ನಟರಾಕ್ಷಸ ಡಾಲಿ ಧನಂಜಯ (Daali Dhananjay) ಫೆ.16ರಂದು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಈ ಹಿನ್ನೆಲೆ ಇಂದು (ಜ.12) ಕಿಚ್ಚ ಸುದೀಪ್ (Sudeep) ಮತ್ತು ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರನ್ನು ಭೇಟಿಯಾಗಿ ಡಾಲಿ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಸರಿಗಮ ವಿಜಯ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
ಡಾಲಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಜ.11ರಂದು ಮೋಹಕತಾರೆ ರಮ್ಯಾಗೆ ಮದುವೆ ಪತ್ರಿಕೆ ನೀಡಿದ ಬೆನ್ನಲ್ಲೇ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ‘ಬಿಗ್ ಬಾಸ್’ ಖ್ಯಾತಿಯ ರಾಜೀವ್ ಸೇರಿದಂತೆ ಅನೇಕರಿಗೆ ಇಂದು (ಜ.12) ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದಾರೆ.
ಇನ್ನೂ ಈಗಾಗಲೇ ಪ್ರಿಯಾಂಕ ಉಪೇಂದ್ರ (Upendra) ದಂಪತಿ, ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ದಂಪತಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕುಟುಂಬ, ‘ಯುವರತ್ನ’ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್, ಸಪ್ತಮಿ ಗೌಡ ಸೇರಿದಂತೆ ಅನೇಕರಿಗೆ ಡಾಲಿ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಅಂದಹಾಗೆ, ಮೈಸೂರಿನಲ್ಲಿ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಡಾಲಿ ಹಸೆಮಣೆ ಏರುತ್ತಿದ್ದಾರೆ. ಸ್ಯಾಂಡಲ್‌ವುಡ್ ಕಲಾವಿದರಿಗೆ ಮಾತ್ರವಲ್ಲ. ರಾಜಕೀಯ ಗಣ್ಯರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.
ಸ್ಯಾಂಡಲ್‌ವುಡ್ ನಟ ಸುದೀಪ್ (Sudeep) ತಾಯಿಯ ನಿಧನಕ್ಕೆ ಚಿತ್ರರಂಗದ ಮತ್ತು ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೀಗ ನಟ ಧ್ರುವ ಸರ್ಜಾ (Dhruva Sarja) ಮತ್ತು ಗಣೇಶ್ (Golden Star Ganesh) ಅವರು ಜೆಪಿ ನಗರದ ನಟನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಸುದೀಪ್ ತಾಯಿ ಅಂತಿಮ ದರ್ಶನದಲ್ಲಿ ಭಾಗಿಯಾದ ‘ಬಿಗ್ ಬಾಸ್’ ಸ್ಪರ್ಧಿಗಳು
ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಸುದೀಪ್ ತಾಯಿ ಸರೋಜಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರಷ್ಟೇ ಅಲ್ಲ, ಈ ವೇಳೆ ರಾಕ್‌ಲೈನ್ ವೆಂಕಟೇಶ್, ಉಮಾಪತಿ ಶ್ರೀನಿವಾಸ್, ಶ್ರೀನಗರ ಕಿಟ್ಟಿ, ಜೈ ಜಗದೀಶ್ ದಂಪತಿ, ಸುಂದರ ರಾಜ್, ಇಂದ್ರಜಿತ್ ಲಂಕೇಶ್, ಕೀರ್ತಿ ರಾಜ್, ಹೇಮಾ ಚೌಧರಿ ಸೇರಿದಂತೆ ಅನೇಕರು ಸರೋಜಾ ಅವರ ಅಂತಿಮ ದರ್ಶನ ಪಡೆದರು.
ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನೂ ಇಂದು ಸಂಜೆ 7 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸುದೀಪ್ ತಾಯಿಯ ಅಂತ್ಯಕ್ರಿಯೆ ನಡೆಯಲಿದೆ.
ಕನ್ನಡ ಚಿತ್ರರಂಗದ ತ್ಯಾಗರಾಜರು ಅಂತಾನೇ ಖ್ಯಾತಿ ಪಡೆದಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ (Ramesh Aravind) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಹೊಸ ಸಿನಿಮಾ ಸೆಟ್ಟೇರಿದೆ. ಗೌರಿ ಹಬ್ಬದ ಶುಭ ದಿನವಾದ ಇಂದು ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿಂದು ಮುಹೂರ್ತ ನೆರವೇರಿದೆ. ನಟಿ ಕಂ ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ದೇಶಕ ವಿಖ್ಯಾತ್ ಪತ್ನಿ ಸ್ವಾತಿ ವಿಖ್ಯಾತ್ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಸಂಗಮದ ಹೊಸ ಸಿನಿಮಾಗೆ Your’s sincerely ರಾಮ್ (Ram) ಎಂಬ ಕ್ಲಾಸ್ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದ್ದು, ಬಹಳ ಇಂಪ್ರೆಸಿವ್ ಆಗಿ ಮೂಡಿಬಂದಿದೆ.
ನಟ ರಮೇಶ್ ಅರವಿಂದ್ ಮಾತನಾಡಿ, ವಿಖ್ಯಾತ್ ಪರಿಚಯ ಆಗಿದ್ದು 9 ವರ್ಷಗಳ ಹಿಂದೆ. ಪುಷ್ಪಕ ವಿಮಾನ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ ಇವನಿಗೆ ಇರುವ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್ ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ನಿರ್ದೇಶನ ಮಾಡುತ್ತಿರುವುದು ಖುಷಿ. ಇದು ನಿಮ್ಮ ಮೊದಲ ಪಯಣ. ಸತ್ಯ ವಿಖ್ಯಾತ್.ಇಬ್ಬರಲ್ಲಿ ಬಹಳ ಉತ್ಸವವಿದೆ. ಗಣೇಶ್ ನನ್ನ ಕಾಂಬೋ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ. ನಮಗೂ ಅಷ್ಟೇ ಖುಷಿ ಕೊಡುತ್ತದೆ.
ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಗೌರಿ ಹಬ್ಬದ ದಿನ your’s sincerely ರಾಮ್. ಗಣೇಶ್ ಹಬ್ಬದ ದಿನ ರಾಮ್ ನೆನಪು ಮಾಡಿಕೊಂಡಿದ್ದೇವೆ. ಚಿಕ್ಕ ಗ್ಲಿಂಪ್ಸ್ ನೋಡಿದಿರಿ. ಇಬ್ಬರ ನಡುವಿನ ಸಂಬಂಧ. ಬೇರೆ ರೀತಿ ಫೀಲ್, ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ಸೀನ್, ಸ್ಕ್ರೀನ್ ಪ್ಲೇ ಎಕ್ಸ್ ಪಿರಿಯನ್ಸ್ ಆಗಿರುತ್ತದೆ. ಬಹಳ ಖುಷಿ ಇದೆ. ರಮೇಶ್ ಸರ್ ಜೊತೆ ಚಿತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಅದ್ಭುತ ನಟ, ಟೆಕ್ನಿಷಿಯನ್ ರಮೇಶ್ ಸರ್. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ಸತ್ಯ ಅವರಿಗೆ ಒಳ್ಳೆದಾಗಲಿ ಎಂದರು.
ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ನಡಿ ಸತ್ಯ ರಾಯಲ Your’s sincerely ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ , ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ಆಡಿಯೊ ಹಕ್ಕುಗಳು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟವಾಗಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ‘ಕಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಇತ್ತೀಚಿಗೆ ಬಿಡುಗಡೆಯಾಗಿತ್ತು. ಕವಿರಾಜ್ ಅವರು ಬರೆದು ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ.
ಪ್ರಸ್ತುತ ಆಲ್ ಇಂಡಿಯಾ ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಚಿನ್ನಮ್ಮ ಹಾಡು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಗೊಂಡು ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಅವರ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರದ ಚಿನ್ನ ಚಿನ್ನ ಕಣ್ಗಳ್ ಹಾಗೂ ಎರಡನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ ಕಲ್ಕಿ 2898 AD ಚಿತ್ರದ ‘ಥೀಮ್ ಆಫ್ ಕಲ್ಕಿ’ ಹಾಡು ಇದೆ.
