Tag: ಗಣೇಶ್ ಪ್ರಸಾದ್

  • ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಹಿಡಿದ ಕಾಂಗ್ರೆಸ್ – ಬಿಜೆಪಿಗೆ ಮುಖಭಂಗ

    ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಹಿಡಿದ ಕಾಂಗ್ರೆಸ್ – ಬಿಜೆಪಿಗೆ ಮುಖಭಂಗ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ಬಿಜೆಪಿಗೆ (BJP) ಕಾಂಗ್ರೆಸ್ (Congress) ಬಿಗ್ ಶಾಕ್ ನೀಡಿದೆ. ಗುಂಡ್ಲುಪೇಟೆ (Gundlupet) ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿಲ್ಲದಿದ್ದರೂ ಆಪರೇಷನ್ ಹಸ್ತದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿರಂಜನ್ ಕುಮಾರ್‌ಗೆ ಸ್ವಕ್ಷೇತ್ರದಲ್ಲೇ ಭಾರಿ ಮುಖಭಂಗ ಉಂಟು ಮಾಡಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಬಿಜೆಪಿಯ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ. ಇಲ್ಲಿನ ಪುರಸಭೆಯಲ್ಲಿ 23 ಸದಸ್ಯರಿದ್ದು, 13 ಸ್ಥಾನ ಹೊಂದಿರುವ ಮೂಲಕ ಸ್ಪಷ್ಟ ಬಹುಮತ ಹೊಂದಿತ್ತು. ಉಳಿದಂತೆ ಕಾಂಗ್ರೆಸ್ 8, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ ಒಬ್ಬ ಸದಸ್ಯರಿದ್ದು, ಕಾಂಗ್ರೆಸ್‌ಗೆ ಅಧಿಕಾರ ಗದ್ದುಗೆ ಕನಸಿನ ಮಾತಾಗಿತ್ತು. ಆದರೆ ಚಾಣಾಕ್ಷ ನಡೆ ಅನುಸರಿಸಿ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ (H M Ganesh Prassad) ಬಿಜೆಪಿಯ ಆರು ಮಂದಿ ಸದಸ್ಯರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಪೊಲೀಸ್‌ ಅಧೀನ ಸೇವೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ

    ವಿಶೇಷ ಎಂದರೆ ಕಾಂಗ್ರೆಸ್‌ಗೆ ಬಂದ ಇಬ್ಬರು ಸದಸ್ಯರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಕಿರಣ್ ಗೌಡ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆ, ಹೀನಾ ಕೌಸರ್ ಅವರು ತಮ್ಮ ಮೂಲ ಪಕ್ಷದ ಅಭ್ಯರ್ಥಿ ಕುಮಾರ್ ಅವರನ್ನು ಐದು ಮತಗಳ ಅಂತರದಿಂದ ಸೋಲಿಸಿ ಉಪಾಧ್ಯಕ್ಷರಾಗಿ ಚುನಾಯಿತರಾದರು. ಇದನ್ನೂ ಓದಿ: ಬಿಹಾರದಲ್ಲಿ ಆರ್ಕೆಸ್ಟ್ರಾ ನಡೆಯುತ್ತಿದ್ದ ವೇಳೆ ಕುಸಿದ ಟಿನ್ ಶೆಡ್ – ನೂರಾರು ಜನರಿಗೆ ಗಾಯ, 10 ಮಂದಿ ಗಂಭೀರ

    ಶಾಸಕ ಗಣೇಶ್ ಪ್ರಸಾದ್ ಹಾಗೂ ಸಂಸದ ಸುನೀಲ್ ಬೋಸ್ ಅವರು ಬಿಜೆಪಿಯಿಂದ ಬಂದು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಕಿರಣ್ ಗೌಡ ಹಾಗೂ ಹೀನಾ ಕೌಸರ್ ಅವರಿಗೆ ಮತ ಚಲಾಯಿಸುವ ಮೂಲಕ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವಂತೆ ನೋಡಿಕೊಂಡರು. ಇದನ್ನೂ ಓದಿ: ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

    ಈ ವೇಳೆ ಮಾತನಾಡಿದ ಶಾಸಕ ಗಣೇಶ್ ಪ್ರಸಾದ್, ಎಲ್ಲಿದಿಯಪ್ಪ ಗಣೇಶ್ ಅಂತ ಕೇಳಿದವರಿಗೆ ತಕ್ಕ ಉತ್ತರ ನೀಡಿದ್ದೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಅವರಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಬೆಳಗಾವಿ: ಸಾಲಗಾರ ಪತಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿ, ಅತ್ತೆ ಅರೆಸ್ಟ್

    ಆಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಕಾಂಗ್ರೆಸ್ ಪಕ್ಷ ನಮ್ಮ ಸದಸ್ಯರಿಗೆ ಆಮಿಷ ಒಡ್ಡಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ. ನಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲಾಗಿತ್ತು. ವಿಪ್ ಉಲ್ಲಂಘಿಸಿರುವ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲು ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು. ಇದನ್ನೂ ಓದಿ: ಹಗರಣಗಳಿಂದಾಗಿ ಕಾಂಗ್ರೆಸ್ ಸರ್ಕಾರ ಕೋಮಾಗೆ ಜಾರಿದೆ, ಅಭಿವೃದ್ಧಿ ನಡೆಯುತ್ತಿಲ್ಲ: ಅಶೋಕ್

  • ಲಾರಿ ಬರುತ್ತಲ್ಲ ಕಲ್ಲು ಹೊಡೆಯಿರಿ, ಮುತ್ತಿಗೆ ಹಾಕಿ: ಗ್ರಾಮಸ್ಥರಿಗೆ ಶಾಸಕರಿಂದ ಪ್ರಚೋದನೆ

    ಲಾರಿ ಬರುತ್ತಲ್ಲ ಕಲ್ಲು ಹೊಡೆಯಿರಿ, ಮುತ್ತಿಗೆ ಹಾಕಿ: ಗ್ರಾಮಸ್ಥರಿಗೆ ಶಾಸಕರಿಂದ ಪ್ರಚೋದನೆ

    – ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕರಿಂದ ಸ್ಪಷ್ಟನೆ

    ಚಾಮರಾಜನಗರ: ಲಾರಿ (Lorry) ಬರುತ್ತಲ್ಲ ಕಲ್ಲು ಹೊಡೆಯಿರಿ, ಮುತ್ತಿಗೆ ಹಾಕಿ ಎಂದು ಗ್ರಾಮಸ್ಥರಿಗೆ ಗುಂಡ್ಲುಪೇಟೆ (Gundlupete) ಶಾಸಕ ಗಣೇಶ್ ಪ್ರಸಾದ್ (Ganesh Prasad) ಪ್ರಚೋದನೆ ಕೊಟ್ಟಿದ್ದಾರೆ ಎನ್ನಲಾದ ವಿಡಿಯೋ (Video) ಎಲ್ಲೆಡೆ ವೈರಲ್ ಆಗುತ್ತಿದೆ.

    ಯಾರೋ ರಸ್ತೆ ಅಗಲೀಕರಣ ಮಾಡ್ಕೊಂಡಿದ್ದಾರೆ. ಅವರಿಗೆ ಮುತ್ತಿಗೆ ಹಾಕಿ ಎಂದು ಪ್ರಚೋದನೆ ನೀಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ನಿನ್ನೆ ಗುಂಡ್ಲುಪೇಟೆ ತಾಲೂಕಿನ ಕಾಲ ಹಿರಿಕಾಟಿ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಶಾಸಕ ಗಣೇಶ್ ಪ್ರಸಾದ್ ಭೇಟಿ ನೀಡಿದ್ದರು. ಇದನ್ನೂ ಓದಿ: ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ – ಅಪ್ರಾಪ್ತರನ್ನೇ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಬಂಧನ

    ಈ ವೇಳೆ ಟಿಪ್ಪರ್ ಲಾರಿ ಸಂಚಾರ, ರಸ್ತೆ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂದರ್ಭ ಶಾಸಕರು, ಲಾರಿ ಬರುತ್ತಲ್ಲ ಕಲ್ಲು ಹೊಡೆಯಿರಿ ಎಂಬ ಪ್ರಚೋದನೆ ಕೊಟ್ಟಿದ್ದಾರೆ. ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಸಕರ ಮಾತಿಗೆ ಪರ-ವಿರೋಧ ಚರ್ಚೆಯಾಗ್ತಿದೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಕೊಂದು ಪತ್ನಿಯೊಂದಿಗೆ ಟೆಕ್ಕಿ ಆತ್ಮಹತ್ಯೆ

    ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕ ಗಣೇಶ್ ಪ್ರಸಾದ್ ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ರಸ್ತೆ ನೋಡಲು ಅಲ್ಲಿಗೆ ಹೋಗಿದ್ದೆ. ಲಾರಿಗಳು ಓಡಾಡಿ ರಸ್ತೆ ಹಾಳಾಗಿದೆ. ಮಾನವೀಯತೆ ದೃಷ್ಟಿಯಿಂದ ಯಾರು ರಸ್ತೆ ಉಪಯೋಗಿಸುತ್ತಾರೋ ಅವರೇ ಇದನ್ನು ತುಂಬಿಕೊಡಬೇಕು. ಫುಟ್‌ಪಾತ್‌ಗೂ ರಸ್ತೆ ಮಾಡಿದ್ದಾರೆ. ಸರ್ಕಾರದ ರಸ್ತೆಯನ್ನು ಅಧ್ವಾನ ಮಾಡಿದ್ದಾರೆ. ಶಾಲಾ ಮಕ್ಕಳು ಕೂಡಾ ಲಾರಿ ನಿಲ್ಲಿಸಿ ಎಂದು ಮನವಿ ಕೊಟ್ಟಿದ್ದಾರೆ. ಕಲ್ಲು ಇಡಿ ಅಂತಾ ಹೇಳಲು ಹೋಗಿ ಕಲ್ಲು ಹೊಡೆಯಿರಿ ಅಂದಿದ್ದೇನೆ ಎಂದರು. ಇದನ್ನೂ ಓದಿ: ಮಗುವನ್ನು ನೋಡಲೆಂದು ಪತ್ನಿ ಮನೆಗೆ ಹೋದಾಗ ಹಲ್ಲೆಗೈದು ಹಲ್ಲು ಕಿತ್ತ ಮಾವ!

    ಬಿಜೆಪಿಯವರು (BJP) ಸೋತು ಡಿಪ್ರೆಷನ್‌ಗೆ ಒಳಗಾಗಿ ಈ ರೀತಿ ಆಡುತ್ತಿದ್ದಾರೆ. ನಮ್ಮದು ಕೂಡಾ ಕ್ರಷರ್ ಇದೆ. ಸಾರ್ವಜನಿಕರು ದೂರು ಕೊಟ್ಟಿದ್ದರು. ನಾವು ಬೇರೆ ರಸ್ತೆ ಮಾಡಿಕೊಂಡಿದ್ದೇವೆ. ನಾನು ಸಾರ್ವಜನಿಕವಾಗಿ ಯಾರಿಗೂ ಕೂಡ ಪ್ರಚೋದನೆ ಮಾಡಲ್ಲ. ನಾನು ಯಾರನ್ನೂ ಕೂಡ ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದರು.  ಇದನ್ನೂ ಓದಿ: ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]