Tag: ಗಣಿಗ ರವಿ

  • ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು – ರಶ್ಮಿಕಾ ವಿರುದ್ಧ ಕೆಂಡ ಕಾರಿದ ಗಣಿಗ ರವಿ

    ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು – ರಶ್ಮಿಕಾ ವಿರುದ್ಧ ಕೆಂಡ ಕಾರಿದ ಗಣಿಗ ರವಿ

    – ಚಲನಚಿತ್ರೋತ್ಸವಕ್ಕೆ ಆಹ್ವಾನಿಸಿದ್ರೆ, ಟೈಂ ಇಲ್ಲ ಬರಲ್ಲ ಅಂತಾರೆ ಎಂದು ಕಿಡಿ

    ಬೆಂಗಳೂರು: ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಿದ್ವಿ, ಆದರೆ ನನಗೆ ಟೈಂ ಇಲ್ಲ, ಬರಲ್ಲ ಅಂತಾರೆ ಎಂದು ಶಾಸಕ ಗಣಿಗ ರವಿಕುಮಾರ (Ganiga Ravi) ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು. ರಶ್ಮಿಕಾ ಮಂದಣ್ಣ (Rashmika Mandanna) ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಕೆಂಡಕಾರಿದರು.ಇದನ್ನೂ ಓದಿ: ಕಳೆದ 19 ತಿಂಗಳಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸಿಲ್ಲ – ರಾಜ್ಯಪಾಲರ ಭಾಷಣದ ಮೂಲಕ ವಿಪಕ್ಷಗಳಿಗೆ ತಿರುಗೇಟು

    ನಾನು ಸಿಎಂ- ಡಿಸಿಎಂಗೆ ಪತ್ರ ಬರೆಯುತ್ತೇನೆ. ಸಿನಿಮಾ ಸಬ್ಸಿಡಿಗಳನ್ನು ನಿಲ್ಲಿಸುವ ಬಗ್ಗೆ ಯೋಚಿಸಬೇಕು. ಆಂಧ್ರದ ನರಸಿಂಹಲು ಡಿಕೆಶಿ ವಿರುದ್ಧ ಮಾತನಾಡುತ್ತಾನೆ. ಆಂಧ್ರಪ್ರದೇಶದಿಂದ ಬಂದು ದುಡ್ಡು ದೋಚಿಕೊಂಡು ಹೋಗಿ, ನಮ್ಮ ಬಗ್ಗೆ ಮಾತನಾಡುತ್ತಾನೆ. ಮೊನ್ನೆ ಸಿಸಿಎಲ್ ಮ್ಯಾಚ್ ನಡೀತು ಅಲ್ವಾ, ಆಗ ನಿಲ್ಲಿಸಬೇಕಿತ್ತು. ಇದು ಲಾಸ್ಟ್ ವಾರ್ನಿಂಗ್. ಚಲನಚಿತ್ರ ಮಂಡಳಿಯವರು ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿಕೆಶಿ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಎಂಬ ಮೊಯ್ಲಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಇನ್ನೂ ಪೇಪರ್ ಓದಿಲ್ಲ, ಓದ್ಕೊಂಡು ಬಂದು ನಂತರ ಮಾತಾಡುವೆ ಎಂದು ಹೇಳಿದರು.ಇದನ್ನೂ ಓದಿ: ಭಾರತದ ಕನಸು ಭಗ್ನ: ಪ್ರಿಯಾಂಕಾ ಚೋಪ್ರಾ ‘ಅನುಜಾ’ ಚಿತ್ರಕ್ಕೆ ಸಿಗಲಿಲ್ಲ ಆಸ್ಕರ್ ಪ್ರಶಸ್ತಿ

  • 1,000 ಕೆಜಿ ಗಂಧದ ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅಂತ್ಯಸಂಸ್ಕಾರ: ಗಣಿಗ ರವಿ

    1,000 ಕೆಜಿ ಗಂಧದ ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅಂತ್ಯಸಂಸ್ಕಾರ: ಗಣಿಗ ರವಿ

    ಬೆಂಗಳೂರು: ಎಸ್‌ಎಂ ಕೃಷ್ಣ (SM Krishna) ಸಿಎಂ ಆಗಿದ್ದಾಗ ರೈತರು ಗಂಧದ ಮರವನ್ನು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರು. ಈ ಹಿನ್ನೆಲೆ 1,000 ಕೆಜಿ ಗಂಧದ (Sandalwood) ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅವರ ಅಂತಿಮ ಸಂಸ್ಕಾರ ನೇರವೆರಿಸಲಾಗುತ್ತದೆ ಎಂದು ಶಾಸಕ ಗಣಿಗ ರವಿ (Ganiga Ravi) ತಿಳಿಸಿದ್ದಾರೆ.

