Tag: ಗಡಿ

  • ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

    ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

    ನವದೆಹಲಿ: ಭಾರತದಿಂದ ತೆರಳಿದ ತನ್ನ ಪ್ರಜೆಗಳನ್ನು ತಾನು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ತಾನ (Pakistan) ಹೇಳಿದೆ.

    ಹೌದು. ಪಹಲ್ಗಾಮ್‌ ದಾಳಿಯ (Pahalgam Terror Attack) ಬಳಿಕ ಭಾರತದ ಗೃಹ ಸಚಿವಾಲಯ ಭಾರತದಲ್ಲಿರುವ ಪಾಕ್‌ ಪ್ರಜೆಗಳು ಭಾರತ ತೊರೆಯಬೇಕು. ಪಾಕ್‌ನಲ್ಲಿರುವ ಭಾರತೀಯರು ಕೂಡಲೇ ದೇಶಕ್ಕೆ ಮರಳಬೇಕು ಎಂದು ಸೂಚಿಸಿತ್ತು.


    ಈ ಸೂಚನೆಯ ಬೆನ್ನಲ್ಲೇ ಭಾರತದಲ್ಲಿರುವ ಪಾಕ್‌ ಪ್ರಜೆಗಳು ದೇಶಕ್ಕೆ ಮರಳುತ್ತಿದ್ದರು. ಆದರೆ ಈಗ ಗಡಿಯಲ್ಲೇ ಪಾಕ್‌ ತನ್ನ ದೇಶದ ಪ್ರಜೆಗಳನ್ನು ತಡೆ ಹಿಡಿದಿದೆ. ವಾಘಾದಲ್ಲಿ ತನ್ನ ಗಡಿಯನ್ನು (Wagah Attari Border) ಸಂಪೂರ್ಣವಾಗಿ ಮುಚ್ಚಿರುವುದರಿಂದ ಪಾಕ್‌ ಪ್ರಜೆಗಳು ಅಟ್ಟಾರಿ-ವಾಘಾ ಕ್ರಾಸಿಂಗ್‌ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್‌ ನಟಿ ಕೆಂಡಾಮಂಡಲ

    ಗಡಿ ಮುಚ್ಚಲ್ಪಟ್ಟ ನಂತರ, ಗುರುವಾರ ಎರಡೂ ದೇಶಗಳಿಂದ ಯಾರೂ ಇನ್ನೊಂದು ಬದಿಗೆ ದಾಟಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಪಣ – ಸೈಲೆಂಟ್ ಪ್ಲ್ಯಾನಿಂಗ್, ಮೋದಿ ನಿಗೂಢ ನಡೆ

    ನಾನು ಬೆಳಿಗ್ಗೆ 6 ಗಂಟೆಗೆ ನನ್ನ ಸಹೋದರಿಯರೊಂದಿಗೆ ಇಲ್ಲಿಗೆ ಬಂದೆ. ಬೆಳಿಗ್ಗೆ 10 ಗಂಟೆಗೆ ಗಡಿ ತೆರೆಯುತ್ತದೆ ಎಂದು ಅಧಿಕಾರಿಗಳು ಹೇಳಿದರು. ಆದರೆ 11 ಗಂಟೆಯಾದರೂ ಗಡಿಯನ್ನು ತೆರೆಯಲಿಲ್ಲ. ಯಾಕೆ ಗೇಟ್‌ ತೆಗೆಯುತ್ತಿಲ್ಲ ಎಂದು ಕೇಳಿದ್ದಕ್ಕೆ ಪಾಕ್‌ ಅಧಿಕಾರಿ, ಭಾರತದಿಂದ ಪಾಕಿಸ್ತಾನಕ್ಕೆ ಮರಳದಂತೆ ಸರ್ಕಾರ ಆದೇಶ ನೀಡಿದೆ ಎಂದು ಹೇಳಿದರು ಎಂಬುದಾಗಿ ವ್ಯಕ್ತಿಯೊಬ್ಬರು ತಿಳಿಸಿದರು.

    ಬುಧವಾರ 125 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತೊರೆದಿದ್ದರು. ಈ ಮೂಲಕ ಒಂದು ವಾರದಲ್ಲಿ ಒಟ್ಟು 911 ಮಂದಿ ಪಾಕ್‌ಗೆ ಮರಳಿದ್ದರು.

    ಒಂದು ವಾರದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಒಟ್ಟು 1,1617 ಭಾರತೀಯರು ಮತ್ತು ದೀರ್ಘಾವಧಿಯ ಭಾರತೀಯ ವೀಸಾ ಹೊಂದಿರುವ 224 ಮಂದಿ ಭಾರತಕ್ಕೆ ಮರಳಿದ್ದಾರೆ.

