Tag: ಗಟ್ಟಿಮೇಳ

  • ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು

    ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು

    ಕಿರುತೆರೆಯ ಲವ್ ಬರ್ಡ್ಸ್ ಸಿದ್ದು ಮೂಲಿಮನಿ(Siddumoolimani) ಮತ್ತು ಪ್ರಿಯಾ ಆಚಾರ್ (Priya Achar) ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದರು. ಹೊಸ ವರ್ಷದ ಸಂಭ್ರಮದ ವೇಳೆ ಪ್ರಿಯಾಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.

     

    View this post on Instagram

     

    A post shared by Priya j achar???? (@priya_j_achar)

    ಟಿವಿ ಪರದೆಯ ಕ್ಯೂಟ್ ಜೋಡಿ ಪ್ರಿಯಾ ಮತ್ತು ಸಿದ್ದು, ಹೊಸ ವರ್ಷದ ಶುಭಾರಂಭ ಕಾರ್ಯಕ್ರಮದಲ್ಲಿ ತಮ್ಮ ಲವ್ ಸ್ಟೋರಿ ಹೇಳಿಕೊಳ್ಳುವುದರ ಮೂಲಕ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇನ್ನೂ ಈ ವೇಳೆ ಪ್ರೀತಿ ಮತ್ತು ಮದುವೆ ವಿಚಾರ ಮಾತನಾಡಿದರೆ ಮಾತ್ರ ನನಗೆ ತುಂಬಾ ಸಂಕೋಚ ನಾಚಿಕೆ ಆಗುತ್ತದೆ. ನನಗೆ ಸ್ಟೇಜ್ ಭಯ ಇಲ್ವೇ ಇಲ್ಲ. ಆದರೆ ಆ ವಿಷಯ ಯಾರಾದರೂ ಕೇಳಿದರೆ ನಾಚಿಕೆ ಆಗುತ್ತೆ. ನಾವು ಡಿಕೆಡಿ ರಿಯಾಲಿಟಿ ಶೋ ಮೂಲಕ ಸ್ನೇಹಿತರಾಗಿದ್ವೀ ಪ್ರೀತಿ ಶುರುವಾಗಿದ್ದು ನಮ್ಮ ʻಧಮಾಕʼ ಶೂಟ್‌ನಲ್ಲಿ ಎಂದು ಪ್ರಿಯಾ ಮಾತನಾಡಿದ್ದಾರೆ.

    ನಮ್ಮ ಮನದ ಮೂರು ಮುಖ್ಯ ಪದಗಳನ್ನು ಹೇಳುವ ಸಮಯ, ಅದನ್ನ ನಾನೇ ಹೇಳುವೆ. ಬಿಡು ನೀ ಭಯವ ನನಗೆ ಅರ್ಥ ಆಗುತ್ತೆ. ಇದು ಹೃದಯ ವಿಷಯ, ಪ್ರೀತಿ ಅಂತ ಹೆಸರಿಡಲು. ನನ್ನ ಹುಡುಗಿ ಎಂದು ಕರೆಯಲು ಇಲ್ಲಸಲ್ಲದ ಮಾತಾಡಲು ನಾನಲ್ಲ ಮಾಮೂಲು ಪ್ರೇಮಿ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಈ ಸಂಬಂಧಕ್ಕೆ ನಾವು ಹೆಸರಿಟ್ಟಿಲ್ಲ. ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಲ್ಲ ಪ್ರೀತಿ ಅನ್ನೋ ವಿಚಾರ ಹೇಳಿಕೊಂಡಿಲ್ಲ ಮನಸ್ಸಿನಲ್ಲಿ ಮಾತ್ರ ಮದ್ವೆ ಅನ್ನೋ ವಿಚಾರವಿತ್ತು. ನಮ್ಮ ಭಾವನೆಗಳು ಮನೆಯಲ್ಲಿ ಸುಲಭವಾಗಿ ಗೊತ್ತಾಯಿತು. ಆಗ ಮದುವೆ ಮಾತುಕತೆ ಶುರುವಾಯ್ತು. ಆಗ ಬರೆದ ಕವಿತೆ ಕೊನೆ ಸಾಲುಗಳನ್ನು ಈಗ ಹೇಳುವೆ. ಚಂದನೆಯ ಅರಸಿ ನೀನು. ನಾನು ನಿನ್ನ ಜನುಮ ಜನುಮದ ಸಾಮಿ ನಿನ್ನನ್ನು ಪ್ರೀತಿಸುವೆ..ಮದುವೆ ಆಗುವೆಯಾ? ಎಂದು ಮಂಡಿಯೂರಿ ಸಿದ್ದು ಪ್ರಪೋಸ್ ಮಾಡುತ್ತಾರೆ. ಬಳಿಕ ಮತ್ತೆ ಕಾಲ್ಗೆಜ್ಜೆ ತೊಡಿಸಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

    ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

    `ಸತ್ಯ’ ಧಾರಾವಾಹಿಯ ನಟ ಸಾಗರ್ ಗೌಡ ಎಂಗೇಜ್ ಆದ ಬೆನ್ನಲ್ಲೇ ಕಿರುತೆರೆಯ ಮತ್ತೊಂದು ಜೋಡಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. `ಪಾರು’ (Paaru Serial) ಸೀರಿಯಲ್ ನಟ ಸಿದ್ದು (Siddu Moolimani) ಜೊತೆ ಪ್ರಿಯಾ ಜೆ ಆಚಾರ್ (Priya J Achar) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    `ಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಈ ಜೋಡಿ ಆ ನಂತರ `ಧಮಾಕ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಆ ನಂತರದಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಈ ಜೋಡಿ ಹಸೆಮಣೆ ಏರಲಿದ್ದಾರೆ.

    ಸಿದ್ದು ಮೂಲಿಮನಿ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಧಮಾಕ, ವಿಕ್ರಾಂತ್‌ರೋಣ, ರಂಗಿತರಂಗ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಿಯಾ `ಗಟ್ಟಿಮೇಳ’ ಸೀರಿಯಲ್ ಜೊತೆ ಪರಭಾಷೆ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲು

    View this post on Instagram

     

    A post shared by Siddu Moolimani (@sidmoolimani)

    ನಟಿ ಪ್ರಿಯಾ ಹುಟ್ಟುರಾದ ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಈ ಸಂಭ್ರಮಕ್ಕೆ ಪಾರಾ ಮತ್ತು ಗಟ್ಟಿಮೇಳ ಸೀರಿಯಲ್ ತಂಡ ಸಾಕ್ಷಿಯಾಗಿದ್ದಾರೆ. ಹಾಗೇ ಸಾಕಷ್ಟು ನಟ ನಟಿಯರು ಕೂಡ ನವಜೋಡಿಗೆ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದುಲ್ಕರ್ ಸಲ್ಮಾನ್ ಜೊತೆ `ಗಟ್ಟಿಮೇಳ’ ನಿಶಾ ರವಿಕೃಷ್ಣನ್

    ದುಲ್ಕರ್ ಸಲ್ಮಾನ್ ಜೊತೆ `ಗಟ್ಟಿಮೇಳ’ ನಿಶಾ ರವಿಕೃಷ್ಣನ್

    ನ್ನಡ ಕಿರುತೆರೆಯ `ಗಟ್ಟಿಮೇಳ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟಿ ನಿಶಾ ರವಿಕೃಷ್ಣನ್ ತೆಲುಗು ಕಿರುತೆರೆಯಲ್ಲೂ ಛಾಪೂ ಮೂಡಿಸುತ್ತಿದ್ದಾರೆ. ಸದ್ಯ ಮಾಲಿವುಡ್ ಸ್ಟಾರ್ ದುಲ್ಕರ್ ಸಲ್ಮಾನ್‌ಗೆ ನಿಶಾ ರವಿಕೃಷ್ಣನ್ ಜೊತೆಯಾಗಿದ್ದಾರೆ.