ಇದೇ ವೇಗದಲ್ಲಿ ವೀಕ್ಷಣೆಯಾಗುತ್ತಿದ್ದರೆ “ಚಿನ್ನಮ್ಮ” ಹಾಡು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಕಾರ್ಯಕಾರಣಿ ಸಭೆ ಮಾಡಲು ಸರ್ವ ಸದಸ್ಯರು ಗೋವಾ (Goa) ಟ್ರಿಪ್ ಮಾಡಿದ್ದರು. ರಾತ್ರಿ ಹೋಟೆಲ್ ನಲ್ಲಿ ಮೋಜು ಮಸ್ತಿ ಮಾಡುವಾಗ ನಿರ್ಮಾಪಕರ ಮಧ್ಯ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಇಬ್ಬರು ನಿರ್ಮಾಪಕರು ತೀವ್ರ ಗಾಯಗೊಂಡಿದ್ದಾರೆ. ಇವರು ಗೋವಾಗೆ ಹೋಗಿದ್ದು ಕನ್ನಡ ಚಿತ್ರೋದ್ಯಮದ ಉದ್ದಾರಕ್ಕೆ. ಸಿನಿ ರಂಗವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸೋಕೆ. ಹೋದವರ‍್ಯಾರು ಕಾಂಜಿಪಿಂಜಿಗಳಲ್ಲ. ಪುಡಿರೌಡಿಗಳೂ ಅಲ್ಲವೇ ಅಲ್ಲ. ಕನ್ನಡ ಸಿನಿರಂಗಕ್ಕೆ ಅಪರೂಪದ ಸಿನಿಮಾ ಕೊಟ್ಟವರು. ಸ್ಯಾಂಡಲ್‌ವುಡ್ಡನ್ನು ಹುಲುಸಾಗಿ ಬೆಳೆಸಿದವರು. ಗಟ್ಟಿಯಾಗಿ ನಿಲ್ಲಿಸಿದವರು. ಆದ್ರೆ, ಈ ಗುಂಪಿನಲ್ಲಿದ್ದ ಕೆಲವರು ಮಾಡಿದ್ದೇನು? ಎಣ್ಣೆ ಏಟಲ್ಲಿ ಬಡಿದಾಡ್ಕೊಂಡಿದ್ದಾರೆ. ಕನ್ನಡ ಚಿತ್ರೋದ್ಯಮದ ಮಾನ ಮರ‍್ಯಾದೇನ ಮೂರುಕಾಸಿಗೆ ಹರಾಜಾಕಿದ್ದಾರೆ. ಬಡಿದಾಡ್ಕೊಂಡವ್ರ ಮುಖದಿಂದ ರಕ್ತ ಸೋರಿದೆ, ತಲೆಬುರುಡೆ ಒಡೆದಿದೆ. ಮಾರಣಾಂತಿಕ ಹಲ್ಲೆ ನಡೆದಿದೆ.
ಕನ್ನಡ ಸಿನಿಮಾ ರಂಗಕ್ಕೀಗ ಬರೋಬ್ಬರಿ 90 ವರ್ಷ. ಈ ಹಾದಿ ಸುಗಮವಾದುದಲ್ಲ. ಮದ್ರಾಸ್‌ನಿಂದ ಬಿಡಿಸಿಕೊಂಡು ಕರ್ನಾಟಕದಲ್ಲೇ ಚಿತ್ರರಂಗ ಕಟ್ಟಿದ ಇತಿಹಾಸವಿದೆಯಲ್ಲ ಅದು ರೋಚಕ. `ಮದ್ರಾಸ್’ ಎಂಬ ನಮ್ಮದಲ್ಲದ ನೆಲದಲ್ಲಿ ನೆಲೆನಿಂತು, ಕಷ್ಟಪಟ್ಟು, ಅವರು ಕೊಟ್ಟ ಸಮಯಕ್ಕೆ ಚಿತ್ರೀಕರಣ ಮಾಡಿ, ಹಗಲು ರಾತ್ರಿ ಲೆಕ್ಕಿಸದೇ ಕಟ್ಟಿದ ಚಿತ್ರರಂಗ ನಮ್ಮದು. ನಾವೀಗ 90ರ ಸಂಭ್ರಮದಲ್ಲಿದ್ದೇವೆ. ಇಡೀ ರಾಷ್ಟ್ರವೇ ಕನ್ನಡ ಸಿನಿಮಾ ರಂಗದತ್ತ ನೋಡುವಂತಾಗಿದೆ. ಮೂಕಿ ಯುಗದಿಂದ ಇಲ್ಲೀತನಕ ಮಾಡಿದ ಪ್ರಯೋಗಗಳು ಇತರ ಚಿತ್ರರಂಗಕ್ಕೆ ಮಾದರಿ ಆಗಿವೆ. ಈ ಮಾದರಿ ಇವರಿಂದಾಗಿ ಮಣ್ಣುಪಾಲಾಗಿದೆ. 90ರ ಸಂಭ್ರಮವನ್ನು ಸೆಲೆಬ್ರೇಟ್ ಮಾಡೋದು ಹೇಗೆ? ಅಂತ ಪ್ಲ್ಯಾನ್ ಮಾಡೋಕೆ ಹೋದವರು ಮಾನ ಕಳೆದು ಬಂದಿದ್ದಾರೆ.
