Tag: ಗಣರಾಜ್ಯೋತ್ಸವ

  • ದೆಹಲಿಯ ಕರ್ತವ್ಯ ಪಥದಲ್ಲಿ NCC ಪಥಸಂಚಲನದ ನೇತೃತ್ವ ವಹಿಸಿದ ಕೊಡಗಿನ ಪುಣ್ಯಾ ಪೊನ್ನಮ್ಮ

    ದೆಹಲಿಯ ಕರ್ತವ್ಯ ಪಥದಲ್ಲಿ NCC ಪಥಸಂಚಲನದ ನೇತೃತ್ವ ವಹಿಸಿದ ಕೊಡಗಿನ ಪುಣ್ಯಾ ಪೊನ್ನಮ್ಮ

    – ಪರೇಡ್‌ನಲ್ಲಿ ‘ನಾರಿ ಶಕ್ತಿ’

    ನವದೆಹಲಿ: 75ನೇ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನದಲ್ಲಿ ‘ನಾರಿ ಶಕ್ತಿ’ ಮಿಂಚಿತು. ಕರ್ನಾಟಕದ ನಾರಿಯರು ಪಾಲ್ಗೊಂಡು ಗಮನ ಸೆಳೆದಿದ್ದಾರೆ.

    ಹೌದು, ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ NCC ಪಥಸಂಚಲನದ ನೇತೃತ್ವವನ್ನು ಕೊಡಗಿನ ಪುಣ್ಯಾ ಪೊನ್ನಮ್ಮ (Punnya Ponnamma) ವಹಿಸಿದ್ದರು. ಇದು ನಾಡಿಗೆ ಹೆಮ್ಮೆ ಎನಿಸಿದೆ. ಇದನ್ನೂ ಓದಿ: 75th Republic Day: M-29 ಯುದ್ಧ ವಿಮಾನ ಹಾರಾಟ ನಡೆಸಿ ಮಿಂಚಿದ ಕೊಡಗಿನ ಪುಣ್ಯಾ ನಂಜಪ್ಪ

    ಕರ್ತವ್ಯ ಪಥದಲ್ಲಿ ನಡೆದ 90 ನಿಮಿಷಗಳ ಪರೇಡ್‌ನಲ್ಲಿ ದೇಶದ ನಾರಿ ಶಕ್ತಿ ಅನಾವರಣಗೊಂಡಿತು. ದೇಶದ ಮೂರು ಸೇನೆಗಳ ಮಹಿಳಾ ತುಕಡಿಗಳು ಮೊಟ್ಟ ಮೊದಲ ಬಾರಿಗೆ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು.

    ಪರೇಡ್‌ ಸಂದರ್ಭದಲ್ಲೇ 15 ಮಹಿಳಾ ಪೈಲೆಟ್‌ಗಳನ್ನು ಒಳಗೊಂಡ ಭಾರತೀಯ ವಾಯುಪಡೆಯ ವಿಮಾನಗಳು ಫ್ಲೈ ಪಾಸ್ಟ್‌ ನಡೆಸಿ ಗಮನ ಸೆಳೆದವು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್‌ ಗರ್ಲ್‌ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ

  • 75th Republic Day: M-29 ಯುದ್ಧ ವಿಮಾನ ಹಾರಾಟ ನಡೆಸಿ ಮಿಂಚಿದ ಕೊಡಗಿನ ಪುಣ್ಯಾ ನಂಜಪ್ಪ

    75th Republic Day: M-29 ಯುದ್ಧ ವಿಮಾನ ಹಾರಾಟ ನಡೆಸಿ ಮಿಂಚಿದ ಕೊಡಗಿನ ಪುಣ್ಯಾ ನಂಜಪ್ಪ

    ನವದೆಹಲಿ: 75ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ತವ್ಯ ಪಥದಲ್ಲಿ ಶುಕ್ರವಾರ ನಡೆದ ಪಥಸಂಚಲನದ ವೇಳೆ ಆಕಾಶದಲ್ಲಿ ಯುದ್ಧವಿಮಾನಗಳು ಹಾರಾಟ ನಡೆಸಿ ಭಾರತದ ವಾಯುಸೇನೆ ಶಕ್ತಿ ಪ್ರದರ್ಶಿಸಿದವು. ಐಎಎಫ್‌ನ (IAF) ಮಹಿಳಾ ಪೈಲಟ್‌ಗಳು ಫ್ಲೈಪಾಸ್ಟ್‌ ಸಮಯದಲ್ಲಿ ಯುದ್ಧವಿಮಾನಗಳ ಹಾರಾಟ ನಡೆಸಿ ತಾವೂ ಸಮರ್ಥರಿದ್ದೇವೆ ಎಂಬುದನ್ನು ಸಾಬೀತುಪಡಿಸಿದರು. ಪರಾಕ್ರಮ, ಕೌಶಲದ ಮಹಿಳಾ ಪೈಲಟ್‌ಗಳ ಪೈಕಿ ಮೈಸೂರಿನ ಅಸಾಧಾರಣ ಪ್ರತಿಭೆ, ಕೊಡಗಿನ ಕೊಲುವಂಡ ಪುಣ್ಯಾ ನಂಜಪ್ಪ (Punya Nanjappa) ಯುದ್ಧ ವಿಮಾನ ಯಶಸ್ವಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ.

    ಪುಣ್ಯಾ ನಂಜಪ್ಪ, MiG-29 ಫೈಟರ್ ಜೆಟ್ ಹಾರಾಟ ನಡೆಸಿ ವಾಯುಪಡೆಯ ನಾರಿ ಶಕ್ತಿ ಪ್ರದರ್ಶಿಸಿದರು. ವಾಯುಪಡೆಯ 46 ವಿಮಾನಗಳು ಆಕಾಶದಲ್ಲಿ ವಿವಿಧ ಕಸರತ್ತು ಪ್ರದರ್ಶಿಸಿದವು. 29 ಯುದ್ಧ ವಿಮಾನಗಳು, 7 ಸರಕು ಸಾಗಣೆ ವಿಮಾನಗಳು, 9 ಹೆಲಿಕಾಪ್ಟರ್‌ಗಳು ಕೂಡ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಒಂದಿಷ್ಟು ಝಲಕ್‌ಗಳು..

    ದೇಶೀಯವಾಗಿ ತಯಾರಿಸಿರುವ ಅತ್ಯಾಧುನಿಕ ಯುದ್ಧವಿಮಾನ ‘ತೇಜಸ್’‌ ಪ್ರದರ್ಶನ ಪಥಸಂಚಲನದ ಮೆರುಗು ಹೆಚ್ಚಿಸಿತ್ತು.

    ಯಾರು ಈ ಪುಣ್ಯಾ ನಂಜಪ್ಪ?
    ಪುಣ್ಯ ಅವರು ವಿಜಯನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೋಲುವಂಡ ಅನುರಾಧಾ ನಂಜಪ್ಪ ಮತ್ತು ಪ್ರಭಾ ಥಿಯೇಟರ್‌ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ ದಿವಂಗತ ಕೋಳುವಂಡ ಪಿ.ಬಾಲ ನಂಜಪ್ಪ ಅವರ ಪುತ್ರಿ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚಂಬೆಬೆಳ್ಳೂರಿನವರು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್‌ ಗರ್ಲ್‌ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ

    ವಿಜಯನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ, ಸರಸ್ವತಿಪುರಂನ ವಿಜಯ ವಿಟ್ಲ ಪಿಯು ಕಾಲೇಜಿನಲ್ಲಿ ಪಿಯುಸಿ ಮತ್ತು ಮೈಸೂರಿನ NIE ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪುಣ್ಯಾ ಅವರು ಫ್ಲೈಯಿಂಗ್ ಬ್ರಾಂಚ್‌ನಲ್ಲಿ ಅಧಿಕಾರಿಗಳ ನೇಮಕಾತಿಗಾಗಿ ನಡೆಸಲಾಗಿದ್ದ ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (AFCAT) ಪರೀಕ್ಷೆ ಬರೆದರು. 1,000 ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್‌ನಲ್ಲಿ ಪುಣ್ಯಾ ನಂಜಪ್ಪ 135 ನೇ ಸ್ಥಾನ ಪಡೆದರು.

    ಮೈಸೂರಿನಲ್ಲಿ ನಡೆದ ಐಎಎಫ್ ಸೇವಾ ಆಯ್ಕೆ ಮಂಡಳಿ ಪರೀಕ್ಷೆಯಲ್ಲೂ ಆಯ್ಕೆಯಾದರು. 2018 ರಲ್ಲಿ AFCAT ನಲ್ಲಿ ಉತ್ತೀರ್ಣರಾದ ಅವರು ನಂತರ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಟ್ರೈನಿ ಪೈಲಟ್ ಆಗಿ ಆಯ್ಕೆಯಾದರು. ನಂತರ ತೆಲಂಗಾಣದ ದುಂಡಿಗಲ್‌ನಲ್ಲಿರುವ ಇಂಡಿಯನ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆದಿರುವ ಪುಣ್ಯಾ ನಂಜಪ್ಪ ಅವರು ಈಗ IAF ನಲ್ಲಿ ಹೆಮ್ಮೆಯ ಯುದ್ಧವಿಮಾನ ಪೈಲಟ್ ಆಗಿದ್ದಾರೆ. ಗಣರಾಜ್ಯೋತ್ಸವ ಪರೇಡ್‌ ಸಂದರ್ಭದಲ್ಲಿ MiG-29 ಫೈಟರ್ ಜೆಟ್ ಅನ್ನು ಯಶಸ್ವಿಯಾಗಿ ಹಾರಿಸಿ ನಾಡಿಗೆ ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: ಕರ್ತವ್ಯ ಪಥದ ಪರೇಡ್‍ನಲ್ಲಿ ಮಿಂಚಿದ ಬಾಲಕರಾಮ!

  • ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

    ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

    – ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ಅಂತಾ ಶಿಕ್ಷಕರಿಗೆ ತರಾಟೆ

    ಹಾಸನ: ಅರಸೀಕೆರೆಯ (Arasikere) ಶಾಲೆಯೊಂದರಲ್ಲಿ (School) ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಗರಂ ಆಗಿದ್ದಾರೆ.

    ಗಣರಾಜ್ಯೋತ್ಸವ (Republic Day) ಅಂಗವಾಗಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಶಾಲಾ ಮಕ್ಕಳು ನೃತ್ಯ ಪ್ರದರ್ಶನವೊಂದರಲ್ಲಿ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನು ಪ್ರದರ್ಶಿಸಿದ್ದರು. ಇದರಿಂದ ಶಾಸಕ ಶಿವಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಹಾಗೂ ಸಾರ್ವಜನಿಕರು ಕೆಂಡಾಮಂಡಲವಾಗಿದ್ದು, ಶಾಲಾ ಶಿಕ್ಷಕಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಮೊದಲ ಪಟ್ಟಿ ರಿಲೀಸ್

    ಶಾಲಾ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ, ಕಮಲ ಯಾವ ಪಕ್ಷದ ಚಿಹ್ನೆ? ಯಾವ ಸೀಮೆ ನಾಗರಿಕರು ನೀವು? ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ಎಂದು ಕೋಪಗೊಂಡಿದ್ದಾರೆ. ಈ ವೇಳೆ ಶಾಲಾ ಶಿಕ್ಷಕಿ, ಕಮಲ ಒಂದು ಪಕ್ಷದ ಚಿಹ್ನೆ ಹೇಗೆ ಆಗುತ್ತೆ ಸರ್? ನೀವು ಹೀಗೆ ಮಾತನಾಡಿದರೆ ಸರಿ ಹೋಗಲ್ಲ ಸರ್ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 2024ರಲ್ಲಿ ಅಣು ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ: ಕೋಡಿಮಠ ಸ್ವಾಮೀಜಿ ಭವಿಷ್ಯ

    ಇದರಿಂದ ಸಿಟ್ಟುಗೊಂಡ ಶಾಸಕರು, ಏನು ಸರಿ ಹೋಗಲ್ಲ? ನಿಮಗೆ ನೋಟಿಸ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ತಹಸೀಲ್ದಾರ್ ಸಂತೋಷ್ ಮಧ್ಯಪ್ರವೇಶಿಸಿ ಒಂದು ಧರ್ಮ, ಒಂದು ಪಕ್ಷದ ಚಿಹ್ನೆ ಹೈಲೆಟ್ ಮಾಡಬಾರದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ಲಕ್ಷ್ಮಿ, ನಿನ್ನೆ-ಮೊನ್ನೆ ನೃತ್ಯ ನೋಡಿದವರು ನೋಡಿದರೆ ಅದನ್ನು ಬಳಸುತ್ತಿರಲಿಲ್ಲ. ಸಭೆಯಲ್ಲಿ ಸೂಚನೆ ನೀಡಿದ್ದರೆ ಚಿಹ್ನೆ ಬಳಸುತ್ತಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಜಗದೀಶ್ ಶೆಟ್ಟರ್

    ಇದಕ್ಕೆ ಪ್ರತ್ಯುತ್ತರ ಕೊಟ್ಟ ಶಾಸಕ ಶಿವಲಿಂಗೇಗೌಡ, ಇವರು ಎಂತದ್ದಾನ್ನಾದರೂ ತೋರಿಸಿಕೊಳ್ಳಲಿ ನನಗೇನು? ಅಲ್ಲಿ ಯಾವನೋ ಕುಳಿತಿರುತ್ತಾನೆ. ಬಿಜೆಪಿ ಚಿಹ್ನೆ ತೋರಿಸುತ್ತಿದ್ದಾರೆ ಎಂದು ಕಲ್ಲು ತೂರಿದರೆ ಮುಂದೆ ಆಗುವುದನ್ನು ನೋಡಬೇಕು. ಇದು ರಾಷ್ಟ್ರೀಯ ಹಬ್ಬ ಎಂದು ಸಿಡಿಮಿಡಿಗೊಂಡಿದ್ದಾರೆ. ಅತ್ಯುತ್ತಮ ನೃತ್ಯಕ್ಕಾಗಿ ಶಾಲಾ ಮಕ್ಕಳು ಮೊದಲ ಬಹುಮಾನ ಪಡೆದಿದ್ದರು. ಶಾಸಕರ ಆಕ್ಷೇಪದ ನಂತರ ತಾಲೂಕು ಆಡಳಿತ ನಾಲ್ಕನೇ ಬಹುಮಾನ ನೀಡಿದೆ. ಇದನ್ನೂ ಓದಿ: ಗಣೇಶ್ ಭಟ್ ಕೆತ್ತಿರೋ ವಿಗ್ರಹವನ್ನು ರಾಮದೇವರ ಬೆಟ್ಟಕ್ಕೆ ನೀಡುವಂತೆ ಇಕ್ಬಾಲ್ ಹುಸೇನ್ ಪತ್ರ

  • ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

    ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

    ನವದೆಹಲಿ: ಭಾರತದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು (Republic Day) ಆಚರಿಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನ ಅಳವಡಿಸಿಕೊಂಡ ದಿನವನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. 75ನೇ ವರ್ಷದ ಆಚರಣೆಯನ್ನು ಮಹಿಳಾ ಕೇಂದ್ರಿತವಾಗಿ ರೂಪಿಸಲಾಗಿದ್ದು, ಈ ಬಾರಿಯ ಆಚರಣೆಯೂ ಹಲವು ವಿಶೇಷತೆಗಳಿಂದ ಕೂಡಿದೆ.

    ನಾರಿ ಶಕ್ತಿಯೇ (Nari Shakti) ಮೇಲುಗೈ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್ ನಡೆಸಿಕೊಟ್ಟರು. ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನು ಮುನ್ನಡೆಸಿದರು. ಇದರೊಂದಿಗೆ 148 NCC ಬಾಲಕಿಯರು, 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸಿ ದೇಶದ ಸಾಂಸ್ಕೃತಿಕತೆಯನ್ನು ಕಣ್ಣಿಗೆ ಕಟ್ಟಿಕೊಡುವಂತೆ ಮಾಡಿದರು. ಇನ್ನೂ ಆತ್ಮನಿರ್ಭರ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಸ್ತಬ್ಧಚಿತ್ರ ʻನಾರಿ ಶಕ್ತಿʼಗೆ ಹೆಸರುವಾಸಿಯಾಗಿತ್ತು. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಅಂತರಿಕ್ಷದಲ್ಲಿ ಮಹಿಳೆಯರ ಸಾಧನೆಗಳನ್ನು ತೋರಿಸಲಾಯಿತು. ಜೊತೆಗೆ ʻವಂದೇ ಭಾರತ್‌ʼ ನಾರಿಶಕ್ತಿ ತಂಡದ 1,500 ಮಹಿಳೆಯರು ಏಕಕಾಲಕ್ಕೆ ನೃತ್ಯಪ್ರದರ್ಶಿಸಿದರು.

    ನಂತರ 262 ಫೀಲ್ಡ್ ರೆಜಿಮೆಂಟ್‌ನ ಲೆಫ್ಟಿನೆಂಟ್ ಪ್ರಿಯಾಂಕಾ ಸೆವ್ದಾ ನೇತೃತ್ವದಲ್ಲಿ 1890 ರಾಕೆಟ್ ರೆಜಿಮೆಂಟ್‌ನಿಂದ ಫಿರಂಗಿ ರೆಜಿಮೆಂಟ್‌ನ ಪಿನಾಕಾ ತುಕಡಿ ಹಾಗೂ ಜೊತೆಗೆ 42 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಲೆಫ್ಟಿನೆಂಟ್ ಫಯಾಜ್ ಸಿಂಗ್ ಧಿಲ್ಲೋನ್ ನೇತೃತ್ವದ ಟ್ಯಾಂಕ್ T-90 ಭೀಷ್ಮಾದ ತುಕಡಿ ಆಕರ್ಷಕ ಪಥಸಂಚಲನ ನಡೆಸಿಕೊಟ್ಟಿತು. ಇದನ್ನೂ ಓದಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್

    ವಿಶೇಷತೆಗಳೇನು?
    ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ಕೆಲಸ ನಡೆಯಿತು. ಪಥ ಸಂಚಲನದಲ್ಲಿ ಪಿನಾಕಾ ರಾಕೆಟ್‌ ಲಾಂಚರ್‌, ಸ್ವಾತಿ – ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡರ್‌ ಸಿಸ್ಟಮ್‌, ಸರ್ವತ್ರ ಮೊಬೈಲ್‌ ಬ್ರಿಡ್ಜಿಂಗ್‌ ಸಿಸ್ಟಮ್‌, ಡ್ರೋನ್‌ ಜಾಮರ್‌ ಸಿಸ್ಟಮ್‌, ಪ್ರಚಂಡ, ರುದ್ರ‌ ಹೆಲಿಕಾಪ್ಟರ್‌, ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಿಆರ್‌ಪಿಎಫ್‌ ಬ್ಯಾಂಡ್‌ ಪಥಸಂಚಲನ, ಬಿಎಸ್‌ಎಫ್‌ ಒಂಟೆ ರೆಜಿಮೆಂಟ್‌ ಪರೇಡ್‌ ನಡೆಸಿಕೊಡಲಾಯಿತು. ಜೊತೆಗೆ ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‌ನಲ್ಲಿ ಸೇನಾ ಸಾಮರ್ಥ್ಯ ಪ್ರದರ್ಶಿಸಿ ಗಮನ ಸೆಳೆದವು.

    ಸ್ತಬ್ಧ ಚಿತ್ರಗಳ ಪ್ರದರ್ಶನ:
    16 ರಾಜ್ಯಗಳು ಮತ್ತು ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳು ತಯಾರಿಸಿರುವ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಇದರೊಂದಿಗೆ ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳು ಜಾನಪದ ನೃತ್ಯವನ್ನು ಪ್ರದರ್ಶನ ನಡೆಸಿಕೊಟ್ಟವು. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

  • Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

    Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

    ನವದೆಹಲಿ: 75ನೇ ಗಣರಾಜ್ಯೋತ್ಸವ (75th Republic Day) ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಮಡಿದ ವೀರರಿಗೆ ಗೌರವ ಸಲ್ಲಿಸಿದರು.

    ಇಂದು ಬೆಳಗ್ಗೆ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನು ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು. ಇದನ್ನೂ ಓದಿ: 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ

    ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಅವರ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಗಮಿಸಿದ ವೇಳೆ ರಾಷ್ಟ್ರಪತಿಗಳ ಅಂಗರಕ್ಷಕರು ಬೆಂಗಾವಲು ನೀಡಿದ್ದಾರೆ. ರಾಷ್ಟ್ರಪತಿಗಳ ಅಂಗರಕ್ಷಕ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ.  ಅಂಗರಕ್ಷಕ್ 1773 ರಲ್ಲಿ ಸ್ಥಾಪನೆಯಾದಾಗಿನಿಂದ 250 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ. ಇನ್ನು ಸುಮಾರು 40 ವರ್ಷಗಳ ಬಳಿಕ‌ ಈ ಬಾರಿ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿಯವರು ಸಾರೋಟಿನಲ್ಲಿ ಬಂದಿಳಿದಿದ್ದಾರೆ.

    ದೇಶೀಯ ಗನ್ ಸಿಸ್ಟಮ್ 105-ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳೊಂದಿಗೆ ನೀಡಲಾದ 21-ಗನ್ ಸೆಲ್ಯೂಟ್‌ನೊಂದಿಗೆ ರಾಷ್ಟ್ರಗೀತೆಯ ನಂತರ ಧ್ವಜಾರೋಹಣ ಮಾಡಲಾಯಿತು. 105 ಹೆಲಿಕಾಪ್ಟರ್ ಘಟಕದ ನಾಲ್ಕು Mi-17 IV ಹೆಲಿಕಾಪ್ಟರ್‌ಗಳು ಕರ್ತವ್ಯ ಪಥದಲ್ಲಿರುವ ಪ್ರೇಕ್ಷಕರ ಮೇಲೆ ಹೂವಿನ ಸುರಿಮಳೆ ಸುರಿಸಿದವು. ಬಳಿಕ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ರೀತಿಯ ತಾಳವಾದ್ಯಗಳನ್ನು ನುಡಿಸುವ ‘ಆವಾಹನ್’ ಬ್ಯಾಂಡ್ ಪ್ರದರ್ಶನ ನೀಡಿದ್ದು, ಇದು ನಾರಿ ಶಕ್ತಿಯನ್ನು ಸಂಕೇತಿಸಿದೆ.

  • 75th Republic Day: ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ – ಡಿಕೆಶಿ

    75th Republic Day: ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ – ಡಿಕೆಶಿ

    – ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಧ್ವಜಾರೋಹಣ

    ಬೆಂಗಳೂರು: ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿಂದು 75ನೇ ಗಣರಾಜ್ಯೋತ್ಸವದ (Republic Day) ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.

    ಧ್ವಜಾರೋಹಣದ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್‌ (DK Sivakumar) ಅವರು, ಮೊದಲ ಬಾರಿಗೆ ಎಎಸಿಸಿ ಅಧ್ಯಕ್ಷರು ಬೆಂಗಳೂರಿನ ಕಚೇರಿಗೆ ಬಂದು ಧ್ವಜಾರೋಹಣ ನೆರವೇರಿಸಿದ್ದಾರೆ, ಇದು ಇತಿಹಾಸ. ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ

    ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅದು ಎಲ್ಲ ವರ್ಗದ ಜನರೂ ಅಧಿಕಾರಕ್ಕೆ ಬಂದಂತೆ, ಸಂವಿಧಾನವನ್ನ ಸ್ವೀಕಾರ ಮಾಡಿದ ಪವಿತ್ರವಾದ ದಿನವಿದು. ಸಂವಿಧಾನ ಉಳಿದರೆ, ಭಾರತ ಉಳಿಸಿದಂತೆ, ಅದಕ್ಕಾಗಿ ನಮ್ಮ ರಾಷ್ಟ್ರೀಯ ನಾಯಕರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಾವೆಲ್ಲ ಕೆಲಸ ಮಾಡೋಣ ಎಂದು ಕರೆ ನೀಡಿದರು. ಇದನ್ನೂ ಓದಿ: Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

    ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಇದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಯಾವತ್ತೂ ಅಧಿಕಾರದ ಬಗ್ಗೆ ಯೋಚಿಸದೇ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಅವಿರತವಾಗಿ ಶ್ರಮಿಸಿದೆ. ನಮಗೆಲ್ಲಾ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವೇ ಈ ದೇಶದ ಜೀವಾಳ. ಅದರಂತೆ ಸಂವಿಧಾನದ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮ ಶ್ರೇಷ್ಠ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ನಿಷ್ಠೆಯಿಂದ ಪಾಲಿಸೋಣ ಎಂದು ತಿಳಿಸಿದರು.

  • 75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ

    75ನೇ ಗಣರಾಜ್ಯೋತ್ಸವದ ಸಂಭ್ರಮ – ಕರ್ತವ್ಯ ಪಥದಲ್ಲಿ ಗಮನ ಸೆಳೆಯಲಿದೆ ʻನಾರಿ ಶಕ್ತಿʼ

    ನವದೆಹಲಿ: 75ನೇ ಗಣರಾಜ್ಯೋತ್ಸವದ (Republic Day) ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ದೆಹಲಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೋಂದಿಗೆ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ 21 ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸೂಚಿಸಲಾಯಿತು.

    ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಇದಾದ ಬಳಿಕ ಬೆಳಗ್ಗೆ 10.30ರಿಂದ ವಿಜಯ್‌ ಚೌಕ್‌ನಿಂದ ಕರ್ತವ್ಯ ಪಥದವರೆಗೆ ಪರೇಡ್‌ ನಡೆಯಲಿದೆ. ದೇಶದ ಹಲವು ರಾಜ್ಯಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಕೂಡ ನಡೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಹ ಪರೇಡ್‌ ಮೈದಾನಕ್ಕೆ ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಪರೇಡ್‌ ಆರಂಭವಾಗಲಿದೆ.

    ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪರೇಡ್‌ ವೀಕ್ಷಣೆಗೆ 77 ಸಾವಿರ ಜನರಿಗೆ ಅವಕಾಶ ನೀಡಲಾಗಿದೆ. ಪರೇಡ್‌ ವೀಕ್ಷಿಸುವ 70 ಸಾವಿರಕ್ಕೂ ಹೆಚ್ಚು ಜನರಲ್ಲಿ 13, ಸಾವಿರ ಅತಿಥಿಗಳೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ವೈಮಾನಿಕ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಹವಾಮಾನ ಅಡೆತಡೆಯಾಗಬಾರದು ಎಂಬ ಕಾರಣಕ್ಕೆ 10:30ರ ವೇಳೆಗೆ ಪರೇಡ್‌ ಹಮ್ಮಿಕೊಳ್ಳಲಾಗಿದೆ. ಶಿಸ್ತು, ಸಮಯ, ಪರಿಪಾಲನೆಯೊಂದಿಗೆ ನಡೆಯುವ ಈ ಪರೇಡ್‌ ಸರಿಸುಮಾರು 90 ನಿಮಿಷಗಳ ವರೆಗೆ ನಡೆಯಲಿದೆ. ಇದನ್ನೂ ಓದಿ: Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

    ನಾರಿ ಶಕ್ತಿಯೇ ವಿಶೇಷ:
    ಈ ಬಾರಿ ವಿಶೇಷವಾಗಿ ಕಂಡುಬರುತ್ತಿರುವುದು ʻನಾರಿ ಶಕ್ತಿ ಪ್ರದರ್ಶನʼ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್‌ ನಡೆಸಿಕೊಡಲಿದ್ದಾರೆ. ಐಪಿಎಸ್‌ ಅಧಿಕಾರಿ ಶ್ವೇತಾ ಕೆ. ಸುಗತನ್‌ ಅವರು ಈ ಪಡೆಯನ್ನು ಮುನ್ನಡೆಸಲಿದ್ದಾರೆ.

    ಜೊತೆಗೆ 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುವ ಮೆರೆವಣಿಗೆಯನ್ನು ನಡೆಸಿಕೊಡಲಿದ್ದಾರೆ. ಸಂಖ್, ನಾದಸ್ವರ, ನಗದ ಇತ್ಯಾದಿ ಸಂಗೀತದೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಇದರೊಂದಿಗೆ ಭಾರತೀಯ ವಾಯುಪಡೆಯು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‌ನಲ್ಲಿ ಗಮನ ಸೆಳೆಯಲಿವೆ. ಇದನ್ನೂ ಓದಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

  • Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

    Republic Day: ನುಡಿದಂತೆ ನಡೆದಿರುವ ಸರ್ಕಾರ 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ: ಗೆಹ್ಲೋಟ್

    ಬೆಂಗಳೂರು: ಸರ್ಕಾರ ನುಡಿದಂತೆ ನಡೆದಿದೆ. 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ. ಶಕ್ತಿ ಯೋಜನೆಯಲ್ಲಿ 134.34 ಕೋಟಿ ಜನ ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ 2900.12 ಕೋಟಿ ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆ ಅಡಿ 1.50 ಕೋಟಿ ಗ್ರಾಹಕರು ಯೋಜನೆ ಫಲ ಪಡೆಯುತ್ತಿದ್ದಾರೆ. 700 ಕೋಟಿ ಗೃಹಜ್ಯೋತಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಹೇಳಿದ್ದಾರೆ.

