Tag: ಗಡ್ಡಪ್ಪ

  • ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ

    ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ

    ತಿಥಿ ಚಿತ್ರ ಖ್ಯಾತಿಯ ಸೆಂಚ್ಯುರಿ ಗೌಡ ಮತ್ತು ಗಡ್ಡಪ್ಪ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರದ್ದೇ ಪ್ರಧಾನ ಭೂಮಿಕೆ ಇರುವ ಹಲವು ಚಿತ್ರಗಳು ತೆರೆ ಕಂಡಿವೆ. ತಿಥಿಯ ಹೊರತಾಗಿ ಬಹುತೇಕ ಚಿತ್ರಗಳು ಇವರನ್ನು ಕಾಮಿಡಿ ಪೀಸ್ ಗಳಂತೆಯೇ ಬಳಸಿಕೊಂಡಿದ್ದರಿಂದ ಅವರಿಗೂ ಸ್ವತಃ ಬೇಸರವಾಗಿತ್ತು. ಹಾಗಾಗಿ ಚಿತ್ರರಂಗದಿಂದ ಕೆಲ ತಿಂಗಳಿಂದ ದೂರವಿದ್ದರು. ಇದನ್ನೂ ಓದಿ : ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು

    ಇದೀಗ ಮತ್ತೆ ಗಡ್ಡಪ್ಪ ಹಾಗೂ ಸೆಂಚ್ಯುರಿ ಗೌಡ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ, ಅವರು ಈ ಬಾರಿ ಸಿನಿಮಾದಲ್ಲಿ ನಟಿಸುತ್ತಿಲ್ಲ ಕಿರುತೆರೆ ಜಗತ್ತಿಗೆ ಹಾರಿ ಬಂದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಚಿತ್ರದಲ್ಲಿ ಅವರು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಇವರ ನಟನೆಯ ಎಪಿಸೋಡ್ ಕೂಡ ಪ್ರಸಾರವಾಗಿದೆ. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

    ತಿಥಿ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಪರಿಚಯವಾದವರು ಸೆಂಚ್ಯುರಿ ಗೌಡ ಮತ್ತು ಗಡ್ಡಪ್ಪ. ಜೀವನದಲ್ಲಿ ಯಾವತ್ತೂ ನಟಿಸಿದ ಈ ಇಳಿವಯಸ್ಸಿನ ಕಲಾವಿದರು, ಮೊದಲ ಸಿನಿಮಾದಲ್ಲಿಯೇ ನೈಜವಾಗಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಇಡೀ ಚಿತ್ರಜಗತ್ತಿಗೆ ಪರಿಚಯವಾದರು. ಆನಂತರ ಬಂದ ಅವರ ಸಿನಿಮಾಗಳು ಪ್ರೇಕ್ಷಕರಿಗೂ ತಲುಪಲಿಲ್ಲ, ಯಶಸ್ಸೂ ಕಾಣಲಿಲ್ಲ. ಆದರೂ, ಹಲವು ಚಿತ್ರಗಳಲ್ಲಿ ನಟಿಸಿದರು. ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

    ಇದೀಗ ಕಿರುತೆರೆಗೆ ಬರುವ ಮೂಲಕ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ. ಎಷ್ಟು ಕಂತುಗಳಲ್ಲಿ ಇವರು ಇರಲಿದ್ದಾರೆ ಎನ್ನುವುದೇ ಕುತೂಹಲ.

  • ‘ನಾನು ಸುಮಲತಾಗೆ ಮತ ಹಾಕೋದು’ – ಗಡ್ಡಪ್ಪ ಭೇಟಿ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್!

    ‘ನಾನು ಸುಮಲತಾಗೆ ಮತ ಹಾಕೋದು’ – ಗಡ್ಡಪ್ಪ ಭೇಟಿ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್!

    ಮಂಡ್ಯ: ಲೋಕಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ ಮುಂದುವರಿಸಿದ್ದು, ಇಂದು ತಿಥಿ ಸಿನಿಮಾದ ನಟ ಗಡ್ಡಪ್ಪರನ್ನು ಭೇಟಿ ಮಾಡಿದರು.

    ಹೌದು. ನೊದೆಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪರನ್ನು ಭೇಟಿ ಮಾಡಿದ ನಟ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು. ಅಲ್ಲದೆ ನೀವೇ ಸ್ಟಾರ್ ಎಂದು ಈಗ ಯಾವ ಸಿನಿಮಾ ಮಾಡುತ್ತಿದ್ದೀರಿ ಎಂದು ಕೇಳಿದ್ರು. ಜೊತೆಗೆ ಹಾರ ಹಾಕಿ ಸನ್ಮಾನ ಮಾಡಿದ್ರು.

    ದರ್ಶನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಡಪ್ಪ, ದರ್ಶನ್ ಭೇಟಿ ಮಾಡಿದ್ದು ಬಹಳ ಸಂತೋಷ ತಂದಿದೆ. ಸುಮಲತಾ ಪರ ಮತ ಹಾಕಲು ದರ್ಶನ್ ಹೇಳಿದ್ರು. ನಾನು ಸುಮಲತಾ ಅವರಿಗೇ ಮತ ಹಾಕೋದು. ನಮ್ಮೂರಲ್ಲಿ ಮುಕ್ಕಾಲು ಭಾಗ ಸುಮಲತಾರಿಗೆ ಮತ ಹಾಕುತ್ತಾರೆ. ಉಪೇಂದ್ರ ಕೂಡ ನಮ್ಮೂರಿಗೆ ಬಂದಿದ್ದರು. ಆಗ ಅವರು ಕೂಡ ಮತ ಹಾಕುವಂತೆ ಕೇಳಿಕೊಂಡಿದ್ದರು. ಆದ್ರೆ ನಾವೆಲ್ಲ ಸುಮಲತಾರಿಗೆ ವೋಟು ಹಾಕೋದು ಅಂದ್ರು.

    ಒಟ್ಟಿನಲ್ಲಿ ಪ್ರಚಾರಕ್ಕೆ ನಾಲ್ಕು ದಿನ ಬಾಕಿ ಇರುವಂತೆ ದರ್ಶನ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮುಂದುವರಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ರಾಗಿಮುದ್ದನಹಳ್ಳಿ, ಯಲಿಯೂರು, ಕೊತ್ತತ್ತಿ, ತಗ್ಗಹಳ್ಳಿ, ಕಿರಗಂದೂರು ಸೇರಿದಂತೆ 35 ಹಳ್ಳಿಗಳಲ್ಲಿ ದಚ್ಚು ರೋಡ್ ಶೋ ಕೈಗೊಂಡಿದ್ದಾರೆ. ಈ ವೇಳೆ ನೊದೆಕೊಪ್ಪಲು ಗ್ರಾಮದಲ್ಲಿ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪರನ್ನು ನಟ ಭೇಟಿ ಮಾಡಿದ್ರು.

    ಇತ್ತ ಎರಡು ದಿನಗಳ ಶೂಟಿಂಗ್ ವಿರಾಮ ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತೆ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಗಮಂಗಲ ತಾಲೂಕಿನ ಕೀಳಘಟ್ಟ, ಚಿಕ್ಕೋನಹಳ್ಳಿ, ಕೊಪ್ಪ, ಹೊಸಗಾವಿ, ದೇವಲಾಪುರ ಸೇರಿದಂತೆ 20 ಹಳ್ಳಿಗಳಲ್ಲಿ ಯಶ್ ಭರ್ಜರಿ ರೋಡ್ ಶೋ ಕೈಗೊಂಡಿದ್ದಾರೆ. ರಾತ್ರಿ ಬಂದು ತಟ್ಟುವವರನ್ನ ಸೇರಿಸಬೇಡಿ, ನಾವು ಹಗಲು ನಿಮ್ಮ ಮನಮುಟ್ಟೋ ಕೆಲಸ ಮಾಡ್ತಿದ್ದೀವಿ. ದಯವಿಟ್ಟು ಆಶೀರ್ವಾದ ಮಾಡಿ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಯಶ್ ಟಾಂಗ್ ಕೊಟ್ರು.

  • ತಿಥಿ ಚಿತ್ರದ ಗಡ್ಡಪ್ಪ ಆರೋಗ್ಯ ಸ್ಥಿರ

    ತಿಥಿ ಚಿತ್ರದ ಗಡ್ಡಪ್ಪ ಆರೋಗ್ಯ ಸ್ಥಿರ

    ಮಂಡ್ಯ: ಕೆಲ ಕಿಡಿಗೇಡಿಗಳು ತಿಥಿ ಚಿತ್ರದ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಗಡ್ಡಪ್ಪ ಸಂಬಂಧಿಯೊಬ್ಬರು, ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.

    ಗಡ್ಡಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಚೇತರಿಸಿಕೊಂಡಿದ್ದು, ಪಾರ್ಶ್ವವಾಯು ಸಮಸ್ಯೆಯಿಂದಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರು ಚನ್ನಾಗಿದ್ದಾರೆ ಅಭಿಮಾನಿಗಳು ಸುಳ್ಳು ಸುದ್ದಿ ನಂಬಬೇಡಿ ಎಂದು ಗಡ್ಡಪ್ಪ ಅವರ ಸಂಬಂಧಿ ಯಶವಂತ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಗಡ್ಡಪ್ಪ ಅವರ ಜೊತೆಗೆ ನಿಂತು ಅಭಿಮಾನಿಗಳಿಗೆ ಯಶವಂತ ಸ್ಪಷ್ಟನೆ ನೀಡಿದ್ದಾರೆ. ಈ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು, ವಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಮಂಡ್ಯ ತಾಲೂಕಿನ ನೊದೇಕೊಪ್ಪಲು ಗ್ರಾಮದವರಾದ ಚನ್ನೇಗೌಡ ಅವರು ಗಡ್ಡಪ್ಪ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದ್ದರು. ತಿಥಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಗಡ್ಡಪ್ಪ ಅವರು ಡಿಸೆಂಬರ್ 24ರಂದು ಪಾರ್ಶ್ವವಾಯು ಸಮಸ್ಯೆ ತುತ್ತಾಗಿದ್ದರು. ಇದರಿಂದಾಗಿ ಅವರನ್ನು ಕುಟುಂಬಸ್ಥರು ಪಾಂಡವಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಸಿಗೆ ಹಿಡಿದ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ

    ಹಾಸಿಗೆ ಹಿಡಿದ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ

    ಮಂಡ್ಯ: ತಿಥಿ ಸಿನೆಮಾ ಖ್ಯಾತಿಯ ಗಡ್ಡಪ್ಪ ಅನಾರೋಗ್ಯ ಪೀಡಿತರಾಗಿದ್ದು, ಹಾಸಿಗೆ ಹಿಡಿದಿದ್ದಾರೆ.

    ಮಂಡ್ಯ ತಾಲೂಕಿನ ನೊದೇಕೊಪ್ಪಲು ಗ್ರಾಮದವರಾದ ಚನ್ನೇಗೌಡ ಅವರು ಗಡ್ಡಪ್ಪ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ತಿಥಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಗಡ್ಡಪ್ಪ ಅವರಿಗೆ ನಾಲ್ಕು ದಿನಗಳ ಹಿಂದೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅವರಿಗೆ ಮಾತನಾಡಲೂ ಕೂಡ ಕಷ್ಟ ಆಗಿದೆ.

    ಮೊದಲೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಗಡ್ಡಪ್ಪ ಅವರ ಆರೋಗ್ಯದಲ್ಲಿ ಏರುಪೇರಾದ್ದರಿಂದ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಗಡ್ಡಪ್ಪಗೆ ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಗಡ್ಡಪ್ಪಗೆ ಚಿಕಿತ್ಸೆ ನೀಡಿರುವ ವೈದ್ಯರು ಬೆಡ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ಗಡ್ಡಪ್ಪಗೆ ಸಂಬಂಧಿಕರು ಔಷಧೋಪಚಾರ ಮಾಡುತ್ತಿದ್ದಾರೆ.

    ತಿಥಿ ಸಿನಿಮಾವನ್ನು ಈರೇಗೌಡ ಕಥೆ ರಚಿಸಿ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಅಷ್ಟೇ ಅಲ್ಲದೇ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ ‘ತಿಥಿ’ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv