜೀನಾಮೆ ಕೊಡುವವರ ಹೆಸರಿನ ಪಟ್ಟಿಯಲ್ಲಿ ಗಣೇಶ್ ಹುಕ್ಕೇರಿ ಅವರ ಹೆಸರಿದೆ.

    ಇಲ್ಲಿವರೆಗೂ 16 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದು, ಸದ್ಯ ಕೆಲವರು ಮುಂಬೈನ ಹೋಟೆಲ್‍ನಲ್ಲಿ ತಂಗಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಗುರುವಾರ ಸಂಜೆ 6 ಗಂಟೆಯ ಒಳಗಾಗಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರಂತಯೇ ಅತೃಪ್ತ ಶಾಸಕರು ಓಡೋಡಿ ಬಂದು ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬೈಗೆ ಮರಳಿದ್ದರು. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

  • ಗಣೇಶ್ ಹುಕ್ಕೇರಿ ಬಿಜೆಪಿ ಸೇರೋ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    ಗಣೇಶ್ ಹುಕ್ಕೇರಿ ಬಿಜೆಪಿ ಸೇರೋ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    – ಊಹಾಪೋಹಗಳಿಗೆ ಶಾಸಕ ಖಡಕ್ಕಾಗಿ ಪ್ರತಿಕ್ರಿಯೆ

    ಬೆಳಗಾವಿ: ಚಿಕ್ಕೋಡಿ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಬಿಜೆಪಿ ಸೇರುವ ವಿಚಾರ ಸತ್ಯಕ್ಕೆ ದೂರವಾಗಿದೆ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯೋಣ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗಣೇಶ್ ಹುಕ್ಕೇರಿಗೆ ಯಾವುದೇ ಅಸಮಾಧಾನ ಇಲ್ಲ. ಈಗಾಗಲೇ ಅವರ ತಂದೆ ಸಂಸದರಿದ್ದಾರೆ. ಗಣೇಶ್ ಹುಕ್ಕೇರಿಗೂ ವರಿಷ್ಠರು ಪಕ್ಷದಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ಏಳು ತಿಂಗಳಿಂದ ಇದನ್ನೇ ಹೇಳುತ್ತಿದ್ದಾರೆ. ಅಮಿತ್ ಶಾ ಜೊತೆ ಇದ್ದಾರಾ ಅಥವಾ ಮೋದಿ ಜೊತೆಗೆ ನಮ್ಮ ಶಾಸಕರು ಇದ್ದಾರೆಯಾ ಹೇಳಿ. ಇನ್ನೂ ಯಾರು ಬಿಜೆಪಿಗೆ ಹೋಗಿಲ್ಲ ಹೋದಾಗ ನೋಡೋಣ ಅಂತ ಅವರು ಹೇಳಿದ್ರು.

    ಯಾರು ಎಲ್ಲೂ ಹೋಗಲ್ಲ, ನಮ್ಮ ಪಕ್ಷ ಸುರಕ್ಷಿತವಾಗಿದೆ. ಕೆಲವರು ವೈಯಕ್ತಿಕ ಕೆಲಸದ ಮೇಲೆ ದೆಹಲಿಯಲ್ಲಿದ್ದಾರೆ. ಬಿಜೆಪಿಯವರು ಆರು ತಿಂಗಳಿನಿಂದ ಹೇಳ್ತಾನೆ ಇದ್ದಾರೆ ಅದನ್ನ ಪ್ರೂವ್ ಮಾಡೋಕು ಆಗ್ತಿಲ್ಲ. ಯಾರಾದ್ರೂ ದೊಡ್ಡ ಅಮೌಂಟ್ ಕೊಡ್ತೀನಿ ಅಂದ್ರೆ ಕೆಲವರು ಸ್ವಲ್ಪ ಯೋಚನೆ ಮಾಡ್ತಾರೆ. ಶನಿವಾರ ನಾನು, ಅವರು ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಗಣೇಶ್ ಹುಕ್ಕೇರಿ ಅವರು ಬಿಜೆಪಿಗೆ ಹೋಗಲ್ಲ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಯಾವುದೇ ಶಾಸಕರು ಬಿಜೆಪಿ ಸೇರಿಲ್ಲ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದರೆ ಆ ಬಗ್ಗೆ ಕಾದು ನೋಡೋಣ. ಒಟ್ಟಿನಲ್ಲಿ ನಮ್ಮ ಪಕ್ಷ ಸುಭದ್ರವಾಗಿದೆ ಅಂತ ಅವರು ಸ್ಪಷ್ಟಪಡಿಸಿದ್ರು.

    ಗಣೇಶ್ ಸ್ಪಷ್ಟನೆ:
    ಜನವರಿ 19ರಂದು ಶಾಸಕ ಗಣೇಶ್ ಹುಕ್ಕೇರಿಯವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಸ್ವರ್ತ ಗಣೇಶ್ ಹುಕ್ಕೇರುಯವರೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷ ನನ್ನ ಮನೆ. ನನ್ನ ಮನೆಯನ್ನು ನಾನ್ಯಾಕೆ ತೊರೆದು ಹೋಗಲಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv