Tag: ಗಣಪ

  • ಚಂದ್ರಯಾನ ಮಾಡಿದ ಗಣಪ – ಮಣಿಪಾಲದಲ್ಲಿ ಇಸ್ರೋ ಸಾಧನೆ ಸ್ಮರಣೆ

    ಚಂದ್ರಯಾನ ಮಾಡಿದ ಗಣಪ – ಮಣಿಪಾಲದಲ್ಲಿ ಇಸ್ರೋ ಸಾಧನೆ ಸ್ಮರಣೆ

    ಉಡುಪಿ: ವಿಘ್ನ ವಿನಾಶಕನನ್ನು ನೂರೆಂಟು ಆಕಾರಗಳಲ್ಲಿ ಆರಾಧನೆ ಮಾಡಲಾಗುತ್ತದೆ. ದೇವಾಲಯಗಳ ನಗರಿ ಉಡುಪಿಯಲ್ಲಿ (Udupi) ವಿಭಿನ್ನ ಗಣಪತಿ (Chandrayaan-3) ಆರಾಧನೆ ನಡೆಯುತ್ತಿದೆ.

    ಮಣಿಪಾಲದ (Manipal) ವೇಣುಗೋಪಾಲ ದೇವಸ್ಥಾನದಲ್ಲಿ ಚಂದ್ರಯಾನ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ರಾಘವೇಂದ್ರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಕಲಾವಿದರಾದ ಶ್ರೀನಾಥ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರ ಕಲ್ಪನೆಯಲ್ಲಿ ಈ ವಿಭಿನ್ನ ಗಣಪತಿ ಮೂಡಿ ಬಂದಿದೆ. ಚಂದ್ರಯಾನ ಗಣಪತಿ ದೇವಸ್ಥಾನಕ್ಕೆ ಬರುವ ಭಕ್ತರನ್ನು ಸೆಳೆಯುತ್ತಿದೆ. ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್

    ಗಣಪನ ಬಲಗಡೆ ಭೂಮಿ ಮತ್ತು ಎಡಗಡೆ ಚಂದ್ರನ ಮಾದರಿ ಮಾಡಲಾಗಿದೆ. ಭೂಮಿಯಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನೆಡೆಗೆ ಹೊರಟಂತೆ ಮಾದರಿಯನ್ನು ರೂಪಿಸಲಾಗಿದೆ. ಇದರ ಜೊತೆಗೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯು ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿದ್ದ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ರೋವರ್‌ ಉತ್ತಮ ರೀತಿಯಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿವೆ. ಇದನ್ನೂ ಓದಿ: ವರುಣಾ ಕ್ಷೇತ್ರದ ಮತದಾರರಿಗೆ ಎಲೆಕ್ಷನ್ ವೇಳೆ ಉಡುಗೊರೆ ಕೊಟ್ಟಿದ್ರು ಸಿದ್ದು – ತಂದೆ ಗಿಫ್ಟ್‌ ಬಗ್ಗೆ ಯತೀಂದ್ರ ಮಾಹಿತಿ

    ಇಸ್ರೋದ ಈ ಮಹತ್ತರ ಸಾಧನೆಗೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಜ್ಞಾನ ಲೋಕದಲ್ಲಿ ಇದೊಂದು ಐತಿಹಾಸಿಕ ಸಾಧನೆ ಎಂದು ಕೊಂಡಾಡಿವೆ. ಇದರ ಬೆನ್ನಲ್ಲೇ ಈಗ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್‌1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅರಳಿಮರದಲ್ಲಿ ಮೂಡಿದ ಗಣೇಶ ಮೂರ್ತಿ – ಮೈಸೂರಲ್ಲೊಂದು ವಿಸ್ಮಯ!

    ಅರಳಿಮರದಲ್ಲಿ ಮೂಡಿದ ಗಣೇಶ ಮೂರ್ತಿ – ಮೈಸೂರಲ್ಲೊಂದು ವಿಸ್ಮಯ!

    ಮೈಸೂರು: ಆರು ವರ್ಷಗಳ ಹಿಂದೆ ಮಳೆ ಬಂದು ಊರೆಲ್ಲಾ ಜಲಾವೃತವಾಗಿ, ಊರಿನ ದೇವಾಲಯವು ಬಿದ್ದು ಹೋಗಿತ್ತು. ಆದರೆ ಗರ್ಭಗುಡಿಯಲ್ಲಿದ್ದ ಗಣೇಶ ವಿಗ್ರಹಕ್ಕೆ ಮಾತ್ರ ಏನೂ ಆಗಿರಲಿಲ್ಲ. ಇಂತಹ ಅಚ್ಚರಿ ನಡೆದಿದ್ದ ದೇವಸ್ಥಾನದಲ್ಲಿ ಈಗ ಮತ್ತೊಂದು ಅಚ್ಚರಿ ನಡೆದಿದೆ. ಗಣೇಶ ದೇವಾಲಯದ ಹಿಂಬದಿಯ ಮರದಲ್ಲಿ ಗಣೇಶ ಮೂರ್ತಿ ಉದ್ಭವವಾಗಿದೆ.

    ನಗರದ ಕನಕಗಿರಿ ಬಡಾವಣೆಯಲ್ಲಿ ಒಂದು ಗಣಪತಿ ದೇವಾಲಯ ಇದೆ. ಅಲ್ಲಿ ಅರಳಿ ಮರದಲ್ಲಿ ಗಣೇಶನ ಮೂರ್ತಿ ಉದ್ಭವವಾಗಿದೆ. ಉದ್ಭವ ಮೂರ್ತಿಯನ್ನು ನೋಡಲು ಸಾಲು ಸಾಲು ಭಕ್ತರು ಬರುತ್ತಿದ್ದು, ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ಸಂಕಷ್ಟ ಚರ್ತುರ್ಥಿಯಂದು ಅರ್ಚಕರ ಕಣ್ಣಿಗೆ ಬಿದ್ದಿರುವ ಈ ಗಣಪನಲ್ಲಿ ಅದೇನೋ ವಿಶೇಷ ಶಕ್ತಿ ಇದೆ ಅನ್ನೋದು ಸ್ಥಳೀಯರ ಮಾತಾಗಿದೆ.

    ಅರಳಿಮರದ ಕೆಳಭಾಗದಲ್ಲಿ ಮೂಡಿರುವ ಮರದ ಬೇರುಗಳು ಸಂಪೂರ್ಣ ಗಣೇಶ ಮೂರ್ತಿಯ ಆಕಾರ ಹೊಂದಿದೆ. ಸೊಂಡಿಲು, ಕಣ್ಣು, ಕಿವಿ ಹೊಂದಿರುವ ಈ ಬೇರು ಗಣೇಶ ಮೂರ್ತಿಯಾಗಿ ಮೂಡಿದೆ. ಉದ್ಭವಮೂರ್ತಿ ಗಣಪನಿಗೆ ಅರಿಶಿನ ಕುಂಕುಮವನ್ನು ಜನರು ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮೈತ್ರಿ ಹೇಳುತ್ತಾರೆ.

    ಈ ದೇವಾಲಯದ ಹಿನ್ನೆಲೆಯೂ ಈ ಮೂರ್ತಿಯ ಉದ್ಭವಕ್ಕೆ ಕಾರಣವಾ ಅನ್ನೋ ಮಾತು ಕೇಳಿ ಬಂದಿದೆ. 6 ವರ್ಷಗಳ ಹಿಂದೆ ಕನಕಗಿರಿಯಲ್ಲಿ ಭಾರಿ ಮಳೆಗೆ ಮನೆಗಳು ಜಲಾವೃತವಾಗಿ, ಇಲ್ಲಿದ್ದ ಗಣೇಶ ದೇವಾಲಯವು ಬಿದ್ದು ಹೋಗಿತ್ತು. ಆದರೆ ಗರ್ಭ ಗುಡಿಯಲ್ಲಿನ ಗಣೇಶ ಮೂರ್ತಿಗೆ ಏನೂ ಆಗಿರಲಿಲ್ಲ. ಈಗ ಇದೇ ದೇವಸ್ಥಾನದಲ್ಲಿ ಮತ್ತೊಂದು ಅಚ್ಚರಿ ಸೃಷ್ಟಿಯಾಗಿದೆ ಎಂದು ಸ್ಥಳೀಯ ರವಿ ಅವರು ತಿಳಿಸಿದ್ದಾರೆ.