ಚಿತ್ರರಂಗದ ಮಾತೃಸಂಸ್ಥೆ ಈ ಫಿಲ್ಮ್ ಚೇಂಬರ್. ಚಿತ್ರೋದ್ಯಮದ ಪುಣ್ಯಾತ್ಮರು ನಡೆದಾಡಿದ ಕರ್ಮಭೂಮಿ ಅದು. ಅದಕ್ಕೆ ಅದರದ್ದೇ ಆದ ಗೌರವವಿದೆ. ಈಗದು ತನ್ನ ಖದರ್ ಕಳೆದುಕೊಳ್ಳುತ್ತಿದ್ದರೂ, ಈಗಲೂ ಈ ಸಂಸ್ಥೆಯ ಮೇಲೆ ಅಪಾರ ವಿಶ್ವಾಸ, ನಂಬಿಕೆ ಚಿತ್ರಕರ್ಮಿಗಳದ್ದು. ಇಂಥದ್ದೊಂದು ಜವಾಬ್ದಾರಿಯ ಅರಿವು ಈಗಿರುವವರಿಗೆ ಇರಬೇಕಿತ್ತು ಅಲ್ಲವಾ?.. ಗೋವಾಗೆ ಹೋಗಿದ್ದು ಯಾಕೆ? ಅಲ್ಲಿಗೇ ಯಾಕೆ ಹೋಗಬೇಕಿತ್ತು? ಅಷ್ಟೂ ಜನರನ್ನು ಕರೆದುಕೊಂಡು ಹೋಗಿದ್ದು ಯಾರು? ಹಣ ಎಲ್ಲಿಂದ ಬಂತು? ಈ ಯಾವ ಪ್ರಶ್ನೆಯನ್ನೂ ಜನರು ಕೇಳ್ತಿಲ್ಲ.. ಗೋವಾಗೆ ಹೋಗಿದ್ದು ತಪ್ಪು ಅಂತಾನೂ ಹೇಳ್ತಿಲ್ಲ. ಮಾತೃಸಂಸ್ಥೆಯ ಹೆಸರಿನಲ್ಲಿ ಹೋದರು ಮರ್ಯಾದೆ ಕಳೆಯುವಂಥ ಕೆಲಸ ಮಾಡ್ಬೋದಾ ಅಂತಿದ್ದಾರೆ ಜನರು. ಗೋವಾಗೆ ಹೋದವರೇ ಹೇಳ್ತಿರೋ ಪ್ರಕಾರ.. ಇವರೆಲ್ಲ ಹೋಗಿದ್ದು ಜಾಲಿಟ್ರಿಪ್‌ಗೆ ಅಲ್ಲವಂತೆ. ಸಿನಿಮಾ ರಂಗಕ್ಕೆ 90 ವರ್ಷ ತುಂಬಿರೋ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗ್ತಿದೆ. ಈ ಕಾರ್ಯಕ್ರಮದ ರೂಪರೇಷೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ದರಂತೆ. ಇದರ ಜೊತೆಗೆ ಫಿಲ್ಮ್ ಚೇಂಬರ್‌ನ ಕಾರ್ಯಕಾರಿಣಿ ಸಭೆ ಕೂಡ ಪ್ಲ್ಯಾನ್ ಆಗಿತ್ತಂತೆ. ಇಷ್ಟೊಂದು ಮಹತ್ವದ ಕೆಲಸ ಇಟ್ಕೊಂಡು ಹೋದವರು ಬಡಿದಾಡಿಕೊಂಡಿದ್ದು ಯಾಕೆ?.. ಉಳಿದುಕೊಂಡ ಹೋಟೆಲ್‌ನಲ್ಲಿ ನೆತ್ತರು ಹರಿಸಿದ್ದು ಯಾಕೆ?.. ಅಷ್ಟಕ್ಕೂ ಇವರೇನು ಸಣ್ಣ ಮಕ್ಕಳಾ? ಫಿಲ್ಮ್ ಚೇಂಬರ್ ಸದಸ್ಯರಾಗಿದ್ದವರಿಗೆ ಕಾಮನ್‌ಸೆನ್ಸ್ ಬೇಡವಾ?.