    ಎಸ್‌ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದ ನೂತನ ಹೆರಿಗೆ ಆಸ್ಪತ್ರೆಗೆ ಎಸ್‌ಎಂಕೆ ಹೆಸರು ಇಡಲಾಗುತ್ತದೆ. ಬಿ ಹಸೂರು ಕಾಲೋನಿಯಲ್ಲಿರುವ 100 ಹಾಸಿಗೆಯ ಆಸ್ಪತ್ರೆಗೆ ಎಸ್ ಎಂಕೆ ಹೆಸರು ಇಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಎಸ್‌ಎಂ ಕೃಷ್ಣ ಸಜ್ಜನಿಕೆ, ಸಭ್ಯತೆ, ಸದಾಚಾರದ ರಾಜಕಾರಣಿ: ಪೇಜಾವರ ಶ್ರೀ

    ಇಷ್ಟು ಮಾತ್ರವಲ್ಲದೇ ಮಂಡ್ಯದಲ್ಲಿ ಒಂದು ಪಾರ್ಕಿಗೆ ಎಸ್‌ಎಂ ಕೃಷ್ಣ ಅವರ ಹೆಸರು ಇಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

  • ಶಿಂಧೆ ರೀತಿ ತಾಯಿಗೆ ದ್ರೋಹ ಮಾಡೋರು ಕಾಂಗ್ರೆಸ್‌ನಲ್ಲಿ ಇಲ್ಲ: ಗಣಿಗ ರವಿಕುಮಾರ್ ತಿರುಗೇಟು

    ಶಿಂಧೆ ರೀತಿ ತಾಯಿಗೆ ದ್ರೋಹ ಮಾಡೋರು ಕಾಂಗ್ರೆಸ್‌ನಲ್ಲಿ ಇಲ್ಲ: ಗಣಿಗ ರವಿಕುಮಾರ್ ತಿರುಗೇಟು

    ಮಂಡ್ಯ: ಏಕನಾಥ ಶಿಂಧೆ (Eknath Shinde) ರೀತಿ ತಾಯಿಗೆ ದ್ರೋಹ ಮಾಡಿದ್ದಾರೆ. ಅನ್ನ ಕೊಟ್ಟ ಪಕ್ಷಕ್ಕೆ ಚೂರಿ ಹಾಕೋರು ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದು ಮಂಡ್ಯ ಕಾಂಗ್ರೆಸ್ (Congress) ಶಾಸಕ ಗಣಿಗ ರವಿಕುಮಾರ್ (Ganiga Ravikumar) ತಿರುಗೇಟು ನೀಡಿದ್ದಾರೆ.

    ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗುತ್ತೆ ಎಂಬ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಮಂಡ್ಯದಲ್ಲಿ (Mandya) ಮಾತನಾಡಿದ ರವಿಕುಮಾರ್, ಅವರ ರೀತಿ ನಮ್ಮಲ್ಲಿ ಯಾರೂ ಶಕುನಿ ಕೆಲಸ ಮಾಡಲ್ಲ. ನಮ್ಮದು 136+2 ಗಟ್ಟಿಯಾದ ಸರ್ಕಾರ. ಏಕನಾಥ ಶಿಂಧೆ ಅನ್ನ ಹಾಕಿದರಿಗೆ ವಿಷ ಹಾಕಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಐದು ವರ್ಷ ಸ್ಟ್ರಾಂಗ್ ಆಗಿ ನಡೆಯುತ್ತದೆ ಎಂದರು. ಇದನ್ನೂ ಓದಿ: ನಾನು ಶೀಘ್ರದಲ್ಲಿಯೇ ಮದುವೆ ಆಗಬೇಕಾಗಿದೆ: ರಾಹುಲ್‌ ಗಾಂಧಿ

    ಬಿಜೆಪಿಯ 25 ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಹಾಗೂ ಜೆಡಿಎಸ್‌ನ 13 ಶಾಸಕರು ಸಹ ಇದ್ದಾರೆ. ಮೊದಲು ಅವರ ಪಕ್ಷವನ್ನು ಉಳಿಸಿಕೊಳ್ಳಲಿ. ಬಿಜೆಪಿ-ಜೆಡಿಎಸ್ ನಾಯಕರು ಅವರ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳಲಿ. ಎಂಪಿ ಚುನಾವಣೆ ಮುಂಚೆಯೇ ಅವರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಎಲ್ಲರೂ ಸಂಪರ್ಕದಲ್ಲಿ ಇದ್ದಾರೆ, ಮಾತುಕತೆ ನಡೆಯುತ್ತಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಮಾತುಕತೆಗೆ ಹೇಳುತ್ತಿದ್ದಾರೆ ಎನ್ನುವ ಮೂಲಕ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಫಲಿತಾಂಶ ಬಂದ ನಂತರ ಶಿಂಧೆ ಮಾಜಿ ಆಗುತ್ತಾರೆ: ಎಂಬಿ ಪಾಟೀಲ್‌

    ಜಿಟಿ ದೇವೇಗೌಡ ಜೆಡಿಎಸ್ ಕಟ್ಟಪ್ಪ ಆಗಿದ್ದಾರೆ. ಅವರ ಹೆಸರು ಬೇಡ, ಬೇರೆ ಅವರು ನಮ್ಮೊಟ್ಟಿಗೆ ಇದ್ದಾರೆ. ಕೆಲವೇ ದಿನಗಳಲ್ಲಿ ಬಿಜೆಪಿ ವಿರೋಧ ಪಕ್ಷ ಸ್ಥಾನ ಕಳೆದುಕೊಳ್ಳುತ್ತದೆ. ವಿರೋಧ ಪಕ್ಷಕ್ಕೆ ಬೇಕಾದ ನಂಬರ್ ಅವರ ಬಳಿ ಇರಲ್ಲ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತೆ. ಬಿಜೆಪಿ ಯಾವಾಗಲೂ ಸ್ವತಂತ್ರವಾಗಿ ಗೆದ್ದು ಬಂದಿಲ್ಲ. ಬೇರೆ ಅವರನ್ನು ಒಡೆದು ಅಧಿಕಾರಕ್ಕೆ ಬಂದಿದ್ದಾರೆ. ಈಗ ಅದು ನಡೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತೆ: ಶಿಂಧೆಗೆ ಡಿಕೆಶಿ ಟಾಂಗ್

  • 50 ಅಲ್ಲ 100 ಕೋಟಿ ಕೊಟ್ರೂ ಕಾಂಗ್ರೆಸ್ ಶಾಸಕರು ಬಿಜೆಪಿ ಗಾಳಕ್ಕೆ ಬೀಳಲ್ಲ: ಗಣಿಗ ರವಿ

    50 ಅಲ್ಲ 100 ಕೋಟಿ ಕೊಟ್ರೂ ಕಾಂಗ್ರೆಸ್ ಶಾಸಕರು ಬಿಜೆಪಿ ಗಾಳಕ್ಕೆ ಬೀಳಲ್ಲ: ಗಣಿಗ ರವಿ

    ಮಂಡ್ಯ: ಸರ್ಕಾರ ಕೆಡವಲು ನಮ್ಮ ಶಾಸಕರ ಬಳಿ ಮಾತನಾಡಿ 50 ಕೋಟಿ ಆಫರ್ (Offer) ನೀಡಿ ಬಿಜೆಪಿಗೆ (BJP) ಬಂದರೆ ಮಂತ್ರಿಗಿರಿ ಕೊಡ್ತೀವಿ ಎಂದು ಹೇಳಿದ್ದಾರೆ. ಹಳೆ ಮೈಸೂರು ಭಾಗದ ಒಬ್ಬ ಎಂಎಲ್‌ಸಿ, ಬೆಳಗಾವಿಯ ಮಾಜಿ ಸಚಿವ ಸಂತೋಷ್, ಗೋಲ್ಡ್ ಫಿಂಚ್‌ನಲ್ಲಿ ನಮ್ಮ ಶಾಸಕರನ್ನು ಮೀಟ್ ಮಾಡಿದ್ದಾರೆ. ಎರಡು ದಿನದ ಬಳಿಕ ನಾನು ಸಿಎಂ, ಡಿಸಿಎಂ ಜೊತೆ ಮಾತನಾಡಿ ಮಾಧ್ಯಮದ ಮುಂದೆ ಬರುತ್ತೇನೆ ಎಂದು ಮಂಡ್ಯದಲ್ಲಿ (Mandya) ಶಾಸಕ ಗಣಿಗ ರವಿ (Ganiga Ravikumar) ಹೇಳಿದ್ದಾರೆ.