    ಗಣರಾಜ್ಯೋತ್ಸವ ಅಂಗವಾಗಿ ನಗರ ಮಾಣಿಕ್ ಶಾ ಗ್ರೌಂಡ್‍ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮೊದಲು ನಾಡಿನ ಜನರಿಗೆ ಗಣರಾಜ್ಯೋತ್ಸವ ಶುಭಾಶಯ ಕೋರಿದರು. ರಾಜ್ಯದಲ್ಲಿ 223 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. ಬರ ಪರಿಹಾರಕ್ಕಾಗಿ ಎನ್‍ಡಿಆರ್ ಎಫ್‍ಗೆ ಅನುದಾನ ಕೋರಲಾಗಿದೆ. ರಾಜ್ಯ ಸರ್ಕಾರ ಬರ ಪರಿಹಾರವಾಗಿ ರೈತರಿಗೆ 2 ಸಾವಿರ ಮಧ್ಯಂತರ ಪರಿಹಾರ ನೀಡಲಾಗಿದೆ ಎಂದರು.

    262 ಹೊಸ ಅಂಬುಲೆನ್ಸ್ ಖರೀದಿ: ಕುಡಿಯುವ ನೀರು, ಮೇವು, ಪರಿಹಾರ ಕ್ರಮಗಳಿಗಾಗಿ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಬೆಳೆ ಸಮೀಕ್ಷೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ. ರೈತ ಸಿರಿ ಯೋಜನೆ ಅಡಿ ಸಿರಿಧಾನ್ಯ ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ದಂತೆ ಗರಿಷ್ಠ2 ಹೆಕ್ಟೇರ್ ಗೆ ಪ್ರೋತ್ಸಾಹ ಧನ ನೀಡಲಾಗ್ತಿದೆ. ಕರ್ನಾಟಕ ಅನೀಮಿಯಾ ಮುಕ್ತ ರಾಜ್ಯ ಮಾಡಲು 185.74 ಕೋಟಿ ವೆಚ್ಚ ಮಾಡಲಾಗ್ತಿದೆ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ. ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 108 ಆರೋಗ್ಯ ಕವಚ ಯೋಜನೆ ಅಡಿ ಹೊಸದಾಗಿ 262 ಅಂಬುಲೆನ್ಸ್ ಖರೀದಿ ಮಾಡಲಾಗ್ತಿದೆ ಎಂದು ಹೇಳಿದರು. ಇದನ್ನೂ ಓದಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ಸುರಂಗ ರಸ್ತೆ ನಿರ್ಮಿಸಲು ಯೋಜನೆ: ಬೆಂಗಳೂರು ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು, ಸಾರ್ವಜನಿಕರ ಧ್ವನಿ ಸರ್ಕಾರದ ಧ್ವನಿ ಎಂಬ ಮನೋಭಾವದಿಂದ ರೂಪಿಸಲಾಗಿದೆ. 8 ಪ್ರಮುಖ ವಿಷಯಗಳ ಕುರಿತು ತಜ್ಞರು, ಸಾರ್ವಜನಿಕರಿಂದ ಸಲಹೆ ಪಡೆಯಲಾಗಿದೆ. 70 ಸಾವಿರ ಸಲಹೆ ಬಂದಿದ್ದು ಸಮಿತಿ ಪರಿಶೀಲನೆ ಮಾಡಿ ಕ್ರಮ ಮಾಡಲಾಗುತ್ತದೆ. ಬೆಂಗಳೂರು ಮುಖ್ಯ ರಸ್ತೆಗಳ ಅಭಿವೃದ್ಧಿ 200 ಕೋಟಿ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಆಯ್ದ ಸ್ಥಳಗಳಲ್ಲಿ ಸುರಂಗ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗ್ತಿದೆ. ಪ್ರಾಯೋಗಿಕವಾಗಿ 2km ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ವ್ಯವಸ್ಥೆ ಮಾಡಲಾಗಿದೆ. SC-ST ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೆ ತರಲಾಗಿದೆ ಎಂದರು.

    ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿ, ನಗರ ಪೊಲೀಸ್ ಆಯುಕ್ತ, ಬಿಬಿಎಂಪಿ ಆಯುಕ್ತ ಉಪಸ್ಥಿತರಿದ್ದರು.

  • ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ನವದೆಹಲಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವದ (75th Republic Day) ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧ್ವಜಾರೋಹಣ (Flag hoisting) ನೆರವೇರಿದ್ದು, ಪರೇಡ್‌ಗಳಲ್ಲಿ ವಿಶೇಷ ಪ್ರದರ್ಶನಗಳು ಕಂಡುಬಂದಿವೆ.

