Tag: ಗಣಪತಿ ವಿಸರ್ಜನೆ

  • ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಮುಂಬೈ: ಗಣಪತಿ ವಿಸರ್ಜನೆ ಬಳಿಕ ಪುಣೆಯ ಮುನ್ಸಿಪಲ್ ಕಾರ್ಪೊರೆಷನ್(ಪಿಎಂಸಿ) ಘನತ್ಯಾಜ ಇಲಾಖೆ(ಎಸ್‌ಡಬ್ಲ್ಯುಎಂ) ನಗರದಲ್ಲಿ ಸುಮಾರು 21 ಟನ್‌ಗಳಷ್ಟು ಕಸವನ್ನು ಸಂಗ್ರಹಿಸಿದೆ. ಇದರಲ್ಲಿ ಸುಮಾರು 6 ಮಿನಿ ಟ್ರಕ್‌ಗಳಲ್ಲಿ ತುಂಬಲಾಗುವಷ್ಟು ಚಪ್ಪಲಿಗಳೇ ದೊರೆತಿವೆ ಎಂದು ವರದಿಯಾಗಿದೆ.

    ಪುಣೆಯಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹಬ್ಬ ಕಳೆದ ಬಳಿಕ ಸುಮಾರು 1,037 ಪಿಎಂಸಿ ಸಿಬ್ಬಂದಿ ಬೀದಿಗಿಳಿದು ಕಸವನ್ನು ಸಂಗ್ರಹಿಸಿದ್ದಾರೆ. ಸ್ವಚ್ಛ ಸಂಸ್ಥೆ, ಜನವಾಣಿ ಸಂಸ್ಥೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ, ರೋಟರಿ ಕ್ಲಬ್, ಮರಾಠವಾಡ ಕಾಲೇಜು ಹಾಗೂ ಇತರ ಸಂಸ್ಥೆಗಳ ಸುಮಾರು 650 ಸ್ವಯಂ ಸೇವಕರು ಈ ಸ್ವಚ್ಛ ನಗರ ಅಭಿಯಾನಕ್ಕೆ ಕೈ ಜೋಡಿಸಿದ್ದರು ಎಂದು ಎಸ್‌ಡಬ್ಲ್ಯುಎಂ ಉಪ ಆಯುಕ್ತ ಆಶಾ ರಾವತ್ ತಿಳಿಸಿದರು. ಇದನ್ನೂ ಓದಿ: ಕೊನೆಗೂ ತೇಜಸ್ವಿ ನಿವಾಸಕ್ಕೆ ತಲುಪಿತು ಕಾಂಗ್ರೆಸ್ ದೋಸೆ – ಡೆಲಿವರಿ ಬಾಯ್ ಪೊಲೀಸರ ವಶಕ್ಕೆ

    ಗಣಪತಿ ವಿಸರ್ಜನೆ ಮೆರವಣಿಗೆ ಲಕ್ಷ್ಮಿ ರಸ್ತೆ, ತಿಲಕ್ ರಸ್ತೆ, ಕುಮ್ಟೇಕರ್ ರಸ್ತೆ, ನಾರಾಯಣ ಪೇಠ ರಸ್ತೆ, ಬಾಜಿರಾವ್ ರಸ್ತೆ, ಶಿವಾಜಿ ರಸ್ತೆ, ಅಲ್ಕಾ ಚೌಕ್, ಖಂಡುಜಿ ಬಾಬಾ ಚೌಕ್, ಕರವೇ ರಸ್ತೆ, ಜಂಗ್ಲಿ ಮಹಾರಾಜ್ ರಸ್ತೆ, ಸೇನಾಪತಿ ಬಾಪಟ್ ರಸ್ತೆ, ಗಣೇಶಖಿಂಡ್ ರಸ್ತೆ, ಫರ್ಗುಸನ್ ಕಾಲೇಜು ರಸ್ತೆ, ಪ್ರಭಾತ್ ಮಾರ್ಗವಾಗಿ ಸಾಗಿದೆ ಎಂದು ವರದಿಗಳು ತಿಳಿಸಿವೆ.

    ಮೆರವಣಿಗೆ ಸಾಗಿದ ಪ್ರದೇಶದಲ್ಲಿ ಕಸ ಸಂಗ್ರಹಿಸಲು ಪಿಎಂಸಿ 9 ಕಾಂಪ್ಯಾಕ್ಟರ್‌ಗಳು, 13 ಸಣ್ಣ ವಾಹನಗಳು, 6 ಟೆಂಪೋಗಳು, 8 ಟಿಪ್ಪರ್‌ಗಳು ಮತ್ತು 8 ಇತರ ವಾಹನಗಳನ್ನು ಬಳಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕುಂಬಳಕಾಯಿ 47,000 ರೂ.ಗೆ ಹರಾಜು

    Live Tv
    [brid partner=56869869 player=32851 video=960834 autoplay=true]

  • ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

    ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

    ಹಾಸನ: ಗಣಪತಿ ವಿಸರ್ಜನೆ ವೇಳೆ ವ್ಯಕ್ತಿಯೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

    ಯತೀಶ್ (55) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯತೀಶ್ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ನೆಲಮಂಗಲದಲ್ಲಿ ಹೆದ್ದಾರಿಗೆ ನುಗ್ಗಿದ ನೀರು – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

    POLICE JEEP

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯತೀಶ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿ ಯತೀಶ್ ಶವಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಶಿರಾದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ

    ಶಿರಾದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ

    ತುಮಕೂರು: ಶಿರಾ ನಗರದ ಗವಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾ ಗಣಪತಿಯನ್ನು ಅದ್ಧೂರಿ ಮೆರವಣಿಗೆ ನಡೆಸಿ ಜಾಜಮ್ಮನ ಕಟ್ಟೆಯಲ್ಲಿ ವಿಸರ್ಜಿಸಲಾಯಿತು.

    ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಮೂರನೇ ದಿನವೇ ವಿಸರ್ಜನೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕೊರೊನಾ ನಿಯಮಾವಳಿಯಂತೆ ಮೆರವಣಿಗೆಗೆ ಅವಕಾಶವಿಲ್ಲ. ವಿಸರ್ಜನೆ ಸಮಯದಲ್ಲಿ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡುವುದಾಗಿ ಪೊಲೀಸರು ಷರತ್ತು ವಿಧಿಸಿದಾಗ ಹಿಂದೂ ಸಭಾದ ಕಾರ್ಯಕರ್ತರು ಇದನ್ನು ವಿರೋಧಿಸಿ ಗಣೇಶ ವಿಸರ್ಜನೆಯನ್ನು ಅನಿರ್ದಿಷ್ಟ ಕಾಲಕ್ಕೆ ಮುಂದೂಡಿದ್ದರು. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಗಣೇಶ ವಿಸರ್ಜನೆಯ ಮೆರವಣಿಗೆ ಸಮಯದಲ್ಲಿ ಡಿ.ಜೆಗೆ ಪೊಲೀಸರು ಅವಕಾಶ ನೀಡದಿದ್ದರೂ ಸಹ ಡ್ರಂ ಸೆಟ್ ಜೊತೆಯಲ್ಲಿ ಮೆರವಣಿಗೆ ಪ್ರಾರಂಭಿಸಿದರು. ಆದರೆ ಮೆರವಣಿಗೆಯ ಮಧ್ಯೆ ಡಿ.ಜೆಯನ್ನು ಸೇರಿಸಿಕೊಂಡು ಭಕ್ತರು ಸಂಭ್ರಮಿಸಲು ಪ್ರಾರಂಭಿಸಿದರು. ಸಂಜೆಯ ವೇಳೆಗೆ ಮೆರಣಿಗೆಯ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಅವರು ಡಿಜೆಗೆ ಅನುಮತಿ ನೀಡಲಿಲ್ಲ. ಅದನ್ನು ಬಂದ್ ಮಾಡಿ ಮೆರವಣಿಗೆ ಮುಂದುವರೆಸುವಂತೆ ಹೇಳಿದರು.

    ಈ ಸಮಯದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಮೆರವಣಿಗೆ ಸ್ಥಗಿತಗೊಳಿಸಲು ಮುಂದಾದ ಸಮಯದಲ್ಲಿ ಡಿ.ಜೆಗೆ ಮತ್ತೆ ಅವಕಾಶ ಮಾಡಿಕೊಡಲಾಯಿತು. ನಗರದ ವಿವಿಧ ರಸ್ತೆಗಳಲ್ಲಿ ದಿನಪೂರ್ತಿ ಮೆರವಣಿಗೆ ನಡೆಸಿ ಜಾಜಮ್ಮನ ಕಟ್ಟೆಯಲ್ಲಿ ವಿಸರ್ಜಿಸಲಾಯಿತು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

    ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಖಂಡರಾದ ಆರ್.ರಾಮು, ಆರ್.ರಾಘವೇಂದ್ರ, ಅಂಜಿನಪ್ಪ, ರೂಪೇಶ್ ಕೃಷ್ಣಯ್ಯ, ಭಾನುಪ್ರಕಾಶ್, ಬಿಜೆಪಿ ಅಧ್ಯಕ್ಷ ವಿಜಯರಾಜು ಅವರು ಮೆರವಣಿಗೆಯ ಪ್ರಾರಂಭದಲ್ಲಿ ಭಾಗವಹಿಸಿದ್ದರು.

  • ಆಭರಣ ಸಮೇತ ಗಣಪತಿಯನ್ನು ವಿಸರ್ಜಿಸಿ ಪೇಚಿಗೆ ಸಿಲುಕಿದ ಗ್ರಾಮಸ್ಥರು

    ಆಭರಣ ಸಮೇತ ಗಣಪತಿಯನ್ನು ವಿಸರ್ಜಿಸಿ ಪೇಚಿಗೆ ಸಿಲುಕಿದ ಗ್ರಾಮಸ್ಥರು

    ಕಾರವಾರ: ಚಿನ್ನದ ಉಂಗುರ ಹಾಗೂ ಬೆಳ್ಳಿ ಆಭರಣಗಳನ್ನು ಗಣಪತಿಯೊಂದಿಗೆ ಕೆರೆಯಲ್ಲಿ ವಿಸರ್ಜಿಸಿ, ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನರಹಳ್ಳಿಯಲ್ಲಿ ನಡೆದಿದೆ.

    ಇಂದು ವಿದ್ಯುಕ್ತವಾಗಿ ಗಣಪತಿಗೆ ಪೂಜೆ ಸಲ್ಲಿಸಿ ಸಮೀಪದ ಕೆರೆಗೆ ತಂದ ಗೊನೆಹಳ್ಳಿ ಗ್ರಾಮಸ್ಥರು, ದೇವರಿಗೆ ಹಾಕಿದ್ದ ಉಂಗುರ, ಬೆಳ್ಳಿ ಸರಪಳಿಯನ್ನು ತೆಗೆಯುವುದನ್ನು ಮರೆತಿದ್ದರು. ಈ ವೇಳೆ ಗಣಪತಿಯನ್ನು ಕೆರೆಯ ನಡುಭಾಗದಲ್ಲಿ ವಿಸರ್ಜಿಸಲಾಗಿತ್ತು. ನಂತರ ಮರಳಿ ಬಂದಾಗ ಗಣೇಶನಿಗೆ ಹಾಕಿದ್ದ ಆಭರಣಗಳು ಕಾಣದಾದಾಗ ತಾವು ಮಾಡಿದ ತಪ್ಪು ಅರಿವಾಗಿದೆ.  ಇದನ್ನೂ ಓದಿ: ಗಣೇಶ ಹಬ್ಬದ ಸಂಭ್ರಮದಲ್ಲಿ ಕುಚುಕು ಗೆಳೆಯರು

    ಕೆಲವರು ನೀರಿನಲ್ಲಿ ಮುಳಗಿ ಹುಡುಕುವ ಪ್ರಯತ್ನ ಮಾಡಿದರೂ ಕೈ ಚಲ್ಲಿ ಕೂರುವಂತಾಯಿತು. ನಂತರ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ್ ಎಂಬುವವರು ಸ್ಕೂಬಾ ಡೈ ಗೆ ಬಳಸುವ ಪರಿಕರ ಬಳಸಿ ನೀರಿನಲ್ಲಿ ಮುಳಗಿ ಕೊನೆಗೂ ಗಣಪತಿಯೊಂದಿಗೆ ವಿಸರ್ಜಿಸಿದ ಆಭರಣಗಳನ್ನು ತೆಗೆದುಕೊಟ್ಟಿದ್ದಾರೆ. ಇದನ್ನೂ ಓದಿ:ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

  • ಗಣಪತಿ ವಿಸರ್ಜನೆ ವೇಳೆ ಹಾಡಿ ರಂಜಿಸಿದ ಮಸಾಲೆ ಜಯರಾಮ್, ಜಗ್ಗೇಶ್

    ಗಣಪತಿ ವಿಸರ್ಜನೆ ವೇಳೆ ಹಾಡಿ ರಂಜಿಸಿದ ಮಸಾಲೆ ಜಯರಾಮ್, ಜಗ್ಗೇಶ್

    ತುಮಕೂರು: ಗಣೇಶ ವಿಸರ್ಜನೆ ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಹಾಗೂ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಗಣ್ಯರು ತಮ್ಮ ಕಂಠಸಿರಿ ಮೂಲಕ ಹಾಡಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಜಗ್ಗೇಶ್ ಅವರು ಕನ್ನಡ ಸಿನಿಮಾದ ‘ಬಾರೇ ಬಾರೇ’ ಎಂಬ ಹಾಡನ್ನು ಹಾಡಿದರೆ, ಮಸಾಲೆ ಜಯರಾಮ್ ರಾಮನ ಅವತಾರ ಹಾಡನ್ನ ಹಾಡಿ ನೆರೆದವರು ತಲೆದೂಗುವಂತೆ ಮಾಡಿದ್ದಾರೆ.