ಫಿಲ್ಮ್ ಚೇಂಬರ್‌ನಲ್ಲಿ ಈ ರೀತಿ ಗಲಾಟೆ ಆಗೋದು ಹೊಸದೇನೂ ಅಲ್ಲ. ಚುನಾವಣೆ ಟೈಮ್‌ನಲ್ಲಿ ಒಬ್ಬರಿಗೊಬ್ಬರು ತೊಡೆ ತಟ್ಟಿದ್ದಾರೆ.. ಕೂಗಾಡಿದ್ದಾರೆ.. ಕೈಕೈ ಮಿಲಾಯಿಸೋ ಹಂತಕ್ಕೂ ಹೋಗಿದ್ದಾರೆ. ಆದರೆ, ಈ ಪ್ರಮಾಣದಲ್ಲಿ ಯಾವತ್ತೂ ಜಗಳ ಆಗಿರಲಿಲ್ಲ. ಹಾಗಂತ ಈಗ ಯಾವ ಚುನಾವಣೆನೂ ನಡೆದಿಲ್ಲ. ಗೋವಾದಲ್ಲಿ ನಡೆದಿರೋ ಮಾರಣಾಂತಿಕ ಹಲ್ಲೇಲಿ ನಿರ್ಮಾಪಕ ಎ.ಗಣೇಶ್ ಹಣೆಯಿಂದ ರಕ್ತ ಚಿಮ್ಮಿದೆ. ದೇಹದ ತುಂಬಾ ಗಾಯಗಳಾಗಿವೆ. ಮತ್ತೋರ್ವ ನಿರ್ಮಾಪಕ ರಥಾವರ ಚಂದ್ರು ಕೂಡ ಗಂಭೀರ ಗಾಯದಿಂದ ನೆರಳ್ತಾ ಇದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಅಂಬುಲೆನ್ಸ್ ಬಾರದೇ ಇದ್ದರೆ, ಅನಾಹುತಾನೇ ಆಗಿರೋದು ಅಂತಿದ್ದಾರೆ ನಿರ್ಮಾಪಕ ಗಣೇಶ್.
ಅಂಬುಲೆನ್ಸ್ ತಡವಾಗಿದ್ದರೆ ಅನಾಹುತನೇ ಆಗಿರೋದು ಅಂತಿದ್ದಾರೆ ಅಂದ್ಮೇಲೆ.. ಹಲ್ಲೆ ಯಾವ ಪ್ರಮಾಣದಲ್ಲಿ ಆಗಿರೋದು ಅಂತ ನೀವೇ ಅಂದಾಜಿಸಿಕೊಳ್ಳಿ.. ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ಯಾಕೆ? ವೈಯಕ್ತಿಕ ಕಾರಣ ಏನಾದ್ರೂ ಇತ್ತಾ? ದ್ವೇಷ ತುಂಬಿಕೊಂಡೆ ಇವರು ಗೋವಾಗೆ ಹೋಗಿದ್ದಾರೆ? ದ್ವೇಷದಲ್ಲಿ ಹಲ್ಲು ಮಸೀತಾ ಇದ್ದೋರ್‌ನ ಗೋವಾಗೆ ಕರ‍್ಕೊಂಡು ಹೋಗಿದ್ದು ಯಾರು? ಸತೀಶ್ ಅನ್ನೋರು ಫೋರ್ಕ್ ಸ್ಪೂನ್‌ನಿಂದ ಹಲ್ಲೆ ಮಾಡಿದ್ದು ಯಾಕೆ? ಅಲ್ಲಿದ್ದವರಿಗೆ ಈ ಕಾಳಗವನ್ನು ತಪ್ಪಿಸೋಕೆ ಆಗ್‌ಲಿಲ್ಲವಾ? ಅಬ್ಬಬ್ಬಾ.. ಎಷ್ಟೊಂದು ಪ್ರಶ್ನೆಗಳು.. ಇದಕ್ಕೆ ಉತ್ತರಿಸೋರು ಯಾರು? ನಿರ್ಮಾಪಕ ಗಣೇಶ್ ಅವರೇ ಹೇಳಿದಂತೆ ಹಲ್ಲೆ ಮಾಡಿದ ವ್ಯಕ್ತಿ ಕಂಠಪೂರ್ತಿ ಕುಡಿದಿದ್ನಂತೆ.. ಅದು ಬರೀ ಕುಡಿತದ ಹಾರಾಟ ಮಾತ್ರ ಆಗಿರಲಿಲ್ಲವಂತೆ.. `ಬೇರೆ ಇನ್ನೇನಾದ್ರೂ ತಗೊಂಡಿದ್ನಾ?.’ ಅಂತ ಅನುಮಾನ ಹೊರ ಹಾಕಿದ್ದಾರೆ. `ಬೇರೆದು ಅಂದ್ರೇನು..?’ ಈ ಮಾತು ನಾನಾ ಅನುಮಾನಕ್ಕೆ ಕಾರಣವಾಗಿದೆ. `ಬೇರೆದು ಅಂದ್ರೇನು..?’ ಅಂತ ಗಣೇಶ್ ಅವರೇ ಬಿಡಿಸಿ ಹೇಳಬೇಕಿದೆ. ಒಟ್ನಲ್ಲಿ.. ಗೋವಾ ಟ್ರಿಪ್ ಸುಖಾಂತ್ಯ ಕಾಣದೆ.. ಹೊಡೆದಾಟದಲ್ಲಿ ಕೊನೆಗೊಂಡಿದೆ. ಹೋದ ಕೆಲ್ಸ ಆಯ್ತಾ ಅಂತ ಚೇಂಬರ್ ಅಧ್ಯಕ್ಷರೇ ಹೇಳ್ಬೇಕಿದೆ. ಅಂದಹಾಗೆ ಈ ಘಟನೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ತುಟಿಗೂ ಗಾಯ ಆಗಿದೆ ಅನ್ನೋದು ವಿಪರ್ಯಾಸ.