    `ಗಟ್ಟಿಮೇಳ’ ಸೀರಿಯಲ್‌ನ ಅಮೂಲ್ಯ ಆಗಿ ಸಾಕಷ್ಟು ಅಭಿಮಾನಿಗಳ ಮನಗೆದ್ದಿರುವ ನಿಶಾ ರವಿಕೃಷ್ಣನ್ ಈಗ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಈ ವೇಳೆ ತೆಲುಗಿನ ಶೋವೊಂದರಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ `ಸೀತಾ ರಾಮಂ’ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಅವರನ್ನು ನಿಶಾ ಭೇಟಿಯಾಗಿದ್ದಾರೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

    ಶೋನಲ್ಲಿ ಸಹನಟ ಸಿದ್ದು ಜತೆ ನಿಶಾ ಹೆಜ್ಜೆ ಹಾಕಿದ್ದರು. ನಿಶಾ ಅವರ ಡ್ಯಾನ್ಸ್ ನೋಡಿ ದುಲ್ಕರ್ ಸಲ್ಮಾನ್ ಕೂಡ ಮೆಚ್ಚುಗೆ ಸೂಚಿಸಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಮಾತಿಗೆ ನಿಶಾ ಸಖತ್ ಖುಷಿಪಟ್ಟಿದ್ದಾರೆ. ಇಂದು 36ನೇ ವಸಂತಕ್ಕೆ ಕಾಲಿಟ್ಟಿರುವ ದುಲ್ಕರ್ ಸಲ್ಮಾನ್‌ಗೆ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ದುಲ್ಕರ್ ಜತೆಗಿನ ಫೋಟೋ ಹಂಚಿಕೊಂಡು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    `ಡ್ರಾಮಾ ಜ್ಯೂನಿಯರ್ಸ್’ ಮತ್ತು ಗಟ್ಟಿಮೇಳ ಸೀರಿಯಲ್ ಮೂಲಕ ಗುರುತಿಸಿಕೊಂಡಿರುವ ಮಹತಿ ವೈಷ್ಣವಿ ಭಟ್ ಎಸ್‌ಎಸ್‌ಎಲ್‌ಸಿನಲ್ಲಿ ಶೇ.99 ಅಂಕ ಪಡೆದು ಪಾಸ್ ಆಗಿದ್ದಾರೆ. ಈ ಕುರಿತಯ ಮಹತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ `ಗಟ್ಟಿಮೇಳ’ ಸೀರಿಯಲ್ ಜತೆ ಶಿಕ್ಷಣವನ್ನ ಕೂಡ ನಿಭಾಯಿಸುತ್ತಾ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ ಬರೋಬ್ಬರಿ 619 ಮಾರ್ಕ್ಸ್ಗಳನ್ನು ನಟಿ ಮಹತಿ ಗಳಿಸಿದ್ದಾರೆ. ಈ ಮೂಲಕ ಅವರ ಫಲಿತಾಂಶ ಶೇ.99.04 ಆಗಿದೆ. ಇದು ಅವರಿಗೆ ಅವರ ಕುಟುಂಬಕ್ಕೆ ಖುಷಿ ನೀಡಿದೆ.

    ಗಟ್ಟಿಮೇಳ ನಟಿ ಮಹತಿ ಯಾವ ವಿಷಯಕ್ಕೆ ಎಷ್ಟು ಅಂಕ ಬಂದಿದೆ ಎಂಬ ವಿವರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕನ್ನಡದಲ್ಲಿ 124, ಇಂಗ್ಲೀಷ್‌ನಲ್ಲಿ 100, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ. ರಾಜ್ಯಾದ್ಯಂತ 7ನೇ ಸ್ಥಾನ ಪಡೆದಿದ್ದಾರೆ. ಧಾರಾವಾಹಿ ಶೂಟಿಂಗ್ ಮಧ್ಯೆ ಉತ್ತಮ ಅಂಕ ಪಡೆದಿರೋದಕ್ಕೆ ಮಹತಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಹೊಸ ಚಿತ್ರ ಘೋಷಣೆ ಮಾಡಿದ ಪ್ರಶಾಂತ್‌ನೀಲ್-ತಾರಕ್

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಹತಿ, ನೀವು ಇಲ್ಲದೇ ಇದು ಅಸಾಧ್ಯ ಎಂದು ತಮ್ಮ ಕುಟುಂಬ ಮತ್ತು ಶಿಕ್ಷಕರಿಗೆ ಹಾಗೆಯೇ `ಗಟ್ಟಿಮೇಳ’ ತಂಡಕ್ಕೂ ಮಹತಿ ಅಭಿನಂದನೆ ತಿಳಿಸಿದ್ದಾರೆ. ಅಭಿಮಾನಿಗಳ ಹಾರೈಕೆಗೂ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

  • ತಪ್ಪು ಮಾಡಿಯೂ ತಪ್ಪೇ ಮಾಡಿಲ್ಲ ಎಂದ ಗಟ್ಟಿಮೇಳ ರಕ್ಷಿತ್‌ – ಎಫ್‌ಐಆರ್‌ ಕಾಪಿ ಲಭ್ಯ

    ತಪ್ಪು ಮಾಡಿಯೂ ತಪ್ಪೇ ಮಾಡಿಲ್ಲ ಎಂದ ಗಟ್ಟಿಮೇಳ ರಕ್ಷಿತ್‌ – ಎಫ್‌ಐಆರ್‌ ಕಾಪಿ ಲಭ್ಯ

    ಬೆಂಗಳೂರು: ತಪ್ಪು ಮಾಡಿಯೂ ತಪ್ಪೇ ಮಾಡಿಲ್ಲ ಎಂಬಂತೆ ಗಟ್ಟಿಮೇಳ ಸೀರಿಯಲ್ ಖ್ಯಾತಿಯ ರಕ್ಷಿತ್ ಸುಳ್ಳು ಹೇಳುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ನಾವು ತಪ್ಪು ಮಾಡಿಲ್ಲ. ನಮ್ಮ ಮೇಲೆ ಎಫ್‌ಐಆರ್ ಆಗಿಲ್ಲ. ಮಾಧ್ಯಮಗಳು ನಮ್ಮ ಮೇಲೆ ಸುಳ್ಳು ಸುದ್ದಿ ಪ್ರಸಾರ ಮಾಡಿವೆ ಎಂದು ರಕ್ಷಿತ್ ಸಿನಿಮಾ ಡೈಲಾಗ್ ಹೊಡೆದಿದ್ದಾರೆ. ಆದರೆ ಶುಕ್ರವಾರ ರಾತ್ರಿ ರಕ್ಷಿತ್‌ ಮತ್ತು ಗ್ಯಾಂಗ್‌ ಕೋವಿಡ್‌ ನೈಟ್‌ ಕಾರ್ಫ್‌ಯೂ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪಕ್ಷಕ್ಕೆ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ವಿವಿಧ ಐಪಿಸಿ ಸೆಕ್ಷನ್‌ ಅಡಿಯಲ್ಲಿ ಕೆಂಗೇರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ,  ಪ್ರತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

    ಯಾವೆಲ್ಲ ಸೆಕ್ಷನ್?
    ಕೆಂಗೇರಿ ಠಾಣೆಯ ಎಸ್‌ಐ ನಾಗರಾಜ್‌ ಅವರು ನೀಡಿದ ದೂರಿನ ಮೇರೆಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್‌ 143(ಕಾನೂಬಾಹಿರ ಸಭೆ), 147(ಗಲಾಟೆ),188(ಸರ್ಕಾರದ ಆದೇಶ ಉಲ್ಲಂಘಿಸಿ ಅವಿಧೇಯ ವರ್ತನೆ), 269(ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆ ಸೋಂಕನ್ನು ಹರಡುವುದು) ಅಡಿ ರಕ್ಷಿತ್ ವಿರುದ್ಧ 6 ಎಫ್. ಸೇರಿದೆ. ಇದನ್ನೂ ಓದಿ:  ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಆಯಂಡ್ ಗ್ಯಾಂಗ್‌ನಿಂದ ರಂಪಾಟ

    ಯಾರೆಲ್ಲ ಆರೋಪಿಗಳು?
    ರಕ್ಷಿತ್‌(ಎ1), ಅಭಿಷೇಕ್‌(ಎ2), ರಂಜನ್‌(ಎ3), ರಾಕೇಶ್‌ ಕುಮಾರ್‌(ಎ4), ರವಿಚಂದ್ರನ್‌(ಎ5), ಅನುಷಾ(ಎ6), ಶರಣ್ಯಾ(ಎ7) ಆರೋಪಿಗಳಾಗಿದ್ದಾರೆ.

    ದೂರಿನಲ್ಲಿ ಏನಿದೆ?
    ಶುಕ್ರವಾರ ರಾತ್ರಿ ನಾವು ಮಧ್ಯರಾತ್ರಿ1:35ಕ್ಕೆ ಜಿಂಜರ್‌ ಲೇಕ್ ವ್ಯೂನಲ್ಲಿ ಕುಡಿದು ಯಾರೋ ಗಲಾಟೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಠಾಣೆಗೆ ಕರೆ ಮಾಡಿ ತಿಳಿಸಿದ್ದರು. ಈ ಕರೆಯ ಸ್ಥಳಕ್ಕೆ ತೆರಳಿದಾಗ ಹೋಟೆಲ್‌ನಲ್ಲಿ 5 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ಜೋರಾಗಿ ಗಲಾಟೆ ಮಾಡಿ ಶಾಂತಿ ಭಂಗ ಮಾಡುತ್ತಿರುವುದು ತಿಳಿದು ಬಂದಿದೆ.

    ಈ ವೇಳೆ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಸ್ಥಳದಿಂದ ತೆರಳುವಂತೆ ಸೂಚಿಸಿದಾಗ ಏರು ಧ್ವನಿಯಲ್ಲಿ ನಮ್ಮೊಂದಿಗೆ ಮಾತನಾಡುವ ಸ್ಥಳದಿಂದ ತೆರಳಲು ನಿರಾಕರಿಸಲಾಗಿದೆ. ಕೂಡಲೇ ಅವರನ್ನು ಹೊಯ್ಸಳ ಸಿಬ್ಬಂದಿ ಮೂಲಕ ಠಾಣೆಗೆ ಕರೆ ತರಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಕ್ಕೆ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ ಮೂಲಕ ದೂರು ನೀಡಲಾಗಿದೆ.

  • ಟಾಲಿವುಡ್‍ನಲ್ಲಿ ನಾಗಭೈರವಿ ಅವತಾರ ತಾಳಿದ ಗಟ್ಟಿಮೇಳ ಖ್ಯಾತಿಯ ಅಶ್ವಿನಿ

    ಟಾಲಿವುಡ್‍ನಲ್ಲಿ ನಾಗಭೈರವಿ ಅವತಾರ ತಾಳಿದ ಗಟ್ಟಿಮೇಳ ಖ್ಯಾತಿಯ ಅಶ್ವಿನಿ

    ಬೆಂಗಳೂರು: ಗಟ್ಟಿಮೇಳ ಧಾರಾವಾಹಿ ಮೂಲಕ ಚಿರಪರಿಚಿತರಾಗಿರುವ ನಟಿ ಅಶ್ವಿನಿ ಇದೀಗ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದು, ನಾಗ ಭೈರವಿಯ ಅವತಾರ ತಾಳಿದ್ದಾರೆ.

    ನಟಿ ಅಶ್ವಿನಿ ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಲೇ ಮತ್ತೊಂದು ಧಾರಾವಾಹಿಯನ್ನು ಅಶ್ವಿನಿ ಒಪ್ಪಿಕೊಂಡರಾ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟರ್ ಗಳಲ್ಲಿ ಅಶ್ವಿನಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋಗಳು ಸಖತ್ ವೈರಲ್ ಆಗಿವೆ.

    ಅಶ್ವಿನಿ ಪ್ರಸ್ತುತ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ನಿರ್ವಹಿಸುತ್ತಿದ್ದು, ಕನ್ನಡಿಗರ ಮನೆ ಮಾತಾಗಿದ್ದಾರೆ. ಇದಕ್ಕೂ ಮೊದಲು ರಾಧಾ ರಮಣ ಧಾರಾವಾಹಿಯಲ್ಲಿ ತೊದಲು ಮಾತನಾಡುವ ಮುಗ್ದ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದರು. ಅದಾದ ಬಳಿಕ ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಮತ್ತೊಂದು ಪವರ್‍ಫುಲ್ ಪಾತ್ರದಲ್ಲಿ ಅಶ್ವಿನಿ ಕಾಣಿಸಿಕೊಳ್ಳುತ್ತಿದ್ದು, ನಾಗಭೈರವಿಯ ಅವತಾರ ತಾಳಿದ್ದಾರೆ. ಈ ಮೂಲಕ ಟಾಲಿವುಡ್‍ಗೆ ಕಾಲಿಟ್ಟಿದ್ದಾರೆ.

    ತೆಲುಗಿನ ‘ನಾಗಭೈರವಿ’ ಧಾರಾವಾಹಿಯಲ್ಲಿ ಅಶ್ವಿನಿ ಎರಡು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಶ್ವಿನಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಲಾಕ್‍ಡೌನ್‍ಗೂ ಮುನ್ನವೇ ಅವರಿಗೆ ಈ ಆಫರ್ ಬಂದಿತ್ತು. ಹೀಗಾಗಿಯೇ ಅವರು 7 ಕೆ.ಜಿ. ತೂಕವನ್ನು ಸಹ ಇಳಿಸಿಕೊಂಡು ಸಣ್ಣಗಾಗಿದ್ದಾರೆ.

    ‘ನಾಗಭೈರವಿ’ಯಲ್ಲಿ ವಿಭಿನ್ನ ಎರಡು ಪಾತ್ರಗಳನ್ನು ನಿಭಾಯಿಸುತ್ತಿರುವುದರಿಂದ ಈ ಪ್ರಾಜೆಕ್ಟ್ ಮೂಲಕ ಬಣ್ಣದ ಬದುಕಿಗೆ ದೊಡ್ಡ ತಿರುವು ಸಿಗಲಿದೆ ಎಂಬುದು ಅಶ್ವಿನಿ ಅವರ ನಿರೀಕ್ಷೆ. ಈಗಾಗಲೇ ಸೀರಿಯಲ್ ಪ್ರೋಮೋಗಳು ರಿಲೀಸ್ ಆಗಿದ್ದು, ಅಶ್ವಿನಿ ತಮ್ಮ ವಿಶಿಷ್ಟ ಪಾತ್ರದಿಂದ ಗಮನಸೆಳೆದಿದ್ದಾರೆ. ಅಶ್ವಿನಿಯ ಪರ್ಫಾಮೆನ್ಸ್ ನೋಡಿ ಧಾರಾವಾಹಿ ತಂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆಯಂತೆ.

    ಇನ್ನೂ ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಸಾಹಸ ದೃಶ್ಯಗಳಿದ್ದು, ನಟಿ ಅನುಷ್ಕಾ ಶೆಟ್ಟಿಗೆ ಸಾಹಸ ಹೇಳಿಕೊಟ್ಟ ಮಾಸ್ಟರ್, ಅಶ್ವಿನಿಗೆ ಫೈಟ್ ಹೇಳಿಕೊಟ್ಟಿದ್ದಾರೆ. ಈ ಪಾತ್ರ ತುಂಬಾ ಪರ್ಫಾಮೆನ್ಸ್ ಬೇಡುವುದರಿಂದ ಅಶ್ವಿನಿ ‘ನಾಗಭೈರವಿ’ ಸೀರಿಯಲ್ ಒಪ್ಪಿಕೊಂಡಿದ್ದಾರೆ. ‘ಗಟ್ಟಿಮೇಳ’ ಹಾಗೂ ‘ನಾಗಭೈರವಿ’ ಎರಡು ಧಾರಾವಾಹಿಗಳನ್ನು ಮಾಡುತ್ತಿರುವುದರಿಂದ ಅಶ್ವಿನಿ ಇನ್ನು ಫುಲ್ ಬ್ಯುಸಿಯಾಗಲಿದ್ದಾರೆ. ತುಂಬಾ ಶೇಡ್ ಹಾಗೂ ಫೈಟಿಂಗ್ ಸೀನ್‍ಗಳಿರುವುದರಿಂದ ಅಶ್ವಿನಿ ಈ ಧಾರಾವಾಹಿಗೆ ಹೆಚ್ಚು ಸಮಯ ನೀಡುತ್ತಿದ್ದಾರಂತೆ. ಅಲ್ಲದೆ ಇಂತಹ ವಿಭಿನ್ನ ಪಾತ್ರದ ಅವಕಾಶ ಸಿಕ್ಕಿದ್ದಕ್ಕೆ ಅಶ್ವಿನಿ ಫುಲ್ ಖುಷಿಯಾಗಿದ್ದಾರಂತೆ.