    ಇಬ್ಬರೂ ಗಣ್ಯರು ತಲಾ ಎರಡೆರಡು ಹಾಡನ್ನ ಹಾಡಿದ್ದು, ಸುಮಾರು ಅರ್ಧಗಂಟೆಗಳ ಕಾಲ ಅಭಿಮಾನಿಗಳನ್ನು ರಂಜಿಸಿದರು. ಇಬ್ಬರು ನಾಯಕರ ಹಾಡಿಗೆ ತಲೆದೂಗಿದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದು ಒನ್ಸ್ ಮೋರ್ ಒನ್ಸ್ ಮೋರ್ ಎಂದು ಕೂಗಿದರು. ಮಸಾಲೆ ಜಯರಾಮ್ ಮೂಲತಃ ನಾಟಕ ಕಲಾವಿದರಾಗಿದ್ದರಿಂದ ಹಾಡು ಹಾಡಿದ ಅನುಭವ ಇತ್ತು. ಹೀಗಾಗಿ ಜಗ್ಗೇಶ್ ಅವರಿಗೆ ಜಯರಾಮ್ ಅವರು ಖುಷಿಯಿಂದ ಕಾರ್ಯಕ್ರಮದಲ್ಲಿ ಸಾಥ್ ನೀಡಿದರು.

  • ಪೊಲೀಸ್ ಸರ್ಪಗಾವಲಿನಲ್ಲಿ ಗಣಪತಿ ಶೋಭಾ ಯಾತ್ರೆ ಆರಂಭ

    ಪೊಲೀಸ್ ಸರ್ಪಗಾವಲಿನಲ್ಲಿ ಗಣಪತಿ ಶೋಭಾ ಯಾತ್ರೆ ಆರಂಭ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂದು ಪೊಲೀಸ್ ಸರ್ಪಗಾವಲಿನಲ್ಲಿ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ ಆರಂಭವಾಗಿದೆ. ವಿದ್ಯಾಗಣಪತಿ ಮೆರವಣಿಗೆಗೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

    ಮೂರು ದಶಕಗಳ ಹಿಂದೆ ಗಣಪತಿ ವಿಸರ್ಜನಾ ಮಹೋತ್ಸವದ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಕೆಲ ದಿನಗಳ ನಂತರ ಪೊಲೀಸರೇ ಗಣಪತಿ ವಿಸರ್ಜನೆ ಮಾಡಿದ್ದರು. ಅಂದಿನಿಂದ ವಿಸರ್ಜನಾ ಮಹೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿಕೊಂಡು ಬರಲಾಗುತ್ತಿದೆ.

    ಮೆರವಣಿಗೆ ಸಂದರ್ಭದಲ್ಲಿ ಎಲ್ಲೆಲ್ಲೂ ಪೊಲೀಸರೇ ಕಾಣಿಸುತ್ತಾರೆ. ಹಾಗಾಗಿ ಇದಕ್ಕೆ ‘ಪೊಲೀಸ್ ಗಣಪತಿ’ ಎಂಬ ಖ್ಯಾತಿಯೂ ಇದೆ. ನಗರದ ರಥದ ಬೀದಿಯಿಂದ ಶೋಭಾ ಯಾತ್ರೆ ಆರಂಭಗೊಂಡಿದ್ದು, ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯುತ್ತಿದೆ.

    ಮಹಿಳಾ ವೀರಗಾಸೆ, ಕಂಸಾಳೆ, ಚಂಡೆಮದ್ದಳೆ, ಪೂಜಾ ಕುಣಿತ, ಗೊರವರ ಕುಣಿತ ಮೊದಲಾದ ಜಾನಪದ ಕಲಾ ತಂಡಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಶೋಭಾ ಯಾತ್ರೆ ದೊಡ್ಡರಸನಕೊಳದಲ್ಲಿ ಅಂತ್ಯಗೊಳ್ಳಲ್ಲಿದ್ದು ಇಂದು ಮಧ್ಯೆರಾತ್ರಿ ವೇಳೆಗೆ ವಿದ್ಯಾಗಣಪತಿ ವಿಸರ್ಜನೆ ನಡೆಯಲಿದೆ.

  • ಗಣಪತಿ ವಿಸರ್ಜನೆ ವೇಳೆ ಪೊಲೀಸರ 27 ಮೊಬೈಲ್ ಕದ್ದ ಕಳ್ಳರು

    ಗಣಪತಿ ವಿಸರ್ಜನೆ ವೇಳೆ ಪೊಲೀಸರ 27 ಮೊಬೈಲ್ ಕದ್ದ ಕಳ್ಳರು

    ಶಿವಮೊಗ್ಗ: ಹಿಂದೂ ಮಹಾಸಭಾದ ಗಣಪತಿ ವಿಸರ್ಜನೆಯ ಬಂದೋಬಸ್ತ್ ಗೆ ಹೊರ ಜಿಲ್ಲೆಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿಯವರಿಗೆ ನಗರದ ಆರ್ ಎಂ ಎಲ್ ಕಲ್ಯಾಣ ಮಂದಿರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಕಳ್ಳರು ಅವರ ಮೊಬೈಲ್ ಕದ್ದಿದ್ದಾರೆ.

    ಪೊಲೀಸರು ಮಲಗಿದ್ದ ವೇಳೆ ಬೆಳಗಿನ ಜಾವ 3 ರಿಂದ 4 ಗಂಟೆ ಸಮಯದಲ್ಲಿ 27 ಮೊಬೈಲ್ ಹಾಗೂ 25 ಸಾವಿರ ನಗದನ್ನು ಕಳ್ಳರು ಅಪಹರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ತಮ್ಮ ಮೊಬೈಲ್‍ಗಳನ್ನು ಕಳೆದುಕೊಂಡ ಪೊಲೀಸರೇ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೊಬೈಲ್ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

    ಮೊಬೈಲ್ ಕಳ್ಳರ ಜಾಲವೇ ಈ ಕಳ್ಳತನದ ಹಿಂದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಚಾಣಾಕ್ಷ ಕಳ್ಳರು ಬೆಲೆಬಾಳುವ ಸ್ಮಾರ್ಟ್ ಫೋನ್‍ಗಳನ್ನು ಮಾತ್ರ ಕಳವು ಮಾಡಿದ್ದು ಬೇಸಿಕ್ ಸೆಟ್‍ಗಳನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಅಲ್ಲದೇ ಪೊಲೀಸರ ಮೊಬೈಲ್‍ಗಳೇ ಕಳುವಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

  • ಹಬ್ಬಕ್ಕೆ ರಜೆ ಪಡೆದು ಗ್ರಾಮಕ್ಕೆ ಬಂದಿದ್ದ ಯೋಧ ಗಣಪತಿ ವಿಸರ್ಜನೆ ವೇಳೆ ನೀರುಪಾಲು

    ಹಬ್ಬಕ್ಕೆ ರಜೆ ಪಡೆದು ಗ್ರಾಮಕ್ಕೆ ಬಂದಿದ್ದ ಯೋಧ ಗಣಪತಿ ವಿಸರ್ಜನೆ ವೇಳೆ ನೀರುಪಾಲು

    ಹಾಸನ: ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಯೋಧರೊಬ್ಬರು ನೀರು ಪಾಲಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

    ದ್ಯಾವಲಾಪುರ ಗ್ರಾಮದ ಕೆರೆಯ ಬಳಿ ಈ ಘಟನೆ ನಡೆದಿದೆ. ಯೋಧ ಲೋಕೇಶ್ ಮೃತ ದುರ್ದೈವಿಯಾಗಿದ್ದು, ಇವರು ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದಾರೆ. ಸದ್ಯ ಶವವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಸಹಾಯದೊಂದಿಗೆ ಹೊರತೆಗೆಯಲಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಹಬ್ಬಕ್ಕಾಗಿ ರಜೆ ಪಡೆದು ಗ್ರಾಮಕ್ಕೆ ಬಂದಿದ್ದ ಲೋಕೇಶ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದೀಗ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಜಿಲ್ಲೆಯಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಎರಡನೇ ಅವಘಡವಾಗಿದ್ದು ನಿನ್ನೆ ಚನ್ನರಾಯಪಟ್ಟಣದ ಶೆಟ್ಟಿಗೌಡನಹಳ್ಳಿ ಹರೀಶ್ ಎಂಬ ಯುವಕ ಮೃತಪಟ್ಟಿದ್ದರು.