    ಈ ಸಂದರ್ಭದಲ್ಲಿ 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ (Padma Awards 2024) ಆಯ್ಕೆಯಾಗಿರುವ 132 ಸಾಧಕರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನೂ ತಿಳಿಸಿದ್ದಾರೆ. ಕರ್ನಾಟಕದ 9 ಮಂದಿ ಸೇರಿ ಒಟ್ಟು 132 ಮಂದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 75th Republic Day: ದೆಹಲಿಯಲ್ಲಿ ನಡೆಯುವ ಪಥಸಂಚಲನಕ್ಕೆ ಬೆಳಗಾವಿ ಮೂಲದ ಯೋಧ ಆಯ್ಕೆ

    ಈ ವ್ಯಕ್ತಿಗಳು ಅದ್ಭುತ ಉದಾಹರಣೆಗಳನ್ನ ಸೃಷ್ಟಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಸೇವೆಯಿಂದ ರಾಷ್ಟ್ರದ ಘನತೆಯನ್ನ ಹೆಚ್ಚಿದ್ದಾರೆ. ವಿವಿಧ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಸಾಧಕರಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಡ್ರೋಣ್ ಔಟ್: ಬಚಾವ್ ಮಾಡಿದ ಸುದೀಪ್

    ‘ಪದ್ಮ’ ಪ್ರಶಸ್ತಿ ಭಾಜನರಾದ 9 ಕನ್ನಡಿಗರು
    ಪದ್ಮಭೂಷಣ ಪ್ರಶಸ್ತಿಗೆ ಕನ್ನಡಿಗರಾದ ಸೀತಾರಾಮ್‌ ಜಿಂದಾಲ್‌ (ವ್ಯಾಪಾರ ಮತ್ತು ಕೈಗಾರಿಕೆ) ಭಾಜನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ರೋಹನ್‌ ಮಾಚಂಡ ಬೋಪಣ್ಣ (ಕ್ರೀಡೆ), ಪ್ರೇಮಾ ಧನರಾಜ್‌ (ವೈದ್ಯಕೀಯ), ಅನುಪಮಾ ಹೊಸಕೆರೆ (ಕಲೆ), ಶ್ರೀಧರ್‌ ಮಕಮ್‌ ಕೃಷ್ಣಮೂರ್ತಿ (ಸಾಹಿತ್ಯ ಮತ್ತು ಶಿಕ್ಷಣ), ಕೆ.ಎಸ್‌.ರಾಜಣ್ಣ (ಸಾಮಾಜಿಕ ಕಾರ್ಯ), ಚಂದ್ರಶೇಖರ್‌ ಚನ್ನಪಟ್ಟಣ ರಾಜಣ್ಣಾಚಾರ್‌ (ವೈದ್ಯಕೀಯ), ಸೋಮಣ್ಣ (ಸಾಮಾಜಿಕ ಕಾರ್ಯ), ಶಶಿ ಸೋನಿ (ವ್ಯಾಪಾರ ಮತ್ತು ಕೈಗಾರಿಕೆ).

    ಪದ್ಮ ವಿಭೂಷಣ ಪುರಸ್ಕೃತರು

    ಪದ್ಮಭೂಷಣ ಪುರಸ್ಕೃತರು

    ಪದ್ಮಶ್ರೀ ಪುರಸ್ಕೃತರು

  • ಇಂದು ಕೋಲಾರದ ಇಬ್ಬರು ಮಹಿಳೆಯರಿಗೆ ಪ್ರಧಾನಿ ಮೋದಿ ಸನ್ಮಾನ

    ಇಂದು ಕೋಲಾರದ ಇಬ್ಬರು ಮಹಿಳೆಯರಿಗೆ ಪ್ರಧಾನಿ ಮೋದಿ ಸನ್ಮಾನ

    ಕೋಲಾರ: 75ನೇ ಗಣರಾಜ್ಯೋತ್ಸವ (75th Republic Day) ಆಚರಣೆಯ ಈ ಸಂದರ್ಭದಲ್ಲಿ ಇಂದು ದೆಹಲಿಯಲ್ಲಿ ಕೋಲಾರದ ಇಬ್ಬರು ಮಹಿಳೆಯರಿಗೆ ಸನ್ಮಾನ ನಡೆಯಲಿದೆ.

    ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಇಬ್ಬರಿಗೆ ಸನ್ಮಾನ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: 75th Republic Day: ದೆಹಲಿಯಲ್ಲಿ ನಡೆಯುವ ಪಥಸಂಚಲನಕ್ಕೆ ಬೆಳಗಾವಿ ಮೂಲದ ಯೋಧ ಆಯ್ಕೆ

    ಕೋಲಾರ ತಾಲೂಕು ಬೆಗ್ಲಿ ಹೊಸಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮಂಜುಳಾ ಹಾಗೂ ಶಶಿಕಲಾ ಕೆಲಸ ಮಾಡುತ್ತಿದ್ದಾರೆ. ಸ್ವಚ್ಚ ವಾಹಿನಿ ಚಾಲಕಿಯಾಗಿ ಮಂಜುಳಾ ಹಾಗೂ ಶಶಿಕಲಾ ಅವರು ನಿತ್ಯ ಕಸವನ್ನು ವೈಜ್ಞಾನಿಕವಾಗಿ ವಿಂಗಡನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರ ಈ ಕಾರ್ಯವನ್ನು ಮೆಚ್ಚಿ ಇಂದು ಸನ್ಮಾನ ಮಾಡಲಾಗುತ್ತಿದೆ.

    ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಈ ಇಬ್ಬರು ಮಹಿಳೆಯರು ದೆಹಲಿ ತಲುಪಿದ್ದಾರೆ.