  • ಕೊಡಗು-ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್

    ಕೊಡಗು-ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್

    ಮಡಿಕೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೊಡಗು (Kodagu) ಜಿಲ್ಲೆಯ ಕೇರಳ ಗಡಿಯಲ್ಲಿ (Kerala Border) ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಮೇ 10 ರಂದು ಮತದಾನ ಹಿನ್ನೆಲೆಯಲ್ಲಿ ಕೊಡಗಿನ ನಕ್ಸಲ್ (Naxal) ಪೀಡಿತ ಬೂತ್‌ಗಳಲ್ಲಿ ಬಿಗಿ ಭದ್ರತೆಯನ್ನು ನೀಡಲಾಗುತ್ತದೆ ಎಂದು ಕೊಡಗು ಎಸ್‌ಪಿ ರಾಜರಾಜನ್ ತಿಳಿಸಿದ್ದಾರೆ.

    ಕೊಡಗಿನ ನಕ್ಸಲ್ ಪೀಡಿತ ಬೂತ್‌ಗಳಾದ ಮಣ್ಟ್ರೂಟ್, ಕಡಮಕಲ್ಲು ಮತ್ತು ಒಣಚಲು ಬೂತ್‌ಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಜಿಲ್ಲೆಯ 12 ಅತಿ ಸೂಕ್ಷ್ಮ ಮತಗಟ್ಟೆಗಳು ಆಗಿದ್ದು ಈ ಬೂತ್‌ಗಳಿಗೆ ಈಗಾಗಲೇ ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ADGP) ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತಗಟ್ಟೆಗಳ ಬೂತ್‌ಗಳಲ್ಲಿ ಅರೆಸೇನಾಪಡೆ, ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜನೆ ನಿರ್ಧಾರ ಮಾಡಿದೆ.

    ಮತ್ತೊಂದೆಡೆ ಕೂಂಬಿಂಗ್ ಮಾಡುತ್ತಿರುವ ಎಎನ್‌ಎಫ್ ತಂಡ ಅರಣ್ಯ ಅಂಚಿನಲ್ಲಿ ನಿರಂತರ ನಿಗಾ ಇರಿಸಿದ್ದಾರೆ. ಜನಸಾಮಾನ್ಯರು ನಿರ್ಭೀತಿ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಕೊಡಗು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲದೇ ಕೊಡಗಿನ ಬಿರುನಾಣಿ, ಪೂಕೊಳ, ಮಾಕುಟ್ಟ ಮೊದಲಾದ ಗಡಿಭಾಗದ ಪ್ರದೇಶಗಳ ಜೊತೆಗೆ ಕೇರಳದ ಭಾಗಗಳಲ್ಲೂ ನಿರಂತರ ನಿಗಾ ಇರಿಸಿದ್ದಾರೆ. ಇದನ್ನೂ ಓದಿ: ಐವರು ಮಾವೋವಾದಿಗಳು ಶರಣು – 30 ದಶಕಗಳ ಬಳಿಕ ನಕ್ಸಲ್ ಮುಕ್ತಗೊಂಡ ಕೌಲೇಶ್ವರಿ ವಲಯ

    ಏಪ್ರಿಲ್ 27ರಂದು ಕೇರಳದ ವಯನಾಡು ಜಿಲ್ಲೆಯ ತಲಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ನಕ್ಸಲರು ಕಾಣಿಸಿಕೊಂಡಿದ್ದರು. ಇವರಲ್ಲಿ ಕರ್ನಾಟಕದ ನಕ್ಸಲ್ ವಿಕ್ರಂ ಗೌಡ ಕೂಡಾ ಇದ್ದ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಇಲ್ಲಿನ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಎಚ್ಚೆತ್ತಿದ್ದು, ಗಡಿಭಾಗದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಕೇರಳದ ಕಾಡಿನಂಚಿನಲ್ಲಿರುವ ಅನೇಕರಿಗೆ ನಕ್ಸಲರ ಮೇಲೆ ಅನುಕಂಪ ಇದೆ. ನಕ್ಸಲರ ಚಟುವಟಿಕೆಗಳು ಹೆಚ್ಚಿದ್ದರೂ, ಮಾಹಿತಿ ಇದ್ದರೂ ಇವರು ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.