    ಶುಕ್ರವಾರ ಹೇಳಿದ್ದನ್ನು ಮತ್ತೆ ರಿಪೀಟ್ ಮಾಡಲು ನಂಗೆ ಇಷ್ಟ ಇಲ್ಲ. ಶಾಸಕರನ್ನು ಸೆಳೆಯಲು ಪ್ರಯತ್ನ ಪಡುತ್ತಿರೋದಕ್ಕೆ ಸಾಕ್ಷಿ ಇದೆ. ಮೂರು ಅಲ್ಲ ಇನ್ನೂ ದೊಡ್ಡ ದೊಡ್ಡ ನಾಯಕರು ಇದ್ದಾರೆ ಅಂತಾ ನಮ್ಮ ಡಿಸಿಎಂ ಹೇಳಿದ್ದಾರೆ. ನನ್ನ ಬಳಿ ಇರೋ ಮಾಹಿತಿಯನ್ನು ಸಿಎಂ, ಡಿಸಿಎಂಗೆ ಹೇಳುತ್ತೇನೆ. ಅವರ ಬಳಿ ಇರುವ ಮಾಹಿತಿ ತೆಗೆದುಕೊಂಡು ಮಾಧ್ಯಮದ ಮುಂದೆ ಬರುತ್ತೇನೆ. ಒಂದು ವೇಳೆ ನನಗೆ ಆಫರ್ ನೀಡಲು ಬಂದಿದ್ದರೆ ಲೈವ್ ಮಾಡಿ ತೋರಿಸುತ್ತಾ ಇದ್ದೆ. ಸಂತೋಷ್ ಪಕ್ಷಕ್ಕೆ ಕರೆದಿರೋದು ಬೇರೆ ವಿಚಾರ ಅಂತಾ ಈಗಾಗಲೇ ಹೇಳಿದ್ದಾರೆ. ಪಕ್ಷಕ್ಕೆ ಕರೆದಿರೋದು ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ದರೋಡೆ, ಅತ್ಯಾಚಾರ, ಜೈಲಿಗೆ ಹೋಗೋದ್ರಲ್ಲಿ ಮುಸ್ಲಿಮರೇ ನಂ.1- ವಿವಾದಕ್ಕೀಡಾದ ಅಜ್ಮಲ್ ಹೇಳಿಕೆ

    ಎರಡು ದಿನದ ಬಳಿಕ ನಾನು ಸಿಎಂ, ಡಿಸಿಎಂ ಜೊತೆ ಮಾತನಾಡಿ ಮಾಧ್ಯಮದ ಮುಂದೆ ಬರುತ್ತೇನೆ. ಎಲ್ಲಿ ಏನು ಮಾತನಾಡಿದ್ದಾರೆ ಎಂಬ ಸಾಕ್ಷಿಯನ್ನು ಅತೀ ಶ್ರೀಘ್ರದಲ್ಲಿ ಬಿಡುತ್ತೇವೆ. ಕರ್ನಾಟಕದ ಎಲ್ಲಾ ಕಡೆ ಬಲೆ ಹಾಕಲು ಹೊರಟಿದ್ದಾರೆ. ಸದ್ಯಕ್ಕೆ ಐದು ಜನಕ್ಕೆ ಆಫರ್ ಬಂದಿದೆ. ಒಬ್ಬರ ಮುಂದೆ ಕೂತು ಇನ್ನೊಬ್ಬರಿಗೆ ಸ್ಪೀಕರ್ ಹಾಕಿ ಮಾತನಾಡಿದ್ದಾರೆ. ಯಾರಿಗೆ ಆಫರ್ ಕೊಟ್ಟಿದ್ದಾರೋ ಆ ಶಾಸಕರ ಜೊತೆ ಮಾಧ್ಯಮದ ಮುಂದೆ ಬರುತ್ತೇವೆ. ಬಿಜೆಪಿ ಗಾಳಕ್ಕೆ 50 ಅಲ್ಲ 100 ಕೋಟಿ ಕೊಟ್ಟರೂ ಕಾಂಗ್ರೆಸ್ (Congress) ಶಾಸಕರು ಬೀಳಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಚಂದ್ರಗ್ರಹಣ ಎಫೆಕ್ಟ್ – ಮಂಗಳೂರಿನ ಕದ್ರಿ ದೇಗುಲದಲ್ಲಿ ಭಕ್ತಸಾಗರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]