ಸಿನಿಮಾ ರಂಗಕ್ಕೆ 90 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಮುಂದಾಗಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಪೂರ್ವಭಾವಿಯಾಗಿ ತಯಾರಿಯ ಕುರಿತಂತೆ ಚರ್ಚೆ ಮಾಡಲು ಮತ್ತು ಕಾರ್ಯಕಾರಿಣಿ ಸಭೆಯನ್ನು ನಡೆಸಲು ಫಿಲ್ಮ್ ಚೇಂಬರ್ (Film Chamber) ಸದಸ್ಯರು ಮತ್ತು ಅಧ್ಯಕ್ಷರು ಗೋವಾಗೆ (Goa) ಹಾರಿದ್ದರು. ಈ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ.
ನಿರ್ಮಾಪಕ ರಥಾವರ ಚಂದ್ರು ಮತ್ತು ಸತೀಶ್ ಆರ್ಯ (Satish Arya) ನಡುವೆಗೆ ಗಲಾಟೆ ಶುರುವಾಗಿ, ಗಲಾಟೆ ತಪ್ಪಿಸಲು ಹೋದ ನಿರ್ಮಾಪಕ ಎ.ಗಣೇಶ್ (Ganesh) ಅವರ ಹಣೆಗೆ ತೀವ್ರ ಗಾಯವಾಗಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ಅವರ ತುಟಿಗೂ ಗಾಯವಾಗಿದೆ. ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಗಾಯಾಳು ಗಣೇಶ್ ಎಕ್ಸ್ ಕ್ಲ್ಯೂಸಿವ್ ಆಗಿ ಮಾತನಾಡಿದ್ದಾರೆ.
ಸಿನಿ 90 ಕಾರ್ಯಕ್ರಮದ ಕುರಿತು ಚರ್ಚೆ ಮಾಡೋಕೆ ಪ್ರೋಗ್ರಾಂ ಹೇಗೆ ಮಾಡ್ಬೇಕು ಅನ್ನೋ ಬಗ್ಗೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ವಿ. ಸತೀಶ್ ಆರ್ಯ ಹಾಗೂ ರಥಾವರ ಮಂಜು ನಡುವೆ ಗಲಾಟೆ ಶುರುವಾಯ್ತು. ಅವ್ರನ್ನ ಬಿಡಿಸೋಕೆ ಅಂತ ನಾನು ಹೋಗಿದ್ದು ಸತೀಶ್ ನನ್ಗೆ ಫೋರ್ಕ್ ಸ್ಪೂನ್ ಯಿಂದ ಚುಚ್ಚಿದ್ರು. ಎನ್ ಎಂ ಸುರೇಶ್ ತುಟಿಗೂ ಗಾಯ ಆಗಿದೆ. ಸಿನಿಮಾ ರೀತಿಯಲ್ಲಿ ಸತೀಶ್ ಆರ್ಯ ಹಲ್ಲೆ ಮಾಡಿದ್ರು. ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಾಸ್ಸಾದೆ ಇಲ್ಲಿ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಂಡೆ. ರಥಾವರ ಮಂಜುನಾಥ್ ಗೆ ಗಂಭೀರ ಗಾಯ ಆಗಿದೆ ಅನ್ನುತ್ತಾರೆ ಗಣೇಶ್.