    ಕೊಡಗು-ಕೇರಳ ಗಡಿಭಾಗದ ಕುಟ್ಟ ಮತ್ತು ಆರ್ಜಿ ಗ್ರಾಮಗಳಲ್ಲಿ ನಕ್ಸಲ್ ನಿಗ್ರಹ ಪಡೆಯ 2 ಶಿಬಿರಗಳು ಇವೆ. ಇಲ್ಲಿ 60ಕ್ಕೂ ಅಧಿಕ ಮಂದಿ ಪೊಲೀಸರು ಸಕ್ರಿಯರಾಗಿದ್ದು, ನಿತ್ಯವೂ ಕಾಡಿನೊಳಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಡಂಚಿನ ಜನರು ಮುಕ್ತವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಕೊಡಗು ಎಸ್‌ಪಿ ರಾಜರಾಜನ್ ತಿಳಿಸಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಹತ್ಯೆ ಪ್ರಕರಣ – ತಮಿಳುನಾಡಿನ 7 ಪೊಲೀಸರು ಸಸ್ಪೆಂಡ್

  • ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಚಾಮರಾಜನಗರ: ನೆರೆಯ ರಾಜ್ಯ ಕೇರಳದಲ್ಲಿ (Kerala) ಹಕ್ಕಿ ಜ್ವರದ (Bird flu) ಆತಂಕದ ಹಿನ್ನೆಲೆಯಲ್ಲಿ ಚಾಮರಾಜನಗರ ಗಡಿಯಲ್ಲಿ (Chamarajanagar Border) ಕಟ್ಟೆಚ್ಚರ ವಹಿಸಲಾಗಿದೆ.

    ಬಂಡೀಪುರ ಅಭಯಾರಣ್ಯದ ಕೇರಳ ಕರ್ನಾಟಕ ಗಡಿ ಮೂಳೆ ಹೊಳೆಯಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಭಯಾರಣ್ಯದ ಬಳಿ ಹಕ್ಕಿ ಜ್ವರ ಭೀತಿಗೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕೇರಳದಿಂದ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಸರಕು, ಕೋಳಿ ತುಂಬಿದ್ದ ವಾಹನಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಮೋದಿ ಭೇಟಿ – ಬೀದರ್‌ನಲ್ಲಿ ಬಸ್ ಇಲ್ಲದೇ ಪ್ರಯಾಣಿಕರು ಪರದಾಟ

    ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿ ನಾಟಿ ಕೋಳಿ ಸಾವನ್ನಪ್ಪಿದ್ದವು. ಇದರಿಂದ ಹಕ್ಕಿ ಜ್ವರದ ಆತಂಕವಿತ್ತು. ಇದೀಗ ಆ ಕೋಳಿಯ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ರವಾನಿಸಲಾಗಿದೆ.

    ಸದ್ಯ ಯಾವುದೇ ಭಯಪಡುವ ಅಗತ್ಯವಿಲ್ಲ, ವರದಿ ಬಂದ ನಂತರ ಮತ್ತಷ್ಟು ಸೂಕ್ತ ಕ್ರಮ ವಹಿಸುತ್ತೇವೆ ಎಂದು ಚಾಮರಾಜನಗರದ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದೊಂದಿಗಿನ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಬೇಡಿ – ಅಮೆರಿಕಗೆ ಚೀನಾ ವಾರ್ನಿಂಗ್

    ಭಾರತದೊಂದಿಗಿನ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಬೇಡಿ – ಅಮೆರಿಕಗೆ ಚೀನಾ ವಾರ್ನಿಂಗ್

    ವಾಷಿಂಗ್ಟನ್: ತನ್ನ ಹಾಗೂ ಭಾರತದ (India) ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಂತೆ ಚೀನಾ (China) ಅಮೆರಿಕಾಗೆ (America) ಎಚ್ಚರಿಕೆ ನೀಡಿದೆ.

    ಭಾರತ ಅಮೆರಿಕದೊಂದಿಗಿನ ನಿಕಟ ಸಂಬಂಧಕ್ಕೆ ಅಡ್ಡಿಯಾಗಲು ಚೀನಾ ಬಯಸುತ್ತದೆ. ಅದಕ್ಕಾಗಿಯೇ ಚೀನಾ ಭಾರತದ ಗಡಿಯಲ್ಲಿ ಸಂಘರ್ಷದ ತೀವ್ರತೆಯನ್ನು ಕಡಿಮೆ ಮಾಡುತ್ತಿದೆ. ತನ್ನ ಹಾಗೂ ಭಾರತದ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಚೀನಾ ಅಮೆರಿಕವನ್ನು ಕೇಳಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

    ಚೀನಾ 2021ರಿಂದ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಯನ್ನು ಮುಂದುವರಿಸಿದೆ. ಗಡಿಯಲ್ಲಿ ತಮ್ಮ ಅನುಕೂಲಗಳನ್ನು ಕಳೆದುಕೊಳ್ಳುವುದರಿಂದ ಎರಡೂ ಕಡೆಯವರು ವಿರೋಧಿಸಿದ್ದಕ್ಕಾಗಿ ಮಾತುಕತೆಗೆ ಮರಳಲು ಪ್ರಯತ್ನಿಸಿವೆ ಎಂದು ಪೆಂಟಗನ್ ವರದಿಯಲ್ಲಿ ತಿಳಿಸಲಾಗಿದೆ.

    2020ರ ಮೇ ಯಿಂದ ಆರಂಭಗೊಂಡ ಭಾರತದೊಂದಿಗಿನ ಉದ್ವಿಗ್ನತೆಯಿಂದ ಎರಡೂ ಕಡೆಯ ಪಡೆಗಳು ಎಲ್‌ಎಸಿ ಉದ್ದಕ್ಕೂ ಕಲ್ಲು, ಲಾಠಿಗಳನ್ನು ಹಿಡಿದು ಘರ್ಷಣೆಯನ್ನು ನಡೆಸಿವೆ. ಇದರ ಪರಿಣಾಮವಾಗಿ ಎರಡೂ ಕಡೆಗಳ ಸೇನೆಯ ನಿಯೋಜನೆಯನ್ನು ಹೆಚ್ಚಿಸಲಾಗಿದೆ ಎಂದು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಸಲಿಂಗ ವಿವಾಹಗಳನ್ನು ರಕ್ಷಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ

    ಚೀನಾ ಹಾಗೂ ಭಾರತ ತಮ್ಮ ಸ್ಥಾನಕ್ಕಾಗಿ ಎರಡೂ ಕಡೆಯವರು ಬಗ್ಗಲಿಲ್ಲ. ಗಡಿಯಲ್ಲಿ ಭಾರತ ತನ್ನ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದ್ದುದನ್ನು ಚೀನಾ ದೂಷಿಸಿದರೆ, ಭಾರತ ತನ್ನ ಭೂಪ್ರದೇಶದೊಳಗೆ ಚೀನಾ ಆಕ್ರಮಣವನ್ನು ನಡೆಸಲು ಮುಂದಾಗುತ್ತಿದೆ ಎಂದು ಆರೋಪಿಸಿದೆ.

    2020 ರಲ್ಲಿ ಪ್ರಾರಂಭವಾದ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ಹಲವು ಬಾರಿ ಮಿಲಿಟರಿ ಮಟ್ಟದ ಮಾತುಕತೆಗಳನ್ನು ನಡೆಸಿವೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಮೆರಿಕ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಜಪಾನ್‍ನಲ್ಲಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

    Live Tv
    [brid partner=56869869 player=32851 video=960834 autoplay=true]

  • ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಶಿಲ್ಲಾಂಗ್/ದಿಸ್ಪುರ್: ಅಸ್ಸಾಂ-ಮೇಘಾಲಯ ಗಡಿಯಲ್ಲಿ ಮಂಗಳವಾರ ಮುಂಜಾನೆ ಮರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು ತಡೆದಿದ್ದಾರೆ. ಘಟನೆಯ ಬಳಿಕ ಗಡಿ ಪ್ರದೇಶದಲ್ಲಿ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ.

    ಘರ್ಷಣೆಯ ಬಳಿಕ ಮೇಘಾಲಯ ಸರ್ಕಾರ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ.

    ವರದಿಗಳ ಪ್ರಕಾರ, ಮೇಘಾಲಯದ ಗಡಿಯಾದ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್‌ನಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಮುಂಜಾನೆ 3 ಗಂಟೆ ವೇಳೆಗೆ ಟ್ರಕ್ ಒಂದನ್ನು ತಡೆದಿದೆ. ಟ್ರಕ್‌ನಲ್ಲಿದ್ದವರು ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆ ಹಿಡಿಯಲು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಟ್ರಕ್‌ನ ಟೈರ್ ಪಂಕ್ಚರ್ ಮಾಡಿದ್ದಾರೆ.

    ಬಳಿಕ ಅರಣ್ಯ ಸಿಬ್ಬಂದಿ ಟ್ರಕ್‌ನಲ್ಲಿದ್ದ ಮೂವರನ್ನು ಬಂಧಿಸಿ, ಜಿರಿಕಿಂಡಿಂಗ್‌ಗೆ ಕರೆತಂದಿದ್ದಾರೆ. ಘಟನೆಯ ಬಗ್ಗೆ ಅರಣ್ಯ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಹೆಚ್ಚಿನ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಇದೆಲ್ಲದರ ಬಳಿಕ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಮೇಘಾಲಯದಿಂದ ಅಪಾರ ಸಂಖ್ಯೆಯ ಜನರು ಕಠಾರಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

    ಮೃತ ಅರಣ್ಯ ಸಿಬ್ಬಂದಿಯನ್ನು ಬಿದ್ಯಾ ಸಿಂಗ್ ಲೆಹ್ತ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಅರಣ್ಯ ಸಿಬ್ಬಂದಿ ಅಭಿಮನ್ಯು ಗಾಯಗೊಂಡಿದ್ದಾರೆ. ಪರಿಸ್ಥಿತಿ ಸದ್ಯ ನಿಯಂತ್ರಣಕ್ಕೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 71 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಕನ್ನಡ ರಾಜ್ಯೋತ್ಸವ – ಗಡಿಯಲ್ಲಿ ನಾಡವಿರೋಧಿ ಚಟುವಟಿಕೆ ಪ್ರಾರಂಭಿಸಿದ ಶಿವಸೇನೆ ಕಾರ್ಯಕರ್ತರು

    ಕನ್ನಡ ರಾಜ್ಯೋತ್ಸವ – ಗಡಿಯಲ್ಲಿ ನಾಡವಿರೋಧಿ ಚಟುವಟಿಕೆ ಪ್ರಾರಂಭಿಸಿದ ಶಿವಸೇನೆ ಕಾರ್ಯಕರ್ತರು

    ಚಿಕ್ಕೋಡಿ: ಕರ್ನಾಟಕದಲ್ಲಿ (Karnataka) ಕನ್ನಡದ ಹಬ್ಬ, ಕನ್ನಡ ನಾಡು ನುಡಿಯ, ಕನ್ನಡ ರಾಜ್ಯೋತ್ಸವ (Kannada Rajyotsava) ಸಂಭ್ರಮದ ತಯಾರಿ ನಡೆಯುತ್ತಿದ್ದರೆ, ಅತ್ತ ಗಡಿ ಪ್ರದೇಶದಲ್ಲಿ ಶಿವಸೇನೆ (Shiv Sena) ಮತ್ತು ಎಂಇಎಸ್ (MES) ಕಾರ್ಯಕರ್ತರು ನಾಡವಿರೋಧಿ ಚಟುವಟಿಕೆ ಶುರು ಮಾಡಿದ್ದಾರೆ. ರಾಜ್ಯೋತ್ಸವಕ್ಕೆ ಬೆಳಗಾವಿ (Belagavi) ಸಜ್ಜಾಗುತ್ತಿದ್ದರೆ, ನಾಡ ದ್ರೋಹಿ ಶಿವಸೇನೆ ತನ್ನ ಪುಂಡಾಟಿಕೆ ಮುಂದುವರಿಸಿ ರಸ್ತೆಯಲ್ಲಿ ಕುಳಿತು ಹೈಡ್ರಾಮಾ ನಡೆಸಿದೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಇರುವ ಕುಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ನಾಳೆ ನಾಡಹಬ್ಬವನ್ನು ಜೋರಾಗಿ ಆಚರಣೆ ಮಾಡಬೇಕು ಎಂದು ಕನ್ನಡಿಗರು ತಯಾರಿ ನಡೆಸುತ್ತಿದ್ದಾರೆ. ಇತ್ತ ಶಿವಸೇನೆ ಮತ್ತು ನಾಡದ್ರೋಹಿ ಎಂಇಎಸ್ ಎಂದಿನಂತೆ ತನ್ನ ಖಯಾಲಿ ಮುಂದುವರಿಸಿದೆ.

    ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯೂ ನಮಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಪ್ರವೇಶಕ್ಕೆ ಶಿವಸೇನೆ ಮುಂದಾಗಿತ್ತು. ಕೊಲ್ಹಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ರಾಜ್ಯ ಪ್ರವೇಶಕ್ಕೆ ಮುಂದಾದ ಶಿವಸೇನೆಯ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಕುಗನೊಳ್ಳಿ ಚೆಕ್‌ಪೋಸ್ಟ್ ಬಳಿ ತಡೆದಿದ್ದಾರೆ. ಪೊಲೀಸರು ತಡೆದಿದ್ದರಿಂದ ಅವರ ವಿರುದ್ಧವೇ ನಡು ರಸ್ತೆಯಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಕ್ಕದ ನದಿಗೆ ಇಳಿದು ಗಡಿ ಪ್ರವೇಶದ ನಾಟಕ ನಡೆಸಿ, ರಸ್ತೆ ಮಧ್ಯೆಯೇ ಕುಳಿತು ತಮ್ಮ ದಾಂಧಲೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಬಂಧಿತ ಮೂವರು ಆರೋಪಿಗಳು ಮತ್ತೆ ಪೊಲೀಸರ ವಶಕ್ಕೆ

    ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ಶುರು ಮಾಡಿದ ಶಿವಸೇನೆ ಪುಂಡರು ಬಿಸಿಲಿಗೆ ಬಳಲಿ, ಬೆಂಡಾಗಿ ಕೊನೆಗೆ ಪೊಲೀಸರ ಬಳಿ ಒಂದು ನಿವೇದನೆಯನ್ನು ಇಟ್ಟಿದ್ದಾರೆ. ನಾವು ರಾಜ್ಯ ಪ್ರವೇಶ ಮಾಡುವುದಿಲ್ಲ. ನಾವು ತಂದ ವಿಜಯ ಜ್ಯೋತಿಯನ್ನಾದರೂ ಬೆಳಗಾವಿಗೆ ತಲುಪಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದಕ್ಕೂ ಸಹ ಜಪ್ಪಯ್ಯ ಎನ್ನದ ಕರ್ನಾಟಕ ಪೊಲೀಸರು ಯಾವುದೇ ಕಾರಣಕ್ಕೂ ಯಾವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲ ಎಂದು ತಮ್ಮಷ್ಟಕ್ಕೆ ತಾವೇ ಶಿವಸೇನೆಯ ಪುಂಡರು ಮತ್ತೆ ಮಹಾರಾಷ್ಟ್ರದ ಹಾದಿ ತುಳಿದಿದ್ದಾರೆ. ಇದನ್ನೂ ಓದಿ: ಪೊಲೀಸ್ ಹುದ್ದೆಗೆ 70-80 ಲಕ್ಷ ಹಣ – ಹೇಳಿಕೆ ನನ್ನದಲ್ಲವೆಂದು ಉಲ್ಟಾ ಹೊಡೆದ MTB

    Live Tv
    [brid partner=56869869 player=32851 video=960834 autoplay=true]

  • ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತ

    ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತ

    ಚಂಡೀಗಢ: ಪಂಜಾಬ್‌ನ (Punjab) ಭಾರತ – ಪಾಕಿಸ್ತಾನ (India – Pakistan) ಗಡಿಯ (Border) ಭಾಗದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಸುಮಾರು 12 ಕೆ.ಜಿ ಸರಕನ್ನು ಹೊತ್ತಿದ್ದ ಡ್ರೋನ್ (Drone) ಒಂದನ್ನು ಭದ್ರತಾ ಪಡೆಗಳು (Security Force) ಭಾನುವಾರ ರಾತ್ರಿ ಹೊಡೆದುರುಳಿಸಿದ್ದಾರೆ.

    ಅಮೃತಸರ ಸೆಕ್ಟರ್‌ನ ರಾನಿಯಾ ಗಡಿ ಪೋಸ್ಟ್ ಬಳಿ ರಾತ್ರಿ 9:15ರ ಸುಮಾರಿಗೆ ಭದ್ರತಾ ಪಡೆಗಳು ಕ್ವಾಡ್ ಕಾಪ್ಟರ್ ಸ್ಪೋರ್ಟಿಂಗ್ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾರಾಣಸಿಯಲ್ಲಿ ಗಂಗಾರತಿ ಮಾಡಿದ ‘ಬನಾರಸ್’ ಹೀರೋ ಝೈದ್ ಖಾನ್

    ಡ್ರೋನ್‌ನಲ್ಲಿ ಲೋಡ್ ಮಾಡಲಾಗಿದ್ದ ಹಾಗೂ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸರಕನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಡ್ರೋನ್‌ನಲ್ಲಿ ಯಾವ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಗಡಿ ಭದ್ರತಾ ಪಡೆ (BSF) ತಿಳಿಸಿದ್ದಾರೆ. ಇದನ್ನೂ ಓದಿ: ಆಧುನಿಕ ಭಗೀರಥ ಖ್ಯಾತಿಯ ಕಾಮೇಗೌಡ ನಿಧನ

    ಇದು ಕಳೆದ 3 ದಿನಗಳಲ್ಲಿ ನಡೆದ 2ನೇ ಘಟನೆಯಾಗಿದೆ. ಅಕ್ಟೋಬರ್ 13-14ರ ಮಧ್ಯರಾತ್ರಿ ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಡ್ರೋನ್ ಹಾರಾಡಿದ್ದು, ಅದನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನೂಪುರ್ ಹತ್ಯೆಗೆ ಪಾಕ್‌ನಿಂದ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ವ್ಯಕ್ತಿ – ಆತನ ಬಳಿ ಇತ್ತು 11 ಇಂಚಿನ ಚಾಕು

