Tag: ಗಣರಾಜ್ಯೋತ್ಸವ ದಿನ

  • ಉಡುಪಿ ಗಣರಾಜ್ಯೋತ್ಸವದಲ್ಲಿ ಸುಲ್ತಾನ್ ಕಮಾಲ್..!

    ಉಡುಪಿ ಗಣರಾಜ್ಯೋತ್ಸವದಲ್ಲಿ ಸುಲ್ತಾನ್ ಕಮಾಲ್..!

    ಉಡುಪಿ: 70ನೇ ಗಣರಾಜ್ಯೋತ್ಸವವನ್ನು ಉಡುಪಿಯಲ್ಲೂ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಧ್ವಜಾರೋಹಣ ಮಾಡಿದ್ದಾರೆ. ಗಣರಾಜ್ಯೋತ್ಸವ ಮೈದಾನದಲ್ಲಿ ಸುಲ್ತಾನನ ರಾಜನಡೆ ಎಲ್ಲರ ಗಮನ ಸೆಳೆಯಿತು.

    ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ತಿರಂಗ ಧ್ವಜ ಹಾರಿಸುವ ಮೂಲಕ ಉಡುಪಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವಿವಿಧ ತಂಡಗಳ ಶಿಸ್ತು ಬದ್ಧ ಆಕರ್ಷಕ ಪಥಸಂಚಲನ ನಡೆಯಿತು. ಸಚಿವರು ತೆರೆದ ವಾಹನದಲ್ಲಿ ನಿಂತು ಗೌರವ ಸ್ವೀಕರಿಸಿದರು. ಈ ಸಂದರ್ಭ ರಾಯಚೂರಿನಲ್ಲಿ ನಡೆದ ಪಶುಮೇಳದ ಚಾಂಪಿಯನ್ ಒಂಗೋಲ್ ತಳಿಯ ಹೋರಿಯ ಪ್ರದರ್ಶನ ನಡೆಯಿತು.

    ದಷ್ಟ ಪುಷ್ಟ ಹೋರಿ, ಅದರ ಮೇಲೆ ಕುಳಿತು ಬಂದ ಪುಟ್ಟ ಪೋರ ಫೈಜಾನ್ ಎಲ್ಲರ ಗಮನ ಸೆಳೆದರು. ಮೈದಾನಕ್ಕೆ ತ್ರಿವರ್ಣ ಧ್ವಜ ಹಿಡಿದು ಒಂದು ಸುತ್ತು ಬಂದ ಮನಾಮಾ ಫಾರ್ಮ್ ಹೌಸ್ ತಂಡ, ಚಾಂಪಿಯನ್ ಪಟ್ಟ ಸಿಕ್ಕ ಸಂದರ್ಭದ ಮೆಡಲ್ ಮತ್ತು ಟ್ರೋಫಿಯನ್ನು ಪ್ರದರ್ಶನ ಮಾಡಿತು.

    ಆರು ವರ್ಷ ವಯಸ್ಸಿನ ಸುಲ್ತಾನ 1,462 ಕಿಲೋ ತೂಗುತ್ತಾನೆ. ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ 3,000 ಜಾನುವಾರುಗಳು, 200 ಗೂಳಿಗಳನ್ನು ಹಿಂದಿಕ್ಕಿ ಚಾಂಪಿಯನ್ ಪಟ್ಟ ಪಡೆದುಕೊಂಡಿತ್ತು. ಉಡುಪಿಯ ಉಪ್ಪಿನ ಕೋಟೆಯ ಮನಮ ಫಾರ್ಮ್ ಹೌಸ್ ನ ಇರ್ಷಾದ್ ಮಾತನಾಡಿ, ಫಾರ್ಮ್ ಹೌಸ್ ನಲ್ಲಿ ಮೂವತ್ತು ತಳಿಗಳು ನಮ್ಮಲ್ಲಿದೆ. ನಾಲ್ಕು ಭಾರತೀಯ ತಳಿಗಳನ್ನು ಬೆಳೆಸುತ್ತಿದ್ದೇವೆ. ಸುಲ್ತಾನ್ ನೋಡಲು ಮಾತ್ರ ದೈತ್ಯ ಆದ್ರೆ ಬಹಳ ಸಾಧು ಸ್ವಭಾವದವ ಎಂದು ಹೇಳಿದರು.

    ಇಂದಿನ ಗಣರಾಜ್ಯೋತ್ಸವದ ಆಕರ್ಷಣೆ ಕೇಂದ್ರಬಿಂದುವಾಗಿದ್ದ ಸುಲ್ತಾನನ ಜೊತೆ ನೂರಾರು ಜನ ಸೆಲ್ಫಿ ಕ್ಲಿಕ್ಕಿಸಿಕೊಂಡರು. 9ರ ಬಾಲಕ ಫೈಜಾನ್ ಸುಲ್ತಾನನಿಗೆ ಮೂಗುದಾರ ಹಾಕಿ ಸುತ್ತಾಡಿಸುತ್ತಿದ್ದುದನ್ನು ಕಂಡು ಜನ ಮೂಗಿನ ಮೇಲೆ ಬೆರಳಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 70ನೇ ಗಣರಾಜ್ಯೋತ್ಸವ- ದೆಹಲಿಯ ರಾಜ್‍ಪಥದಲ್ಲಿ ಮೊಳಗಿತು ಕನ್ನಡದ ಕಹಳೆ

    70ನೇ ಗಣರಾಜ್ಯೋತ್ಸವ- ದೆಹಲಿಯ ರಾಜ್‍ಪಥದಲ್ಲಿ ಮೊಳಗಿತು ಕನ್ನಡದ ಕಹಳೆ

    – ಕರ್ನಾಟಕ ಸ್ತಬ್ಧಚಿತ್ರದ ವಿಶೇಷತೆಯೇನು..?

    ನವದೆಹಲಿ: ಇಲ್ಲಿನ ರಾಜ್‍ಪಥ್ ರಸ್ತೆಯಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಕರ್ನಾಟಕದಿಂದ ಈ ಬಾರಿ ಗಾಂಧೀಜಿ ಹಾಗೂ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು. ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಹಾಡಿನ ಮೂಲಕ ಎಲ್ಲರ ಗಮನಸೆಳೆಯಿತು.

    ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ 16 ರಾಜ್ಯಗಳ ಮತ್ತು 6 ಇಲಾಖೆಗಳ ಒಟ್ಟು 22 ಸ್ತಬ್ಧ ಚಿತ್ರಗಳು ಪ್ರದರ್ಶನವಾಗುತ್ತಿದೆ. ಸ್ತಬ್ಧ ಚಿತ್ರಗಳಲ್ಲಿ ಗಾಂಧೀಜಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಹಾಗೆಯೇ ಕರ್ನಾಟಕದಿಂದ ಈ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶಿಸಿದೆ.

    ಸ್ತಬ್ಧಚಿತ್ರದ ವಿಶೇಷತೆಯೇನು..?
    ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಐತಿಹಾಸಿಕ ಅಧಿವೇಶನ ನಡೆದ ಆವರಣಕ್ಕೆ ವಿಜಯನಗರ ಎಂದು ನಾಮಕರಣ ಮಾಡಲಾಗಿತ್ತು. ಅಲ್ಲದೇ ಅಧಿವೇಶನ ನಡೆದ ಸ್ಥಳದ ಪ್ರವೇಶ ದ್ವಾರವನ್ನು ಹಂಪೆಯ ವಿರೂಪಾಕ್ಷ ದೇಗುಲದ ಗೋಪುರದ ವಿನ್ಯಾಸದಲ್ಲಿ ಅಲಂಕರಿಸಲಾಗಿತ್ತು. ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರತಿನಿಧಿಗಳು ಮತ್ತು ಆಹ್ವಾನಿತರು ತಂಗಲು ಕುಟೀರಗಳನ್ನು ಬಿದಿರು ಮತ್ತು ಖಾದಿ ವಸ್ತ್ರಗಳಿಂದ ರೂಪಿಸಲಾಗಿತ್ತು. ಕುಡಿಯುವ ನೀರು ಸರಬರಾಜಿಗಾಗಿ ಹೊಸ ಬಾವಿಯೊಂದನ್ನು ನಿರ್ಮಿಸಿದ್ದು, ಅದಕ್ಕೆ ಪಂಪಾ ಸರೋವರ ಎಂದು ಹೆಸರಿಡಲಾಗಿತ್ತು. ಪ್ರತಿನಿಧಿಗಳ ಊಟೋಪಚಾರದ ವ್ಯವಸ್ಥೆಗೆ ಬೃಹತ್ ಪಾಕಶಾಲೆ ನಿರ್ಮಿಸಲಾಗಿತ್ತು. ಸಮಾವೇಶದ ಇಡೀ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಮುಂಬೈನಿಂದ ಸಾವಿರಾರು ಸಂಖ್ಯೆಯಲ್ಲಿ ಲಾಟೀನ್‍ಗಳು ಮತ್ತು ಪೆಟ್ರೋಮ್ಯಾಕ್ಸ್ ದೀಪಗಳನ್ನು ತರಿಸಲಾಗಿತ್ತು. ನಾ. ಸೂ. ಹರ್ಡಿಕರ್ ಅವರು ತರಬೇತಿಗೊಳಿಸಿದ್ದ ಹಿಂದೂಸ್ಥಾನ್ ಸೇವಾ ದಳದ ಸ್ವಯಂ ಸೇವಕರು, ಪ್ರತಿನಿಧಿಗಳು ಮತ್ತು ಆಹ್ವಾನಿತರ ಸೇವೆಯ ಮೇಲುಸ್ತುವಾರಿ ವಹಿಸಿದ್ದರು.

    ಮಹಾತ್ಮಾ ಗಾಂಧೀಜಿಯವರು ಮಹಾಧಿವೇಶನಕ್ಕೆ ಆಗಮಿಸಿ ಅಲ್ಲಿ ಸಹೋದರರು, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರು, ಸರದಾರ್ ವಲ್ಲಭಾಬಾಯ್ ಪಟೇಲ್ ಮತ್ತಿತರ ಗಣ್ಯನಾಯಕರು ಅವರೊಡನೆ ಇದ್ದರು. ಗಂಗಾಧರ ದೇಶಪಾಂಡೆ ಅವರ ಅಧ್ಯಕ್ಷತೆಯ ಸ್ವಾಗತ ಸಮಿತಿ ಜೊತೆಗೆ ಅಪಾರ ಸಂಖ್ಯೆಯಲ್ಲಿದ್ದ ಗಾಂಧೀ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗಣ್ಯರ ಸಮೂಹವನ್ನು ಆತ್ಮೀಯತೆಯಿಂದ ಬರ ಮಾಡಿಕೊಂಡು ಮೆರವಣಿಗೆ ಮೂಲಕ ಕಾಂಗ್ರೆಸ್ ಶಿಬಿರಕ್ಕಿ ಕರೆದೊಯ್ದರು. ಅಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಮತ್ತು ಕನ್ನಡ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗಿತ್ತು. ಸಂಗೀತ ದಿಗ್ಗಜ ವೀಣೆ ಶೇಷಣ್ಣನವರು ವೀಣಾವಾದನ ಮತ್ತು ಹುಯಿಲಗೋಳ ನಾರಾಯಣರಾವ್ ಅವರು ಕನ್ನಡ ರಾಜ್ಯೋದಯದ ಕುರಿತು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ಹಾಡುವ ಮೂಲಕ ಮಹಾಧಿವೇಶನಕ್ಕೆ ವಿಶೇಷ ಮೆರುಗನ್ನು ನೀಡಿದ್ದರು.

    ಬೆಳಗಾವಿ ಮಹಾಧಿವೇಶನದ ವಿಶೇಷವೆಂದರೆ ಸರಿಯಾಗಿ ಮಧ್ಯಾಹ್ನ 3.00ಗಂಟೆಗೆ ಎಲ್ಲ ಕಲಾಪಗಳು ಪ್ರಾರಂಭವಾದದ್ದು, ಮೊಟ್ಟ ಮೊದಲ ಬಾರಿಗೆ ಧ್ವಜಾರೋಹಣದ ಪದ್ಧತಿಯನ್ನು ಪ್ರಾರಂಭಿಸಿಲಾಗಿತ್ತು. ಅಲ್ಲದೇ ಬಿಳಿ, ಹಸಿರು ಮತ್ತು ಕೆಂಪು ಬಣ್ಣದ ಜೊತೆಗೆ ಮಧ್ಯಭಾಗದಲ್ಲಿ ಚರಕದ ಚಿತ್ರವುಳ್ಳ ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಹಾರಿಸಲಾಯಿತು. ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಪಂಡಿತ್ ವಿಷ್ಣು ದಿಗಂಬರ್ ಪಾಲುಸ್ಕರ್ ಮತ್ತು ಅವರ ಶಿಷ್ಯ ಗಣ ವಿಶಿಷ್ಟ ರಾಗದೊಂದಿಗೆ ನುಡಿಸಿದ್ದು ಮತ್ತೊಂದು ವಿಶೇಷವಾಗಿದೆ. ಇದಕ್ಕೂ ಮೊದಲು ಗುರುದೇವ ರವೀಂದ್ರ ನಾಥ್ ಠಾಗೂರ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದ್ದು ಉಲ್ಲೇಖಾರ್ಹ.

    39ನೇ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷ ಸ್ಥಾನದಿಂದ ಮಹಾತ್ಮ ಗಾಂಧೀಜಿಯವರು ಹಲವು ಕ್ರಾಂತಿಖಾರಿ ಮತ್ತು ವಿನೂತನ ವಿಷಯಗಳು ಪ್ರತಿಪಾದನೆ ಮಾಡಿದ್ದರು. ಹಿಂದೂ-ಮುಸ್ಲಿಂ ಏಕತೆ, ವಿದೇಶಿ ವಸ್ತುಗಳು ಬಹಿಷ್ಕಾರ, ಚರಕ ಮತ್ತು ಖಾದಿ ನೂಲುವಿಕೆಗೆ ಪ್ರೋತ್ಸಾಹ, ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಗಾಂಧೀಜಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಲವಾದ ಪ್ರತಿಪಾದನೆ ಮಾಡಿದ್ದರು.

    ಮಹಾತ್ಮಾ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಿಗೆ ಕರ್ನಾಟಕ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿತು. ಖಾದಿ ಪ್ರಚಾರ ಮತ್ತು ಗ್ರಾಮೋದ್ಯೋಗದ ಬಗ್ಗೆ ಕರ್ನಾಟಕದ ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಹರಿಜನೋದ್ದಾರಕ್ಕಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಕಲ್ಯಾಣ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. 1922 ರಿಂದ 25ರ ನಡುವೆ ರಾಷ್ಟ್ರೀಯ ನೇತಾರರುಗಳಾದ ಸಿ. ರಾಜಗೋಪಾಲಚಾರಿ, ಚಿತ್ತರಂಜನ್ ದಾಸ್, ಲಾಲಾ ಲಜಪತ್ ರಾಯ್, ಎಸ್. ಶ್ರೀನಿವಾಸ್ ಐಯ್ಯಂಗಾರ್, ಪಟ್ಟಾಭಿ ಸೀತಾರಾಮಯ್ಯ, ಜಮ್ನಾದಾಸ ಮೆಹೆತಾ, ಕೊಂಡ ವೆಂಕಟ್ಟಪ್ಪಯ್ಯ ಮತ್ತಿತರರು ಕರ್ನಾಟಕದ ಮೂಲೆ-ಮೂಲೆಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಜಾಗೃತಿ ಪ್ರಜ್ಞೆಯನ್ನು ಜೀವಂತವಿರಿಸಿದರು. ಕರ್ನಾಟಕದ ನಾಯಕರುಗಳಾದ ನಾ.ಸೂ ಹರ್ಡೀಕರ್, ಶ್ರೀನಿವಾಸ್ ರಾವ್ ಕೌಜಲಗಿ, ಗಂಗಾಧರ ರಾವ್ ದೇಶಪಾಂಡೆ, ಕಡಪ ರಾಘವೇಂದ್ರ ರಾವ್, ಆರ್. ಆರ್ ದಿವಾಕರ್, ಕೃಷ್ಣ ರಾವ್ ಮುದವೇಡಕರ್ ಮತ್ತಿತರರು ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆ ಪ್ರಜ್ವಲಿಸಲು ಶ್ರಮಿಸಿದ್ದರು.

    https://www.youtube.com/watch?v=Fn2jwU5ayD4

    https://www.youtube.com/watch?v=QmK1zbMMIv4

    https://www.youtube.com/watch?v=QxzTqdy-KS4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶಭಕ್ತರ ವೇಷಭೂಷಣ ತೊಟ್ಟು ರೋಗಿಗಳ ಜೊತೆ ಗಣರಾಜ್ಯೋತ್ಸವ ಆಚರಿಸಿದ ವೈದ್ಯರು

    ದೇಶಭಕ್ತರ ವೇಷಭೂಷಣ ತೊಟ್ಟು ರೋಗಿಗಳ ಜೊತೆ ಗಣರಾಜ್ಯೋತ್ಸವ ಆಚರಿಸಿದ ವೈದ್ಯರು

    ಬೆಳಗಾವಿ: ಸಾಮಾನ್ಯವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರ ಧ್ವಜಾರೋಹಣದ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಿ ರಜೆ ಇರುವ ಕಾರಣ ತಮ್ಮ ಮನೆ ಮನೆಗಳಿಗೆ ತೆರಳುತ್ತಾರೆ. ಆದರೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಸ್ಪತ್ರೆಯಲ್ಲಿ ಈ ಬಾರಿ ವಿಶೇಷವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.

    ಇಲ್ಲಿನ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಗಣರಾಜ್ಯೋತ್ಸವದ ನಿಮಿತ್ತ ದೇಶಭಕ್ತರ ವೇಷಭೂಷಣ ತೊಟ್ಟು ಆಸ್ಪತ್ರೆಗೆ ಬರುವ ರೋಗಿಗಳಿಗೆ ಗಣರಾಜ್ಯೋತ್ಸವದ ಮಹತ್ವ ಸಾರುತ್ತಿದ್ದಾರೆ. ಮಹಿಳಾ ವೈದ್ಯರು ಹಾಗೂ ಸಿಬ್ಬಂದಿ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಭಾಯಿ, ಓಬವ್ವ ಸೇರಿದಂತೆ ವಿವಿಧ ಮಹಿಳಾ ಸಾಧಕರ ವೇಷಭೂಷಣ ತೊಟ್ಟು ಆಗಮಿಸಿದ್ದಾರೆ.

    ಇತ್ತ ಪುರುಷ ವೈದ್ಯರು ಹಾಗೂ ಸಿಬ್ಬಂದಿ ಮಂಗಲ್ ಪಾಂಡೆ, ಶಿವಾಜಿ, ಬಾಲಗಂಗಾಧರ ತಿಲಕ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ಮಹಾನ್ ದೇಶಭಕ್ತರ ಉಡುಗೆ ತೊಟ್ಟು ಆಗಮಿಸಿ ವಿಶೇಷವಾಗಿ ಗಣರಾಜ್ಯೋತ್ಸವನ್ನು ಆಚರಿಸಿದ್ದಾರೆ. ಒಟ್ಟಿನಲ್ಲಿ ಕಾಟಾಚಾರಕ್ಕೆ ಧ್ವಜಾರೋಹಣ ಮಾಡಿ ಮನೆಗಳಿಗೆ ತೆರಳುವ ಅಧಿಕಾರಿಗಳಿಗೆ ನಿಜಕ್ಕೂ ಹುಕ್ಕೇರಿ ಸರ್ಕಾರಿ ವೈದ್ಯರು ಮಾದರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 70ನೇ ಗಣರಾಜ್ಯೋತ್ಸವ ಸಂಭ್ರಮ- ಸಕಲ ರೀತಿಯಲ್ಲೂ ರಾಜಪಥ್ ರೆಡಿ

    70ನೇ ಗಣರಾಜ್ಯೋತ್ಸವ ಸಂಭ್ರಮ- ಸಕಲ ರೀತಿಯಲ್ಲೂ ರಾಜಪಥ್ ರೆಡಿ

    ನವದೆಹಲಿ: ಇಂದು 70ನೇ ಗಣರಾಜ್ಯೋತ್ಸವದ ಸಂಭ್ರಮ. ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥ್ ರಸ್ತೆ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

    ದಟ್ಟ ಮಂಜು ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಕಾರ್ಯಕ್ರಮಗಳು ಆರಂಭವಾಗಲಿದೆ. ಈ ಬಾರಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಗಣರಾಜೋತ್ಸವದ ಅತಿಥಿ ಆಗಿದ್ದಾರೆ. ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಪ್ರಧಾನಿ, ಅತಿಥಿ, ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ಕೋವಿಂದ್ ಧ್ವಜಾರೋಹಣ ಮಾಡಲಿದ್ದಾರೆ. ಇದನ್ನೂ ಓದಿ: ದೇಶದ ಹಬ್ಬಕ್ಕೆ ಕ್ಷಣಗಣನೆ : ಸಿಂಗಾರಗೊಂಡಿದೆ ರಾಜಪಥ್: ಈ ಬಾರಿಯ ಪರೇಡ್ ವಿಶೇಷತೆ ಏನು?

    ಈ ಬಾರಿ 16 ರಾಜ್ಯಗಳ ಮತ್ತು 6 ಇಲಾಖೆಗಳ ಒಟ್ಟು 22 ಸ್ತಬ್ಧ ಚಿತ್ರಗಳು ಪ್ರದರ್ಶನವಾಗುತ್ತಿದೆ. ಗಾಂಧೀಜಿ 150ನೇ ಜನ್ಮದಿನದ ಹಿನ್ನೆಲೆ ಸ್ತಬ್ಧ ಚಿತ್ರಗಳಲ್ಲಿ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ಗೋಕುಲ್ ಎಕ್ಸ್ ಟೆನ್ಷನ್‍ನ ನಾವ್ಕೀಸ್ ಶಾಲೆಯ ವಿದ್ಯಾರ್ಥಿನಿ ದೇವಿಕಾ ಸಂತೋಷ್‍ಗೆ ಪ್ರ್ರಧಾನ ಮಂತ್ರಿ ಬಾಕ್ಸ್ ನಲ್ಲಿ ಕುಳಿತು ಪರೇಡ್ ವೀಕ್ಷಿಸುವ ಅವಕಾಶ ಸಿಕ್ಕಿದೆ.

    ಕಳೆದ ವರ್ಷದ ಸಿಬಿಎಸ್‍ಇ 10ನೇ ತರಗತಿಯಲ್ಲಿ ದೇವಿಕಾ ದೇಶಕ್ಕೇ ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದರು. ಉಗ್ರರ ಕರಿನೆರಳಿನ ಭೀತಿಯಿಂದ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ಇದನ್ನೂ ಓದಿ: ಫಸ್ಟ್ ಟೈಂ ಆರ್‌ಡಿಯಲ್ಲಿ ಪುರುಷ ದಳವನ್ನು ಮುನ್ನಡೆಸಲಿದ್ದಾರೆ ಮಹಿಳಾ ಅಧಿಕಾರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗಿಲ್ಲ ಭಾರತರತ್ನ- ಬೇಸರವಿಲ್ಲ ಅಂದ್ರು ಕಿರಿಯ ಶ್ರೀ

    ಸಿದ್ದಗಂಗಾ ಶ್ರೀಗಳಿಗಿಲ್ಲ ಭಾರತರತ್ನ- ಬೇಸರವಿಲ್ಲ ಅಂದ್ರು ಕಿರಿಯ ಶ್ರೀ

    ಬೆಂಗಳೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಈ ಬಾರಿ “ಭಾರತ ರತ್ನ” ಸಲ್ಲುತ್ತೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದರು. ಆದರೆ ಕನ್ನಡಿಗರ ದನಿ ಮೋದಿ ಅವರಿಗೆ ಕೇಳಿಸಲಿಲ್ಲ. ಇದೀಗ ಶ್ರೀಗಳಿಗೆ ಭಾರತ ರತ್ನ ಸಿಗದ್ದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿರಿಯ ಶ್ರೀಗಳು, “ಸ್ವಾಮೀಜಿ ಅವರು ಇದುವರೆಗೂ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸಿರಲಿಲ್ಲ. ಇದು ಜನರ ಒತ್ತಾಸೆ ಆಗಿತ್ತು. ಆದರೆ ಅವರ ಒತ್ತಾಸೆ ಈಡೇರಲಿಲ್ಲ ಎಂದು ನಿರಾಶೆ ಪಡುವ ಅವಶ್ಯಕತೆ ಇಲ್ಲ. ಪ್ರಶಸ್ತಿಯನ್ನು ಯಾರಿಗೆ ಪ್ರಕಟ ಮಾಡಿದ್ದಾರೋ ಅವರಿಗೆ ಸ್ವಾಗತ ಮಾಡಿ ಸಂತೋಷಪಡೋಣ. ಪ್ರಶಸ್ತಿ ಸಿಕ್ಕಿಲ್ಲ ಎಂದು ಅಸಮಾಧಾನ ಹಾಗೂ ಪ್ರತಿಭಟನೆ ಮಾಡುವುದು ನಾಗರಿಕರ ಲಕ್ಷಣ ಅಲ್ಲ. ಪ್ರಶಸ್ತಿಯನ್ನು ಪ್ರೀತಿಯಿಂದ ಕೇಳುವುದು ತಪ್ಪಲ್ಲ. ಹಾಗಂತ ಪ್ರತಿಭಟನೆ ಮಾಡಿದರೆ ಅದು ತಪ್ಪು. ನಾವು ಪ್ರಶಸ್ತಿ ಕಡೆ ಗಮನಹರಿಸುವುದಿಲ್ಲ. ಪ್ರಶಸ್ತಿಯ ಇಚ್ಛೆ ಕೂಡ ನಮಗೆ ಇಲ್ಲ. ಅಂತದ್ದರಲ್ಲಿ ಅವರು ನಮಗೆ ಕೊಡುತ್ತಾರೆ ಎಂಬ ನಿರೀಕ್ಷೆ ಕೂಡ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಸಾಲುಮರದ ತಿಮ್ಮಕ್ಕ ಸೇರಿ ರಾಜ್ಯದ ಐವರಿಗೆ ಪದ್ಮಶ್ರೀ ಗೌರವ

    ಸಿಎಂ ಟ್ವೀಟ್:
    ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರಿಗೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ರಾಜ್ಯದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿರೋದು ಸಂತಸ ತಂದಿದೆ. ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ಶಾಸಕ ಸುರೇಶ್ ಕುಮಾರ್ ಅಸಮಾಧಾನ:
    ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ, “ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶ್‍ಮುಖ್‍ರಿಗೆ `ಭಾರತರತ್ನ’ ನೀಡಿರುವುದು ಅತ್ಯಂತ ಸೂಕ್ತ. ಇವರೊಂದಿಗೆ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಹೆಸರು ಇದ್ದಿದ್ದರೆ `ಭಾರತರತ್ನ’ದ ಮೆರಗು ಬಹಳಷ್ಟು ಹೆಚ್ಚುತ್ತಿತ್ತು ಎಂಬುದು ಎಲ್ಲರ ಭಾವನೆ” ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ಶ್ರೀಗಳಿಗೆ ಭಾರತ ರತ್ನ ನೀಡದ್ದಕ್ಕೆ ಭಕ್ತಗಣ ಆಕ್ರೋಶ ಹೊರಹಾಕುತ್ತಿದೆ. ಇನ್ನೊಮ್ಮೆ ಪರಿಶೀಲಿಸಿ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಭಕ್ತಾಧಿಗಳು ಮಠದ ಆವರಣದಲ್ಲಿ ಘೋಷಣೆ ಮಾಡಿ ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮೈದಾನದಲ್ಲೇ ಕುಸಿದು ಬಿದ್ದ ಪರೇಡ್ ಮುಖ್ಯಸ್ಥ!

    ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮೈದಾನದಲ್ಲೇ ಕುಸಿದು ಬಿದ್ದ ಪರೇಡ್ ಮುಖ್ಯಸ್ಥ!

    ಹಾವೇರಿ: 69 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಪರೇಡ್ ಮುಖ್ಯಸ್ಥರೊಬ್ಬರು ಮೈದಾನದಲ್ಲಿಯೇ ಕುಸಿದು ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಅಸ್ವಸ್ಥಗೊಂಡ ಪರೇಡ್ ಮುಖ್ಯಸ್ಥರನ್ನು ಆರ್ ಪಿಐ ಮಾರುತಿ ಹೆಗಡೆ (35) ಎಂದು ಗುರುತಿಸಲಾಗಿದೆ. ಇಂದು ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾರುತಿ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಧಿಕಾರಿಗಳು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ತಹಶೀಲ್ದಾರರ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ಸದ್ಯ ಮಾರುತಿ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

    ಕಳೆದ ಎರಡು ವರ್ಷಗಳಿಂದ ಮಾರುತಿ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಗಣರಾಜ್ಯೋತ್ಸವ ಪರೇಡ್ ಇರೋ ಹಿನ್ನಲೆಯಲ್ಲಿ ಬೇಗನೇ ಆಗಮಿಸಿದ್ದರು. ಬಿಸಿಲಿನ ತಾಪಕ್ಕೆ ಆರ್‍ಪಿಐ ಕುಸಿದು ಬಿದ್ದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.