ಸತೀಶ್ ಆರ್ಯ ಯಿಂದ ಕೆಟ್ಟ ಹೆಸರು ಬರ್ಬಾರ್ದು ಅಂತ ಕಂಪ್ಲೇಂಟ್ ಕೊಟ್ಟಿಲ್ಲ. ಹುಚ್ಚ ಸತೀಶ್ ತರದವ್ರು ಚೇಂಬರ್ ಅಲ್ಲಿ ಇದ್ರೆ ಬೆಲೆ ಇರಲ್ಲ. ಸತೀಶ್ ಹೊಡೆದ ತಕ್ಷಣ ಎಸ್ಕೇಪ್ ಆಗಿದ್ದಾರೆ. ಸತೀಶ್ ಗಲಾಟೆ ಮಾಡಿರುವ ಸಿಸಿಟಿವಿ ಫೂಟೆಜ್ ಇದೆ . ರಕ್ತ ಸುರಿತಿದೆ ಆದ್ರೂ ಡಾನ್ಸ್ ಮಾಡ್ತಿದ್ದಾನೆ. ಕುಡಿದ ಅಮಲಿನಲ್ಲಿ ಏನು ಮಾಡಿದ್ದನೋ ಆತನಿಗೆ ಗೊತ್ತಿಲ್ಲ. ಪೆಟ್ಟು ಬಿದ್ದಿರೋ ಕಾರಣ ಕಣ್ಣು ಮಂಜಾಗಿದೆ, ಕಣ್ಣು ಕಳೆದುಕೊಳ್ಳೋ ಸಂದರ್ಭ ಸಹ ಬರ್ತಿತ್ತು. ಎನ್ ಎಂ ಸುರೇಶ್ ದುಡ್ಡಲ್ಲಿ ಗೋವಾ ಹೋಗಿದ್ದು. ಚೇಂಬರ್ ದುಡ್ಡು ಒಂದು ಪೈಸೆ ಬಳಸಿಲ್. ನಾಳೆ 12ಗಂಟೆಗೆ ವಾಣಿಜ್ಯ ಮಂಡಳಿ ಸುದ್ಧಿಗೋಷ್ಠಿ ಆಯೋಜಿಸಿ ತೀರ್ಮಾನ ಕೊಡಲಿದೆ ಎನ್ನುತ್ತಾರೆ ಗಣೇಶ್.
ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಾಗಿ ನಿಶಾನ್ ರಾಯ್ ಅವರು ಬರೆದು ಚಂದನ್ ಶೆಟ್ಟಿ ಹಾಡಿರುವ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್” ಎಂಬ ಸುಂದರ ಗೀತೆ ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಸಾವಿರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ಇದು ಚಿತ್ರದ ಮೊದಲ ಹಾಡು ಕೂಡ. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಶ್ರೀನಿವಾಸರಾಜು ಅವರು ಫೋನ್ ಮಾಡಿ ಕಥೆ ಹೇಳಬೇಕೆಂದಾಗ ನನಗೆ ಆಶ್ಚರ್ಯವಾಯಿತು. ಅವರು “ದಂಡುಪಾಳ್ಯ” ದಂತಹ ಥ್ರಿಲ್ಲರ್ ಚಿತ್ರ ಮಾಡಿರುವ ನಿರ್ದೇಶಕರು. ನಾನು ನೋಡಿದರೆ ಪ್ರೇಮಕಥೆಗಳ ನಾಯಕ. ನನಗೆ ಇವರು ಯಾವ ತರಹ ಕಥೆ ಮಾಡಿರಬಹುದು ಅಂದುಕೊಂಡು ಕಥೆ ಕೇಳಿದೆ. ಅವರು ಕಥೆ ಶುರು ಮಾಡಿದ ಕೂಡಲೆ ನೀವು ಮದುವೆ ಗಂಡಿನ ತರಹ ಬರುತ್ತೀರಾ. ಎಂಟು ಜನ ನಾಯಕಿಯರು ಮದುವೆ ಹೆಣ್ಣಿನ ತರಹ ಸಿದ್ದವಾಗಿರುತ್ತಾರೆ ಎಂದರು. ಆಗ ಇದು ನನ್ನ ಜಾನರ್ ನ ಚಿತ್ರ ಅಂದು ಕೊಂಡೆ. ಆದರೆ ಚಿತ್ರದಲ್ಲಿ ಬರೀ ಇಷ್ಟೇ ಇಲ್ಲ. ಒಳ್ಳೆಯ ಟ್ವಿಸ್ಟ್ ಇಟ್ಟಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.
ಇದು ಗಣೇಶ್ ಅವರಿಗಾಗಿಯೇ ಮಾಡಿರುವ ಕಥೆ. ಫ್ಯಾಮಿಲಿ ಎಂಟರ್ ಟೈನರ್. ಎಲ್ಲಾ ಜನರೇಶನ್ ಅವರಿಗೂ ಹಿಡಿಸುವ ಕಥೆಯೂ ಹೌದು. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಆ ಪೈಕಿ ಮೊದಲ ಹಾಡು ಈಗ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರು ಸೇರಿದಂತೆ 64 ಜನ ಕಲಾವಿದರು ಅಭಿನಯಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಚೊಚ್ಚಲ ಹಾಡಿಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜು ತಿಳಿಸಿದರು.
ಇದೊಂದು ಪರಿಶುದ್ಧ ಕೌಟುಂಬಿಕ ಕಥಾ ಹಂದರ ಹೊಂದಿರುವ ಚಿತ್ರ. ಹಾಡುಗಳು ಚೆನ್ನಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ. ಗಾಯಕ ಚಂದನ್ ಶೆಟ್ಟಿ, ಹಾಡಿನಲ್ಲಿ ಅಭಿನಯಿಸಿರುವ ವಿನುತ, ಚಂದನ, ಸುಶ್ಮಿತ ಹಾಗೂ ಚಂದನ ಗೌಡ ಮುಂತಾದವರು ಈ ಹಾಡಿನ ಬಗ್ಗೆ ಮಾತನಾಡಿದರು.
ಬಹು ನಿರೀಕ್ಷಿತ “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” (Krishnam Pranaya Sakhi) ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಪೋಸ್ಟರ್ ಗಳು ಎಲ್ಲರ ಮೆಚ್ಚುಗೆ ಗಳಿಸಿದೆ. ಬಹು ನಿರೀಕ್ಷಿತ ಈ ಚಿತ್ರದ ಮೊದಲ ಹಾಡು ಮೇ 25 ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ.
ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಸುಮಧುರ ಹಾಡುಗಳು “ಕೃಷ್ಣಂ ಪ್ರಣಯ ಸಖಿ” ಚಿತ್ರದಲ್ಲಿದೆ. ಆ ಪೈಕಿ ನಿಶಾನ್ ರಾಯ್ ಅವರು ಬರೆದು ಹೆಸರಾಂತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಈ ಚಿತ್ರದ ಮೊದಲ ಹಾಡು ಸಾಂಸ್ಕೃತಿಕ ನಗರಿ ಮೈಸೂರಿನ “ಮಾಲ್ ಆಫ್ ಮೈಸೂರಿನಲ್ಲಿ” ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಮೈಸೂರಿನಲ್ಲಿ ಮೊದಲ ಹಾಡು ಬಿಡುಗಡೆ ಮಾಡುವುದರ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು, ವಿಯೆಟ್ನಾಂ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.
ಬಹು ನಿರೀಕ್ಷಿತ “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಲೋಕಸಭಾ (Lok Sabha) ಚುನಾವಣೆಯ (Elections) ಮತದಾನ ಪ್ರಕ್ರಿಯೆಯಲ್ಲಿ ಅತ್ಯಂತ ಹುಮ್ಮಸ್ಸಿನಿಂದ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ತಪ್ಪದೇ ಮತದಾನ ಮಾಡಿ ಎಂದು ಈವರೆಗೂ ಪ್ರಚಾರ ಮಾಡುತ್ತಿದ್ದ ಸ್ಯಾಂಡಲ್ ವುಡ್ ನಟ ನಟಿಯರು ತಮ್ಮ ಜವಾಬ್ದಾರಿಯನ್ನು ಬೆಳ್ಳಂಬೆಳಗ್ಗೆ ನಿಭಾಯಿಸಿ ಮಾದರಿಯಾಗಿದ್ದಾರೆ.
ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್ (Ganesh) ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ (Shilpa Ganesh) ಮತದಾನ (Voting) ಮಾಡಿ, ಮಾದರಿಯಾದರು. ದಂಪತಿ ಸಮೇತ ಬೆಳಗ್ಗೆ 7.20ಕ್ಕೆ ಆಗಮಿಸಿದ್ದ ಗಣೇಶ್ ಮತದಾನ ಮಾಡಿದರು. ಮತದಾನ ಮಾಡಿ ಮಾತನಾಡಿದ ಗಣೇಶ್, ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು.
ಆರ್.ಆರ್ ನಗರದಲ್ಲಿ ಗಣೇಶ್ ದಂಪತಿ ತಮ್ಮ ಹಕ್ಕು ಚಲಾಯಿಸಿದರೆ, ಜೆಪಿ ನಗರ ಆಕ್ಸ್ ಫರ್ಡ್ ಮತಗಟ್ಟೆಯಲ್ಲಿ ನಟ ಸುದೀಪ್ ತಾಯಿ ಸರೋಜಾ ಅವರು ಮತ ಚಲಾಯಿಸಿದರು. ನಂತರ ಸುದೀಪ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ.
ನಾಡಿನೆಲ್ಲೆಡೆ ಈಗ ಯುಗಾದಿ ಹಬ್ಬದ ಸಡಗರ. ಈ ಹಬ್ಬದ ಸಂಭ್ರಮಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಾಯಕರಾಗಿ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದೆ. ಬಹು ನಿರೀಕ್ಷಿತ ಈ ಚಿತ್ರ ಸದ್ಯದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ ಬರಲಿದೆ.
ಕನ್ನಡದಲ್ಲಿ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು (Srinivas Raju) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.