    ನೂಪುರ್ ಹತ್ಯೆಗೆ ಪಾಕ್‌ನಿಂದ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ವ್ಯಕ್ತಿ – ಆತನ ಬಳಿ ಇತ್ತು 11 ಇಂಚಿನ ಚಾಕು

    ನವದೆಹಲಿ: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹತ್ಯೆ ನಡೆಸಲು ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆಯನ್ನು ರಾಜಸ್ಥಾನದ ಶ್ರೀ ಗಂಗಾ ನಗರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

    ಜುಲೈ 16ರಂದು ರಾತ್ರಿ 11 ಗಂಟೆಯ ವೇಳೆಗೆ ಗಡಿ ಬಳಿ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆ ಬಂಧಿಸಿತ್ತು. ಅನುಮಾನಾಸ್ಪದವಾಗಿ ಪತ್ತೆಯಾದ ವ್ಯಕ್ತಿಯನ್ನು ಅಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆದು, ತಪಾಸಣೆ ನಡೆಸಿದ್ದರು. ವ್ಯಕ್ತಿಯ ಬ್ಯಾಗ್‌ನಲ್ಲಿ 11 ಇಂಚು ಉದ್ದದ ಚಾಕು, ಧಾರ್ಮಿಕ ಪುಸ್ತಕಗಳು, ಬಟ್ಟೆ, ಆಹಾರ ಹಾಗೂ ಮರಳು ಪತ್ತೆಯಾಗಿತ್ತು. ಆತನನ್ನು ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಂಡಿ ಬಹೌದ್ದೀನ್ ನಗರದ ರಿಜ್ವಾನ್ ಅಶ್ರಫ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಬಿಗ್ ರಿಲೀಫ್- ಆಗಸ್ಟ್ 10ರವರೆಗೂ ಬಂಧಿಸದಂತೆ ಸುಪ್ರೀಂ ಸೂಚನೆ

    ಪ್ರಾಥಮಿಕ ತನಿಖೆಯಲ್ಲಿ ಆತ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಕೊಲ್ಲಲು ಗಡಿ ದಾಟಿ ಬಂದಿರುವುದಾಗಿ ತಿಳಿಸಿದ್ದಾನೆ. ನೂಪುರ್ ಅವರನ್ನು ಕೊಲ್ಲುವುದಕ್ಕೂ ಮೊದಲು ಆತ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಲು ಯೋಜಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಫೋಟೋ ದುರ್ಬಳಕೆ ಮಾಡಿದ್ದ ಬಾಲಿವುಡ್ ನಿರ್ದೇಶಕ ಅವಿನಾಶ್ ಅರೆಸ್ಟ್

    ಹೆಚ್ಚಿನ ತನಿಖೆಗಾಗಿ ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆತನ ಬಗ್ಗೆ ಸಂಬಂಧಪಟ್ಟ ಗುಪ್ತಚರ ಸಂಸ್ಥೆಗಳಿಗೂ ತಿಳಿಸಿದ್ದೇವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಬಂಧಿತ ಪಾಕಿಸ್ತಾನಿ ವ್ಯಕ್ತಿಯನ್ನು ಇಂಟಲಿಜೆನ್ಸ್ ಬ್ಯೂರೋ(ಐಬಿ) ಹಾಗೂ ಇತರ ಗುಪ್ತಚರ ಸಂಸ್ಥೆಗಳ ಜಂಟಿ ತಂಡ ವಿಚಾರಣೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮಿಂದ ಯಾವುದೇ ಭೂ ಪ್ರದೇಶಗಳನ್ನು ಚೀನಾ ಕಸಿದುಕೊಳ್ಳಲು ಬಿಡಲ್ಲ: ಮನೋಜ್ ಪಾಂಡೆ

    ನಮ್ಮಿಂದ ಯಾವುದೇ ಭೂ ಪ್ರದೇಶಗಳನ್ನು ಚೀನಾ ಕಸಿದುಕೊಳ್ಳಲು ಬಿಡಲ್ಲ: ಮನೋಜ್ ಪಾಂಡೆ

    ನವದೆಹಲಿ: ಭಾರತದ ಹೊಸ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಭಾನುವಾರ ಚೀನಾಗೆ ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಿದ್ದಾರೆ. ಭಾರತ-ಚೀನಾ ಗಡಿಯಲ್ಲಿರುವ ಯಾವುದೇ ಪ್ರದೇಶವನ್ನೂ ಕಳೆದುಕೊಳ್ಳಲು ನಾವು ಬಿಡುವುದಿಲ್ಲ ಎಂದಿದ್ದಾರೆ.

