Tag: ಗಣಿ ದುರಂತ

  • ಗಣಿ ದುರಂತ: ಬರೋಬ್ಬರಿ 1 ತಿಂಗ್ಳ ಬಳಿಕ ಕಾರ್ಮಿಕನ ಮೃತ ದೇಹ ಪತ್ತೆ – ವಿಡಿಯೋ

    ಗಣಿ ದುರಂತ: ಬರೋಬ್ಬರಿ 1 ತಿಂಗ್ಳ ಬಳಿಕ ಕಾರ್ಮಿಕನ ಮೃತ ದೇಹ ಪತ್ತೆ – ವಿಡಿಯೋ

    ಶಿಲ್ಲಾಂಗ್: ಇಲ್ಲಿನ ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆ ನಡೆದ 1 ತಿಂಗಳ ಬಳಿಕ ಭಾರತೀಯ ನೌಕಾದಳದ ಚಾಲಕರು ಒಬ್ಬ ಕಾರ್ಮಿಕನ ಮೃತ ದೇಹವನ್ನು ಪತ್ತೆ ಮಾಡಿದ್ದಾರೆ.

    ಕಾರ್ಮಿಕರ ಪತ್ತೆಗಾಗಿ ನೀರಿನಲ್ಲಿ ವಸ್ತುಗಳನ್ನು ಗುರುತಿಸಲು ಬಳಸುವ ವಿಶೇಷ ವಿನ್ಯಾಸದ ಯುಡಬ್ಲ್ಯುಆರ್‍ಒವಿ ಯಂತ್ರದ ಸಹಾಯದ ಪಡೆಯಲಾಗಿದೆ. ಈ ವೇಳೆ ಸುಮಾರು 210 ಮೀಟರ್ ಆಳದಲ್ಲಿ ಮೃತದೇಹ ಪತ್ತೆಯಾಗಿದ್ದು, ಕಾರ್ಮಿಕನ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಎನ್‍ಡಿಆರ್ ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಏನಿದು ದುರಂತ?
    ಮೇಘಾಲಯದ ಜೈಂತಿಯಾ ಹಿಲ್ಸ್ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾಗ ಡಿ.13 ರಂದು ದುರಂತ ಸಂಭವಿಸಿತ್ತು. ಘಟನೆಯಲ್ಲಿ 15 ಕಾರ್ಮಿಕರು ಗಣಿಯಲ್ಲಿ ಸಿಲುಕಿದ್ದರು. ಇವರ ರಕ್ಷಣೆಗಾಗಿ ಭಾರತೀಯ ವಾಯುಪಡೆ ಹಾಗೂ ಎನ್‍ಡಿಆರ್‍ಎಫ್ ಸಿಬ್ಬಂದಿ ಒಟ್ಟಿಗೆ ಕಾರ್ಯಾಚರಣೆ ನಡೆಸುತ್ತಿದೆ.

    ಗಣಿಗಾರಿಕೆ 20 ಮಂದಿ ಕಾರ್ಮಿಕರನ್ನ ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ ಗಣಿಗಾರಿಕೆ ನಡೆಯುತ್ತಿದ್ದ ಸಮೀಪದಲ್ಲಿ ನದಿ ಇದ್ದ ಕಾರಣ, ನದಿಯ ನೀರು ಗಣಿಯ ಒಳಗೆ ನುಗ್ಗಿತ್ತು. ಈ ವೇಳೆ 5 ಮಂದಿ ಗಣಿಯಿಂದ ಹೊರ ಬರಲು ಸಾಧ್ಯವಾದರೆ, 15 ಮಂದಿ ಒಳಗೆ ಸಿಲುಕಿದ್ದರು. ಸದ್ಯ ಕಾರ್ಮಿಕನ ಮೃತದೇಹ 200 ಮೀಟರ್ ಅಳದಲ್ಲಿ ಪತ್ತೆಯಾಗಿದೆ. ಉಳಿದ 14 ಮಂದಿಯ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv