ಮಂಡ್ಯ: ಕೆಆರ್‌ಎಸ್‌ನಲ್ಲಿನ ಕಾವೇರಿ ಆರತಿ (Cauvery Aarti) ಹಾಗೂ ಮಂಡ್ಯ ಜಿಲ್ಲೆಯ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಅಮ್ಯೂಸ್ಮೆಂಟ್ ಪಾರ್ಕ್ ಮಾಡಿಯೇ ಮಾಡುತ್ತೇವೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ (Ganiga Ravikumar) ಹೇಳಿದ್ದಾರೆ.
ಸದ್ಯ ಕೆಆರ್‌ಎಸ್ ಡ್ಯಾಂ (KRS Dam) ಬಳಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ (Amusement Park) ಮಾಡಲು ರೈತ ಸಂಘಟನೆಗಳು ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಈ ಸಂಭಂಧ ಹೋರಾಟಗಳನ್ನೂ ರೂಪಿಸುತ್ತಿವೆ. ಈ ವಿಚಾರವಾಗಿ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಆದ್ರೆ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ದೇಶ-ವಿದೇಶದಿಂದ ಪ್ರವಾಸಿಗರು ಬರ್ತಾರೆ. ಅದರ ಅನುಕೂಲ ರೈತರು ಹಾಗೂ ರೈತರ ಮಕ್ಕಳಿಗೆ ಆಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ | ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ
ವಿರೋಧ ಮಾಡುವವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಮಂಡ್ಯ ದೊಡ್ಡ ಹಳ್ಳಿ ರೀತಿ ಇದೆ, ಅಭಿವೃದ್ಧಿ ಆಗಬೇಕು ಅಂದ್ರೆ ಮಂಡ್ಯಕ್ಕೆ ಜನರು ಬರಬೇಕು. ಈ ಎರಡು ಯೋಜನೆಗಳಿಂದ ಜಲಾಶಯಕ್ಕೆ ಧಕ್ಕೆ ಆಗಲ್ಲ, ಅಪಾಯವೂ ಇಲ್ಲ. ಜನರು ಬಂದ್ರೆ ಡ್ಯಾಂ ಕಲ್ಲಿಗೆ ಗುದ್ದುತ್ತಾರಾ? ಯಾವುದೇ ಸಮಸ್ಯೆಗಳು ಆಗೋದಿಲ್ಲ. ಹಾಗಾಗಿ ಕಾವೇರಿ ಆರತಿಯನ್ನ ನಮ್ಮ ಸರ್ಕಾರ ಮಾಡೇ ಮಾಡುತ್ತೆ ಎಂದು ಶಪಥ ಮಾಡಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ತಲಾ 5 ಕೋಟಿ ಪರಿಹಾರ ಕೊಡ್ಬೇಕು: ವಾಟಾಳ್ ನಾಗರಾಜ್ ಆಗ್ರಹ
ಇನ್ನೂ 20 ರೂ. ಕರ್ಫೂರ ಹಚ್ಚೋಕೆ ಯಾಕೆ 100 ಕೋಟಿ ರೂ. ಎಂಬ ರೈತರ ಪ್ರಶ್ನೆಗೆ ಉತ್ತರಿಸಿ, ಕರ್ಫೂರ ಹಚ್ಚೋಕೆ 20 ಸಾಕು. ಆದ್ರೆ ಆರತಿ ಮಾಡಲು ಮೂಲಭೂತ ಸೌಕರ್ಯ ಬೇಕು. 20 ಸಾವಿರ ಜನರು ಕುಳಿತು ನೋಡಲು ವ್ಯವಸ್ಥೆ ಬೇಕು. ಯೋಜನೆಗೆ ಡಿಪಿಆರ್ ಆಗುತ್ತೆ. ವಿರೋಧ ಮಾಡುವವರು ಡಿಪಿಆರ್ ತರಿಸಿಕೊಂಡು ನೋಡಿ ಎಂದು ಸ್ಪಷ್ಟನೆ ಕುಟುಕಿದ್ದಾರೆ.
ಯಾವುದಕ್ಕೆ ಎಷ್ಟು ಖರ್ಚು ಆಗುತ್ತೆ ಎಂದು ಪರಿಶೀಲಿಸಿ, ಭ್ರಷ್ಟಚಾರ ಕಂಡ್ರೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಅದು ಬಿಟ್ಟು ಮಾಡುವ ಮುನ್ನವೇ ಅದ್ಯಾಕೆ, ಇದ್ಯಾಕೆ? ಅನ್ನೋದು ಸರಿಯಲ್ಲ. ಕರ್ಪೂರ 20 ರೂಪಾಯಿ ಆದ್ರೆ ಅದರ ಹಿಡಿ 400 ರೂಪಾಯಿ. ರೈತರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ಆರತಿ ಮಾಡೇ ಮಾಡುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಮಹಿಳೆಯರನ್ನ ತಬ್ಬಿಕೊಂಡು ತುಟಿಗೆ ಚುಂಬಿಸ್ತಿದ್ದ – ಬೆಂಗಳೂರಿನ ಬೀದಿ ಕಾಮಣ್ಣ ಪೊಲೀಸ್ ವಶಕ್ಕೆ
ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರ್ಕಾರ ಕೆಡವಲು ಬಿಜೆಪಿ (BJP) ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ಅಂತಹದ್ದೇ ಒಂದು ಗಂಭೀರ ಆರೋಪವನ್ನು ಮಂಡ್ಯದ (Mandya) ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravikumar) ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕೆಡವಲು ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಶಾಸಕರನ್ನು ಸಂಪರ್ಕ ಮಾಡಿ 100 ಕೋಟಿ ರೂ. ಆಫರ್ ಮಾಡಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್
ಸುಮಾರು 50 ಮಂದಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಅವರಲ್ಲಿ ನನ್ನನ್ನು ಸಹ ದೂರವಾಣಿ ಮೂಲಕ ಸಂಪರ್ಕ ಮಾಡಿ ಆಫರ್ ಮಾಡಿದ್ದಾರೆ. ನನ್ನ ಬಳಿ ಕಾಲ್ ರೆಕಾರ್ಡ್ ಇದೆ. ಇನ್ನೂ ಇದರ ಬಗ್ಗೆ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದೇವೆ. ಸಾಕ್ಷಿ ಸಮೇತ ರೆಡ್ ಹ್ಯಾಂಡ್ ಆಗಿ ಐಟಿ, ಇಡಿ ಅವರಿಗೆ ಹಿಡಿದು ಕೊಡುತ್ತೇವೆ. ನಮ್ಮ ಸರ್ಕಾರ ಬಂಡೆಯಂತೆ ಸ್ಥಿರವಾಗಿ ಇದೆ. ಯಾರು ನಮ್ಮ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ. 5 ವರ್ಷ ರಾಜ್ಯದಲ್ಲಿ ನಮ್ಮ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ
– ಕುಮಾರಣ್ಣ ಬೇಕಿದ್ರೆ ನೀವು ಬಿಜೆಪಿ ಸೇರಿಕೊಳ್ಳಿ – ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ – ಮಂಡ್ಯದ ಜನರನ್ನು ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದ ಸಚಿವ
ಮಂಡ್ಯ: ಮಾಜಿ ಪ್ರಧಾನಿಯವರ ಮಗನಾದ ಕುಮಾರಸ್ವಾಮಿ (KumaraSwamy) ಅವರು ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ.
ಶಾಸಕ ಗಣಿಗ ರವಿಕುಮಾರ್ (Ganiga Ravikumar) , ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ಜೊತೆಗೂಡಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಸಿಎಂ ಹೆಚ್‌ಡಿಕೆಗೆ ಮಂಡ್ಯ ಎಲ್ಲಾ ರೀತಿಯ ಶಕ್ತಿ ನೀಡಿದೆ. ಈ ಜಿಲ್ಲೆಯ ಜನರು ಅವರಿಗೆ ಸ್ವಂತ ಜಿಲ್ಲೆಗಿಂತ ಹೆಚ್ಚಿನ ಪ್ರೀತಿ, ಮಹತ್ವ ಕೊಟ್ಟಿದ್ದರು. ಆದರೂ ಅವರು ಇಲ್ಲಿನ ಜನರ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ನಮ್ಮ ಯುವಕರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ. ನನ್ನ ಮೇಲೆ ಅಥವಾ ಸ್ಥಳೀಯ ಶಾಸಕರ ಮೇಲೆ ದ್ವೇಷ ಮಾಡಿ. ಆದರೆ ಜಿಲ್ಲೆಯ ಜನತೆ ಮೇಲೆ ದ್ವೇಷ ಮಾಡಿ ಗಲಭೆ ಮಾಡಿಸಬೇಡಿ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ: ಕೆರಗೋಡು ಕೇಸ್ ತನಿಖೆಗೆ ಆಗ್ರಹಿಸಿ ಹೆಚ್‌ಡಿಕೆ ಸವಾಲು
ನಮ್ಮ ಜಿಲ್ಲೆಯ ಜನ ಸ್ವಾಭಿಮಾನ, ಗೌರವದಲ್ಲಿ ರಾಜ್ಯದಲ್ಲೇ ಮಾದರಿ ಆಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಬಂದು ಜನರಿಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಕುಮಾರಸ್ವಾಮಿ ಸಿಎಂ ಮಾಡಲು ಈ ಜಿಲ್ಲೆ ಜನರ ಆಶೀರ್ವಾದ ಕಾರಣ. ಬಾವುಟದ ವಿಚಾರದಲ್ಲಿ ಇವತ್ತು ಪ್ರತಿಭಟನೆ, ಪಾದಯಾತ್ರೆ ಮಾಡ್ತಿದ್ದಾರೆ. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಯಾಕೆ ಇಂತಹ ನಿರ್ಧಾರ ಮಾಡಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾಕೆ ಇಷ್ಟೊಂದು ಆಸಕ್ತಿ ಇಲ್ಲ. ಮಂಡ್ಯ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾನೂನು ವಿರುದ್ಧ ಯಾರೇ ನಡೆದುಕೊಂಡರು ಅವರ ವಿರುದ್ಧ ಕ್ರಮ: ಪರಮೇಶ್ವರ್
ಜಯಪ್ರಕಾಶ್ ನಾರಾಯಣ್, ಮಾಜಿ ಪ್ರಧಾನಿ ಹೆಚ್‌ಡಿಕೆ ಜಾತ್ಯತೀತವಾಗಿ ಜೆಡಿಎಸ್ ಪಕ್ಷ ಕಟ್ಟಿದ್ರು. ಆದರೆ ನೀವು ನಿನ್ನೆ ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ. ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಹೋರಾಟ ಮಾಡ್ತಿದ್ರಿ. ಆದ್ರೆ ಇದೀಗ ರಾಷ್ಟ್ರಧ್ವಜ ಹೋರಾಟ ಮಾಡ್ತಿದ್ದೀರಿ. ಅಂದರೆ ನಿಮ್ಮ ಉದ್ದೇಶ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸೋದಾ? ನಿಮ್ಮ ಹೋರಾಟ ರಾಷ್ಟ್ರ ದ್ವಜ ವಿರುದ್ಧವೇ? ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸುವ ಸಲುವಾಗಿಯೇ ಹೋರಾಟ ಮಾಡ್ತಿದ್ದೀರಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ದೇಶದ ಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಸರಾ ಆನೆ ಕ್ಯಾಪ್ಟನ್ ಅರ್ಜುನನ ವೀರಮರಣದ ಕೊನೇ ಕ್ಷಣದ ರೋಚಕ ವೀಡಿಯೋ ವೈರಲ್
ಕುಮಾರಸ್ವಾಮಿ ಒಂದು ವೇಳೆ ಅಧಿಕಾರದಲ್ಲಿದ್ರೆ ಏನು ಮಾಡ್ತಿದ್ರಿ? ರಾಷ್ಟ್ರಧ್ವಜ ತೆಗೆದು ಬೇರೆ ಧ್ವಜ ಹಾಕಲು ಅನುಮತಿ ಕೊಡ್ತಿದ್ರಾ? ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರೋ ನಿರ್ಧಾರ ಸರಿಯಾಗಿದೆ. ಆದರೆ ನಿನ್ನೆ ಪಾದಯಾತ್ರೆ ಮಾಡಿ ಜನರ ನೆಮ್ಮದಿ ಕೆಡಿಸಿದ್ದೀರಿ. ಇದನ್ನ ಈ ಜಿಲ್ಲೆಯ ಜನ ಕ್ಷಮಿಸಲ್ಲ. ಈ ಜಿಲ್ಲೆಯ ಜನರನ್ನ ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿ ಬಿಜೆಪಿಗೆ ಬಂದ್ರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತೆ: ರಮೇಶ್ ಕತ್ತಿ
ಕೆರಗೋಡು ಹನುಮಧ್ವಜ ವಿವಾದ ವಿಚಾರ ಕುರಿತು ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದು ಗ್ರಾಮಸ್ಥರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಷರತ್ತುಗಳಿಗೆ ಒಪ್ಪಿಕೊಂಡು ಧ್ವಜಸ್ತಂಭ ಹಾಕಿದ್ದಾರೆ. ಆದರೆ ಷರತ್ತುಗಳ ಮೀರಿ ಇವರು ಹನುಮಧ್ವಜ ಹಾಕಿದ್ದಾರೆ. ಅದಕ್ಕಾಗಿ ಹನುಮಧ್ವಜ ಇಳಿಸಿ ರಾಷ್ಟ್ರಧ್ವಜ ಹಾಕಲಾಗಿದೆ. ಆದರೆ ಇಲ್ಲಿ ಯಾಕೆ ಇಷ್ಟೊಂದು ಗೊಂದಲ ಮಾಡಿದ್ದಾರೋ ಗೊತ್ತಿಲ್ಲ. ಇಲ್ಲಿನ ಜನರ ನೆಮ್ಮದಿ ಹಾಳು ಮಾಡೋದಕ್ಕೆ ಹೆಚ್‌ಡಿಕೆ, ಆರ್.ಅಶೋಕ್, ಸಿ.ಟಿ.ರವಿ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ನಾಮಫಲಕ ವಿಚಾರ – ಎರಡು ಗುಂಪುಗಳ ನಡುವೆ ಘರ್ಷಣೆ
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹೆಚ್‌ಡಿಕೆ ಗಮನಹರಿಸಿಲ್ಲ, ಹೋರಾಟ ಮಾಡಿಲ್ಲ. ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಿನ್ನೆ ಬಂದು ರಾಷ್ಟ್ರಧ್ವಜ ಹಾಕಿರೋದಕ್ಕೆ ಹೋರಾಟ ಮಾಡಿದ್ದೀರಿ. ಬಿಜೆಪಿ ನಾಯಕರ ಜೊತೆ ಸೇರಿ ರಾಷ್ಟ್ರಧ್ವಜ ವಿರುದ್ಧ ಪ್ರತಿಭಟನೆ ನಡೆಸಿದ್ದೀರಿ. ಕುಮಾರಣ್ಣ ನಿಮಗೆ ತಾಳ್ಮೆ ಇರಲಿ. ಸೋತಿದ್ದೀನಿ ಅನ್ನುವ ನಿರಾಸೆಗೆ ಏನೇನೋ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಜಿಲ್ಲೆಯ ಜನ ನಿಮಗೆ ಹೆಚ್ಚಿನ ಪ್ರೀತಿ ಕೊಟ್ಟಿದ್ದಾರೆ. ಹೊರಗಿನಿಂದ ಬಂದು ಇಲ್ಲಿ ಅಧಿಕಾರ ಅನುಭವಿಸಿದ್ದೀರಿ. ಹಾಗಾಗಿ ಇಲ್ಲಿಯ ಜನಕ್ಕೆ ಅನ್ಯಾಯ ಮಾಡಬೇಡಿ. ಬೇಕಿದ್ರೆ ನೀವು ಬಿಜೆಪಿ ಸೇರ್ಪಡೆ ಆಗಿಬಿಡಿ. ಕೇಸರಿ ಬಟ್ಟೆ ಹಾಕಿಕೊಂಡು ಬಿಜೆಪಿ ಸೇರಿಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ: ಜೆಡಿಎಸ್ ವಾಗ್ದಾಳಿ
ಇವರ ಸುಳ್ಳು ಪ್ರಚೋದನೆಗೆ ಯಾರೂ ಕಿವಿಗೊಡಬೇಡಿ. ನಿಮ್ಮ ಕಷ್ಟ-ಸುಖಕ್ಕೆ ನಾವು ಜೊತೆಯಾಗಿ ಇರುತ್ತೀವಿ. ಮುಂದಿನ ನಾಲ್ಕು ವರ್ಷ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇವೆ. ಕಾವೇರಿ ವಿಚಾರ, ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸೂಕ್ತ ನಿರ್ಧಾರ ಮಾಡ್ತಿದ್ದೀವಿ. ಇಂತಹ ಅಪಪ್ರಚಾರ, ಪ್ರಚೋದನೆಗೆ ಕಿವಿಗೊಡಬೇಡಿ ಎಂದು ಮಂಡ್ಯದ ಜನತೆಗೆ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ED ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್ BMW ಕಾರು ವಶಕ್ಕೆ
ಮಂಡ್ಯ: ಶರ್ಟ್ ಬಟನ್ ಹಾಕಿ ಶಿಸ್ತಿನಿಂದ ನಡೆದುಕೊಳ್ಳಿ ಎಂದು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ (Congress) ಶಾಸಕರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಶಿಸ್ತಿನ ಪಾಠ ಹೇಳಿದರು.
ಮಾತುಕತೆ ವೇಳೆ ಮಂಡ್ಯ ಶಾಸಕ ರವಿಕುಮಾರ್ (Ganiga Ravikumar) ಶರ್ಟ್ ಬಟನ್ ಹಾಕಿಲ್ಲದಿರುವುದನ್ನು ಶ್ರೀಗಳು ಗಮನಿಸಿದರು. ಶರ್ಟ್ ಬಟನ್ ಹಾಕುವಂತೆ ಸೂಚಿಸಿ ಕಾಂಗ್ರೆಸ್ ಶಾಸಕನಿಗೆ ಶಿಸ್ತಿನ ಪಾಠ ಹೇಳಿದರು.
ನೀನಿಗ ಶಾಸಕ, ಹೀಗೆಲ್ಲ ಓಡಾಡಬಾರದು. ಮೊದಲು ಶರ್ಟ್ ಬಟನ್ ಹಾಕಿ ಎಂದು ತಿಳಿಸಿದರು. ಶ್ರೀಗಳ ಶಿಸ್ತಿನ ಪಾಠದ ಬೆನ್ನಲ್ಲೇ ಎಚ್ಚೆತ್ತು ಶಾಸಕ ಗಣಿಗ ರವಿಕುಮಾರ್ ಶರ್ಟ್ ಬಟನ್ ಹಾಕಿಕೊಂಡರು. ಇದನ್ನೂ ಓದಿ: ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಕೆ. ಹೆಚ್ ಮುನಿಯಪ್ಪ