    ಮನೋಜ್ ಪಾಂಡೆ ನೂತನ ಸೇನಾ ಮುಖ್ಯಸ್ಥರಾಗುತ್ತಿದ್ದಂತೆ ಸಂದರ್ಶನವೊಂದರಲ್ಲಿ ಮಾತನಾಡಿ, ಭಾರತ ಚೀನಾ ಗಡಿಯ ಭೂ ಪ್ರದೇಶ ಯಥಾಸ್ಥಿತಿಯಲ್ಲಿರುತ್ತದೆ. ಭಾರತದ ಭೂ ಪ್ರದೇಶದಲ್ಲಿ ಯಾವುದೇ ನಷ್ಟವಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

    ಪ್ರಸ್ತುತ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ಪರಿಸ್ಥಿತಿ ಸಾಮಾನ್ಯವಾಗಿದೆ. ನಮ್ಮ ಪಡೆಗಳು ಪ್ರಮುಖ ದೈಹಿಕ ಸ್ಥಾನಗಳನ್ನು ಹೊಂದಿದ್ದಾರೆ. ನಮ್ಮ ಎದುರಾಳಿಗಳು ನಡೆಸಿರುವ ಪ್ರಚೋದನಾಕಾರಿ ಕ್ರಮಗಳಿಗೆ ಸರಿಯಾದ ಪ್ರತಿಕ್ರಿಯೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ

    ಭಾರತ-ಚೀನಾ ಗಡಿಯಲ್ಲಿ ಹೆಚ್ಚುವರಿ ಉಪಕರಣ ಹಾಗೂ ಪಡೆಗಳನ್ನು ಸೇರಿಸಿದ್ದೇವೆ. ಮೂಲಸೌಕರ್ಯಗಳ ಅಭಿವೃದ್ಧಿಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಲಾಗಿದೆ. ಕಳೆದ 2 ವರ್ಷಗಳಿಂದ ಇರುವ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಅಗತ್ಯ ಇದೆ ಎಂದು ತಿಳಿಸಿದರು.

  • ಚೀನಾ-ಭಾರತದ ಸಂಬಂಧ ಬಿಗಡಾಯಿಸುತ್ತಿದೆ: ಜೈಶಂಕರ್

    ನವದೆಹಲಿ: ಬೀಜಿಂಗ್ ಗಡಿ ಒಪ್ಪಂದ ಉಲ್ಲಂಘಿಸಿದ ಬಳಿಕ ಚೀನಾದೊಂದಿಗಿನ ಭಾರತದ ಸಂಬಂಧ ಹದಗೆಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.

    ಮ್ಯೂನಿಚ್ ಸೆಕ್ಯೂರಿಟಿ ಕಾನ್ಫರೆನ್ಸ್ (ಎಂಎಸ್‌ಸಿ) 2022 ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ಜೈಶಂಕರ್, ಕಳೆದ 45 ವರ್ಷಗಳಿಂದ ಚೀನಾ-ಭಾರತದ ಗಡಿಯಲ್ಲಿ ಶಾಂತಿ ಇತ್ತು. 1975ರಿಂದ ಗಡಿಯಲ್ಲಿ ಯಾವುದೇ ಮಿಲಿಟರಿ ಸಾವು-ನೋವುಗಳು ಸಂಭವಿಸುತ್ತಿರಲಿಲ್ಲ. ಆದರೆ ಇದೀಗ ಚೀನಾದಿಂದ ಭಾರತಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಗಡಿ ಎಂಬುವುದು ಇರುವುದೇ ಮಿಲಿಟರಿ ಪಡೆ ಅಥವಾ ವಿದೇಶಿಗರ ಅಕ್ರಮ ಪ್ರವೇಶವನ್ನು ನಿಯಂತ್ರಿಸಲು. ಆದರೆ ಈ ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ. ಇದೀಗ ಚೀನಾದೊಂದಿಗಿನ ಸಂಬಂಧ ಬಹಳ ಕಷ್ಟಕರ ಹಂತ ತಲುಪಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಜೂನ್ 2020ರ ವರೆಗೆ ಚೀನಾದೊಂದಿಗಿನ ಭಾರತದ ಸಂಬಂಧ ಉತ್ತಮವಾಗಿತ್ತು. ಯಾವಾಗ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಭಾರತ-ಚೀನಾ ಮಿಲಿಟರಿ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತೋ ಅಂದಿನಿಂದ ಗಡಿ ಸಂಬಂಧ ಹದಗೆಡುತ್ತ ಬಂದಿದೆ ಎಂದು ಜೈಶಂಕರ್ ಹೇಳಿದ್ದಾರೆ.