Tag: ಗಣಪತಿ ಹಬ್ಬ

  • ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

    ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

    ಶಿವಮೊಗ್ಗ: ಈ ಬಾರಿ ಈದ್ ಮಿಲಾದ್ (Eid Milad) ಹಬ್ಬವನ್ನು ಶಿವಮೊಗ್ಗದಲ್ಲಿ (Shivamogga) ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಹಬ್ಬದ ಮೆರವಣಿಗೆ ವೇಳೆ ಕಪ್ಪು ಚುಕ್ಕೆ ಎಂಬಂತೆ ಕಲ್ಲು ತೂರಾಟ ನಡೆದು, ಕೋಮು ಗಲಭೆ ಸಹ ಉಂಟಾಗಿದೆ. ಅಷ್ಟಕ್ಕೂ ಅದ್ದೂರಿ ಹಬ್ಬ ಆಚರಣೆಗೆ 5 ಕೋಟ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

    ಮಲೆನಾಡಿನ ಹಿಂದೂಗಳ (Hindu) ಹಬ್ಬ ಆಗಿರಬಹುದು, ಮುಸ್ಲಿಮರ (Muslims) ಹಬ್ಬ ಆಗಿರಬಹುದು ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನುಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಶಿವಮೊಗ್ಗ ನಗರದ ಪ್ರಮುಖ ಬಡಾವಣೆ, ವೃತ್ತಗಳಲ್ಲಿ  ಹಿಂದೆಂದೂ ಕಾಣದ ರೀತಿಯಲ್ಲಿ ಭರ್ಜರಿ ಅಲಂಕಾರ ಮಾಡಲಾಗಿತ್ತು. ಅಲಂಕಾರಕ್ಕಾಗಿಯೇ ಸಾಕಷ್ಟು ಹಣ ಖರ್ಚು ಮಾಡಲಾಗಿತ್ತು.  ಇದನ್ನೂ ಓದಿ: ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

     

    ಸ್ಥಳೀಯ ಮುಸ್ಲಿಂ ಮುಖಂಡರು, ಯುವಕರು ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡಿದ್ದಾರೆ. ಕೆಲವೆಡೆಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಅದರಂತೆ ಹೊರಗಡೆಯಿಂದಲೂ ಈದ್ ಮಿಲಾದ್ ಹಬ್ಬ ಆಚರಣೆಗೆ ಈ ಬಾರಿ ಧನ ಸಂಗ್ರಹವಾಗಿದೆ (Funding) ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಧಿಕ ಹಣ ಸಂಗ್ರಹವಾಗಿದ್ದರಿಂದಲೇ ಎಲ್ಲೆಂದರಲ್ಲಿ ಕಟೌಟ್, ಬ್ಯಾನರ್ , ಖಡ್ಗ ಹಾಕಿದ್ದರು ಎನ್ನಲಾಗಿದೆ. ಈಗ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹ ಹೇಗಾಯ್ತು? ಹೊರಗಿನಿಂದ ಸಹಾಯ ಧನ ಮಾಡಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

    ಈದ್ ಮಿಲಾದ್ ಹಬ್ಬ ಇಷ್ಟೊಂದು ಅದ್ದೂರಿಯಾಗಿ ಮಾಡಲು ಮತ್ತೊಂದು ಕಾರಣ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ (Hindu Mahasabha Ganapathi Visarjan) ವೇಳೆ ನಗರದಲ್ಲೆಡೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಗಳು ನೆರೆದಿದ್ದರು. ಇದಕ್ಕೆ ಪ್ರತಿಯಾಗಿಯೇ ಈದ್ ಮಿಲಾದ್ ಹಬ್ಬಕ್ಕೆ ಅಲಂಕಾರ, ಮೆರವಣಿಗೆ ನಡೆಸಲಾಗಿತ್ತು ಎಂಬ ವಿಚಾರ ಹೊರ ಬಿದ್ದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುದ್ದು ಮಕ್ಕಳ ಜೊತೆ ಗಣಪತಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್

    ಮುದ್ದು ಮಕ್ಕಳ ಜೊತೆ ಗಣಪತಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಕ್ಕಳ ಪೋಷಣೆಯಲ್ಲಿ ಬ್ಯುಸಿಯಿರುವ ರಾಧಿಕಾ, ಸದ್ಯ ಗಣಪತಿ ಹಬ್ಬದ ಆಚರಣೆಯಲ್ಲಿ ಹೇಗಿತ್ತು ಎಂಬುದನ್ನ ಫೋಟೋ ಮೂಲಕ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಶೇರ್ ಮಾಡಿದ್ದಾರೆ.

    ಚಂದನವನದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮಿಂಚಿದ್ದ ನಟಿ ರಾಧಿಕಾ ಪಂಡಿತ್ ಸದ್ಯ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಗಣಪತಿ ಹಬ್ಬವನ್ನ ರಾಧಿಕಾ ಪಂಡಿತ್ ಅದ್ದೂರಿಯಾಗಿ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಕ್ಷಣವನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಅಜ್ಜಿ ಮನೆಯಲ್ಲಿ ಗಣಪತಿ ಹಬ್ಬವನ್ನ ರಾಧಿಕಾ ಪಂಡಿತ್‌ ಆಚರಿಸಿರುವುದು ವಿಶೇಷ. ಇದನ್ನೂ ಓದಿ:ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

     

    View this post on Instagram

     

    A post shared by Radhika Pandit (@iamradhikapandit)

    ಅಜ್ಜಿ ಮನೆಯಲ್ಲಿ ಗಣೇಶನ ಹಬ್ಬವನ್ನ ಅದ್ದೂರಿಯಾಗಿ ರಾಧಿಕಾ ಸೆಲೆಬ್ರೇಟ್ ಮಾಡಿದ್ದಾರೆ. ಐರಾ ಮುದ್ದು ತಮ್ಮ ಯಥರ್ವ್‌ಗೆ ಅರಿಶಿನ ದಾರ ಕಟ್ಟುತ್ತಿರುವ ಫೋಟೋವನ್ನ ಶೇರ್ ಮಾಡಿ, ಎಲ್ಲರೂ ಗಣೇಶ ಹಬ್ಬವನ್ನು ಚೆನ್ನಾಗಿ ಆಚರಿಸಿದ್ರಿ ಎಂದು ಭಾವಿಸುತ್ತೇನೆ. ಚೆನ್ನಾಗಿ ಮೋದಕ, ಕಡಬು ತಿಂದ್ರಾ ಎಂದು ನಟಿ ಪ್ರಶ್ನಿಸಿದ್ದಾರೆ. ಸದ್ಯ ರಾಧಿಕಾ ಜತೆಯಿರುವ ಐರಾ ಮತ್ತು ಯಥರ್ವ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗಣಪತಿ ಸ್ತುತಿ ಜೊತೆ ಮಕ್ಕಳಿಗೆ ಅಆಇಈ ಪಾಠ- ಉಡುಪಿಯ ಮಾನಸಿ ಸುಧಿರ್ ವಿಡಿಯೋಗೆ ಭಾರೀ ಮೆಚ್ಚುಗೆ

    ಗಣಪತಿ ಸ್ತುತಿ ಜೊತೆ ಮಕ್ಕಳಿಗೆ ಅಆಇಈ ಪಾಠ- ಉಡುಪಿಯ ಮಾನಸಿ ಸುಧಿರ್ ವಿಡಿಯೋಗೆ ಭಾರೀ ಮೆಚ್ಚುಗೆ

    ಉಡುಪಿ: ನಾಟಕೀಯ ಶೈಲಿಯ ಹಾಡುಗಳ ಮೂಲಕ ಫೇಸ್‍ಬುಕ್ ನಲ್ಲಿ ಫೇಮಸ್ ಆಗಿರುವ ಕಲಾವಿದೆ, ಭರತ ನಾಟ್ಯ ಶಿಕ್ಷಕಿ ಮಾನಸಿ ಸುಧಿರ್ ಗಣೇಶ ಚತುರ್ಥಿ ಸಂದರ್ಭ ಮತ್ತೆ ಸದ್ದು ಮಾಡಿದ್ದಾರೆ. ಹಾಡು ಮತ್ತು ನಟನೆ ಮಾಡಿರುವ ವಿಡಿಯೋ ಬಹಳ ಜನಮನ್ನಣೆ ಪಡೆದಿದೆ.

    ಗಣಪನ ಹಾಡಿನ ನಡುವೆ ಅಆಇಈ ಪಾಠವನ್ನು ಪುಟಾಣಿ ಮಕ್ಕಳಿಗೆ ಮಾಡಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ಅದ್ಭುತ ಹಾಡು ರಿಲೀಸ್ ಆಗಿದೆ. ಕಥನ ಶೈಲಿಯ ಈ ಹಾಡು ಈಗ ಸಖತ್ ವೈರಲ್ ಆಗಿದೆ. ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ಸಂಭ್ರಮವನ್ನು ವಿವರಿಸಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸನ್ನೂ ಗೆದ್ದಿದೆ. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಆರೇಳು ದಶಕಗಳ ಹಿಂದೆ ಬರೆದ ಈ ಶಿಶುಗೀತೆಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬಂದಿದೆ. ಹಬ್ಬದ ಖುಷಿಯ ಜೊತೆಗೆ ಕನ್ನಡ ಪ್ರೀತಿಯನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳುವ ಈ ಹಾಡು ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ.

    https://www.facebook.com/publictv/videos/620672505517760/

    ಕೋವಿಡ್ ಸಂದರ್ಭದಲ್ಲಿ ಆನ್‍ಲೈನ್ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿರುವುದರಿಂದ, ಈ ರೀತಿಯಲ್ಲೂ ಪಾಠ ಮಾಡಿ ಮಕ್ಕಳ ಮನ ಗೆಲ್ಲಬಹುದು ಅಂತ ಈ ವಿಡಿಯೋ ಸಾರಿ ಹೇಳುತ್ತಿದೆ.

  • ಶಿವಮೊಗ್ಗದಲ್ಲಿ ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ – ಜಿಲ್ಲಾಡಳಿತ ಆದೇಶ

    ಶಿವಮೊಗ್ಗದಲ್ಲಿ ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ – ಜಿಲ್ಲಾಡಳಿತ ಆದೇಶ

    ಶಿವಮೊಗ್ಗ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಈ ಬಾರಿಯ ಗಣಪತಿ ಉತ್ಸವವನ್ನು ರಾಜ್ಯ ಸರ್ಕಾರದ ಆದೇಶದ ಅನ್ವಯ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಾರಿಯ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈಗಾಗಿ ನಾಗರಿಕರು ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿ ಸಂಜೆ ವಿಸರ್ಜನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಗಣಪತಿ ಹಬ್ಬ ಕೇವಲ ಈ ವರ್ಷಕ್ಕೆ ಅಷ್ಟೇ ಸೀಮಿತವಾಗಿಲ್ಲ. ಮುಂದಿನ ಬಾರಿಯೂ ಗಣೇಶ ಹಬ್ಬ ಬರುತ್ತದೆ. ಈಗಾಗಿ ಜೀವ ಉಳಿದರೆ ಮುಂದಿನ ಬಾರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಹುದು ಎಂದರು.

    ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಗಣಪತಿ ಪ್ರತಿಷ್ಠಾಪನೆ ಮಾಡಿ. ಆದರೆ ಗಣಪತಿ ತರುವ ವೇಳೆಯಲ್ಲಿ ಆಗಲಿ, ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆಗಲಿ ಮೆರವಣಿಗೆ ಮಾಡುವಂತಿಲ್ಲ. ಮನೆಯಲ್ಲಿ ಕೂರಿಸುವ ಗಣಪತಿ ಮೂರ್ತಿ 2 ಅಡಿ ಮೀರಬಾರದು. ಜೊತೆಗೆ 4 ಜನಕ್ಕಿಂತ ಹೆಚ್ಚಿನ ಮಂದಿ ಭಾಗವಹಿಸಬಾರದು. ಅದೇ ರೀತಿ ಸಾರ್ವಜನಿಕವಾಗಿ ಕೂರಿಸುವ ಗಣಪತಿ 4 ಅಡಿಗಿಂತ ಮೀರಿರಬಾರದು ಹಾಗೂ ಗಣಪತಿ ತರಲು 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಅಲ್ಲದೇ ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿದರೆ ಸಂಜೆ ಕತ್ತಲು ಕಳೆಯುವುದರೊಳಗೆ ಗಣಪತಿ ವಿಜರ್ಜನೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ತೀರ್ಮಾನದಂತೆ ಜಿಲ್ಲಾಡಳಿತ ತೆಗೆದುಕೊಂಡಿರುವ ತೀರ್ಮಾನಕ್ಕೆ ಎಲ್ಲಾ ಗಣಪತಿ ಸಂಘಟನೆಗಳು ಬದ್ಧರಾಗಿರಬೇಕು. ಗಣಪತಿ ಪ್ರತಿಷ್ಠಾಪಿಸಬೇಡಿ ಎಂದು ಜಿಲ್ಲಾಡಳಿತ ಹೇಳುತ್ತಿಲ್ಲ. ಯಾವುದೇ ಸಂಘಟನೆಯವರಾಗಲಿ ಕೂಡ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಪ್ರತಿಷ್ಠೆಯಾಗಿ ತೆಗೆದುಕೊಂಡರೆ ನಮ್ಮ ಜೀವಕ್ಕೆ ಆಪತ್ತು ಉಂಟಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

  • ಪರಿಸರ ಜಾಗೃತಿ ಮೂಡಿಸಲು ಉದ್ಭವಿಸಿದ ಪ್ಲಾಸ್ಟಿಕ್ ಬಾಟಲ್ ವಿಘ್ನೇಶ್ವರ

    ಪರಿಸರ ಜಾಗೃತಿ ಮೂಡಿಸಲು ಉದ್ಭವಿಸಿದ ಪ್ಲಾಸ್ಟಿಕ್ ಬಾಟಲ್ ವಿಘ್ನೇಶ್ವರ

    ಭುವನೇಶ್ವರ: ಪರಿಸರ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಆದರೂ ಕೂಡ ಪರಿಸರ ಉಳಿಸಬೇಕಾದ ನಾವು ಪ್ಲಾಸ್ಟಿಕ್, ಕೆಮಿಕಲ್ ಇನ್ನಿತರ ವಸ್ತುಗಳ ಬಳಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಮಾಡಿ ನಿಸರ್ಗದ ಉಸಿರು ಗಟ್ಟಿಸುತ್ತಿದ್ದೇವೆ. ಆದ್ದರಿಂದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ಲಾಸ್ಟಿಕ್‍ನಿಂದ ಹಾಗೂ ಮರಳಿನಲ್ಲಿ ಗಣಪತಿಯನ್ನು ತಯಾರಿಸಿ ಕಲಾವಿದರೊಬ್ಬರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ಒಡಿಶಾ ಮೂಲದ ಅಂತರಾಷ್ಟ್ರೀಯ ಮಟ್ಟದಲ್ಲಿ ಮರಳು ಕಲಾಕೃತಿ ಮಾಡುವಲ್ಲಿ ಹೆಸರು ಗಳಿಸಿರುವ ಸುದರ್ಶನ್ ಪಟ್ನಾಯಕ್ ಅವರು ಈ ವಿಶೇಷ ಗಣಪನ ಕಲಾಕೃತಿ ಮಾಡಿದ್ದಾರೆ. ಪುರಿ ಬೀಚ್‍ನಲ್ಲಿ ಈ ಅದ್ಭುತ ಗಣಪನ ಕಲಾಕೃತಿಯನ್ನು ಮಾಡಲಾಗಿದೆ. ಬೀಚ್ ಮರಳಿನಲ್ಲಿ ಸಿಕ್ಕ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಗಣಪನ ಕಲಾಕೃತಿಯನ್ನು ವಿಶೇಷವಾಗಿ ತಯಾರಿಸಿದ್ದಾರೆ. ಅಲ್ಲದೆ ಅದರ ಮುಂದೆ ಒಮ್ಮೆ ಮಾತ್ರ ಬಳಕೆಗೆ ಬರುವ ಪ್ಲಾಸ್ಟಿಕ್ ಉಪಯೋಗಿಸಬೇಡಿ, ಪರಿಸರವನ್ನು ಉಳಿಸಿ ಎಂದು ಬರೆದು ಒಂದೊಳ್ಳೆ ಸಂದೇಶವನ್ನು ಸಾರಿದ್ದಾರೆ.

    ಪ್ರಧಾನಿ ಮೋದಿ ಅವರ ಏಕ-ಬಳಕೆ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನದಿಂದ ಪ್ರೇರಿತರಾಗಿ ಈ ಕಲಾಕೃತಿ ತಯಾರಿಸಿದ್ದೇನೆ ಎಂದು ಪಟ್ನಾಯಕ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೋದಿ ಅವರು ರೆಡಿಯೋದಲ್ಲಿ ಪ್ರಸಾರವಾಗುವ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಅಭಿಯಾದ ಬಗ್ಗೆ ಹೇಳಿದ್ದರು. ಇದನ್ನು ಆಲಿಸಿದ್ದ ಪಟ್ನಾಯಕ್ ಅವರು ಒಂದು ವಿಶೇಷ ಪ್ರಯತ್ನದ ಮೂಲಕ ಸಾರ್ವಜನಿಕರಲ್ಲಿ ಪರಿಸರ ಉಳಿಸಿ ಎಂದು ವಿನಂತಿ ಮಾಡಿದ್ದಾರೆ.

    ಬರೋಬ್ಬರಿ 5 ಟನ್ ಮರಳನ್ನು ಬಳಸಿ ಪಟ್ನಾಯಕ್ ಅವರು 10 ಅಡಿ ಎತ್ತರದ ಗಣೇಶನ ಕಲಾಕೃತಿಯನ್ನು ಮಾಡಿದ್ದಾರೆ. ಅದರ ಸುತ್ತ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟೆಲ್‍ಗಳನ್ನು ಇರಿಸಿ ಏಕ-ಬಳಕೆ ಪ್ಲಾಸ್ಟಿಕ್ ಬಳಸಬೇಡಿ, ಪರಿಸರ ಉಳಿಸಿ ಎಂದು ಸಂದೇಶವನ್ನು ಕೂಡ ಕಲಾಕೃತಿಯ ಎದುರು ಬರೆದಿದ್ದಾರೆ. ಅದ್ಭುತ ಕಲಾಕೃತಿ ಜೊತೆಗೆ ಪರಿಸರ ಜಾಗೃತಿ ಮೂಡಿಸಿ ಪಟ್ನಾಯಕ್ ಅವರು ಜನರ ಮನ ಗೆದ್ದಿದ್ದಾರೆ.

  • ಮೋದಿ, ಅಭಿನಂದನ್, ಸಿಂಧು ಜೊತೆ ನಿಂತ ಗಣಪ

    ಮೋದಿ, ಅಭಿನಂದನ್, ಸಿಂಧು ಜೊತೆ ನಿಂತ ಗಣಪ

    ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಜಿಲ್ಲೆಯ ಕಲಾವಿದರೊಬ್ಬರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಮೈಸೂರಿನ ಕಲಾವಿದರಾದ ಕುಂಬಾರಗೇರಿಯ ರೇವಣ್ಣ ಹಲವು ಅವರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಹೊಸ ಪ್ರಯತ್ನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿಂಗ್ ಕಮಾಂಡರ್ ಅಭಿನಂದನ್, ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರೊಂದಿಗೆ ಗಣಪತಿ ನಿಂತಿರುವ ಮೂರ್ತಿಗಳನ್ನು ಕಲಾವಿದರು ಮಾಡಿದ್ದಾರೆ. ಮತ್ತೊಂದು ವಿನ್ಯಾಸದಲ್ಲಿ ಇತ್ತೀಚೆಗೆ ನಿಧನರಾದ ಬಿಜೆಪಿ ನಾಯಕರು ಅನಂತಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರ ಮೂರ್ತಿಗಳ ಜೊತೆ ಗಣಪ ನಿಂತಿರುವುದನ್ನು ಕೂಡ ಮಾಡಿದ್ದಾರೆ.

    ಇದಲ್ಲದೇ, ಸಿಎಂ ಯಡಿಯೂರಪ್ಪ ಹಾಗೂ ಈ ಬಾರಿಯ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರ ಜೊತೆಯೂ ಗಣಪ ನಿಂತಿರುವ ಪೂರ್ತಿಗಳು ಇವೆ. ಜೊತೆಗೆ ಶಿವನ ಹಸ್ತದ ಒಳಗೆ ಮೋದಿ ಧ್ಯಾನ ಸ್ಥಿತಿಯಲ್ಲಿ ಕೂತಿರುವಂತೆ ಒಂದು ಮೂರ್ತಿಯನ್ನು ಮಾಡಲಾಗಿದೆ. ಈ ವೈಶಿಷ್ಟ್ಯಪೂರ್ಣ ವಿನ್ಯಾಸಗಳು ಈಗ ಜನರ ಗಮನ ಸೆಳೆಯುತ್ತಿವೆ.

    ಈ ಬಗ್ಗೆ ಮಾತನಾಡಿದ ಕಲಾವಿದ ರೇವಣ್ಣ ಅವರು, ನಾನು ಸುಮಾರು 35 ವರ್ಷದಿಂದ ಮೈಸೂರಿನಲ್ಲಿ ಗೌರಿ, ಗಣಪತಿಯನ್ನು ತಯಾರಿ ಮಾಡಿಕೊಂಡು ಬಂದಿದ್ದೇನೆ. ಜೇಡಿ ಮಣ್ಣಿನಿಂದ ಪರಿಸರ ಸ್ನೇಹಿ ಗಣಪನನ್ನು ನಾನು ತಯಾರಿಸುತ್ತಾ ಬಂದಿದ್ದೇನೆ. ಕಳೆದ 20 ವರ್ಷದಿಂದ ನನ್ನದೇ ಪರಿಕಲ್ಪನೆಯಲ್ಲಿ ವಿಶೇಷ ವಿನ್ಯಾಸದ ಗಣಪತಿಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ ಎಂದರು.

    ನಾನು ಈ ಬಾರಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರವನ್ನು ಮನದಲ್ಲಿ ಇಟ್ಟುಕೊಂಡು ಗಣಪತಿಗಳನ್ನು ತಯಾರಿಸಿದ್ದೇನೆ ಎಂದು ಹೇಳಿದರು. ಜೊತೆಗೆ ತಮ್ಮ ದೇಶಕ್ಕೆ ಕೀರ್ತಿ ತಂದ ಹೆಮ್ಮೆಯ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಆಟಗಾರ್ತಿ ಪಿ.ವಿ ಸಿಂಧು ಅವರ ಮೂರ್ತಿಯೊಂದಿಗೆ ಕೂಡ ಗಣಪ ಇರುವ ಮೂರ್ತಿಯನ್ನು ರೇವಣ್ಣ ತಯಾರಿಸಿದ್ದಾರೆ.

  • ಗಣಪನನ್ನು ಕಾಯುತ್ತಿದ್ದ ಯುವಕ ವಿದ್ಯುತ್ ಶಾಕ್‍ಗೆ ಬಲಿ!

    ಗಣಪನನ್ನು ಕಾಯುತ್ತಿದ್ದ ಯುವಕ ವಿದ್ಯುತ್ ಶಾಕ್‍ಗೆ ಬಲಿ!

    ರಾಮನಗರ: ಬೀದಿಯಲ್ಲಿ ಕೂರಿಸಿದ್ದ ಗಣಪನನ್ನು ಕಾಯುತಿದ್ದ ಯುವಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಧಾರೂಣ ಘಟನೆ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ನಡೆದಿದೆ.

    ಚೇತನ್ ಕುಮಾರ್ (16) ಮೃತ ದುರ್ದೈವಿ. ಜಾಲಮಂಗಲದಲ್ಲಿ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಚೇತನ್ ಸೇರಿದಂತೆ ನಾಲ್ಕು ಮಂದಿ ಕಾವಲು ಕಾಯುತ್ತಿದ್ದರು. ಶನಿವಾರವೂ ಸಹ ಕಾವಲು ಕಾಯುತ್ತಿದ್ದಾಗ, ಮೂತ್ರ ವಿಸರ್ಜನೆಗೆಂದು ಚೇತನ್ ತೆರಳಿದ್ದನು. ಈ ವೇಳೆ ಬೀದಿ ಲೈಟ್‍ಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗಲು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಗಣಪತಿ ಹೆಸರಲ್ಲಿ ತುಂಡುಡುಗೆ ಡ್ಯಾನ್ಸ್!

    ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಗಣಪತಿ ಹೆಸರಲ್ಲಿ ತುಂಡುಡುಗೆ ಡ್ಯಾನ್ಸ್!

    ಚಾಮರಾಜನಗರ: ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಯುವತಿಯರು ತುಂಡು ಬಟ್ಟೆಯನ್ನು ಹಾಕಿ ನೃತ್ಯ ಮಾಡಿದ್ದರಿಂದ ಭಕ್ತರು ಮುಜುಗರಕ್ಕೆ ಒಳಗಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಲ್ಲಿ ಜರುಗಿದೆ.

    ಸೋಮವಾರ ರಾತ್ರಿ ಮಾದೇಶ್ವರ ಬೆಟ್ಟದಲ್ಲಿ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಆರ್ಕೆಸ್ಟ್ರಾವನ್ನು ಆಯೋಜಿಸಲಾಗಿತ್ತು. ಈ ವೇಳೆ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಿ ಗಿರ ಎಂದಿದೆ’ ಎಂಬ ಹಾಡು ಸೇರಿದಂತೆ ಇನ್ನೂ ಅನೇಕ ಹಾಡುಗಳಿಗೆ ಯುವತಿಯರು ತುಂಡು ಬಟ್ಟೆ ಧರಿಸಿ ನೃತ್ಯ ಮಾಡಿದ್ದಾರೆ.

    ಧಾರ್ಮಿಕ ನಂಬಿಕೆಗೆ ಹೆಸರುವಾಸಿಯಾಗಿರುವ ಮಹದೇಶ್ವರ ಬೆಟ್ಟದಲ್ಲಿ ಈ ರೀತಿಯ ಕಾರ್ಯಕ್ರಮ ನಡೆದಿರುವುದು ಭಕ್ತರಿಗೆ ಮುಜುಗರ ಉಂಟು ಮಾಡಿದೆ. ಅಷ್ಟೇ ಅಲ್ಲದೇ ಸೋಮವಾರ ಬೆಟ್ಟಕ್ಕೆ ಬಂದ ಭಕ್ತರು ಈ ದೃಶ್ಯವನ್ನು ಕಂಡು ಮಾದಪ್ಪನ ದರ್ಶನವನ್ನು ಪಡೆಯದೇ ಹೊರಟು ಹೋಗಿದ್ದಾರೆ.

    ಮಾದಪ್ಪನ ಸನ್ನಿಧಿಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಿರುವ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ಇದೀಗ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.